Tag: hk Patil

  • ಬಿಬಿಎಂಪಿ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ 694 ಕೋಟಿ ಅನುದಾನ ಬಿಡುಗಡೆಗೆ ಸಂಪುಟ ಅಸ್ತು!

    ಬಿಬಿಎಂಪಿ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ 694 ಕೋಟಿ ಅನುದಾನ ಬಿಡುಗಡೆಗೆ ಸಂಪುಟ ಅಸ್ತು!

    – ಎಸ್ಸಿ, ಎಸ್ಟಿ ಸಮುದಾಯದ ಜನರಿಗೆ ವಿಶೇಷ ನಿಧಿ ಸ್ಥಾಪನೆ
    – ಜನನ ಮರಣ ನೊಂದಣಿ ತಿದ್ದುಪಡಿಗೆ ಸಂಪುಟ ಒಪ್ಪಿಗೆ

    ಬೆಂಗಳೂರು: ಅಲ್ಪಸಂಖ್ಯಾತ ಶಿಕ್ಷಣ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ, ಬೆಂಗಳೂರು ಅಭಿವೃದ್ಧಿಗೆ ಅನುದಾನ ಬಿಡುಗಡೆ, ಸಂಪನ್ಮೂಲ ಕ್ರೋಢೀಕರಣಕ್ಕೆ ಒನ್ ಟೈಮ್ ಸೆಟಲ್ ಮೆಂಟ್‌ ಯೋಜನೆ ಜಾರಿಗೆ ತರುವುದು ಸೇರಿದಂತೆ ಹಲವು ಮಹತ್ವದ ಯೋಜನೆಗಳಿಗೆ ಇಂದಿನ ಸಂಪುಟ ಸಭೆಯಲ್ಲಿ (Cabinet Meeting) ಒಪ್ಪಿಗೆ ನೀಡಲಾಗಿದೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಒಟ್ಟು 20 ವಿಷಯಗಳ ಕುರಿತು ಚರ್ಚಿಸಿ ಅನುಮೋದನೆ ನೀಡಲಾಗಿದೆ. ಆದ್ರೆ ಮೆಟ್ರೋ 2ನೇ ಹಂತದ ಕಾಮಗಾರಿಯ ಹೆಚ್ಚುವರಿ ಕ್ರಿಯಾ ಯೋಜನೆಗೆ ಹಣ ಬಿಡುಗಡೆ ಸಂಬಂಧ ಇಂದಿನ ಸಭೆಯಲ್ಲಿ ಯಾವುದೇ ತೀರ್ಮಾನ ಆಗಿಲ್ಲ. ಕೆಲವು ತಾಂತ್ರಿಕ ಕಾರಣಗಳಿಗೆ ಇದಕ್ಕೆ ಒಪ್ಪಿಗೆ ನೀಡುವುದನ್ನು ಮುಂದೂಡಲಾಗಿದೆ. ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಮುಖ್ಯಾಂಶಗಳು ಈ ಕೆಳಗಿನಂತಿವೆ. ಇದನ್ನೂ ಓದಿ: ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನಿಯಮ ಸಡಿಲ – ಶೇ.25ರಷ್ಟು ವಿದ್ಯಾರ್ಥಿಗಳಿದ್ದರೂ ಮಾನ್ಯತೆ!

    ಬಿಬಿಎಂಪಿ (BBMP) ವ್ಯಾಪ್ತಿಯ ಉಪಮುಖ್ಯರಸ್ತೆಗಳ ಅಭಿವೃದ್ಧಿಗೆ ಸಂಪುಟ ತೀರ್ಮಾನಿಸಿದೆ. 1,681 ಕಿ.ಮೀ ರಸ್ತೆಗಳ ಅಭಿವೃದ್ಧಿಗೆ ರಸ್ತೆ ಡಾಂಬರೀಕರಣಕ್ಕೆ 694 ಕೋಟಿ ರೂ. ಅನುದಾನ ಬಿಡುಗಡೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಖನಿಜಗಳನ್ನ ಹೊಂದಿರುವ ಭೂಮಿಗೆ ತೆರಿಗೆಯನ್ನ ಹಾಕಲು ಸರ್ಕಾರದ ನಿರ್ಧಾರ ಮಾಡಿದೆ. ಒಂದು ಟನ್‌ಗೆ 100 ರೂನಂತೆ ರಾಯಲ್ಟಿ ಹಾಕಲಿದ್ದು, ಈ ತೆರಿಗೆಯನ್ನ ಭೂಮಾಲಿಕರು ಕಟ್ಟಬೇಕಿದೆ. ಅಲ್ಲದೇ ಕೆಕೆಆರ್‌ಡಿಬಿಯಿಂದ ರಸ್ತೆಗಳ ಅಭಿವೃದ್ಧಿ, ಇಜೇರಿಯಿಂದ ಯಡ್ರಾಮಿ ವರೆಗೆ ರಸ್ತೆ ಅಭಿವೃದ್ಧಿಗೆ 25 ಕೋಟಿ ರೂ. ಅಂದಾಜು ವೆಚ್ಚಕ್ಕೆ ಸಂಪುಟ ಒಪ್ಪಿಗೆ. ನೀಡಲಾಗಿದೆ. ಅಲ್ಲದೇ ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ ವಸತಿ ಶಾಲೆಗಳಿಗೆ ಕೆಕೆಆರ್‌ಡಿಬಿಯಿಂದ 42.66 ಕೋಟಿ ರೂ. ವೆಚ್ಚದಲ್ಲಿ ಹಾಸಿಗೆ, ಮಂಚ ಖರೀದಿಸಲು ಅನುಮತಿ ನೀಡಲಾಗಿದೆ.

    ಜನನ ಮರಣ ನೊಂದಣಿ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ. ಜೊತೆಗೆ ಹೊಸಕೋಟೆ ತಾಲೂಕಿನ ಕೊರಳೂರು ಗ್ರಾಮದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಇದಕ್ಕಾಗಿ 97.27 ಕೋಟಿ ವೆಚ್ಚಕ್ಕೆ ಹೆಚ್ಚುವರಿ 54 ಕೋಟಿ ರೂ. ಸೇರ್ಪಡೆಗೆ ಸಮ್ಮತಿಸಲಾಗಿದೆ. ಬೆಂಗಳೂರಿನ ಸಂಪಂಗಿ ರಾಮನಗರದಲ್ಲಿ ಸಮಾಜ ಕಲ್ಯಾಣ ಭವನ ನಿರ್ಮಾಣಕ್ಕೆ 40.50 ಕೋಟಿ ರೂ. ಅನುದಾನಕ್ಕೆ ಸಮ್ಮತಿ ಸೂಚಿಸಲಾಗಿದೆ. ಸಮಾಜಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ನೀಡಲು 43.95 ಕೋಟಿ ರೂ. ಅನುದಾನ ಒದಗಿಸಲು ತೀರ್ಮಾನ. ಇದರೊಂದಿಗೆ ಆಹಾರ ಗುಣಮಟ್ಟ ಹಾಗೂ ಔಷಧ ನಿಯಂತ್ರಣ ಇಲಾಖೆ ವಿಲೀನಗೊಳಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ.

    ಎಸ್ಸಿ, ಎಸ್ಟಿ ಸಮುದಾಯದ ಜನರಿಗೆ ವಿಶೇಷ ನಿಧಿ ಸ್ಥಾಪನೆ:
    ಸಂಪುಟದಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಜನರಿಗೆ ವಿಶೇಷ ನಿಧಿ ಸ್ಥಾಪನೆ ಮಾಡಲಾಗಿದೆ. 33 ವಿರಳ ದುಬಾರಿ ಕಾಯಿಲೆಗಳಿಗೆ 3,4 ಲಕ್ಷ ರೂ. ವೆರೆಗೂ ಚಿಕಿತ್ಸೆ ನೀಡುವ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿದೆ. SCSP, TSP ಹಣವನ್ನೂ ಇದಕ್ಕೆ ಬಳಕೆ ಮಾಡಲಾಗುತ್ತದೆ. ಪ್ರಸ್ತುತ 47 ಕೋಟಿ ರೂ. ಅನುದಾನ ಮೀಸಲಿಡಲಾಗುತ್ತದೆ ಎಂದು ಸಚಿವ ಹೆಚ್‌.ಕೆ ಪಾಟೀಲ್‌ ತಿಳಿಸಿದ್ದಾರೆ.  ಇದನ್ನೂ ಓದಿ: ಸಂಪನ್ಮೂಲ ಕ್ರೋಢೀಕರಣಕ್ಕೆ ಹೊಸ ದಾರಿ – 6,105 ಕೋಟಿ ದಂಡ ಸಂಗ್ರಹಕ್ಕೆ ಒನ್‌ಟೈಮ್ ಸೆಟಲ್ಮೆಂಟ್ ಆಫರ್‌!

    ಬಾಣಂತಿಯರ ಸಾವಿನ ಬಗ್ಗೆ ಕಳವಳ:
    ಇನ್ನೂ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಬಾಣಂತಿಯರ ಸರಣಿ ಸಾವಿನ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಯಿತು. ಈ ವೇಳೆ ಸಿಎಂ ಕಳವಳ ವ್ಯಕ್ತಪಡಿಸಿದರು. ಸಚಿವ ದಿನೇಶ್ ಗುಂಡೂರಾವ್ ಈ ಕುರಿತು ಸಭೆಗೆ ಮಾಹಿತಿ ನೀಡಿದರು. ಬಳಿಕ ಇದರ ಬಗ್ಗೆ ಜಾಗೃತರಾಗಿರಬೇಕು ಎಂದು ಸಚಿವರಿಗೆ ಸೂಚಿಸಲಾಯಿತು. ಇದನ್ನೂ ಓದಿ:  ಗುರುಪ್ರಸಾದ್‌ಗೆ ಕೋಟಿಗಟ್ಟಲೇ ಸಾಲ, ರಮ್ಮಿ ಗೀಳು, ಖಿನ್ನತೆ ಇತ್ತಾ?: ಪತ್ನಿ ಸುಮಿತ್ರಾ ಸ್ಪಷ್ಟನೆ

  • ಸಂಪನ್ಮೂಲ ಕ್ರೋಢೀಕರಣಕ್ಕೆ ಹೊಸ ದಾರಿ – 6,105 ಕೋಟಿ ದಂಡ ಸಂಗ್ರಹಕ್ಕೆ ಒನ್‌ಟೈಮ್ ಸೆಟಲ್ಮೆಂಟ್ ಆಫರ್‌!

    ಸಂಪನ್ಮೂಲ ಕ್ರೋಢೀಕರಣಕ್ಕೆ ಹೊಸ ದಾರಿ – 6,105 ಕೋಟಿ ದಂಡ ಸಂಗ್ರಹಕ್ಕೆ ಒನ್‌ಟೈಮ್ ಸೆಟಲ್ಮೆಂಟ್ ಆಫರ್‌!

    ಬೆಂಗಳೂರು: ಗ್ಯಾರಂಟಿಗಳ (Guarantee Scheme) ಭಾರದಿಂದ ತತ್ತರಿಸಿರುವ ರಾಜ್ಯ ಸರ್ಕಾರ ಸಂಪನ್ಮೂಲಗಳ ಕ್ರೋಢೀಕರಣಕ್ಕಾಗಿ ಹೊಸ ಹೊಸ ಮಾರ್ಗಗಳನ್ನು ಹುಡುಕ್ತಿದೆ. ಅಕ್ರಮ ಕಲ್ಲುಗಣಿಗಾರಿಕೆ ನಡೆಸಿದವರು ಬಾಕಿ ಉಳಿಸಿಕೊಂಡ 6,105 ಕೋಟಿ ದಂಡ ಸಂಗ್ರಹಕ್ಕೆ ಒನ್‌ಟೈಮ್ ಸೆಟಲ್ಮೆಂಟ್ ಯೋಜನೆ (OTS Scheme) ತರೋದಕ್ಕೆ ಮುಂದಾಗಿದೆ.

    ರಾಜಧನ ಮತ್ತು ದಂಡ ವಸೂಲಿ ಮಾಡಲು ಉಪಖನಿಜ (Submineral) ರಿಯಾಯ್ತಿ ಕಾಯ್ದೆಗೆ ತಿದ್ದುಪಡಿ ತರಲು ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಪ್ರತಿ ಟನ್‌ಗೆ 80 ರೂ. ರಾಜಧನ ನಿಗದಿ ಮಾಡಿದೆ. ಇದರಿಂದ ಸರ್ಕಾರ 311.55 ಕೋಟಿ ಹೆಚ್ಚುವರಿ ಸಂಗ್ರಹದ ನಿರೀಕ್ಷೆಯಲ್ಲಿದೆ. ಅಲ್ಲದೇ, ಪರವಾನಗಿ ಪಡೆಯದೇ ಹೆಚ್ಚುವರಿಯಾಗಿ ಸಾಗಿಸಿದ ಉಪಖನಿಜಕ್ಕೆ ದಂಡ ಹಾಕಲು ತೀರ್ಮಾನಿಸಿದೆ. ಇದನ್ನೂ ಓದಿ: ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನಿಯಮ ಸಡಿಲ – ಶೇ.25ರಷ್ಟು ವಿದ್ಯಾರ್ಥಿಗಳಿದ್ದರೂ ಮಾನ್ಯತೆ!

    ಅಷ್ಟೇ ಅಲ್ಲ, ಖನಿಜಗಳನ್ನ ಹೊಂದಿರುವ ಭೂಮಿಗೆ ತೆರಿಗೆ ಹಾಕಲು ಸರ್ಕಾರದ ನಿರ್ಧಾರ ಮಾಡಿದೆ. ಜಮೀನಿನಲ್ಲಿ ಲಭ್ಯವಾಗುವ ಖನಿಜದ ಹಕ್ಕುಗಳು ಭೂಮಾಲಿಕನಿಗೆ ಸೇರುತ್ತದೆ. ಆದರೆ, 1 ಟನ್‌ಗೆ 100 ರೂ.ನಂತೆ ರಾಯಲ್ಟಿ ಹಾಕಲು ಸರ್ಕಾರ ನಿರ್ಧರಿಸಿದೆ ಎಂದು ಕಾನೂನು ಸಚಿವ ಹೆಚ್‌.ಕೆ ಪಾಟೀಲ್‌ (HK Patil) ತಿಳಿಸಿದ್ದಾರೆ.

    ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್, ಇಂದಿನ ಸಭೆಯಲ್ಲಿ 20 ವಿಷಯಗಳ ಬಗ್ಗೆ ಚರ್ಚೆ ಮಾಡಿ ಅನುಮೋದನೆ ನೀಡಲಾಗಿದೆ. ಕಲ್ಲು ಗಣಿಗಳಲ್ಲಿನ ಕಲ್ಲುಗಳಿಗೆ ಒಂದು ಟನ್‌ಗೆ 70 ರೂ. ರಾಯಲ್ಟಿ ಇದೆ. ಅದನ್ನು ಹೆಚ್ಚಳ ಮಾಡಿ ಒಂದು ಟನ್‌ಗೆ 80 ರೂ.ಗೆ ನಿಗದಿ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: MSPಗೆ ಆಗ್ರಹಿಸಿ ದೆಹಲಿಗೆ ನುಗ್ಗಲು ಯತ್ನಿಸಿದ ರೈತರ ಮೇಲೆ ಅಶ್ರುವಾಯು ಪ್ರಯೋಗ

    ಕೆಲವು ಗುತ್ತಿಗೆಯಿಂದ ಬರಬೇಕಾದ ಬಾಕಿ ಹಾಗೆ ಇದೆ. ಹಲವು ವರ್ಷಗಳಿಂದ ದಂಡ ವಸೂಲಿಯಾಗಿಲ್ಲ. ಕಳೆದ 6-7 ವರ್ಷಗಳಿಂದ ವಸೂಲಿಯಾಗಿಲ್ಲ. ಹಾಗಾಗಿ ಒನ್ ಟೈಮ್ ಸೆಟಲ್ಮೆಂಟ್‌ಗೆ ಅವಕಾಶ ಮಾಡಿಕೊಡಲಾಗಿದೆ. ಈ ಮೂಲಕ ದಂಡ ವಸೂಲಿ ಮಾಡಲು ನಿರ್ಧಾರ ಮಾಡಲಾಗಿದೆ. ಅಲ್ಲದೇ ಡಿಜಿಟಲೀಕರಣ ಮಾಡಿದ ಮೇಲೆ ಒತ್ತುವರಿ ಸಾಧ್ಯವಾಗಿಲ್ಲ. ಒಟಿಎಸ್ ಮೂಲಕ ದಂಡವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

  • ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನಿಯಮ ಸಡಿಲ – ಶೇ.25ರಷ್ಟು ವಿದ್ಯಾರ್ಥಿಗಳಿದ್ದರೂ ಮಾನ್ಯತೆ!

    ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನಿಯಮ ಸಡಿಲ – ಶೇ.25ರಷ್ಟು ವಿದ್ಯಾರ್ಥಿಗಳಿದ್ದರೂ ಮಾನ್ಯತೆ!

    ಬೆಂಗಳೂರು: ಅಲ್ಪಸಂಖ್ಯಾತರ (Minority) ಪರವಾಗಿ ಮತ್ತೊಂದು ನಿರ್ಣಯವನ್ನ ರಾಜ್ಯ ಸರ್ಕಾರ ಕೈಗೊಂಡಿದೆ. ಕರ್ನಾಟಕ ಶಿಕ್ಷಣ ಸಂಸ್ಥೆಗಳ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ಇರುವ ನಿಬಂಧನೆ ಮತ್ತು ಷರತ್ತುಗಳನ್ನು ಸಡಿಲಿಸಿದೆ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ವಿಧೇಯಕಕ್ಕೆ ಕ್ಯಾಬಿನೆಟ್ (Cabinet) ಗ್ರೀನ್‌ಸಿಗ್ನಲ್ ನೀಡಿದೆ.

    ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ಈ ಮೊದಲು ಶೇ.50 ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಕಡ್ಡಾಯವಾಗಿ ಇರಲೇಬೇಕು ಎಂಬ ನಿಯಮ ಇತ್ತು. ಈ ನಿಯಮವನ್ನು ಶೇಕಡಾ 50ರಿಂದ ಶೇ.25ಕ್ಕೆ ಇಳಿಸುವ ಬಗ್ಗೆ ಚಿಂತನೆ ಸರ್ಕಾರದ ಮಟ್ಟದಲ್ಲಿ ನಡೆದಿತ್ತು. ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಸಿದ್ದರಾಮಯ್ಯ ಸಂಪುಟ (Siddaramaiah’s Cabinet), ಈ ನಿಯಮವನ್ನು ಸಂಪೂರ್ಣವಾಗಿ ಸಡಿಲಿಸಿದೆ.

    ಸರ್ಕಾರದ ಈ ನಿರ್ಧಾರವೀಗ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾಜಿ ಮಂತ್ರಿ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಆಕ್ರೋಶ ಹೊರಹಾಕಿದ್ದಾರೆ. ಸಿದ್ದರಾಮಯ್ಯಗೆ ಸಾಬ್ರು ಅಂದ್ರೆ ಬಹಳ ಪ್ರೀತಿ, ಹಿಂದೂಗಳ ಪೇಟ, ಕುಂಕುಮ ಆಗಿಬರೋದಿಲ್ಲ. ಇನ್ನೂ 3 ವರ್ಷ ಏನ್ ಮಾಡ್ತಾರೆ ಮಾಡಲಿ, ಮೂರು ವರ್ಷದ ನಂತರ ನಮ್ಮ ಸರ್ಕಾರ ಬರುತ್ತೆ ಎಲ್ಲವನ್ನ ಕಿತ್ತೊಗಿತೀವಿ ಎಂದು ಅಬ್ಬರಿಸಿದ್ದಾರೆ.

    ಅಲ್ಪಸಂಖ್ಯಾತ ಶಿಕ್ಷಣ ಕಾಯ್ದೆ ತಿದ್ದುಪಡಿ; ನಿಯಮ ಸಡಿಲದಿಂದ ಯಾರಿಗೆ ಲಾಭ..?
    * ಪ್ರಾಥಮಿಕ ಶಾಲೆಗಳಲ್ಲಿ ಶೇ.25 ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಇರಬೇಕಿತ್ತು.
    * ಪ್ರೌಢಶಾಲೆಯಲ್ಲಿ ಶೇ.50ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಇರಬೇಕಿತ್ತು.
    * ಇನ್ಮುಂದೆ ನಿಗದಿತ ವಿದ್ಯಾರ್ಥಿಗಳ ಪ್ರವೇಶಾತಿಗೆ ಯಾವುದೇ ಷರತ್ತು ಇರಲ್ಲ.
    * ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣಕ್ಕೆ ಕಡ್ಡಾಯ ಮಿತಿ ಇಲ್ಲ.
    * `ಅಲ್ಪಸಂಖ್ಯಾತ’ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ರೂ ಆ ಸಂಸ್ಥೆಗೆ ಮಾನ್ಯತೆ
    * ಮ್ಯಾನೇಜ್‌ಮೆಂಟ್‌ನಲ್ಲಿ 2/3 ಸ್ಥಾನಗಳು ಅಲ್ಪಸಂಖ್ಯಾತರಿಗೆ ಮೀಸಲು
    * ನಿಯಮ ಸಡಿಲದಿಂದ ಆಡಳಿತ ಮಂಡಳಿಗಳಿಗೆ ಹೆಚ್ಚು ಲಾಭ ಆಗುತ್ತೆ
    * ಅನುದಾನಿತ ಶಾಲೆಗಳಿಗೆ ಸರ್ಕಾರದಿಂದ ಸಿಗುವ ಅನುದಾನ ಸಿಗುತ್ತೆ
    * ಅಲ್ಪಸಂಖ್ಯಾತ ಇಲಾಖೆಯಿಂದ ಎಲ್ಲಾ ಸೌಲಭ್ಯಗಳು ಲಭ್ಯ ಆಗಲಿವೆ.

  • ಎಸ್ಸಿ ಒಳಮೀಸಲಾತಿ ಜಾರಿಗೆ ಸರ್ಕಸ್ – ಹೈಕೋರ್ಟ್ ನಿವೃತ್ತ ಜಡ್ಜ್ ನೇತೃತ್ವದಲ್ಲಿ ಆಯೋಗ

    ಎಸ್ಸಿ ಒಳಮೀಸಲಾತಿ ಜಾರಿಗೆ ಸರ್ಕಸ್ – ಹೈಕೋರ್ಟ್ ನಿವೃತ್ತ ಜಡ್ಜ್ ನೇತೃತ್ವದಲ್ಲಿ ಆಯೋಗ

    – 3 ತಿಂಗಳಲ್ಲಿ ವರದಿ ಕೊಡಲು ಸರ್ಕಾರದ ಸೂಚನೆ

    ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿ ಸಂಬಂಧ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ನೇಮಿಸಲು ಸರ್ಕಾರ ಮುಂದಾಗಿದೆ.

    ಈ ಸಮಿತಿ 3 ತಿಂಗಳಲ್ಲಿ ವರದಿ ನೀಡಲು ಸಂಪುಟ ಒಪ್ಪಿಗೆ ನೀಡಿದೆ ಅಂತ ಸಚಿವ ಎಚ್.ಕೆ ಪಾಟೀಲ್ ಹೇಳಿದ್ದಾರೆ. ಅಲ್ಲದೇ, ಇಂದಿನಿಂದ ಯಾವುದೇ ನೇಮಕಾತಿ ನೋಟಿಫಿಕೇಷನ್ ಆದರೂ ಆಯೋಗದ ವರದಿ ಆಧರಿಸಿ ಮುಂದಿನ ತೀರ್ಮಾನ ಇರುತ್ತೆ ಅಂದಿದ್ದಾರೆ. ಇದನ್ನೂ ಓದಿ: ಮುಡಾ ಹಗರಣದಲ್ಲಿ ಮುಂದುವರಿದ ಇಡಿ ಬೇಟೆ – ಸಿಎಂ ಆಪ್ತ, ಬಿಲ್ಡರ್, ಮಾಜಿ ಆಯುಕ್ತರಿಗೂ ಶಾಕ್; ದಿನವಿಡೀ ಶೋಧ!

    ಸಚಿವ ಹೆಚ್.ಸಿ ಮಹದೇವಪ್ಪ ಪ್ರತಿಕ್ರಿಯಿಸಿ, ಸದಾಶಿವ ಆಯೋಗದ ವರದಿಯನ್ನು 2022ರಲ್ಲಿಯೇ ಬಿಜೆಪಿ ತಿರಸ್ಕಾರ ಮಾಡಿತ್ತು. ಚಿತ್ರದುರ್ಗದಲ್ಲಿ ಸಮಾವೇಶದಲ್ಲಿ ಒಳ ಮೀಸಲಾತಿ ಮಾಡ್ತೇವೆ ಅಂತ ಕೊಟ್ಟಿರುವ ಭರವಸೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ದಲಿತ ಪಂಗಡಗಳ ಬಲ-ಎಡ, ಬೋವಿ-ಲಂಬಾಣಿ ಸಮಾಜದ ಎಲ್ಲರೂ ಚರ್ಚೆ ಮಾಡಿದ್ದೇವೆ. ತೆಲಂಗಾಣ ಮಾದರಿ ಅನುಸರಿಸ್ತೇವೆ ಅಂದಿದ್ದಾರೆ. ಈ ಮಧ್ಯೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರೋ ಬಿಜೆಪಿ, ಒಳಮೀಸಲಾತಿ ಜಾರಿ ಮಾಡದಿದ್ದರೆ ಕಾಂಗ್ರೆಸ್ ಸಚಿವರು, ಶಾಸಕರನ್ನು ಜನ ಬೀದಿಯಲ್ಲಿ ಓಡಾಡೋದಿಕ್ಕೆ ಬಿಡಲ್ಲ ಅಂತ ಎಚ್ಚರಿಸಿದ್ರು. ಇದನ್ನೂ ಓದಿ: 12,850 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಮಂಗಳವಾರ ಮೋದಿ ಚಾಲನೆ

  • ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ತೀರ್ಪು ಸಿಎಂ ಪಾದಯಾತ್ರೆಗೆ ಸಿಕ್ಕ ಫಲ – ಹೆಚ್.ಕೆ ಪಾಟೀಲ್

    ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ತೀರ್ಪು ಸಿಎಂ ಪಾದಯಾತ್ರೆಗೆ ಸಿಕ್ಕ ಫಲ – ಹೆಚ್.ಕೆ ಪಾಟೀಲ್

    ಬೆಂಗಳೂರು: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆ ಆಗಿರುವುದು ಸಿಎಂ ಸಿದ್ದರಾಮಯ್ಯ ಅವರ ಪಾದಯಾತ್ರೆಗೆ ಸಿಕ್ಕ ಫಲ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ (HK Patil) ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಅಪರಾಧಿಗಳಿಗೆ ಕೋರ್ಟ್ ಶಿಕ್ಷೆ ನೀಡಿರುವುದು ಸಿದ್ದರಾಮಯ್ಯ (CM Siddaramaiah) ಪಾದಯಾತ್ರೆಗೆ ಸಿಕ್ಕ ಪ್ರತಿಫಲವಾಗಿದೆ. ಬಿಜೆಪಿ ಸರ್ಕಾರದಲ್ಲಿರುವಾಗ ದೇಶದ ಅತ್ಯಂತ ದೊಡ್ಡ ಲೂಟಿ ಹೊಡೆಯುವ ಪ್ರಕರಣ ಆಗಿತ್ತು. ಲಕ್ಷ ಲಕ್ಷ ಬೆಲೆ ಬಾಳುವ ಅದಿರು ಬಿಜೆಪಿ ಅವಧಿಯಲ್ಲಿ ಕಳ್ಳತನ ಆಗಿತ್ತು. ಇದಕ್ಕೆ ಸಂಬAಧಿಸಿದAತೆ ಕೋರ್ಟ್ ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ್ದು, 44 ಕೋಟಿ ರೂ. ದಂಡ ಹೇರಿದೆ ಎಂದರು.ಇದನ್ನೂ ಓದಿ: ವಿಜಯಪುರ | ರೈತರಿಗೆ ‌ವಕ್ಫ್ ಬೋರ್ಡ್ ಕೊಟ್ಟ ನೋಟಿಸ್‌ ವಾಪಸ್ ಪಡೆಯುತ್ತೇವೆ: ಹೆಚ್.ಕೆ. ಪಾಟೀಲ್

    ಬಿಜೆಪಿ ಸರ್ಕಾರದಲ್ಲಿರುವಾಗ ಈ ದೊಡ್ಡ ಅಕ್ರಮ ಆಗಿತ್ತು. ಈಗ ಇದನ್ನು ಮರೆಮಾಚುವುದಕ್ಕೆ ಬಿಜೆಪಿಯವರೇ ಬಂದು ಮಾತನಾಡುತ್ತಿದ್ದಾರೆ. ಅದಿರು ಕಳುವು ಮಾಡುವುದಕ್ಕೆ ಅಂದಿನ ಸರ್ಕಾರದ ಕುಮ್ಮಕ್ಕು ಇತ್ತು. ಅಂದು 6 ಲಕ್ಷ ಟನ್ ಖನಿಜ ರಫ್ತಾಗಿತ್ತು. ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಗೆ ಅವರು ಅಕ್ರಮ ಹೊರಗೆ ತಂದು, ವರದಿ ನೀಡಿದ್ದರು. ಅವರ ವರದಿಗೆ ತಾರ್ಕಿಕ ಅಂತ್ಯ ಬರುವುದಕ್ಕೆ ಪ್ರಾರಂಭವಾಗಿದೆ ಎಂದು ತಿಳಿಸಿದರು.

    ಸಿದ್ದರಾಮಯ್ಯ ಅವರು ಈ ಅಕ್ರಮದ ವಿರುದ್ಧ ಬಳ್ಳಾರಿವರೆಗೆ (Ballary) ಪಾದಯಾತ್ರೆ ಮಾಡಿದ್ದರು. ಸಿದ್ದರಾಮಯ್ಯ ಅವರ ಪ್ರಯತ್ನಕ್ಕೆ ಕೋರ್ಟ್ ನಿರ್ಣಯ ಮಾಡಿದೆ. ಕಳ್ಳರು ಎಲ್ಲೇ ಇರಲಿ ಅವರಿಗೆ ಶಿಕ್ಷೆ ಕೊಡುವುದು ಕೋರ್ಟ್ ಕೆಲಸವಾಗಿದೆ. ಈ ಅಕ್ರಮವನ್ನು ಮಟ್ಟ ಹಾಕಲು ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ಸಿದ್ದರಾಮಯ್ಯನವರು ಪಾದಯಾತ್ರೆ ಮಾಡಿದಕ್ಕೆ ಯಶಸ್ಸು ಸಿಕ್ಕಿದೆ. ಕಾಂಗ್ರೆಸ್ ಶಾಸಕ ಬಂಧನ ಆಗಿರುವುದು ಸರ್ಕಾರಕ್ಕೆ ಮುಜುಗರವೇನು ಇಲ್ಲ ಎಂದು ಹೇಳಿದರು.ಇದನ್ನೂ ಓದಿ: ಮಳೆ ತಂದ ಸೌಭಾಗ್ಯ – ನಮ್ಮ ಮೆಟ್ರೋ ಆದಾಯದಲ್ಲಿ ಭಾರೀ ಏರಿಕೆ

  • ರಾಜ್ಯದಲ್ಲಿ ಸಿಬಿಐ ಡೈರೆಕ್ಟ್ ಎಂಟ್ರಿಗೆ ಬ್ರೇಕ್ – ʻರಕ್ಷಣಾತ್ಮಕʼ ಆಟಕ್ಕಿಳಿದ ಸಿದ್ದರಾಮಯ್ಯ ಸರ್ಕಾರ!

    ರಾಜ್ಯದಲ್ಲಿ ಸಿಬಿಐ ಡೈರೆಕ್ಟ್ ಎಂಟ್ರಿಗೆ ಬ್ರೇಕ್ – ʻರಕ್ಷಣಾತ್ಮಕʼ ಆಟಕ್ಕಿಳಿದ ಸಿದ್ದರಾಮಯ್ಯ ಸರ್ಕಾರ!

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮುಡಾ ಹಗರಣ (MUDA Scam) ಸಂಚಲನ ಮೂಡಿಸಿದೆ. ಸಿಎಂ ವಿರುದ್ಧ ಲೋಕಾಯುಕ್ತ ತನಿಖೆಗೆ ಕೋರ್ಟ್ ಆದೇಶ ನೀಡಿದೆ. ಅಲ್ಲದೇ, ಈ ಪ್ರಕರಣವನ್ನು ಸಿಬಿಐಗೆ (CBI) ಒಪ್ಪಿಸಬೇಕು ಎಂದು ಬಿಜೆಪಿ, ಜೆಡಿಎಸ್‌ ನಾಯಕರು ಮುಗಿಬಿದ್ದಿದ್ದಾರೆ. ಈ ಹೊತ್ತಲ್ಲೇ ರಾಜ್ಯ ಸಚಿವ ಸಂಪುಟ ಮಹತ್ವದ ನಿರ್ಣಯವನ್ನು ತೆಗೆದುಕೊಂಡಿದೆ.

    ರಾಜ್ಯದಲ್ಲಿ ಸಿಬಿಐಗೆ ಅಂಕುಶ ಹಾಕಿದೆ. ರಾಜ್ಯದಲ್ಲಿ ಸಿಬಿಐ ಮುಕ್ತ ತನಿಖೆ (CBI Open Investigation) ನಡೆಸಲು ಇದ್ದ ಅನುಮತಿಯನ್ನು ಹಿಂಪಡೆದಿದೆ. ಕರ್ನಾಟಕದಲ್ಲಿ ಅಪರಾಧ ಪ್ರಕರಣಗಳನ್ನು ತನಿಖೆ ಮಾಡಲು ಸಿಬಿಐಗೆ ಮುಕ್ತ ಅವಕಾಶ ಇತ್ತು. ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಯಾರಾದರೂ ದೂರು ನೀಡಿದರೇ ಮುಕ್ತವಾಗಿ ಸಿಬಿಐ ತನಿಖೆ ನಡೆಸಬಹುದಿತ್ತು.. ಆದ್ರೆ, ಇದಕ್ಕೀಗ ಸರ್ಕಾರ ಬ್ರೇಕ್ ಹಾಕಿದೆ. 2005ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನೇ ರದ್ದು ಮಾಡಿದೆ. ಹೀಗಾಗಿ ಸಿಬಿಐ ಇನ್ಮುಂದೆ ಕರ್ನಾಟಕದಲ್ಲಿ (Karnataka) ಯಾವುದೇ ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರದ ಲಿಖಿತ ಅನುಮತಿ ಪಡೆಯುವುದು ಅತ್ಯಗತ್ಯವಾಗಿದೆ. ಇದನ್ನೂ ಓದಿ: Badlapur Encounter | ಆರೋಪಿ ಗುಂಡು ಹಾರಿಸಿದ್ರೆ ಪೊಲೀಸರು ಚಪ್ಪಾಳೆ ತಟ್ಟಬೇಕಾ?: ದೇವೇಂದ್ರ ಫಡ್ನವೀಸ್

    ಸಿದ್ದರಾಮಯ್ಯ ಸರ್ಕಾರದ ನಡೆ ರಾಷ್ಟ್ರಮಟ್ಟದಲ್ಲಿ ಮತ್ತು ರಾಜಕೀಯವಾಗಿ ನಾನಾ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ರಾಜ್ಯ ಸರ್ಕಾರದ ನಿರ್ಧಾರವನ್ನು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಖಂಡಿಸಿದ್ದಾರೆ. ಅಂದ ಹಾಗೇ, ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಎಂದು ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಶುಕ್ರವಾರ ಹೈಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದ್ದಾರೆ. ಇದನ್ನೂ ಓದಿ: Bilkis Bano case | ಕಟು ಟೀಕೆಯನ್ನು ಆದೇಶದಿಂದ ತೆಗೆಯುವಂತೆ ಗುಜರಾತ್ ಮಾಡಿದ್ದ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

    ಸಿಬಿಐಗೆ ಅಂಕುಶ.. ಏಕೆ? – ಸರ್ಕಾರದ ಪ್ರಕಾರ..
    * ಮೋದಿ ಸರ್ಕಾರಕ್ಕೆ ಸಿಬಿಐ ಅಸ್ತ್ರ ಆಗಬಾರದು
    * ಈ ಸಂಸ್ಥೆ ದುರ್ಬಳಕೆ ಆಗುವ ಬಗ್ಗೆ ಆತಂಕವಿದೆ
    * ಪ್ರತಿಯೊಂದು ಪ್ರಕರಣದಲ್ಲೂ ಮೂಗುತೂರಿಸುವ ಭಯ
    * ಕೇಂದ್ರ ಸರ್ಕಾರದ್ದು ಪಕ್ಷಪಾತ ಧೋರಣೆ
    * ನಾವು ಶಿಫಾರಸು ಮಾಡಿದ ಕೇಸ್‌ಗಳಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಿಲ್ಲ
    * ಮುಡಾ ಪ್ರಕರಣಕ್ಕೂ ಇದಕ್ಕೂ ಸಂಬಂಧ ಇಲ್ಲ
    * ಸಿಬಿಐ ತಪ್ಪು ಹಾದಿಗೆ ಹೊರಳುವುದನ್ನು ತಡೆಯಲು..

    ಯಾವ್ಯಾವ ರಾಜ್ಯದಲ್ಲಿ ಸಿಬಿಐಗೆ ಅಂಕುಶ?
    * ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ
    * ಜಾರ್ಖಂಡ್, ರಾಜಸ್ಥಾನ, ಛತ್ತೀಸ್‌ಘಡ
    * ತೆಲಂಗಾಣ, ಮಿಜೋರಾಂ, ಮೇಘಾಲಯ
    * ಪಂಜಾಬ್ ಮತ್ತು ಈಗ ಕರ್ನಾಟಕ

  • ಅಧಿವೇಶನ ಮುಗಿಯೋದ್ರೊಳಗೆ ಕಂಬಳಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ – ಹೆಚ್‌.ಕೆ ಪಾಟೀಲ್‌

    ಅಧಿವೇಶನ ಮುಗಿಯೋದ್ರೊಳಗೆ ಕಂಬಳಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ – ಹೆಚ್‌.ಕೆ ಪಾಟೀಲ್‌

    ಬೆಂಗಳೂರು: 2024-25ನೇ ಸಾಲಿನಲ್ಲಿ ರಾಜ್ಯದ 5 ಕಡೆ ನಡೆಯಲಿರುವ ಕಂಬಳಕ್ಕೆ (Kambala) ಈ ಅಧಿವೇಶನ ಮುಗಿಯುವುದರ ಒಳಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುತ್ತೇವೆ ಎಂದು ಸಚಿವ ಹೆಚ್‌.ಕೆ ಪಾಟೀಲ್‌ (HK Patil) ಪ್ರಕಟಿಸಿದ್ದಾರೆ.

    ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ (Prathap Simha Nayak) ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ – ಅಶ್ವಥ್ ನಾರಾಯಣ್‌ ನಡುವೆ ಏಕವಚನ, ಮಾತಿನ ಚಕಮಕಿ; ಸದನದಲ್ಲಿ ಕೋಲಾಹಲ!

    2023-24 ಆರ್ಥಿಕ ವರ್ಷದಲ್ಲಿ ಜಾನಪದ ಕ್ರೀಡೆ ಕಂಬಳ ಸಂಘಟಕರಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಇದರಿಂದ ಸಂಘಕರಿಗೆ ಸಮಸ್ಯೆ ಆಗಿದೆ. ರಾಜ್ಯದ 20 ಕಡೆ ಕಂಬಳ ನಡೆದಿದೆ. ಸದಾನಂದಗೌಡರು ಸಿಎಂ ಆಗಿದ್ದಾಗ 1 ಕೋಟಿ ರೂ. ಬಿಡುಗಡೆ ಮಾಡಿದ್ದರು. ಈ ಸರ್ಕಾರ ಯಾಕೆ ಅನುದಾನ ಬಿಡುಗಡೆ ಮಾಡಿಲ್ಲ? ಲಕ್ಷಾಂತರ ಜನ ಈ ಕಂಬಳವನ್ನೇ ನೆಚ್ಚಿಕೊಂಡಿದ್ದಾರೆ. ಬಜೆಟ್‌ನಲ್ಲಿ ಇದಕ್ಕೆ ಹಣ ಮೀಸಲು ಇಡಬೇಕಿತ್ತು. ಕಳೆದ ವರ್ಷದ ಕಂಬಳದ ಅನುದಾನನ್ನೂ ಬಿಡುಗಡೆ ಮಾಡಿಲ್ಲ, ಏಕೆ ಎಂದು ಪ್ರತಾಪ್ ಸಿಂಹ ನಾಯಕ್ ಪ್ರಶ್ನೆ ಮಾಡಿದರು. ಇದನ್ನೂ ಓದಿ: ನ್ಯಾಯಾಂಗದ ಬಗ್ಗೆ ಗೌರವವಿದೆ, ಅಪರಾಧ ಸಾಬೀತಾದ್ರೆ ಯಾರೇ ಆಗಿದ್ರೂ ಶಿಕ್ಷೆ ಆಗಲಿ: ಅನು ಪ್ರಭಾಕರ್

    ಇದಕ್ಕೆ ಉತ್ತರಿಸಿದ ಸಚಿವ ಹೆಚ್‌.ಕೆ ಪಾಟೀಲ್‌, ಕಳೆದ ವರ್ಷದ ಕಂಬಳದ ಅನುದಾನ ಬಿಡುಗಡೆ ಆಗಿಲ್ಲ. 2 ಕಂಬಳಕ್ಕೆ 5 ಮತ್ತು 10 ಲಕ್ಷ ರೂ. ಅನುದಾನ ನೀಡಿದ್ದೇವೆ. ಡಿಸಿ ಅವರು ಬಿಲ್ ತಯಾರಿಸಿ ಮಾರ್ಚ್ 20ರ ಒಳಗೆ ಕಳಿಸಿದ್ದಾರೆ. ಬಿಲ್ ಕಳಿಸೋದು ತಡವಾಗಿ ಅನುದಾನ ಬಿಡುಗಡೆ ಆಗಿಲ್ಲ. ಕೂಡಲೇ ಅನುದಾನ ಬಿಡುಗಡೆ ಮಾಡುತ್ತೇವೆ. ಈ ಅಧಿವೇಶನ ಮುಗಿಯುವ ಒಳಗೆ ಹಣ ಬಿಡುಗಡೆ ಮಾಡ್ತೀವಿ. ಈ ವರ್ಷ ಅಂದರೆ 2024-25ನೇ ಸಾಲಿನಲ್ಲಿ ರಾಜ್ಯದ 5 ಕಡೆ ನಡೆಯುವ ಕಂಬಳಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುತ್ತೇವೆ. ಕ್ರೀಡೆಯೊಳಗೆ ನಾವು ರಾಜಕೀಯ ಮಾಡೋದಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಉದ್ಯೋಗ ಕಲ್ಪಿಸುವ ವಿಧೇಯಕ ತಡೆಹಿಡಿದು ಕನ್ನಡಿಗ, ಕರ್ನಾಟಕಕ್ಕೆ ಅಪಮಾನ: ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

  • ನಿರಂಜನ್ ಹಿರೇಮಠ್‌ಗೆ ಧೈರ್ಯದಿಂದ ಇರುವಂತೆ ಸಿಎಂ ಹೇಳಿದ್ದಾರೆ: ಹೆಚ್‌.ಕೆ ಪಾಟೀಲ್‌

    ನಿರಂಜನ್ ಹಿರೇಮಠ್‌ಗೆ ಧೈರ್ಯದಿಂದ ಇರುವಂತೆ ಸಿಎಂ ಹೇಳಿದ್ದಾರೆ: ಹೆಚ್‌.ಕೆ ಪಾಟೀಲ್‌

    ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ್‌ (Neha Hiremath) ತಂದೆ ನಿರಂಜನ್ ಹಿರೇಮಠ್‌ಗೆ (Niranjan Hiremath) ಧೈರ್ಯದಿಂದ ಇರುವಂತೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಕಾನೂನು ಸಚಿವ ಎಚ್. ಕೆ. ಪಾಟೀಲ್ (HK Patil) ಹೇಳಿದ್ದಾರೆ.

    ಹುಬ್ಬಳ್ಳಿಲ್ಲಿ ನೇಹಾ ಕುಟುಂಬಸ್ಥರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಿವಾರ್ಯ ಕಾರಣದಿಂದ ಸಿಎಂ ಇಲ್ಲಿಗೆ ಬರಲಾಗಿಲ್ಲ. ಆದರೆ ಇಂದು ನಿರಂಜನ್ ಹಿರೇಮಠ್ ಜೊತೆ ಸಿಎಂ ಮಾತನಾಡಿದ್ದು, ಸಾಂತ್ವನ ಹೇಳಿದ್ದಾರೆ ಎಂದರು.

    ನೇಹಾ ಪ್ರಕರಣ ನ್ಯಾಯದಾನ ವಿಳಂಬ ಆಗಬಾರದೆಂದು ವಿಶೇಷ ನ್ಯಾಯಾಲಯ ಸ್ಥಾಪನೆಗೆ ತೀರ್ಮಾನ ಮಾಡಲಾಗಿದೆ. ಇವತ್ತು ಉಚ್ಛ ನ್ಯಾಯಾಲಯಕ್ಕೆ ವಿಶೇಷ ನ್ಯಾಯಾಲಯ ಸ್ಥಾಪನೆ ಪತ್ರ ತಲುಪುತ್ತೆ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗಬೇಕಿದೆ. ಬಹುಬೇಗ ನೇಹಾಳ ಸಾವಿಗೆ ನ್ಯಾಯ ಸಿಗುತ್ತೆ ಎಂದು ಭರವಸೆ ಕೊಟ್ಟರು. ಇದನ್ನೂ ಓದಿ: ಮದುವೆ ಮಂಟಪಕ್ಕೆ ನುಗ್ಗಿ ವಧುವನ್ನು ಎಳೆದೊಯ್ಯಲು ಯತ್ನಿಸಿದ ಆಕೆಯ ಕುಟುಂಬ!

    ಬರ್ಬರ ಹತ್ಯೆ ಮತ್ತು ಸಮಾಜದ ಮುಖಂಡರ ಭೇಟಿ ವೇಳೆ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಆಗ್ರಹ ವ್ಯಕ್ತವಾಗಿತ್ತು. ಹೀಗಾಗಿ ವಿಶೇಷ ನ್ಯಾಯಾಲಯ ಸ್ಥಾಪನೆಗೆ ತೀರ್ಮಾನಿಸಿದ್ದೇವೆ. ನಾವು ಸಾಂತ್ವನ ಹೇಳಲು ಬಂದಿದ್ದೇವೆ. ನಮ್ಮ ಕರ್ತವ್ಯ ನಿಭಾಯಿಸಿ ನಾವು ಅವರ ಮನೆಗೆ ಬಂದಿದ್ದೇವೆ. ವೈಯಕ್ತಿಕ ಘಟನೆ ಎಂಬ ಹೇಳಿಕೆ ಕುರಿತು ಗೃಹ ಸಚಿವ ಮತ್ತು ಸಿಎಂ ತಮ್ಮ ಸಮಾಜಯಿಸಿ ಹೇಳಿದ್ದಾರೆ ಎಂದರು.

  • ಕೇಂದ್ರದ ವಿರುದ್ಧ ನಿರ್ಣಯ ಅಂಗೀಕಾರ; ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕೆಂಡಾಮಂಡಲ – ಸದನ ಅಲ್ಲೋಲ ಕಲ್ಲೋಲ!

    ಕೇಂದ್ರದ ವಿರುದ್ಧ ನಿರ್ಣಯ ಅಂಗೀಕಾರ; ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕೆಂಡಾಮಂಡಲ – ಸದನ ಅಲ್ಲೋಲ ಕಲ್ಲೋಲ!

    – ಇದು ವಿಷಕಾರುವ ಸರ್ಕಾರವೆಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ
    – ಸದನದಲ್ಲೇ ಬಾವಿಗಿಳಿದು ಬಿಜೆಪಿ ಧರಣಿ

    ಬೆಂಗಳೂರು: ಭಾರೀ ವಿರೋಧದ ನಡುವೆಯೂ ಗುರುವಾರ ಕಾಂಗ್ರೆಸ್‌ (Congress) ನೇತೃತ್ವದ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ವಿರುದ್ಧ ಎರಡು ನಿರ್ಣಯ ಮಂಡಿಸಿತು.

    ಕೇಂದ್ರ ಸರ್ಕಾರ ಆರ್ಥಿಕ ಸಂಪನ್ಮೂಲಗಳ ಸಮಾನ ಹಂಚಿಕೆ ಮತ್ತು ತಾರತಮ್ಯ ರಹಿತ ಆರ್ಥಿಕ ಸಂಪನ್ಮೂಲಗಳ ಹಂಚಿಕೆಯ ನಿಲುವು ತೆಗೆದುಕೊಳ್ಳಬೇಕು. ಎಂ.ಎಸ್ ಸ್ವಾಮಿನಾಥನ್ ವರದಿಯ ಶಿಫಾರಸುಗಳು ಜಾರಿ ಆಗಬೇಕು. ರೈತರ (Farmers) ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಲು ಶಾಸನ ರೂಪಿಸಬೇಕು ಎಂಬ ನಿರ್ಣಯವನ್ನು ಸದನದಲ್ಲಿ ಅಂಗೀಕರಿಸಲಾಯಿತು. ಇದನ್ನೂ ಓದಿ: 40,000 ರೈಲು ಬೋಗಿಗಳಿಗೆ ಸಿಗಲಿದೆ ವಂದೇ ಭಾರತ್‌ನಂತೆ ಹೈಟೆಕ್‌ ಸ್ಪರ್ಶ – ಏನೆಲ್ಲಾ ವಿಶೇಷತೆ ಇರಲಿದೆ? 

    ಕಾನೂನು ಸಚಿವ ಹೆಚ್.ಕೆ ಪಾಟೀಲ್ (HK Patil) ಬಿಜೆಪಿ ಶಾಸಕರ ವಿರೋಧದ ನಡುವೆಯೂ ನಿರ್ಣಯ ಪ್ರತಿ ಓದಿದರು. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 68,200 ಕೋಟಿ ರೂ. ತೆರಿಗೆ ನಷ್ಟ ಆಗಿದೆ ಎಂದು ಆರೋಪಿಸಿದರು. ಜೊತೆಗೆ ಕೇಂದ್ರದಿಂದ ಬರಬೇಕಾದ ಅನುದಾನ ತೆರಿಗೆ ಪಾಲು ಹಾಗೂ ಬರದ ಅಂಕಿ ಅಂಶ ಕುರಿತು ನಿರ್ಣಯ ಮಂಡಿಸಿದರು. ಕರ್ನಾಟಕಕ್ಕೆ ಅನ್ಯಾಯ ಆಗಿದೆ. ನಮ್ಮ ಹಕ್ಕು ಕಸಿದುಕೊಳ್ಳಲಾಗಿದೆ, ಈ ನಿರ್ಣಯವನ್ನು ಸದನ ಸರ್ವಾನುಮತದಿಂದ ಒಪ್ಪಬೇಕು ಎಂದು ಮನವಿ ಮಾಡಿದರು.

    ನಿರ್ಣಯ ಮಂಡಿಸುತ್ತಿದ್ದಂತೆ ಬಿಜೆಪಿ ಶಾಸಕರು (BJP MPLs) ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದು ವಿಷ ಕಾರುವ ಸರ್ಕಾರ ಕೇಂದ್ರದ ವಿರುದ್ಧ ಪದೇ ಪದೇ ವಿಷ ಕಾರುವ ಸರ್ಕಾರ. ಕೇಂದ್ರ ಸರ್ಕಾರವನ್ನು ಬೈಯುವ ಸರ್ಕಾರ, ಇಂತಹ ಸರ್ಕಾರದ ವಿರುದ್ಧ ನಮ್ಮ ಧಿಕ್ಕಾರ ಧಿಕ್ಕಾರ ಎಂದು ಕೂಗಿ ಗದ್ದಲ ಎಬ್ಬಿಸಿದರು. ಸರ್ಕಾರದ ನಿರ್ಣಯ ಖಂಡಿಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು.

    ತೀವ್ರ ವಿರೋಧದ ನಡುವೆಯೂ ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ ಅಂಗೀಕರಿಸಲಾಯಿತು. ಇದೇ ವೇಳೆ ಶಾಸಕ ಪ್ರಕಾಶ್ ಕೋಳಿವಾಡ್ ಕರ್ನಾಟಕದಲ್ಲಿ ಮೋಡ ಬಿತ್ತನೆ ಕುರಿತು ಖಾಸಗಿ ವಿಧೇಯಕ ಮಂಡಿಸಿದರು. ಇದನ್ನೂ ಓದಿ: Loksabha Election 2024: ದೆಹಲಿಯಲ್ಲಿ ಕೈಗೆ 3 ಸ್ಥಾನ ಬಿಟ್ಟು ಕೊಟ್ಟು 4 ಸ್ಥಾನಗಳಲ್ಲಿ AAP ಸ್ಪರ್ಧೆ?

    ನಿರ್ಣಯ: 1 ಅನುದಾನ ತಾರತಮ್ಯ ವಿರುದ್ಧ
    ಕರ್ನಾಟಕದ ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸದಂತೆ, ನಾಗರಿಕರ ಹಿತರಕ್ಷಣೆಯಲ್ಲಿ ಸಮಾನ ಹಂಚಿಕೆಯ ಮತ್ತು ತಾರತಮ್ಯ ರಹಿತ ಆರ್ಥಿಕ ಸಂಪನ್ಮೂಲಗಳ ಹಂಚಿಕೆಯ ನಿಲುವುಗಳನ್ನು ತೆಗೆದುಕೊಳ್ಳಬೇಕು ಮತ್ತು ಕರ್ನಾಟಕದ ಜನತೆಯ ಹಿತರಕ್ಷಣೆಯ ವಿಷಯದಲ್ಲಿ ಯಾವುದೇ ಅನ್ಯಾಯವಾಗಬಾರದು.

    ನಿರ್ಣಯ: 2 ರೈತರಿಗೆ ಬೆಂಬಲ ಬೆಲೆ ಕುರಿತ ನಿರ್ಣಯ
    ರೈತರ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಕೇಂದ್ರ ಸರ್ಕಾರ ಶಾಸನ ರೂಪಿಸಬೇಕು. ರೈತರೊಂದಿಗೆ ಸಂಘರ್ಷದ ಹಾದಿ ತುಳಿಯದೇ ಅತ್ಯಂತ ನ್ಯಾಯಯುತವಾದ ಅವರ ಬೇಡಿಕೆಗಳನ್ನು ಈಡೇರಿಸಬೇಕು. ಇದನ್ನೂ ಓದಿ: ಚುನಾವಣೆ ಸ್ಪರ್ಧೆ ಕಾರಣಕ್ಕೆ ಪಕ್ಷಾಂತರ ಮಾಡಿರೋದು ಬೇಸರವಾಗಿದೆ: ಮುದ್ದಹನುಮೇಗೌಡ

  • ವಿದ್ಯುತ್‌ ಸ್ಪರ್ಶಿಸಿ ಯಶ್‌ ಅಭಿಮಾನಿಗಳ ಸಾವು – ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ವಿತರಣೆ

    ವಿದ್ಯುತ್‌ ಸ್ಪರ್ಶಿಸಿ ಯಶ್‌ ಅಭಿಮಾನಿಗಳ ಸಾವು – ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ವಿತರಣೆ

    ಗದಗ: ಹುಟ್ಟುಹಬ್ಬದ ಸಲುವಾಗಿ ಬೃಹತ್‌ ಕಟೌಟ್ ನಿಲ್ಲಿಸುವ ವೇಳೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದ ನಟ ಯಶ್ ಅಭಿಮಾನಿಗಳ (Yash Fans) ಕುಟುಂಬಕ್ಕೆ ಸಚಿವ ಹೆಚ್‌.ಕೆ ಪಾಟೀಲ್‌ (HK Patil) ಪರಿಹಾರ ವಿತರಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರ ಕುಟುಂಬಸ್ಥರಿಗೆ ತಲಾ 50 ಸಾವಿರ ರೂ. ಪರಿಹಾರ ವಿತರಿಸಿದ್ದಾರೆ.

    ಇಲ್ಲಿನ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಟ ಯಶ್ ಹುಟ್ಟುಹಬ್ಬ ಆಚರಿಸಲು ಬೃಹತ್‌ ಕಟೌಟ್‌ ನಿಲ್ಲಿಸುವ ವೇಳೆ ದುರ್ಘಟನೆ ನಡೆದಿತ್ತು. ವಿದ್ಯುತ್‌ ಸ್ಪರ್ಶಿಸಿ ಮೂವರು ಅಭಿಮಾನಿಗಳು ಮೃತಪಟ್ಟಿದ್ದರು, ನಾಲ್ವರು ಗಾಯಗೊಂಡಿದ್ದರು. ಮೃತಪಟ್ಟ ಮುರಳಿ, ನವೀನ್, ಹನುಮಂತ ಎಂಬವರ ಮನೆಗಳಿಗೆ ಸಚಿವ ಹೆಚ್‌.ಕೆ ಪಾಟೀಲ್‌ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಪರಿಹಾರ ಚೆಕ್‌ ವಿತರಣೆ ಮಾಡಿದರು.

    ಈ ಸಂದರ್ಭದಲ್ಲಿ ಭೂ ಒಡೆತನ ಯೋಜನೆಯಡಿ‌ ಸಂತ್ರಸ್ತ ಕುಟುಂಬದವರಿಗೆ ಭೂಮಿ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದರು. ಈ ಬಗ್ಗೆ ಅನುಕಂಪದ ದೃಷ್ಟಿಯಲ್ಲಿ ಸರ್ಕಾರ ಸೂಕ್ತ ರೀತಿ ಕ್ರಮ ತೆಗೆದುಕೊಳ್ಳಲಿದೆ ಎಂದು ಸಚಿವರು ಉತ್ತರಿಸಿದರು. ಇದನ್ನೂ ಓದಿ: ವಿದ್ಯುತ್‌ ಸ್ಪರ್ಶ ಘಟನೆ- ಮೃತಪಟ್ಟ ಮೂವರು ಅಭಿಮಾನಿಗಳ ಮನೆಗೆ ಭೇಟಿ ನೀಡಿ ಯಶ್‌ ಸಾಂತ್ವನ

    ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ದುರ್ಘಟನೆ ಮೂರು ಜೀವಗಳನ್ನು ಬಲಿ ಪಡೆದುಕೊಂಡಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಓರ್ವನಿಗೆ ಗಂಟಲು ಮೂಲಕ ವಿದ್ಯುತ್‌ ಶಾಕ್‌ ಪ್ರವಹಿಸಿರೋದ್ರಿಂದ ಊಟ ಮಾಡೋದಕ್ಕೆ ಆಗುತ್ತಿಲ್ಲ. ಆದ್ರೆ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ ಈ ಘಟನೆ ಬಹಳಷ್ಟು ನೋವು ತಂದಿದೆ. ಈ ಘಟನೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗಿ ಅವರೂ ಸಹ ದುಃಖಿತರಾದರು ಎಂದು ಹೇಳಿದ್ದಾರೆ. ಇದನ್ನೂ ಓದಿ: ಯಶ್‌ ನೋಡುವ ಕಾತುರದಲ್ಲಿ ಬೈಕ್‌ ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ಅಭಿಮಾನಿ ಸಾವು

    ಈ ರೀತಿಯ ಘಟನೆ ಮರುಕಳಿಸಬಾರದು ಅನ್ನೋ ಚಿಂತನೆ ಬಹಳಷ್ಟು ನಡೆಯುತ್ತಿದೆ. ಈ ರೀತಿಯ ಘಟನೆಗಳು ಮರುಕಳಿಸದ ಹಾಗೆ ಪೋಸ್ಟರ್ ಹಾಗೂ ಬ್ಯಾನರ್ ಅಳವಡಿಕೆಗೆ ನಿಯಮ ರೂಪಿಸುವಂತೆ ಸಲಹೆ, ಸೂಚನೆ ಬಂದಿವೆ. ಸರ್ಕಾರ ಆ ದಿಸೆಯಲ್ಲಿ ಚಿಂತನೆ ಮಾಡ್ತಿದೆ ಎಂದು ತಿಳಿಸಿದ್ದಾರೆ.