ಬೆಂಗಳೂರು: ಮುಂಗಾರು ಮಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲು ಕ್ಯಾಬಿನೆಟ್ (Cabinet) ತೀರ್ಮಾನಿಸಿದೆ.
ಮೂಲಭೂತ ಸೌಕರ್ಯಗಳ ಹಾನಿಗೆ ಎನ್‌ಡಿಆರ್‌ಎಫ್ ಅಡಿ 1,545 ಕೋಟಿ ರೂ. ಆರ್ಥಿಕ ಸಹಾಯ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಸರ್ಕಾರ ವರದಿ ಸಿದ್ಧಪಡಿಸಿದೆ. ಆದರೆ ಬೆಳೆ ನಷ್ಟದ ಬಗ್ಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿ ಪರಿಹಾರ ಕೇಳುತ್ತಿದ್ದೇವೆ ಅಂತಾ ಕಾನೂನು ಸಚಿವ ಹೆಚ್.ಕೆ.ಪಾಟೀಲ್ (H K Patil) ಸ್ಪಷ್ಟಪಡಿಸಿದ್ದಾರೆ.
ಇನ್ನು ಒಳ ಮೀಸಲಾತಿ ವಿಚಾರವಾಗಿ ಶೀಘ್ರದಲ್ಲೇ ಮಸೂದೆಗೆ ಕ್ರಮ ವಹಿಸುತ್ತೇವೆ. ಮುಂದಿನ ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರು: ಇವಿಎಂ (EVM) ತನ್ನ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಹೀಗಾಗಿ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ (Ballot Paper) ಬಳಕೆಗೆ ನಿರ್ಧಾರ ಮಾಡಿದೆ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ (HK Patil) ಬ್ಯಾಲೆಟ್ ಪೇಪರ್ ನಿರ್ಧಾರ ಸಮರ್ಥನೆ ಮಾಡಿಕೊಂಡಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಕ್ಯಾಬಿನೆಟ್ ನಿರ್ಧಾರ ವಿಚಾರಕ್ಕೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇವಿಎಂ ಬಗ್ಗೆ ಕರ್ನಾಟಕ ಮಾತ್ರವಲ್ಲ ದೇಶದ ಅನೇಕ ರಾಜ್ಯಗಳು ಇವಿಎಂ ಅಕ್ರಮ ಆಗುತ್ತಿದೆ ಎಂದು ಅನುಮಾನ ಇದೆ. ಹ್ಯಾಕ್ ಮಾಡುತ್ತಾರೆ ಎಂಬುದರ ಬಗ್ಗೆ ಅನುಮಾನ ಇದೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಕೊನೆಯ 1 ಗಂಟೆಯಲ್ಲಿ 5 ಗಂಟೆಯಷ್ಟು ಹಾಕಲಾಗದ ಮತ ಹಾಕುವ ವ್ಯವಸ್ಥೆ ಕೊನೆ ಘಳಿಗೆಯಲ್ಲಿ ಆಗಿದೆ. ಇವಿಎಂ ತಮ್ಮ ವಿಶ್ವಾಸಾರ್ಹತೆ ಕಳೆದುಕೊಂಡಿದೆ. 2018ರಲ್ಲಿ ನಮ್ಮ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಇವಿಎಂ ವಿರುದ್ಧ ಮಾಡಿತ್ತು. ಅವತ್ತು ನಾನು ಬಳಿಕ ಮಾಹಿತಿ ಪುರಾವೆ ಸಲ್ಲಿಕೆ ಮಾಡಿದ್ದೇನೆ. ಅಂದಿನ ಸಭಾಪತಿಗಳಾಗಿದ್ದವರು ಕಾಗೇರಿ ಅವರು. ಚರ್ಚೆ ಆದ ಮೇಲೆ ಚುನಾವಣೆ ಆಯೋಗಕ್ಕೆ ಸ್ಪೀಕರ್ ಕಾಗೇರಿ ಪತ್ರ ಬರೆದರು. ಆಗ ಚುನಾವಣೆ ಆಯೋಗ ನಮ್ಮ ಬಗ್ಗೆ ಸದನದಲ್ಲಿ ಚರ್ಚೆ ಮಾಡಬಾರದು ಅಂತ ವಾಪಸ್ ಬರೆದರು. ಆದರೆ ಇವಿಎಂ ಅನುಮಾನದ ಬಗ್ಗೆ ಆಯೋಗ ವಿವರಣೆ ಕೊಡಲಿಲ್ಲ. ಪ್ರಜಾಪ್ರಭುತ್ವದಲ್ಲಿ ಒಂದು ಸಂಸ್ಥೆಯಲ್ಲಿ ಆ ಕಾರ್ಯದಲ್ಲಿ ಅನುಮಾನ ಬಂದಾಗ ಪಾರದರ್ಶಕವಾಗಿ ಪರಿಹಾರ ಮಾಡಬೇಕು. ಆದರೆ ನಮಗೆ ರಕ್ಷಣೆ ಇದೆ ಅಂತ ಆಯೋಗ ಮಾತಾಡೋದು ಸರಿಯಲ್ಲ ಎಂದು ಚುನಾವಣೆ ಆಯೋಗದ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ – ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ
ಇವಿಎಂ ಪರಿಣಾಮದ ಬಗ್ಗೆ ಹಿಂದೆಯೇ ಹೇಳಿದ್ದೆವು. ಕರ್ನಾಟಕದಲ್ಲಿ ಇವಿಎಂ ಬಗ್ಗೆ ಅನುಮಾನ ಇದೆ. ಹೀಗಾಗಿ ನಮ್ಮ ಸರ್ಕಾರಕ್ಕೆ ಇರುವ ಅಧಿಕಾರದಲ್ಲಿ ಬ್ಯಾಲೆಟ್ ಪೇಪರ್ ಚುನಾವಣೆ ಆಗೋ ನಿರ್ಧಾರ ಮಾಡಿದ್ದೇವೆ. ಚುನಾವಣೆ ಆಯೋಗದ ಮ್ಯಾನುಯಲ್‌ನಲ್ಲಿ 15 ವರ್ಷ ಆದ ಮೇಲೆ ಇವಿಎಂ ನಿರ್ಣಾಮ ಮಾಡಬೇಕು. ಹೇಗೆ ಮಾಡಬೇಕು ಅಂತ ಪದ್ದತಿ ಇದೆ. ಆದರೆ ಆಯೋಗ ಇದನ್ನ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಅನೇಕ ರಾಜ್ಯದಲ್ಲಿ ಟ್ರಕ್ ಗಟ್ಟಲೆ ಇವಿಎಂ ಹೋಗೋದು ನೋಡಿದ್ದೇವೆ. ಅನೇಕ ಪ್ರದೇಶದಲ್ಲಿ ಇವಿಎಂ ಮಿಷನ್ ಬಿದ್ದಿರೋದು ನೋಡಿದ್ದೇವೆ. ಚುನಾವಣೆ ಆಯೋಗ ನಿಯಮ ಗಾಳಿಗೆ ತೂರಿ ಕೆಲಸ ಮಾಡುತ್ತಿದೆ. ಚುನಾವಣೆ ಆಯೋಗ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಹೀಗಾಗಿ ಅನುಮಾನ ಹೋಗಲಾಡಿಸಲು ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಕ್ಯಾಬಿನೆಟ್‌ನಲ್ಲಿ ನಿರ್ಣಯ ಮಾಡಿದೆ ಎಂದರು. ಇದನ್ನೂ ಓದಿ: ಪಾಕಿಸ್ತಾನ ಜೊತೆಗಿನ ಯುದ್ಧ ಮೇ 10ಕ್ಕೆ ಕೊನೆಗೊಂಡಿಲ್ಲ: ಭಾರತೀಯ ಸೇನಾ ಮುಖ್ಯಸ್ಥ
ಇವಿಎಂ ಮೇಲೆ ಅನುಮಾನ ಇದ್ದರೆ ಕರ್ನಾಟಕದಲ್ಲಿ ಸರ್ಕಾರ ವಿಸರ್ಜನೆ ಮಾಡಿ ಚುನಾವಣೆ ಎದುರಿಸಲಿ ಎಂಬ ಬಿಜೆಪಿ ಆಗ್ರಹಕ್ಕೆ ತಿರುಗೇಟು ಕೊಟ್ಟ ಅವರು, ಎಂಪಿ, ವಿಧಾನಸಭೆ ಚುನಾವಣೆ ಬ್ಯಾಲೆಟ್ ಪೇಪರ್ ಮಾಡೋಣ ಅಂತ ಬಿಜೆಪಿ ಹೇಳಲಿ. ಕೇಂದ್ರ ಸರ್ಕಾರ ಬ್ಯಾಲೆಟ್ ಪೇಪರ್ ವ್ಯವಸ್ಥೆ ಘೋಷಣೆ ಮಾಡಲಿ. ಆಮೇಲೆ ಕರ್ನಾಟಕದಲ್ಲಿ ನಾವು ಚುನಾವಣೆ ಮತ್ತೆ ಎದುರಿಸುತ್ತೇವೆ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಬುರುಡೆ ಕೇಸಲ್ಲಿ ಸೆಂಥಿಲ್ ಹೆಸರು – ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲು
ಬಸವರಾಜ್ ಬೊಮ್ಮಾಯಿ ಅವರ ಮೇಲೆ ವಿಶೇಷ ಅಭಿಪ್ರಾಯ ಇದೆ. ಅವರ ಜೊತೆ ಚುನಾವಣೆ ರಿಫಾರ್ಮ್ಸ್ ಬಗ್ಗೆ ಚರ್ಚೆ ಮಾಡಿದ್ದೇವೆ. ಕರ್ನಾಟಕದಲ್ಲಿ ಹ್ಯಾಕಥಾನ್ ಮಾಡಿ ಅಂತ ಚುನಾವಣೆ ಆಯೋಗಕ್ಕೆ ಹೇಳಿದ್ದೆವು. ಆದರೆ ಆಯೋಗ ಮಾಡಲಿಲ್ಲ. ಚುನಾವಣೆ ಆಯೋಗ ಯಾವುದೇ ಪರೀಕ್ಷೆಗೆ ಒಪ್ಪಲಿಲ್ಲ. ಬಿಜೆಪಿ ರಾಜಕೀಯವಾಗಿ ಈಗ ಹೇಳುತ್ತಿದೆ. ಅಧಿವೇಶನದಲ್ಲಿ ಸರ್ವಾನುಮತದಿಂದ ಇದರ ಬಗ್ಗೆ ನಿರ್ಣಯ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿ ನನ್ನ ಒಳ್ಳೆಯ ಸ್ನೇಹಿತ: ಮತ್ತೆ ಯೂಟರ್ನ್ ಹೊಡೆದ ಟ್ರಂಪ್
ಮಹಾರಾಷ್ಟ್ರ ಚುನಾವಣೆಯಲ್ಲಿ ಕೊನೆ ಘಳಿಗೆಯಲ್ಲಿ ಅಕ್ರಮದ ವೋಟಿಂಗ್ ಆಯಿತು. ಇಂತಹ ಅಕ್ರಮ 10% ಕೂಡಾ ಹಿಂದಿನ ಬ್ಯಾಲೆಟ್ ಪೇಪರ್ ವ್ಯವಸ್ಥೆ ಇದ್ದಾಗ ಆಗಿರಲಿಲ್ಲ. ಬ್ಯಾಲೆಟ್ ಪೇಪರ್ ತರಲು ಕಾನೂನು ತಿದ್ದುಪಡಿ ಮಾಡುತ್ತೇನೆ. ರಾಜ್ಯಪಾಲರು ಕಾನೂನಿನ ಪರ ಇರಬೇಕು, ಸಂವಿಧಾನದ ಪರ ಇರಬೇಕು. ಸಂವಿಧಾನ ಪರ ಮಾಡೋ ಕೆಲಸ ಯಾರು ತಡೆಯೋಕೆ ಆಗಲ್ಲ. ರಾಜ್ಯಪಾಲ ಬಿಲ್ ಪಾಸ್ ಮಾಡಬೇಕಾಗುತ್ತದೆ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಉತ್ತರ ಭಾರತದಲ್ಲಿ ನಿರಂತರ ಮಳೆಯಿಂದ ಭಾರೀ ಹಾನಿ – ಪಂಜಾಬ್‌ನಲ್ಲಿ ಪ್ರವಾಹದಿಂದಾಗಿ 45 ಮಂದಿ ಸಾವು
ಬೆಂಗಳೂರು: ಕರ್ನಾಟಕ ಗಡಿ ಮತ್ತು ನದಿಗಳ ವಿವಾದ ವಿಷಯಗಳ ಬಗ್ಗೆ ನಿರಂತರವಾಗಿ ನಿಗಾ ವಹಿಸಿ ಸೂಕ್ತ ಕ್ರಮ ಕೈಗೊಳ್ಳಲು ಉಸ್ತುವಾರಿಯನ್ನಾಗಿ ಕಾನೂನು ಸಚಿವ ಹೆಚ್.ಕೆ ಪಾಟೀಲ್ (HK Patil) ಅವರನ್ನ ನೇಮಿಸಲಾಗಿದೆ.
ಈ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನಾತ್ಮಕವಾಗಿ ಮತ್ತು ರಾಜಕೀಯ ನೆಲೆಗಟ್ಟಿನಲ್ಲಿ ಪರಿಶೀಲಿಸಿ ಸಮಯೋಚಿತ ಅವಶ್ಯಕ ಕ್ರಮ ತೆಗೆದುಕೊಳ್ಳಲು ಸಚಿವರೊಬ್ಬರಿಗೆ ಜವಾಬ್ದಾರಿ ವಹಿಸಲು ಸರ್ಕಾರ ನಿರ್ಧರಿಸಿತ್ತು. ಹೀಗಾಗಿ ಗಡಿ ಉಸ್ತುವಾರಿ ಬಗ್ಗೆ ನೋಡಿಕೊಳ್ಳಳು ಹೆಚ್.ಕೆ ಪಾಟೀಲ್ ಅವರನ್ನ ನೇಮಿಸಲಾಗಿದೆ.
ಕರ್ನಾಟಕದ ಗಡಿ ಭಾಗದಲ್ಲಿ ಶಿಕ್ಷಣ, ಸಂಸ್ಕೃತಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕನ್ನಡಪರ ಸಂಘ ಸಂಸ್ಥೆಗಳು ಹಾಗೂ ಕನ್ನಡ ಪರ ಕಾರ್ಯ ನಿರ್ವಹಿಸುತ್ತಿರುವ ಕನ್ನಡ ಮಾಧ್ಯಮ ಶಾಲೆಗಳ ಸಮಸ್ಯೆಗಳು ಮತ್ತು ಸವಾಲುಗಳು ತುಂಬಾ ಗಂಭೀರ ವಾದುದಾಗಿರುತ್ತವೆ. ಕರ್ನಾಟಕ ರಾಜ್ಯದ ಒಳಗಿರುವ ಗಡಿ ಭಾಗದಲ್ಲಿನ ಪ್ರದೇಶಗಳ ಅಭಿವೃದ್ಧಿಯ ಜೊತೆಗೆ ಕರ್ನಾಟಕದ ಹೊರಗಿರುವ ಆರು ನೆರೆ ರಾಜ್ಯಗಳಿಗೆ ಹೊಂದಿಕೊಂಡಂತೆ ಇರುವ ಕನ್ನಡ ಪ್ರದೇಶಗಳಲ್ಲಿನ ಕನ್ನಡದ ಕಾಯಕವನ್ನು ಕೈಗೊಳ್ಳುವುದು ತೀರಾ ಅಗತ್ಯವಾಗಿರುತ್ತದೆ.
ಕರ್ನಾಟಕ ಸರ್ಕಾರವು 63 ತಾಲ್ಲೂಕುಗಳನ್ನು ಗಡಿ ಭಾಗದ ತಾಲ್ಲೂಕುಗಳೆಂದು ಗುರುತಿಸಿದೆ. ಇವು ಸುಮಾರು 19 ಗಡಿ ಜಿಲ್ಲೆಗಳ ವ್ಯಾಪ್ತಿಗೆ ಬರುತ್ತವೆ. ಜೊತೆಗೆ ಆರು ನೆರೆ ರಾಜ್ಯಗಳಲ್ಲಿನ ಕರ್ನಾಟಕದ ಗಡಿ ಭಾಗದ ಪ್ರದೇಶದಲ್ಲಿರುವ ಕನ್ನಡಿಗರಿಗೂ ಹಲವಾರು ಸಮಸ್ಯೆಗಳಿವೆ. ಇವರ ಸಮಸ್ಯೆಗಳ ಪರಿಹಾರಕ್ಕೆ ಕರ್ನಾಟಕ ಸರ್ಕಾರವು 2010ರಲ್ಲಿ ʻಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರʼ ವನ್ನು ಸ್ಥಾಪಿಸಿ ಅದನ್ನು ಈಗ ಯೋಜನಾ ಆಯೋಗದ ಅಡಿಗೆ ತಂದಿದೆ.
ರಾಜ್ಯದ ಹಾಗೂ ಹೊರರಾಜ್ಯದ ಕನ್ನಡ ಪರ ಸಂಘ/ಸAಸ್ಥೆಗಳಿಗೆ ಭಾಷಾ ಚಟುವಟಿಕೆಗಳಿಗಾಗಿ ಪ್ರೋತ್ಸಾಹ ನೀಡುವುದು ಹಾಗೂ ಗಡಿ ಭಾಗದ ಕನ್ನಡ ಮಾಧ್ಯಮ ಶಾಲೆಗಳ ಮೂಲಭೂತ ಸೌಕರ್ಯಗಳಾದ ಶಾಲಾ ಕೊಠಡಿ, ಗ್ರಂಥಾಲಯ, ಕ್ರೀಡಾ ಕೊಠಡಿ, ಶಾಲಾ ಶೌಚಾಲಯ, ಶಾಲಾ ಆವರಣ ಗೋಡೆ, ಇತ್ಯಾದಿ ಸೌಲಭ್ಯಗಳನ್ನು ಪ್ರಾಧಿಕಾರದಿಂದ ಒದಗಿಸಲಾಗುತ್ತಿದೆ. ಇದೀಗ ಗಡಿಯಲ್ಲಿ ಕನ್ನಡಿಗರ ಸಮಸ್ಯೆ ಪರಿಹರಿಸುವ ಜವಾಬ್ದಾರಿ ಹಿರಿಯ ಸಚಿವರಾದ ಹೆಚ್.ಕೆ ಪಾಟೀಲರಿಗೆ ವಹಿಸಿದೆ.
ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ (Chinnaswamy Stampede) ಪ್ರಕರಣಕ್ಕೂ, ಅದೇ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೂ ಹಾಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ (HK Patil) ತಿಳಿಸಿದ್ದಾರೆ.
ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಹೈಕಮಾಂಡ್‌ಗೆ ವರದಿ ನೀಡುತ್ತೇವೆ. ತನಿಖೆ ಆದಷ್ಟು ಬೇಗ ಮುಗಿಯಲಿದೆ. ಇನ್ನೂ ವಿಧಾನಸೌಧದ ಡಿಸಿಪಿ ಬರೆದ ಪತ್ರದ ಬಗ್ಗೆ ಈಗ ನಾನು ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ತನಿಖೆ ನಡೆಯುತ್ತಿದೆ. ತನಿಖಾ ಹಂತದಲ್ಲಿ ಮಾತಾಡುವುದು ಸರಿಯಲ್ಲ. ನಾಳೆಯೊಳಗೆ ಕೋರ್ಟ್‌ಗೆ ವರದಿ ನೀಡುತ್ತೇವೆ. ಕೋರ್ಟ್ ಯಾವ್ಯಾವ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಅವುಗಳನ್ನು ಪರಿಗಣಿಸಲಿದೆ ಎಂದು ತಿಳಿಸಿದರು.
ಘಟನೆ ಆದ ಕೂಡಲೇ ಸಿಎಂ, ಡಿಸಿಎಂ ಆಸ್ಪತ್ರೆ ಮತ್ತು ಘಟನಾ ಸ್ಥಳಕ್ಕೆ ಹೋಗಿದ್ದರು. ತಕ್ಷಣವೇ ಸರ್ಕಾರ ಸ್ಪಂದಿಸಿದೆ. ಕ್ಯಾಬಿನೆಟ್‌ನಲ್ಲೂ ತನಿಖೆ ಆಗಬೇಕು ಎಂದು ಆದೇಶಿಸಿದ್ದೇವೆ. ಸರ್ಕಾರ ಪರಿಹಾರವನ್ನು ಕೂಡ ಜಾಸ್ತಿ ಮಾಡಿದೆ. ಹೀಗಾಗಿ ಇದರಲ್ಲಿ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದರು.ಇದನ್ನೂ ಓದಿ: ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಡಿಸಿ ನೋಟಿಸ್ – ತನಿಖೆಗೆ ಹಾಜರಾಗುವಂತೆ 45 ಮಂದಿಗೆ ಸೂಚನೆ
ಬೆಂಗಳೂರು: ರಾಜ್ಯದ ಜಾತಿ ಜನಗಣತಿ (Caste Census) ವರದಿ ಬಗ್ಗೆ ಯಾವ ನಿಲುವು ತೆಗೆದುಕೊಳ್ಳಬೇಕು ಅಂತ ಮೇ 9ರ ಕ್ಯಾಬಿನೆಟ್‌ನಲ್ಲಿ ನಿರ್ಧಾರ ಮಾಡೋದಾಗಿ ಕಾನೂನು ಸಚಿವ ಹೆಚ್.ಕೆ ಪಾಟೀಲ್ (HK Patil) ತಿಳಿಸಿದರು.
ಕೇಂದ್ರ ಸರ್ಕಾರದಿಂದ ಜಾತಿ ಜನಗಣತಿ ಮಾಡೋ ಘೋಷಣೆ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರದಿಂದ ಈಗಾಗಲೇ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಮಾಡಿದ್ದೇವೆ. ಈಗ ಕೇಂದ್ರ ಸರ್ಕಾರ (Central Government) ಜಾತಿಗಣತಿ ಮಾಡೋ ಘೋಷಣೆ ಮಾಡಿದೆ. ಕೇಂದ್ರದವರು ಜಾತಿಗಣತಿ ಜೊತೆಗೆ ಸಂಪೂರ್ಣ ಜನಗಣತಿ ಮಾಡುತ್ತಾರೆ ಎಂದು ವಿವರಿಸಿದ್ರು. ಇದನ್ನೂ ಓದಿ: ಚುನಾವಣಾ ಪ್ರಣಾಳಿಕೆಯಲ್ಲಿ ನಾವು ಘೋಷಿಸಿದ್ದಂತೆ ಒಳಮೀಸಲಾತಿ ಜಾರಿಗೆ ಬದ್ಧ: ಸಿದ್ದರಾಮಯ್ಯ
ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್‌ನಲ್ಲಿ (Pahalgam) ನಡೆದ ಭಯೋತ್ಪಾದಕ ದಾಳಿಯಲ್ಲಿ (Terrorist Attack) ಗಾಯಗೊಂಡವರು ಹಾಗೂ ಅಲ್ಲಿರುವ ಕನ್ನಡಿಗರಿಗಾಗಿ ಒಂದು ತಂಡ ರಚನೆ ಮಾಡಿ, ರಕ್ಷಣಾ ಕಾರ್ಯಾಚರಣೆಗಾಗಿ ಕಳುಹಿಸುತ್ತಿದ್ದೇವೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಹೆಚ್‌ಕೆ ಪಾಟೀಲ್ (HK patil) ಮಾಹಿತಿ ನೀಡಿದರು.
`ಪಬ್ಲಿಕ್ ಟಿವಿ’ ಜೊತೆ ಮಾತನಾಡಿ ಮಾಹಿತಿ ಹಂಚಿಕೊಂಡ ಅವರು, ನನಗೆ ಸಿಕ್ಕ ಮಾಹಿತಿ ಪ್ರಕಾರ ಮಂಜುನಾಥ್ ಎನ್ನುವ ಒಬ್ಬರು ಸಾವನ್ನಪ್ಪಿದ್ದಾರೆ. ಆದರೆ ಕೆಲವು ವರದಿಯ ಪ್ರಕಾರ, ಇಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಆದರೆ ಆ ಕುರಿತು ಅಧಿಕೃತ ಮಾಹಿತಿ ಬಂದಿಲ್ಲ. ಸದ್ಯದ ಮಾಹಿತಿ ಪ್ರಕಾರ ಒಟ್ಟು 12 ಜನ ಕನ್ನಡಿಗರಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಸಿಎಂ ಹಾಗೂ ಮುಖ್ಯ ಕಾರ್ಯದರ್ಶಿಯವರ ಜೊತೆ ಮಾತನಾಡಿದ್ದೇನೆ. ಈಗಾಗಲೇ ಒಂದು ತಂಡ ರಚನೆ ಮಾಡಿ, ರಕ್ಷಣಾ ಕಾರ್ಯಾಚರಣೆಗಾಗಿ ಕಳುಹಿಸುತ್ತಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ಪೈಶಾಚಿಕ ಕೃತ್ಯ – 27ಕ್ಕೂ ಹೆಚ್ಚು ಪ್ರವಾಸಿಗರು ಬಲಿ?
ಕರ್ನಾಟಕ ಭವನದ ಅಧಿಕಾರಿಗಳು, ಹಿರಿಯ ಅಧಿಕಾರಿಗಳು ಹೊರಡಲು ಸಿದ್ಧರಾಗಿದ್ದಾರೆ. ಇನ್ನೂ ಕನ್ನಡಿಗರು ಯಾರೆಲ್ಲ ಇದ್ದಾರೆ ಎಂದು ಅವರ ಬಗ್ಗೆ ಪಟ್ಟಿ ಮಾಡಲು ಏಜೆನ್ಸಿಗಳಿಗೆ ತಿಳಿಸಲಾಗಿದೆ. ಗಾಯಗೊಂಡವರು ಮೂವರು, ಸಾವನ್ನಪ್ಪಿದವರು ಇಬ್ಬರು ಎನ್ನಲಾಗುತ್ತಿದ್ದು, ಒಬ್ಬರ ಬಗ್ಗೆ ಅಧಿಕೃತವಾಗಿ ತಿಳಿದು ಬಂದಿದೆ. ಇನ್ನೊಬ್ಬರ ಬಗ್ಗೆ ಮಾಹಿತಿ ತಿಳಿದು ಬರಬೇಕಿದೆ ಎಂದು ತಿಳಿಸಿದರು.
ಏನಿದು ಘಟನೆ?
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, ಶಿವಮೊಗ್ಗದ ಪ್ರವಾಸಿಗರೊಬ್ಬರು ಸಾವಿಗೀಡಾಗಿದ್ದಾರೆ. ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗದ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ (47) ಮೃತಪಟ್ಟಿದ್ದಾರೆ. ಶಿವಮೊಗ್ಗದ ವಿಜಯನಗರ ನಿವಾಸಿಯಾಗಿರುವ ಮಂಜುನಾಥ್ ಅವರು ಪತ್ನಿ ಪಲ್ಲವಿ ಹಾಗೂ ಪುತ್ರ ಅಭಿಜೇಯ ಜೊತೆ ಪ್ರವಾಸಕ್ಕೆ ಹೋಗಿದ್ದರು.ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಕನ್ನಡಿಗ ಮಂಜುನಾಥ್ ರಾವ್ ಯಾರು?
ಬೆಂಗಳೂರು: ಮಾತಾ ಮಾಣಿಕೇಶ್ವರಿ ದೇವಸ್ಥಾನವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡುವುದಾಗಿ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ (HK Patil) ಘೋಷಣೆ ಮಾಡಿದರು.ಇದನ್ನೂ ಓದಿ: ಅಪಾಯವಿದೆ ಎಚ್ಚರಿಕೆ ಅಖಾಡದಲ್ಲೋರ್ವ ರಂಗಭೂಮಿ ಪ್ರತಿಭೆ!
ವಿಧಾನ ಪರಿಷತ್ ಕಲಾಪದಲ್ಲಿ ಕಾಂಗ್ರೆಸ್‌ನ (Congress) ತಿಪ್ಪಣ್ಣ ಕಮಕನೂರು ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಮಾತಾ ಮಾಣಿಕೇಶ್ವರಿಯ ಭಕ್ತ. ಮಾತಾ ಮಾಣಿಕೇಶ್ವರಿ ದೇವಾಲಯವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡುತ್ತೇವೆ. ಇದಕ್ಕೆ ಬೇಕಾದ ಎಲ್ಲಾ ಪ್ರಕ್ರಿಯೆಯನ್ನು ಪ್ರವಾಸೋದ್ಯಮ ಇಲಾಖೆ ಮಾಡಲಿದೆ ಎಂದು ವಿವರಿಸಿದರು.
ಇದಕ್ಕೂ ಮುನ್ನ ಪ್ರಶ್ನಸಿದ್ದ ತಿಪ್ಪಣ್ಣ ಕಮಕನೂರು, ಮಾತಾ ಮಾಣಿಕೇಶ್ವರಿ ದೇವಸ್ಥಾನವನ್ನು ಪ್ರವಾಸಿ ತಾಣವಾಗಿದೆ, ಅದನ್ನು ಅಭಿವೃದ್ಧಿ ಮಾಡಬೇಕು. ಬಡವರ ದೇವಾಲಯ ಎಂದು ಅಭಿವೃದ್ಧಿ ಆಗಿಲ್ಲ. ದೇವಸ್ಥಾನಕ್ಕೆ ಎರಡು ಕೋಟಿ ರೂ. ಅನುದಾನ ನೀಡಬೇಕು ಎಂದು ಮನವಿ ಮಾಡಿದರು.ಇದನ್ನೂ ಓದಿ: ಹೈಕಮಾಂಡ್, ಶಾಸಕರ ಬೆಂಬಲ ಇರೋವರೆಗೂ ಸಿದ್ದರಾಮಯ್ಯರೇ ಸಿಎಂ: ಸಂಸದ ಸುನೀಲ್ ಬೋಸ್
ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕಲು, ಕರ್ನಾಟಕ ಮೈಕ್ರೋ ಫೈನಾನ್ಸ್ (ದಬ್ಬಾಳಿಕೆ ಮತ್ತು ಅಮಾನವೀಯ ಕ್ರಮಗಳ ನಿಯಂತ್ರಣ) ಮಸೂದೆಯನ್ನು (Micro Finance Bill) ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸರ್ಕಾರ ಸರ್ಕಸ್ ನಡೆಸಿದೆ. ಗುರುವಾರ ನಡೆದ ಸಂಪುಟ ಸಭೆಯು ಸುಗ್ರೀವಾಜ್ಞೆ ಹೊರಡಿಸಲು ಒಪ್ಪಿಗೆ ಸೂಚಿಸಿದೆ.
ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ನಿವಾರಣೆ ಹಾಗೂ ಮೈಕ್ರೋ ಫೈನಾನ್ಸ್ಗಳ ಹಾವಳಿಗೆ ಕಡಿವಾಣ ಹಾಕುವ ಸಂಬಂಧ ಇಂದು ಕೃಷ್ಣಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಮುಖ್ಯಾಂಶಗಳು:
•ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ತಪ್ಪಿಸುವ ಉದ್ದೇಶದಿಂದ ರಚಿಸಲಾಗಿರುವ ಸುಗ್ರೀವಾಜ್ಞೆಯಲ್ಲಿನ ಅಂಶಗಳನ್ನು… pic.twitter.com/rTx5vaCxwD
ಈ ಬೆನ್ನಲ್ಲೇ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ, ಮಸೂದೆಯ ಸಾಧಕಬಾಧಕಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಸುಗ್ರೀವಾಜ್ಞೆಯಲ್ಲಿನ ಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಲು, ಕೆಲವು ಬದಲಾವಣೆ ಮಾಡಲು ಕಾನೂನು ಮತ್ತು ಹಣಕಾಸು ಇಲಾಖೆಯ ನಾಲ್ವರು ಹಿರಿಯ ಅಧಿಕಾರಿಗಳ ತಂಡಕ್ಕೆ ಸೂಚಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಇನ್ನೆರಡು ದಿನಗಳಲ್ಲಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮಸೂದೆಯನ್ನು ಅಂಗೀಕರಿಸುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್ (HK Patil), ಕಳೆದ ಕೆಲ ದಿನಗಳಿಂದ ಮೈಕ್ರೋ ಫೈನಾನ್ಸ್ ತೊಂದರೆ ವಿಚಾರ ಚರ್ಚೆ ಆಗಿತ್ತು. ಸಾಲ ವಸೂಲಿ ಪ್ರಕ್ರಿಯೆಯ ಘಟನೆ ನೋಡಿದರೆ ಬಹಳ ಅಮಾನವೀಯವಾಗಿ ನಡೆದಿದೆ. ಇದರಿಂದ ಆತ್ಮಹತ್ಯೆ ಕೂಡ ನಡೆದಿದೆ. ಹಾಗಾಗಿ ಮೈಕ್ರೋ ಫೈನಾನ್ಸ್‌ಗೆ ಕಡಿವಾಣ ಹಾಕಲು ಹೊಸ ಕಾನೂನು ತರುತ್ತಿದ್ದೇವೆ. ಈಗಾಗಲೇ ಮಸೂದೆ ಸಿದ್ಧವಾಗಿದ್ದು, ಮಸೂದೆಯಲ್ಲಿ ಕೆಲವು ವಿಚಾರಗಳನನ್ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
ಅಲ್ಲದೇ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿ ನಿಗದಿಪಡಿಸುವ ವಿಚಾರವನ್ನು ಸಂಪುಟ ಸಭೆಯಲ್ಲಿ ಚರ್ಚಿಸಲಾಯಿತು. ರಾಮನಗರ ತಾಲ್ಲೂಕು, ಬಿಡದಿ ಹೋಬಳಿಯ ಬೈರಮಂಗಲ ಬನ್ನಿಗೆರೆ, ಹೊಸೂರು, ಕೆ.ಜಿ ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಅರಳಾಳುಸಂದ್ರ, ಕೆಂಪಯ್ಯನಪಾಳ ಕಂಚುಗಾರನಹಳ್ಳಿ ಕಾವಲು, ಮಂಡಲಹಳ್ಳಿ ಹಾಗೂ ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಗ್ರಾಮಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಗೆ ಸೇರಿಸಲು ಸಂಪುಟದ ಅನುಮೋದನೆ ನೀಡಿತು ಎಂದು ಸಚಿವರು ವಿವರಿಸಿದರು.
ಪ್ರಮುಖ ಕಾಮಗಾರಿಗಳಿಗೆ ಸಂಪುಟ
ಗುರುವಾರ ನಡೆದ ಸಂಪುಟ ಸಭೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಯಿತು.
* 83.72 ಕೋಟಿಗಳ ಪರಿಷ್ಕೃತ ಅಂದಾಜು ವೆಚ್ಚದಲ್ಲಿ ಹಾಸನ-ಹೊಳೆನರಸೀಪುರ ರೈಲು ಮಾರ್ಗದ ನಡುವಿನ ರೈಲ್ವೆ ಲೆವೆಲ್ ಕ್ರಾಸಿಂಗ್ ಕಾಮಗಾರಿಗೆ ಅನುಮೋದನೆ.
* ʻಹೊಂಬೆಳಕು ಯೋಜನೆʼಯಡಿ 25.00 ಕೋಟಿಗಳ ವೆಚ್ಚದಲ್ಲಿ 50 ಗ್ರಾಮ ಪಂಚಾಯತಿಗಳಲ್ಲಿ ಸೋಲಾರ್ ಬೀದಿ ದೀಪ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ.
* 44.50 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕಡಣಿ ಗ್ರಾಮದ ಹತ್ತಿರ ಭೀಮಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ.
* ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ವಿಧೇಯಕ, 2024 ಹಿಂಪಡೆಯಲು ಸಂಪುಟ ನಿರ್ಧಾರ
* ʻಅಪ್ಸರಕೊಂಡ-ಮುಗಲಿ ಕಡಲ ವನ್ಯಜೀವಿಧಾಮʼ ಎಂದು ಘೋಷಣೆ ಸೇರಿದಂತೆ ಇನ್ನಿತರ ಪ್ರಮುಖ ಕಾರ್ಯಕ್ರಮಗಳಿಗೆ ಒಪ್ಪಿಗೆ ಸೂಚಿಸಲಾಯಿತು.
ಬೆಂಗಳೂರು: ಅರಮನೆ ಆಸ್ತಿ (Bengaluru Palace Property) ವಿಚಾರದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಇಂದಿನ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ (HK Patil) ಹೇಳಿದರು.
ಅರಮನೆ ಆಸ್ತಿ ವಿಚಾರದಲ್ಲಿ ಸುಗ್ರೀವಾಜ್ಞೆ (Ordinance) ಹೊರಡಿಸಲು ಇಂದಿನ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. 1996 ರಲ್ಲಿ ಬೆಂಗಳೂರು ಅರಮನೆ ವ್ಯಾಪ್ತಿಯ 472 ಎಕರೆ ಭೂಮಿಯನ್ನ ಸರ್ಕಾರ ವಶಕ್ಕೆ ಪಡೆಯಲು ಒಟ್ಟು 11 ಕೋಟಿ ರೂ. ನಿಗದಿ ಪಡಿಸಿತ್ತು. ಅಂದು ಎಕರೆಗೆ 2.30 ಲಕ್ಷ ರೂ.ನಂತೆ ದರ ನಿಗದಿ ಮಾಡಲಾಗಿತ್ತು. ಆದ್ರೆ ರಾಜಮನೆತನ ಇದನ್ನ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿತ್ತು ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ವಿಧಾನಸೌಧದಲ್ಲಿ ಪುಸ್ತಕ ಮೇಳ, ಸಾಹಿತ್ಯ ಹಬ್ಬ – ಸಾರ್ವಜನಿಕರಿಗೆ ಎಂಟ್ರಿ: ಯು.ಟಿ ಖಾದರ್
ಇಂದಿನ ಮಾರುಕಟ್ಟೆ ದರ ಎಕರೆಗೆ 200 ಕೋಟಿ ರೂ. ಆಗುತ್ತದೆ. ರಸ್ತೆ ಅಗಲಿಕರಣಕ್ಕೆ ಬೇಕಾದ 15 ಎಕರೆ 36 ಗುಂಟೆ ಜಾಗವನ್ನೇ ವಶಕ್ಕೆ ಪಡೆಯುವುದಾದರೆ ಎಕರೆಗೆ 200 ಕೋಟಿ ಬೆಲೆ ಆಗುತ್ತದೆ. ಒಟ್ಟು 3,000 ಕೋಟಿ ರೂ. ಆಗಲಿದೆ. ಇದು ಅಭಿವೃದ್ಧಿ ದೃಷ್ಟಿಯಿಂದ ಕಾರ್ಯ ಸಾಧುವಲ್ಲ. ರಾಜ್ಯ ಸರ್ಕಾರ ಅರಮನೆಯ ಭೂಮಿಯನ್ನು ವಶಕ್ಕೆ ಪಡೆಯುವುದಾದರೆ ಟಿಡಿಆರ್ ಕೊಡಲು ಸಾಧ್ಯವಿಲ್ಲ. ಹಾಗಾಗಿ ಸುಗ್ರೀವಾಜ್ಞೆ ಮೂಲಕ ಜಾಗವನ್ನ ವಶಕ್ಕೆ ಪಡೆಯುವ ಮುಕ್ತ ಅವಕಾಶ ಸರ್ಕಾರ ಇಟ್ಟುಕೊಂಡಿದೆ. ಅದಕ್ಕಾಗಿ ಸುಪ್ರೀಂ ಕೋರ್ಟ್‌ನಲ್ಲಿ ನಾವು ಅಫಿಡವಿಟ್ ಹಾಕಬೇಕಿದೆ ಎಂದು ವಿವರಿಸಿದರು.
1996 ರಿಂದ ಇಲ್ಲಿಯವರೆಗೆ ಹಲವು ವರ್ಷ ಗತಿಸಿವೆ. 1996ರ ನವೆಂಬರ್ 15 ರಂದು ಮೊದಲು ಭೂಮಿ ಸ್ವಾಧೀನಕ್ಕೆ ಕಾನೂನು ಮಾಡಲಾಗಿತ್ತು. ಹೈಕೋರ್ಟ್ ನಲ್ಲಿ ಪ್ರಶ್ನಿಸಿದಾಗಲೂ ಕೋರ್ಟ್ ಈ ಕಾನೂನನ್ನ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ರಾಜವಂಶಸ್ಥರು 1997ರಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈಗಾಗಲೇ 27 ವರ್ಷಗಳು ಮುಗಿದು ಹೋಗಿವೆ. ರಸ್ತೆ ಅಗಲೀಕರಣ ವಿಚಾರದಲ್ಲೇ ಟಿಡಿಆರ್ ವ್ಯವಸ್ಥೆ ಬಂದ ಮೇಲೆ ಮತ್ತೆ ಈ ವ್ಯಾಜ್ಯ ಮುನ್ನೆಲೆಗೆ ಬಂದಿದೆ. ಅಂದು ಪೂರ್ತಿ ಭೂಮಿ ಸ್ವಾಧೀನಪಡಿಸಿಕೊಳ್ಳಲು 11 ಕೋಟಿ ರೂ. ಗಳಿಗೆ ಲೆಕ್ಕಾ ಹಾಕಿದ್ದೆವು. ಅಂದು ಪ್ರತಿ ಎಕರೆಗೆ 2.30 ಲಕ್ಷ ರೂ. ಆಗುತ್ತಿತ್ತು. ಆದ್ರೆ ಈಗ ಪ್ರತಿ ಎಕರೆಗೆ 200 ಕೋಟಿ ರೂ. ಆಗುತ್ತದೆ ಎಂದು ಸಚಿವರು ತಿಳಿಸಿದರು.
ಮುಂದುವರಿದು… ಇಲ್ಲಿಯವರೆಗೆ ಹೈಕೋರ್ಟ್ ತೀರ್ಪಿಗೆ ತಡೆ ಇರಲಿಲ್ಲ. 2024ರ ಡಿ.10 ರಂದು ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ರಸ್ತೆ ಅಗಲೀಕರಣ ಉದ್ದೇಶಕ್ಕೆ ಟಿಡಿಆರ್ ಅನ್ನ ಮೌಲ್ವೀಕರಿಸಲಾಯಿತು. 15.36 ಎಕರೆ ಭೂಮಿಗೆ ಟಿಡಿಆರ್ ಒಪ್ಪಂದವಾಗಿ, ಪ್ರತಿ ಎಕರೆಗೆ 200 ಕೋಟಿ ರೂ. ವ್ಯಾಲ್ಯೂ ಬಂತು. ಹಾಗಾಗಿ 3,016 ಕೋಟಿ ನಾವು ಟಿಡಿಆರ್ ಕೊಡಬೇಕಿತ್ತು. ಇದರಿಂದ ಅಭಿವೃದ್ಧಿಗೆ ಗಂಡಾಂತರವಾಗುತ್ತದೆ. ಹಾಗಾಗಿ ಸುಗ್ರೀವಾಜ್ಞೆ ಹೊರಡಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಮಹಾರಾಷ್ಟ್ರ ಮಿಲಿಟರಿ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಭಾರೀ ಸ್ಫೋಟ – 8 ಮಂದಿ ಸಾವು
ಬೆಂಗಳೂರು: ಹೆಚ್‌ಎಂಟಿ ಅಧೀನದಲ್ಲಿರುವ ಅರಣ್ಯ ಭೂಮಿಯನ್ನು(Forest Land) ಹಿಂಪಡೆಯುವ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಲಾಗಿದೆ ಎಂದು ಸಚಿವ ಹೆಚ್.ಕೆ ಪಾಟೀಲ್ (HK Patil) ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್‌ಎಂಟಿ ಅಧೀನದಲ್ಲಿ ಇರುವ ಅರಣ್ಯ ಭೂಮಿ ಹಿಂಪಡೆಯುವ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಲಾಗಿದೆ. ಹೆಚ್‌ಎಂಟಿ ಕಂಪನಿ (HMT Company) ಕೆಲವು ಅರಣ್ಯ ಭಾಗವನ್ನು ಬೇರೆ ಸಂಸ್ಥೆಗಳಿಗೆ ಮಾರಾಟ ಮಾಡಿದೆ. ಸುಮಾರು 160 ಎಕರೆ ಭೂಮಿಯನ್ನು 375 ಕೋಟಿ ರೂ.ಗೆ ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಮಾರಾಟ ಮಾಡಿದೆ. ಮಾರಾಟ ಸಂದರ್ಭದಲ್ಲಿ ಅರಣ್ಯ ಇಲಾಖೆ, ಅರಣ್ಯ ಸಚಿವರು ಯಾರಿಂದಲೂ ಅನುಮತಿ ಪಡೆದಿಲ್ಲ ಎಂದು ಸಚಿವರು ಹೇಳಿದ್ದಾರೆ. ಇದನ್ನೂ ಓದಿ: ವಿಶ್ವದ ಪ್ರತಿ ದೇಶದಲ್ಲೂ ನನ್ನದೊಂದು ಮಗು ಇರಬೇಕು – ಅಮೆರಿಕದ ವೀರ್ಯದಾನಿಯ ಹೆಬ್ಬಯಕೆ
180 ಎಕರೆ ಅರಣ್ಯ ಭೂಮಿಯನ್ನು ಇದೀಗ ಮಾರಾಟ ಮಾಡಲು ಹೊರಟಿದ್ದಾರೆ. ಅಲ್ಲದೇ ಮೊದಲೇ 160 ಎಕರೆ ಮಾರಾಟ ಆಗಿದ್ದು, ಅದೂ ಅರಣ್ಯ ಭೂಮಿ ಡಿನೋಟೀಫೈ ಆಗಿಲ್ಲ. ಆದಾಗ್ಯೂ ಮಾರಾಟ ಮಾಡಿರುವುದು ಕಂಡುಬಂದಿದೆ. ಈ ಪ್ರಶ್ನಾರ್ಹ ಭೂಮಿಯನ್ನು ಡಿನೋಟಿಫೈ ಮಾಡುವುದಕ್ಕೆ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಲಾಗಿತ್ತು. 2015ರಲ್ಲಿ ಸಮಸ್ಯೆ ಬಗೆಹರಿಸಲು ಉನ್ನತ ಮಟ್ಟದ ಸಮಿತಿ ಕೂಡ ರಚಿಸಲಾಗಿತ್ತು. ಅರಣ್ಯ ಭೂಮಿ ಡಿನೋಟಿಫೈ ಮಾಡಿದರೆ ರಾಜ್ಯಕ್ಕೆ ಭಾರೀ ಆರ್ಥಿಕ ನಷ್ಟ ಉಂಟಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೀದರ್ ದರೋಡೆಯ ಸುತ್ತ ಅನುಮಾನದ ಹುತ್ತ – ಇದು ಇದು ಪ್ರೀ ಪ್ಲಾನ್ ಎಂದ ಮೃತನ ಸಹೋದರಿ