Tag: HK Kumaraswamy

  • ವ್ಯಕ್ತಿತ್ವವನ್ನು ಹಾಳುಮಾಡಬೇಕೆಂದು ಪ್ರಯತ್ನಿಸ್ತಿದ್ದಾರೆ: ಕಣ್ಣೀರಿಟ್ಟ ಶಾಸಕ ಹೆಚ್.ಕೆ ಕುಮಾರಸ್ವಾಮಿ

    ವ್ಯಕ್ತಿತ್ವವನ್ನು ಹಾಳುಮಾಡಬೇಕೆಂದು ಪ್ರಯತ್ನಿಸ್ತಿದ್ದಾರೆ: ಕಣ್ಣೀರಿಟ್ಟ ಶಾಸಕ ಹೆಚ್.ಕೆ ಕುಮಾರಸ್ವಾಮಿ

    ಹಾಸನ: ವ್ಯಕ್ತಿತ್ವವನ್ನು ಹಾಳುಮಾಡಬೇಕೆಂದು ಕೆಲವೊಂದನ್ನು ಸೃಷ್ಟಿಸಲಾಗುತ್ತಿದೆ. ಮುಂದೆ ಜನತಾದಳವೇ ಅಧಿಕಾರಕ್ಕೆ ಬರಲಿದೆ ಎಂದು ಆಲೂರು-ಸಕಲೇಶಪುರ-ಕಟ್ಟಾಯ ಶಾಸಕ ಹೆಚ್‌ಕೆ ಕುಮಾರಸ್ವಾಮಿ (HK Kumaraswamy) ಗದ್ಗದಿತರಾಗಿ ಹೇಳಿಕೆ ನೀಡಿದ್ದಾರೆ.

    ಶುಕ್ರವಾರ ಹಾಸನದ (Hassan) ಸಕಲೇಶಪುರ ಪಟ್ಟಣದಲ್ಲಿ ನಡೆದ ಜೆಡಿಎಸ್ (JDS) ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ವ್ಯಕ್ತಿತ್ವವನ್ನು ಹಾಳು ಮಾಡಬೇಕೆಂದು ಕೆಲವೊಂದನ್ನು ಕ್ರಿಯೇಟ್ ಮಾಡುತ್ತಿದ್ದಾರೆ. ನಾವೆಲ್ಲಾ ಸೇರಿ ಜನ ಸಂಘಟನೆ ಮಾಡಿ ಜನರಿಗೆ ಪಕ್ಷದ ಕಾರ್ಯಕ್ರಮಗಳನ್ನು ಹೇಳಿ ಗೆಲ್ಲೋಣ ಎಂದರು.

    ಮುಂದೆ ಜನತಾದಳವೇ ಅಧಿಕಾರಕ್ಕೆ ಬರಲಿದೆ. ನಮ್ಮ ಅಭಿವೃದ್ಧಿಯನ್ನು ಯಾರು ಕೂಡಾ ನಿಲ್ಲಿಸಲು ಸಾಧ್ಯವಿಲ್ಲ. ನಾವು ಗೆದ್ದೇ ಗೆಲ್ಲುತ್ತೇವೆ ಎನ್ನುವ ಕಾರಣಕ್ಕಾಗಿ ಕೆಲವರು ಕುಚೋದ್ಯವನ್ನು ಶುರು ಮಾಡಿದ್ದಾರೆ. ನಾನು ಇಲ್ಲಿ ಎಲ್ಲವನ್ನೂ ಬಾಯ್ಬಿಟ್ಟು ಹೇಳುವುದಕ್ಕೆ ಆಗುವುದಿಲ್ಲ ಎಂದು ಗದ್ಗದಿತರಾದರು. ಇದನ್ನೂ ಓದಿ: ಕೋಲಾರದಲ್ಲಿ ಸಿದ್ದರಾಮಯ್ಯರನ್ನ ಹಣಿಯಲು ರಣತಂತ್ರ- ದಲಿತರಿಂದ ಕರಪತ್ರ ಹಂಚಿ ಅಭಿಯಾನ

    ನಿಮ್ಮ ಕುಮಾರಸ್ವಾಮಿ ಇರಬಾರದು, ಜನತಾದಳ ಗೆಲ್ಲಬಾರದು ಎಂದು 14 ವರ್ಷಗಳ ಹಿಂದೆ ಇದ್ದ ಆರೋಪಗಳನ್ನು ಈಗ ಕೊನೆ ವರ್ಷದಲ್ಲಿ ತೆಗೆಯುತ್ತಿದ್ದಾರೆ. ಏನಾದರೂ ಮಾಡಿ ವ್ಯಕ್ತಿತ್ವಕ್ಕೆ ತೊಡಕು ಮಾಡಬೇಕು, ಪಕ್ಷವನ್ನು ಹಾಳು ಮಾಡಬೇಕು ಎಂದು ಎಲ್ಲಾ ಕ್ರಿಯೇಟ್ ಮಾಡ್ತಾ, ಪ್ರಚೋದನೆ ಕೊಡ್ತಾ ಇದ್ದಾರೆ. ನಮ್ಮ ಕಾರ್ಯಕರ್ತರ ಮನಸ್ಸನ್ನು ಕೆಡಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ದಯವಿಟ್ಟು ಯಾರೂ ಅದಕ್ಕೆ ಬಲಿಯಾಗಬಾರದು ಎಂದು ಎಚ್ಚರಿಕೆ ನೀಡಿದರು.

    ನಾವು ಎಂತಹ ಸಂದರ್ಭ ಬಂದರೂ ಮಾನವೀಯತೆಯನ್ನು ಇಟ್ಟುಕೊಂಡು ಪಕ್ಷವನ್ನು ಕಾಪಾಡಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಕಾಯ, ವಾಚ, ಮನಸ ನಾವು ಕೆಲಸ ಮಾಡ್ತಾ ಇದ್ದೇವೆ. ನಿಮ್ಮಂತಹ ಕಾರ್ಯಕರ್ತರನ್ನು, ಮುಖಂಡರನ್ನು ಪಡೆದ ನಾವು ಪುಣ್ಯವಂತರು. ಕುಮಾರಸ್ವಾಮಿ ಮುಖ್ಯ ಅಲ್ಲ, ಇಲ್ಲಿ ಪಕ್ಷ ಮುಖ್ಯ. ಗೆಲ್ಲಿಸಿಕೊಡಿ, ಆಡಳಿತ ಕೈಗೆ ಕೊಡಿ ಖಂಡಿತ ಜನರ ಸೇವೆ ಮಾಡುವುದಕ್ಕೆ ಬದ್ಧರಾಗಿದ್ದೇವೆ ಎಂದರು. ಇದನ್ನೂ ಓದಿ: ಪಂಚರತ್ನ ಯಾತ್ರೆಯಲ್ಲಿ ಭಾಗಿಯಾಗಿದ್ದ ಜೆಡಿಎಸ್ ಅಭ್ಯರ್ಥಿ ನಿಧನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮತ್ತೆ ಮತ್ತೆ ನೆನಪಿಗೆ ಬರ್ತಾರೆ – ಅಂಬೇಡ್ಕರ್ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಗದ್ಗದಿತರಾದ ಹೆಚ್.ಕೆ ಕುಮಾರಸ್ವಾಮಿ

    ಮತ್ತೆ ಮತ್ತೆ ನೆನಪಿಗೆ ಬರ್ತಾರೆ – ಅಂಬೇಡ್ಕರ್ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಗದ್ಗದಿತರಾದ ಹೆಚ್.ಕೆ ಕುಮಾರಸ್ವಾಮಿ

    ಹಾಸನ: ಅಂಬೇಡ್ಕರ್ ಪರಿನಿರ್ವಾಣ ದಿನದ (Ambedkar Parinirvana Day) ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಕೆ ಕುಮಾರಸ್ವಾಮಿ (HK Kumaraswamy) ಅವರು ಗದ್ಗದಿತರಾಗಿದ್ದಾರೆ.

    ಹಾಸನ (Hassan) ನಗರದ, ಜಿಲ್ಲಾಧಿಕಾರಿ ಕಚೇರಿ ಆವಣರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಹೆಚ್.ಕೆ ಕುಮಾರಸ್ವಾಮಿ ಭಾಷಣ ಮಾಡುವ ವೇಳೆ ದುಃಖಿತರಾದರು. ಅಂಬೇಡ್ಕರ್ ಅವರು ಪುನಃ ಪುನಃ ನೆನಪಿಗೆ ಬರ್ತಾರೆ. ಅಂಬೇಡ್ಕರ್ ಅವರ ಆಶಯಗಳು ಇನ್ನೂ ಈಡೇರಿಲ್ಲ. ಒಬ್ಬ ಜನಪ್ರತಿನಿಧಿಯಾಗಿ ಎಲ್ಲವನ್ನೂ ನೋಡ್ತಾ ಇದ್ದೇವೆ. ಎಲ್ಲೋ ಒಂದು ಕಡೆ ಅವರ ಆಶಯಗಳಿಗೆ ಅಣಕ ಮಾಡುವಂತಹ ಘಟನೆಗಳು ಇನ್ನೂ ಕೂಡಾ ಜರುಗುತ್ತಿವೆ ಎಂದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರು ಪೊಲೀಸರ ವಶಕ್ಕೆ

    ಅಂಬೇಡ್ಕರ್ ಅವರು ಸಮಾಜವಾದಿ, ಜಾತ್ಯಾತೀತತೆ, ಪ್ರಜಾಪ್ರಭುತ್ವದ ಸಂವಿಧಾನ ಕೊಟ್ಟಿದ್ದಾರೆ. ಸಹೋದರತ್ವವನ್ನು ಸಮಾನತೆಯನ್ನು ಹೇಳುವಂತಹ ಸಂವಿಧಾನ ಇನ್ನೂ ಕೂಡಾ ಪೂರ್ಣ ಜಾರಿ ಮಾಡಿಲ್ಲ ಎಂಬುದನ್ನು ನಾವೆಲ್ಲರೂ ಕೂಡ ಒಪ್ಪಲೇಬೇಕು ಎಂದರು. ಇದನ್ನೂ ಓದಿ: ಮರ್ಯಾದೆ ಉಳಿಸಿಕೊಳ್ಳೋಕೆ ಸಿದ್ದರಾಮಯ್ಯ ಯಾವ ಕ್ಷೇತ್ರ ಕೊಟ್ರೂ ಓಕೆ ಅಂತಾರೆ – ಈಶ್ವರಪ್ಪ

    ಅಂಬೇಡ್ಕರ್ ಅವರು ಹಾಕಿಕೊಟ್ಟಂತಹ ಹೋರಾಟದ ಮಾರ್ಗ ಇನ್ನೂ ಕೂಡಾ ಪ್ರಾರಂಭಿಕ ಹಂತದಲ್ಲಿಯೇ ಇದೆ ಎಂಬ ಭಾವನೆ ಮೂಡುತ್ತಿದೆ. ಅಧಿಕಾರ ಒಂದು ಕಡೆ, ಹೋರಾಟ ಒಂದು ಕಡೆ, ಅಧಿಕಾರದಿಂದ ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲ. ಹೋರಾಟದಿಂದ ಮಾತ್ರ ಸಾಧ್ಯ ಎಂಬುದನ್ನು ಅವರು ನಮಗೆ ತೋರಿಸಿಕೊಟ್ಟಿದ್ದಾರೆ ಎಂದು ಕಣ್ಣೀರಿಟ್ಟರು.

    Live Tv
    [brid partner=56869869 player=32851 video=960834 autoplay=true]

  • ಏ.17ಕ್ಕೆ ಜೆಡಿಎಸ್‍ ರಾಜ್ಯಾಧ್ಯಕ್ಷರಾಗಲಿದ್ದಾರೆ ಸಿ.ಎಂ ಇಬ್ರಾಹಿಂ

    ಏ.17ಕ್ಕೆ ಜೆಡಿಎಸ್‍ ರಾಜ್ಯಾಧ್ಯಕ್ಷರಾಗಲಿದ್ದಾರೆ ಸಿ.ಎಂ ಇಬ್ರಾಹಿಂ

    ಹಾಸನ: ಏಪ್ರಿಲ್ 17 ರಂದು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದೇನೆ. ಜೆಡಿಎಸ್‍ನ ನೂತನ ರಾಜ್ಯಾಧ್ಯಕ್ಷರಾಗಿ ಸಿ.ಎಂ.ಇಬ್ರಾಹಿಂ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಸಕಲೇಶಪುರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ ಕುಮಾರಸ್ವಾಮಿ ಹೇಳಿದ್ದಾರೆ.

    ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿದ್ದೇನೆ. ಪಕ್ಷದ ಸಂಘಟನೆ ದೃಷ್ಟಿಯಿಂದ ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಲಾಗುತ್ತಿದೆ ಎಂದರು. ಇದನ್ನೂ ಓದಿ: ಪ್ರಧಾನಿ ಒಂದೇ ಒಂದು ಮಾತು – ಈಶ್ವರಪ್ಪ ದಿಢೀರ್‌ ರಾಜೀನಾಮೆ

    ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಚಿವ ಈಶ್ವರಪ್ಪ ಅವರ ಮೇಲೆ ಭ್ರಷ್ಟಚಾರದ ಆರೋಪ ಕೇಳಿ ಬಂದಿದೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ದೂರು ದಾಖಲಾಗಿದೆ. ಈಶ್ವರಪ್ಪ ಪ್ರಕರಣದಲ್ಲಿ ನಿರ್ದೋಷಿ ಎಂದು ಸಾಬೀತಾದರೆ ಪುನ: ಮಂತ್ರಿ ಮಂಡಲದಲ್ಲಿ ಸ್ಥಾನ ಪಡೆಯಲಿ. ದೇಶದಲ್ಲಿ ಎಲ್ಲ ಧರ್ಮದವರು ಬದುಕುವ ಹಕ್ಕನ್ನು ಪಡೆದಿದ್ದಾರೆ. ಆದರೆ ಕೆಲವು ಕಿಡಿಗೇಡಿಗಳು ಹಿಂದೂ, ಮುಸ್ಲಿಮರ ನಡುವೆ ಸಾಮರಸ್ಯವನ್ನು ಕದಡುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ನಾನು ಮಣ್ಣಿಗೆ ಹೋಗುವುದರೊಳಗೆ ಜೆಡಿಎಸ್‌ನಿಂದ ದಲಿತ ಸಿಎಂ ಮಾಡುವೆ: ಹೆಚ್‌ಡಿಕೆ ಘೋಷಣೆ

  • ಒಂದು ದಿನದ ಬಂದ್ ಮಾಡಿದ್ರೆ ತಪ್ಪೇನು ಆಗಲ್ಲ: ಎಚ್‍ಕೆ ಕುಮಾರಸ್ವಾಮಿ

    ಒಂದು ದಿನದ ಬಂದ್ ಮಾಡಿದ್ರೆ ತಪ್ಪೇನು ಆಗಲ್ಲ: ಎಚ್‍ಕೆ ಕುಮಾರಸ್ವಾಮಿ

    – ಬಂದ್‍ನಿಂದ ಕನ್ನಡಿಗರಿಗೆ ಕಷ್ಟ ಆಗುತ್ತದೆ ಎಂದಿದ್ದ ಎಚ್‍ಡಿಕೆ
    – ಮಹಾರಾಷ್ಟ್ರಕ್ಕೆ ಎಚ್ಚರಿಕೆ ಕೊಡುವ ದೃಷ್ಟಿಯಿಂದ ಬಂದ್ ಅಗತ್ಯವಿದೆ

    ಹಾಸನ: ಮಾಜಿ ಸಿಎಂ ಕುಮಾರಸ್ವಾಮಿ ಬಂದ್‍ನಿಂದ ಕನ್ನಡಿಗರಿಗೆ ಕಷ್ಟ ಆಗುತ್ತದೆ ಎಂದು ಹೇಳಿದರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಒಂದು ದಿನ ತೀವ್ರ ತರವಾದ ಬಂದ್ ಮಾಡಿದರೆ ತಪ್ಪೇನು ಆಗಲ್ಲ ಎಂದು ಹೇಳುವ ಮೂಲಕ ಕರ್ನಾಟಕ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಡಿ.31 ಕರ್ನಾಟಕ ಬಂದ್ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಕನ್ನಡಪರ ಚಳುವಳಿಗಾರರು ಬಂದ್‍ಗೆ ಕರೆ ಕೊಟ್ಟಿದ್ದಾರೆ. ಅದು ಒಂದು ದಿನ ತೀವ್ರ ತರವಾದ ಬಂದ್ ಮಾಡಿದರೆ ತಪ್ಪೇನು ಆಗಲ್ಲ. ಏಕೆಂದರೆ ನಾವು ಪ್ರತಿದಿನ ಏನು ಬಂದ್ ಮಾಡಲ್ಲ ಎಂದು ಉತ್ತರಿಸಿದ ಅವರು, ಎಂಇಎಸ್, ಮಹಾರಾಷ್ಟ್ರಕ್ಕೆ ಎಚ್ಚರಿಕೆ ಕೊಡುವ ದೃಷ್ಟಿಯಿಂದ ಬಂದ್ ಅಗತ್ಯವಿದೆ. ಬಂದ್‍ಗೆ ಜೆಡಿಎಸ್ ಬೆಂಬಲವಿದೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಸೆಂಬರ್ 31ರ ಕರ್ನಾಟಕ ಬಂದ್ ಗೆ ಬೆಳಗಾವಿಯಲ್ಲೇ ಬೆಂಬಲ ಇಲ್ಲ: ಅಶೋಕ್ ಚಂದರಗಿ

    ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಎಚ್‍ಡಿಕೆ, ಡಿ. 31ಕ್ಕೆ ಕರ್ನಾಟಕ ಬಂದ್ ಮಾಡುವುದಕ್ಕೆ ವಿವಿಧ ಸಂಘಟನೆಗಳು ಕರೆ ನೀಡಿದೆ. ಈ ಬಂದ್ ಕರೆಯಿಂದ ಮಹಾರಾಷ್ಟ್ರಕ್ಕೆ ತೊಂದರೆ ಇಲ್ಲ. ರಾಜ್ಯದ ಜನರಿಗೆ ತೊಂದರೆ ಆಗುತ್ತದೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ, ಕೂಲಿ ಕೆಲಸದವರಿಗೆ ಆಗುವ ಕಷ್ಟದ ಬಗ್ಗೆ ಚಿಂತಿಸಬೇಕು. ಬಂದ್‍ಗೆ ಕರೆ ನೀಡಿದವರು ಕೂಡ ಈ ಬಗ್ಗೆ ಯೋಚಿಸಬೇಕು ಎಂದಿದ್ದರು.

    ಡಿ.28 ರಿಂದ ಹತ್ತು ದಿನಗಳ ಕಾಲ ರಾಜ್ಯದಲ್ಲಿ ನೈಟ್ ಕಫ್ರ್ಯೂ ಜಾರಿ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್‍ಕೆ ಕುಮಾರಸ್ವಾಮಿ, ಜನರು ಇನ್ನೂ ಕೂಡ ಜಾಗೃತರಾಗಿಲ್ಲ. ಕೊರೊನಾ ಅನೇಕ ರೂಪಾಂತರಿಗಳನ್ನು ಹೊಂದಿದೆ. ಈಗ ಓಮಿಕ್ರಾನ್ ಬಂದಿದ್ದು, ಹೆಚ್ಚಾಗುತ್ತಿದೆ. ಸರ್ಕಾರದ ಕಾನೂನುಗಳನ್ನು ಜನರು ಪಾಲಿಸಬೇಕು. ಒಂದಿಷ್ಟು ಜನ ಸೇರಬಹುದು ಎಂದು ಮಾಡಿರುವುದು ತಪ್ಪು. ಮೊದಲಿನಂತೆ ಬಿಗಿಯಾಗಬೇಕು. ಜನರ ದಿನಚರಿಗೆ ತೊಂದರೆಯಾಗದಂತೆ ನಿಯಮಗಳನ್ನು ತರಬೇಕು ಎಂದರು. ಇದನ್ನೂ ಓದಿ: ಕರ್ನಾಟಕ ಬಂದ್‌ನಿಂದ ಕನ್ನಡಿಗರಿಗೆ ಕಷ್ಟ: ಎಚ್‌ಡಿಕೆ

    ಮತಾಂತರ ನಿಷೇಧ ಕಾಯ್ದೆ ವಿಚಾರವಾಗಿ ಅವರು, ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧ ಮಾಡಿದ್ದೇವೆ. ದೇಶದಲ್ಲಿ ಎಲ್ಲರೂ ಕೂಡ ಒಂದೇ, ಯಾವುದೇ ಧರ್ಮ ಅನುಸರಿಸಲಿ ಎಲ್ಲ ಕೂಡ ಒಂದೇ. ಮಹಾತ್ಮ, ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಮತಾಂತರವಾಗಿದ್ರು. ಅದು ಅವರವರ ಇಚ್ಛೇ. ಆದರೆ ಬಲವಂತದ ಮತಾಂತರಕ್ಕೆ ನಮ್ಮ ವಿರೋಧವಿದೆ. ಈಗಾಗಲೇ ಸಂವಿಧಾನದಲ್ಲಿ ಅವಕಾಶವಿದೆ, ಆದ್ದರಿಂದ ಇವೆಲ್ಲವನ್ನೂ ತರುವ ಅಗತ್ಯವಿಲ್ಲ. ಭಾವನಾತ್ಮಕ ವಿಚಾರಗಳನ್ನು ತಂದು ಪಕ್ಷಕ್ಕೆ ಅನೂಕೂಲ ಮಾಡಿಕೊಳ್ಳುವ ದೃಷ್ಟಿಯಿಂದ ಬಿಜೆಪಿ ಸರ್ಕಾರ ಈ ರೀತಿ ಮಾಡಿದೆ. ನಾವು ವಿರೋಧ ಮಾಡಿದ್ದೀವಿ, ಕಾಂಗ್ರೆಸ್ ವಿರೋಧ ಮಾಡಿದೆ, ಜನಸಾಮಾನ್ಯರು ವಿರೋಧ ಮಾಡಿದ್ದಾರೆ ಎಂದು ಹೇಳಿದರು.

  • ನಿಮ್ಮ ಪಕ್ಷದ ಫ್ಯಾಮಿಲಿ ಬ್ಯುಸಿನೆಸ್‍ಗೆ ಸಂಘದಲ್ಲಿಯೇ ತರಬೇತಿ ನೀಡಲಾಗ್ತಿದೆಯೇ: ಕಟೀಲ್‍ಗೆ ಹೆಚ್.ಕೆ.ಕುಮಾರಸ್ವಾಮಿ ಪ್ರಶ್ನೆ

    ನಿಮ್ಮ ಪಕ್ಷದ ಫ್ಯಾಮಿಲಿ ಬ್ಯುಸಿನೆಸ್‍ಗೆ ಸಂಘದಲ್ಲಿಯೇ ತರಬೇತಿ ನೀಡಲಾಗ್ತಿದೆಯೇ: ಕಟೀಲ್‍ಗೆ ಹೆಚ್.ಕೆ.ಕುಮಾರಸ್ವಾಮಿ ಪ್ರಶ್ನೆ

    ಬೆಂಗಳೂರು: ನಿಮ್ಮ ಪಕ್ಷದ ಫ್ಯಾಮಿಲಿ ಬ್ಯುಸಿನೆಸ್‍ಗೆ ಸಂಘದಲ್ಲಿಯೇ ತರಬೇತಿ ನೀಡಲಾಗುತ್ತಿದೆಯೇ ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ  ಹೆಚ್.ಕೆ.ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.

    HD Kumaraswamy at Bidadi Farm House

    ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಪರವಾಗಿ, ಬಿಜೆಪಿ ನಾಯಕರ ಹೇಳಿಕೆ ಕುರಿತು ಟ್ವೀಟ್ ಮಾಡಿರುವ ಅವರು, ಆರ್‌ಎಸ್‌ಎಸ್ ಬಗ್ಗೆ ನೀಡಿದ ಹೇಳಿಕೆಯಿಂದ ನೀವೆಲ್ಲರೂ ಮೈಪರಚಿಕೊಳ್ಳುತ್ತಿರುವುದು ನೋಡಿದರೆ ಸತ್ಯ ಎಷ್ಟು ಕಹಿಯಾಗಿರುತ್ತದೆ ಎಂಬುದು ಅರ್ಥವಾಗುತ್ತದೆ. ಕಟೀಲ್ ಅವರು ಟೀಕೆ ಮಾಡುವ ಭರದಲ್ಲಿ ‘ಫ್ಯಾಮಿಲಿ ಬ್ಯುಸಿನೆಸ್’ ಬಗ್ಗೆ ಹೇಳಿದ್ದಾರೆ. ಆದರೆ ನಿಮ್ಮ ಪಕ್ಷದ ಫ್ಯಾಮಿಲಿ ಬ್ಯುಸಿನೆಸ್ ಗೆ ಸಂಘದಲ್ಲಿಯೇ ತರಬೇತಿ ನೀಡಲಾಗುತ್ತಿದೆಯೇ? ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಶಾಖೆಗೆ ಬಂದು ಸಂಘದ ಶಿಕ್ಷಣ ಪಡೆಯಿರಿ, ನಿಮಗೂ ಒಳ್ಳೆಯದು – ಹೆಚ್‍ಡಿಕೆಗೆ ಕಟೀಲ್ ಸಲಹೆ

    ಆಪರೇಷನ್ ಕಮಲದ ಮೂಲಕ ಹೆಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಅವರು ಸಿಎಂ ಹುದ್ದೆಯನ್ನು ಕಣ್ಣೀರಿಡುತ್ತಲೇ ಕಳೆದುಕೊಂಡರು! ಏಕೆ? ಅದು ಫ್ಯಾಮಿಲಿ ಬ್ಯುಸಿನೆಸ್ ನಿಂದ ಅಲ್ಲವೇ? ನಿಮ್ಮ ಪಕ್ಷದ ಶಾಸಕರೇ ಹಾದಿಬೀದಿಯಲ್ಲಿ ನಿಂತು ನಿಮ್ಮ ಮುಖ್ಯಮಂತ್ರಿಯ ‘ಫ್ಯಾಮಿಲಿ ಬ್ಯುಸಿನೆಸ್’ ಬಗ್ಗೆ ಟೀಕೆ ಮಾಡಿದ್ದನ್ನು ಮರೆತುಬಿಟ್ಟಿರಾ ಕಟೀಲ್ ಅವರೇ? ಅನುಗ್ರಹದ ಹಿತ್ತಲಿನಲ್ಲಿ ನಡೆದ ವ್ಯವಹಾರಗಳ ಬಗ್ಗೆ ಹೇಳಲಿಲ್ಲವೇ? ಎಂದು ವ್ಯಂಗ್ಯ ಮಾಡಿದ್ದಾರೆ.

    nalin kumar kateel

    ಐಎಎಸ್, ಐಪಿಎಸ್ ಅಭ್ಯರ್ಥಿಗಳಿಗೆ ತರಬೇತಿ ಕೊಡುತ್ತಿದ್ದೇವೆ ಎಂದು ಹೇಳುತ್ತಿದ್ದೀರಿ, ಸರಿ. ಸಂಘದ ಸ್ವಯಂಸೇವಕರು ದೇಶ ಸೇವೆ ಮಾಡುತ್ತಿದ್ದಾರೆ ಎನ್ನುತ್ತೀರಿ. ಹಾಗಾದರೆ ಎಲ್ಲರನ್ನೂ ಗಡಿಗೆ ಕಳಿಸಿ. ಗಡಿಯಲ್ಲಿ ಈಗ ಉದ್ವಿಗ್ನ ಪರಿಸ್ಥಿತಿ ಇದೆ. ಕಟೀಲ್ ಅವರೇ ಸುಖಾಸುಮ್ಮನೆ ಮಾತನಾಡುವುದಲ್ಲ, ಸತ್ಯವನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಂಬಾಳಪಲ್ಲಿಯಲ್ಲಿ ದಲಿತರನ್ನು ಸುಟ್ಟರಲ್ಲ ಅದಕ್ಕೇನು ಉತ್ತರ ಕೊಡ್ತಾರೆ?- ಸಿದ್ದುಗೆ ಕಾರಜೋಳ ತಿರುಗೇಟು

    ಕಳೆದ ಎರಡು ದಿನಗಳ ಹಿಂದೆ ಆರ್‌ಎಸ್‌ಎಸ್ ವಿರುದ್ಧ ಹೆಚ್‍ಡಿಕೆ ಹೇಳಿಕೆ ನೀಡಿದ್ದು, ಆ ಬಳಿಕದಿಂದ ರಾಜ್ಯದಲ್ಲಿ ಆರ್‌ಎಸ್‌ಎಸ್ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದೆ. ರಾಜಕೀಯ ನಾಯಕರು ತಮಗೆ ತೋಚಿದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ.

    ಆರ್‌ಎಸ್‌ಎಸ್ ಪರ, ವಿರುದ್ಧ ರಾಜಕೀಯ ನಾಯಕರ ಹೇಳಿಕೆಗಳಿಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ

  • ಜಿಟಿಡಿ ನೈತಿಕತೆಗಿಂತ ಮಗನ ರಾಜಕೀಯ ಭವಿಷ್ಯಕ್ಕಾಗಿ ಕಾಯುತ್ತಿದ್ದಾರೆ: ಜೆಡಿಎಸ್ ರಾಜ್ಯಾಧ್ಯಕ್ಷ

    ಜಿಟಿಡಿ ನೈತಿಕತೆಗಿಂತ ಮಗನ ರಾಜಕೀಯ ಭವಿಷ್ಯಕ್ಕಾಗಿ ಕಾಯುತ್ತಿದ್ದಾರೆ: ಜೆಡಿಎಸ್ ರಾಜ್ಯಾಧ್ಯಕ್ಷ

    ಹಾಸನ: ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಜೆಡಿಎಸ್ ಪಕ್ಷದ ಚಿಹ್ನೆಯಲ್ಲಿ ಗೆದ್ದು ಶಾಸಕರಾಗಿರುವುದರಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ನಂತರ ಮಾತನಾಡಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಕೆ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

    ಜಿ.ಟಿ.ದೇವೇಗೌಡರು ಪಕ್ಷ ಬಿಡುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರು ನಮ್ಮ ಬಳಿ ರಾಜೀನಾಮೆ ಬಗ್ಗೆ ಮಾತನಾಡಿಲ್ಲ. ದೇವೇಗೌಡರ ಬಳಿ ಮಾತನಾಡಿರಬಹುದು. ಆದರೂ ಜೆಡಿಎಸ್ ಪಕ್ಷದ ಚಿಹ್ನೆಯಲ್ಲಿ ಗೆದ್ದು ಶಾಸಕರಾಗಿರುವುದರಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು, ನಂತರ ಮಾತನಾಡಲಿ. ಪಕ್ಷದಲ್ಲಿ ಇದ್ದುಕೊಂಡು ಮಾತನಾಡುವುದು ಬೇಡ. ನಾವೇನು ಅವರನ್ನು ಕಳುಹಿಸುತ್ತಿಲ್ಲ, ನಾವು ಯಾರನ್ನೂ ಕಳುಹಿಸುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ?: ಶ್ರುತಿ

    ಅವರು ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ನೈತಿಕತೆಗಿಂತ ಅವರ ಮಗನ ರಾಜಕೀಯ ಭವಿಷ್ಯಕ್ಕಾಗಿ ಕಾಯುತ್ತಿದ್ದಾರೆ. ನಮಗೆ ದೇವೇಗೌಡರು ಒಬ್ಬರೇ ಹೈಕಮಾಂಡ್. ಅಸಮಾಧಾನವಿದ್ದರೆ ಅವರ ಬಳಿ ಮಾತನಾಡಲಿ. ಅವರಿಗೆ ಸಚಿವ ಸ್ಥಾನ ನೀಡಿದ್ದೇವೆ. ಒಂದೇ ಜಿಲ್ಲೆಗೆ ಮೂರು ಸಚಿವ ಸ್ಥಾನ ನೀಡಿದೆ. ಈಗಲೂ ಕಾಲ ಮಿಂಚಿಲ್ಲ, ದೇವೇಗೌಡರ ಬಳಿ ಬಂದು ಮಾತನಾಡಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ.

  • ದಲಿತ ವಿರೋಧಿ, ಮಹಿಳಾ ವಿರೋಧಿ ಸರ್ಕಾರ ಎಂದು ಘಂಟಾಘೋಷವಾಗಿ ಹೇಳುತ್ತೇನೆ: ಎಚ್.ಕೆ.ಕುಮಾರಸ್ವಾಮಿ

    ದಲಿತ ವಿರೋಧಿ, ಮಹಿಳಾ ವಿರೋಧಿ ಸರ್ಕಾರ ಎಂದು ಘಂಟಾಘೋಷವಾಗಿ ಹೇಳುತ್ತೇನೆ: ಎಚ್.ಕೆ.ಕುಮಾರಸ್ವಾಮಿ

    – ಸಿಎಂ ಅವರ ಸಜ್ಜನಿಕೆ ಸೌಜನ್ಯವನ್ನು ಮೆಚ್ಚುತ್ತೇನೆ

    ಹಾಸನ: ಬಿಜೆಪಿ ಸರ್ಕಾರವು ದಲಿತ ವಿರೋಧಿ, ಮಹಿಳಾ ವಿರೋಧಿ ಸರ್ಕಾರ ಎಂದು ಘಂಟಾಘೋಷವಾಗಿ ಹೇಳುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಹಾಸನದಲ್ಲಿ ಹೇಳಿದ್ದಾರೆ.

    ಮಂತ್ರಿಮಂಡಲ ರಚನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಮಂತ್ರಿಮಂಡಲವು ಅತ್ಯಂತ ಅಸಮತೋಲನದಿಂದ ಕೂಡಿದೆ. 30 ಜನ ಮಂತ್ರಿಗಳಿದ್ದರೂ 17 ಜಿಲ್ಲೆಗಳಿಗೆ ಪ್ರಾತಿನಿಧ್ಯ ಕೊಟ್ಟಿಲ್ಲ. ಅದು ಅಲ್ಲದೇ ಆರೋಪ ಇರೋರಿಗೆ ಮಂತ್ರಿ ಸ್ಥಾನವನ್ನು ಕೊಟ್ಟಿದ್ದಾರೆ. ಇವರು ದಲಿತ ವಿರೋಧಿ ಮತ್ತು ಮಹಿಳಾ ವಿರೋಧಿ ಸರ್ಕಾರವೆಂದು ನಾನು ಘಂಟಾಘೋಷವಾಗಿ ಹೇಳುತ್ತೇನೆ ಎಂದು ಕಿಡಿಕಾರಿದರು.

    ಸರ್ಕಾರವು ಹೆಚ್ಚು ಸಂಖ್ಯೆಯಿರುವ ಬಲಗೈ ಸಮುದಾಯಕ್ಕೆ ಮಂತ್ರಿ ಸ್ಥಾನ ಕೊಟ್ಟಿಲ್ಲ. ಮಹಿಳೆಯರಿಗೂ ಸಹ ಸರಿಯಾದ ಪ್ರಾತಿನಿಧ್ಯ ಕೊಟ್ಟಿಲ್ಲ. ಗೊಲ್ಲ ಸಮಾಜದ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಮಂತ್ರಿ ಸ್ಥಾನ ನೀಡಿಲ್ಲ. ಚುನಾವಣೆ ವೇಳೆ ಶಿರಾದ ಗೊಲ್ಲ ಸಮುದಾಯಕ್ಕೆ ನಿಗಮ ಸ್ಥಾಪಿಸುತ್ತೇವೆ ಎಂದಿದ್ದರು. ಆದರೆ ಆ ಕಡೆ ಗಮನವೇ ಕೊಟ್ಟಿಲ್ಲ. ರಾಜಕಾರಣಿಗಳು ಸಂದರ್ಭಕ್ಕೆ ತಕ್ಕಂತೆ ಏನಾದ್ರು ಆಶ್ವಾಸನೆ ಕೊಡುತ್ತೇವೆ. ಆದರೆ ಅದನ್ನು ಈಡೇರಿಸುವುದಿಲ್ಲ ಎಂದು ಟೀಕಿಸಿದ್ದಾರೆ.

    ಹಾಸನದಲ್ಲಿನ ಪ್ರವಾಹ ಕುರಿತು ಮಾತನಾಡಿದ ಅವರು, ಇಲ್ಲಿ 4 ವರ್ಷಗಳಿಂದ ಮಳೆಯಾಗುತ್ತಿದೆ. ಸಚಿವರು, ಅಧಿಕಾರಿಗಳು ಮಳೆ ಬಂದಾಗ ಬಂದು ಸಮೀಕ್ಷೆ ಮಾಡುತ್ತಿದ್ದಾರೆ. ಆ ಸಮೀಕ್ಷೆಗೆ ತಕ್ಕಂತೆ ಹಣವನ್ನು ಸಹ ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ. 2017 ರಲ್ಲಿ 321 ಕೋಟಿ ರೂ. 2018 ರಲ್ಲಿ 178 ಕೋಟಿ ರೂ. 2019 ರಲ್ಲಿ 160 ಕೋಟಿ ರೂ. 2021 ರಲ್ಲಿ 78 ಕೋಟಿ ರೂ ನಷ್ಟ ಎಂದು ಜಿಲ್ಲಾಡಳಿತ ಸಮೀಕ್ಷೆ ಮಾಡಿದೆ ಎಂದು ತಿಳಿಸಿದ್ದಾರೆ.

    ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾರವಾರಕ್ಕೆ ಪ್ರವಾಹ ವಿಚಾರವಾಗಿ ಹೋಗಿ ಬಂದಿದ್ದಾರೆ. ಅದೇ ರೀತಿ ಎಲ್ಲ ಜಿಲ್ಲೆಗೂ ಸಿಎಂ ಬಂದು ಇಲ್ಲಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅವರು ಸಕಲೇಶಪುರಕ್ಕೂ ಬರಬೇಕು ನಾವು ಸ್ವಾಗತ ಮಾಡುತ್ತೇವೆ. ಅವರು ಇಲ್ಲಿಗೆ ಬಂದಾಗ ಅನುಕೂಲ ಹೆಚ್ಚಾಗುತ್ತೆ. ಮಳೆಯಿಂದ ಕಾಫಿ, ಏಲಕ್ಕಿ, ಮೆಣಸು, ಭತ್ತದ ಬೆಳೆಗಳು ಸಾಕಷ್ಟು ಹಾನಿಯಾಗಿದೆ. ಸಕಲೇಶಪುರ ತಾಲೂಕಿನಲ್ಲಿ 225 ಕಿಲೋಮೀಟರ್ ರಸ್ತೆ ಹಾಳಾಗಿದೆ. ಕೂಡಲೇ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಕನಿಷ್ಠ ನೂರು ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

    ಕೆ.ಜಿ.ಬೋಪಯ್ಯ ಅವರು ಆರು ಬಾರಿ ಶಾಸಕರಾಗಿದ್ದಾರೆ. ಅವರಿಗೆ ಮಂತ್ರಿ ಸ್ಥಾನ ಕೊಡಬೇಕಿತ್ತು. ನಮಗೂ ಬೇಜಾರಾಗಿದೆ, ಹಾಸನ ಜಿಲ್ಲೆಗೆ, ಕೊಡಗಿಗೆ ಮಂತ್ರಿ ಸ್ಥಾನ ಕೊಡಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿಎಂಗೆ ಹೆಚ್‍ಡಿಡಿ ಮನೆಗೆ ಹೋಗುವ ಅವಶ್ಯಕತೆ ಏನಿತ್ತು? ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡೋದು ಬೇಡ: ಶಾಸಕ ಪ್ರೀತಂ ಗೌಡ

    ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರನ್ನು ಅವರ ನಿವಾಸದಲ್ಲಿ ಸಿಎಂ ಭೇಟಿಯಾದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಅವರ ಸಜ್ಜನಿಕೆ ಸೌಜನ್ಯವನ್ನು ಮೆಚ್ಚುತ್ತೇನೆ. ಅದನ್ನು ಸ್ವಾಗತ ಮಾಡುತ್ತೇನೆ. ಅದು ಅಲ್ಲದೇ ದೇವೇಗೌಡರು ಅತ್ಯಂತ ಹಿರಿಯ ರಾಜಕಾರಣಿ, ಮಾಜಿಪ್ರಧಾನಮಂತ್ರಿಯಾಗಿದ್ದವರು. ರಾಜ್ಯದ ಹಿತದೃಷ್ಟಿಯಿಂದ ದೇವೇಗೌಡರ ಮನೆಗೆ ಭೇಟಿ ಕೊಟ್ಟಿದ್ದಾರೆ. ಅವರ ಸಲಹೆ ಎಲ್ಲರಿಗೂ ಅಗತ್ಯವಿದೆ. ಅದನ್ನು ಪ್ರಶ್ನೆ ಮಾಡುವುದು ಸಣ್ಣತನ, ಅಲ್ಪತನ, ಅನುಭವದ ಕೊರತೆ ಇರುವವರು ಮಾತ್ರ ಆ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಶಾಸಕ ಪ್ರೀತಂಗೌಡ ಅವರಿಗೆ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ನಾವು ಅಡ್ಜೆಸ್ಟ್‌ಮೆಂಟ್ ಮಾಡಿಕೊಳ್ಳುವುದಾದರೆ ಸರ್ಕಾರವನ್ನೇ ಉರುಳಿಸಬಹುದಿತ್ತು- ಪ್ರೀತಂ ಗೌಡಗೆ ಎಚ್‍ಡಿಕೆ ತಿರುಗೇಟು

  • ರಾಜಕಾರಣಿಗಳ ಈ ಪ್ರಕರಣ, ರಾಜಕೀಯ ವಲಯ ತಲೆತಗ್ಗಿಸುವಂತಹದ್ದು: ಹೆಚ್.ಕೆ ಕುಮಾರಸ್ವಾಮಿ

    ರಾಜಕಾರಣಿಗಳ ಈ ಪ್ರಕರಣ, ರಾಜಕೀಯ ವಲಯ ತಲೆತಗ್ಗಿಸುವಂತಹದ್ದು: ಹೆಚ್.ಕೆ ಕುಮಾರಸ್ವಾಮಿ

    ಹಾಸನ: ರಾಜಕಾರಣಿಗಳ ಇಂತಹ ಪ್ರಕರಣಗಳು ರಾಜಕೀಯ ವಲಯದಲ್ಲಿ ತಲೆ ತಗ್ಗಿಸುವಂತಹವು, ಅವರು ಭಾಗಿ ಆಗಿರಲಿ, ಬಿಡಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿತ್ತು, ನೀಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಹೇಳಿದ್ದಾರೆ.

    ಸಚಿವ ಜಾರಕಿಹೊಳಿ ಸಿಡಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಮೇಶ್ ರಾಜೀನಾಮೆ ನೀಡದಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ವಜಾ ಮಾಡಬೇಕಾಗುತ್ತದೆ. ತನಿಖೆ ನಂತರ ಈ ವೀಡಿಯೋದ ನೈಜತೆ ತಿಳಿಯುತ್ತದೆ. ತಪ್ಪಿಲ್ಲದಿದ್ದರೆ ಜಾರಕಿಹೊಳಿ ಮಂತ್ರಿಯಾಗಿ ಮುಂದುವರಿಯಲಿ. ಹಿಂದೆಯೂ ಕೂಡ ಇಂತಹ ಘಟನೆಗಳು ನಡೆದಿದ್ದು ಆಗಲೂ ರಾಜೀನಾಮೆ ನೀಡಿದ್ದಾರೆ ಎಂದರು.

    ಬಿಜೆಪಿ ಪಕ್ಷ ಒಂದು ಶಿಸ್ತಿನ ಪಕ್ಷವಾಗಿದೆ. ಆದರೆ ಪದೇ ಪದೇ ಇಂತಹ ಪ್ರಕರಣಗಳು ಪಕ್ಷದಲ್ಲಿ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ರಾಜಕಾರಣಿಗಳು ಸಾರ್ವಜನಿಕ ಜೀವನದಲ್ಲಿ ಶಿಸ್ತಿನಿಂದ ಇರಬೇಕು. ಇದು ಅಕ್ಷಮ್ಯ ಅಪರಾಧವಾಗಿದೆ. ಬಿಜೆಪಿ ಪಕ್ಷದ ಕೆಲ ಮುಖಂಡರು ಸಿಡಿ ಬಗ್ಗೆ ಮೊದಲೇ ಸುಳಿವು ನೀಡಿದ್ದು, ಇಂತಹದ್ದೇ ವಿಚಾರದ ಸಿಡಿ ಎಂದು ಈಗ ತಿಳಿಯುತ್ತಿದೆ. ಇಂತಹ ವೀಡಿಯೋಗಳಿಂದ ಸಾರ್ವಜನಿಕರಿಗೆ ಹೇಸಿಗೆ ಬಂದಿದೆ. ಇಂತಹ ಘಟನೆಗಳನ್ನು ನಮ್ಮ ಪಕ್ಷದ ವತಿಯಿಂದ ಖಂಡಿಸುತ್ತೇವೆ. ನಾಳೆಯಿಂದ ಸದನ ಆರಂಭವಾಗಲಿದ್ದು, ಅಲ್ಲಿಯೂ ಕೂಡ ಸಿಡಿ ವಿವಾದವನ್ನು ಪ್ರಸ್ತಾಪಿಸುತ್ತೇವೆ ಎಂದು ಹೇಳಿದರು.

  • ಜಮೀರ್ ಜೊತೆ ಶ್ರೀಲಂಕಾಗೆ ಹೋಗಿದ್ದು ನಿಜ, ಕ್ಯಾಸಿನೋಗೆ ಹೋಗಿಲ್ಲ: ಜೆಡಿಎಸ್ ರಾಜ್ಯಾಧ್ಯಕ್ಷ

    ಜಮೀರ್ ಜೊತೆ ಶ್ರೀಲಂಕಾಗೆ ಹೋಗಿದ್ದು ನಿಜ, ಕ್ಯಾಸಿನೋಗೆ ಹೋಗಿಲ್ಲ: ಜೆಡಿಎಸ್ ರಾಜ್ಯಾಧ್ಯಕ್ಷ

    ಹಾಸನ: ಶಾಸಕ ಜಮೀರ್ ಅಹ್ಮದ್ ಜೊತೆ ಶ್ರೀಲಂಕಾಕ್ಕೆ ಹೋಗಿದ್ದು ನಿಜ. ಆದರೆ ನಾವು ಯಾರೂ ಅವರ ಜೊತೆ ಕ್ಯಾಸಿನೋಗೆ ಹೋಗಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಕೆ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

    ಜಿಲ್ಲೆಯ ಸಕಲೇಶಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಜೊತೆ ಶ್ರೀಲಂಕಾಗೆ ಹೋಗಿದ್ದ ಸಮಯದಲ್ಲಿ ನಾನೂ ಶಾಸಕನಾಗಿದ್ದೆ. ಆದರೆ ನಾವ್ಯಾರೂ ಅವರ ಜೊತೆ ಕ್ಯಾಸಿನೋಗೆ ಹೋಗಿಲ್ಲ. ನಾವು ಶ್ರೀಲಂಕಾದಲ್ಲಿ ಇದ್ದಿದ್ದು ಎರಡೇ ದಿನ. ಅಲ್ಲಿ ಉಳಿದುಕೊಂಡಿದ್ದು ಒಂದೇ ರಾತ್ರಿ. ಸಾಮಾನ್ಯ ಹೋಟೆಲ್‍ನಲ್ಲಿ ಉಳಿದುಕೊಂಡು ವಾಪಸ್ಸಾಗಿದ್ದೇವೆ ಎಂದು ಜಮೀರ್ ಹೇಳಿಕೆಗೆ ತಿರುಗೇಟು ನೀಡಿದರು.

    ಇದೇ ವೇಳೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಮಾಡಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 650 ಕೋಟಿ ರೂ. ಹಣ ಮಂಜೂರು ಮಾಡಿದ್ದರು. ಇಲ್ಲಿಯವರೆಗೆ ಹಣ ಬಿಡುಗಡೆಯಾಗಿಲ್ಲ. ಅಷ್ಟೇ ಅಲ್ಲದೆ ರಾಜ್ಯದಲ್ಲಿ ಜೆಡಿಎಸ್ ಶಾಸಕರ ಕ್ಷೇತ್ರಕ್ಕೆ ನಿಗದಿಯಾದ ಹಣ ಕೂಡ ಬಿಡುಗಡೆಯಾಗಿಲ್ಲ. ಅದನ್ನು ಕೇಳಲು ಹೋಗಿದ್ದರು. ಇದನ್ನು ಬಿಟ್ಟು ಭೇಟಿ ಹಿಂದೆ ಬೇರೆ ಯಾವ ರಾಜಕೀಯವೂ ಇಲ್ಲ, ಬೇರೆ ಉದ್ದೇಶವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

  • ಮಳೆ ಗಾಳಿಗೆ ಧರೆಗುರುಳಿದ 200ಕ್ಕೂ ಹೆಚ್ಚು ವಿದ್ಯುತ್ ಕಂಬಗಳು- ಪ್ರವಾಹದಲ್ಲಿ ಸಿಲುಕಿ ಓರ್ವ ಸಾವು

    ಮಳೆ ಗಾಳಿಗೆ ಧರೆಗುರುಳಿದ 200ಕ್ಕೂ ಹೆಚ್ಚು ವಿದ್ಯುತ್ ಕಂಬಗಳು- ಪ್ರವಾಹದಲ್ಲಿ ಸಿಲುಕಿ ಓರ್ವ ಸಾವು

    ಹಾಸನ: ಗಾಳಿ ಮಳೆಗೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸುಮಾರು 200ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.

    ತಾಲೂಕಿನಲ್ಲಿ ಮಳೆ ಹೆಚ್ಚಾದ ಪರಿಣಾಮ ತುರ್ತು ಅಧಿಕಾರಿಗಳ ಸಭೆ ನಡೆಸಿದ ಸಕಲೇಶಪುರ ಕ್ಷೇತ್ರದ ಶಾಸಕ ಹೆಚ್.ಕೆ ಕುಮಾರಸ್ವಾಮಿ, ಪ್ರವಾಹ ಭೀತಿ ಉಂಟಾಗಿರುವ ಆಜಾದ್ ರಸ್ತೆಗೆ ಅಧಿಕಾರಿಗಳೊಂದಿಗೆ ತೆರಳಿ ಮುನ್ನೆಚ್ಚರಿಕಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜನರಿಗೆ ಮನವಿ ಮಾಡಿದ್ದಾರೆ.

    ನಂತರ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಶಾಸಕ ಹೆಚ್‍ಕೆ.ಕುಮಾರಸ್ವಾಮಿ, ಕಳೆದ ವರ್ಷವೂ ಸಕಲೇಶಪುರದಲ್ಲಿ ಪ್ರವಾಹ ಉಂಟಾಗಿದ್ದ ಪರಿಣಾಮ ಸರ್ಕಾರಕ್ಕೆ 549 ಕೋಟಿ ಪರಿಹಾರ ಕೇಳಿದ್ದೆವು. ಆದರೆ ಸರ್ಕಾರ ಕೇವಲ 25 ಕೋಟಿ ಪರಿಹಾರ ನೀಡಿದೆ. ಈಗ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಹೀಗಾಗಿ ಅಧಿಕಾರಿಗಳ ಜೊತೆ ತುರ್ತು ಸಭೆ ಕರೆದು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಚರ್ಚಿಸಿದ್ದೇನೆ.

    ತಾಲೂಕಿನಲ್ಲಿ 200ಕ್ಕೂ ಹೆಚ್ಚಿನ ವಿದ್ಯುತ್ ಕಂಬಗಳು ಉರುಳಿದ್ದು ಹಲವೆಡೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ತಕ್ಷಣ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ನಾಳೆ ಹಾಸನ ಉಸ್ತುವಾರಿ ಸಚಿವರು ಇಲ್ಲಿಗೆ ಭೇಟಿ ನೀಡಲಿದ್ದು, ಅವರಿಗೂ ಪರಿಸ್ಥಿತಿಯ ಮನವರಿಕೆ ಮಾಡಿಕೊಡಲಾಗುವುದು ಎಂದು ಶಾಸಕ ಹೆಚ್.ಕೆ.ಕುಮಾರಸ್ವಾಮಿ ತಿಳಿಸಿದ್ದಾರೆ.