Tag: hitha chandrashekar

  • ನಾವು ಕೆಲಸ ಮಾಡುವ ಜಾಗದಲ್ಲಿ ಆತಂಕ ಇರಬಾರದು: ಕಾಸ್ಟಿಂಗ್ ಕೌಚ್ ಬಗ್ಗೆ ಹಿತಾ ಮಾತು

    ನಾವು ಕೆಲಸ ಮಾಡುವ ಜಾಗದಲ್ಲಿ ಆತಂಕ ಇರಬಾರದು: ಕಾಸ್ಟಿಂಗ್ ಕೌಚ್ ಬಗ್ಗೆ ಹಿತಾ ಮಾತು

    ಮಾಲಿವುಡ್‌ನಲ್ಲಿ ಹೇಮಾ ಕಮಿಟಿಯಂತೆ ಸ್ಯಾಂಡಲ್‌ವುಡ್‌ನಲ್ಲೂ ಸಮಿತಿ ರಚನೆ ಆಗಬೇಕು ಎಂದು ಸಂಗೀತಾ ಭಟ್ ಬಳಿಕ ನಟಿ ಹಿತಾ ಚಂದ್ರಶೇಖರ್ (Hitha Chandrashekar) ಕೂಡ ಕಾಸ್ಟಿಂಗ್ ಕೌಚ್ (Casting Couch) ಬಗ್ಗೆ ಧ್ವನಿಯೆತ್ತಿದ್ದಾರೆ. ಚಿತ್ರರಂಗದಲ್ಲಿ ಮಹಿಳೆಯರು ಕೆಲಸ ಮಾಡುವ ಜಾಗದಲ್ಲಿ ಆತಂಕ ಇರಬಾರದು ಎಂದು ಹಿತಾ ಮಾತನಾಡಿದ್ದಾರೆ. ಇದನ್ನೂ ಓದಿ:ಕೇರಳದ ಹೇಮಾ ಕಮಿಟಿಯಂತೆ ಸ್ಯಾಂಡಲ್‌ವುಡ್‌ನಲ್ಲೂ ಸಮಿತಿ ರಚನೆ ಆಗಬೇಕು: ನಟಿ ಸಂಗೀತಾ ಭಟ್

    ಹೇಮಾ ಕಮಿಟಿ ಹಾಗೆಯೇ ನಮ್ಮ ಕನ್ನಡ ಚಿತ್ರರಂಗದಲ್ಲೂ ಕಮಿಟಿ ರಚನೆ ಆಗಬೇಕು ಎಂಬ ಮನವಿಗೆ ನಾನು ಕೂಡ ಸಹಿ ಹಾಕಿದ್ದೇನೆ. ನಾನು ಕಲಾವಿದೆಯಾಗಿ ನನ್ನ ಕಲೆ ಕಡೆ ಗಮನ ಕೊಡಬೇಕು. ನಾವು ಕೆಲಸ ಮಾಡುವ ಜಾಗದಲ್ಲಿ ಆತಂಕರಹಿತ ವಾತಾವರಣ ಇರಬೇಕು ಅಂದರೆ ಹೇಮಾ ಕಮಿಟಿ ರೀತಿ ಸ್ಯಾಂಡಲ್‌ವುಡ್‌ನಲ್ಲೂ ಸಮಿತಿ ರಚನೆ ಆಗಬೇಕು ಎಂದಿದ್ದಾರೆ ಹಿತಾ.

    ಕೆಲಸ ಮಾಡುವ ವೇಳೆ ಲೈಂಗಿಕ ದೌರ್ಜನ್ಯ ಆಗುತ್ತಾ? ತಾರತಮ್ಮ ಇರುತ್ತಾ? ಸಮಾನತೆ ಇರೋದಿಲ್ವಾ ಅನ್ನೋ ಭಯ ನಮ್ಮಲ್ಲಿ ಇರಬಾರದು ಅನ್ನೋದಾದ್ರೆ ಮಲಯಾಳಂ ಸಿನಿಮಾ ಇಂಡಸ್ಟ್ರಿ ರೀತಿ ಸಮಿತಿ ರಚನೆಯಾಗಲೇಬೇಕೆಂದು ಹಿತಾ ಮಾತನಾಡಿದ್ದಾರೆ.

    ಬೇರೆ ಇಂಡಸ್ಟ್ರಿಯಲ್ಲಿ ಹೇಗೆ ಈ ಕುರಿತು ಅಲೆ ಮೂಡಿದ್ಯೋ ಅದೇ ರೀತಿ ನಮ್ಮಲ್ಲೂ ಬದಲಾವಣೆಯಾಗಬೇಕು. ಅದಕ್ಕೆ ನಮ್ಮ ಸರ್ಕಾರ ಕೂಡ ಸೂಕ್ತ ನಿರ್ಣಯ ತೆಗೆದುಕೊಳ್ಳಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

  • ಹನಿಮೂನ್‍ನಲ್ಲಿ ಕಿತ್ತಾಡಿಕೊಂಡ ಸಿಹಿಕಹಿ ಚಂದ್ರು ಮಗಳು!

    ಹನಿಮೂನ್‍ನಲ್ಲಿ ಕಿತ್ತಾಡಿಕೊಂಡ ಸಿಹಿಕಹಿ ಚಂದ್ರು ಮಗಳು!

    ಬೆಂಗಳೂರು: ಸ್ಯಾಂಡಲ್‍ವುಡ್ ಹಿರಿಯ ನಟ ಸಿಹಿಕಹಿ ಚಂದ್ರು ಅವರ ಮಗಳು ಹಿತಾ ಚಂದ್ರಶೇಖರ್ ಇತ್ತೀಚೆಗೆ ನಟ, ನಿರೂಪಕ ಕಿರಣ್ ಶ್ರೀನಿವಾಸ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಇವರಿಬ್ಬರು ಹನಿಮೂನ್‍ಗೆ ಹೋಗಿದ್ದು, ಅಲ್ಲಿ ಕಿತ್ತಾಡಿಕೊಂಡಿದ್ದಾರೆ.

    ದಂಪತಿ ಕಿತ್ತಾಡಿಕೊಂಡಿದ್ದಾರೆ ಎಂದು ತಿಳಿದು ಶಾಕ್ ಆಗಬೇಡಿ. ಹಿತಾ ಹಾಗೂ ಕಿರಣ್ ಹನಿಮೂನ್ ಎಂಜಾಯ್ ಮಾಡಲು ಮಡಗಾಸ್ಕರ್ ಈಶಾನ್ಯ ಭಾಗದಲ್ಲಿರುವ ಸೀಶೆಲ್ಸ್ ನ ದ್ವೀಪಕ್ಕೆ ಹೋಗಿದ್ದಾರೆ. ಆದರೆ ಈ ನಡುವೆ ಇಬ್ಬರು ಕಾಲಿನಿಂದ ಪರಸ್ಪರ ಒದ್ದಿದ್ದಾರೆ. ಅಲ್ಲದೆ ಆ ಫೋಟೋಗಳನ್ನು ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಹಿತಾ ಹಾಗೂ ಕಿರಣ್ ತಮಾಷೆಗಾಗಿ ಈ ರೀತಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ ಹೊರತು ಅವರ ನಡುವೆ ಯಾವುದೇ ಜಗಳವಾಗಿಲ್ಲ. ಸದ್ಯ ಇವರಿಬ್ಬರ ಈ ಫೋಟೋಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

     

    View this post on Instagram

     

    From Cheese burst to allergic to cheese (swipe to see what I mean)

    A post shared by Hitha Chandrashekar (@thehithaceee) on

    ಹಿತಾ ತಮ್ಮ ಇನ್‍ಸ್ಟಾದಲ್ಲಿ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲು ಕಿರಣ್ ಕೈ ಹಿಡಿದಿರುವ ಫೋಟೋ ಹಾಕಿದ್ದಾರೆ. ಬಳಿಕ ಕಾಲಿನಿಂದ ಒದೆಯುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ನಂತರ ಕಿರಣ್ ಕೆಳಗೆ ಬಿದ್ದಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಇತ್ತ ಕಿರಣ್ ಕೂಡ ಇದೇ ರೀತಿ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ ಕಿರಣ್, ಹಿತಾ ಕೈ ಹಿಡಿದಿದ್ದಾರೆ. ಎರಡನೇ ಫೋಟೋದಲ್ಲಿ ಕಿರಣ್‍ಗೆ ಕಾಲಿನಿಂದ ಒದೆಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ನಂತರ ಹಿತಾ ಕೆಳಗೆ ಬಿದ್ದಿರುವ ಫೋಟೋವನ್ನು ಕಿರಣ್ ತಮ್ಮ ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಸಿಹಿ ಕಹಿ ಚಂದ್ರು ಅವರಂತೆಯೇ ದಂಪತಿ ಪರಸ್ಪರ ಚೆನ್ನಾಗಿ ಕಾಲೆಳೆಯುತ್ತಿದ್ದೀರಿ. ಇದೇ ರೀತಿ ನೀವು ಚೆನ್ನಾಗಿ ಇರಿ ಎಂದು ಕಮೆಂಟ್ ಮಾಡಿ ಜೋಡಿಗೆ ಶುಭ ಕೋರುತ್ತಿದ್ದಾರೆ.

     

    View this post on Instagram

     

    Pic 1 – I love you Pic 2 – how much? Pic 3 – this much #hitandran #mindricouple

    A post shared by Srinivasa Prasad Kiran (@kiran_srinivas_official) on

    ಡಿಸೆಂಬರ್ 1ರಂದು ಹಿತಾ ಚಂದ್ರಶೇಖರ್ ತಮ್ಮ ಗೆಳೆಯ ಕಿರಣ್ ಶ್ರೀನಿವಾಸ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕಿರಣ್ ಶ್ರೀನಿವಾಸ್ ಗುರು-ಹಿರಿಯರು ನಿಶ್ಚಯ ಮಾಡಿದ್ದ ಶುಭ ಮುಹೂರ್ತದಲ್ಲಿ ಹಿತಾ ಚಂದ್ರಶೇಖರ್‍ಗೆ ಮಾಂಗಲ್ಯಧಾರಣೆ ಮಾಡಿದ್ದರು. ಈ ಜೋಡಿಯ ಮದುವೆ ಸಾಂಪ್ರದಾಯಿಕವಾಗಿ ಅದ್ಧೂರಿಯಾಗಿ ನಡೆದಿತ್ತು.

    ಕಿರಣ್ ಮತ್ತು ಹಿತಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ಬಗ್ಗೆ ನಟಿ ಸೋನು ಗೌಡ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದರು. ನಂತರ ಮೇ ತಿಂಗಳಲ್ಲಿ ಕಿರಣ್ ಹಾಗೂ ಹಿತಾ ಚಂದ್ರಶೇಖರ್ ಅವರು ಕುಟುಂಬದವರ ಸಮ್ಮುಖದಲ್ಲಿ ಪರಸ್ಪರ ರಿಂಗ್ ಬದಲಾಯಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದರು.