Tag: hit wicket

  • 16 ವರ್ಷಗಳ ಬಳಿಕ ಹಿಟ್ ವಿಕೆಟಾದ ಶೋಯೆಬ್ ಮಲಿಕ್ – ಕಾಲೆಳೆದ ಟ್ವಿಟ್ಟಿಗರು

    16 ವರ್ಷಗಳ ಬಳಿಕ ಹಿಟ್ ವಿಕೆಟಾದ ಶೋಯೆಬ್ ಮಲಿಕ್ – ಕಾಲೆಳೆದ ಟ್ವಿಟ್ಟಿಗರು

    ಲಂಡನ್: ಪಾಕಿಸ್ತಾನ ಕ್ರಿಕೆಟ್ ತಂಡದ ಅನುಭವಿ ಆಟಗಾರ ಶೋಯೆಬ್ ಮಲಿಕ್ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಹಿಟ್ ವಿಕೆಟ್ ಆಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇಂಗ್ಲೆಂಡ್ ವಿರುದ್ಧದ 4ನೇ ಏಕದಿನ ಪಂದ್ಯದ 47ನೇ ಓವರಿನಲ್ಲಿ ಘಟನೆ ನಡೆದಿದ್ದು, ಮಾರ್ಕ್ ಹುಡ್ ಓವರಿನಲ್ಲಿ ಸ್ಟ್ರೈಕ್ ಎದುರಿಸಿದ್ದ ಮಲಿಕ್ ಕ್ರಿಸ್ ನಿಂದ ಹಿಂದಕ್ಕೆ ಸಾಗಿ ಚೆಂಡನ್ನು ಬಾರಿಸಲು ಯತ್ನಿಸಿದ್ದರು. ಆದರೆ ತೀರ ವಿಕೆಟ್ ಹತ್ತಿರಕ್ಕೆ ತೆರಳಿದ್ದ ಪರಿಣಾಮ ಮಲ್ಲಿಕ್ ಬೀಸಿದ್ದ ಬ್ಯಾಟ್ ವಿಕೆಟಿಗೆ ತಾಗಿತ್ತು.

    ಮಲಿಕ್ ಏಕದಿನ ಪಂದ್ಯದಲ್ಲಿ 2ನೇ ಬಾರಿಗೆ ಹಿಟ್ ವಿಕೆಟ್ ಆಗುತ್ತಿದ್ದು, ಈ ಹಿಂದೆ 2003 ರಲ್ಲಿ ಇದೇ ರೀತಿ ಔಟಾಗಿದ್ದರು. ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಔಟಾಗುವ ಮುನ್ನ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಮಲಿಕ್ 26 ಎಸೆತಗಳಲ್ಲಿ 41 ರನ್ ಗಳಿಸಿದ್ದರು. ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಜಯ ಗಳಿಸಿದ್ದು, ಈ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 3-0 ಅಂತರದಲ್ಲಿ ಗೆದ್ದಕೊಂಡಿದೆ.

    ಇತ್ತ ಈ ವಿಡಿಯೋವನ್ನು ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ವಿಡಿಯೋ ನೋಡಿದ ಕ್ರಿಕೆಟ್ ಅಭಿಮಾನಿಗಳು ಪ್ರತಿಕ್ರಿಯೆ ನೀಡಿ ಮಲಿಕ್‍ರ ಕಾಲೆಳೆದಿದ್ದಾರೆ. ವೈಯಕ್ತಿಕ ಕಾರಣಗಳಿಂದ ತವರಿನಲ್ಲಿದ್ದ ಮಲಿಕ್ ಇಂಗ್ಲೆಂಡ್ ವಿರುದ್ಧದ 4ನೇ ಏಕದಿನ ಪಂದ್ಯಕ್ಕೆ ಮರಳಿದ್ದರು. ಪರಿಣಾಮ ಮೊದಲ ಮೂರು ಏಕದಿನ ಕ್ರಿಕೆಟ್ ಮತ್ತು ಟಿ20 ಪಂದ್ಯಗಳಿಗೆ ಗೈರಾಗಿದ್ದರು. 10 ದಿನ ರಜೆ ಪಡೆದಿದ್ದ ಮಲಿಕ್ ವೈಯಕ್ತಿಕ ಸಮಸ್ಯೆಗಳಿಂದ ಹೈರಾಣಾಗಿದ್ದಾರೆ ಎಂದು ವರದಿಯಾಗಿತ್ತು.