Tag: hit& run

  • ಹಾಸನದಲ್ಲಿ ಹಿಟ್ & ರನ್ – ಸಾವು ಬದುಕಿನ ಹೋರಾಟದಲ್ಲಿ ವೃದ್ಧೆ

    ಹಾಸನದಲ್ಲಿ ಹಿಟ್ & ರನ್ – ಸಾವು ಬದುಕಿನ ಹೋರಾಟದಲ್ಲಿ ವೃದ್ಧೆ

    ಹಾಸನ: ರಸ್ತೆ ದಾಟುತ್ತಿದ್ದ ವೃದ್ಧೆಗೆ ಬೈಕ್ ಸವಾರನೊಬ್ಬ ಡಿಕ್ಕಿ ಹೊಡೆಸಿ ಪರಾರಿಯಾಗಿರುವ ಘಟನೆ ಹಾಸನದ (Hassan) ಹೊಸಲೈನ್ ರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ (Accident) ತೀವ್ರ ಗಾಯಗೊಂಡಿರುವ ವೃದ್ಧೆ ನಿಂಗಜಮ್ಮ (82) ಸಾವು ಬದುಕಿನ ನಡುವೆ ಹೋರಾಟದಲ್ಲಿದ್ದಾರೆ.

    ವೃದ್ಧೆ ರಸ್ತೆ ದಾಟುತ್ತಿದ್ದ ವೇಳೆ ಬೈಕ್‍ನಲ್ಲಿ ಬಂದ ಯುವಕ ಅಜಾಗರೂಕ ಚಾಲನೆಯಿಂದ ನಿಂಗಜಮ್ಮನಿಗೆ ಡಿಕ್ಕಿ ಹೊಡೆಸಿದ್ದಾನೆ. ಈ ವೇಳೆ ಆತ ಬೈಕ್ ನಿಲ್ಲಿಸದೇ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಶಿವಾಜಿನಗರದಲ್ಲಿ ಹೆಡ್‌ಕಾನ್‌ಸ್ಟೇಬಲ್‌ಗೆ ಚಾಕು ಇರಿತ – ಕೈಗೆ ಬಿತ್ತು 26 ಹೊಲಿಗೆ

    ಎದುರಿನಿಂದ ಬಂದ ಇನ್ನೊಂದು ಬೈಕ್‍ನ ಸವಾರರಿಬ್ಬರು ರಸ್ತೆಯಲ್ಲಿ ಬಿದ್ದಿದ್ದ ವೃದ್ಧೆಯನ್ನು ಎತ್ತಿ ಉಪಚರಿಸಿದ್ದಾರೆ. ಬಳಿಕ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ತೀವ್ರವಾಗಿ ಗಾಯಗೊಂಡಿರುವ ವೃದ್ಧೆಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸದ ಕಾರಣ ಮನೆಗೆ ವಾಪಾಸ್ ಕರೆ ತರಲಾಗಿದೆ. ಈ ಸಂಬಂಧ ಪೆನ್‍ಷನ್‍ಮೊಹಲ್ಲಾ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೌಟುಂಬಿಕ ಕಲಹ – ಪತ್ನಿಯ ಕತ್ತು ಸೀಳಿ ಕೊಲೆಗೈದ ಪತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಟ್ ಆ್ಯಂಡ್ ರನ್ ಕೇಸ್‌ಗೆ ತಂದೆ, ಮಗ ಬಲಿ – ಮತ್ತೋರ್ವನ ಸ್ಥಿತಿ ಗಂಭೀರ

    ಹಿಟ್ ಆ್ಯಂಡ್ ರನ್ ಕೇಸ್‌ಗೆ ತಂದೆ, ಮಗ ಬಲಿ – ಮತ್ತೋರ್ವನ ಸ್ಥಿತಿ ಗಂಭೀರ

    ಬೆಂಗಳೂರು: ಹಿಟ್ ಆ್ಯಂಡ್ ರನ್ (Hit And Run) ಕೇಸ್‌ಗೆ ತಂದೆ (Father) ಹಾಗೂ ಮಗ (Son) ಬಲಿಯಾಗಿರುವ ಘಟನೆ ಬೆಂಗಳೂರಿನ (Bengaluru) ರಾಮಯ್ಯ ಆಸ್ಪತ್ರೆ ಮುಂಭಾಗದ ಇಸ್ರೋ ಸರ್ಕಲ್‌ನಲ್ಲಿ ನಡೆದಿದೆ.

    ಘಟನೆಯಲ್ಲಿ ಚಿರಂಜೀವಿ (25), ರಘು (65) ಮೃತ ಪಟ್ಟಿದ್ದು, ಇವರು ಪುಸ್ತಕ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದರು. ಭಾನುವಾರ ರಾತ್ರಿ ಕೋರಮಂಗಲದಲ್ಲಿರುವ (Koramangala) ತಮ್ಮ ಅಂಗಡಿಯಲ್ಲಿ ಕೆಲಸ ಮುಗಿಸಿಕೊಂಡು 12 ಗಂಟೆಯ ವೇಳೆಗೆ ಮನೆಗೆ ಬರುತ್ತಿದ್ದಾಗ ಅಪಘಾತವಾಗಿದ್ದು, ಘಟನೆಯಲ್ಲಿ ತಂದೆ-ಮಗ ಮೃತಪಟ್ಟಿದ್ದಾರೆ. ಅಲ್ಲದೇ ವಾಸು ಎಂಬವರ ಸ್ಥಿತಿ ಗಂಭೀರವಾಗಿದ್ದು, ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ವೃದ್ಧೆಯನ್ನು ಛತ್ರಿಯಿಂದ ಹೊಡೆದು ಕೊಂದ ವೃದ್ಧ!

    ಈ ಮೂವರು ಇಸ್ರೋ ಸರ್ಕಲ್ ಬಳಿ ಹೋಗುತ್ತಿದ್ದ ಸಂದರ್ಭ ಹಿಂಬಂದಿಯಿಂದ ಕಂಠಪೂರ್ತಿ ಕುಡಿದ ಗುಂಪೊಂದು ಇಕೋ ಕಾರಿನಲ್ಲಿ ರಭಸವಾಗಿ ಬಂದಿದ್ದು, ಆರಂಭದಲ್ಲಿ ಆಟೋಗೆ ಕಾರು ಗುದ್ದಿ ಆಟೋ ಪಲ್ಟಿಯಾಗಿದೆ. ಅಲ್ಲಿಂದ ತಪ್ಪಿಸಿಕೊಳ್ಳಲು ಮತ್ತೆ ವೇಗವಾಗಿ ಹೋಗಲು ಯತ್ನಿಸುವ ವೇಳೆ ಮುಂದೆ ಎರಡು ಕಾರು ಪಾರ್ಕ್ ಮಾಡಿರುತ್ತಾರೆ. ಮುಂದೆ ಇರುವ ಕಾರುಗಳನ್ನು ತಪ್ಪಿಸಲು ಹೋಗಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ (Pedestrian) ವಾಸು ಎಂಬವರಿಗೆ ಡಿಕ್ಕಿ ಹೊಡೆದು ಬಳಿಕ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಜ್ಜುಗುಜ್ಜಾಗಿದ್ದು, ಬೈಕ್‌ನಲ್ಲಿದ್ದ ತಂದೆ ಮತ್ತು ಮಗ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಇಬ್ಬರು ಬಾಲಕರಿಗೆ ಬಲವಂತವಾಗಿ ಮೂತ್ರ ಕುಡಿಸಿ, ಖಾಸಗಿ ಭಾಗಕ್ಕೆ ಮೆಣಸಿನಕಾಯಿ ಉಜ್ಜಿ ದೌರ್ಜನ್ಯ

    ಘಟನಾ ಸ್ಥಳದಲ್ಲಿದ್ದ ಆಟೋ ಚಾಲಕರು ಹಾಗೂ ಸ್ಥಳೀಯರು ಸೇರಿ ಅಪಘಾತ ಮಾಡಿದ ಕಾರನ್ನು ತಡೆದು ಕಾರಿನಲ್ಲಿದ್ದ ಆಕಾಶ್ ಎಂಬವನನ್ನು ವಶಕ್ಕೆ ಪಡೆದು ಸದಾಶಿವನಗರ ಪೊಲೀಸರಿಗೆ ಒಪ್ಪಿಸಿದ್ದು, ಉಳಿದವರು ಅಪಘಾತ ಮಾಡಿದ ಕಾರಿನೊಂದಿಗೆ ಎಸ್ಕೇಪ್ ಆಗಿದ್ದಾರೆ. ಪೊಲೀಸರ ವಶದಲ್ಲಿರುವ ಆಕಾಶ್ ಮಾಗಡಿ ಜಿಲ್ಲಾ ಪಂಚಾಯತ್ ಸದಸ್ಯೆಯ ಮಗ ಎಂಬ ವಿಚಾರ ತಿಳಿದು ಬಂದಿದೆ. ಆರೋಪಿತರು ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿ ವಾಹನ ಚಾಲನೆ ಮಾಡಿರುವುದೇ ಘಟನೆಗೆ ಕಾರಣ ಎಂಬುದು ಬೆಳಕಿಗೆ ಬಂದಿದೆ. ಘಟನೆಗೆ ಕಾರಣವಾದವರ ವಿರುದ್ಧ ಸದಾಶಿವ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಕಂಠಪೂರ್ತಿ ಕುಡಿದು ಬೈಕ್‌ಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾನೆಟ್ ಮೇಲೆ ಸವಾರನನ್ನು ಎಳೆದೊಯ್ದ ಕಾರು ಚಾಲಕಿ

    ಬಾನೆಟ್ ಮೇಲೆ ಸವಾರನನ್ನು ಎಳೆದೊಯ್ದ ಕಾರು ಚಾಲಕಿ

    ಬೆಂಗಳೂರು: ಸಿಲಿಕಾನ್ ಸಿಟಿಯ ಮಾಗಡಿ ರಸ್ತೆಯಲ್ಲಿ ಬೈಕ್ ನಲ್ಲಿ ವೃದ್ಧನನ್ನು ಎಳೆದೊಯ್ದ ಭೀಕರ ಘಟನೆ ಮಾಸುವ ಮುನ್ನವೇ ಮತ್ತೊಂದು ಭಯಾನಕ ಘಟನೆ ನಡೆದಿದೆ.

    ಘಟನೆ ಬೆಂಗಳೂರಿನ ಜ್ಞಾನಭಾರತಿಯ ಉಲ್ಲಾಳ ರಸ್ತೆಯ ಮಂಗಳೂರು ಕಾಲೇಜ್ ಬಳಿ ನೆಕ್ಸನ್ ಕಾರಿನ ಬಾನೆಟ್ (Car Bonnet) ಮೇಲೆ ಎರಡು ಕಿಲೋಮೀಟರ್ ಬೈಕ್ ಸವಾರ ಸುತ್ತಾಡಿದ್ದಾನೆ. ಕಾರು ಪ್ರಿಯಾಂಕಾ ಹೆಸರಿನಲ್ಲಿ ನೋಂದಣಿಯಾಗಿದೆ.

    ಏನಿದು ಘಟನೆ..?: ಶುಕ್ರವಾರ (ಇಂದು) ಬೆಳಗ್ಗೆ 10.30ರ ಸುಮಾರಿಗೆ ಮಹಿಳೆಯೊಬ್ಬಳು ನೆಕ್ಸನ್ ಕಾರನ್ನು ಓಡಿಸುತ್ತಿದ್ದು, ರೆಡ್‌ ಸಿಗ್ನಲ್‌ ಇದ್ದರೂ ಕಾರನ್ನು ತಂದು ಅಡ್ಡ ನಿಲ್ಲಿಸಿದ್ದಳು. ಈ ವೇಳೆ ಸಿಗ್ನಲ್‌ ಇರುವುದು ಕಾಣಿಸಲ್ವಾ ಎಂದು ಬೈಕ್‌ ಸವಾರ ಕೇಳಿದ್ದಕ್ಕೆ ಆಕೆ ಮಧ್ಯದ ಬೆರಳು  ತೋರಿಸಿ ಎಸ್ಕೇಪ್ ಆಗುತ್ತಿದ್ದಳು. ಈ ವೇಳೆ ಕಾರಿನ ಬಾನೆಟ್ ಮೇಲೆ ಹತ್ತಿ ಬೈಕ್ ಸವಾರ (Bike Rider) ಕಾರು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸ್ಕೂಟರ್ ಹಿಂದೆ ಧರಧರನೇ ವೃದ್ದನನ್ನ ಎಳೆದೊಯ್ದ ಆರೋಪಿಗೆ ನ್ಯಾಯಾಂಗ ಬಂಧನ

    ಆದರೆ ಮಹಿಳೆ ಮಾತ್ರ ಕಾರು ನಿಲ್ಲಿಸದೇ, ಮಂಗಳೂರು ಕಾಲೇಜಿನಿಂದ ಎರಡು ಕಿಲೋಮೀಟರ್ ಕಾರನ್ನು ವೇಗವಾಗಿ ಓಡಿಸಿದ್ದಾಳೆ. ಬೈಕ್ ಸವಾರನ ಪರದಾಟ ನೋಡಿ ಸ್ಥಳೀಯರು ಕಾರನ್ನು ಹಿಂಬಾಲಿಸಿ ತಡೆದಿದ್ದಾರೆ. ಬಳಿಕ ಕಾರು ಜಖಂ ಮಾಡಿ, ಜ್ಞಾನಭಾರತಿ ಪೊಲೀಸ್ ಠಾಣೆಗೆ ಸ್ಥಳೀಯರು ಕಾರು ತಂದಿದ್ದಾರೆ. ಸದ್ಯ ಎರಡೂ ಕಡೆಯವರನ್ನು ಪೊಲೀಸರು ಠಾಣೆಗೆ ಕರೆದು ವಿಚಾರಣೆ ನಡೆಸುತ್ತಿದ್ದಾರೆ.

    ವೃದ್ಧನ ಎಳೆದೊಯ್ದಿದ್ದ ಸವಾರ: ಮಂಗಳವಾರ ಸಿಲಿಕಾನ್ ಸಿಟಿಯ ವಿಜಯನಗರದ ಹೊಸಹಳ್ಳಿಯಲ್ಲಿ ನಡೆದ ಘಟನೆ ಮಾನವ ಕುಲಕ್ಕೆ ಅವಮಾನ ಎಸಗುವಂತೆ ಮಾಡಿತ್ತು. ಈ ಕಾಲದಲ್ಲಿ ಯಾವುದೇ ಪ್ರಾಣಿಗಳನ್ನ ಕೂಡ ಅಷ್ಟೊಂದು ಅಮಾನವೀಯವಾಗಿ ನಡೆಸಿಕೊಳ್ಳುವುದಿಲ್ಲ. ಆದರೆ ದ್ವಿಚಕ್ರ ವಾಹನ ಸವಾರ ಶಾಹಿಲ್, ಬೊಲೆರೋ ಟಚ್ ಮಾಡಿದ್ದಲ್ಲದೆ ಮುತ್ತಪ್ಪಗೆ ಕಾಲಲ್ಲಿ ಒದ್ದು ಎಸ್ಕೇಪ್ ಆಗ್ತಿದ್ದ.

    ಈ ವೇಳೆ ಬಿಡಬಾರದು ಅಂತಾ ಗಾಡಿ ಹಿಡಿದಿದ್ದ ಮುತ್ತಪ್ಪರನ್ನ ಶಾಹಿಲ್ ಅರ್ಧ ಕೀ.ಮಿಗೂ ಹೆಚ್ಚು ಧರಧರನೇ ಎಳೆದೊಯ್ದಿದ್ದ. ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದ ಮುತ್ತಪ್ಪಗೆ ಇಂದೂ ಟ್ರೀಟ್‍ಮೆಂಟ್ ಮುಂದುವರಿದಿದೆ. ಎಕ್ಸ್ ರೇ ಮಾಡಿಸಿದ್ದು, ಬೋನ್ ಗಳಿಗೆ ತೊಂದರೆಯಾಗಿಲ್ಲ. ದೇಹದ ಗಾಯಗಳ ನೋವು ಇನ್ನೂ ಆರಿಲ್ಲ ಎಂದು ಮತ್ತಪ್ಪ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಿಟ್&ರನ್- 9 ಶಾಲಾಮಕ್ಕಳ ಸಾವಿಗೆ ಕಾರಣವಾದ ಆರೋಪ ಹೊತ್ತಿರುವ ಬಿಜೆಪಿ ನಾಯಕ ಪೊಲೀಸರಿಗೆ ಶರಣು

    ಹಿಟ್&ರನ್- 9 ಶಾಲಾಮಕ್ಕಳ ಸಾವಿಗೆ ಕಾರಣವಾದ ಆರೋಪ ಹೊತ್ತಿರುವ ಬಿಜೆಪಿ ನಾಯಕ ಪೊಲೀಸರಿಗೆ ಶರಣು

    ಪಾಟ್ನಾ: ಕುಡಿದ ಮತ್ತಿನಲ್ಲಿ ಎಸ್‍ಯುವಿ ಕಾರ್ ಹರಿಸಿ 9 ಶಾಲಾಮಕ್ಕಳ ಸಾವಿಗೆ ಕಾರಣವಾದ ಆರೋಪ ಹೊತ್ತಿರುವ, ಅಮಾನತುಗೊಂಡಿರುವ ಬಿಹಾರದ ಬಿಜೆಪಿ ನಾಯಕ ಬುಧವಾರದಂದು ಇಲ್ಲಿನ ಮುಜಾಫರ್‍ಪುರ್‍ನಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.

    ಹಿಟ್ ಅಂಡ್ ರನ್ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ನಾಯಕ ಮನೋಜ್ ಬೈತಾ ಶನಿವಾರದಿಂದ ಕಾಣೆಯಾಗಿದ್ದರು. ಬುಧವಾರದಂದು ಬೈತಾ ಪೊಲೀಸರಿಗೆ ಶರಣಾಗಿದ್ದಾರೆ. ಅಪಘಾತದಲ್ಲಿ ಗಾಯಗಳಾದ ಹಿನ್ನೆಲೆಯಲ್ಲಿ ಬಂಧನದ ಬಳಿಕ ಬೈತಾ ಅವರನ್ನ ಚಿಕಿತ್ಸೆಗಾಗಿ ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಪತ್ರೆಗೆ ದಾಖಲಿಸಲಾಗಿತ್ತು. ನಂತರ ಅಲ್ಲಿಂದ ಪಾಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.

    ವರದಿಗಳ ಪ್ರಕಾರ ಬೈತಾ ಅವರನ್ನು ಇಂದು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ. ಬಿಹಾರದಲ್ಲಿ ಬಿಜೆಪಿ- ಜೆಡಿಯು ಮೈತ್ರಿ ಸರ್ಕಾರವಿದ್ದು, ಈ ಪ್ರಕರಣದ ಬಗ್ಗೆ ವಿರೋಧ ಪಕ್ಷದವರು ವಾಗ್ದಾಳಿ ನಡೆಸುತ್ತಿರೋದ್ರಿಂದ ಬಿಜೆಪಿಗೆ ಮುಜುಗರ ತಂದಿದೆ. ರಾಜ್ಯ ಬಿಜೆಪಿ ನಾಯಕರ ನಿರ್ದೇಶನದಂತೆ ಬೈತಾ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ. ಘಟನೆ ಬಳಿಕ ಬೈತಾ ಅವರನ್ನ ಬಿಜೆಪಿ ಪಕ್ಷದಿಂದ ಅಮಾನತು ಮಾಡಿದೆ.

    ಶನಿವಾರದಂದು ಮುಜಾಫರ್‍ಪುರ್ ಹೊರವಲಯದ ಸರ್ಕಾರಿ ಶಾಲಾ ಕಟ್ಟಡವೊಂದರ ಬಳಿ ಮನೋಜ್ ಬೈತಾ ಚಲಿಸುತ್ತಿದ್ದ ಕಾರ್ ನಿಯಂತ್ರಣ ತಪ್ಪಿ ಮಕ್ಕಳ ಮೇಲೆ ಹರಿದಿತ್ತು. ಪರಿಣಾಮ 9 ಮಕ್ಕಳು ಸಾವನ್ನಪ್ಪಿದ್ದು, ಸುಮಾರು 20 ವಿದ್ಯಾರ್ಥಿಗಳು ಗಾಯಗೊಂಡಿದ್ದರು.

    ಘಟನೆ ಬಳಿಕ ಬೈತಾ ಕಾರಿನಿಂದ ಇಳಿದು ಪರಾರಿಯಾಗಿದ್ದರು. ಅಪಘಾತದಲ್ಲಿ ಐವರು ಮೊಮ್ಮಕ್ಕಳನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಈ ಬಗ್ಗೆ ದೂರು ದಾಖಲಿಸಿದ್ದರು. ಈ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಲಾಗಿದ್ದು, ಬೈತಾ ಅವರೇ ಕಾರು ಚಲಾಯಿಸುತ್ತಿದ್ದುದು ಗೊತ್ತಾಗಿದೆ.

    ಬಿಹಾರದಲ್ಲಿ ಮದ್ಯಪಾನ ನಿಷೇಧವಿದ್ದರೂ ಈ ಘಟನೆ ನಡೆದಿರುವುದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.