ಬೆಂಗಳೂರು: ನಗರದಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ (Hit And Run Case) ದಾಖಲಾಗಿದೆ. ಬೈಕ್ (Bike) ಸವಾರನಿಗೆ ಗುದ್ದಿದ ಫಾರ್ಚುನರ್ ಕಾರನ್ನು (Car) ತಡೆಯಲು ಯತ್ನಿಸಿದ ಜನರ ಮೇಲೂ ಕಾರು ಹತ್ತಿಸಲು ಯತ್ನಿಸಿ ಎಸ್ಕೇಪ್ ಆಗಿರುವ ಘಟನೆ ರಾಜಾಜಿನಗರದಲ್ಲಿ (Rajajinagar) ನಡೆದಿದೆ.
ನಾಲ್ವರು ಪ್ರಯಾಣಿಸುತ್ತಿದ್ದ ಫಾರ್ಚುನರ್ ಕಾರೊಂದು ರಾಜಾಜಿನಗರದ ಮಧುಲೋಕ ಬಾರ್ ಬಳಿ ಬೈಕ್ ಸವಾರನಿಗೆ ಗುದ್ದಿದೆ. ಈ ವೇಳೆ ಬೈಕ್ ಸವಾರ ಸುಮಾರು ದೂರ ಹಾರಿ ಬಿದ್ದಿದ್ದಾನೆ. ಕೂಡಲೇ ಕಾರು ಚಾಲಕ ಕಾರು ನಿಲ್ಲಿಸದೇ ಸ್ಥಳದಿಂದ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಕಾರನ್ನು ತಡೆಯಲು ಯತ್ನಿಸಿದ್ದಾರೆ. ಆದರೆ ಕಾರು ಚಾಲಕ ಸಾರ್ವಜನಿಕರ ಮೇಲೆ ಕಾರು ಹತ್ತಿಸಲು ಯತ್ನಿಸಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಬಾನೆಟ್ ಮೇಲೆ ಸವಾರನನ್ನು ಎಳೆದೊಯ್ದ ಕಾರು ಚಾಲಕಿ
ಘಟನೆಯಲ್ಲಿ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಸವಾರ ಪ್ರಾಣಪಾಯದಿಂದ ಪಾರಾಗಿದ್ದು, ಇದೀಗ ಅಪಘಾತ ಮತ್ತು ಸಾರ್ವಜನಿಕರ ಮೇಲೆ ಕಾರು ಹತ್ತಿಸಲು ಪ್ರಯತ್ನಿಸಿದ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಕಾರಿನ ಬಾನೆಟ್ ಮೇಲೆ ಹೋದವನೇ ಅರೆಸ್ಟ್- ಲೈಂಗಿಕ ದೌರ್ಜನ್ಯ ಪ್ರಕರಣದ ಅಡಿಯಲ್ಲಿ ಬಂಧನ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಮೇಡಹಳ್ಳಿ ಫ್ಲೈ ಓವರ್ ಬಳಿ ಹಿಟ್ ಅಂಡ್ ರನ್ (Hit and Run) ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಟೆಕ್ಕಿಯನ್ನು (Techie) ಬಂಧಿಸಲಾಗಿದೆ.
ಹೊಸಕೋಟೆಯ ಸಂತೋಷ್ ಬಂಧಿತ ಆರೋಪಿ. ಆರೋಪಿ ವೈಟ್‌ಫೀಲ್ಡ್‌ನಲ್ಲಿರುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಆತನ ಮೊಬೈಲ್ ನಂಬರ್ ಆಧಾರದ ಹಿನ್ನೆಲೆಯಲ್ಲಿ ಕೆ.ಆರ್.ಪುರಂ ಸಂಚಾರಿ ಪೊಲೀಸರು (KR Puram Traffic Police) ಬಂಧಿಸಿದ್ದಾರೆ. ಇದನ್ನೂ ಓದಿ: 6ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು
ಏನಿದು ಪ್ರಕರಣ?
ಶುಕ್ರವಾರ ರಾತ್ರಿ ವೇಗವಾಗಿ ಬಂದ ಕಾರೊಂದು ಎದುರು ಬಂದ ಆಟೋರಿಕ್ಷಾಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಅಪಘಾತದ ಭೀಕರತೆ ಎಷ್ಟಿತ್ತು ಅಂದರೆ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಜಖಂ ಆಗಿದ್ದು ಆಟೋ ರಿಕ್ಷಾದಲ್ಲಿದ್ದ ಹಸೀನಾ ಹಾಗೂ ಸುಮಯ್ಯ ಸ್ಥಳದಲ್ಲಿ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದರು.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಕೆ.ಆರ್.ಪುರಂ ಸಂಚಾರಿ ಪೊಲೀಸರು ಮೃತರನ್ನು ಹಾಗೂ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿದ್ದರು. ಗಾಯಾಳು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಹಿಟ್ ಮಾಡಿ ಇಬ್ಬರನ್ನ ಬಲಿ ಪಡೆದು ಪರಾರಿಯಾಗಿದ್ದ ಕಾರನ್ನು ಪತ್ತೆ ಮಾಡಲು ಆರಂಭಿಸಿದ್ದರು.
ಕಾರು ಹೊಸಕೋಟೆ ಮಾರ್ಗವಾಗಿ ತೆರಳಿದ್ದು, ಟೋಲ್ ಬಳಿ ಸಿಸಿಟಿವಿ ಚೆಕ್ ಮಾಡಿದ್ದರು. ಆ ವೇಳೆ ಮುಂದುಗಡೆ ಹೆಡ್‌ಲೈಟ್ ಜಾಗದಲ್ಲಿ ಸ್ವಲ್ಪ ಜಖಂಗೊಂಡಿದ್ದ ಆಲ್ಟೋ ಕಾರು ಪಾಸ್ ಆಗಿತ್ತು. ಈ ಕಾರಿನ ಚಾಲಕನೇ ಕೃತ್ಯ ಎಸಗಿದ್ದು ಎನ್ನುವುದು ದೃಢಪಟ್ಟಿತ್ತು.
ಟೋಲ್ ಫೀಸ್ ಕಟ್ಟಿದ್ದ ವೇಳೆ ಚಾಲಕನ ಮೊಬೈಲ್ ನಂಬರ್ ಸಿಕ್ಕಿದೆ. ನಂಬರ್ ಆಧಾರದ ಮೇಲೆ ತನಿಖೆ ಮುಂದುವರೆಸಿದ ಪೊಲೀಸರು ಹೊಸಕೋಟೆಯ ಮನೆಯಲ್ಲೇ ಇದ್ದ ಕಾರು ಚಾಲಕನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಭಯಾನಕ ಹಿಟ್ ಆಂಡ್ ರನ್ ಪ್ರಕರಣಕ್ಕೆ(Hit and Run Case) ಸ್ಫೋಟಕ ಟ್ವಿಸ್ಟ್ ಸಿಕ್ಕಿದ್ದು ಮೃತಪಟ್ಟ ಅಂಜಲಿ(Anjali) ಮದ್ಯಪಾನ ಮಾಡಿ ಸ್ಕೂಟಿ ಚಲಾಯಿಸಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.
ಹೋಟೆಲ್ ಸಿಸಿಟಿವಿ ಪರಿಶೀಲನೆ ನಡೆಸಿದ ಪೊಲೀಸರು ಅಂಜಲಿ ಜೊತೆ ಇದ್ದ ಸ್ನೇಹಿತೆ ನಿಧಿಯನ್ನು(Nidhi) ಪತ್ತೆ ಹಚ್ಚಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಕೆ ಘಟನೆ ಹೇಗಾಯ್ತು ಎಂಬುದನ್ನು ವಿವರಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ನಿಧಿ, ಅಂಜಲಿ ಕುಡಿದು ಸ್ಕೂಟಿ ಓಡಿಸಲು ಹಠ ಮಾಡಿದ್ದಳು. ಈ ಸಂದರ್ಭದಲ್ಲಿ ಆಕೆಗೆ ಮತ್ತು ನನಗೆ ಜಗಳ ನಡೆದಿತ್ತು. ನನಗೆ ಪ್ರಜ್ಞೆ ಇದೆ ನಾನು ಚಲಾಯಿಸುತ್ತೇನೆ ಎಂದು ಹೇಳಿದರೂ ಆಕೆ ಹಠ ಹಿಡಿದು ಸ್ಕೂಟಿ ಓಡಿಸಿದ್ದಳು ಎಂದು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿ ಯುವತಿ ಹತ್ಯೆ ಕೇಸ್ – ಬಂಧಿತ ಐವರಲ್ಲಿ ಓರ್ವ ಬಿಜೆಪಿ ಸದಸ್ಯ: ಎಎಪಿ ಆರೋಪ
ಕಾರು ನಮಗೆ ಡಿಕ್ಕಿ ಹೊಡೆದ ನಂತರ ನಾನು ಒಂದು ಬದಿಗೆ ಬಿದ್ದೆ. ಸ್ನೇಹಿತೆ ಕಾರಿನ ಕೆಳಗಡೆ ಸಿಕ್ಕಿಕೊಂಡಿದ್ದಳು. ಕಾರಿನಲ್ಲಿದ್ದ ಪುರುಷರಿಗೆ ಮಹಿಳೆ ಕಾರಿನ ಕೆಳಗೆ ಸಿಲುಕಿಕೊಂಡಿದ್ದ ವಿಚಾರ ತಿಳಿದಿತ್ತು. ಅಪಘಾತದ ನಂತರ ನಾನು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿರಲಿಲ್ಲ. ಭಯಗೊಂಡು ಮನೆಗೆ ಹೋಗಿದ್ದೆ ಎಂದು ವಿವರಿಸಿದ್ದಾರೆ.
ಹೋಟೆಲ್ ಮ್ಯಾನೇಜರ್ ಪ್ರತಿಕ್ರಿಯಿಸಿ ಜ.1 ನಸುಕಿನ ಜಾವ 1:30ಕ್ಕೆ ಇಬ್ಬರು ಜಗಳವಾಡುತ್ತಿದ್ದರು. ನಾನು ಇಲ್ಲಿ ಜಗಳವಾಡಬೇಡಿ ಎಂದು ಹೇಳಿದರೂ ಅವರು ಮತ್ತೆ ಜಗಳ ಮುಂದುವರಿಸಿ ಸ್ಕೂಟಿ ಹತ್ತಿ ತೆರಳಿದ್ದರು ಎಂದು ತಿಳಿಸಿದ್ದಾರೆ.
ಹೋಟೆಲ್‌ನಲ್ಲಿ ಪ್ರತ್ಯೇಕವಾಗಿ ರೂಮ್ ಬುಕ್ ಮಾಡಿದ್ದ ಹುಡುಗರ ಜೊತೆ ಇಬ್ಬರು ಮಾತನಾಡುತ್ತಿದ್ದರು ಎಂದು ಹೋಟೆಲ್ ಮ್ಯಾನೇಜರ್ ತಿಳಿಸಿದ ಹಿನ್ನೆಲೆಯಲ್ಲಿ ಈಗ ಪೊಲೀಸರು ಕೆಲ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅಂಜಲಿ ಮತ್ತು ನಿಧಿ ಜನವರಿ 1 ರಂದು ಹೋಟೆಲ್‌ನಿಂದ ಹೊರಟಿದ್ದಾರೆ. ದಾರಿಯಲ್ಲಿ ಬರುತ್ತಿದ್ದಾಗ ಅವರ ಸ್ಕೂಟಿಗೆ ಕಾರಿಗೆ ಡಿಕ್ಕಿ ಹೊಡೆದಿದೆ. ನಿಧಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಅಂಜಲಿಯ ಕಾಲು ಮುಂಭಾಗದ ಆಕ್ಸಲ್‌ಗೆ ಸಿಲುಕಿಕೊಂಡಿದ್ದರಿಂದ ಕಾರು ದೇಹವನ್ನು ಸುಮಾರು 13 ಕಿ.ಮೀ ದೂರ ರಸ್ತೆಯಲ್ಲಿ ಎಳೆದುಕೊಂಡು ಹೋಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ವಿರುದ್ಧ ನರಹತ್ಯೆ ಅಡಿ ಪ್ರಕರಣ ದಾಖಲಾಗಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಸರಣಿ ಅಪಘಾತ ಮಾಡಿ ಪ್ರಕರಣದಿಂದ ಪಾರಾಗಲು ಅತಿ ಬುದ್ಧಿವಂತಿಕೆ ಪ್ರದರ್ಶಿಸಿದ ಮೊಹಮ್ಮದ್ ನಲಪಾಡ್ ಈಗ ತಾನು ತೋಡಿದ್ದ ಗುಂಡಿಗೆ ಬಿದ್ದಿದ್ದಾನೆ. ಪೊಲೀಸರ ಮುಂದೆ ಅಪಘಾತ ಎಸಗಿದ್ದು ನಾನು ಎಂದು ಸುಳ್ಳು ಹೇಳಿದ್ದಕ್ಕೆ ಈಗ ನಲಪಾಡ್ ಗನ್ ಮ್ಯಾನ್ ಬಾಲಕೃಷ್ಣನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ಸರಣಿ ಅಪಘಾತ ನಡೆದ ಬಳಿಕ ಪ್ರಕರಣ ದಾಖಲಾಗಿತ್ತು. ನಂತರ ಬಾಲಕೃಷ್ಣ ನಾನು ಚಲಾಯಿಸುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು ಎಂದು ಹೇಳಿ ಸದಾಶಿವನಗರ ಪೊಲೀಸರ ಮುಂದೆ ಶರಣಾಗಿದ್ದ.
ಶರಣಾದ ಬಾಲಕೃಷ್ಣನಿಗೆ ಪೊಲೀಸರು ವಿಚಾರಣೆ ವೇಳೆ ಹಲವು ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ಸರಿಯಾದ ಉತ್ತರ ನೀಡದೇ ಕೃತ್ಯ ಎಸಗಿದ್ದು ನಾನು ಎಂದು ಹೇಳುತ್ತಿದ್ದ. ಆತನ ಹೇಳಿಕೆಗೆ ಸ್ಪಷ್ಟತೆ ಇರದಿದ್ದ ಹಿನ್ನೆಲೆಯಲ್ಲಿ ಸತ್ಯ ತಿಳಿಯಲು ಪೊಲೀಸರು ಆತನನ್ನು ಬೆಂಟ್ಲಿ ಕಾರಿನ ಬಳಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಕೀ ನೀಡಿ ಕಾರನ್ನು ಚಾಲು ಮಾಡು ಎಂದು ಹೇಳಿದ್ದಾರೆ.
ಈ ವೇಳೆ ಕಾರನ್ನು ಚಾಲನೆ ಮಾಡಲು ಸಾಧ್ಯವಾಗಲಿಲ್ಲ. ಚಾಲನೆ ಮಾಡಲು ವಿಫಲನಾಗುತ್ತಿದ್ದಂತೆ ಬೆಂಟ್ಲಿ ಕಾರು ಓಡಿಸಿದ ವ್ಯಕ್ತಿ ಬಾಲಕೃಷ್ಣ ಅಲ್ಲ ಎನ್ನುವುದು ಪೊಲೀಸರಿಗೆ ಖಚಿತವಾಯಿತು. ಕೂಡಲೇ ಆತನನ್ನು ಮತ್ತಷ್ಟು ವಿಚಾರಣೆ ನಡೆಸಿದಾಗ ಕಾರು ಓಡಿಸಿದ್ದು ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಎಂದು ಬಾಯಿಬಿಟ್ಟಿದ್ದಾನೆ.
ಸಿಸಿಟಿವಿಗಳನ್ನು ಚೆಕ್ ಮಾಡಿದಾಗ ಬೆಂಟ್ಲಿ ಕಾರನ್ನು ನಲಪಾಡ್ ಓಡಿಸುತ್ತಿದ್ದ ವಿಚಾರ ಪೊಲೀಸರಿಗೆ ಗೊತ್ತಾಗಿತ್ತು. ಆದರೆ ಅಪಘಾತ ನಡೆಸುವಾಗ ಈ ಕಾರನ್ನು ನಲಪಾಡ್ ಓಡಿಸುತ್ತಿದ್ದನೋ ಅಥವಾ ಬೇರೆ ವ್ಯಕ್ತಿಗಳು ಓಡಿಸುತ್ತಿದ್ದರೋ ಎನ್ನುವುದು ಖಚಿತವಾಗಬೇಕಿತ್ತು. ಡ್ರೈವರ್ ಸತ್ಯ ತಿಳಿಸಿದ ಹಿನ್ನೆಲೆಯಲ್ಲಿ ಈಗ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಮೊಹಮ್ಮದ್ ನಲಪಾಡ್ ಗೆ ನೋಟಿಸ್ ಜಾರಿ ಮಾಡಿದ್ದಾರೆ.
ವಿಚಾರಣೆ ವೇಳೆ ತಪ್ಪು ಮಾಹಿತಿ ನೀಡಿ ತನಿಖೆ ದಿಕ್ಕುತಪ್ಪಿಸಿ ಸಾಕ್ಷ್ಯ ನಾಶ ಆರೋಪದ ಅಡಿಯಲ್ಲಿ ಗನ್ ಮ್ಯಾನ್ ಬಾಲಕೃಷ್ಣನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆಯ ಬಗ್ಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ್ದ ಡಿಸಿಪಿ ರವಿಕಾಂತೇಗೌಡ, ಮೇಖ್ರಿ ಸರ್ಕಲ್ ಅಂಡರ್ ಪಾಸ್‍ನಲ್ಲಿ ಬೆಂಟ್ಲಿ ಕಾರೊಂದು ಅಪಘಾತ ಮಾಡಿದ್ದು, ದ್ವಿಚಕ್ರ ವಾಹನ ಸವಾರನೊಬ್ಬನಿಗೆ ಕಾಲು ಮುರಿದಿದ್ದು, ಒಂದು ಆಟೋ ಕೂಡ ಡ್ಯಾಮೇಜ್ ಆಗಿದೆ. ಅತಿವೇಗವಾಗಿ, ನಿರ್ಲಕ್ಷ್ಯವಾಗಿ ವಾಹನವನ್ನು ಚಾಲನೆ ಮಾಡಿದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿತ್ತು. ಆದರೆ ಚಾಲಕ ಅಲ್ಲಿಂದ ಓಡಿಹೋಗಿದ್ದನು. ಸೋಮವಾರ ನಾನೇ ಅಪಘಾತ ಮಾಡಿದ್ದು ಎಂದು ಓರ್ವ ಬಂದು ಶರಣಾಗಿದ್ದನು. ಆದರೆ ನಮ್ಮ ವಿಚಾರಣೆಯಲ್ಲಿ ಈತ ವಾಹನ ಚಾಲನೆ ಮಾಡಿರಲಿಲ್ಲ ಎಂಬುದು ಗೊತ್ತಾಗಿದೆ ಎಂದು ತಿಳಿಸಿದ್ದರು.
ನಮಗೆ ಖಚಿತ ಸಾಕ್ಷ್ಯಾಧಾರಗಳ ಮೇಲೆ ನಲಪಾಡ್‍ಯೇ ಕಾರ್ ಓಡಿಸುತ್ತಿದ್ದನು ಎಂದು ತಿಳಿದುಬಂದಿದೆ. ನ್ಯಾಯಾಲಯಕ್ಕೆ ನಾವು ದೋಷಾರೋಪಣ ಪಟ್ಟಿಯನ್ನು ಸಲ್ಲಿಸುತ್ತೇವೆ. ನ್ಯಾಯಾಲಯವು ಶಿಕ್ಷೆಯನ್ನು ತೀರ್ಮಾನ ಮಾಡುತ್ತದೆ ಎಂದು ಡಿಸಿಪಿ ವಿವರಿಸಿದ್ದರು.
ಏನಿದು ಪ್ರಕರಣ?
ಕಳೆದ ಭಾನುವಾರ ಮಧ್ಯಾಹ್ನ ಬಳ್ಳಾರಿ ರಸ್ತೆಯಲ್ಲಿ ಹೆಬ್ಬಾಳದ ಕಡೆಯಿಂದ ಮೇಖ್ರಿ ಸರ್ಕಲ್ ಅಂಡರ್ ಪಾಸ್ ಮೂಲಕ ಹೋಗುತ್ತಿದ್ದ ಬೆಂಟ್ಲಿ ಕಾರ್ ಬೈಕ್ ಮತ್ತು ಆಟೋಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಆಟೋ ಚಾಲಕ ಸುಹೇಲ್ ಮತ್ತು ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ ಸಬೀಹಾ ಮತ್ತು ಅವರ ಆರು ವರ್ಷದ ಬಾಲಕನಿಗೆ ಗಾಯಗಳಾಗಿದ್ದವು. ಅಪಘಾತದ ಬಳಿಕ ಐಷಾರಾಮಿ ಕಾರಿನ ಚಾಲಕ ಸ್ಥಳದಲ್ಲೇ ಕಾರನ್ನು ಬಿಟ್ಟು ಓಡಿ ಹೋಗಿದ್ದನು. ಈ ಕುರಿತು ಎಫ್‍ಐಆರ್ ದಾಖಲಾಗಿತ್ತು.
ಅಪಘಾತವಾದಾಗ ನಲಪಾಡ್ ಯಾರ ಕಣ್ಣಿಗೂ ಕಾಣಿಸಲಿಲ್ಲ. ಆದರೆ ನಲಪಾಡ್ ಸಂಬಂಧಿ ನಫಿ ಮೊಹಮದ್ ನಸೀರ್ ಮತ್ತು ಬಾಡಿಗಾರ್ಡ್ ಬಾಲಕೃಷ್ಣ ಕಾಣಿಸಿಕೊಂಡಿದ್ದರು. ಸಂಚಾರ ಇಲಾಖೆಯ ಉನ್ನತ ಮೂಲಗಳ ಪ್ರಕಾರ, ಕಾರನ್ನು ಚಲಾಯಿಸುತ್ತಿದ್ದವನು ನಲಪಾಡ್ ಎನ್ನುವ ಸುಳಿವು ಸಿಕ್ಕಿತ್ತು. ಅಲ್ಲದೇ ಭಾನುವಾರ ಒಂದೇ ದಿನ ನಗರದ ಎರಡು ಕಡೆ ಎರಡು ಕಾರುಗಳು ಅಪಘಾತ ಮಾಡಿದ್ದವು.
ಈ ಬಗ್ಗೆ ಮಾಧ್ಯಮವೊಂದು ನಲಪಾಡ್‍ನನ್ನು ಪ್ರಶ್ನೆ ಮಾಡಿದಾಗ, ಮೊದಲಿಗೆ ನನಗೂ ಅಪಘಾತಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಅಪಘಾತಕ್ಕೂ ನನಗೂ ಸಂಬಂಧ ಕಲ್ಪಿಸಬೇಡಿ. ನನಗೆ ಯಾವ ಬಾಡಿಗಾರ್ಡ್ ಕೂಡ ಇಲ್ಲ ಎಂದು ಹೇಳಿದ್ದನು. ನಂತರ ಶಾಸಕರ ಮಗ ಆಗಿದ್ದೇನೆ ಎಂಬ ಮಾತ್ರಕ್ಕೆ ಅಪಘಾತ ಆಗಬಾರದಾ? ಬೇರೆಯವರು ಅಪಘಾತ ಮಾಡುವುದನ್ನು ಸುದ್ದಿ ಮಾಡುವುದಿಲ್ಲ. ಆದರೆ ಶಾಸಕರ ಮಗ ಅಪಘಾತ ಮಾಡಿದರೆ ಮಾತ್ರ ಏಕೆ ಸುದ್ದಿ ಆಗಬೇಕು ಎಂದು
ಈ ಹಿಂದೆ ಮೊಹಮ್ಮದ್ ನಲಪಾಡ್ ಯುವಕನೊಬ್ಬನ ಮೇಲೆ ಬಾರಿನಲ್ಲಿ ಹಲ್ಲೆ ನಡೆಸಿ 116 ದಿನ ಜೈಲು ಪಾಲಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.