Tag: Historical Drama Film

  • ಹಲಗಲಿ ಚಿತ್ರದ ಫಸ್ಟ್ ರೋರ್ ರಿಲೀಸ್ – ವಾರಿಯರ್ ಪಾತ್ರದಲ್ಲಿ ಧನಂಜಯ್

    ಹಲಗಲಿ ಚಿತ್ರದ ಫಸ್ಟ್ ರೋರ್ ರಿಲೀಸ್ – ವಾರಿಯರ್ ಪಾತ್ರದಲ್ಲಿ ಧನಂಜಯ್

    ಕನ್ನಡದ ಐತಿಹಾಸಿಕ ಸಿನಿಮಾ `ಹಲಗಲಿ’ (Halagali) ಚಿತ್ರಕ್ಕೆ ಡಾಲಿ ಧನಂಜಯ (Daali Dhananjaya) ಹೈಲೆಟ್. ಅವರಿಗೆ ನಾಯಕಿಯಾಗಿ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಸುಕೇಶ್ ಡಿಕೆ (Suresh DK) ನಿರ್ದೇಶನದ ಯುವ ಉದ್ಯಮಿ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ ನಿರ್ಮಾಣದ ಬಹು ತಾರಾಗಣದ ಅದ್ಧೂರಿ ಬಜೆಟ್ ಚಿತ್ರ ‘ಹಲಗಲಿ’ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಇದು ಸ್ವಾತಂತ್ರ್ಯ ವೀರರ ಕಥೆ.

    ಎರಡು ಭಾಗಗಳಲ್ಲಿ, ಮೂಡಿ ಬರಲಿರುವ ಈ ಸಿನಿಮಾ ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ ಎಂಬುದು ವಿಶೇಷ. ಐದು ಭಾಷೆಯಲ್ಲಿ ಅದ್ಧೂರಿಯಾಗಿ ಚಿತ್ರೀಕರಣವಾಗುತ್ತಿರುವ ಕನ್ನಡದ ಐತಿಹಾಸಿಕ ಸಿನಿಮಾದ ಫಸ್ಟ್ ರೋರ್ ಸಖತ್ ಆಗಿದೆ. ಕನ್ನಡ ಸೇರಿ ಐದು ಭಾಷೆಯಲ್ಲಿ ಮೂಡಿ ಬರುತ್ತಿರುವ ಕನ್ನಡ ನಾಡಿನ ಸ್ವಾತಂತ್ರ್ಯ ಪೂರ್ವದ ವೀರರ ಕಥೆ ಇದಾಗಿದ್ದು, ವಿಶೇಷ ಸ್ಥಳಗಳಲ್ಲಿ ಶೂಟಿಂಗ್ ನಡೆಯುತ್ತಿದೆ. ಇದನ್ನೂ ಓದಿ: ದರ್ಶನ್ ಜೈಲಿಗೆ ಹೋಗಿದ್ದು ಬೇಸರ ತಂದಿದೆ, ಅಕ್ಕಪಕ್ಕದವ್ರ ಸಹವಾಸ ಬಿಡ್ಬೇಕು – ರಮ್ಯಾ ಸಾಫ್ಟ್ ಕಾರ್ನರ್

    daali dhananjaya

    ನಟ ಡಾಲಿ ಧನಂಜಯ ಅವರ ವೃತ್ತಿ ಪಯಣದಲ್ಲಿ ಮತ್ತೊಂದು ಮೈಲುಗಲ್ಲಿನ ಚಿತ್ರವಿದು ಅನ್ನೋದು ವಿಶೇಷ. ಇಲ್ಲಿವರೆಗೂ ಅವರನ್ನು ತೆರೆ ಮೇಲೆ ವಿಭಿನ್ನ ಪಾತ್ರಗಳಲ್ಲಿ ನೋಡಿ ಮೆಚ್ಚಿದ್ದ ಪ್ರೇಕ್ಷಕರು, ಈಗ ವಾರಿಯರ್ ಪಾತ್ರದಲ್ಲಿ ನೋಡಲಿದ್ದಾರೆ. ಇವರ ಕೈಗೆ ಬಿಲ್ಲು, ಬಾಣ, ಮದ್ದು- ಗುಂಡುಗಳನ್ನು ಕೊಟ್ಟು ಯುದ್ಧದ ಅಖಾಡಕ್ಕೆ ಇಳಿಸಿರುವುದು ಕನ್ನಡ ನಾಡಿನ ಇತಿಹಾಸ ಪುಟಗಳಲ್ಲಿ ಅಚ್ಚಳಿಯದೆ ದಾಖಲಾಗಿರುವ ಒಂದು ರೋಚಕ ಇತಿಹಾಸ. ಇದನ್ನೂ ಓದಿ: ದರ್ಶನ್ ಮತ್ತೆ ಜೈಲಿಗೆ; ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದ ನಟಿ ಉಮಾಶ್ರೀ

    ಹಲಗಲಿ. ಬ್ರಿಟಿಷರ ವಿರುದ್ಧ ಮೊದಲ ಗೆರಿಲ್ಲಾ ವಾರ್ ಮಾಡಿದ ನಮ್ಮದೇ ರಾಜ್ಯದ ಹಲಗಲಿಯ ಊರಿನ ಬೇಡರ ಕುರಿತು ನಾವು ಓದಿರುವ ಮತ್ತು ಕೇಳಿರುವ ಸಂಗತಿಗಳು ಬಹು ರೋಚಕ. ಕನ್ನಡ ನಾಡಿನ ಈ ವೀರರ ಆಚಾರ- ವಿಚಾರ ಹಾಗೂ ಅವರ ಹೋರಾಟದ ಹೆಜ್ಜೆ ಗುರುತುಗಳನ್ನು ತೆರೆ ಮೇಲೆ ತರುವುದಕ್ಕೆ ಹೊರಟಿದ್ದಾರೆ ನಿರ್ದೇಶಕ ಸುಕೇಶ್ ಡಿ ಕೆ. ಇದನ್ನೂ ಓದಿ: ನಟ ದರ್ಶನ್‌ ಜಾಮೀನು ರದ್ದು – ಸುಪ್ರೀಂ ಕೋರ್ಟ್‌ ತೀರ್ಪಿನಲ್ಲೇನಿದೆ?

    Halagali

    ಇಂಥದ್ದೊಂದು ಬಹು ದೊಡ್ಡ ಬಜೆಟ್ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿರುವುದು ಯುವ ಉದ್ಯಮಿ ಬಳ್ಳಾರಿಯ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ. ತಮ್ಮ ದುಹರ ಮೂವೀಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ. ಇವರು ಈಗಾಗಲೇ ತೆಲಗಿನಲ್ಲಿ ರಚಯತ ಚಿತ್ರವನ್ನು ನಿರ್ಮಿಸಿ, 20ಕ್ಕೂ ಹೆಚ್ಚು ಚಿತ್ರಗಳನ್ನು ಕನ್ನಡ ಹಾಗೂ ತೆಲುಗಿನಲ್ಲಿ ವಿತರಣೆ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಮೂಡಿ ಬರಲಿರುವ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಹೆಚ್ಚಿದೆ. ಇದನ್ನೂ ಓದಿ: ದೇವರ ಮೇಲೆ ನಂಬಿಕೆ ಇಡಬೇಕು – ಜೈಲು ಸೇರುವ ಮುನ್ನ ಪವಿತ್ರಾ ಮತ್ತೊಂದು ಪೋಸ್ಟ್

    ಚಿತ್ರಕ್ಕಾಗಿ ಬಹುದೊಡ್ಡ ತಾಂತ್ರಿಕ ತಂಡ ಕೆಲಸ ಮಾಡುತ್ತಿದೆ. ಕನ್ನಡದ ವಾಸುಕಿ ವೈಭವ್ ಸಂಗೀತ ಇದೆ. ವಿಶೇಷ ಎಂದರೆ ಕೆಜಿಎಫ್ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದ ವಿಕ್ರಮ್ ಮೋರ್ ಅವರೇ ಹಲಗಲಿ ಚಿತ್ರಕ್ಕೆ ಸಾಹಸ ನಿರ್ದೇಶಕ. ಚಿತ್ರಕ್ಕಾಗಿ ನಾಲ್ಕೈದು ಬೃಹತ್ ಹಳ್ಳಿಯ ಸೆಟ್ ಗಳನ್ನು ಹಾಕಿರುವುದು ಮತ್ತೊಂದು ವಿಶೇಷ., ಹಲಗಲಿ ಗ್ರಾಮವನ್ನೇ ಮರುಸೃಷ್ಟಿಯ ಸೆಟ್ ಅನ್ನೇ ವಿಶೇಷವಾಗಿ ನಿರ್ಮಿಸಲಾಗಿದೆ.

  • ಬೇಡರ ನಾಯಕನಾಗಿ ಡಾಲಿ ಧನಂಜಯ್: ಗ್ಲಿಂಪ್ಸ್ ರಿಲೀಸ್

    ಬೇಡರ ನಾಯಕನಾಗಿ ಡಾಲಿ ಧನಂಜಯ್: ಗ್ಲಿಂಪ್ಸ್ ರಿಲೀಸ್

    ಡಾಲಿ ಧನಂಜಯ್ (Daali Dhananjaya) ನಾಯಕನಾಗಿ ನಟಿಸುತ್ತಿರುವ ‘ಹಲಗಲಿ’ ಚಿತ್ರದ ಫಸ್ಟ್ ಲುಕ್ ಗುರುವಾರ ಸಂಜೆ ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ ಸಿನಿಮಾದ ಗ್ಲಿಂಪ್ಸ್ (Glimpse Release) ರಿಲೀಸ್ ಮಾಡಿದೆ ಚಿತ್ರತಂಡ. ಆ ಗ್ಲಿಂಪ್ಸ್ ನಾನಾ ಅರ್ಥಗಳನ್ನು ನೀಡುತ್ತಿದೆ. ಡಾಲಿ ಅಭಿಮಾನಿಗಳು ಅದನ್ನು ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದಾರೆ.

    ಬ್ರಿಟಿಷರ ವಿರುದ್ಧ ಮೊಟ್ಟ ಮೊದಲ ಗೆರಿಲ್ಲಾ ವಾರ್ ಮಾಡಿದ ಹಲಗಲಿ ವೀರರ ಕುರಿತು ಈ ಚಿತ್ರದಲ್ಲಿ ಡಾಲಿ ಅವರು ಬೇಡರ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಗ್ಲಿಂಪ್ಸ್ ಬಿಡುಗಡೆಗೂ ಮುನ್ನವೇ ಚಿತ್ರತಂಡ ಹಂಚಿಕೊಂಡಿರುವ ಈ ಎರಡೂ ಫೋಟೋಗಳು ಸಾಕಷ್ಟು ಕುತೂಹಲ ಮೂಡಿಸಿದೆ.

    ಸುಕೇಶ್ ನಾಯಕ್ ನಿರ್ದೇಶನದ ಈ ಚಿತ್ರವನ್ನು ಕಲ್ಯಾಣ್ ಚಕ್ರವರ್ತಿ ಡಿ ಅವರು 80 ಕೋಟಿ ವೆಚ್ಚಿದಲ್ಲಿ ನಿರ್ಮಿಸುತ್ತಿದ್ದಾರೆ. ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಮೂಡಿ ಬರುತ್ತಿರುವ ಚಿತ್ರ ಇದಾಗಿದೆ. ಮೊಟ್ಟ ಮೊದಲ ಬಾರಿಗೆ ಡಾಲಿ ಧನಂಜಯ್ ಅವರು ಐತಿಹಾಸಿಕ ಕತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    1857ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹೊತ್ತಿದಾಗ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಬೇಡರು, ಬ್ರಿಟಿಷರ ವಿರುದ್ಧ ಸಮರ ಸಾರಿದ್ದರು. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಬ್ರಿಟಿಷರಿಗೆ ಗೆರಿಲ್ಲಾ ವಾರ್ ಮೂಲಕ ಸಿಂಹಸ್ವಪ್ನವಾಗಿ ಕಾಡಿದ ಹಲಗಲಿ ಬೇಡರ ಈ ಚರಿತ್ರಿಕ ಕಥನವನ್ನು ದಾಖಲಿಸುವ ನಿಟ್ಟಿನಲ್ಲಿ ಈ ಚಿತ್ರ ಮೂಡಿ ಬರುತ್ತಿದೆ.