Tag: Hisar

  • ಯುವಕನೊಂದಿಗೆ ಆಂಟಿ ಲವ್ವಿಡವ್ವಿ – ರೀಲ್ಸ್‌ ಪ್ರಿಯನಿಗಾಗಿ ಗಂಡನಿಗೇ ಚಟ್ಟ ಕಟ್ಟಿದ ಪತ್ನಿ

    ಯುವಕನೊಂದಿಗೆ ಆಂಟಿ ಲವ್ವಿಡವ್ವಿ – ರೀಲ್ಸ್‌ ಪ್ರಿಯನಿಗಾಗಿ ಗಂಡನಿಗೇ ಚಟ್ಟ ಕಟ್ಟಿದ ಪತ್ನಿ

    – ದುಪ್ಪಟ್ಟಾದಿಂದ ಪತಿಯ ಕತ್ತು ಹಿಸುಕಿ ಕೊಲೆ

    ನವದೆಹಲಿ: ಕೆಲ ದಿನಗಳ ಹಿಂದೆಯಷ್ಟೇ ಮೀರತ್‌ನಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರನಿಗಾಗಿ ಪತಿಯನ್ನ ಕೊಂದು, ತುಂಡು ತುಂಡಾಗಿ ಕತ್ತರಿಸಿ ಸಿಮೆಂಟ್‌ ತುಂಬಿದ ಡ್ರಮ್‌ನಲ್ಲಿ ಮುಚ್ಚಿಟ್ಟಿದ್ದ ಘಟನೆ ಬೆಳಕಿಗೆ ಬಂದಿತ್ತು. ಅದೇ ರೀತಿ ಮತ್ತೊಂದು ಪ್ರಕರಣ ಈಗ ಹರಿಯಾಣದ ಹಿಸಾರ್‌ (Haryana’s Hisar) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ರೀಲ್ಸ್‌ ಪ್ರಿಯನಿಗಾಗಿ (Reels Lover) ಮಹಿಳೆಯೊಬ್ಬಳು ದುಪ್ಪಟ್ಟಾದಿಂದ ತನ್ನ ಪತಿಯ ಕತ್ತುಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದೆ. ಇಬ್ಬರ ಕಳ್ಳಸಂಬಂಧ ಪತ್ತೆಹಚ್ಚಿದ ಬಳಿಕ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಮುಗಿಸಿದ್ದಾಳೆ ಪತ್ನಿ. ರವೀನಾ (32) ಮತ್ತು ಸುರೇಶ್ ಕೊಲೆ ಆರೋಪಿಗಳಾಗಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿದ್ದಾಗ ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯ!

    ಆಂಟಿಗೆ ಲವ್‌ ಹುಟ್ಟಿದ್ದು ಹೇಗೆ?
    32 ವರ್ಷದ ರವೀನಾ ಮತ್ತು ರೀಲ್ಸ್‌ ಸ್ಟಾರ್‌ ಸುರೇಶ್‌ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪರಿಚಯವಾಗಿದ್ದರು. ಹರಿಯಾಣದ ಪ್ರೇಮ್‌ನಗರಲ್ಲಿ ಇಬ್ಬರು ಒಟ್ಟಿಗೇ ವಿಡಿಯೋ ಮಾಡಲು ಪ್ರಾರಂಭಿಸಿದ್ದರು. ಇದಕ್ಕೆ ರವೀನಾಳ ಪತಿ ಪ್ರವೀಣ್‌ ಮತ್ತು ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ರು. ಆದಾಗ್ಯೂ ಸುಮಾರು ಒಂದೂವರೆ ವರ್ಷಗಳ ಕಾಲ ಇಬ್ಬರು ಕಂಟೆಂಟ್‌ ಕ್ರಿಯೇಟ್‌ ಮಾಡುತ್ತಿದ್ದರು. ಇದರಿಂದ ಫಾಲೋವರ್ಸ್‌ಗಳ ಸಂಖ್ಯೆ 34,000ಕ್ಕೆ ತಲುಪಿತ್ತು. ಇದನ್ನೂ ಓದಿ: ತಾಲಿಬಾನ್‌ ಜೊತೆ ಪಾಕಿಸ್ತಾನ ಡಬಲ್‌ ಗೇಮ್‌ ಆಡುತ್ತಿದೆ: ಜೈಶಂಕರ್‌

    ಬಳಿಕ ಇತರ ಕಲಾವಿದರನ್ನೂ ಸೇರಿಸಿಕೊಂಡು ರೀಲ್ಸ್‌ ಮಾಡುತ್ತಿದ್ದರು. ಇದೇ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ರೀಲ್ಸ್‌ ಮಾಡುತ್ತಲೇ ರವೀನಾ ಮತ್ತು ಸುರೇಶ್‌ ಚಕ್ಕಂದ ಆಡಲು ಶುರು ಮಾಡಿದ್ದರು. ಕಳೆದ ಮಾರ್ಚ್‌ 25ರಂದು ರವೀನಾಳ ಪತಿ ಪ್ರವೀಣ್‌ (35), ಇವರಿಬ್ಬರೂ ಅಕ್ರಮ ಸಂಬಂಧ ಇರುವುದನ್ನು ಪತ್ತೆಹಚ್ಚಿದ್ದ. ಹೀಗಾಗಿ ರವೀನಾ ತನ್ನ ಪ್ರಿಯಕರ ಸುರೇಶ್‌ ಜೊತೆ ಸೇರಿ ದುಪ್ಪಟ್ಟಾದಿಂದ ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಇದನ್ನೂ ಓದಿ: ಟ್ರಂಪ್‌ ಬೆದರಿಕೆ ನಡುವೆ ಭಾರತದ ಪ್ರಜೆಗಳಿಗೆ 85,000 ವೀಸಾ ನೀಡಿದ ಚೀನಾ

    ಪ್ರವೀಣ್‌ ಎಲ್ಲಿದ್ದಾನೆ ಅಂತ ಮನೆಯವರು ಕೇಳಿದಾಗ ತನಗೇನು ಗೊತ್ತೇ ಇಲ್ಲವೆಂಬಂತೆ ರವೀನಾ ನಟಿಸಿದ್ದಾಳೆ. ಅದೇ ದಿನ ರಾತ್ರಿ 2:30ರ ಸುಮಾರಿಗೆ ಪ್ರಿಯಕರನ ಬೈಕ್‌ನಲ್ಲಿ (Lover Bike) ಪ್ರವೀಣ್‌ ಶವ ಸಾಗಿಸಿದ್ದಾಳೆ. ಹಿಸಾರ್‌ನರುವ ತನ್ನ ಮನೆಯಿಂದ 6 ಕಿಮೀ ದೂರದಲ್ಲಿರುವ ದಿನೊಡ್‌ ರಸ್ತೆ ಬಳಿಯ ಚರಂಡಿಗೆ ಶವ ಎಸೆದುಬಂದಿದ್ದಾಳೆ. ಕಳೆದ ಮಾರ್ಚ್‌ 28ರಂದು ಪೊಲೀಸರಿಗೆ ಪ್ರವೀಣ್‌ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದನ್ನೂ ಓದಿ: ಬೆಂಗ್ಳೂರಿಗೆ ಸೆಡ್ಡು ಹೊಡೆಯಲು ಆಂಧ್ರ ಸರ್ಕಾರದಿಂದ ಭಾರೀ ಆಫರ್ – ಟಿಸಿಎಸ್‌ಗೆ 99 ಪೈಸೆಗೆ 21 ಎಕ್ರೆ ಭೂಮಿ

    ಬಳಿಕ ಆಕೆಯ ಮನೆಯ ರಸ್ತೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ರವೀನಾ ಹೆಲ್ಮೆಟ್‌ ಧರಿಸಿ ಬೈಕ್‌ನಲ್ಲಿ ಬಂದ ವ್ಯಕ್ತಿಯೊಂದಿಗೆ ತನ್ನ ಮುಖಮುಚ್ಚಿಕೊಂಡು ಶವ ಸಾಗಿದ್ದಾಳೆ. 2 ಗಂಟೆ ಸುಮಾರಿಗೆ ಮನೆಗೆ ವಾಪಸ್ಸಾಗುವಾಗ ಬೈಕ್‌ನಲ್ಲಿ ಇಬ್ಬರೇ ಬಂದಿದ್ದಾರೆ. ಈ ವೇಳೆ ಮಧ್ಯದಲ್ಲಿದ್ದ ಮೃತದೇಹ ನಾಪತ್ತೆಯಾಗಿತ್ತು. ಬಳಿಕ ಮಾಹಿತಿ ಖಚಿತಪಡಿಸಿಕೊಂಡ ಪೊಲೀಸರು ಇಬ್ಬರನ್ನೂ ಬಂಧಿಸಿ ಜೈಲಿಗಟ್ಟಿದ್ದಾರೆ. ರವೀನಾ ಮತ್ತು ಪ್ರವೀಣ್‌ಗೆ 6 ವರ್ಷದ ಮಗ ಇದ್ದು, ತನ್ನ ಅಜ್ಜನೊಂದಿಗೆ ವಾಸಿಸುತ್ತಿದ್ದಾನೆ.

  • ಹರಿಯಾಣ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಕಾರು ಅಪಘಾತ

    ಹರಿಯಾಣ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಕಾರು ಅಪಘಾತ

    ಚಂಡೀಗಢ: ಹರಿಯಾಣದ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ (Bhupinder Singh Hooda) ಅವರು ಪ್ರಯಾಣಿಸುತ್ತಿದ್ದ ಟೊಯೊಟಾ ಲ್ಯಾಂಡ್ ಕ್ರೂಸರ್ ಭಾನುವಾರ ಹಿಸ್ಸಾರ್‌ನಲ್ಲಿ (Hisar) ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಹೂಡಾ ಯಾವುದೇ ಹಾನಿಗೊಳಗಾಗದೇ ಪಾರಾಗಿದ್ದಾರೆ. ವಾಹನದಲ್ಲಿದ್ದ ಇತರ ಪ್ರಯಾಣಿಕರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.

    ಹೂಡಾ ಅವರು ಬಾಕ್ಸರ್ ಸವೀತಿ ಬೂರಾ ಅವರನ್ನು ಗೌರವಿಸಲು ಹಿಸ್ಸಾರ್‍ನ ಗಿರಾಯೆ ಗ್ರಾಮದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ವಾಹನವು ನೀಲಗಾಯ್‍ಗೆ (Nilgai) ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗದ ಎರಡು ಏರ್ ಬ್ಯಾಗ್‍ಗಳು (Air bags) ತೆರೆದುಕೊಂಡು ಅನಾಹುತದ ತೀವ್ರತೆ ಕಡಿಮೆಗೊಳಿಸಿದೆ. ನಂತರ ಹೂಡಾ ಅವರು ಬೆಂಗಾವಲು ವಾಹನದಲ್ಲಿ ಕಾರ್ಯಕ್ರಮಕ್ಕೆ ತೆರಳಿದರು. ಇದನ್ನೂ ಓದಿ: ಯಾದಗಿರಿಯಲ್ಲಿ ಖಾಸಗಿ ಬಸ್ ಪಲ್ಟಿ – ಓರ್ವ ಸಾವು, ಹಲವರಿಗೆ ಗಂಭೀರ ಗಾಯ

    ಹೂಡಾ ಅವರು ಚೆನ್ನಾಗಿದ್ದಾರೆ ಮತ್ತು ನಿಗದಿತ ಕಾರ್ಯಕ್ರಮಗಳಿಗೆ ಹಾಜರಾಗಿದ್ದರು. ವಾಹನಕ್ಕೆ ಹಾನಿಯಾಗಿದೆ ಆದರೆ ಅದರಲ್ಲಿದ್ದವರು ಕ್ಷೇಮವಾಗಿದ್ದಾರೆ. ಅವರು ಪ್ರಸ್ತುತ ತಮ್ಮ ಆಪ್ತ ಸಹಾಯಕರೊಬ್ಬರ ವಿವಾಹ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಅವರ ಮಾಧ್ಯಮ ಸಲಹೆಗಾರ ಸುನಿಲ್ ಪಾರ್ಟಿ ತಿಳಿಸಿದ್ದಾರೆ. ಇದನ್ನೂ ಓದಿ: ಗಡಿ ನುಸುಳಲು ಉಗ್ರರ ಸ್ಕೆಚ್ – ಸೈನಿಕರ ಗುಂಡಿಗೆ ಓರ್ವ ಬಲಿ

  • ಹಾಲು ಉತ್ಪಾದನೆಯಲ್ಲಿ ವಿಶ್ವದಾಖಲೆ ಬರೆದಿದ್ದ ಎಮ್ಮೆ 51 ಲಕ್ಷಕ್ಕೆ ಮಾರಾಟ

    ಹಾಲು ಉತ್ಪಾದನೆಯಲ್ಲಿ ವಿಶ್ವದಾಖಲೆ ಬರೆದಿದ್ದ ಎಮ್ಮೆ 51 ಲಕ್ಷಕ್ಕೆ ಮಾರಾಟ

    – ಎಮ್ಮೆ ಮಾರಿ ಕಷ್ಟದ ಕಥೆ ಬಿಚ್ಚಿಟ್ಟ ಮಾಲೀಕ

    ಚಂಡೀಗಢ: ಹಾಲು ಉತ್ಪಾದನೆಯಲ್ಲಿ ವಿಶ್ವ ದಾಖಲೆ ಬರೆದಿದ್ದ ಹರಿಯಾಣದ ಮುರ್ರಾ ತಳಿಯ ಸರಸ್ವತಿ ಹೆಸರಿನ ಎಮ್ಮೆ 51 ಲಕ್ಷ ರೂ.ಗೆ ಮಾರಾಟವಾಗಿದೆ.

    ಹಿಸಾರ್ ಜಿಲ್ಲೆಯ ಲಿಟಾನಿಯ ರೈತ ಸುಖ್‍ಬೀರ್ ಸಿಂಗ್ ಧಂಡಾ ಅವರ ಮಾಲೀಕತ್ವದ ಸರಸ್ವತಿ ದಿನಕ್ಕೆ 33.131 ಕೆಜಿ ಹಾಲು ನೀಡುವ ಮೂಲಕ ಪಾಕಿಸ್ತಾನ ಎಮ್ಮೆಯ ದಾಖಲೆಯನ್ನು ಮುರಿತ್ತು. ಈ ಎಮ್ಮೆಯನ್ನು ಸದ್ಯ ಲುಧಿಯಾನದ ಸಿಕ್ ಪವಿತ್ರ ಕ್ಷೇತ್ರಕ್ಕಾಗಿ ಸಿಕ್ ಸಮುದಾಯ ಖರೀದಿಸಿದೆ.

    ವಾಸ್ತವವಾಗಿ, ಸುಖ್‍ಬೀರ್ ಅವರು ಕೆಲವು ದಿನಗಳ ಹಿಂದೆ ಸರಸ್ವತಿಯೊಂದಿಗೆ ಲುಧಿಯಾನದ ಜಾಗ್ರಾವ್‍ನಲ್ಲಿ ನಡೆದ ಡೈರಿ ಮತ್ತು ಅಗ್ರಿ ಎಕ್ಸ್‍ಪೋದಲ್ಲಿ ಭಾಗವಹಿಸಲು ಹೋಗಿದ್ದರು. ಅಲ್ಲಿ ಸರಸ್ವತಿ 33.131 ಕೆಜಿ ಹಾಲು ನೀಡುವ ಮೂಲಕ ವಿಶ್ವ ದಾಖಲೆಯನ್ನು ಮಾಡಿತ್ತು. ಹೀಗಾಗಿ ಸರಸ್ವತಿ ಮಾಲೀಕ ಸುಖ್‍ಬೀರ್ ಅವರಿಗೆ ಎರಡು ಲಕ್ಷ ರೂಪಾಯಿ ಬಹುಮಾನ ನೀಡಿ ಗೌರವಿಸಲಾಗಿತ್ತು. ಇದಕ್ಕೂ ಮೊದಲು ಅಂದ್ರೆ 2019ರ ಡಿಸೆಂಬರ್ ತಿಂಗಳಿನಲ್ಲಿ 32.050 ಕೆಜಿ ಹಾಲು ನೀಡಿದ ಪಾಕಿಸ್ತಾನದ ಎಮ್ಮೆಗಿಂತ ಅತಿ ಹೆಚ್ಚು ಹಾಲು ನೀಡಿದ ದಾಖಲೆ ಮಾಡಿತ್ತು.

    1.30 ಲಕ್ಷ ರೂ, ಖರೀದಿಸಿದ್ದ ಎಮ್ಮೆ:
    ಬಾರ್ವಾಲಾದ ಖೋಖಾ ಗ್ರಾಮದ ರೈತ ಗೋಪಿರಾಮ್ ಅವರಿಂದ ನಾಲ್ಕು ವರ್ಷಗಳ ಹಿಂದೆ ಸರಸ್ವತಿಯನ್ನು 1.30 ಸಾವಿರ ರೂಪಾಯಿಗೆ ಖರೀದಿಸಿದ್ದೆ. ಸರಸ್ವತಿ ಈಗಾಗಲೇ ಕರುಗಳಿಗೆ ಜನ್ಮ ನೀಡಿದೆ. ಅಷ್ಟೇ ಅಲ್ಲದೆ ಹಾಲು ಮತ್ತು ವೀರ್ಯವನ್ನು ಮಾರಾಟ ಮಾಡುವ ಮೂಲಕ ಒಂದು ಲಕ್ಷ ರೂಪಾಯಿಗೂ ಅಧಿಕ ಗಳಿಸಿದ್ದೇನೆ ಎಂದು ಮಾಲೀಕ ಸುಖ್‍ಬೀರ್ ತಿಳಿಸಿದ್ದಾರೆ.

    ಎಮ್ಮೆ ಮಾರಿದ್ಯಾಕೆ?
    ಸರಸ್ವತಿಯನ್ನು ಯಾರಾದರು ಕಳವು ಮಾಡುತ್ತಾರೆ ಎಂಬ ಆತಂಕ ಸುಖ್‍ಬೀರ್ ಅವರಿಗೆ ಇತ್ತು. ಜೊತೆಗೆ ಒಂದು ಕೋಟಿ ರೂಪಾಯಿಗೆ ಸಹ ಎಮ್ಮೆಯನ್ನು ಮಾರಾಟ ಮಾಡಲು ಅವರು ಸಿದ್ಧರಿರಲಿಲ್ಲ. ಹೀಗಾಗಿ ಎಮ್ಮೆ ಮಾರಾಟ ಮಾಡುವ ಮೊದಲು ರೈತ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಹಿಸಾರ್ ಅಷ್ಟೇ ಅಲ್ಲದೆ ಉತ್ತರ ಪ್ರದೇಶ, ಪಂಜಾಬ್ ಹಾಗೂ ರಾಜಸ್ಥಾನದ ಸುಮಾರು 700 ರೈತರು ಭಾಗವಹಿಸಿದ್ದರು. ಈ ವೇಳೆ ಲುಧಿಯಾನದ ಸಿಕ್ ಪವಿತ್ರ ಕ್ಷೇತ್ರಕ್ಕಾಗಿ ಸಿಕ್ ಸಮುದಾಯ ಎಮ್ಮೆ ಸರಸ್ವತಿಯನ್ನು ಖರೀದಿಸಿದೆ.

    ಅನೇಕ ದಾಖಲೆ ಬರೆದ ಸರಸ್ವತಿ:
    ಸರಸ್ವತಿ ಈ ಮೊದಲು ಸುಖ್‍ಬೀರ್ ಸಿಂಗ್ ಧಂಡಾ ಅವರಿಗೆ ಅನೇಕ ಹೆಮ್ಮೆಪಡುವಂತಹ ದಾಖಲೆಗಳನ್ನು ಮಾಡಿದೆ. ಈ ಕುರಿತು ಸುಖ್‍ಬೀರ್ ಸಿಂಗ್ ಮಾತನಾಡಿ, ‘ಸರಸ್ವತಿ ಕಳೆದ ವರ್ಷ ಹಿಸಾರ್‍ನಲ್ಲಿ 29.31 ಕೆಜಿ ಹಾಲು ನೀಡುವ ಮೂಲಕ ಪ್ರಥಮ ಬಹುಮಾನ ಗೆದ್ದಿತ್ತು. ಹಿಸಾರ್‍ನ ಸೆಂಟ್ರಲ್ ಇನ್‍ಸ್ಟಿಟ್ಯೂಟ್ ಆಫ್ ಬಫಲೋ ರಿಸರ್ಚ್ ಕಾರ್ಯಕ್ರಮದಲ್ಲಿ ಸರಸ್ವತಿ 28.7 ಕೆಜಿ ಹಾಲು ನೀಡುವ ಮೂಲಕ ಅಗ್ರಸ್ಥಾನ ಪಡೆಯಿತು. ಹರಿಯಾಣ ಜಾನುವಾರು ಅಭಿವೃದ್ಧಿ ಮಂಡಳಿಯಲ್ಲಿ 28.8 ಕೆಜಿ ಹಾಲು ಉತ್ಪಾದನೆಯೊಂದಿಗೆ ಸ್ಪರ್ಧೆಯನ್ನು ಗೆದ್ದಿತ್ತು ಎಂದು ತಿಳಿಸಿದ್ದಾರೆ.