Tag: hiriyuru

  • ಧಗಧಗನೆ ಹೊತ್ತಿ ಉರಿದ ಕಾರು – ಅದೃಷ್ಟವಶಾತ್ ಚಾಲಕ ಪಾರು

    ಧಗಧಗನೆ ಹೊತ್ತಿ ಉರಿದ ಕಾರು – ಅದೃಷ್ಟವಶಾತ್ ಚಾಲಕ ಪಾರು

    ಚಿತ್ರದುರ್ಗ: ಚಲಿಸುತ್ತಿದ್ದ ಕಾರಿನಲ್ಲಿ (Car) ಏಕಾಏಕಿ ಬೆಂಕಿ (Fire Accident) ಕಾಣಿಸಿಕೊಂಡ ಪರಿಣಾಮ ಕಾರು ಸುಟ್ಟು ಭಸ್ಮವಾದ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರು (Hiriyuru) ನಗರದ ಹೊರವಲಯದಲ್ಲಿ ನಡೆದಿದೆ.

    ಹಿರಿಯೂರು ನಗರದ ವಿವಿ ಸಾಗರ ರಸ್ತೆ ಬಳಿಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಸುಟ್ಟುಹೋದ ಕಾರು ಹೊನ್ನಾಳ್ಳಿ ಮೂಲದ ರಮೇಶ್ ಆಚಾರಿ ಎನ್ನುವವರಿಗೆ ಸೇರಿದ್ದು ಎನ್ನಲಾಗಿದೆ. ಕಾರು ಚಲಿಸುತ್ತಿದ್ದ ವೇಳೆ ದಿಢೀರ್ ಕಾಣಿಸಿಕೊಂಡ ಬೆಂಕಿಯಿಂದಾಗಿ ಎಚ್ಚೆತ್ತ ಕಾರಿನ ಚಾಲಕ ರಸ್ತೆಬದಿಗೆ ಕಾರು ನಿಲ್ಲಿಸಿ ಕೆಳಗಿಳಿದಿದ್ದಾರೆ. ಇದನ್ನೂ ಓದಿ: ದೇವರ ಪ್ರಸಾದ ತಿಂದು ನೂರಾರು ಜನ ಅಸ್ವಸ್ಥ – ಓರ್ವ ಮಹಿಳೆ ಸಾವು

    ಇನ್ನು ಬೆಂಕಿ ಕಾಣಿಸಿಕೊಳ್ಳುವ ಮುನ್ನ ಹೊಗೆಯಿಂದಾಗಿ ಎಚ್ಚೆತ್ತ ಚಾಲಕ ಕಾರಿನಿಂದ ಇಳಿದ ಪರಿಣಾಮ, ಪ್ರಾಣಪಾಯದಿಂದ ಪಾರಾಗಿದ್ದಾರೆ. ದಾವಣಗೆರೆಯಿಂದ (Davangere) ಬೆಂಗಳೂರು (Bengaluru) ಕಡೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಕೂಡಲೇ ಸ್ಥಳೀಯರು ಅಗ್ನಿಶಾಮಕದಳಕ್ಕೆ ವಿಷಯ ತಿಳಿಸಿದ್ದು, ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಗೆಳತಿ ಮೇಲೆ ಪ್ರೀತಿ; ಲಿಂಗ ಬದಲಿಸಿಕೊಂಡ್ರೂ ಮದುವೆಗೆ ಒಪ್ಪದ ಮಹಿಳಾ ಟೆಕ್ಕಿಯನ್ನ ಜೀವಂತ ಸುಟ್ಟು ಹತ್ಯೆ

  • ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ಅಮಾನತು ಆದೇಶ ಹಿಂಪಡೆದ ಬಿಜೆಪಿ

    ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ಅಮಾನತು ಆದೇಶ ಹಿಂಪಡೆದ ಬಿಜೆಪಿ

    ಚಿತ್ರದುರ್ಗ: ಚುನಾವಣೆ ಘೋಷಣೆ ಬೆನ್ನಲ್ಲೇ ಅಭ್ಯರ್ಥಿ ಗೆಲುವಿಗಾಗಿ ರಣತಂತ್ರ ರೂಪಿಸುತ್ತಿರುವ ಬಿಜೆಪಿ (BJP) ಹಿರಿಯೂರು ಶಾಸಕಿ ಪೂರ್ಣಿಮಾ (Purnima) ಪತಿ ಡಿಟಿ ಶ್ರೀನಿವಾಸ್ (DT Srinivas) ಅಮಾನತು ಆದೇಶವನ್ನು ಹಿಂಪಡೆದಿದೆ.

    ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರು (Hiriyuru) ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ಅವರು ಎಂಎಲ್‌ಸಿ ಚುನಾವಣೆಯಲ್ಲಿ ಬಿಜೆಪಿ ಬಂಡಾಯ (ಪಕ್ಷೇತರ) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ್ನೇಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶ್ರೀನಿವಾಸ್ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಗೆ ಭಾರೀ ಪೈಪೋಟಿ ನೀಡಿದ್ದರು. ಈ ವೇಳೆ ಡಿಟಿ ಶ್ರೀನಿವಾಸ್ ಅವರನ್ನು ಬಿಜೆಪಿ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.

    ಆದರೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪತಿಯೇ ಪತ್ನಿಗೆ ತಲೆನೋವಾಗದಿರಲಿ, ಬಿಜೆಪಿಗೆ ನಿಷ್ಠೆಯಿಂದ ಶ್ರಮಿಸಲಿ ಎಂಬ ಸದುದ್ದೇಶದಿಂದ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಅಮಾನತು ಆದೇಶವನ್ನು ವಾಪಸ್ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಜೆಡಿಎಸ್‍ನಲ್ಲಿ ತಾರಕಕ್ಕೇರಿದ ಟಿಕೆಟ್ ವಾರ್- ಹಾಸನದಲ್ಲಿ ಕುಮಾರಸ್ವಾಮಿ V/S ರೇವಣ್ಣ ಫೈಟ್ ಶುರು ಆಗುತ್ತಾ?

    ಈ ಆದೇಶದಿಂದಾಗಿ ಫುಲ್ ಆಕ್ಟೀವ್ ಆಗಿರುವ ಶ್ರೀನಿವಾಸ್ ತಮ್ಮ ಪತ್ನಿ ಬೆನ್ನಿಗೆ ನಿಂತಿದ್ದು, ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಹಗಲು, ಇರುಳೆನ್ನದೇ ಫೀಲ್ಡಿಗಿಳಿದು ಮತಭೇಟೆ ನಡೆಸುತ್ತಿದ್ದಾರೆ. ಇದು ಪೂರ್ಣಿಮಾ ಶ್ರೀನಿವಾಸ್‌ಗೆ ಬಿಜೆಪಿ ಕೊಟ್ಟಿರುವ ವರವೆನಿಸಿದೆ.

    ಹಾಗೆಯೇ ಶ್ರೀನಿವಾಸ್ ರೀ ಎಂಟ್ರಿ ಬಿಜೆಪಿಗೆ ಆನೆಬಲ ಬಂದಂತಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಶ್ರೀನಿವಾಸ್ ಅಭಿಮಾನಿಗಳು ಡಿಟಿಎಸ್‌ಗೆ ಸ್ವಾಗತದ ಸುರಿಮಳೆಗೈದಿದ್ದಾರೆ. ಇದನ್ನೂ ಓದಿ: ಚೆಕ್‍ಬೌನ್ಸ್ ಕೇಸ್- ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಬಂಧನದ ಭೀತಿ?

  • ಹಿರಿಯೂರಿನಲ್ಲಿ ಭೀಕರ ಸರಣಿ ಅಪಘಾತ- ನಾಲ್ವರು ಸ್ಥಳದಲ್ಲೇ ಸಾವು

    ಹಿರಿಯೂರಿನಲ್ಲಿ ಭೀಕರ ಸರಣಿ ಅಪಘಾತ- ನಾಲ್ವರು ಸ್ಥಳದಲ್ಲೇ ಸಾವು

    ಚಿತ್ರದುರ್ಗ: ಈರುಳ್ಳಿ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆಲೂರು ಗ್ರಾಮದ ಬಳಿ ನಡೆದಿದೆ.

    ಬೆಳಗ್ಗಿನ ಜಾವ 5 ಗಂಟೆ ವೇಳೆ ಈ ಅಪಘಾತ ನಡೆದಿದೆ. ಘಟನೆಯಲ್ಲಿ ಹನುಮಪ್ಪ ಕಳಕಪ್ಪ ಹುನಗುಂದಿ (30), ಗುರಪ್ಪಾ ಹುಗರ್ (26), ರಮೇಶ್ (28), ಪ್ರಶಾಂತ್ ಹಟ್ಟಿ (36) ಸಾವನ್ನಪ್ಪಿದವರು. ಮೃತರೆಲ್ಲರೂ ಗದಗ ಜಿಲ್ಲೆಯ ಹುಯಿಗೊಳ ಗ್ರಾಮದವರು. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈರುಳ್ಳಿ ತುಂಬಿಕೊಂಡು ಬೆಂಗಳೂರಿಗೆ ಹೊರಟಿದ್ದ ಈಚರ್ ಲಾರಿಯೊಂದರ ಟೈರ್ ಸಿಡಿದು ಪಲ್ಟಿಯಾಗಿದೆ. ಆಗ ಲಾರಿಯ ಹಿಂಬದಿ ಬರುತ್ತಿದ್ದ ಕಾರು ಹಾಗೂ ಲಾರಿಗಳ ಮಧ್ಯೆ ಭೀಕರ ಸರಣಿ ಅಪಘಾತ ಸಂಭವಿಸಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಜನ ಗಾಯಗೊಂಡು ಹಿರಿಯೂರು ತಾಲೂಕು ಆಸ್ಪತ್ರೆ ಸೇರಿದ್ದಾರೆ.

    ಅಪಘಾತದ ರಭಸಕ್ಕೆ ಲಾರಿಯಲ್ಲಿದ್ದ ಈರುಳ್ಳಿ ಚೀಲಗಳು ಚೆಲ್ಲಾಪಿಲ್ಲಿಯಾಗಿದ್ದು, ರೈತರು ಕಷ್ಟಪಟ್ಟು ಬೆಳೆದ ಈರುಳ್ಳಿಯೆಲ್ಲಾ ರಸ್ತೆ ಪಾಲಾಗಿವೆ. ಒಂದರ ಹಿಂದೆ ಒಂದು ಲಾರಿ ಡಿಕ್ಕಿಯಾಗಿ ಎರಡು ಲಾರಿಗಳು ಹಾಗೂ ಕಾರು ಪಲ್ಟಿಯಾಗಿವೆ. ಆದರೆ ಆ ವಾಹನಗಳಲ್ಲಿದ್ದವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಬಳಿಕ ಲವ್ ಜಿಹಾದ್ ನಿಷೇಧ ಕಾಯ್ದೆ: ಸುನಿಲ್ ಕುಮಾರ್

    ಭೀಕರ ಅಪಘಾತದ ಸ್ಥಳಕ್ಕೆ ಎಸ್‍ಪಿ ಜಿ ರಾಧಿಕಾ, ಡಿವೈಎಸ್‍ಪಿ ರೋಷರ್ ಜಮೀರ್, ಸಿಪಿಐ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ಕೆಲಕಾಲ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಇದನ್ನೂ ಓದಿ: 21 ವರ್ಷಗಳ ನಂತ್ರ ಭಾರತಕ್ಕೆ ವಿಶ್ವಸುಂದರಿ ಪಟ್ಟ- ಹರ್ನಾಜ್ ಕೌರ್ ಸಂಧು ಮಿಸ್ ಯೂನಿವರ್ಸ್

  • ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ವ್ಯಕ್ತಿಗೆ ಕ್ರೇನ್ ತಗುಲಿ ಇಬ್ಭಾಗವಾಯ್ತು ದೇಹ!

    ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ವ್ಯಕ್ತಿಗೆ ಕ್ರೇನ್ ತಗುಲಿ ಇಬ್ಭಾಗವಾಯ್ತು ದೇಹ!

    ಚಿತ್ರದುರ್ಗ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಹೈಡ್ರೋಲಿಕ್ ಕ್ರೇನ್ ತಗಲಿ ದೇಹ ತುಂಡಾಗಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.

    ಹಿರಿಯೂರು ತಾಲೂಕಿನ ಧರ್ಮಪುರ ಬಳಿ ಈ ಅವಘಡ ಸಂಭವಿಸಿದೆ. 32 ವರ್ಷದ ಮೊಹಿದ್ದೀನ್ ಅವಘಡದಿಂದ ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದಾರೆ.

    ಘಟನೆಯಿಂದಾಗಿ ಮೊಹಿದ್ದೀನ್ ಅವರ ದೇಹದ ಅರ್ಧ ಭಾಗವೇ ತುಂಡಾಗಿದೆ. ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಳುವನ್ನು ಕೂಡಲೇ ಸ್ಥಳೀಯರು ಹಿರಿಯೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮೊಯಿದ್ದೀನ್ ಸ್ಥಿತಿ ಚಿಂತಾಜನಕವಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

    ಗಾಯಾಳು ಮೊಹಿದ್ದೀನ್ 108 ವಾಹನದ ಚಾಲಕರಾಗಿದ್ದಾರೆ. ಕ್ರೆನ್ ಖಾಸಗಿ ಸೋಲರ್ ಕಂಪನಿಗೆ ಸೇರಿದ್ದಾಗಿದ್ದು, ಘಟನೆಯ ಬಳಿಕ ಚಾಲಕ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

    ಈ ಸಂಬಂಧ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಶಾಸಕ ಡಿ.ಸುಧಾಕರ್ ಯುಗಾದಿ ಹಬ್ಬಕ್ಕೆ ವಿತರಿಸಿದ್ದ ಸೀರೆ, ಪಂಚೆಗೆ ಗ್ರಾಮಸ್ಥರಿಂದ ಬೆಂಕಿ

    ಶಾಸಕ ಡಿ.ಸುಧಾಕರ್ ಯುಗಾದಿ ಹಬ್ಬಕ್ಕೆ ವಿತರಿಸಿದ್ದ ಸೀರೆ, ಪಂಚೆಗೆ ಗ್ರಾಮಸ್ಥರಿಂದ ಬೆಂಕಿ

    ಚಿತ್ರದುರ್ಗ: ಹಿರಿಯೂರಿನ ಶಾಸಕ ಡಿ.ಸುಧಾಕರ್ ಚುನಾವಣೆಗೂ ಮುನ್ನವೇ ಮತದಾರರನ್ನು ಓಲೈಸಲು ಯುಗಾದಿ ಹಬ್ಬದ ಉಡುಗೊರೆಯಾಗಿ ನೀಡಿರೋ ಸೀರೆ, ಪಂಚೆಗಳಿಗೆ ಗ್ರಾಮಸ್ಥರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸುಧಾಕರ್ ಅವರ ಭಾವಚಿತ್ರ ಹಾಗೂ ಕ್ಯಾಲೆಂಡರ್‍ವುಳ್ಳ ಬ್ಯಾಗ್‍ಗಳಲ್ಲಿ ಸೀರೆ, ಪಂಚೆ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಕ್ಷೇತ್ರದ ಎಲ್ಲಾ ಹಳ್ಳಿಗಳ ಮತದಾರರಿಗೂ ಕಳೆದ ಒಂದು ತಿಂಗಳಿಂದ ಹಂಚುತ್ತಿದ್ದಾರೆ.

    ಗುರುವಾರ ಸಂಜೆ ಪಿಟ್ಲಾಲಿ ಗ್ರಾಮದಲ್ಲಿ ಈ ಉಡುಗೊರೆಗಳನ್ನು ಮನೆಮನೆಗೂ ಸುಧಾಕರ್ ಬೆಂಬಲಿಗರು ತಲುಪಿಸಿದ್ರು. ಆದ್ರೆ ಗೆದ್ದ ಮೇಲೆ ಇಲ್ಲಿಯವರೆಗೂ ಈ ಗ್ರಾಮದತ್ತ ಸುಳಿಯದೇ ನಿರ್ಲಕ್ಷ್ಯ ತೋರಿರೋ ಶಾಸಕರ ವಿರುದ್ಧ ಆಕ್ರೋಶಗೊಂಡಿರೋ ಜನರು, ತಮಗೆ ನೀಡಿದ್ದ ಉಡುಗೊರೆಗಳನ್ನು ಗ್ರಾಮದ ನಡುರಸ್ತೆಯಲ್ಲಿ ರಾಶಿ ಹಾಕಿ ಬೆಂಕಿಯಲ್ಲಿ ಸುಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.