Tag: hirekerur

  • ಅನೈತಿಕ ಸಂಬಂಧ; ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಮುಗಿಸಿದ ಪತ್ನಿ

    ಅನೈತಿಕ ಸಂಬಂಧ; ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಮುಗಿಸಿದ ಪತ್ನಿ

    – ಆರೋಪಿಗಳು ಅರೆಸ್ಟ್

    ಹಾವೇರಿ: ಪ್ರಿಯಕರನೊಂದಿಗೆ ಅನೈತಿಕ ಸಂಬಂಧ (Immoral relationship) ಹೊಂದಿದ್ದ ಪತ್ನಿ ತನ್ನ ಗಂಡನ ಪ್ರಾಣವನ್ನೇ ತೆಗೆದ ಘಟನೆ ಹಾವೇರಿ (Haveri) ಜಿಲ್ಲೆ ಹಿರೆಕೆರೂರು (Hirekerur) ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ನಡೆದಿದೆ.

    ಸಾಧಿಕ್ ಮತ್ತೂರ್ (30) ಕೊಲೆಯಾದ ಪತಿ. ಚಿಕ್ಕೇರೂರು ಗ್ರಾಮದ ಸಾಧಿಕ್ ಮತ್ತೂರು ಜೀವನೋಪಾಯಕ್ಕಾಗಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಸಾಧಿಕ್ ನಾಲ್ಕು ವರ್ಷದ ಹಿಂದೆ ಸಲ್ಮಾ ಎಂಬ ಸ್ವಗ್ರಾಮದ ಯುವತಿಯನ್ನೇ ಮದುವೆಯಾಗಿದ್ದ. ಪ್ರಾರಂಭದಲ್ಲಿ ಅನೋನ್ಯವಾಗಿದ್ದ ದಂಪತಿ ನಡುವೆ ಕೌಟುಂಬಿಕ ಕಲಹ ಪ್ರಾರಂಭವಾಗಿತ್ತು. ಆ ಕೌಟುಂಬಿಕ ಕಲಹದ ಹಿಂದೆ ಇದ್ದಿದ್ದು ಅನೈತಿಕ ಸಂಬಂಧ. ಸಲ್ಮಾ, ಜಾಫರ್ ಎಂಬ 28 ವರ್ಷದ ಯುವಕನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಇಬ್ಬರು ಸೇರಿ ಗಂಡನನ್ನು ಕೊಲೆ ಮಾಡಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಕನ್ನಡದಲ್ಲೇ ರೈಲ್ವೆ ಪರೀಕ್ಷೆ: ಸೋಮಣ್ಣ ಘೋಷಣೆ

    ಕೊಲೆಯಾದ ಪತಿ

    ಸಾಧಿಕ್‌ನನ್ನು ಮದುವೆ ಆಗುವ ಮೊದಲೇ ಜಾಫರ್ ಹಾಗೂ ಸಲ್ಮಾ ನಡುವೆ ಪ್ರೇಮ ಕಹಾನಿ ನಡೆದಿತ್ತಂತೆ. ಆದರೆ ಅದನ್ನು ಗುಟ್ಟಾಗಿಯೇ ಇಟ್ಟಿದ್ದ ಸಲ್ಮಾ ಮದುವೆ ಆದ ಬಳಿಕವೂ ಪ್ರಿಯಕರ ಜಾಫರ್ ಜೊತೆ ಸರಸ ಸಲ್ಲಾಪ ನಡೆಸಿದ್ದಳು. ಹೆಂಡತಿಯ ಕಾಮಪುರಾಣ ಗೊತ್ತಾಗಿ ಪತಿ ಸಾಧಿಕ್ ಎಚ್ಚರಿಕೆ ನೀಡಿದ್ದ. ನೀವೇನಾದರೂ ಈ ಸಂಬಂಧ ಮುಂದುವರಿಸಿದರೆ ನಿಮ್ಮಿಬ್ಬರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮನನೊಂದು ಎಚ್ಚರಿಕೆ ಕೂಡಾ ನೀಡಿದ್ದ. ಹೆಂಡತಿ ಬಳಿ ಇದ್ದ ಮೊಬೈಲ್ ಕೂಡಾ ಕಸಿದುಕೊಂಡಿದ್ದ. ಇದನ್ನೂ ಓದಿ: ಇಸ್ರೇಲ್‌ ದಾಳಿಗೆ ಹಿಜ್ಬುಲ್ಲಾ ಭದ್ರಕೋಟೆಯೇ ಛಿದ್ರ – ತುರ್ತು ಸಭೆಗೆ ವಿಶ್ವಸಂಸ್ಥೆ ತಯಾರಿ

    ಇಬ್ಬರ ಹೆಸರು ಬರೆದಿಟ್ಟು ಸತ್ತರೆ ನಾವು ಜೈಲುಪಾಲಾಗಬಹುದು ಎಂದು ಯೋಚಿಸಿ ಸಲ್ಮಾ ಪ್ರಿಯಕರನ ಜೊತೆ ಸೇರಿ ಗಂಡನ ಸಾವಿಗೆ ಮುಹೂರ್ತ ಫಿಕ್ಸ್ ಮಾಡಿದ್ದಳು. ಇದೀಗ ಪೊಲೀಸ್ ತನಿಖೆಯ ಬಳಿಕ ಪತ್ನಿ ಹಾಗೂ ಪ್ರಿಯಕರ ಜೈಲು ಪಾಲಾಗಿದ್ದಾರೆ. ಹಂಸಭಾವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಆರ್‌.ಅಶೋಕ್‌ ವಿರುದ್ಧ ಸಚಿವ ಪರಮೇಶ್ವರ್‌ ನೂರಾರು ಕೋಟಿ ಭೂ ಹಗರಣ ಬಾಂಬ್‌

  • ಮಹಿಳೆಯರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟಿ ಕೋಟಿ ಲೂಟಿ- ಆರೋಪಿ ಅಂದರ್

    ಮಹಿಳೆಯರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟಿ ಕೋಟಿ ಲೂಟಿ- ಆರೋಪಿ ಅಂದರ್

    ಹಾವೇರಿ: ಮೈಕ್ರೋಫೈನಾನ್ಸ್ (Microfinance) ಒಂದರ ಮ್ಯಾನೇಜರ್ ಹಾಗೂ ಕ್ಯಾಶಿಯರ್ ಸೇರಿ ಗ್ರಾಹಕರ ನಕಲಿ ದಾಖಲೆಗಳನ್ನು ಬಳಸಿ ಕೋಟ್ಯಂತರ ರೂ. ಹಣವನ್ನು ಸಾಲ (Loan) ಪಡೆದು ವಂಚಿಸಿರುವ ಘಟನೆ ಹಿರೇಕೆರೂರಿನಲ್ಲಿ (Hirekerur) ನಡೆದಿದೆ.

    ಇಲ್ಲಿನ ಮೈಕ್ರೋಫೈನಾನ್ಸ್‌ ಒಂದರ ಕ್ಯಾಶಿಯರ್ ಶಿವಾನಂದಪ್ಪ ಹಾಗೂ ಮ್ಯಾನೇಜರ್ ಬಸವರಾಜಯ್ಯ ಕೋಟಿ ಕೋಟಿ ಹಣ ವಂಚಿಸಿರುವ ಆರೋಪಿಗಳಾಗಿದ್ದಾರೆ. ಆರೋಪಿಗಳು ಗ್ರಾಮೀಣ ಭಾಗದ ಮಹಿಳೆಯರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಾಲ ನೀಡಿದ್ದೇವೆ ಎಂದು ತೋರಿಸಿ, ಸುಮಾರು 4,16,14000 ರೂ. ಹಣವನ್ನು ತಾವೇ ಪಡೆದು ಬಳಸಿಕೊಂಡಿದ್ದಾರೆ. ಇದನ್ನೂ ಓದಿ: ವ್ಯಕ್ತಿಗೆ ಇರಿದಿದ್ದ ಚಾಕುವಿನಿಂದ್ಲೇ ಪೊಲೀಸರ ಮೇಲೆ ಹಲ್ಲೆಗೆ ಯತ್ನ- ರೌಡಿಶೀಟರ್ ಕಾಲಿಗೆ ಗುಂಡೇಟು

    ಮೈಕ್ರೋಫೈನಾನ್ಸ್ ಶಾಖೆಯಲ್ಲಿ ಒಂದು ಲೆಕ್ಕ ಹಾಗೂ ಕೇಂದ್ರ ಕಚೇರಿಯಲ್ಲಿ ಮತ್ತೊಂದು ಹಣಕಾಸು ಲೆಕ್ಕಾಚಾರ ತೋರಿಸಿದ್ದು ಆರೋಪಿಗಳ ಕಳ್ಳಾಟ ಬಯಲಾಗಿದೆ. ಆರೋಪಿಗಳು ನಕಲಿ ಕ್ಯಾಶ್ ಬುಕ್ ಬಳಸಿ ಅನುಮಾನ ಮೂಡದಂತೆ 87,33,931 ರೂ. ಹಣವನ್ನು ಗ್ರಾಹಕರ ಹೆಸರಿನಲ್ಲಿ ಜಮೆ ಮಾಡಿದಂತೆ ತೋರಿಸಿದ್ದಾರೆ. ಆದರೆ ಕಚೇರಿಗೆ 8,60,000 ರೂ. ಮಾತ್ರ ಜಮೆಯಾಗಿದೆ. ಇದರಿಂದ ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ.

    ಈ ಸಂಬಂಧ ಫೈನಾನ್ಸ್ ಸಂಸ್ಥೆಯ ವಲಯದ ವ್ಯವಸ್ಥಾಪಕ ತಿಮ್ಮರಾಜು, ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಶಿವಾನಂದಪ್ಪನನ್ನು ಬಂಧಿಸಲಾಗಿದ್ದು, ಬಸವರಾಜಪ್ಪ ತಲೆಮರೆಸಿಕೊಂಡಿದ್ದಾನೆ. ಆತನನ್ನು ಬಂಧಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ಇದನ್ನೂ ಓದಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಯಾಣಿಸ್ತಿದ್ದ ಕಾರು ಅಪಘಾತ

  • ರಿಸಲ್ಟ್ ತನಕ ಮಾತ್ರ ಕಾಂಗ್ರೆಸ್‍ನವರ ಉತ್ಸಾಹ, ಆಮೇಲೆ ಬಿಜೆಪಿಯ ಉತ್ಸಾಹ: ಬಿಸಿ ಪಾಟೀಲ್

    ರಿಸಲ್ಟ್ ತನಕ ಮಾತ್ರ ಕಾಂಗ್ರೆಸ್‍ನವರ ಉತ್ಸಾಹ, ಆಮೇಲೆ ಬಿಜೆಪಿಯ ಉತ್ಸಾಹ: ಬಿಸಿ ಪಾಟೀಲ್

    ಹಾವೇರಿ: ರಾಜ್ಯದಲ್ಲಿ ಬಿಜೆಪಿ ಬಹುಮತದಿಂದ ಅಧಿಕಾರ ಕ್ಕೆ ಬರಲಿದೆ. ರಿಸಲ್ಟ್ ತನಕ ಮಾತ್ರ ಕಾಂಗ್ರೆಸ್‍ನ (Congress) ಉತ್ಸಾಹ ಆಮೇಲೆ ಬಿಜೆಪಿಯ (BJP) ಉತ್ಸಾಹವನ್ನು ರಾಜ್ಯ ನೋಡಲಿದೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್ (B.C Patil) ಹೇಳಿದ್ದಾರೆ.

    ಚುನಾವಣೋತ್ತರ ಸಮೀಕ್ಷೆಯಲ್ಲಿ (Exit Poll) ಕೆಲವರು ಬಿಜೆಪಿ, ಕೆಲವರು ಕಾಂಗ್ರೆಸ್ ಲೀಡ್ ಎನ್ನುತ್ತಿದ್ದಾರೆ. ಅಂತಿಮವಾಗಿ ಮತದಾರರ ತೀರ್ಪು ಮೇಲಾಗಲಿದೆ. ಈ ಬಾರಿ ರಾಜ್ಯದಲ್ಲಿ ಅತಂತ್ರ ಆಗುವುದಿಲ್ಲ. ಸ್ಪಷ್ಟ ಬಹುಮತದಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‍ನವರ ಸಂಭ್ರಮ ಕೂಸು ಹುಟ್ಟುವ ಮುನ್ನ ಕೂಲಾಯಿ ಹೊಲಿಸಿದರು ಎನ್ನುವ ಹಾಗೆ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ತಂದೆ-ತಾಯಿ, ಹೆಂಡತಿ, ಮಕ್ಕಳ ಜೊತೆ ಕಾಲ ಕಳೆಯಿರಿ: ಕಾರ್ಯಕರ್ತರಿಗೆ ಸಿದ್ದರಾಮಯ್ಯ ಸಲಹೆ

    ಹಿರೇಕೆರೂರು (Hirekerur) ಕ್ಷೇತ್ರದಲ್ಲಿ ಪ್ರಜ್ಞಾವಂತ ಮತದಾರರಿದ್ದಾರೆ. ಕ್ಷೇತ್ರದಲ್ಲಿ ನಾನು ಮಾಡಿದ ಅಭಿವೃದ್ಧಿ ಕೆಲಸಗಳು ನನ್ನ ಕೈ ಹಿಡಿದಿವೆ. ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ಸುಮಾರು 25 ಸಾವಿರ ಲೀಡ್ ನಿಂದ ಗೆಲ್ಲುವ ವಿಶ್ವಾಸ ಇದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ನಾವು ಮ್ಯಾಚ್ ಆಡೋಕೆ ಬಂದಿದ್ದೀವಿ, ಆಡಿ ಗೆಲ್ತೀವಿ: ಆರ್ ಅಶೋಕ್

  • ನಟಿ ಶ್ರುತಿ ವಿರುದ್ಧ ಹಿರೆಕೇರೂರಿನಲ್ಲಿ ದೂರು ದಾಖಲು

    ನಟಿ ಶ್ರುತಿ ವಿರುದ್ಧ ಹಿರೆಕೇರೂರಿನಲ್ಲಿ ದೂರು ದಾಖಲು

    ಬಿಜೆಪಿ (BJP) ನಾಯಕಿ ಹಾಗೂ ನಟಿ ಶೃತಿ (Shruti) ವಿರುದ್ಧ ದೂರು (Complaint) ದಾಖಲಾಗಿದೆ. ಕಳೆದ ವಾರದ ಹಿಂದೆ ಹಿರೆಕೇರೂರಿನಲ್ಲಿ (Hirekerur) ನಡೆದ ಸಮಾವೇಶದಲ್ಲಿ ಅವರು ಮಾನಹಾನಿಯಾಗುವಂತಹ ಭಾಷಣ ಮಾಡಿದ್ದರು.

    ನಟ ಹಾಗೂ ಮಾಜಿ ಸಚಿವ ಬಿ ಸಿ ಪಾಟೀಲ್ (BC Patil) ಪರ ಪ್ರಚಾರಕ್ಕೆ ಆಗಮಿಸಿದ್ದ ಶ್ರುತಿ, ಬಿಜೆಪಿ ಮಹಿಳಾ ಮೋರ್ಚಾ ಸಮಾವೇಶದಲ್ಲಿ ನಾಲಿಗೆಹರಿಬಿಟ್ಟಿದ್ದರು. ಪಕ್ಷ ಪಕ್ಷಗಳ ನಡುವೆ ವೈರತ್ವ, ದ್ವೇಷ, ಹಾಗೂ ಭಯ ಭೀತಿಯನ್ನುಂಟು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕಲಂ 505(2) ರಡಿ ಹಿರೆಕೇರೂರು ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಬೋಲ್ಡ್ ಅವತಾರ ತಾಳಿದ ‘ಕಬ್ಜ’ ಸುಂದರಿ ಶ್ರೀಯಾ

    ಶ್ರುತಿಯ ಭಾಷಣದ ಕುರಿತಾಗಿ ಹಿರೆಕೇರೂರು ನೋಡಲ್ ಅಧಿಕಾರಿ ಪಂಪಾಪತಿ ಎಂಬುವವರಿಂದ ದೂರು ನೀಡಿದ್ದರು. ಅಷ್ಟಕ್ಕೂ ಆ ಸಮಾವೇಶದಲ್ಲಿ ಶ್ರುತಿ, ‘ಮೇಜರ್ ಆಗಿ ರಾಜ್ಯದಲ್ಲಿ ಮೂರು ಪಕ್ಷಗಳಿವೆ. ಯಾವುದೇ ಬೇರೆ ಪಕ್ಷದ ಬಗ್ಗೆ ನಾನು ಜಾಸ್ತಿ ಮಾತನಾಡಲ್ಲ. ಆದರೆ ಒಂದೆ ಮಾತಿನಲ್ಲಿ ಹೇಳಿ ಮುಗಿಸಿಬಿಡ್ತೇನಿ. ನಿಮ್ಮ‌ ವಂಶ ಬಿಟ್ಟು ಬೇರೆಯವರ ವಂಶ ಅಭಿವೃದ್ದಿ ಆಗಬೇಕಾದ್ರೆ ಜೆಡಿಎಸ್ ಗೆ ಮತ ಹಾಕಿ. ನಿಮ್ಮ ವಂಶ ಬಿಟ್ಟು ಹೊರದೇಶದ ವಂಶ ಅಭಿವೃದ್ಧಿ ಆಗಬೇಕಾದ್ರೆ ಕಾಂಗ್ರೇಸ್ ಗೆ ಮತ ಹಾಕಿ. ಭಾರತದಲ್ಲಿ ಭಾರತೀಯರ ವಂಶ ಅಭಿವೃದ್ಧಿ ಆಗಬೇಕಾದ್ರೆ ಭಾರತೀಯ ಜನತಾ ಪಾರ್ಟಿ ಗೆ ಮತ ಹಾಕಿ ಎಂದು ವ್ಯಂಗ್ಯ ಮಾಡಿದ್ದರು.

    ಕೈ- ದಳ ಪಕ್ಷದ ಕುಟುಂಬ ರಾಜಕಾರಣ ಕುರಿತು ಅಪಹಾಸ್ಯ ಮಾಡಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು. ದೂರು ಸ್ವೀಕರಿಸಿರುವ ಹಿರೆಕೇರೂರು ಪೊಲೀಸರು ಶ್ರುತಿ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.

  • ಮತದಾನಕ್ಕೂ ಮುನ್ನ ಬಿ.ಸಿ.ಪಾಟೀಲ್ ಗೆಲುವು ಘೋಷಿಸಿದ ನಟಿ ಪ್ರೇಮಾ

    ಮತದಾನಕ್ಕೂ ಮುನ್ನ ಬಿ.ಸಿ.ಪಾಟೀಲ್ ಗೆಲುವು ಘೋಷಿಸಿದ ನಟಿ ಪ್ರೇಮಾ

    ಕೃಷಿ ಸಚಿವ, ನಟ ಬಿ.ಸಿ. ಪಾಟೀಲ್ (B.C. Patil) ಈ ಬಾರಿಯೂ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ನಟಿ ಪ್ರೇಮಾ (Prema) ಭವಿಷ್ಯ ನುಡಿದಿದ್ದಾರೆ. ಹಿರೇಕೆರೂರಿನಲ್ಲಿ (Hirekerur) ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದ ಅವರು ಬಿ.ಸಿ. ಪಾಟೀಲ್ ಅವರ ಮನೆಯಲ್ಲೇ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಪಾಟೀಲರು ಈ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಹಾಗಾಗಿ ಮತ್ತೊಮ್ಮೆ ಅವರು ಆಯ್ಕೆಯಾಗುತ್ತಾರೆ ಎಂದಿದ್ದಾರೆ.

    ‘ಕೌರವ’ (Kaurava) ಸಿನಿಮಾದಲ್ಲಿ ಬಿ.ಸಿ ಪಾಟೀಲ್ ಮತ್ತು ಪ್ರೇಮಾ ಒಟ್ಟಾಗಿ ನಟಿಸಿದ್ದಾರೆ. ಈ ಸಿನಿಮಾದ ಮೂಲಕ ಈ ಜೋಡಿ ಕೂಡ ಫೇಮಸ್ ಆಗಿತ್ತು. ಕೌರವ ಜೋಡಿ ಎಂದು ಈಗಲೂ ಗುರುತಿಸುವಷ್ಟು ಆ ಸಿನಿಮಾ ನೋಡುಗನ ಮೇಲೆ ಪ್ರಭಾವ ಬೀರಿತ್ತು. ಈ ಬಾಂಧವ್ಯದ ಕಾರಣಕ್ಕಾಗಿ ಪ್ರೇಮಾ ಹಿರೇಕೆರೂರಿಗೆ ಆಗಮಿಸಿ, ಪಾಟೀಲ್ ಪರವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ಪತಿ ದುಡ್ಡು ವೇಸ್ಟ್ ಮಾಡುತ್ತೀರಾ ಎಂದವರಿಗೆ ನಿವೇದಿತಾ ಗೌಡ ಖಡಕ್ ಉತ್ತರ

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಬಿ.ಸಿ.ಪಾಟೀಲರು ಫೋನ್ ಮಾಡಿದ್ದರು. ನಮ್ಮ ತಂದೆ ನಿಧನರಾಗಿದ್ದಾಗ ಅವರು ಬಂದಿದ್ದರು. ಹೀಗಾಗಿ ಅವರ ಮೇಲಿನ ಗೌರವದಿಂದಾಗಿ ನಾನು ಬಂದಿದ್ದೇನೆ. ನನಗೆ ರಾಜಕೀಯದ ಬಗ್ಗೆ ಗೊತ್ತಿಲ್ಲ. ಅವರು ಕರೆದಿದ್ದರು ಅನ್ನುವ ಒಂದೇ ಒಂದು ಕಾರಣಕ್ಕಾಗಿ ಬಂದಿದ್ದೇನೆ ಅಷ್ಟೇ’ ಎಂದು ಅವರು ಮಾತನಾಡಿದರು.

    ಬಿ.ಸಿ ಪಾಟೀಲ್ ರ ಪರವಾಗಿ ಪ್ರಚಾರ ಮಾಡಲು ಬರುತ್ತೀರಾ ಎನ್ನುವ ಪ್ರಶ್ನೆಗೆ, ‘ಪ್ರಚಾರದ ಬಗ್ಗೆ ನನಗೇನೂ ಗೊತ್ತಿಲ್ಲ. ನಾನು ಯಾವಾಗಲೂ ರಾಜಕೀಯದಿಂದ ದೂರ. ಪಾಟೀಲ್ ಅವರ ಜೊತೆ ಒಳ್ಳೆಯ ಬಾಂಧವ್ಯವಿದೆ. ಅದೇ ನನ್ನನ್ನು ಇಲ್ಲಿಗೆ ಕರೆತಂದಿದೆ’ ಎಂದಷ್ಟೇ ಪ್ರೇಮಾ ಹೇಳಿದರು.

  • ಬೈಕ್ ಮೇಲೆ ಕೂರಿಸಿಕೊಂಡು ಬಂದು ಗ್ರಾಮದ ವೃತ್ತದಲ್ಲಿ ಮಲಗಿಸಿದ್ರು – ಇದು ಕೊಲೆಯೆಂದ ಸಂಬಂಧಿಕರು

    ಬೈಕ್ ಮೇಲೆ ಕೂರಿಸಿಕೊಂಡು ಬಂದು ಗ್ರಾಮದ ವೃತ್ತದಲ್ಲಿ ಮಲಗಿಸಿದ್ರು – ಇದು ಕೊಲೆಯೆಂದ ಸಂಬಂಧಿಕರು

    ಶಿವಮೊಗ್ಗ: ದ್ವಿಚಕ್ರ ವಾಹನದಲ್ಲಿ ಇಂದು ಮುಂಜಾನೆ ವ್ಯಕ್ತಿಯೊಬ್ಬನನ್ನು ಕೂರಿಸಿಕೊಂಡು ಬಂದು ಜಿಲ್ಲೆಯ ಶಿಕಾರಿಪುರ (Shikaripur) ತಾಲೂಕಿನ ಮುತ್ತಳ್ಳಿ ಗ್ರಾಮದ ವೃತ್ತದ ಬಳಿ ಮಲಗಿಸಿ ಹೋಗಿರುವ ಘಟನೆ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಮಲಗಿಸಿ ಹೋದ ವ್ಯಕ್ತಿ ಮೃತಪಟ್ಟಿದ್ದು ಇದು ಕೊಲೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

    ಶಿರಾಳಕೊಪ್ಪ((Shiralakoppa) ಪೊಲೀಸ್ ಠಾಣೆ ವ್ಯಾಪ್ತಿಯ ಮುತ್ತಳ್ಳಿ ಗ್ರಾಮದ ಕೃಷಿ ಕಾರ್ಮಿಕನಾಗಿರುವ ಸೋಮಪ್ಪ (30) ಮೃತ ವ್ಯಕ್ತಿ. ಮೃತ ಸೋಮಪ್ಪ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಗಂಗಮ್ಮ ಎಂಬ ಮಹಿಳೆಯೊಂದಿಗೆ ಸ್ನೇಹವಿದ್ದು, ಆಕೆಯೇ ಕರೆಯಿಸಿ ಸೋಮಪ್ಪನನ್ನ ಕೊಲೆ ಮಾಡಿರುವುದಾಗಿ ಮೃತನ ಕುಟುಂಬ ಆರೋಪಿಸಿದೆ. ಇದನ್ನೂ ಓದಿ: ಹತ್ರಾಸ್ ರೇಪ್ ಕೇಸ್ – ಓರ್ವ ದೋಷಿ, ಮೂವರು ಖುಲಾಸೆ

    ಮೃತ ಸೋಮಪ್ಪನಿಗೆ ಈಗಾಗಲೇ ಮದುವೆಯಾಗಿದ್ದು, ಒಬ್ಬಳು ಮಗಳು ಇದ್ದಾಳೆ. ಆದರೆ ಪತ್ನಿಯಿಂದ ದೂರವಾಗಿದ್ದ. ಸೋಮಪ್ಪ ಈ ಹಿಂದೆ ಕೆಲಸಕ್ಕೆಂದು ಹಿರೇಕೆರೂರಿಗೆ ಹೋದಾಗ ಗಂಗಮ್ಮ ಎಂಬುವವರೊಂದಿಗೆ ಸಂಪರ್ಕ ಬೆಳೆದಿದೆ ಎಂದು ಆರೋಪಿಸಲಾಗಿದೆ.

    ಬುಧವಾರ ಹಿರೇಕೆರೂರಿಗೆ (Hirekerur) ಕರೆಸಿ ಥಳಿಸಲಾಗಿದೆ. ಥಳಿತಕ್ಕೆ ಸೋಮಪ್ಪ ಮೃತಪಟ್ಟಿದ್ದಾನೆ. ನಂತರ ಆತನನ್ನ ಬೈಕ್ ಮೇಲೆ ಕೂರಿಸಿಕೊಂಡು ಬಂದು ಗುರುವಾರ ಬೆಳಗ್ಗೆ ಗ್ರಾಮದ ಬಳಿ ಮಲಗಿಸಿ ಹೋಗಿದ್ದಾರೆ. ಸೋಮಪ್ಪನ ಮೇಲೆ ಸಾಕಷ್ಟು ಗಾಯಗಳಾಗಿವೆ. ಆತನ ಮೇಲೆ ತುಂಡು ಬಟ್ಟೆ ಬಿಟ್ಟರೆ ಬೇರೆ ಏನು ಇರಲಿಲ್ಲವೆಂದು ಕುಟುಂಬ ಆರೋಪಿಸಿದೆ.

    ಬೈಕ್ ಮೇಲೆ ಕೂರಿಸಿಕೊಂಡು ಬಂದವರನ್ನು ಚಾಟಿಕೊಪ್ಪದ ರಮೇಶ್, ಸುದೀಪ್ ಮತ್ತು ಗಂಗಮ್ಮನ ಮಗ ನಾಗರಾಜ್ ಎಂದು ಗುರುತಿಸಲಾಗಿದೆ. ಇವರೇ ಸೇರಿಕೊಂಡು ಕೊಲೆ ಮಾಡಿರುವುದಾಗಿ ಮೃತನ ತಂದೆ ಚಂದ್ರಪ್ಪ, ತಾಯಿ ಶಿವನಾಗಮ್ಮ ಆರೋಪಿಸಿದ್ದಾರೆ. ಆರೋಪಿಗಳ ಮೊಬೈಲ್‍ಗಳು ಸ್ವಿಚ್ ಆಫ್ ಆಗಿದ್ದು, ಇವರ ಪತ್ತೆಗಾಗಿ ಖಾಕಿಪಡೆ ಬಲೆ ಬೀಸಿದೆ. ಇದನ್ನೂ ಓದಿ: ಅತ್ತಿಗೆಯೊಂದಿಗೆ ಸಂಬಂಧ ಹೊಂದಿಲ್ಲ – ಸಾಬೀತುಪಡಿಸಲು ಅಗ್ನಿಪರೀಕ್ಷೆ ಮಾಡಿಕೊಂಡ ಭೂಪ 

  • ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ಗುದ್ದಿ ಯುವಕ ಸಾವು

    ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ಗುದ್ದಿ ಯುವಕ ಸಾವು

    ಹಾವೇರಿ: ಜಾನಪದ ಕ್ರೀಡೆ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ಗುದ್ದಿ ಯುವಕ ಮೃತಪಟ್ಟ ಘಟನೆ ಹಿರೇಕೆರೂರು ತಾಲೂಕಿನ ಕೋಡ ಗ್ರಾಮದಲ್ಲಿ ನಡೆದಿದೆ.

    ಕೋಡ ಗ್ರಾಮದ ಶಿವಪ್ಪ ಮಲ್ಲೂರ (34) ಮೃತ ಯುವಕ. ಸಂಕ್ರಾಂತಿ ಹಬ್ಬದ ನಿಮಿತ್ತ ಕೋಡ ಗ್ರಾಮದಲ್ಲಿ ಶುಕ್ರವಾರ ರಾಜ್ಯ ಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯ ಆಯೋಜಿಸಲಾಗಿತ್ತು. ಆದರೆ ಸ್ಪರ್ಧೆಯ ನಡೆಸಿದ್ದ ಕಮೀಟಿಯ ಸದಸ್ಯರಾಗಿದ್ದ ಶಿವಪ್ಪ ಅವರು, ಜನರನ್ನು ನಿಯತ್ರಿಸಲು ಮುಂದಾಗಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ.

    ಶಿವಪ್ಪ ಅವರ ಎದೆಯ ಭಾಗಕ್ಕೆ ಹೋರಿ ಗುದ್ದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರನ್ನು ಹಿರೇಕೆರೂರು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ ಮಾರ್ಗ ಮಧ್ಯದಲ್ಲಿಯೇ ಶಿವಪ್ಪ ಮೃತಪಟ್ಟಿದ್ದಾರೆ. ಮೃತದೇಹವನ್ನು ಹಿರೇಕೆರೂರು ತಾಲೂಕು ಸರಕಾರಿ ಆಸ್ಪತ್ರೆಗೆ ಇರಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • 15 ವಿದ್ಯಾರ್ಥಿಗಳಿದ್ದ ಶಾಲಾ ಬಸ್ ಪಲ್ಟಿ- ತಪ್ಪಿದ ಭಾರೀ ಅನಾಹುತ

    15 ವಿದ್ಯಾರ್ಥಿಗಳಿದ್ದ ಶಾಲಾ ಬಸ್ ಪಲ್ಟಿ- ತಪ್ಪಿದ ಭಾರೀ ಅನಾಹುತ

    ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ 15 ವಿದ್ಯಾರ್ಥಿಗಳಿದ್ದ ಶಾಲಾ ಬಸ್ ಪಲ್ಟಿಯಾದ ಘಟನೆ ಹಿರೇಕೆರೂರು ತಾಲೂಕಿನ ನೂಲಗೇರಿ ಗ್ರಾಮದ ಬಳಿ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.

    ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಅವರಿಗೆ ಸಂಬಂಧಿಸಿದ ಕೌರವ ಶಿಕ್ಷಣ ಸಂಸ್ಥೆಗೆ ಸೇರಿರುವ ಶಾಲಾ ಬಸ್ ಇದಾಗಿದೆ. ಬಸ್‍ನಲ್ಲಿದ್ದ 15 ಜನರ ಪೈಕಿ 8 ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಯಾಣ ಹಾನಿ ಸಂಭವಿಸಿಲ್ಲ.

    ಸುಮಾರು 20 ವಿದ್ಯಾರ್ಥಿಗಳನ್ನು ಮಂಗಳವಾರ ಸಂಜೆ ಶಾಲೆ ಬಿಟ್ಟ ನಂತರ ಮನೆ ಡ್ರಾಪ್ ಮಾಡಲಾಗುತ್ತಿತ್ತು. ಸಮೀಪದ ಗ್ರಾಮದ ಮಕ್ಕಳನ್ನು ಬಿಟ್ಟು, ನೂಲಗೇರಿ ಸುತ್ತಮುತ್ತಲಿನ ಗ್ರಾಮದ ಮಕ್ಕಳ ಡ್ರಾಪ್ ಮಾಡಲು ಬಂದಾಗ ಈ ದುರ್ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್, ರಸ್ತೆಯ ಪಕ್ಕದಲ್ಲಿ ಜಾರಿಗೊಂಡು ಹೋಗಿ ಪಲ್ಟಿಯಾಗಿದೆ.

    ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಹಿರೇಕೆರೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಹಿರೇಕೆರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಮದುವೆಯಾದ ಒಂದೂವರೆ ವರ್ಷದಲ್ಲೇ ಮಹಿಳೆ ಸಾವು- ಕೊಲೆ ಶಂಕೆ

    ಮದುವೆಯಾದ ಒಂದೂವರೆ ವರ್ಷದಲ್ಲೇ ಮಹಿಳೆ ಸಾವು- ಕೊಲೆ ಶಂಕೆ

    ಹಾವೇರಿ: ಮದುವೆಯಾದ ಒಂದೂವರೆ ವರ್ಷದಲ್ಲೇ ಮಹಿಳೆಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಕೋಡಮಗ್ಗಿ ಗ್ರಾಮದಲ್ಲಿ ನಡೆದಿದೆ.

    ಕೋಡಮಗ್ಗಿ ಗ್ರಾಮದ ಪ್ರಿಯಾಂಕಾ ನಾಯ್ಕ (24) ಮೃತ ಮಹಿಳೆ. ಪ್ರಿಯಾಂಕಾ ಒಂದೂವರೆ ವರ್ಷದ ಹಿಂದೆ ಶಿವಮೊಗ್ಗ ತಾಲೂಕಿನ ಸಿರಿಗೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿರುವ ವಿಜಯ ಬೋಜಾ ನಾಯ್ಕ ಹೊತೆಗೆ ವಿವಾಹವಾಗಿದ್ದರು.

    ಮದುವೆ ನಂತರ ಪತಿ ವಿಜಯ ಪ್ರಿಯಾಂಕಾಳಿಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದ. ಅಷ್ಟೇ ಅಲ್ಲದೆ ಇಂದು ಕುಟುಂಬಸ್ಥರ ಜೊತೆಗೆ ಸೇರಿ ಪ್ರಿಯಾಂಕಾಳನ್ನ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಅನುಮಾನ ಬಾರದಂತೆ ನೇಣು ಹಾಕಿ ಪರಾರಿಯಾಗಿದ್ದಾನೆ ಎಂದು ಪ್ರಿಯಾಂಕಾ ಪೋಷಕರು ಆರೋಪಿಸಿದ್ದಾರೆ.

    ವಿಜಯ ಮಹಿಳೆಯೊಬ್ಬರ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರವಾಗಿ ವಿಜಯ, ಪ್ರಿಯಾಂಕಾ ದಂಪತಿ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಆದರೆ ಭಾನುವಾರ ಆರೋಪಿ ಪತ್ನಿಯನ್ನು ಹೊಡೆದು ಕೊಲೆ ಮಾಡಿದ್ದಾನೆ ಎಂದು ಪ್ರಿಯಾಂಕಾ ಪೋಷಕರು ದೂರಿದ್ದಾರೆ.

    ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಹಿರೇಕೆರೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಿಯಾಂಕಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಿರೇಕೆರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಮುಂಬೈ ನೋಟು ತಗೊಂಡು ಕಾಂಗ್ರೆಸ್‍ಗೆ ವೋಟ್ ಹಾಕಿ: ಸಿದ್ದರಾಮಯ್ಯ

    ಮುಂಬೈ ನೋಟು ತಗೊಂಡು ಕಾಂಗ್ರೆಸ್‍ಗೆ ವೋಟ್ ಹಾಕಿ: ಸಿದ್ದರಾಮಯ್ಯ

    ಹಾವೇರಿ: ಅನರ್ಹ ಶಾಸಕ ಬಿ.ಸಿ.ಪಾಟೀಲ್ ಅವರು ಮುಂಬೈಗೆ ಹೋಗಿ ತೆಗೆದುಕೊಂಡು ಬಂದಿರುವ ನೋಟು ತಗೊಂಡು ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ವಿಶಿಷ್ಟವಾಗಿ ಮತದಾರರಿಗೆ ಮನವಿ ಮಾಡಿಕೊಂಡಿದ್ದಾರೆ.

    ಹಿರೇಕೆರೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎಚ್.ಬನ್ನಿಕೋಡ್ ಪರ ಬೃಹತ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಅನರ್ಹ ಶಾಸಕ ಬಿ.ಸಿ.ಪಾಟೀಲ್ ಒಬ್ಬ ನಾಲಾಯಕ್. ಅನರ್ಹರು ಅಂದ್ರೆ ನಾಲಾಯಕ್. ಅದಕ್ಕೆ ಅವರನ್ನು ಸ್ಪೀಕರ್ ಅನರ್ಹರರನ್ನಾಗಿ ಮಾಡಿದ್ದಾರೆ. ಬಿ.ಸಿ.ಪಾಟೀಲ್ ಒಳ್ಳೆಯ ಪೊಲೀಸ್ ಅಧಿಕಾರಿಯಾಗಿರಲಿಲ್ಲ. ಅವರು ಮತ ಪಡೆದ ನಂತರ ಜನರ ಅಭಿಪ್ರಾಯ ಕೇಳದೆ ದುಡ್ಡು ತೆಗೆದುಕೊಂಡು ಬಿಜೆಪಿಗೆ ಹೋಗಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಕುಮಾರಸ್ವಾಮಿಯಂತಹ ವಿಶ್ವಾಸದ್ರೋಹ ಯಾರೂ ಮಾಡಿಲ್ಲ- ಬಿ.ಸಿ.ಪಾಟೀಲ್

    ಬಿ.ಸಿ.ಪಾಟೀಲ್ ಅವರು ಈಗ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ನಾನು ದುಡ್ಡು ತಗೊಂಡು ಕಾಂಗ್ರೆಸ್‍ಗೆ ಹೋಗಿರಲಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪಕ್ಷದಿಂದ ನನ್ನನ್ನು ಉಚ್ಛಾಟನೆ ಮಾಡಿದ ನಂತರ ನಾನು ಅಹಿಂದ ಸಂಘಟನೆ ಕಟ್ಟಿದೆ. ಅದಾದ ಬಳಿಕ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ಬಿ.ಸಿ.ಪಾಟೀಲ್ ಅವರು ನನ್ನ ವಿರುದ್ಧ ಮಾನನಷ್ಠ ಮೊಕದ್ದಮೆ ಹಾಕುವುದಾದರೆ ಹಾಕಲಿ ನೋಡೋಣ. ಆಮೇಲೆ ಅವರೇ ಸಿಲುಕಿಕೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು.

    ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿ ಅವರನ್ನ ಲೇವಡಿ ಮಾಡುವ ಮುನ್ನ ಬಿಜೆಪಿ ಕಾರ್ಯಕರ್ತರಂತೆ ಮೋದಿ ಮೋದಿ ಮೋದಿ ಅಂತ ಕೂಗಿ ವ್ಯಂಗ್ಯವಾಡಿದರು. ಮೋದಿಯವರ ಅಚ್ಛೇ ದಿನ್ 6 ವರ್ಷವಾದರೂ ಬಂದಿಲ್ಲ. ಮುಂದೆನೂ ಬರುವುದಿಲ್ಲ ಎಂದು ಕಟುಕಿದರು.