Tag: Hirebagawadi

  • ಇಂದು 30 ಮಂದಿಗೆ ಕೊರೊನಾ- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 565ಕ್ಕೆ ಏರಿಕೆ

    ಇಂದು 30 ಮಂದಿಗೆ ಕೊರೊನಾ- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 565ಕ್ಕೆ ಏರಿಕೆ

    -ಬೆಂಗಳೂರಿನಲ್ಲಿ ಒಂದೇ ದಿನ 10 ಮಂದಿಗೆ ಕೊರೊನಾ
    -ರೋಗಿ ನಂಬರ್ 292ರಿಂದ ಐವರಿಗೆ ಸೋಂಕು

    ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಅದೇ. ಇಂದು 8 ಮಂದಿಗೆ ಕೊರೊನಾ ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 565ಕ್ಕೆ ಏರಿಕೆ ಕಂಡಿದೆ. ಬೆಳಗ್ಗೆ ಬಿಡುಗಡೆಯಾದ ವರದಿಯಲ್ಲಿ ಬೆಂಗಳೂರಿನ ಮೂವರಿಗೆ ಸೋಂಕು ತಗುಲಿತ್ತು. ಸಂಜೆ ಬಿಡುಗಡೆಯಾದ ಬುಲೆಟಿನ್ ನಲ್ಲಿ ಒಟ್ಟು ಏಳು ಮಂದಿಗೆ ಸೋಂಕು ತಗುಲಿದೆ.

    ಬೆಳಗಾವಿಯಲ್ಲಿ ಇಂದು ಒಟ್ಟು 14 ಜನರಿಗೆ ಕೊರೊನಾ ಪತ್ತೆಯಾಗಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯ ಹಾಟ್‍ಸ್ಪಾಟ್ ತಾಲೂಕು ಹಿರೇಬಾಗೇವಾಡಿಯಲ್ಲೇ 12 ಮಂದಿಗೆ ಸೋಂಕು ದೃಢಪಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ. ಉಳಿದಂತೆ ಬೆಂಗಳೂರಿನಲ್ಲಿ ಹತ್ತು, ವಿಜಯಪುರಲ್ಲಿ ಇಬ್ಬರಿಗೆ, ತುಮಕೂರು, ಕಲಬುರಗಿ, ದಕ್ಷಿಣ ಕನ್ನಡ, ದಾವಣಗೆರೆ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಕೊರೊನಾ ತಗುಲಿದೆ.

    ಸೋಂಕಿತರ ವಿವರ:
    ಬೆಳಗ್ಗೆ ಬಿಡುಗಡೆಯಾದ ಬುಲೆಟಿನ್
    1. ರೋಗಿ-536: ದಕ್ಷಿಣ ಕನ್ನಡ ಜಿಲ್ಲೆಯ 58 ವರ್ಷದ ಮಹಿಳೆ. ರೋಗಿ-501ರ ಸಂಪರ್ಕದಲ್ಲಿದ್ದರು.
    2. ರೋಗಿ-537: ವಿಜಯಪುರದ 62 ವರ್ಷದ ವೃದ್ಧ. ರೋಗಿ-221ರ ಸಂಪರ್ಕ ಹೊಂದಿದ್ದರು.
    3. ರೋಗಿ-538: ವಿಜಯಪುರದ 33 ವರ್ಷದ ಮಹಿಳೆ. ರೋಗಿ-221ರ ಸಂಪರ್ಕದಲ್ಲಿದ್ದರು.
    4. ರೋಗಿ-539: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 24 ವರ್ಷದ ಮಹಿಳೆ. ರೋಗಿ-469, 483 ಮತ್ತು 484ರ ದ್ವಿತೀಯ ಸಂಪರ್ಕದಲ್ಲಿದ್ದರು.
    5. ರೋಗಿ-540: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 27 ವರ್ಷದ ಪುರುಷ. ರೋಗಿ-483 ದ್ವಿತೀಯ ಸಂಪರ್ಕ ಹೊಂದಿದ್ದರು.
    6. ರೋಗಿ-541: ಬೆಳಗಾವಿ ಜಿಲ್ಲೆ ಹುಕ್ಕೇರಿಯ 09 ವರ್ಷದ ಬಾಲಕ. ರೋಗಿ-293ರ ಸಂಪರ್ಕದಲ್ಲಿ ಇದ್ದರು.
    7. ರೋಗಿ-542: ಬೆಳಗಾವಿ ಜಿಲ್ಲೆ ಹುಕ್ಕೇರಿಯ 75 ವೃದ್ಧೆ. ರೋಗಿ-293ರ ಸಂಪರ್ಕದಲ್ಲಿ ಇದ್ದರು.
    8. ರೋಗಿ-543: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 24 ವರ್ಷದ ಮಹಿಳೆ. ರೋಗಿ-486ರ ದ್ವಿತೀಯ ಸಂಪರ್ಕ ಹೊಂದಿದ್ದರು.
    9. ರೋಗಿ-543: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 18 ವರ್ಷದ ಯುವಕ. ರೋಗಿ-486ರ ದ್ವಿತೀಯ ಸಂಪರ್ಕ ಹೊಂದಿದ್ದರು.
    10. ರೋಗಿ-545: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 48 ವರ್ಷದ ಮಹಿಳೆ. ರೋಗಿ-494ರ ದ್ವಿತೀಯ ಸಂಪರ್ಕದಲ್ಲಿದ್ದರು.
    11. ರೋಗಿ-546: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 50 ವರ್ಷದ ಪುರುಷ. ರೋಗಿ-483ರ ದ್ವಿತೀಯ ಸಂಪರ್ಕ ಹೊಂದಿದ್ದರು.
    12. ರೋಗಿ-547: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 27 ವರ್ಷದ ಮಹಿಳೆ. ರೋಗಿ-496 ಮತ್ತು 494ರ ದ್ವಿತೀಯ ಸಂಪರ್ಕದಲ್ಲಿದ್ದರು.
    13. ರೋಗಿ-548: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 43 ವರ್ಷದ ಪುರುಷ. ರೋಗಿ-484ರ ದ್ವಿತೀಯ ಸಂಪರ್ಕ ಹೊಂದಿದ್ದರು.
    14. ರೋಗಿ-549: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 16 ವರ್ಷದ ಯುವಕ. ರೋಗಿ-486ರ ದ್ವಿತೀಯ ಸಂಪರ್ಕ ಹೊಂದಿದ್ದರು.
    15. ರೋಗಿ-550: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 36 ವರ್ಷದ ಮಹಿಳೆ. ರೋಗಿ-496ರ ದ್ವಿತೀಯ ಸಂಪರ್ಕದಲ್ಲಿದ್ದರು.
    16. ರೋಗಿ-551: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 08 ವರ್ಷದ ಬಾಲಕಿ. ರೋಗಿ-293ರ ಸಂಪರ್ಕದಲ್ಲಿದ್ದರು.
    17. ರೋಗಿ-552: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 36 ವರ್ಷದ ಪುರುಷ. ರೋಗಿ-496ರ ಸಂಪರ್ಕದಲ್ಲಿದ್ದರು.
    18. ರೋಗಿ-553: ತುಮಕೂರಿನ 65 ವರ್ಷದ ವೃದ್ಧೆ. ರೋಗಿ-535ರ ಸಂಪರ್ಕದಲ್ಲಿದ್ದರು.
    19. ರೋಗಿ-554: ಬೆಂಗಳೂರಿನ 20 ವರ್ಷದ ಯುವಕ. ಕಂಟೈನ್‍ಮೆಂಟ್ ವಲಯ (ಬಿಬಿಎಂಪಿ ವಾರ್ಡ್ ಸಂಖ್ಯೆ-135)ರ ಸಂಪರ್ಕದಲ್ಲಿದ್ದರು.
    20. ರೋಗಿ-555: ಬೆಂಗಳೂರಿನ 28 ವರ್ಷದ ಪುರುಷ. ಕಂಟೈನ್‍ಮೆಂಟ್ ವಲಯ (ಬಿಬಿಎಂಪಿ ವಾರ್ಡ್ ಸಂಖ್ಯೆ-135)ರ ಸಂಪರ್ಕದಲ್ಲಿದ್ದರು.
    21. ರೋಗಿ-556: ದಾವಣಗೆರೆಯ 69 ವರ್ಷದ ವೃದ್ಧ. ಸಂಪರ್ಕ ಪತ್ತೆಯಾಗಿಲ್ಲ.
    22. ರೋಗಿ-557: ಬೆಂಗಳೂರಿನ 63 ವರ್ಷಸ ವೃದ್ಧ. ಸಂಪರ್ಕ ಪತ್ತೆಯಾಗಿಲ್ಲ.

    ಸಂಜೆ ಬಿಡುಗಡೆಯಾದ ಬುಲೆಟಿನ್
    23. ರೋಗಿ-558: ಕಲಬುರಗಿಯ 35 ವರ್ಷದ ಮಹಿಳೆ, ರೋಗಿ ನಂಬರ್ 314ರ ಜೊತೆ ಸಂಪರ್ಕ
    24. ರೋಗಿ 559: ಬೆಂಗಳೂರಿನ 15 ವರ್ಷದ ಬಾಲಕ. ರೋಗಿ ನಂಬರ್ 292ರ ಜೊತೆ ಸಂಪರ್ಕ
    25. ರೋಗಿ 560: ಬೆಂಗಳೂರಿನ 60 ವರ್ಷದ ಮಹಿಳೆ. ರೋಗಿ ನಂಬರ್ 292ರ ಜೊತೆ ಸಂಪರ್ಕ
    26. ರೋಗಿ 561: ಬೆಂಗಳೂರಿನ 4 ವರ್ಷದ ಹೆಣ್ಣು ಮಗು. ರೋಗಿ ನಂಬರ್ 292ರ ಜೊತೆ ಸಂಪರ್ಕ
    27. ರೋಗಿ 562: ಬೆಂಗಳೂರಿನ 16 ವರ್ಷದ ಬಾಲಕಿ. ರೋಗಿ ನಂಬರ್ 292ರ ಜೊತೆ ಸಂಪರ್ಕ
    28. ರೋಗಿ 563: ಬೆಂಗಳೂರಿನ 13 ವರ್ಷದ ಬಾಲಕಿ. ರೋಗಿ ನಂಬರ್ 292ರ ಜೊತೆ ಸಂಪರ್ಕ
    29. ರೋಗಿ 564: ಬೆಂಗಳೂರಿನ 35 ವರ್ಷದ ಪುರುಷ. ರೋಗಿ ನಂಬರ್ 281ರ ಜೊತೆ ಸಂಪರ್ಕ
    30. ರೋಗಿ 565: ಬೆಂಗಳೂರಿನ 64 ವರ್ಷದ ಮಹಿಳೆ. ಜ್ವರದ ಲಕ್ಷಣಗಳು ಕಂಡು ಬಂದಿವೆ.