Tag: Hirakuraru

  • ಅತ್ತೆ-ಸೊಸೆ ಜಗಳ ಕೊಲೆಯಲ್ಲಿ ಅಂತ್ಯ!

    ಅತ್ತೆ-ಸೊಸೆ ಜಗಳ ಕೊಲೆಯಲ್ಲಿ ಅಂತ್ಯ!

    ಹಾವೇರಿ: ಸಣ್ಣ ವಿಚಾರಕ್ಕೆ ಅತ್ತೆ-ಸೊಸೆ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಕೈ ಕೈ ಮಿಲಾಯಿಸಿದ ಪರಿಣಾಮ ಅತ್ತೆಯೊಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಆಲದೇಗಿ ಗ್ರಾಮದಲ್ಲಿ ನಡೆದಿದೆ.

    ಗಂಗಮ್ಮ ಕಜ್ಜರಿ (70) ಮೃತ ಅತ್ತೆ. ಆರೋಪಿ ಸೊಸೆ ಲಲಿತಾ. ಸುಮಾರು ದಿನಗಳಿಂದ ಅತ್ತೆ ಗಂಗಮ್ಮ ಹಾಗೂ ಸೊಸೆ ಲಲಿತಾ ನಡುವೆ ನಿತ್ಯವೂ ಪದೇ ಪದೇ ಜಗಳ ನಡೆಯುತ್ತಿತ್ತು.

    ಮಂಗಳವಾರ ಬೆಳಿಗ್ಗೆ ಸೊಸೆ ಲಲಿತಾ ಹಾಗೂ ಅತ್ತೆ ಗಂಗಮ್ಮನ ನಡುವೆ ಮಾತಿನ ಚಕಮಕಿ ನಡೆದಿದ್ದು, ನಂತರ ಒಬ್ಬರಿಗೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆರೋಪಿ ಲಲಿತಾ ತನ್ನ ಅತ್ತೆ ಗಂಗಮ್ಮಳ ತಲೆಗೆ ಬಲವಾಗಿ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಗಂಗಮ್ಮ ಅವರನ್ನು ರಾಣೆಬೆನ್ನೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೇ ಗಂಗಮ್ಮ ಮೃತಪಟ್ಟಿದ್ದಾರೆ.

    ಈ ಕುರಿತು ಹಂಸಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸೊಸೆ ಲಲಿತಾಳನ್ನು ಬಂಧಿಸಲಾಗಿದೆ.

  • ದೇವಾಲಯದ ಕಾಣಿಕೆ ಹುಂಡಿ ಒಡೆದು ಹಣ ದೋಚಿ ಪರಾರಿಯಾದ ಕಳ್ಳರು

    ದೇವಾಲಯದ ಕಾಣಿಕೆ ಹುಂಡಿ ಒಡೆದು ಹಣ ದೋಚಿ ಪರಾರಿಯಾದ ಕಳ್ಳರು

    ಹಾವೇರಿ: ನಸುಕಿನಲ್ಲಿ ದೇವಸ್ಥಾನದ ಹುಂಡಿಯನ್ನು ಒಡೆದು ಹಣ ಕಳ್ಳತನ ಮಾಡಿರುವ ಘಟನೆ ಜಿಲ್ಲೆ ಹಿರೇಕೆರೂರು ತಾಲೂಕು ವಡೆಯರಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.

    ಗ್ರಾಮದ ಆರಾಧ್ಯ ದೈವ ಆಂಜನೇಯ ಸ್ವಾಮಿ ಕಾಣಿಕೆ ಹುಂಡಿಯ ಕೆಳಭಾಗದಲ್ಲಿದ್ದ ಬೀಗ ಮುರಿದು ಕಳ್ಳರು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಕಳೆದ ಒಂದು ವರ್ಷದಿಂದ ಕಾಣಿಕೆಯ ಹಣವನ್ನ ಆಡಳಿತ ಮಂಡಳಿ ತೆಗೆದಿರಲಿಲ್ಲ.

    ಹುಂಡಿಯಲ್ಲಿ ಸುಮಾರು 15 ಸಾವಿರಕ್ಕೂ ನಗದು ಇತ್ತು ಎನ್ನಲಾಗಿದೆ. ಅಲ್ಲದೇ ಈ ಹಿಂದೆ ಎರಡು ಬಾರಿಯೂ ದೇವಸ್ಥಾನದ ಹುಂಡಿಯ ಹಣ ಕಳ್ಳತನವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಹಂಸಭಾವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಕಳ್ಳರನ್ನ ಪತ್ತೆಹಚ್ಚಿ ಶಿಕ್ಷೆ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.