Tag: Hippargi Barage

  • ನಿರಂತರ ಸುರಿಯುತ್ತಿರುವ ಮಳೆ- ಬಾಗಲಕೋಟೆಯ ಹಿಪ್ಪರಗಿ ಬ್ಯಾರೇಜ್ ಭರ್ತಿ

    ನಿರಂತರ ಸುರಿಯುತ್ತಿರುವ ಮಳೆ- ಬಾಗಲಕೋಟೆಯ ಹಿಪ್ಪರಗಿ ಬ್ಯಾರೇಜ್ ಭರ್ತಿ

    ಬಾಗಲಕೋಟೆ: ಮಹಾರಾಷ್ಟ್ರದ ಸಾಹ್ಯಾದ್ರಿ ಪರ್ವತಶ್ರೇಣಿಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಯಲ್ಲಿ ಬಾಗಲಕೋಟೆಯ ಹಿಪ್ಪರಗಿ ಬ್ಯಾರೇಜ್ ತುಂಬಿ ಹರಿಯುತ್ತಿದೆ.

    ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಬಳಿ ಇರುವ ಹಿಪ್ಪರಗಿ ಬ್ಯಾರೇಜ್ ಈಗಿನ ನೀರಿನ ಮಟ್ಟ 519.35 ಮೀಟರ್ ತಲುಪಿದೆ. ಬ್ಯಾರೇಜ್ ನಲ್ಲಿ 1.908 ಟಿಎಂಸಿ ನೀರು ಸಂಗ್ರಹವಾಗಿದೆ.

    ನಿರಂತರ ಮಳೆಯಿಂದ ಕೃಷ್ಣಾ ನದಿಯ ಒಳಹರಿವು ಕೂಡ ಹೆಚ್ಚಾಗಿದೆ. ಒಳಹರಿವು 1 ಲಕ್ಷ ಕ್ಯೂಸೆಕ್ ಹರಿತ್ತಾ ಇದೆ. ಹೊರಹರಿವು 1 ಲಕ್ಷದ ಏಳು ಸಾವಿರ ಕ್ಯೂಸೆಕ್ ಹೋಗತ್ತಾ ಇದೆ. ಜಿಲ್ಲೆಯಲ್ಲಿ ಸದ್ಯ ಪ್ರವಾಹ ಭೀತಿ ಇಲ್ಲ. ಹೀಗಾಗಿ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.