Tag: Hindutva

  • ಮುಸ್ಲಿಮರು ದುರ್ಬಲರಾಗ್ತಿದ್ದಾರೆ ಅಂತ ಉಗ್ರರಿಗೆ ಅನ್ನಿಸಿದೆ – ಪಹಲ್ಗಾಮ್ ದಾಳಿಗೆ ಹಿಂದುತ್ವವೇ ಕಾರಣವಂತೆ: ರಾಬರ್ಟ್ ವಾದ್ರಾ

    ಮುಸ್ಲಿಮರು ದುರ್ಬಲರಾಗ್ತಿದ್ದಾರೆ ಅಂತ ಉಗ್ರರಿಗೆ ಅನ್ನಿಸಿದೆ – ಪಹಲ್ಗಾಮ್ ದಾಳಿಗೆ ಹಿಂದುತ್ವವೇ ಕಾರಣವಂತೆ: ರಾಬರ್ಟ್ ವಾದ್ರಾ

    – ಸೋನಿಯಾ ಗಾಂಧಿ ಅಳಿಯ ಭಯೋತ್ಪಾದಕ ಕೃತ್ಯವನ್ನ ನಾಚಿಕೆಯಿಲ್ಲದೇ ಸಮರ್ಥಿಸಿಕೊಳ್ಳುತ್ತಾರೆ: ಮಾಳವಿಯಾ

    ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಪೈಶಾಚಿತ ಕೃತ್ಯವನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರ ಪತಿ ರಾಬರ್ಟ್ ವಾದ್ರಾ (Robert Vadra) ನೀಡಿರುವ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಾಶ್ಮೀರದ ನರಮೇಧವನ್ನು ಬಿಜೆಪಿಯ ಹಿಂದುತ್ವದ ಜೊತೆಗೆ ಲಿಂಕ್ ಮಾಡಿ ಟೀಕೆಗೆ ಗುರಿಯಾಗಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಭಾರತದಲ್ಲಿ ಅಲ್ಪಸಂಖ್ಯಾತರು ಅನಾನುಕೂಲ ಮತ್ತು ತೊಂದರೆ ಅನುಭವಿಸುತ್ತಿದ್ದಾರೆ. ಬಿಜೆಪಿಯ ಹಿಂದುತ್ವದ ಪ್ರಚೋದನೆಯೇ ಇದಕ್ಕೆ ಕಾರಣ ಎಂದು ದೂಷಿಸಿದರು. ಮುಂದುವರಿದು.. ನಮ್ಮ ದೇಶದಲ್ಲಿ ಇಂದಿನ ಬಿಜೆಪಿ ಸರ್ಕಾರ (BJP Government) ಪದೇ ಪದೇ ಹಿಂದುತ್ವದ ಬಗ್ಗೆ ಮಾತನಾಡುವುದನ್ನು ನಾವು ನೋಡುತ್ತಿದ್ದೇವೆ. ಮತ್ತೊಂದೆಡೆ ಅಲ್ಪಸಂಖ್ಯಾತರು ತೊಂದರೆ ಅನುಭವಿಸುತ್ತಿದ್ದಾರೆ. ಈಗ ದುಷ್ಕೃತ್ಯವನ್ನು ಏಕೆ ಮಾಡಿದ್ದಾರೆ ಅಂತ ವಿಶ್ಲೇಷಣೆ ಮಾಡಿದ್ರೆ, ನಮ್ಮ ದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ವಿಭಜನೆ (ಒಡಕು) ಉಂಟಾಗಿದೆ ಎಂದು ಹೇಳಿದ್ದಾರೆ.

    ಗುರುತನ್ನು ಪರಿಶೀಲಿಸಿ, ಹಿಂದೂಗಳನ್ನು ಮಾತ್ರವೇ ಕೊಲ್ಲುವ ಭಯೋತ್ಪಾದಕರ ಕೃತ್ಯವು ಪ್ರಧಾನಿ ಮೋದಿ (PM Modi) ಅವರಿಗೆ ನೀಡಿದ ಸಂದೇಶವಾಗಿದೆ. ಹಿಂದೂಗಳು ಎಲ್ಲಾ ಮುಸ್ಲಿಮರಿಗೆ (Muslims) ತೊಂದರೆ ಕೊಡುತ್ತಿದ್ದಾರೆ ಅಂತ ಈ ರೀತಿಯ ಉಗ್ರ ಸಂಘಟನೆಗಳಿಗೆ ಅನ್ನಿಸಿದೆ. ಗುರುತನ್ನು ಪತ್ತೆ ಹಚ್ಚಿ ನಂತರ ಯಾರನ್ನೊ ಕೊಲ್ಲುವುದು ಪ್ರಧಾನಿಗೆ ನೀಡಿದ ಸಂದೇಶವಾಗಿದೆ. ಕಾರಣ, ಮುಸ್ಲಿಮರು ದುರ್ಬಲರಾಗಿದ್ದಾರೆ ಎನ್ನುವ ಭಾವನೆ ಉಗ್ರ ಸಂಘಟನೆಗಳಲ್ಲಿ ಇದೆ. ಅಲ್ಪಸಂಖ್ಯಾತರಲ್ಲಿ ದುರ್ಬಲರೆಂಬ ಭಾವನೆಯಿದೆ. ನಮ್ಮ ದೇಶದಲ್ಲಿ ನಾವು ಸುರಕ್ಷಿತರು ಮತ್ತು ಜಾತ್ಯತೀತರು ಎಂಬ ಭಾವನೆ ಸರ್ಕಾರದ ಮಟ್ಟದಿಂದ ಬರಬೇಕು. ಆಗ ಈ ರೀತಿಯ ಕೃತ್ಯಗಳು ನಡೆಯುವುದನ್ನು ನಾವು ನೋಡುವುದಕ್ಕೆ ಆಗಲ್ಲ ಎಂದು ಹೇಳಿದ್ದಾರೆ.

    ಈ ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವಿಯಾ, ರಾಬರ್ಟ್‌ ವಾದ್ರಾ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಸೋನಿಯಾ ಗಾಂಧಿ ಅವರ ಅಳಿಯ ಭಯೋತ್ಪಾದಕ ಕೃತ್ಯವನ್ನು ನಾಚಿಕೆಯಿಲ್ಲದೇ ಸಮರ್ಥಿಸಿಕೊಳ್ಳುತ್ತಾರೆ. ಭಯೋತ್ಪಾದಕರನ್ನು ಖಂಡಿಸುವ ಬದಲು ಅವರಿಗೆ ರಕ್ಷಣೆ ನೀಡುತ್ತಾರೆ. ಪಾಕಿಸ್ತಾನಿ ಭಯೋತ್ಪಾದಕರು ಮಾಡಿದ ದೌರ್ಜನ್ಯಗಳಿಗೆ ಭಾರತದ ಮೇಲೆ ಹೊಣೆಯನ್ನು ಹೊರಿಸುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಅಸಮಾಧಾನ ಹೊರಹಾಕಿದ್ದಾರೆ.

  • ಹೊಸ ಹಿಂದೂ ಪಕ್ಷ ಸ್ಥಾಪನೆಯಾಗುತ್ತಾ? ಏನಿದು ಯತ್ನಾಳ್‌ ಲೆಕ್ಕಾಚಾರ?

    ಹೊಸ ಹಿಂದೂ ಪಕ್ಷ ಸ್ಥಾಪನೆಯಾಗುತ್ತಾ? ಏನಿದು ಯತ್ನಾಳ್‌ ಲೆಕ್ಕಾಚಾರ?

    ಬೆಂಗಳೂರು: ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿ ಬಿಜೆಪಿಯಿಂದ (BJP) 6 ವರ್ಷ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ್‌ ಯತ್ನಾಳ್ (Basangouda Patil Yatnal) ಈಗ ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ. ಅಭಿಮಾನಿಗಳಿಂದ ಒತ್ತಡ ಇದೆ ಎಂದಿರುವ ಯತ್ನಾಳ್, ರಾಜ್ಯವೆಲ್ಲಾ ಸುತ್ತಾಡಿ ಜನಾಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

    ಏನಿದು ಯತ್ನಾಳ್‌ ಲೆಕ್ಕಾಚಾರ?
    ಯತ್ನಾಳ್ ಪ್ರಖರ ಹಿಂದುತ್ವವಾದಿಯಾಗಿದ್ದು ಅದೇ ಅವರ ಶಕ್ತಿ. ಹಿಂದುತ್ವ (Hindutva) ಪರಿಕಲ್ಪನೆ ಇಟ್ಟುಕೊಂಡು ಪಕ್ಷ ಸ್ಥಾಪನೆ ಮಾಡುವುದು ದೇಶದಲ್ಲಿ ಹೊಸದಲ್ಲ. ಈ ಹಿಂದೆ ಮಹಾರಾಷ್ಟ್ರದಲ್ಲಿ ಬಾಳಾ ಠಾಕ್ರೆ ಈ ಕಲ್ಪನೆ ಇಟ್ಟುಕೊಂಡು ಶಿವಸೇನೆ ಸ್ಥಾಪಿಸಿದ್ದರು. ಆದರೆ ಕರ್ನಾಟಕದ ಮಟ್ಟಿಗೆ ಹೊಸದು. ಇದನ್ನೂ ಓದಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಮೋದಿ ನಿವೃತ್ತಿ ಘೋಷಣೆ ಬಗ್ಗೆ ಮಾತನಾಡಿದ್ದಾರೆ: ಸಂಜಯ್ ರಾವತ್

    ಹಿಂದುತ್ವದ ಜೊತೆಗೆ ಉತ್ತರ ಕರ್ನಾಟಕ ಅಭಿವೃದ್ಧಿ ಉದ್ದೇಶ ಹೊಸ ಪಕ್ಷಕ್ಕೆ ಬೂಸ್ಟ್ ಸಿಗಲಿದೆ. ಹಿಂದುತ್ವ ಪರ ಇರುವ ನಾಯಕರಿಂದ ಪ್ರತ್ಯಕ್ಷ, ಪರೋಕ್ಷ ಬೆಂಬಲ ಸಿಗುವ ಸಾಧ್ಯತೆಯಿದೆ.

    ಹಿಂದುತ್ವ ಪರ ಇರುವ ಸಂಘಟನೆಗಳಿಂದಲೂ ಬೆಂಬಲ ಸಿಗಲಿದೆ.  ಯತ್ನಾಳ್ ಉಚ್ಛಾಟನೆಯಿಂದ ಹಿಂದುತ್ವದ ಸರ್ಕಲ್‌ನಲ್ಲಿ ಅನುಕಂಪದ ಅಲೆ ಈಗ ಸ್ವಲ್ಪ ಎದ್ದಿದೆ. ಹಿಂದುತ್ವವಾದಿ ನಾಯಕರು ಒಂದೇ ವೇದಿಕೆಯಲ್ಲಿ ಸಮಾಗಮವಾಗಲಿದ್ದಾರೆ. ಇದನ್ನೂ ಓದಿ: ವಿಜಯೇಂದ್ರನ ಚಮಚಾಗಳಿದ್ರೆ ಪ್ರಶ್ನೆ ಕೇಳ್ಬೇಡಿ – ಮಾಧ್ಯಮಗಳ ಮುಂದೆ ಸಿಡಿಮಿಡಿಗೊಂಡ ಯತ್ನಾಳ್

    ಹೊಸ ಪಕ್ಷ ಯಶಸ್ವಿಯಾಗುತ್ತಾ ಇಲ್ವೋ ಎನ್ನುವುದಕ್ಕೆ ಚುನಾವಣೆ ಉತ್ತರ ನೀಡಲಿದೆ. ಆದರೆ ಬಿಜೆಪಿಯಿಂದ ಹೊರ ಬಂದ ಕಾರಣ ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಪಂಚಮಸಾಲಿಗಳು ನಿರ್ಣಾಯಕರಾಗಿರುವ ಕೆಲ ಕ್ಷೇತ್ರಗಳಲ್ಲಿ ಬಿಜೆಪಿಗೆ ಹೊಡೆತ ಬೀಳುವ ಸಾಧ್ಯತೆಯಿದೆ.

     

  • ಮುಸ್ಲಿಮರು ನಮ್ಮ ಹಿಂದುತ್ವ ಬೆಂಬಲಿಸುತ್ತಾರೆ.. ಬಿಜೆಪಿ ಹಿಂದುತ್ವ ತಿರಸ್ಕರಿಸುತ್ತಾರೆ: ಉದ್ಧವ್‌ ಠಾಕ್ರೆ

    ಮುಸ್ಲಿಮರು ನಮ್ಮ ಹಿಂದುತ್ವ ಬೆಂಬಲಿಸುತ್ತಾರೆ.. ಬಿಜೆಪಿ ಹಿಂದುತ್ವ ತಿರಸ್ಕರಿಸುತ್ತಾರೆ: ಉದ್ಧವ್‌ ಠಾಕ್ರೆ

    ಮುಂಬೈ: ಮುಸ್ಲಿಂ ಸಮುದಾಯವು ತಮ್ಮ ಮನೆಗಳಲ್ಲಿ ಒಲೆಗಳನ್ನು ಉರಿಸುವ ಹಿಂದುತ್ವದ ಬ್ರ್ಯಾಂಡ್ ಅನ್ನು ಬೆಂಬಲಿಸುತ್ತದೆ. ಆದರೆ ಅವರ ಮನೆಗಳನ್ನು ಸುಡುವ ಬಿಜೆಪಿ ತಿರಸ್ಕರಿಸುತ್ತದೆ ಎಂದು ಶಿವಸೇನೆಯ ಉದ್ಧವ್ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.

    ಮುಂಬೈನಲ್ಲಿ ಶಿವಸೇನಾ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಠಾಕ್ರೆ, ಮುಸ್ಲಿಂ ಸಮುದಾಯವು ನಮ್ಮೊಂದಿಗೆ ಬರುತ್ತಿದೆ. ನಾನು ಶಿವಸೇನೆಯ ಪಕ್ಷದ ಮುಖ್ಯಸ್ಥ ಮತ್ತು ‘ಹಿಂದೂ ಹೃದಯ ಸಾಮ್ರಾಟ್’ನ ಮಗ ಎಂದು ನಿಮಗೆ ತಿಳಿದಿಲ್ಲವೇ? ನಾನೇ ಕಟ್ಟಾ ಹಿಂದೂ ಆಗಿದ್ದು, ಯಾಕೆ ನನ್ನ ಜೊತೆ ಬರುತ್ತಿಯಾ ಅಂತ ನಾನು ಅವರನ್ನು (ಮುಸ್ಲಿಮರು) ಕೇಳುತ್ತೇನೆ. ನಿಮ್ಮ ಹಿಂದುತ್ವಕ್ಕೂ ಬಿಜೆಪಿಯ ಹಿಂದುತ್ವಕ್ಕೂ ವ್ಯತ್ಯಾಸವಿದೆ ಎಂದು ನಮಗೆ ತಿಳಿದಿದೆ. ನಿಮ್ಮ ಹಿಂದುತ್ವ ನಮ್ಮ ಮನೆಯಲ್ಲಿ ಒಲೆ ಉರಿಸುತ್ತದೆ. ಬಿಜೆಪಿ ಮನೆ ಸುಟ್ಟು ಹಾಕುತ್ತದೆ ಎಂಬುದು ಮುಸ್ಲಿಮರ ಅಭಿಪ್ರಾಯ ಎಂದು ಠಾಕ್ರೆ ತಿಳಿಸಿದ್ದಾರೆ. ಇದನ್ನೂ ಓದಿ: ಉದ್ಯೋಗ ಕೊಡಿಸುವ ನೆಪದಲ್ಲಿ 20 ಮಹಿಳೆಯರ ಮೇಲೆ ಗ್ಯಾಂಗ್‌ರೇಪ್ – ಇಬ್ಬರ ವಿರುದ್ಧ ದೂರು ದಾಖಲು

    ರಾಮ ನಮ್ಮ ಹೃದಯದಲ್ಲಿದ್ದಾನೆ. ಇದು ನಮ್ಮ ಹಿಂದುತ್ವ ಮತ್ತು ನಾವು ದೇಶಭಕ್ತ ಹಿಂದೂಗಳು ಎಂದರಲ್ಲದೇ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪೂರ್ವ ರಾಜ್ಯದ ಮತದಾರರನ್ನು ಸೆಳೆಯಲು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡಿತು ಎಂದು ಠಾಕ್ರೆ ಟೀಕಿಸಿದ್ದಾರೆ.

    ಈ ಹಿಂದೆ ಎಷ್ಟು ಭಾರತ ರತ್ನ ನೀಡಬಹುದು? ಯಾರಿಗೆ ಮತ್ತು ಯಾವಾಗ ನೀಡಬಹುದು ಎಂಬ ನಿಯಮಗಳಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನಸ್ಸಿಗೆ ಬಂದವರಿಗೆ ಅದನ್ನು ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಏಕಾಂಗಿಯಾಗಿ 370 ಸ್ಥಾನಗಳ ಗಡಿ ಮುಟ್ಟಲಿದೆ: ಪ್ರಧಾನಿ ಮೋದಿ

    ಇಷ್ಟು ವರ್ಷಗಳ ನಂತರ ಕರ್ಪೂರಿ ಠಾಕೂರ್ ಅವರನ್ನು ಗುರುತಿಸುತ್ತಿರುವುದು ಸಂತಸ ತಂದಿದೆ. ಭಾರತ ರತ್ನ ನೀಡಿದವರು ತಪ್ಪು ಎಂದು ನಾನು ಹೇಳುತ್ತಿಲ್ಲ. ಬಿಹಾರದಲ್ಲಿ ಅವರಿಗೆ (ಬಿಜೆಪಿ) ಮತಗಳು ಬೇಕು. ಅದಕ್ಕಾಗಿಯೇ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ ಎಂದು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

  • ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾದಲ್ಲಿ ಹಿಂದುತ್ವ ಹೇರಿಕೆಯಾಗಿದೆ : ಲೇಖಕ ಮುರುಗವೇಲು ಆರೋಪ

    ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾದಲ್ಲಿ ಹಿಂದುತ್ವ ಹೇರಿಕೆಯಾಗಿದೆ : ಲೇಖಕ ಮುರುಗವೇಲು ಆರೋಪ

    ಣಿರತ್ನಂ (Mani Ratnam) ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಪೊನ್ನಿಯಿನ್ ಸೆಲ್ವನ್ 2’ (Ponniyin Selvan) ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು, ತುಂಬಿದ ಪ್ರದರ್ಶನ ಕಾಣುತ್ತಿದೆ. ವಿಶ್ವದಾದ್ಯಂತ ಚಿತ್ರಕ್ಕೆ ಅತ್ಯದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಮಣಿರತ್ನಂ ಅವರ ಅತ್ಯುತ್ತಮ ಸಿನಿಮಾಗಳಲ್ಲಿ ಇದು ಒಂದು ಎಂದು ಬಣ್ಣಿಸಲಾಗುತ್ತಿದೆ. ಆದರೆ, ತಮಿಳಿನ ಖ್ಯಾತ ಲೇಖಕ ಮುರುಗವೇಲು (Murugavelu) ನಿರ್ದೇಶಕ ಮಣಿರತ್ನಂ ವಿರುದ್ಧ ಕಿಡಿಕಾರಿದ್ದಾರೆ.

    ಪೊನ್ನಿಯಿನ್ ಸೆಲ್ವನ್ ಸುಳ್ಳು ಕಥೆಯನ್ನು ಹೇಳುವ ಸಿನಿಮಾ. ಇತಿಹಾಸವನ್ನು ತಿರುಚಲಾಗಿದೆ. ಅಲ್ಲದೇ ಮಣಿರತ್ನಂ ಈ ಸಿನಿಮಾದಲ್ಲಿ ಹಿಂದುತ್ವವನ್ನು (Hindutva) ಹೇರಿಕೆ ಮಾಡಿದ್ದಾರೆ. ಪೊನ್ನಿಯಿನ್ ಸೆಲ್ವನ್ ಕಾದಂಬರಿಯಲ್ಲಿ ಕಲ್ಕಿ ಬರೆದಿದ್ದೇ ಬೇರೆ, ಸಿನಿಮಾದಲ್ಲಿ ತೋರಿಸಿದ್ದೇ ಬೇರೆ. ಮಂದಾಕಿನಿ ಸ್ವಾತಂತ್ರ್ಯವನ್ನು ನಿರ್ದೇಶಕರಿಗೆ ಸಹಿಸಿಕೊಳ್ಳಲು ಆಗಿಲ್ಲ. ಮಹಿಳೆಯರು ಬೇರೆ ಪುರುಷನ ಬಗ್ಗೆ ಯೋಚಿಸಬಾರದು ಎನ್ನುವ ಕೆಟ್ಟ ಸಂದೇಶವನ್ನು ಸಾರಿದ್ದಾರೆ ಎಂದಿದ್ದಾರೆ ಲೇಖಕ ಮುರುಗವೇಲು.

    ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಬ್ಯಾನರ್ ನಡಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಸ್ಟಾರ್ ತಾರಾಬಳಗವಿರುವ ಸಿನಿಮಾ ‘ಪೊನ್ನಿಯಿನ್ ಸೆಲ್ವನ್ -2’. ಕಾರ್ತಿ (Karthi), ಐಶ್ವರ್ಯಾ ರೈ (Aishwarya Rai), ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಶಾ, ಶರತ್ ಕುಮಾರ್, ಪ್ರಕಾಶ್ ರಾಜ್ ದಿಗ್ಗಜ ಕಲಾವಿದರ ಸಮಾಗಮ ಚಿತ್ರದಲ್ಲಿದೆ. ಇದನ್ನೂ ಓದಿ:ಹೊಸ ಪ್ರಾಜೆಕ್ಟ್‌ನಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ ಸಮಂತಾ- ಅನುಷ್ಕಾ ಶರ್ಮಾ

    ಮಣಿರತ್ನಂ ನಿರ್ದೇಶನ ಒಂದು ಶಕ್ತಿಯಾದ್ರೆ, ಎ.ಆರ್.ರೆಹಮಾನ್ ಮ್ಯೂಸಿಕ್, ರವಿವರ್ಮನ್ ಕ್ಯಾಮೆರಾ ವರ್ಕ್, ಸ್ಟಾರ್ ಹಾಗೂ ಅನುಭವಿ ಕಲಾವಿದರ ನಟನೆ, ಅದ್ದೂರಿ ಮೇಕಿಂಗ್ ಎಲ್ಲವೂ ಸೀಕ್ವೆಲ್ 2 ಮೇಲೆ ನಿರೀಕ್ಷೆ ಹೆಚ್ಚಿಸಿತ್ತು. ನಿರೀಕ್ಷೆಯನ್ನು ನಿರ್ದೇಶಕರು ತುಂಬಿಕೊಟ್ಟಿದ್ದಾರೆ.

  • ಪುತ್ತಿಲ ಕಾಂಗ್ರೆಸ್, ಭಯೋತ್ಪಾದನೆ, ಲವ್ ಜಿಹಾದ್ ವಿರುದ್ಧ ಮಾತನಾಡಿಲ್ಲ: ಕಲ್ಲಡ್ಕ ಪ್ರಭಾಕರ ಭಟ್‌

    ಪುತ್ತಿಲ ಕಾಂಗ್ರೆಸ್, ಭಯೋತ್ಪಾದನೆ, ಲವ್ ಜಿಹಾದ್ ವಿರುದ್ಧ ಮಾತನಾಡಿಲ್ಲ: ಕಲ್ಲಡ್ಕ ಪ್ರಭಾಕರ ಭಟ್‌

    ಮಂಗಳೂರು: ಅರುಣ್ ಕುಮಾರ್ ಪುತ್ತಿಲ (Arun Kumar Puthila) ಕಾಂಗ್ರೆಸ್ (Congress) ವಿರುದ್ಧ, ಭಯೋತ್ಪಾದನೆ ಹಾಗೂ ಲವ್ ಜಿಹಾದ್ ವಿರುದ್ಧ ಮಾತನಾಡಿಲ್ಲ. ಆದರೆ ಹಿಂದುತ್ವಕ್ಕೋಸ್ಕರ ಕೆಲಸ ಮಾಡುವ ಬಿಜೆಪಿ ವಿರುದ್ಧ ಮಾತನಾಡುವುದು ಎಂತಹ ಹಿಂದುತ್ವ (Hindutva) ಎಂದು ಆರ್‌ಎಸ್‌ಎಸ್ (RSS) ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ (Kalladka Prabhakar Bhat) ಪುತ್ತೂರು ಬಿಜೆಪಿ ಬಂಡಾಯ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಪುತ್ತೂರಿನಲ್ಲಿ (Puttur) ಅರುಣ್ ಕುಮಾರ್ ಪುತ್ತಿಲ ಹಿಂದುತ್ವದ ರಕ್ಷಣೆ ಮಾಡುವುದಾಗಿ ಪಕ್ಷೇತರರಾಗಿ ಅಖಾಡಕ್ಕಿಳಿದಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗಿಂತ (BJP) ದೊಡ್ಡ ಹಿಂದುತ್ವ ಯಾವುದು? ಬಿಜೆಪಿಯ ಗೆಲುವೇ ಹಿಂದುತ್ವದ ಗೆಲುವು. ಬಿಜೆಪಿಯ ಗೆಲುವಿಗಾಗಿ ಆರ್‌ಎಸ್‌ಎಸ್ ಕಾರ್ಯಕರ್ತರು ಎಲ್ಲಾ ಕಡೆಯಿಂದ ಬಂದಿದ್ದಾರೆ. ಹಾಗಾಗಿ ನಾವು ಶೇ.100ರಷ್ಟು ಬಿಜೆಪಿಗೋಸ್ಕರ ಕೆಲಸ ಮಾಡುತ್ತೇವೆ ಎಂದರು. ಇದನ್ನೂ ಓದಿ: ಮೋದಿ ನಾಗರಹಾವು ಆದ್ರೆ ಸೋನಿಯಾ ಗಾಂಧಿ ವಿಷಕನ್ಯೆನಾ – ಯತ್ನಾಳ್ ಪ್ರಶ್ನೆ

    2008ರಲ್ಲಿ ಶಕುಂತಲಾ ಶೆಟ್ಟಿ (Shakunthala Shetty) ಸಹ ಇದೇ ರೀತಿ ನಿಂತಿದ್ದರು. ಪುತ್ತೂರಿನಲ್ಲಿ ಬಿಜೆಪಿ ಬೆಳೆಸಿದ ರಾಮ್ ಭಟ್ ಜೊತೆಗಿದ್ದರು. ಆಗಲೂ ಏನೂ ಆಗಿಲ್ಲ. ಈಗಿನದ್ದು ಭ್ರಮೆ. ಇಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ. ನಾನು ಬಿಜೆಪಿ ಸದಸ್ಯ ಅಲ್ಲ. ಆದರೆ ಎಲ್ಲರಿಗೂ ಜವಾಬ್ದಾರಿಯಿದೆ. ಚುನಾವಣೆ (Election) ಹೊತ್ತಲ್ಲಿ ರಾಷ್ಟ್ರದ ಹಿತಕ್ಕಾಗಿ ಕೆಲಸ ಮಾಡುತ್ತೇವೆ. ನಾವು ನಿಷ್ಕ್ರಿಯರಾದರೆ ಭಯೋತ್ಪಾದಕರು ಬೆಳೆದುಬಿಡುತ್ತಾರೆ. ಪುತ್ತಿಲ ಅಫಿಡವಿಟ್‌ನಲ್ಲಿ ದೇವಸ್ಥಾನದ ಹಣದ ಅವ್ಯವಹಾರ ಕೇಸ್ ಇದೆ. ಒಬ್ಬರಿಗೆ ಹೊಡೆದ ಕೇಸ್ ಹಾಗೂ ಒಬ್ಬ ಹೆಣ್ಣು ಮಗಳಿಗೆ ಅಪಘಾತ ಮಾಡಿ ಮಾನವೀಯತೆ ಇಲ್ಲದೆ ಓಡಿಹೋದ ಕೇಸ್ ಇವರ ಮೇಲಿದೆ. ಇವರ ಮೇಲೆ 307ರಂತಹ ಸೆಕ್ಷನ್ ಇದೆ. ಇವರದ್ದು ಹಿಂದುತ್ವನಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮೋದಿ ರೋಡ್ ಶೋಗೆ ಸಿದ್ಧವಾಗಿದೆ ಸ್ಪೆಷಲ್‌ ಬುಲೆಟ್ ಪ್ರೂಫ್ ವಾಹನ

  • ವೀಸಾ ರದ್ದು: ಬೆಂಬಲಕ್ಕೆ ನಿಂತ ಕಿಶೋರ್ ಗೆ ಥ್ಯಾಂಕ್ಸ್ ಹೇಳಿದ ಚೇತನ್

    ವೀಸಾ ರದ್ದು: ಬೆಂಬಲಕ್ಕೆ ನಿಂತ ಕಿಶೋರ್ ಗೆ ಥ್ಯಾಂಕ್ಸ್ ಹೇಳಿದ ಚೇತನ್

    ಟ ಚೇತನ್ (Chetan Ahimsa)  ವೀಸಾ ರದ್ದು (Visa Cancellation) ಮಾಡಿರುವ ನಡೆಯನ್ನು ನಟ ಕಿಶೋರ್ (Kishore) ವಿಭಿನ್ನವಾಗಿ ಪ್ರಶ್ನಿಸಿದ್ದರು. ಇದು ಅತಿರೇಕದ ನಡೆ ಎಂದು ಅದನ್ನು ಬಣ್ಣಿಸಿದ್ದರು. ವೀಸಾ ರದ್ದು ಕುರಿತಂತೆ ಚೇತನ್ ಅವರಿಗೆ ಈವರೆಗೂ ಯಾರು ಬೆಂಬಲ ಸೂಚಿಸಿರಲಿಲ್ಲ. ಮೊದಲ ಬಾರಿಗೆ ಕಿಶೋರ್ ಈ ನಡೆಯನ್ನು ಪ್ರಶ್ನಿಸಿದ್ದರು. ಹೀಗಾಗಿ ಚೇತನ್ ಧನ್ಯವಾದಗಳನ್ನು ತಿಳಿಸಿದ್ದಾರೆ. ತಮ್ಮ ಬೆಂಬಲಕ್ಕೆ ನಿಂತಿದ್ದನ್ನು ಸ್ಮರಿಸಿದ್ದಾರೆ.

    ಇನ್ಸ್ಟಾದಲ್ಲಿ ಈ ಕುರಿತು ಸುದೀರ್ಘವಾಗಿ ಬರೆದಿರುವ ಕಿಶೋರ್, ‘ಹಿಂದುತ್ವ (Hindutva) ಅನ್ನುವ ಪದ ವರ್ತಮಾನದ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದೂ ಧರ್ಮ ಅಲ್ಲ. ನಿಜವಾದ ಹಿಂದೂ ಧರ್ಮ, ಸಕಲರನ್ನೂ ಒಳಗೊಂಡ ವಸುಧೆಯೇ ಒಂದು ಕುಟುಂಬವೆಂದು ನೋಡುವ ವಿಶಾಲ ಮನೋಸ್ಥಿತಿ’ ಎಂದಿದ್ದಾರೆ. ಇದನ್ನೂ ಓದಿ: ಸಲಿಂಗ ವಿವಾಹ ವಿಚಾರದಲ್ಲಿ ಸುಪ್ರೀಂ ಮಧ್ಯಪ್ರವೇಶ ಮಾಡಬಾರದು – ಕೇಂದ್ರದ ಪರ ವಾದ

    ಮುಂದುವರೆದು, ‘ಹಿಂದುತ್ವ ಎನ್ನುವ ಪದ ಬಳಕೆಯಾಗುತ್ತಿರುವುದು ಒಂದು ಪಕ್ಷದ, ಒಂದು ಸಂಘದ, ಅಧಿಕಾರಕ್ಕಾಗಿ ಒಡೆದಾಳುವ, ಪರದ್ವೇಷದ, ಮೂಲಭೂತವಾದಿ ವೈದಿಕ ಸಂಪ್ರದಾಯದ ಸಂಕುಚಿತ ಪರಿಕಲ್ಪನೆಯಾಗಿಯಷ್ಟೆ.ಹಾಗಾಗಿ ಈ ಜೀವ ವಿರೋಧಿ ರಾಜಕೀಯದ ಟೀಕೆಯಿಂದ ಹಿಂದೂಗಳಿಗೆಲ್ಲರಿಗೂ ಅಪಮಾನವಾಯಿತೆನ್ನುವುದು ಎಷ್ಟು ಉಚಿತ’ ಎಂದು ಪ್ರಶ್ನೆ ಮಾಡಿದ್ದಾರೆ.

    ‘ಹಾಗೆ ಅವಮಾನ ಪಡಲೇಬೇಕೆಂದರೆ ವೈದಿಕ ಪರಂಪರೆ ಇಂದಿಗೂ ಪ್ರತಿಪಾದಿಸುತ್ತಿರುವ ನಮ್ಮಲ್ಲೇ ಇರುವ ಜಾತಿ ಪದ್ಧತಿ, ಅಸ್ಪೃಶ್ಯತೆ, ಲಿಂಗ ಬೇಧ ಇವುಗಳಿಂದಲ್ಲವೇ? ಆ ನಿಟ್ಟಿನಲ್ಲಿ ನಮ್ಮನ್ನು ನಾವು ತಿದ್ದಿಕೊಂಡು ಹಿಂದೂ ಧರ್ಮವನ್ನು ಎಲ್ಲರಿಗೂ ಮಾದರಿಯಾಗಿಸಬೇಕಲ್ಲವೇ? ನಮ್ಮ ತಪ್ಪುಗಳನ್ನು ಎತ್ತಿ ತೋರಿಸುವ ನಮ್ಮದೇ ಜನರನ್ನು ನಿಂದಿಸುವ, ಆರೋಪಿಸುವ, ಜೈಲಿಗೆ ಹಾಕುವ ಅಥವಾ ಗಡೀಪಾರು ಮಾಡುವ ಅತಿರೇಕಕ್ಕೆ ಹೋಗುವ ಬದಲು’ ಎಂದು ಬರೆದಿದ್ದಾರೆ ಕಿಶೋರ್.

  • ಚೇತನ್ ವೀಸಾ ರದ್ದು: ಸರ್ಕಾರದ ಅತಿರೇಕದ ನಡೆ ಎಂದ ನಟ ಕಿಶೋರ್

    ಚೇತನ್ ವೀಸಾ ರದ್ದು: ಸರ್ಕಾರದ ಅತಿರೇಕದ ನಡೆ ಎಂದ ನಟ ಕಿಶೋರ್

    ಸಾಮಾಜಿಕ ಹೋರಾಟಗಾರ, ನಟ ಚೇತನ್ (Chetan Ahimsa) ಅವರ ವೀಸಾ ರದ್ದು (visa cancellation) ಮಾಡಿರುವ ಸರಕಾರದ ನಡೆಯನ್ನು ವಿಭಿನ್ನವಾಗಿ ಪ್ರಶ್ನಿಸಿದ್ದಾರೆ ನಟ ಕಿಶೋರ್‌. ಇದುಸರಕಾರದ ಅತಿರೇಕದ ನಡೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಿಶೋರ್‌ (Kishor)  ಬರೆದುಕೊಂಡಿದ್ದಾರೆ. ಅಲ್ಲದೇ, ಹಿಂದುತ್ವವವನ್ನು ಗುತ್ತಿಗೆ ಪಡೆದವರ ವಿರುದ್ಧವೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇನ್ಸ್ಟಾದಲ್ಲಿ ಈ ಕುರಿತು ಸುದೀರ್ಘವಾಗಿ ಬರೆದಿರುವ ಕಿಶೋರ್, ‘ಹಿಂದುತ್ವ (Hindutva) ಅನ್ನುವ ಪದ ವರ್ತಮಾನದ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದೂ ಧರ್ಮ ಅಲ್ಲ. ನಿಜವಾದ ಹಿಂದೂ ಧರ್ಮ, ಸಕಲರನ್ನೂ ಒಳಗೊಂಡ ವಸುಧೆಯೇ ಒಂದು ಕುಟುಂಬವೆಂದು ನೋಡುವ ವಿಶಾಲ ಮನೋಸ್ಥಿತಿ’ ಎಂದಿದ್ದಾರೆ. ಇದನ್ನೂ ಓದಿ:ನಟಿ ಸಮಂತಾ ಭಗವದ್ಗೀತೆ ಪಾಠ ಮಾಡಿದ್ದು ಯಾರಿಗೆ?

    ಮುಂದುವರೆದು, “ಹಿಂದುತ್ವ ಎನ್ನುವ ಪದ ಬಳಕೆಯಾಗುತ್ತಿರುವುದು ಒಂದು ಪಕ್ಷದ, ಒಂದು ಸಂಘದ, ಅಧಿಕಾರಕ್ಕಾಗಿ ಒಡೆದಾಳುವ, ಪರದ್ವೇಷದ, ಮೂಲಭೂತವಾದಿ ವೈದಿಕ ಸಂಪ್ರದಾಯದ ಸಂಕುಚಿತ ಪರಿಕಲ್ಪನೆಯಾಗಿದೆಯಷ್ಟೇ. ಹಾಗಾಗಿ ಈ ಜೀವ ವಿರೋಧಿ ರಾಜಕೀಯದ ಟೀಕೆಯಿಂದ ಹಿಂದೂಗಳಿಗೆಲ್ಲರಿಗೂ ಅಪಮಾನವಾಯಿತೆನ್ನುವುದು ಎಷ್ಟು ಉಚಿತ” ಎಂದು ಪ್ರಶ್ನೆ ಮಾಡಿದ್ದಾರೆ.

    “ಹಾಗೆ ಅವಮಾನ ಪಡಲೇಬೇಕೆಂದರೆ ವೈದಿಕ ಪರಂಪರೆ ಇಂದಿಗೂ ಪ್ರತಿಪಾದಿಸುತ್ತಿರುವ ನಮ್ಮಲ್ಲೇ ಇರುವ ಜಾತಿ ಪದ್ಧತಿ, ಅಸ್ಪೃಶ್ಯತೆ, ಲಿಂಗ ಬೇಧ ಇವುಗಳಿಂದಲ್ಲವೇ? ಆ ನಿಟ್ಟಿನಲ್ಲಿ ನಮ್ಮನ್ನು ನಾವು ತಿದ್ದಿಕೊಂಡು ಹಿಂದೂ ಧರ್ಮವನ್ನು ಎಲ್ಲರಿಗೂ ಮಾದರಿಯಾಗಿಸಬೇಕಲ್ಲವೇ? ನಮ್ಮ ತಪ್ಪುಗಳನ್ನು ಎತ್ತಿ ತೋರಿಸುವ ನಮ್ಮದೇ ಜನರನ್ನು ನಿಂದಿಸುವ, ಆರೋಪಿಸುವ, ಜೈಲಿಗೆ ಹಾಕುವ ಅಥವಾ ಗಡೀಪಾರು ಮಾಡುವ ಅತಿರೇಕಕ್ಕೆ ಹೋಗುವ ಬದಲು” ಎಂದು ಬರೆದಿದ್ದಾರೆ ಕಿಶೋರ್.

  • ಸಾವರ್ಕರ್‌ಗೆ ಅವಮಾನ ಮಾಡಿದ್ರೆ ಮೈತ್ರಿಯಲ್ಲಿ ಬಿರುಕು – ರಾಹುಲ್‍ಗೆ ಉದ್ಧವ್ ನೇರ ಎಚ್ಚರಿಕೆ

    ಸಾವರ್ಕರ್‌ಗೆ ಅವಮಾನ ಮಾಡಿದ್ರೆ ಮೈತ್ರಿಯಲ್ಲಿ ಬಿರುಕು – ರಾಹುಲ್‍ಗೆ ಉದ್ಧವ್ ನೇರ ಎಚ್ಚರಿಕೆ

    ಮುಂಬೈ: ಸಾವರ್ಕರ್ ಅವರನ್ನು ಅವಮಾನಿಸದಂತೆ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿಗೆ (Rahul Gandhi) ಶಿವಸೇನೆ (Shiv Sena) (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಭಾನುವಾರ ಎಚ್ಚರಿಕೆ ನೀಡಿದ್ದಾರೆ. ಸಾವರ್ಕರ್ ಅವರನ್ನು ಕೀಳಾಗಿ ಬಿಂಬಿಸಿದರೆ ಪ್ರತಿಪಕ್ಷಗಳ ಮೈತ್ರಿಯಲ್ಲಿ ಬಿರುಕು ಉಂಟಾಗಲಿದೆ ಎಂದಿದ್ದಾರೆ.

    ಹಿಂದುತ್ವ (Hindutva) ಸಿದ್ಧಾಂತವಾದಿ ವಿಡಿ ಸಾವರ್ಕರ್ (V D Savarkar) ಅವರನ್ನು ಮಾದರಿಯಾಗಿ ಪರಿಗಣಿಸುತ್ತೇವೆ. ಅವರನ್ನು ಅವಮಾನಿಸುವುದನ್ನು ಸಹಿಸುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಅಡ್ಜಸ್ಟ್‌ಮೆಂಟ್‌ ಪಾಲಿಟಿಕ್ಸ್‌ ಬೇಡ – ಬೆಂಗಳೂರಿನಲ್ಲಿ ಗೆಲ್ಲೋ ಕ್ಷೇತ್ರಗಳ ಟಾರ್ಗೆಟ್‍ಗೆ ಶಾ ಸೂತ್ರ

    ಸಾವರ್ಕರ್ ಅಂಡಮಾನ್ ಜೈಲಿನಲ್ಲಿ (Andaman cellular jail) 14 ವರ್ಷಗಳ ಕಾಲ ಸೆರೆವಾಸದಲ್ಲಿ ಚಿತ್ರಹಿಂಸೆ ಅನುಭವಿಸಿದ್ದನ್ನು ನಾವು ಓದಬಹುದು. ಇದು ಅವರ ತ್ಯಾಗಕ್ಕೆ ಇದ್ದ ಸಾಕ್ಷಿಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

    ಕಾಂಗ್ರೆಸ್ ಹಾಗೂ ಎನ್‍ಸಿಪಿ ಮೈತ್ರಿ ಪ್ರಜಾಪ್ರಭುತ್ವ ರಕ್ಷಣೆಗಾಗಿ ಮಾಡಲ್ಪಟ್ಟಿದೆ. ರಾಹುಲ್ ಅವರನ್ನು ಅನಗತ್ಯ ಪ್ರಚೋದಿಸಲಾಗುತ್ತಿದೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಈ ಮೈತ್ರಿ ಮುಂದುವರೆಯಬೇಕು ಎಂದಿದ್ದಾರೆ.

    ಪ್ರಧಾನಿ ವಿರುದ್ಧದ ರಾಹುಲ್ ಗಾಂಧಿ ಟೀಕೆಗೆ ಬಿಜೆಪಿ ನಿಲುವನ್ನು ತೀವ್ರವಾಗಿ ಖಂಡಿಸಿರುವ ಅವರು ಮೋದಿ ಎಂದರೆ ಭಾರತವಲ್ಲ. ಮೋದಿಯನ್ನು ಪ್ರಶ್ನಿಸುವುದು ಭಾರತಕ್ಕೆ (India) ಮಾಡುವ ಅಪಮಾನವಲ್ಲ ಎಂದಿದ್ದಾರೆ.

    ಮೋದಿ (Modi) ಉಪನಾಮ ಬಳಕೆಯ ಮಾನನಷ್ಟ ಮೊಕದ್ದಮೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಈ ವೇಳೆ ಸುದ್ದಿಗೋಷ್ಠಿ ಕ್ಷಮೆಯನ್ನು ಯಾಕೆ ಕೇಳಿಲ್ಲ ಎಂಬ ಪ್ರಶ್ನೆಗೆ ಕ್ಷಮೆಯಾಚಿಸಲು ನಾನು ಸಾವರ್ಕರ್ ಅಲ್ಲ. ನಾನು ಗಾಂಧಿ ಕುಟುಂಬದವನು. ಗಾಂಧಿ ಕ್ಷಮೆ ಯಾಚಿಸುವುದಿಲ್ಲ ಎಂದು ಉತ್ತರಿಸಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ 3 ದಿನ ಗುಡುಗು ಸಹಿತ ಮಳೆ ಸಾಧ್ಯತೆ

  • ಮಂಡ್ಯ ಗೆಲ್ಲಲು ಬಿಜೆಪಿಯಿಂದ ಹಿಂದುತ್ವದ ಅಜೆಂಡಾ

    ಮಂಡ್ಯ ಗೆಲ್ಲಲು ಬಿಜೆಪಿಯಿಂದ ಹಿಂದುತ್ವದ ಅಜೆಂಡಾ

    ಮಂಡ್ಯ: ಮುಂಬರುವ ವಿಧಾನಸಭಾ ಚುನಾವಣೆ (Vidhanasabha Election) ಯಲ್ಲಿ ಜಿಲ್ಲೆಯ 7 ಕ್ಷೇತ್ರಗಳ ಪೈಕಿ ಅಧಿಕ ಕ್ಷೇತ್ರಗಳಲ್ಲಿ ಶತಾಯಗತಾಯ ಗೆಲುವು ಸಾಧಿಸಬೇಕೆಂದು ಪ್ಲಾನ್ ಹಾಕಿಕೊಂಡಿರುವ ಬಿಜೆಪಿ (BJP) ಮಂಡ್ಯ ಗೆಲ್ಲಲು ಹಿಂದುತ್ವದ ಅಜೆಂಡಾ ಹಿಡಿದು ಹೊರಟಿದೆ. ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ ಮೂಲಕ ಚುನಾವಣೆಯ ರಂಗು ಹೆಚ್ಚಿಸಲು ಮುಂದಾಗಿದೆ.

    ಹೌದು. ಇಷ್ಟು ದಿನಗಳ ಕಾಲ ಜಾಮಿಯಾ ಮಸೀದಿಯಲ್ಲ ಅದು ಹನುಮನ ಮಂದಿರ ಎಂದು ಹಿಂದೂಪರ ಸಂಘಟನೆಗಳು ಹೋರಾಟ ಮಾಡುತ್ತಿದ್ದವು. ಈ ವೇಳೆ ರಾಜ್ಯ ಬಿಜೆಪಿ ಈ ಬಗ್ಗೆ ತುಟಿ ಬಿಚ್ಚದೆ ಮೌನ ವಹಿಸಿತ್ತು. ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ನಾಯಕರು ಮಂಡ್ಯದ ಎಲ್ಲಾ ಬಿಜೆಪಿ ಕಾರ್ಯಕ್ರಮಗಳಲ್ಲೂ ಜಾಮಿಯಾ ಮಸೀದಿಯ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ. ನಿನ್ನೆ ರಾತ್ರಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಶ್ರೀರಂಗಪಟ್ಟಣ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಇಂಡುವಾಳು ಸಚ್ಚಿದಾನಂದ (Sacchidananda) ಪರ ಇಂಡುವಾಳುನಲ್ಲಿ ನಡೆದ ಸಭೆಯಲ್ಲಿ ಜಾಮಿಯಾ ಮಸೀದಿ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಶ್ರೀರಂಗಪಟ್ಟಣದಲ್ಲಿ ರಂಗನಾಥಸ್ವಾಮಿ ಹಾಗೂ ಆಂಜನೇಯಸ್ವಾಮಿಯ ಕಾಲ ಬರುತ್ತಿದೆ. ಇದನ್ನೂ ಓದಿ: ಕಳೆದ‌ ಬಾರಿ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿತ್ತಾ?

    ಜಾಮಿಯಾ ಮಸೀದಿ ಅದು ಹನುಮಂತನ ಮಂದಿರ, ಇಲ್ಲಿ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇಗುಲ ಕಟ್ಟುವುದು ನಮ್ಮ ಕಮಿಟ್ಮೆಂಟ್ ಆಗಿದೆ. ಮುಸ್ಲಿಮರಿಗೆ ನಾವೇನು ಬರೆದು ಕೊಟ್ಟಿಲ್ಲ ಮಸೀದಿ ಮಾಡಿಕೊಳ್ಳಿ ಅಂತಾ. ನಮ್ಮದನ್ನ ಕಿತ್ತುಕೊಂಡಿರುವುದನ್ನು ನಮಗೆ ಕೊಡಲೇ ಬೇಕು. ನಿಮಗೆ ಒಂದಕ್ಕೆ ಎರಡು ಮಸೀದಿಯನ್ನು ಕಟ್ಟಿಕೊಡುತ್ತೇವೆ. ನಮ್ಮ ಆಂಜನೇಯಸ್ವಾಮಿ ದೇವಸ್ಥಾನದ ತಂಟೆಗೆ ಯಾರೂ ಬರಬೇಡಿ ಎಂದು ಹೇಳುವ ಮೂಲಕ ಸಿ.ಟಿ.ರವಿ ಚುನಾವಣೆಯಲ್ಲಿ ಮಂದಿರ ಮತ್ತು ಮಸೀದಿ ಫೈಟ್‍ನ್ನು ಶುರು ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಿಂದೂಗಳು ಒಟ್ಟಾಗಿರಬೇಕೆಂಬುದು ಸಾವರ್ಕರ್ ಕನಸಾಗಿತ್ತು – ಮೊಮ್ಮಗ ಸಾತ್ಯಕಿ ಸಾವರ್ಕರ್

    ಹಿಂದೂಗಳು ಒಟ್ಟಾಗಿರಬೇಕೆಂಬುದು ಸಾವರ್ಕರ್ ಕನಸಾಗಿತ್ತು – ಮೊಮ್ಮಗ ಸಾತ್ಯಕಿ ಸಾವರ್ಕರ್

    ಶಿವಮೊಗ್ಗ: ಹಿಂದೂಗಳು (Hindu Community) ಒಗ್ಗಟ್ಟಾಗಿರಬೇಕೆಂಬುದು ಸಾವರ್ಕರ್ (VD Savarkar) ಅವರ ಕನಸಾಗಿತ್ತು ಎಂದು ವಿ.ಡಿ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಅಶೋಕ್‌ ಸಾವರ್ಕರ್ (Satyaki Ashok Savarkar) ಹೇಳಿದ್ದಾರೆ.

    ಶಿವಮೊಗ್ಗದಲ್ಲಿ (Shivamogga) `ಸಾವರ್ಕರ್ ಸಾಮ್ರಾಜ್ಯ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಸಾವರ್ಕರ್ ಅವರಿಗೆ ಆಗಸ್ಟ್ 13 ರಂದು ಅಪಮಾನಿಸಲಾಗಿತ್ತು. ಶಿವಮೊಗ್ಗದ ಯುವ ದೇಶಪ್ರೇಮಿಗಳು ಇದನ್ನು ಮರೆಯಲಿಲ್ಲ. ಆದರೆ ಹಿಂದೂಗಳು ಒಗ್ಗಟ್ಟಾಗಿರಬೇಕೆಂಬುದು ಸಾವರ್ಕರ್ ಅವರ ಕನಸಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಬುದ್ಧಿವಂತರು ಯಾವಾಗಲು ಏಕಾಂಗಿಯಾಗಿಯೇ ಕೆಲಸ ಮಾಡ್ತಾರೆ.. ಯಾಕೆ ಗೊತ್ತಾ?

    ಸಾವರ್ಕರ್ ಅವರ ಹಿಂದುತ್ವದ (Hinduism) ಮಂತ್ರ ವಾಕ್ಯ ಎಲ್ಲರೂ ಜ್ಞಾಪಕವಿಟ್ಟುಕೊಳ್ಳಬೇಕು. ಭಾರತದ ಮೇಲೆ ಅನೇಕ ಆಕ್ರಮಣಗಳಾಗಿವೆ. ಆದರೆ ಅನೇಕ ಮಹನೀಯರು, ಯೋಧರು, ಶಿವಾಜಿ ಮಹರಾಜ್, ರಾಣಪ್ರತಾಪ್ ಸಿಂಗ್‌ರಂತಹ ಪರಾಕ್ರಮಿಗಳು ಹಿಂದೂಸ್ಥಾನವನ್ನು ಉಳಿಸಲು ತ್ಯಾಗ, ಬಲಿದಾನ ಮಾಡಿದ್ದಾರೆ. ಇಂದಿನ ಈ ದೀಪ ಬೆಳಗಿಸಿರುವುದು, ಇಡೀ ವಿಶ್ವವೇ ನೋಡುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಪಾದಯಾತ್ರೆ – ಕೈ-ಕೈ ಹಿಡಿದು ಹೆಜ್ಜೆ ಹಾಕಿದ ರಾಹುಲ್, ರಮ್ಯಾ

    ಈ ಕಾರ್ಯಕ್ರಮದ ಮೂಲಕ ದೇಶಭಕ್ತರನ್ನು ಎಚ್ಚರಿಸುವ ಕೆಲಸವಾಗಬೇಕು. ಸಾವರ್ಕರ್ ಅವರು ಹೊಂದಿದ್ದ ಧೇಯೋದ್ದೇಶಗಳನ್ನು ನಾಡಿನೆಲ್ಲೆಡೆ ಮತ್ತೆ ಪಸರಿಸಬೇಕು. ಅನೇಕ ದುಷ್ಟಶಕ್ತಿಗಳು ದೇಶದ ಮೇಲೆ ಆಕ್ರಮಣ ಮಾಡಲು ಹೊಂಚು ಹಾಕುತ್ತಿದ್ದು, ಇದನ್ನು ಮೆಟ್ಟಿ ನಿಲ್ಲುವ ಯೋಜನೆ ನಾವೆಲ್ಲರೂ ರೂಪಿಸಬೇಕು ಎಂದು ಕರೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]