Tag: Hindustani Classical Musician

  • ಹಿಂದೂಸ್ತಾನಿ ಸಂಗೀತದ ದಂತಕಥೆ ಅನ್ನಪೂರ್ಣದೇವಿ ನಿಧನ

    ಹಿಂದೂಸ್ತಾನಿ ಸಂಗೀತದ ದಂತಕಥೆ ಅನ್ನಪೂರ್ಣದೇವಿ ನಿಧನ

    ಮುಂಬೈ: ಖ್ಯಾತ ಹಿಂದುಸ್ತಾನಿ ಗಾಯಕಿ ಅನ್ನಪೂರ್ಣದೇವಿ (91) ಇಂದು ಬೆಳಗಿನ ಜಾವ 3.51 ರ ಸುಮಾರಿಗೆ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

    ಪದ್ಮಭೂಷಣ ಪುರಸ್ಕೃತ, ಮಾಯಿಹಾರ್ ಗರಾನಾ ಸಂಸ್ಥಾಪಕರಾದ ಅನ್ನಪೂರ್ಣ ದೇವಿಯವರು, ವಯಸಹಜ ಕಾಯಿಲೆಗಳಿಂದ ಬಳಲುತಿದ್ದರು.

    ಅಲ್ಲಾವುದಿನ್ ಖಾನ್ ಮತ್ತು ಮದೀನಾ ಬೇಗಮ್ ದಂಪತಿಯ ನಾಲ್ಕು ಮಕ್ಕಳ ಪೈಕಿ ಕಿರಿಯ ಮಗಳಾದ ಅನ್ನಪೂರ್ಣ ದೇವಿ ಅವರು ಮಧ್ಯಪ್ರದೇಶದ ಮಾಯಿಹಾರ್‍ನಲ್ಲಿ 1927ರ ಏಪ್ರಿಲ್ 23 ರಂದು ಜನಿಸಿದ್ದರು.

    ಪೋಷಕರು ಮಗಳಿಗೆ ರೋಷನಾರಾ ಎಂದು ಹೆಸರನ್ನು ಇಟ್ಟಿದ್ದರೂ ಮಧ್ಯಪ್ರದೇಶದ ರಾಜ ಬ್ರಿಜನಾಥ್ ಸಿಂಗ್ ಅನ್ನಪೂರ್ಣ ದೇವಿ ಎಂದು ಹೆಸರನ್ನು ನೀಡಿದರು. ಮುಂದೆ ಅನ್ನಪೂರ್ಣದೇವಿ ಎನ್ನುವ ಹೆಸರೇ ಪ್ರಸಿದ್ಧವಾಯಿತು.

    ಅನ್ನಪೂರ್ಣ ದೇವಿಯವರು ಖ್ಯಾತ ಸಿತಾರ್ ಪರಿಣಿತ ರವಿಶಂಕರ್ ಅವರನ್ನು ಮದುವೆಯಾಗಿದ್ದರು. 1992 ರಲ್ಲಿ ರವಿಶಂಕರ್ ನಿಧನರಾದ ಹಿನ್ನೆಲೆಯಲ್ಲಿ ನಿರ್ವಹಣೆ ಸಲಹೆಗಾರರಾಗಿದ್ದ ರೂಶಿಕುಮಾರ್ ಪಾಂಡ್ಯ ಅವರನ್ನ ಮದುವೆಯಾದರು. ಅವರು ಕೂಡ 2013 ರಲ್ಲಿ ನಿಧನರಾದರು. ಪ್ರಬುದ್ಧ ಸಂಗೀತ ಹಿನ್ನಲೆಯನ್ನ ಹೊಂದಿದ್ದ ಅನ್ನಪೂರ್ಣ ದೇವಿಯವರು 5 ವರ್ಷ ಇರುವಾಗಲೇ ತಂದೆಯ ಜೊತೆ ಸಂಗೀತಾ ಅಭ್ಯಾಸ ಮಾಡಿದ್ದರು. ವಿಶ್ವ ವಿಖ್ಯಾತ ಸಂಗೀತಕಾರ ಉಸ್ತಾದ್ ಅಲಿ ಖಾನ್ ಇವರ ಸಹೋದರನಾಗಿದ್ದು, ಸಿತಾರ್ ಮತ್ತು ಸುರ್‍ಬಹಾರ್ ವಾದ್ಯಗಳನ್ನ ಕರಗತ ಮಾಡಿದ್ದಾರೆ.

    ಅನ್ನಪೂರ್ಣ ದೇವಿ ಅವರ ನಿಧನಕ್ಕೆ ಸಂಗೀತ ಪ್ರೇಮಿಗಳು ಮರುಗಿದ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಗಣ್ಯರು ತಮ್ಮ ಸಂತಾಪವನ್ನ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv