Tag: Hindustan Petroleum

  • ಹಿಂದೂಸ್ತಾನ್ ಪೆಟ್ರೋಲಿಯಂಗೆ ಸೇರಿದ ಪೈಪ್ ಲೈನ್‍ಗೆ ಕನ್ನ

    ಹಿಂದೂಸ್ತಾನ್ ಪೆಟ್ರೋಲಿಯಂಗೆ ಸೇರಿದ ಪೈಪ್ ಲೈನ್‍ಗೆ ಕನ್ನ

    – 20 ಅಡಿ ಆಳದಲ್ಲಿದ್ದ ಪೈಪ್

    ಮಂಗಳೂರು: ಹಿಂದೂಸ್ತಾನ್ ಪೆಟ್ರೋಲಿಯಂಗೆ ಸೇರಿದ್ದ ಪೈಪ್ ಲೈನ್‍ಗೆ ಕನ್ನ ಹಾಕಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸೋರ್ನಾಡು ಅರ್ಬಿ ಎಂಬಲ್ಲಿ ಬೆಳಕಿಗೆ ಬಂದಿದೆ.

    ಐವಾನ್ ಎಂಬಾತನ ಜಮೀನಿನಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂಗೆ ಸೇರಿದ ಪೈಪ್‍ಲೈನ್ ಹಾದು ಹೋಗಿತ್ತು. ಈ ಪೈಪ್ ಮೂಲಕ ಮಂಗಳೂರಿನಿಂದ ಬೆಂಗಳೂರಿಗೆ ಪೆಟ್ರೋಲ್ ಪೂರೈಕೆ ಮಾಡಲಾಗಿತ್ತು. ಪೆಟ್ರೋಲ್ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದಾಗ ಕಂಪನಿಯವರು ಹುಡುಕಾಟ ನಡೆಸಿದಾಗ ಐವಾನ್ ಕೃತ್ಯ ಬೆಳಕಿಗೆ ಬಂದಿದೆ.

    20 ಅಡಿ ಆಳದಲ್ಲಿ ಹಾದುಹೋಗಿದ್ದ ಪೆಟ್ರೋಲ್ ಪೈಪ್ ಲೈನ್ ಅಗೆದು ಇನ್ನೊಂದು ಪೈಪ್ ಅಳವಡಿಸಿ ಐವಾನ್ ಪೆಟ್ರೋಲ್ ಕಳ್ಳತನ ಮಾಡುತ್ತಿದ್ದನು. ಮುಖ್ಯ ಪೈಪ್‍ಗೆ ಗೇಟ್ ವಾಲ್ ಸೇರಿಸಿ ಮತ್ತೊಂದು ಪೈಪ್ ಮೂಲಕ ಪೆಟ್ರೋಲ್ ಎತ್ತಿಕೊಳ್ಳುತ್ತಿದ್ದನು.

    ಪೆಟ್ರೋಲ್ ಸೋರಿಕೆ ಸಂಬಂಧ ಕಂಪನಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿತ್ತು. ಪೋಲೀಸರ ಸಮಕ್ಷಮ ಜೆಸಿಬಿ ಮೂಲಕ ಅಗೆದಾಗ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಆರೋಪಿ ಐವಾನ್ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಕಾಸರಗೋಡಿಗೆ ಸರ್ಕಾರಿ, ಖಾಸಗಿ ಬಸ್ ಸಂಚಾರವಿಲ್ಲ: ಕಟೀಲ್

  • ಪ್ರತಿದಿನ ಬದಲಾಗುವ ಪೆಟ್ರೋಲ್ ಬೆಲೆಯನ್ನು ತಿಳಿದುಕೊಳ್ಳುವುದು ಹೇಗೆ?

    ಪ್ರತಿದಿನ ಬದಲಾಗುವ ಪೆಟ್ರೋಲ್ ಬೆಲೆಯನ್ನು ತಿಳಿದುಕೊಳ್ಳುವುದು ಹೇಗೆ?

    ನವದೆಹಲಿ: ಜೂನ್ 16ರಿಂದ ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಣೆ ಆಗಲಿದೆ. ಹೀಗಾಗಿ ಈ ಬೆಲೆಯನ್ನು ಗ್ರಾಹಕರು ತಿಳಿದುಕೊಳ್ಳುವುದು ಹೇಗೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ.

    ಇಂಡಿಯನ್ ಆಯಿಲ್ :
    SMS: RSP < SPACE > DEALER CODE ಎಂದು ಟೈಪಿಸಿ, 9224992249 ಸಂಖ್ಯೆಗೆ SMS ಕಳುಹಿಸುವುದು. ಇಲ್ಲಿ ಡೀಲರ್ ಕೋಡ್  ಎಂದಿರುವ ಕಡೆ ಡೀಲರ್ ಕೋಡ್ ಸಂಖ್ಯೆ ಹಾಕಬೇಕು.
    ವೆಬ್‍ಸೈಟ್ : www.iocl.com ವೆಬ್‍ಸೈಟ್‍ಗೆ ಭೇಟಿ ನೀಡಿ Pump Locator ಆಯ್ಕೆ ಮೂಲಕ ದರ ತಿಳಿಯಬಹುದು.
    ಆ್ಯಪ್ : Fuel@loc ಆ್ಯಪ್ ಪೆಟ್ರೋಲ್ ಪಂಪ್ ಗುರುತಿಸಿ, ದರ ತಿಳಿಯಬಹುದಾಗಿದೆ.

    ಭಾರತ್ ಪೆಟ್ರೋಲಿಯಂ
    SMS: RSP < SPACE > DEALER CODE ಎಂದು ಟೈಪಿಸಿ 9223112222 ಸಂಖ್ಯೆಗೆ SMS ಕಳುಹಿಸುವುದು. ಇಲ್ಲಿ ಡೀಲರ್ ಕೋಡ್ ಎಂದಿರುವ ಕಡೆ ಡೀಲರ್ ಕೋಡ್
    ಸಂಖ್ಯೆ ಹಾಕಬೇಕು.
    ವೆಬ್‍ಸೈಟ್ : www.hindustanpetroleum.com ವೆಬ್‍ಸೈಟ್‍ಗೆ ಭೇಟಿ ನೀಡಿ, Pump Locator ಆಯ್ಕೆ ಮೂಲಕ ದರ ತಿಳಿಯಬಹುದು.
    ಆ್ಯಪ್ : SmartDrive Mobli ಆ್ಯಪ್ ಪೆಟ್ರೋಲ್ ಪಂಪ್ ಗುರುತಿಸಿ, ದರ ತಿಳಿಯಬಹುದು.

    ಹಿಂದುಸ್ತಾನ್ ಪೆಟ್ರೋಲಿಯಂ :
    SMS: RSP < SPACE > DEALER CODE ಎಂದು ಟೈಪಿಸಿ 9222201122 ಸಂಖ್ಯೆಗೆ SMS ಕಳುಹಿಸುವುದು. ಇಲ್ಲಿ ಡೀಲರ್ ಕೋಡ್
    ಎಂದಿರುವ ಕಡೆ ಡೀಲರ್ ಕೋಡ್ ಸಂಖ್ಯೆ ಹಾಕಬೇಕು.
    ವೆಬ್‍ಸೈಟ್ : www.hindustanpetroleum.com ವೆಬ್‍ಸೈಟ್‍ಗೆ ಭೇಟಿ ನೀಡಿ, Pump Locator ಆಯ್ಕೆ ಮೂಲಕ ದರ ತಿಳಿಯಬಹುದು.
    ಆ್ಯಪ್ : My HPCL ಆ್ಯಪ್‍ನಲ್ಲಿ ಪೆಟ್ರೋಲ್ ಪಂಪ್ ಗುರುತಿಸಿ, ದರ ತಿಳಿಯಬಹುದು

    ಪ್ರಾಯೋಗಿಕವಾಗಿ ಮೇ 1ರಿಂದ ದೇಶದ ಐದು ಮಹಾನಗರಗಳಾದ ಪಾಂಡಿಚೇರಿ, ಆಂಧ್ರಪ್ರದೇಶದ ವೈಝಾಗ್, ರಾಜಸ್ಥಾನದ ಉದಯ್‍ಪುರ್, ಜಾರ್ಖಂಡ್‍ನ ಜಮ್ಶೆಡ್‍ಪುರ ಚಂಡೀಗಢದಲ್ಲಿ ಪ್ರತಿ ದಿನ ದರ ಪರಿಷ್ಕರಣೆ ಆಗುತಿತ್ತು. ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಜೂನ್ 16ರಿಂದ ದೇಶದ ಎಲ್ಲ ಕಡೆಗಳಲ್ಲಿ ಜಾರಿಗೊಳಿಸಲು ತೈಲ ಕಂಪೆನಿಗಳು ಮುಂದಾಗಿವೆ.

    ಪ್ರಮುಖ 5 ಮಹಾನಗರಗಳಲ್ಲಿ ಈ ಯೋಜನೆಯನ್ನು ಜಾರಿಗೆ ತಂದ ಬಳಿಕ, ದೇಶದ ಉಳಿದ ಭಾಗದಲ್ಲಿ ಜಾರಿಗೊಳಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಏಪ್ರಿಲ್ ನಲ್ಲಿ ತಿಳಿಸಿದ್ದರು.

    ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪ್ರಸ್ತುತ ದೇಶದಲ್ಲಿ ಶೇ.95ರಷ್ಟು ಮಾರುಕಟ್ಟೆಯನ್ನು ಹೊಂದಿದ್ದು, ಈ ಎಲ್ಲ ತೈಲ ಕಂಪೆನಿಗಳ ಅಧಿಕಾರಿಗಳು ಏಪ್ರಿಲ್ 5ರಂದು ಧರ್ಮೇಂದ್ರ ಪ್ರಧಾನ್ ಜೊತೆ ಮಾತುಕತೆ ನಡೆಸಿದ್ದರು.

    ಪ್ರತಿದಿನ ತೈಲ ಬೆಲೆಯನ್ನು ಪರಿಷ್ಕರಿಸಬೇಕು ಎನ್ನುವ ಪ್ರಸ್ತಾಪ ಈ ಹಿಂದೆಯೇ ಇತ್ತು. ಆದರೆ ಇಲ್ಲಿಯವರೆಗೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ದೇಶದಲ್ಲಿ ಸುಮಾರು 58 ಸಾವಿರ ಬಂಕ್‍ಗಳನ್ನು ಹೊಂದಿರುವ ಈ ತೈಲ ಕಂಪೆನಿಗಳು ಕಾರ್ಯರೂಪಕ್ಕೆ ತರಲು ಮುಂದಾಗಿದೆ.