Tag: Hinduism

  • ನೀವು ಮತ್ತೆ ಬಾಯಿತೆಗೆದರೆ ಜನ ನಿಮಗೆ ಉಗೀತಾರೆ: ಮುತಾಲಿಕ್‌

    ನೀವು ಮತ್ತೆ ಬಾಯಿತೆಗೆದರೆ ಜನ ನಿಮಗೆ ಉಗೀತಾರೆ: ಮುತಾಲಿಕ್‌

    ಉಡುಪಿ: ಹಿಜಬ್ ಹೋರಾಟಗಾರ್ತಿಯರಿಗೆ ಈಗಲೂ ಸಲಹೆ ನೀಡುತ್ತೇನೆ. ಒಂದು ಬಟ್ಟೆಯಿಂದ ಶಿಕ್ಷಣ ಅವಕಾಶದಿಂದ ವಂಚಿತರಾಗಬೇಡಿ. ನೀವು ಮತ್ತೆ ಹೋರಾಟ ಎಂದು ಬಾಯಿ ತೆಗೆದರೆ ಜನ ನಿಮಗೆ ಉಗೀತಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿದ್ಯಾರ್ಥಿಗಳಿಗೆ ಎಚ್ಚರಿಸಿದ್ದಾರೆ.

    pramod mutalik

    ಉಡುಪಿಯಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಬಾಯಿಮುಚ್ಚಿ ಸುಮ್ಮನಿದ್ದರೆ ಉತ್ತಮ. ಹಿಜಬ್ ಹೋರಾಟಗಾರ್ತಿಯರು ಸಂಪೂರ್ಣವಾಗಿ ಹತಾಶರಾಗಿದ್ದಾರೆ. ರಾಜ್ಯದ ಎಲ್ಲ ಬೆಳವಣಿಗೆಗಳಿಗೆ ಈ ವಿದ್ಯಾರ್ಥಿನಿಯರೇ ಕಾರಣ. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸಂವಿಧಾನ, ನ್ಯಾಯಾಲಯ ಅಂತಿಮವೇ ಹೊರತು ಕುರಾನ್, ಶರಿಯತ್, ಬೈಬಲ್, ಭಗವದ್ಗೀತೆ ಅಂತಿಮವಲ್ಲ ಎಂದು ತಿಳಿವಳಿಕೆ ನೀಡಿದ್ದಾರೆ. ಇದನ್ನೂ ಓದಿ: ಅಪಾರ ಪ್ರಮಾಣದಲ್ಲಿ ಗೋಮಾಂಸ ರಫ್ತಾಗುತ್ತಿದ್ದರೂ ಪ್ರಧಾನಿ ಮೋದಿ ಮೌನವೇಕೆ? ಪ್ರಮೋದ್‌ ಮುತಾಲಿಕ್‌

    pramod mutalik

    ಸಂಘಟನೆಗಳು ನಿಮ್ಮನ್ನು ಬಲಿ ಕೊಡಲಿವೆ
    ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ, ನಿಮ್ಮ ಭವಿಷ್ಯಕ್ಕೆ ಕಲ್ಲು ಹಾಕಿಕೊಳ್ಳಬೇಡಿ, ನಿಮ್ಮ ಹಿಂದೆ ಇರುವಂತಹ ಪಿಎಫ್‌ಐ ಮತ್ತು ಸಿಎಫ್‌ಐ ಸಂಘಟನೆಗಳು ನಿಮ್ಮನ್ನು ಭಯಾನಕವಾಗಿ ಬಲಿಕೊಡಲಿವೆ. ನಿಮ್ಮ ಶಿಕ್ಷಣಕ್ಕೆ ಕಲ್ಲು ಹಾಕಲಿವೆ. ಎಲ್ಲವನ್ನೂ ಬಿಟ್ಟು ಪರೀಕ್ಷೆಗೆ ಹಾಜರಾಗಿ ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಸಂತೋಷ್‍ನದ್ದು ಆತ್ಮಹತ್ಯೆಯೋ, ಕೊಲೆಯೋ? ಈಶ್ವರಪ್ಪ

    ಬಾಯಿಮುಚ್ಚಿ ಸುಮ್ಮನಿರುವುದು ಒಳ್ಳೆಯದು
    ಸಿಎಫ್‌ಐ, ಪಿಎಫ್‌ಐ ಕುಮ್ಮಕ್ಕು ಮುಸಲ್ಮಾನರಿಗೆ ಗೊತ್ತಾಗಿದೆ. ಮುಸಲ್ಮಾನರು, ಹಿಂದೂಗಳು ಚೀ.. ಥೂ.. ಅನ್ನುತ್ತಿದ್ದಾರೆ. ನ್ಯಾಯಾಲಯ ಕೂಡ ವಿದ್ಯಾರ್ಥಿಗಳ ಹೋರಾಟಕ್ಕೆ ಛೀಮಾರಿ ಹಾಕಿದೆ. ಈ ವಿದ್ಯಾರ್ಥಿಗಳು ಬಾಯಿ ಮುಚ್ಚಿ ಸುಮ್ಮನಿರುವುದು ಒಳ್ಳೆಯದು. ನೀವು ಮೌನವಾಗಿದ್ದಷ್ಟು ನಿಮ್ಮ ಮೇಲೆ ಸಮಾಜಕ್ಕೆ ಉತ್ತಮ ಭಾವನೆ ಬರುತ್ತದೆ. ನೀವು ಮತ್ತೆ ಬಾಯಿ ತೆರೆದರೆ ಜನ ನಿಮಗೇ ಉಗೀತಾರೆ ಎಂದು ಹೇಳಿದ್ದಾರೆ.

    pramod mutalik

    ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಹಿಂದೂ ಸಮಾಜದಿಂದ ಬರುತ್ತಿದೆ. ಮುಸಲ್ಮಾನರ ಅಹಂಕಾರಕ್ಕೆ ಹಿಂದೂ ಸಮಾಜದಿಂದ ಉತ್ತರಗಳು ಸಿಗುತ್ತಿವೆ. ಮುಸಲ್ಮಾನರ ಸೊಕ್ಕನ್ನು ಸಹನೆ ಮಾಡುವ ಹಿಂದೂ ಸಮಾಜ ಈಗ ಇಲ್ಲ. ಹಿಜಬ್ ಕೇಳಿದವರು ಬುರ್ಖಾ ಕೇಳ್ತಾರೆ, ನಾಳೆ ನಮಾಜಿಗೆ ಅವಕಾಶ ಕೊಡಿ ಅಂತಾರೆ, ನೀವು ಈ ದೇಶದ ಇಸ್ಲಾಮಿಕ್ ಭಾಗಗಳು. ನೀವು ಮಾತನಾಡಲು ಶುರು ಮಾಡಿದರೆ ಈ ಹೋರಾಟ ಮುಂದೆಯೂ ಬೆಳೆಯುತ್ತದೆ ಎಂದು ತಿಳಿಸಿದ್ದಾರೆ.

  • ಭಾರತೀಯ ಧರ್ಮ, ಪರಂಪರೆ ಇತರ ಧರ್ಮಗಳ ವಿರುದ್ಧ ಇಲ್ಲ: ಆರಗ ಜ್ಞಾನೇಂದ್ರ

    ಭಾರತೀಯ ಧರ್ಮ, ಪರಂಪರೆ ಇತರ ಧರ್ಮಗಳ ವಿರುದ್ಧ ಇಲ್ಲ: ಆರಗ ಜ್ಞಾನೇಂದ್ರ

    ಶಿವಮೊಗ್ಗ: ಭಾರತೀಯ ಧರ್ಮ, ಸಂಸ್ಕೃತಿ ಹಾಗೂ ಪರಂಪರೆ ಯಾವುದೇ ಅನ್ಯ ಧರ್ಮದ ವಿರುದ್ಧ ಇಲ್ಲ. ಅದನ್ನು ಬಲಪಡಿಸುವ ವ್ಯವಸ್ಥೆ ಹಾಗೂ ಸರ್ಕಾರಗಳು ಬರಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಪಾದಿಸಿದ್ದಾರೆ.

    ತೀರ್ಥಹಳ್ಳಿಯ ಯೋಗ ಸಮಿತಿ ಶ್ರೀ ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ ಯೋಗ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ದೇಶದ ಸಾಂಸ್ಕೃತಿಕ ಚೌಕಟ್ಟನ್ನು ಬಲಪಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಹೇಳಿದ್ದೆ ವೇದ ವಾಕ್ಯನಾ? ಬೊಮ್ಮಾಯಿಗಿಂತ ಹಿರಿಯ ನಾನು: ಸಿದ್ದರಾಮಯ್ಯ

    ಜಗತ್ತಿನಲ್ಲಿ ಭಾರತೀಯ ಪರಂಪರೆಗೆ ಇಂದು ದೊಡ್ಡ ಸ್ಥಾನ ಇದೆ. ಭಾರತೀಯ ಪರಂಪರೆ ಹಾಗೂ ಧರ್ಮ ಎಲ್ಲಾ ಧರ್ಮಗಳ ರಕ್ಷಕನಾಗಿ ನಿಂತಿದೆ. ವಿಶ್ವದ ಎಲ್ಲಾ ಧರ್ಮಗಳನ್ನು ಎತ್ತಿ ಹಿಡಿದಿರುವ ಹಿಂದೂ ಧರ್ಮ, ಸಂಸ್ಕೃತಿ, ಪರಂಪರೆ, ಸವಾಲಿನ ದಿನಗಳನ್ನು ಕಾಣುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ದಾವುದ್ ಅಲ್ಲ, ಅವರಪ್ಪ ಬಂದ್ರು ಕೂಡ ಏನು ಮಾಡಲು ಆಗಲ್ಲ: ಪ್ರಮೋದ್ ಮುತಾಲಿಕ್

    ಕಾರ್ಯಕ್ರಮಕ್ಕೂ ಮುನ್ನ ಸಚಿವರು ಯೋಗ ಸಮಿತಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ ಹಾಗೂ ಪಕ್ಷದ ಗೆಲುವಿನ ಸಂಕಲ್ಪ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  • ಹಿಜಬ್ ವಿವಾದ: ಬುರ್ಕಾನೇ ಮುಖ್ಯ, ಸಿಂಧೂರ ತೆಗೆಸಿ ಎಂದ ವಿದ್ಯಾರ್ಥಿನಿಯರು!

    ಹಿಜಬ್ ವಿವಾದ: ಬುರ್ಕಾನೇ ಮುಖ್ಯ, ಸಿಂಧೂರ ತೆಗೆಸಿ ಎಂದ ವಿದ್ಯಾರ್ಥಿನಿಯರು!

    ಕೋಲಾರ: ಹಿಜಬ್ ವಿವಾದ ಕೋಲಾರದಲ್ಲಿ 2ನೇ ದಿನವೂ ಮುಂದುವರೆದಿದ್ದು, ಹಿಜಬ್ ಧರಿಸಿ ಬಂದ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಅನುಮತಿ ನೀಡದ ಹಿನ್ನೆಲೆ ವಿದ್ಯಾರ್ಥಿಗಳು ವಾಪಸ್ ಆದ ಸನ್ನಿವೇಶ ನಡೆಯಿತು.

    ಕೋಲಾರ ನಗರದ ಸರ್ಕಾರಿ ಜೂನಿಯರ್ ಕಾಲೇಜಿಗೆ ಹಿಜಬ್ ತೆಗೆಯದೆ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ತಡೆದು ವಾಪಸ್ಸು ಕಳುಹಿಸಿದರು. ಈ ವೇಳೆ ಕಾಲೇಜಿನ ಹೊರ ನಡೆದ ಮೂರು ವಿದ್ಯಾರ್ಥಿನಿಯರು ಹಿಜಬ್ ತೆಗೆಯಲು ನಿರಾಕರಸಿ ಕಾಲೇಜಿನಿಂದ ಮನೆಯತ್ತ ತೆರಳಿದ್ರು. ನಮಗೆ ಧರ್ಮ ಮತ್ತು ಹಿಜಬ್ ಮುಖ್ಯವಾಗಿದೆ ಎಂದು ವಾದ ಮಾಡಿದರು. ಇದನ್ನೂ ಓದಿ: ಕೇವಲ 13 ಗಂಟೆಯಲ್ಲಿ 135 ಕಿ.ಮೀ ಬಂದ ಎತ್ತಿನ ಚಕ್ಕಡಿ – ಎತ್ತುಗಳಿಗೆ ಅದ್ಧೂರಿ ಸ್ವಾಗತ

    ಒಂದು ವೇಳೆ ಕೋರ್ಟ್ ಆದೇಶ ಬಂದ್ರೆ ಅದಕ್ಕೆ ತಲೆ ಭಾಗುವೆ. ಆದ್ರೆ ನಾವು ನಮ್ಮ ಧರ್ಮದಂತೆ ಹಿಜಬ್ ಹಾಗೂ ಬುರ್ಕಾ ಧರಿಸಿ ಬರುತ್ತಿದ್ದೇವೆ. ನಮಗೆ ಬುರ್ಕಾ ತೆಗೆಯಲು ತಿಳಿಸಿದ್ರೆ, ಹಿಂದೂ ವಿದ್ಯಾರ್ಥಿನಿಯರು ಸಹ ಸಿಂಧೂರ, ಮೂಗುತಿ ಬಿಚ್ಚಿಟ್ಟು ಕಾಲೇಜಿಗೆ ಬರಲಿ. ನಮಗೊಂದು ಅವರಿಗೊಂದು ನ್ಯಾಯ ಎಂದು ವಿದ್ಯಾರ್ಥಿನಿ ಒತ್ತಾಯಿಸಿದರು.

    ವಿನಾಕಾರಣ ಸರ್ಕಾರ ಹಿಜಬ್ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ನಮ್ಮ ಧರ್ಮದ ಪದ್ಧತಿಯಂತೆ ನಾವು ಮುಂದುವರಿಸಿಕೊಂಡು ಹೋಗಬೇಕು ಎಂದು ಪೋಷಕರು ಒತ್ತಾಯಿಸಿದ್ರು. 2ನೇ ದಿನವಾದ ಇಂದು ಸಹ ವಿದ್ಯಾರ್ಥಿಗಳು ನಮಗೆ ಹಿಜಬ್ ಮುಖ್ಯ, ಹಿಜಬ್ ಇಲ್ಲವಾದಲ್ಲಿ ನಾವು ಕಾಲೇಜಿಗೆ ಬರಲ್ಲ ಎಂದು ವಾಪಸ್ ತೆರಳಿದರು. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆಗೆ ಆಗ್ರಹ – ವಿಧಾನಸಭೆಯಲ್ಲಿ ಕಾಂಗ್ರೆಸ್ ಅಹೋರಾತ್ರಿ ಧರಣಿ!

  • ಧರ್ಮನಿಂದನೆ ಆರೋಪ – ಹಿಂದೂ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಪಾಕ್!

    ಧರ್ಮನಿಂದನೆ ಆರೋಪ – ಹಿಂದೂ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಪಾಕ್!

    ಇಸ್ಲಾಮಬಾದ್: ಸಿಂಧ್ ಪ್ರಾಂತ್ಯದಲ್ಲಿ ಧರ್ಮನಿಂದೆಯ ಆರೋಪದ ಮೇಲೆ ಪಾಕಿಸ್ತಾನದ ನ್ಯಾಯಾಲಯವು ಹಿಂದೂ ಕಾಲೇಜು ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, 50,000 ರೂ. ದಂಡ ಹಾಕಿದೆ.

    ಸರ್ಕಾರಿ ಪದವಿ ಕಾಲೇಜಿನಲ್ಲಿ ಶಿಕ್ಷಕರಾಗಿದ್ದ ನೌತನ್ ಲಾಲ್ ಅವರನ್ನು 2019ರಲ್ಲಿ ಧರ್ಮನಿಂದನೆ ಮಾಡಲಾಗಿದೆ ಎಂದು ಪಾಕ್ ಪೊಲೀಸರು ಬಂಧಿಸಿದ್ದು, ಅವರನ್ನು ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿ ಇರಿಸಲಾಗಿತ್ತು. ಈಗ ಕೇಸ್ ಗೆ ಮುಕ್ತಿ ಸಿಕ್ಕಿದ್ದು, ನೌತನ್ ಲಾಲ್ ಅವರನ್ನು ಪಾಕ್ ನ್ಯಾಯಾಲಯ 10 ವರ್ಷ ಜೀವಾವಧಿ ಶಿಕ್ಷೆ ವಿಧಿಸಿದೆ.

    ಏನಿದು ಘಟನೆ?
    2019 ಸೆಪ್ಟೆಂಬರ್ 14 ರಂದು ಸ್ಥಳೀಯ ಶಾಲೆಯ ಶಿಕ್ಷಕ ನೌತನ್ ಲಾಲ್ ಅವರು ಧರ್ಮನಿಂದನೆ ಮಾಡಿದ್ದಾರೆ ಎಂದು ವಿದ್ಯಾರ್ಥಿಯೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಪರಿಣಾಮ ನೌತನ್ ಲಾಲ್ ಅವರನ್ನು ಪಾಕ್ ಪೊಲೀಸರು ಬಂಧಿಸಿದ್ದರು. ಈ ವೇಳೆ ಅವರು ಎರಡು ಬಾರಿ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದು, ಅದನ್ನು ಎರಡು ಬಾರಿಯೂ ತಿರಸ್ಕರಿಸಲಾಗಿದೆ. ಪ್ರಸ್ತುತ ಪಾಕ್ ನ್ಯಾಯಾಲಯ ನೌತನ್ ಲಾಲ್ ಅವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, 50,000 ದಂಡ ವಿಧಿಸಿದೆ. ಇದನ್ನೂ ಓದಿ: ಮಧ್ಯಪ್ರದೇಶಕ್ಕೂ ಹಿಜಬ್‌ ವಿವಾದ ಎಂಟ್ರಿ – ನಿಷೇಧ ಮಾಡ್ತೀವಿ ಎಂದ ಶಿಕ್ಷಣ ಸಚಿವ

    ಪಾಕಿಸ್ತಾನವು 1947 ರಿಂದ ದೇಶದಲ್ಲಿ ಒಟ್ಟು 1,415 ಧರ್ಮನಿಂದೆಯ ಪ್ರಕರಣಗಳನ್ನು ವರದಿ ಮಾಡಿದೆ. ವರದಿಗಳ ಪ್ರಕಾರ, 1947 ರಿಂದ 2021 ರವರೆಗೆ ಧರ್ಮನಿಂದನೆಯ ಮೇಲೆ ಒಟ್ಟು 18 ಮಹಿಳೆಯರು ಮತ್ತು 71 ಪುರುಷರನ್ನು ಕೊಲ್ಲಲಾಗಿದೆ ಎಂದು ತಿಳಿಯಲಾಗಿದೆ. ಆದರೆ ಮೂಲಗಳ ಪ್ರಕಾರ ಈ ಸಂಖ್ಯೆ ಇನ್ನೂ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

  • ದಲಿತ ಯುವತಿಯನ್ನ ಮದುವೆಯಾಗಿದ್ದಕ್ಕೆ ಸ್ವಜಾತಿಯವರಿಂದ ಬಹಿಷ್ಕಾರ

    ದಲಿತ ಯುವತಿಯನ್ನ ಮದುವೆಯಾಗಿದ್ದಕ್ಕೆ ಸ್ವಜಾತಿಯವರಿಂದ ಬಹಿಷ್ಕಾರ

    ಚಿಕ್ಕಮಗಳೂರು: ವ್ಯಕ್ತಿಯೊಬ್ಬರು ದಲಿತ ಯುವತಿಯನ್ನ ಮದುವೆಯಾಗಿದಕ್ಕೆ ಸ್ವಜಾತಿಯವರಿಂದ ಬಹಿಷ್ಕಾರ ಹಾಕಿಸಿಕೊಂಡ ಘಟನೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಚಂದ್ರಶೇಖರ್ ಕುಟುಂಬಕ್ಕೆ ಸ್ವಜಾತಿ ಮುಖಂಡರು ಬಹಿಷ್ಕಾರ ಹಾಕಿದ್ದಾರೆ. ವ್ಯಕ್ತಿಯು ದಲಿತ ಯುವತಿಯನ್ನ ಪ್ರೀತಿಸಿ ಮದುವೆಯಾಗಿದ್ದರು. ದಲಿತ ಯುವತಿಯನ್ನು ಮದುವೆಯಾಗಿದಕ್ಕೆ ಈ ದಂಪತಿಯ ಜೊತೆ ಗ್ರಾಮದಲ್ಲಿ ಯಾರು ಮಾತನಾಡುವಂತಿರಲಿಲ್ಲ. ಹಾಗೇನಾದರೂ ಅವರ ಜೊತೆ ಯಾರಾದರು ಮಾತನಾಡಿದ್ದಲ್ಲಿ 5 ಸಾವಿರ ರೂ. ದಂಡ ವಿಧಿಸಲಾಗುತ್ತಿತ್ತು. ದಂಪತಿ ಕುಟುಂಬವನ್ನು ಊರಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಕ್ಕೂ ಕೂಡಾ ಆಹ್ವಾನಿಸುವಂತಿಲ್ಲ ಎಂದು ಬಹಿಷ್ಕಾರ ಹಾಕಿದ್ದರು. ಇದನ್ನೂ ಓದಿ: ಚೀನಾ ಒಲಿಂಪಿಕ್ಸ್‌ಗೆ ಭಾರತ ಬಹಿಷ್ಕಾರ – ದಿಟ್ಟ ನಿರ್ಧಾರ ತೆಗೆದುಕೊಂಡ ಭಾರತೀಯ ವಿದೇಶಾಂಗ ಇಲಾಖೆ

    ಕೊನೆಗೆ ದಂಪತಿಯು ಹಿಂದೂ ಧರ್ಮದಿಂದ ಬೇಸತ್ತು, ಕ್ರೈಸ್ತ ಧರ್ಮಕ್ಕೆ ಮಂತಾತರಗೊಳ್ಳಲು ಚಿಂತಿಸಿದ್ದರು. ಕೊನೆಗೆ ಹಿಂದೂ ಧರ್ಮದ ಮುಖಂಡರು ಕುಟುಂಬದ ಮನವೊಲಿಸಿದ್ದು, ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಹಿಜಬ್ ನೆಪವೊಡ್ಡಿ ಮುಸ್ಲಿಂ ಹೆಣ್ಮಕ್ಕಳ ಶಿಕ್ಷಣಕ್ಕೆ ತಡೆ ಒಡ್ಡಲಾಗ್ತಿದೆ: ಮುಫ್ತಿ

  • ಹಿಂದುತ್ವ ಎಂಬುದು ರಾಜಕೀಯವಾಗಿದೆ: ರಮ್ಯಾ

    ಹಿಂದುತ್ವ ಎಂಬುದು ರಾಜಕೀಯವಾಗಿದೆ: ರಮ್ಯಾ

    ಬೆಂಗಳೂರು: ಹಿಂದುತ್ವ ಮತ್ತು ಹಿಂದೂಯಿಸಂ ಎರಡೂ ಒಂದೇ ಅಲ್ಲ ಎಂದು ಸ್ಯಾಂಡಲ್‍ವುಡ್ ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಹಿಂದುತ್ವ ಮತ್ತು ಹಿಂದೂಯಿಸಂ ಎರಡೂ ಒಂದೇ ಅಲ್ಲ. ಹಿಂದೂಯಿಸಂ ಎಂಬುದು ರಾಜಕೀಯವಲ್ಲ. ಆದರೆ ಹಿಂದುತ್ವ ಎಂಬುದು ರಾಜಕೀಯವಾಗಿದೆ. ಹಿಂದೂಯಿಸಂ ಎಂದರೆ ಎಲ್ಲರನ್ನೂ ಒಳಗೊಳ್ಳುವಂತದ್ದು ಮತ್ತು ಎಲ್ಲರಿಗೂ ಪ್ರೀತಿ ಹಂಚುವಂತದ್ದು. ಅದಕ್ಕೆ ವಿರುದ್ಧವಾದ್ದದ್ದೇ ಹಿಂದುತ್ವ. ನಿಜವಾದ ಹಿಂದುಗಳಿಗೆ ವ್ಯತ್ಯಾಸ ತಿಳಿಯುತ್ತದೆ ಎಂದು ರಮ್ಯಾ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    A post shared by Ramya/Divya Spandana (@divyaspandana)

    ನಮ್ಮ ಪುರಾತನ ಹಿಂದೂ ಧರ್ಮವು ರಾಜಕಾರಣಿಗಳಿಂದ ಒಂದು ರಾಜಕೀಯ ಸಾಧನವಾಗಿ ಬಳಕೆ ಆಗುತ್ತಿರುವುದನ್ನು ನೋಡಲು ನೋವಾಗುತ್ತದೆ. ನಾನು ಹಿಂದೂ ಅಷ್ಟೇ. ಯಾವ ಪಕ್ಷ ಕೂಡ ನನ್ನ ಹಿಂದೂಯಿಸಂ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ರಮ್ಯಾ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ರಮ್ಯಾ ಈ ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡುತ್ತಾ ತಮ್ಮ ಅಭಿಪ್ರಾಯವನ್ನು ಸೂಚಿಸುತ್ತಿದ್ದಾರೆ. ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ನಿಮ್ಮಿಂದ ನಾವು ಹಿಂದೂ ಧರ್ಮದ ಬಗ್ಗೆ ಪಾಠ ಕಲಿಯಬೇಕಾಗಿಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ:   ಹಿಂದೂ ಧರ್ಮ, ಹಿಂದುತ್ವ ಬೇರೆ ಬೇರೆ: ರಾಹುಲ್ ಗಾಂಧಿ

    2 ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾಂಗ್ರೆಸ್ ಪಕ್ಷದ ಡಿಜಿಟಲ್ ಅಭಿಯಾನವಾದ ಜನ್ ಜಾಗರಣ ಅಭಿಯಾನದ (digital campaign Jan Jagran Abhiyan) ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಹಿಂದೂ ಧರ್ಮ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸವೇನು? ಅವು ಒಂದೇ ಆಗಿರಬಹುದೇ? ಒಂದೇ ಆಗಿದ್ದರೆ, ಏಕೆ ಒಂದೇ ಹೆಸರಿಲ್ಲ? ವಿಭಿನ್ನ ವಿಷಯಗಳಾಗಿವೆ ಎಂದು ಹೇಳಿದ್ದರು. ಇದೇ ವಿಚಾರವಾಗಿ ರಮ್ಯಾ ಕೂಡಾ ಮಾತನಾಡಿದ್ದಾರೆ. ಇದನ್ನೂ ಓದಿ:  ಚೀನಾ ಕುರಿತು ಸರ್ಕಾರ ಯಾವುದೇ ಕಾರ್ಯತಂತ್ರ ಹೊಂದಿಲ್ಲ: ರಾಹುಲ್ ಗಾಂಧಿ

    ರಮ್ಯಾ ಸಿನಿಮಾ ಕ್ಷೇತ್ರದಿಂದ ದೂರವಾಗಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಕೆಲವು ವಿಚಾರವಾಗಿ ತಮ್ಮ ಅನಿಸಿಕೆಗಳನ್ನು ತಮ್ಮದೇ ಆಗಿರುವ ರೀತಿಯನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿರುತ್ತಾರೆ.

  • ಹಿಂದೂ ಧರ್ಮ, ಹಿಂದುತ್ವ ಬೇರೆ ಬೇರೆ: ರಾಹುಲ್ ಗಾಂಧಿ

    ಹಿಂದೂ ಧರ್ಮ, ಹಿಂದುತ್ವ ಬೇರೆ ಬೇರೆ: ರಾಹುಲ್ ಗಾಂಧಿ

    ನವದೆಹಲಿ: ಹಿಂದೂ ಧರ್ಮ, ಹಿಂದುತ್ವ ಎರಡು ಬೇರೆ ಬೇರೆ ವಿಷಯಗಳು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

    ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾಂಗ್ರೆಸ್ ಪಕ್ಷದ ಡಿಜಿಟಲ್ ಅಭಿಯಾನವಾದ ಜನ್ ಜಾಗರಣ ಅಭಿಯಾನದ (digital campaign Jan Jagran Abhiyan) ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಹಿಂದೂ ಧರ್ಮ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸವೇನು? ಅವು ಒಂದೇ ಆಗಿರಬಹುದೇ? ಒಂದೇ ಆಗಿದ್ದರೆ, ಏಕೆ ಒಂದೇ ಹೆಸರಿಲ್ಲ? ವಿಭಿನ್ನ ವಿಷಯಗಳಾಗಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಚೀನಾ ಕುರಿತು ಸರ್ಕಾರ ಯಾವುದೇ ಕಾರ್ಯತಂತ್ರ ಹೊಂದಿಲ್ಲ: ರಾಹುಲ್ ಗಾಂಧಿ

    ಕಾಂಗ್ರೆಸ್ ಪಕ್ಷದ ಸಿದ್ಧಾಂತ ಜೀವಂತವಾಗಿದೆ ಮತ್ತು ರೋಮಾಂಚಕವಾಗಿದೆ. ಆದರೆ ಅದನ್ನು ಮರೆ ಮಾಡಲಾಗಿದೆ. ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ( RSS) ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) (Bharatiya Janata Party) ದ್ವೇಷದ ಸಿದ್ಧಾಂತವು ನಮಗೆ ಇಷ್ಟವಾಗಲಿ ಅಥವಾ ಇಲ್ಲದಿರಲಿ. ಕಾಂಗ್ರೆಸ್ ಪಕ್ಷದ ಪ್ರೀತಿ, ವಾತ್ಸಲ್ಯ ಮತ್ತು ರಾಷ್ಟ್ರೀಯತೆಯ ಸಿದ್ಧಾಂತವನ್ನು ನಾವು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಡೆಸರ್ಟ್ ಸಫಾರಿ ಬಳಿಕ ಬಿಕಿನಿಯಲ್ಲಿ ಜಾನ್ವಿ, ಖುಷಿ ಕಪೂರ್ ಮೋಜು, ಮಸ್ತಿ

    RAHUL GANDHI

    ಕಾಂಗ್ರೆಸ್ ಪಕ್ಷವು ಜನರಲ್ಲಿ ಸಿದ್ಧಾಂತವನ್ನು ಆಕ್ರಮಣಕಾರಿಯಾಗಿ ಪ್ರಚಾರ ಮಾಡದ ಕಾರಣ ಪಕ್ಷದ ಸಿದ್ಧಾಂತವು ಮಬ್ಬಾಗಿದೆ ಎಂದು ವಿವರಿಸಿದರು. ಕೇಂದ್ರದ ಬಡವರ ವಿರೋಧಿ ನೀತಿಗಳನ್ನು ಎತ್ತಿ ಹಿಡಿಯಲು, ಈ ಬಗ್ಗೆ ಜಾಗೃತಿ ಮೂಡಿಸಲು ಕಾಂಗ್ರೆಸ್ ಪಕ್ಷವು ನವೆಂಬರ್ 14ರಿಂದ ನವೆಂಬರ್ 29ರ ನಡುವೆ ಜನ ಜಾಗರಣ ಅಭಿಯಾನ ಎಂಬ ಹೆಸರಿನಲ್ಲಿ ರಾಷ್ಟ್ರವ್ಯಾಪಿ ಜನಜಾಗೃತಿ ಕಾರ್ಯಕ್ರಮವನ್ನು ನಡೆಸಲಿದೆ. ಇದನ್ನೂ ಓದಿ:  ಪತ್ನಿಗಾಗಿ ಅಪ್ಪು ಹೇಳುತ್ತಿದ್ದ ಹಾಡು ಯಾವುದು ಗೊತ್ತಾ?

  • ಕೋಟೆನಾಡಲ್ಲಿ ಅಸ್ಪೃಶ್ಯತೆ, ಕೋಮುವಾದ ವಿರೋಧಿಸಿ 101 ಜನ ಬೌದ್ಧ ಧರ್ಮಕ್ಕೆ ಮತಾಂತರ

    ಕೋಟೆನಾಡಲ್ಲಿ ಅಸ್ಪೃಶ್ಯತೆ, ಕೋಮುವಾದ ವಿರೋಧಿಸಿ 101 ಜನ ಬೌದ್ಧ ಧರ್ಮಕ್ಕೆ ಮತಾಂತರ

    ಚಿತ್ರದುರ್ಗ: ಹಿಂದೂ ಧರ್ಮದಲ್ಲಿನ ಅಸ್ಪೃಶ್ಯತೆ ಅಸಮಾನತೆ ಹಾಗೂ ಕೋಮುವಾದವನ್ನು ಸಹಿಸಲಾಗದೇ ಕೋಟೆನಾಡು ಚಿತ್ರದುರ್ಗದ 101 ಜನ ಹಿಂದೂಗಳು ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದಾರೆ.

    ಚಿತ್ರದುರ್ಗದ ಸ್ಟೇಡಿಯಂ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗೌತಮ ಬುದ್ಧನ ಪ್ರತಿಮೆಯನ್ನು ಬೆಂಗಳೂರಿನ ಮಹಾಬೋಧಿ ಸಂಸ್ಥೆ ಪೀಠಾಧಿಪತಿಗಳಾದ ಆನಂದ ಬಂತೇಜಿಯವರು ಲೋಕಾರ್ಪಣೆ ಮಾಡಿದರು. ಪ್ರತಿಮೆ ಅನಾವರಣದ ಬಳಿಕ ತರಾಸು ರಂಗಮಂದಿರದಲ್ಲಿ ಬೌದ್ಧ ಧರ್ಮ ದೀಕ್ಷೆ ನೀಡಲಾಯಿತು. ಇದನ್ನೂ ಓದಿ: ಕರ್ನಾಟಕವು ಯಶಸ್ಸಿನ ಹೊಸ ಎತ್ತರವನ್ನು ಏರಲಿ: ಮೋದಿ ಶುಭಾಶಯ

    ಬುದ್ಧನ ಪ್ರತಿಮೆ ಅನಾವರಣ ಸ್ವಾಗತ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ ನೇತೃತ್ವದಲ್ಲಿ 101 ಜನ ಹಿಂದೂಗಳು ಬೌದ್ಧ ಧರ್ಮಕ್ಕೆ ಮತಾಂತರವಾದರು. ಈ ವೇಳೆ ಮಾತನಾಡಿದ ತಿಪ್ಪೇಸ್ವಾಮಿ ಅವರು, ಬೌದ್ಧ ಧರ್ಮದ ಅಹಿಂಸೆ, ಸ್ವತಂತ್ರ ಹಾಗೂ ಸಮಾನತಾ ತತ್ವ ಒಪ್ಪಿ ಬೌದ್ಧ ಧರ್ಮಕ್ಕೆ ಮತಾಂತರ ಆಗ್ತಿದ್ದೇವೆ. ನಮಗಿಂತಲೂ ಮುಂಚೆಯೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಹ ಈ ಹಿಂದೂ ಧರ್ಮದ ಆಚರಣೆಗಳನ್ನು ವಿರೋಧಿಸಿ ಬೌದ್ಧ ಧರ್ಮ ದೀಕ್ಷೆ ಪಡೆದಿದ್ದರು ಎಂದರು.

    ಕೋಟೆನಾಡು ಚಿತ್ರದುರ್ಗ ಜಿಲ್ಲೆ ಸಹ ಬೌದ್ಧರ ಅನುಯಾಯಿಗಳ ನೆಲೆಬೀಡಾಗಿದ್ದು, ಮೌರ್ಯರ ದೊರೆ ಅಶೋಕ ಸೇರಿದಂತೆ ಅನೇಕ ಬೌದ್ಧ ಧರ್ಮದ ಅನುಯಾಯಿಗಳು ಕೋಟೆನಾಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಇದಕ್ಕೆ ಕುರುಹುಗಳು ಕೂಡ ಜಿಲ್ಲೆಯಲ್ಲಿವೆ. ಹೀಗಾಗಿ ನಾವುಗಳು ಸಹ ಆನಂದ ಬಂತೇಜಿ ಶ್ರೀಗಳಿಂದ ಇಂದು ಬೌದ್ಧ ಧರ್ಮ ದೀಕ್ಷೆ ಪಡೆದಿದ್ದೇವೆ. ಮುಂಬರುವ ದಿನಗಳಲ್ಲಿ ಚಿತ್ರದುರ್ಗದ 2000ಕ್ಕೂ ಅಧಿಕ ಹಿಂದೂಗಳು ಬೌದ್ಧ ಧರ್ಮ ದೀಕ್ಷೆ ಪಡೆಯಲಿದ್ದಾರೆಂದು ತಿಳಿಸಿದರು. ಇದನ್ನೂ ಓದಿ: ಅಮೇಜಾನ್‌ಗೆ ಸೇರಿದ ಕಂಟೇನರ್‌ನಿಂದ ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ರಾಬರಿ

    ಇದೇ ವೇಳೆ ಮಹಾಭೊದಿ ಸಂಸ್ಥೆಯ ಶ್ರೀಗಳಾದ ಆನಂದ ಬಂತೇಜಿ ಅವರು ಮಾತನಾಡಿ, ಬೌದ್ಧ ಧರ್ಮ ದೀಕ್ಷೆ ಅನ್ನೋದು ಜಾತಿ, ಧರ್ಮ ಹಾಗೂ ರಾಜ್ಯ ದೇಶಕ್ಕೆ ಸೀಮಿತವಲ್ಲ. ಇಡೀ ಜಗತ್ತಿಗೆ ಭಗವಾನ್ ಬುದ್ಧರ ಸಂದೇಶ ಇಂದು ಅನಿವಾರ್ಯವಾಗಿದೆ. ನಮಗೆ ಯುದ್ಧ ಬೇಡ, ಬುದ್ಧ ಬೇಕೆಂಬ ಪ್ರಚಾರ ನಡೆಯುತ್ತಿದೆ. ಹೀಗಾಗಿ ಬೌದ್ಧ ಧರ್ಮದ ಪಂಚಶೀಲಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯೇ ಧಮ್ಮ ದೀಕ್ಷೆಯಾಗಿದೆ ಎಂದರು.

  • ಹೊಸದುರ್ಗದಲ್ಲಿ 4 ಕುಟುಂಬಗಳು ಹಿಂದೂ ಧರ್ಮಕ್ಕೆ ವಾಪಸ್‌

    ಹೊಸದುರ್ಗದಲ್ಲಿ 4 ಕುಟುಂಬಗಳು ಹಿಂದೂ ಧರ್ಮಕ್ಕೆ ವಾಪಸ್‌

    – ತಾಯಿ ಮರಳಿದ್ದಾರೆ ಎಂದ ಗೂಳಿಹಟ್ಟಿ ಶೇಖರ್‌
    – ಹಾಲುರಾಮೇಶ್ವರ ದೇಗುಲದಲ್ಲಿ ಹಿಂದೂ ಧರ್ಮಕ್ಕೆ ಸ್ವಾಗತ

    ಚಿತ್ರದುರ್ಗ: ಆಮಿಷಗಳಿಗೆ ಬಲಿಯಾಗಿ ಅನ್ಯ ಧರ್ಮಕ್ಕೆ ಮತಾಂತರವಾಗಿದ್ದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಬಲ್ಲಾಳಸಮುದ್ರದ ನಾಲ್ಕು ಕುಟುಂಬಗಳು ಇಂದು ಹಿಂದೂ ಧರ್ಮಕ್ಕೆ ಮರಳಿದ್ದಾರೆ.

    ಕುಟುಂಬದ ಆಧಾರಸ್ತಂಭವಾಗಿದ್ದ ಮನೆಯ ಯಜಮಾನನಿಗೆ ವಕ್ಕರಿಸಿದ್ದ ಕ್ಯಾನ್ಸರ್ ರೋಗವನ್ನೇ ಬಂಡವಾಳ ಮಾಡಿಕೊಂಡು ಪ್ರದೀಪ್ ಎಂಬವರ ಕುಟುಂಬವನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗಿತ್ತು. ಮತಾಂತರವಾಗಿ ಎರಡು ವರ್ಷ ಕಳೆದರೂ ಸಹ ಅವರ ತಂದೆಗೆ ರೋಗ ನಿವಾರಣೆ ಆಗಲಿಲ್ಲ. ಹೀಗಾಗಿ ಇಂದು ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಸಮ್ಮುಖದಲ್ಲಿ ನಾಲ್ಕು ಕುಟುಂಬಗಳು ಸ್ವಪ್ರೇರಣೆಯಿಂದ ಹಿಂದೂ ಧರ್ಮಕ್ಕೆ ಮರಳಿವೆ. ಇದನ್ನೂ ಓದಿ: ವಿದ್ಯುತ್‌ಗೆ ಸಮಸ್ಯೆ ಆಗಲ್ಲ, ದೇಶದಲ್ಲಿ ಕಲ್ಲಿದ್ದಲು ದಾಸ್ತಾನಿದೆ- ಪ್ರಹ್ಲಾದ್‌ ಜೋಷಿ ಸ್ಪಷ್ಟನೆ

    ಹಾಲುರಾಮೇಶ್ವರ ದೇಗುಲದಲ್ಲಿ ಕೇಸರಿ ಬಟ್ಟೆಯನ್ನು ಹಾಕುವ ಮೂಲಕ ಹಿಂದೂ ಧರ್ಮಕ್ಕೆ ಅವರನ್ನು ಸ್ವಾಗತಿಸಲಾಯಿತು. ಹಾಲು ರಾಮೇಶ್ವರನಿಗೆ ಪೂಜೆ ಸಲ್ಲಿಸಿ,ಪ್ರಸಾದ ಸ್ವೀಕರಿಸುವ ಮೂಲಕ ಹಿಂದೂ ಧರ್ಮಕ್ಕೆ ಘರ್ ವಾಪ್ಸಿ ಆಗಿದ್ದಾರೆ. ಇದನ್ನೂ ಓದಿ: ಚೀನಾ ಕೈಯಿಂದ ನಾರ್ವೆಯ ಸೋಲಾರ್‌ ಕಂಪನಿ ಖರೀದಿಸಿದ ರಿಲಯನ್ಸ್‌ 

    ಕಾಳ್ಗಿಚ್ಚಿನಂತೆ ನಮ್ಮ ಕ್ಷೇತ್ರದಲ್ಲಿ ಮತಾಂತರ ಹರಡುತ್ತಿದೆ ಎಂದು ಕ್ರೈಸ್ತ ಮಿಷಿನರಿಗಳ ವಿರುದ್ಧ ವಿಧಾನಸೌಧದಲ್ಲಿ ಗುಡುಗಿದ್ದ ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್, ಹುಟ್ಟಿನಿಂದಲೂ ಕ್ರೈಸ್ತ ಧರ್ಮದಲ್ಲಿರುವವರಿಗೆ ನನ್ನ ಮಾತುಗಳಿಂದ ನೋವಾಗಿದ್ದರೆ ಕ್ಷಮಿಸಬೇಕು ಅಂತ ಕ್ಷಮೆಯಾಚಿಸಿದ್ದಾರೆ. ಸ್ವತಃ ಅವರ ತಾಯಿಯೇ ಮತಂತಾರವಾಗಿದ್ದಾರೆಂದು ಅಸಮಧಾನ ವ್ಯಕ್ತಪಡಿಸಿದ್ದ ಅವರು, ಹೊಸದುರ್ಗ ಕ್ಷೇತ್ರದಲ್ಲಿ ಮತಾಂತರದ ವಿರುದ್ಧ ಸಮರ ಸಾರಿದ್ದಾರೆ. ಹೀಗಾಗಿ ಇಂದು ಹೊಸದುರ್ಗ ತಾಲ್ಲೂಕಿನ ಬಲ್ಲಾಳಸಮುದ್ರ ಗ್ರಾಮದಲ್ಲಿ ಮತಾಂತರವಾಗಿದ್ದ ನಾಲ್ಕು ಕುಟುಂಬಗಳನ್ನು ಇಂದು ವಾಪಸ್ ಹಿಂದೂ ಧರ್ಮಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕ್ಷೇತ್ರದಾದ್ಯಂತ ಹಿಂದೂ ಧರ್ಮಕ್ಕೆ ವಾಪಸ್ ಕರೆ ತರಲು ಘರ್ ವಾಪ್ಸಿ ಕಾರ್ಯಕ್ರಮ ನಡೆಸುತ್ತಿದ್ದೇನೆ. ಮತಾಂತರವಾಗಿದ್ದ ನನ್ನ ತಾಯಿ ಸಹ ಮರಳಿ ನಮ್ಮ ಹಿಂದೂ ಧರ್ಮಕ್ಕೆ ಬಂದಿದ್ದಾರೆ. ನನ್ನ ಮನೆಯಲ್ಲಿ ತಾಯಿ ಕ್ಷೇಮವಾಗಿದ್ದಾರೆ. ಹಾಗೆಯೇ ಮತಾಂತರ ಮಾಡುತ್ತಿರುವ ಮಿಷನರಿಗಳ ವಿರುದ್ಧ ನಾನು ಗುಡುಗಿದ್ದೇನೆ ಹೊರತು ಹುಟ್ಟಿನಿಂದಲೇ ಕ್ರೈಸ್ತ ಧರ್ಮದಲ್ಲಿರುವವರ ವಿಚಾರದಲ್ಲಿ ನನಗೆ ಸೋದರತೆಯ ಭಾವವಿದೆ. ಆದರೂ ಸಹ ನನ್ನ ಈ ಹೋರಾಟದಿಂದ ಅವರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಮತಾಂತರ ವಿಚಾರ ಇಟ್ಟುಕೊಂಡು ನಾನು ಹೊಸದುರ್ಗದಲ್ಲಿ ರಾಜಕೀಯ ಗಿಮಿಕ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • ಸಂಘದ ಟೋಪಿ ಧರಿಸಿ ಮೊದಲ ಬಾರಿಗೆ ಎಸ್‍ಎಂಕೆಯಿಂದ ಹಿಂದುತ್ವದ ಭಾಷಣ

    ಸಂಘದ ಟೋಪಿ ಧರಿಸಿ ಮೊದಲ ಬಾರಿಗೆ ಎಸ್‍ಎಂಕೆಯಿಂದ ಹಿಂದುತ್ವದ ಭಾಷಣ

    ಬೆಂಗಳೂರು: ಆರ್‍ಎಸ್‍ಎಸ್ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಸ್‍ಎಂ ಕೃಷ್ಣ ಅವರು ಹಿಂದುತ್ವದ ಕುರಿತು ಉಪನ್ಯಾಸ ನೀಡಿದ್ದಾರೆ.

    ಇಂದು ವಿಜಯದಶಮಿ ಹಿನ್ನೆಲೆ ಬೆಂಗಳೂರಿನ ಕೇಶವ ಕೃಪಾದಲ್ಲಿ ಆರ್‍ಎಸ್‍ಎಸ್ ಕಡೆಯಿಂದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಸ್‍ಎಂ ಕೃಷ್ಣ ಆರ್‍ಎಸ್‍ಎಸ್ ಟೋಪಿ ಧರಿಸಿ ಮೊದಲ ಬಾರಿಗೆ ಬಹಿರಂಗವಾಗಿ ಹಿಂದುತ್ವ ಮತ್ತು ಭಾರತೀಯತೆ ಬಗ್ಗೆ ಉಪನ್ಯಾಸ ಮಾಡಿದ್ದಾರೆ.

     

    ದೇಶದ ಚರಿತ್ರೆ, ನಮ್ಮ ದೇಶದ ಸಂಸ್ಕೃತಿ ಹಾಗೂ ನೈತಿಕ ನೀತಿಗಳೆ ನಮ್ಮ ದೇಶಕ್ಕೆ ಅಡಿಪಾಯ. ಸಹಸ್ರಾರು ವರ್ಷಗಳಿಂದ ಹಿಂದೂ ಧರ್ಮ ವಸುದೈವ ಕುಟುಂಬ ಎಂಬುದನ್ನು ಪ್ರತಿಪಾದಿಸಿದೆ. ವಿಶ್ವ ಕುಟುಂಬದ ಸಿದ್ಧಾಂತವನ್ನು ನಮ್ಮ ದೇಶದ ಮುಂದೆ ಇಟ್ಟವರು ಆರ್‍ಎಸ್‍ಎಸ್ ಸಂಸ್ಥಾಪಕರು. ಸಂಘದ ಅಗತ್ಯತೆ ಹಿಂದಿನಿಗಿಂತಲೂ ಈಗ ಹೆಚ್ಚಿದೆ. ನನ್ನ ಬಹಳಷ್ಟು ವರ್ಷಗಳ ರಾಜಕೀಯ ಅನುಭವದ ಬಳಿಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಗತ್ಯತೆಯನ್ನು ಕಂಡುಕೊಂಡಿದ್ದೇನೆ ಎಂದರು.

    ದೇಶಭಕ್ತಿಯುಳ್ಳ ಸಂಘಕ್ಕೆ ನನ್ನ ಗೌರವವನ್ನು ಅರ್ಪಣೆ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ. ಅಮೆರಿಕದಲ್ಲಿ ಪ್ರತಿಯೊಬ್ಬರು ದೇಶಕ್ಕೋಸ್ಕರ ಎರಡು ವರ್ಷಗಳ ಕಾಲ ತಮ್ಮ ಜೀವನ ಮೀಸಲಾಗಿಡಬೇಕು. ನಮ್ಮ ದೇಶದಲ್ಲಿಯೂ ಕೂಡ ಎರಡು ವರ್ಷಗಳ ಕಾಲ ನಮ್ಮನ್ನು ನಾವು ಅರ್ಪಿಸಿಕೊಳ್ಳುವಂತಾಗಬೇಕು. ನಮ್ಮನ್ನು ನಾವು ದೇಶಕ್ಕೆ ಅರ್ಪಣೆ ಮಾಡಿಕೊಳ್ಳುವುದರಿಂದ ನಮ್ಮ ರಾಷ್ಟ್ರಾಭಿಮಾನ ಅಭಿವ್ಯಕ್ತವಾಗುತ್ತದೆ ಎಂದು ಹೇಳಿದರು.

    ನಾವು ಯಾವುದಕ್ಕೂ ಅಂಟಿಕೊಳ್ಳಬಾರದು ಎಂಬುದು ನಮ್ಮ ಹಿಂದೂ ಧರ್ಮದಲ್ಲಿಯೇ ಇದೆ. ದೇಶವನ್ನೇ ದೇವರು ಎಂದು ನಂಬಿರುವ ನಾವು ದೇಶಕ್ಕಾಗಿಯೇ ಎಷ್ಟು ಕಾಲ ವಿನಿಯೋಗಿಸುತ್ತೇವೆ ಎಂಬ ಪ್ರಶ್ನೆಯನ್ನು ನಾವೆಲ್ಲರೂ ನಮ್ಮಷ್ಟಕ್ಕೆ ನಾವೇ ಹಾಕಿಕೊಳ್ಳಬೇಕಾಗಿದೆ. ನಮ್ಮ ದೇಶದ ಶೈಕ್ಷಣಿಕ ಪದ್ಧತಿ ಬದಲಾಗಬೇಕಿದೆ. ರಾಷ್ಟ್ರಭಕ್ತಿ ಹಾಗೂ ರಾಷ್ಟ್ರಪ್ರೇಮ ಎಂಬ ಲಸಿಕೆಯನ್ನು ನಾವು ಸಣ್ಣವಯಸ್ಸಿನಲ್ಲಿಯೇ ಮಕ್ಕಳಿಗೆ ಕೊಡಬೇಕಾಗಿದೆ. ಸಂಘದ ಸಂಸ್ಥಾಪಕರೊಂದಿಗೆ ಲೋಕಸಭೆಯಲ್ಲಿ ಕೆಲಸ ಮಾಡುವಂತಹ ಅವಕಾಶವನ್ನು ನಮ್ಮ ಮಂಡ್ಯದ ಜನರು ಕಲ್ಪಿಸಿ ಕೊಟ್ಟಿದ್ದರು ಎಂದು ತಿಳಿಸಿದರು.