Tag: Hindu youth

  • ಹಿಂದೂ ಯುವಕರಿಗೆ ರಕ್ಷಣೆ ಇಲ್ಲದಿದ್ದಾಗ ಅಧಿಕಾರದಲ್ಲಿದ್ದು ಏನು ಸಾರ್ಥಕ: ರೇಣುಕಾಚಾರ್ಯ

    ಹಿಂದೂ ಯುವಕರಿಗೆ ರಕ್ಷಣೆ ಇಲ್ಲದಿದ್ದಾಗ ಅಧಿಕಾರದಲ್ಲಿದ್ದು ಏನು ಸಾರ್ಥಕ: ರೇಣುಕಾಚಾರ್ಯ

    ದಾವಣಗೆರೆ: ಹಿಂದೂ ಯುವಕರಿಗೆ ರಕ್ಷಣೆ ಇಲ್ಲದಿದ್ದಾಗ ಅಧಿಕಾರದಲ್ಲಿದ್ದು ಏನು ಸಾರ್ಥಕ ಆಯ್ತು ಎಂದು ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ಹೊರಹಾಕಿದರು.

    ಗೃಹ ಸಚಿವರ ಮನೆ ಮೇಲೆ ಎಬಿವಿಪಿ ವಿದ್ಯಾರ್ಥಿಗಳು ಮುತ್ತಿಗೆ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರಿಗೆ ಮುಖಂಡರಿಗೆ ಹಿಂದೂ ಯುವಕರಿಗೆ ಮನವಿ ಹಾಗೂ ಕ್ಷಮೆಯಾಚಿಸುತ್ತೇನೆ. ಕಠಿಣ ಕ್ರಮ ತೆಗೆದುಕೊಳ್ಳಲು ನಮ್ಮ ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ. ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ವಹಿಸಿದೆ ಎಂದು ವಿವರಿಸಿದರು. ಇದನ್ನೂ ಓದಿ: ಗಲೀಜಾದ ಹಾಸಿಗೆಯಲ್ಲಿ ಮಲಗಲು ಹೇಳಿದ ಸಚಿವ – ಅವಮಾನದಿಂದ ರಾಜೀನಾಮೆ ಕೊಟ್ಟ ಉಪಕುಲಪತಿ 

    ಸಿಎಂ ಬೊಮ್ಮಾಯಿ ಅವರಿಗೆ ಈ ಪ್ರಕರಣದಿಂದ ಆಘಾತವಾಗಿದೆ, ನೋವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದರೂ ನಮ್ಮ ಜನರನ್ನು ರಕ್ಷಣೆ ಮಾಡಲಾಗುತ್ತಿಲ್ಲ ಎಂಬ ನೋವು ಇದೆ. ಯುವಕರು ಹಾಗೂ ಮುಖಂಡರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಆತ್ಮಸ್ಥೈರ್ಯ ಕಳೆದುಕೊಂಡರೇ ನಾವು ಬಲಿಪಶುಗಳಾಗುತ್ತೇವೆ ಎಂದು ತಿಳಿಸಿದರು.

    ಎನ್‍ಕೌಂಟರ್ ಜೊತೆಗೆ ಆಸ್ತಿ ಮುಟ್ಟುಗೋಲು ಹಾಕಬೇಕು. ಹಿಂದೂ ಯುವಕರಿಗೆ ರಕ್ಷಣೆ ಇಲ್ಲದಿದ್ದಾಗ ಅಧಿಕಾರದಲ್ಲಿದ್ದು ಏನು ಸಾರ್ಥಕ ಆಯ್ತು ಹೇಳಿ. ಅವರಿಗೆ ತಕ್ಕ ಉತ್ತರ ಕೊಟ್ಟೇ ಕೊಡುತ್ತೇವೆ ಎಂದು ಭರವಸೆ ಕೊಟ್ಟರು.

    ಗೃಹ ಸಚಿವರ ವೈಫಲ್ಯದ ಬಗ್ಗೆ ಹಾದಿ ಬೀದಿಯಲ್ಲಿ ಮಾತನಾಡುವುದಿಲ್ಲ. ಸಿಎಂ ರಾಜೀನಾಮೆ ಕೇಳಲು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಏನು ನೈತಿಕ ಹಕ್ಕು ಇದೆ. ನಿಮ್ಮ ಅಧಿಕಾರ ಇದ್ದಾಗ 30ಕ್ಕೂ ಹೆಚ್ಚು ಹಿಂದೂಗಳ ಹತ್ಯೆ ಆಯ್ತು, ಆಗ ನೀವು ರಾಜೀನಾಮೆ ನೀಡಿದ್ರಾ. ಸಮಾಜಘಾತುಕಗಳ ಕೇಸ್ ಸದನದಲ್ಲಿ ಇಟ್ಟು ವಾಪಸ್ಸು ಪಡೆದ್ರಿ. ಇಲ್ಲಿ ಆರೋಪ ಪ್ರತ್ಯಾರೋಪ ಮಾಡುವ ಬದಲು ಹಿಂದೂಗಳ ಜೊತೆ ನಾವು ಇದ್ದೇವೆ ಹತ್ಯೆ ಮಾಡಿದವರನ್ನು ಎನ್‍ಕೌಂಟರ್ ಮಾಡಿ ಎಂದು ಹೇಳಿ ಎಂದು ಸವಾಲ್ ಹಾಕಿದರು.

    ಹರ್ಷ, ಪ್ರವೀಣ್ ಕೊಲೆಯಾಗಿ ನಾಳೆ ನಾವು ಆಗಬಹುದು ಎಂದು ಭಯಭೀತರಾಗಿದ್ದಾರೆ. ನಿಮ್ಮ ಜೊತೆ ನಮ್ಮ ಸಂಘಟನೆ, ಸರ್ಕಾರವಿದೆ. ಕಠಿಣ ಕ್ರಮ ಜರಿಗಿಸಲು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಬಿಜೆಪಿ ಸರ್ಕಾರ ಬಂದಾಗ ನಮಗೆ ರಕ್ಷಣೆ ಇದೆ ಎಂದು ಕೊಂಡಿದ್ದರು. ಸಿದ್ದರಾಮಯ್ಯ ಸರ್ಕಾರ ಇದ್ದಾಗ 25ಕ್ಕೂ ಹೆಚ್ಚು ಹಿಂದೂ ಯುವಕರ ಹತ್ಯೆಯಾಗಿತ್ತು. ಆ ಸಂದರ್ಭದಲ್ಲಿ ಅಲ್ಪಸಂಖ್ಯಾತ ಗೂಂಡಾಗಳು, ಸಮಾಜದ ಘಾತುಕ ಶಕ್ತಿ, ಭಯೋತ್ಪಾದಕರು ನಮ್ಮ ಹಿಂದೂಗಳ ಹತ್ಯೆ ಮಾಡಿದ್ರು ಎಂದು ಆಕ್ರೋಶ ಹೊರಹಾಕಿದರು.

    ಅಂದು ಅವರು ಹಾಕಿದಂತಹ ಕೇಸ್‍ಗಳನ್ನು ಅಂದಿನ ಸರ್ಕಾರ ವಾಪಸ್ಸು ಪಡೆಯಿತು. ಕೇಸ್ ಹಾಕ್ತಾರೆ ವಾಪಸ್ಸು ಪಡೆಯುತ್ತಾರೆ ಎಂದು ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ. ಸಿಎಂ ಅವರು ಈ ಘಟನೆ ನೆನೆದು ಕಣ್ಣೀರು ಹಾಕುತ್ತಿದ್ದಾರೆ. ನಮ್ಮ ಸರ್ಕಾರ ಇದ್ದರೂ ನಮ್ಮ ಕಾರ್ಯಕರ್ತರ ರಕ್ಷಣೆಯಾಗುತ್ತಿಲ್ಲ. ನಾವು ರಾಜೀನಾಮೆ ನೀಡುತ್ತೇವೆ ಎಂದಾಗ ಸಿಎಂ ಸಂಘ ಪರಿವಾರದವರು ಕರೆದು ಮಾತನಾಡಿದರು ಎಂದರು. ಇದನ್ನೂ ಓದಿ: ಅಂಬುಲೆನ್ಸ್ ಟಯರ್ ಬದಲಿಸಲು ಸಹಾಯ ಮಾಡಿದ ರೇಣುಕಾಚಾರ್ಯ

    ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಡಿ ಸರ್ಕಾರ ಜೊತೆ ನಿಲ್ಲಿ ಎಂದು ಹೇಳಿದ್ದಾರೆ. ಉತ್ತರ ಪ್ರದೇಶ ಮಾದರಿಯಲ್ಲಿ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಕೇವಲ ಬಾಯಿಮಾತಿನಲ್ಲಿ ಹೇಳಿದರೆ ಸಾಲದು ಅದನ್ನು ಕಾರ್ಯರೂಪಕ್ಕೆ ತರಬೇಕು. ಆಂಧ್ರದಲ್ಲಿ ರೇಪ್ ಮಾಡಿದವರಿಗೆ ಹೇಗೆ ಎನ್ ಕೌಂಟರ್ ಮಾಡಿದ್ರೋ, ಅದೇ ರೀತಿ ಅವರನ್ನು ಎನ್ ಕೌಂಟರ್ ಮಾಡಬೇಕು ಎಂದು ಹೇಳಿದರು.

    Congress

    ಹರ್ಷನನ್ನ ಕೊಲೆ ಮಾಡಿದವರು ಜೈಲಿನಲ್ಲಿ ಮೋಜು ಮಸ್ತಿ ಮಾಡ್ತಾ ಇದ್ದಾರೆ. ಯಾರೋ ಅಧಿಕಾರಿ ಮಾಡಿದ್ದಕ್ಕೆ ಇಡೀ ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತಾಗಿದೆ. ಇಂತಹ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು ಎಂದು ಆಗ್ರಹ ನೀಡಿದರು. ಇದನ್ನೂ ಓದಿ: ರೈಲ್ವೆ ಹಳಿ ಪಕ್ಕದಲ್ಲಿ ಮೃತದೇಹ ಪತ್ತೆ – ಕೊಲೆಯ ಶಂಕೆ

    ಹಿಂದೂ ಯುವಕರು ಬಲೆ ತೊಟ್ಟಿಕೊಂಡಿಲ್ಲ, ನಿಮ್ಮ ಜೊತೆ ನಾವು ಇದೀವಿ. ಎಲ್ಲರೂ ರಾಜೀನಾಮೆ ವಾಪಸ್ಸು ಪಡೆಯಬೇಕು ಎಂದು ಮನವಿ ಮಾಡಿದರು. ಈ ರೀತಿ ಪ್ರತಿಭಟನೆಯಿಂದ ಕಾಂಗ್ರೆಸ್‍ಗೆ ಲಾಭ ಆಗುತ್ತದೆ. ಅವರಿಗೆ ಆಹಾರವಾಗಬಾರದು. ಯಾವುದೇ ಕಾರಣಕ್ಕೂ ಕಾನೂನು ಕೈ ತೆಗೆದುಕೊಳ್ಳಬಾರದು ಎಂದು ಕೇಳಿಕೊಂಡರು.

    ಸಮಾಜಘಾತುಕ ಶಕ್ತಿಗಳಿಗೆ ಎನ್‍ಕೌಂಟರ್ ಮಾಡಬೇಕು. ನಾನು ಎಲ್ಲ ತ್ಯಾಗಕ್ಕೂ ಸಿದ್ಧ ಎಂದು ಹೇಳಿದ್ದೇನೆ. ನಮ್ಮ ಸರ್ಕಾರ ದುಷ್ಟಶಕ್ತಿಗಳನ್ನು ಮಟ್ಟ ಹಾಕುತ್ತದೆ. ಯಾರೂ ಕೂಡ ಕಾನೂನು ಕೈಗೆ ತೆಗೆದುಕೊಂಡ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ಅಲ್ಪಸಂಖ್ಯಾತ ಗೂಂಡಾಗಳು ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ. ಅವರನ್ನು ಎನ್ ಕೌಂಟರ್ ಮಾಡಬೇಕು ಎಂದು ಮತ್ತೆ-ಮತ್ತೆ ಒತ್ತಿ ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಇಸ್ಲಾಂ ವಿರುದ್ಧ ಪೋಸ್ಟ್ – ಬಾಂಗ್ಲಾದಲ್ಲಿ ವ್ಯಕ್ತಿ ಮನೆಗೆ ಬೆಂಕಿ

    ಇಸ್ಲಾಂ ವಿರುದ್ಧ ಪೋಸ್ಟ್ – ಬಾಂಗ್ಲಾದಲ್ಲಿ ವ್ಯಕ್ತಿ ಮನೆಗೆ ಬೆಂಕಿ

    ಢಾಕಾ: ಇಸ್ಲಾಂ ಧರ್ಮದ ವಿರುದ್ಧ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದ ವ್ಯಕ್ತಿಯ ಮನೆಗೆ ಮತ್ತು ದೇವಾಲಯವೊಂದಕ್ಕೆ ಬೆಂಕಿ ಹಚ್ಚಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.

    ಶುಕ್ರವಾರ ಸಂಜೆ ದಿಘೋಲಿಯಾ ಗ್ರಾಮದಲ್ಲಿರುವ ಹಲವಾರು ಮನೆಗಳನ್ನು ಧ್ವಂಸಗೊಳಿಸಿದ ಗುಂಪನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಎಚ್ಚರಿಕೆ ನೀಡಿದರು. ಆದರೆ ಈ ವೇಳೆ ಒಂದು ಮನೆಯನ್ನು ದುಷ್ಕರ್ಮಿಗಳು ಸುಟ್ಟು ಹಾಕಿದ್ದಾರೆ. ಅಲ್ಲದೇ ಪೊಲೀಸರ ಮೇಲೆ ದಾಳಿಕೋರರು ಕಲ್ಲು ತೂರಾಟವನ್ನು ನಡೆಸಿದ್ದಾರೆ ಎಂದು ಸ್ಥಳೀಯ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಹರನ್ ಚಂದ್ರ ಪಾಲ್ ಹೇಳಿದ್ದಾರೆ. ಇದನ್ನೂ ಓದಿ: ಹಳೆಯ ವೈಷಮ್ಯ – ಮಾರಕಾಸ್ತ್ರದಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಹತ್ಯೆ

    ಈ ಬಗ್ಗೆ ಪ್ರತಿಕ್ರಿಯಿಸಿರುವ ಯುವಕ ಹರನ್, ಫೇಸ್‍ಬುಕ್‍ನಲ್ಲಿ ವ್ಯಕ್ತಿಯೊಬ್ಬ ಪೋಸ್ಟ್‌ವೊಂದನ್ನು ಮಾಡಿದ್ದು, ಇದರಿಂದ ಮುಸ್ಲಿಮರು ರೊಚ್ಚಿಗೆದ್ದು, ನಂತರ ದಾಳಿ ನಡೆಸಿದ್ದಾರೆ ಎಂದು ಹೇಳಿದ್ದಾನೆ ಇದೀಗ ಆಕಾಶ್ ಹಾಗೂ ಆತನ ತಂದೆ ಅಶೋಕ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಡ್ರೋನ್‌ಗೆ ಗುಂಡು -ಸೇನೆಯ ದಾಳಿಗೆ ಮರಳಿ ಪಾಕಿಗೆ ಓಡಿ ಹೋಯ್ತು

    Live Tv
    [brid partner=56869869 player=32851 video=960834 autoplay=true]

  • ಹಿಂದೂ ಯುವಕ ಮುಸ್ಲಿಂ ಯುವತಿಯರ ಜೊತೆ ಇದ್ದಿದ್ದಕ್ಕೆ ಥಳಿತ!

    ಹಿಂದೂ ಯುವಕ ಮುಸ್ಲಿಂ ಯುವತಿಯರ ಜೊತೆ ಇದ್ದಿದ್ದಕ್ಕೆ ಥಳಿತ!

    – ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್ ಗೂಂಡಾಗಿರಿ
    – 20 ಮುಸ್ಲಿಂ ಯುವಕರ ವಿರುದ್ಧ ಎಫ್‍ಐಆರ್ ದಾಖಲು

    ಮಂಡ್ಯ: ಹಿಂದೂ ಯುವಕ ತನ್ನ ಕಾಲೇಜಿನ ಮುಸ್ಲಿಂ ಸ್ನೇಹಿತೆಯರ ಜೊತೆ ಇದ್ದ ಎಂಬ ಕಾರಣಕ್ಕೆ ಮುಸ್ಲಿಂ ಯುವಕರು ನೈತಿಕ ಪೊಲೀಸ್‍ಗಿರಿ ಪ್ರದರ್ಶಿಸಿದ್ದಾರೆ. ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.

    ಮಂಡ್ಯದ ನಾಗಮಂಗಲ ತಾಲೂಕಿನ ನೆಲ್ಲಿಗೆರೆ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಅ. 9ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಾಗಮಂಗಲದ ಪದವಿ ಕಾಲೇಜುವೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪ್ರಶಾಂತ್ ಮೇಲೆ 20 ಮಂದಿ ಮುಸ್ಲಿಂ ಯುವಕರು ಹಲ್ಲೆ ನಡೆಸಿ, ನೈತಿಕ ಪೊಲೀಸ್‍ಗಿರಿ ಪ್ರದರ್ಶಿಸಿದ್ದಾರೆ. ತನ್ನ ಕಾಲೇಜಿನ ಮುಸ್ಲಿಂ ಯುವಕ-ಯುವತಿಯರ ಜೊತೆ ಪ್ರಶಾಂತ್ ಸ್ನೇಹ ಬೆಳೆಸಿದ್ದನು. ಹೀಗೆ ಅ. 9ರಂದು ಪ್ರಶಾಂತ್ ಓರ್ವ ಹಿಂದೂ ಯುವತಿ ಸೇರಿ ಮೂವರು ಗೆಳತಿಯರ ಜೊತೆ ಒಂದೇ ಕಾರಿನಲ್ಲಿ ತೆರಳುತ್ತಿದ್ದನು. ಅವರಲ್ಲಿ ಇಬ್ಬರು ಮುಸ್ಲಿಂ ಯುವತಿಯರೂ ಇದ್ದರು. ಇದನ್ನು ಕಂಡ ಆರೋಪಿ ಇದ್ರಿಷ್ ಮತ್ತು 20 ಮಂದಿ ಮುಸ್ಲಿಂ ಯುವಕರು ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ.

    ಮುಸ್ಲಿಂ ಯುವತಿಯೊಂದಿಗೆ ಯಾಕೆ ಇದ್ದೀಯಾ ಎಂದು ಪ್ರಶಾಂತ್‍ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಂತರ ಎಲ್ಲರೂ ಸೇರಿಕೊಂಡು ಪ್ರಶಾಂತ್ ಮತ್ತು ಮುಸ್ಲಿಂ ಯವತಿ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಹಲ್ಲೆ ಮಾಡುವ ದೃಶ್ಯವನ್ನು ವಿಡಿಯೋ ಕೂಡ ಮಾಡಿಕೊಂಡಿದ್ದಾರೆ. ಬಳಿಕ ಹಿಂದೂ ಯುವಕನಿಗೆ ಹೊಡೆದಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹರಿಬಿಟ್ಟಿದ್ದಾರೆ.

    ವಿಡಿಯೋದಲ್ಲಿ ನಾವೆಲ್ಲ ಸ್ನೇಹಿತರು ನಮ್ಮನ್ನ ಬಿಟ್ಟುಬಿಡಿ ಎಂದು ಪ್ರಶಾಂತ್ ಹಾಗೂ ಯುವತಿ ಬೇಡಿಕೊಳ್ಳುತ್ತಿರುವ ದೃಶ್ಯ ಸೆರೆಯಾಗಿದೆ. ವಿದ್ಯಾರ್ಥಿಗಳು ಎಷ್ಟೇ ಬೇಡಿಕೊಂಡರೂ ಬಿಡದೇ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಹೀಗೆ ನೈತಿಕ ಪೋಲಿಸ್ ಗೂಂಡಾಗಿರಿ ನಡೆಸಿರುವ ವಿಡಿಯೋ ವೈರಲ್ ಆದ ಬಳಿಕ ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣೆ ವೇಳೆ ತಮ್ಮ ಕಾಲೇಜಿನ ಮುಸ್ಲಿಂ ಪ್ರೇಮಿಗಳಿಗೆ ಸಹಾಯ ಮಾಡಲು ಕಾರಿನಲ್ಲಿ ಸ್ನೇಹಿತರೆಲ್ಲ ತೆರಳುತ್ತಿದ್ದೆವು ಈ ವೇಳೆ ಘಟನೆ ನಡೆದಿದೆ ಎಂದು ಪ್ರಶಾಂತ್ ಹಾಗೂ ಮುಸ್ಲಿಂ ಯುವತಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಈ ಸಂಬಂಧ ಎಸ್‍ಎಸ್‍ಪಿ ಶೋಭರಾಣಿ ತನಿಖೆ ಕೈಗೊಂಡಿದ್ದು, ಆರೋಪಿ ಇದ್ರಿಷ್ ಸೇರಿ 20 ಜನರ ವಿರುದ್ಧ ಎಫ್‍ಐಆರ್ ದಾಖಲು ಮಾಡಿ, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

    https://www.youtube.com/watch?v=awDAVE6wU1Y

  • ಹಿಂದೂ ಯುವತಿಯರ ಕೈಗೆ ತಲ್ವಾರ್ ಕೊಡ್ಬೇಕು, ಅನ್ಯಧರ್ಮೀಯರು ಕಣ್ಣೆತ್ತಿ ನೋಡಿದ್ರೆ ತಲೆ ಕಡೀಬೇಕು: ಸಾಧ್ವಿ ಸರಸ್ವತಿ

    ಹಿಂದೂ ಯುವತಿಯರ ಕೈಗೆ ತಲ್ವಾರ್ ಕೊಡ್ಬೇಕು, ಅನ್ಯಧರ್ಮೀಯರು ಕಣ್ಣೆತ್ತಿ ನೋಡಿದ್ರೆ ತಲೆ ಕಡೀಬೇಕು: ಸಾಧ್ವಿ ಸರಸ್ವತಿ

    ಬೆಳಗಾವಿ: ಗೋ ಹತ್ಯೆ ಮಾಡೋರನ್ನ ತಲೆ ಕಡೀಬೇಕು. ಹಿಂದೂ ಯುವತಿಯರ ಕೈಗೆ ತಲ್ವಾರ್ ಕೊಡಬೇಕು. ತಮ್ಮನ್ನು ಕಣ್ಣೆತ್ತಿ ನೋಡೋ ವಿಧರ್ಮಿಯರ ತಲೆ ಕಡೀಬೇಕು ಎಂದು ಮಹಿಳಾ ಸನ್ಯಾಸಿನಿ, ಚೈತನ್ಯ ಪೀಠದ ಪ್ರಚಾರಕಿ ಸಾಧ್ವಿ ಸರಸ್ವತಿ ಹೇಳಿದ್ದಾರೆ.

    ಬೆಳಗಾವಿಯ ಗುಜರಾತ್ ಭವನದಲ್ಲಿ ಬಜರಂಗದಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸಹೋದರಿಯರೊಂದಿಗೆ ಲವ್ ಜಿಹಾದ್ ಮಾಡಲಾಗ್ತಿದೆ. ಶಾಲೆ-ಕಾಲೇಜುಗಳು, ಟ್ಯೂಷನ್ ಸೆಂಟರ್‍ಗಳು, ಬಟ್ಟೆಯಂಗಡಿ, ಮೊಬೈಲ್ ಅಂಗಡಿಗಳಲ್ಲಿ ಲವ್ ಜೆಹಾದ್ ಜಾಸ್ತಿಯಾಗ್ತಿದೆ ಎಂದರು.

    ಲವ್ ಜಿಹಾದ್ ತಪ್ಪಿಸಲು ರಕ್ಷಾ ಬಂಧನದಂದು ಅಣ್ಣಂದಿರು ತಂಗಿಯರಿಗೆ ಉಡುಗೊರೆಯಾಗಿ ತಲ್ವಾರ್ ಕೊಡ್ಬೇಕು. ನಮ್ಮತ್ತ ಕಣ್ಣ ಎತ್ತಿ ನೋಡುವವರ ತಲೆಕಡಿದು ಭಾರತ ಮಾತೆಯ ಪಾದಕ್ಕೆ ಅರ್ಪಿಸುವಂತೆ ನಮ್ಮ ಸಹೋದರಿಯರಿಗೆ ಸೂಚಿಸಿ ಎಂದು ಸಾಧ್ವಿ ಸರಸ್ವತಿ ಹೇಳಿದರು.

    ಗೋ ಹತ್ಯೆ ಮಾಡುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಅಷ್ಟೇ ಅಲ್ಲದೇ ಅವರ ಕತ್ತನ್ನು ಕತ್ತರಿಸಬೇಕು ಎಂದು ಅವರು ಆಗ್ರಹಿಸಿದರು.

     

    https://youtu.be/B1brRKodbtU