Tag: Hindu Woman

  • ಹಿಂದೂ ಮಹಿಳೆಯ ಶವವನ್ನು ಹೊತ್ತು ಅಂತ್ಯಸಂಸ್ಕಾರ ಮಾಡಿದ ಮುಸ್ಲಿಮರು

    ಹಿಂದೂ ಮಹಿಳೆಯ ಶವವನ್ನು ಹೊತ್ತು ಅಂತ್ಯಸಂಸ್ಕಾರ ಮಾಡಿದ ಮುಸ್ಲಿಮರು

    ಶ್ರೀನಗರ: ಕೋಮು ಸೌಹಾರ್ದತೆಗೆ ಸಾಕ್ಷಿ ಎಂಬಂತೆ ಮುಸ್ಲಿಂ ಸಮುದಾಯದ ಮಂದಿ, ಹಿಂದೂ ಪಂಡಿತ ಸಮುದಾಯ ಮಹಿಳೆಯ ಅಂತ್ಯಕ್ರಿಯಲ್ಲಿ ಭಾಗವಹಿಸಿರುವ ಘಟನೆ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದಿದೆ.

    ಮೋತಿಲಾಲ್ ಕೌಲ್ ಎಂಬವರ ಪತ್ನಿ ರಾಣಿಕೌಲ್(65) ಶನಿವಾರ ಮೃತಪಟ್ಟಿದ್ದಾರೆ. ಮಹಿಳೆಯ ಅಂತ್ಯಕ್ರಿಯೆಗೆ ಆಕೆಯ ಸಂಬಂಧಿಕರು ದೆಹಲಿಯಿಂದ ಬರಬೇಕಾದ್ದರಿಂದ ಒಂದು ದಿನ ತಡವಾಗಿ ಮಹಿಳೆಯ ಅಂತ್ಯಕ್ರಿಯೆಯನ್ನು ನಡೆಸಬೇಕಾಯಿತು.

    ಸುಮಾರು 600 ಮುಸ್ಲಿಂ ಸಮುದಾಯದವರ ಮನೆಯ ಮಧ್ಯೆ ಮೋತಿಲಾಲ್ ಕೌಲ್ ಮನೆ ಇದ್ದು, ಭಾನುವಾರ ಅಲ್ಲಿನ ಸ್ಥಳೀಯ ಮುಸ್ಲಿಮರು ಮಹಿಳೆಯ ಅಂತ್ಯಕ್ರಿಯೆಗೆ ಸಹಾಯವನ್ನು ಮಾಡಿದ್ದಾರೆ. ಮಹಿಳೆಯ ದೇಹವನ್ನು ದಹಿಸಲು ಮರವನ್ನು ಸಂಗ್ರಹಿಸಿ, ಶವವನ್ನು ಸ್ಮಶಾನದವರೆಗೆ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ. ಅಲ್ಲದೆ ಪಂಡಿತರ ಪದ್ದತಿಗೆ ಅನುಗುಣವಾಗಿ ಕೊನೆಯ ಅಂತಿಮ ವಿಧಿ ವಿಧಾನವನ್ನು ಮಾಡಿದ್ದಾರೆ.

    ಕಾಶ್ಮೀರದ ಬಾರಾಮುಲ್ಲಾದಲ್ಲಿ ಪಂಡಿತ್ ಸಮುದಾಯದ ಮಹಿಳೆಯ ಅಂತಿಮ ವಿಧಿವಿಧಾನ ಮಾಡಿದ ಮುಸ್ಲಿಮರ ವೀಡಿಯೋ ವೈರಲ್ ಆಗುತ್ತಿದೆ.

  • ಪಾಕ್ ವಿಧಾನಸಭಾ ಎಲೆಕ್ಷನ್ ನಲ್ಲಿ ಮೊದಲ ಬಾರಿಗೆ ಹಿಂದೂ ಮಹಿಳೆ ಸ್ಪರ್ಧೆ

    ಪಾಕ್ ವಿಧಾನಸಭಾ ಎಲೆಕ್ಷನ್ ನಲ್ಲಿ ಮೊದಲ ಬಾರಿಗೆ ಹಿಂದೂ ಮಹಿಳೆ ಸ್ಪರ್ಧೆ

    ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಾಂತೀಯ ವಿಧಾನಸಭೆ ಚುನಾವಣೆ ಇದೇ ತಿಂಗಳ 15ರಂದು ನಡೆಯಲಿದ್ದು, ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರು ಸ್ಪರ್ಧೆ ಮಾಡುತ್ತಿದ್ದಾರೆ.

    ಸಿಂಧ್ ಪ್ರಾಂತ್ಯಕ್ಕೆ ಸೇರಿರುವ ಸುನೀತಾ ಪರ್ಮಾರ್ (31) ಅಲ್ಪಸಂಖ್ಯಾತ ಸಮುದಾಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಮೂಲತಃ ಮೇಘರ್ ಸಮುದಾಯಕ್ಕೆ ಸೇರಿರುವ ಸುನಿತಾ ಅವರು, ಹೆಚ್ಚು ಹಿಂದೂ ಸಮುದಾಯದ ಜನಸಂಖ್ಯೆ ಹೊಂದಿರುವ ಥಾರ್ಪಾರ್ಕರ್ ಜಿಲ್ಲೆಯಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿದೆ.

    ಈ ಕುರಿತು ಸುನಿತಾ ಅವರು ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ತಮ್ಮ ಕ್ಷೇತ್ರ ಜನರ ಮೂಲಭೂತ ಅಗತ್ಯತೆಗಳನ್ನು ಪೂರೈಸಲು ಈ ಹಿಂದಿನ ಸರ್ಕಾರಗಳು ವಿಫಲವಾಗಿದೆ. ಆದ್ದರಿಂದ ಜನರು ಉತ್ತಮ ಜೀವನ ನಡೆಸುವಂತೆ ಮಾಡಲು ಹಾಗೂ ಹೆಣ್ಣು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ, ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಮಾಡಲು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದ್ದಾಗಿ ವರದಿಯಾಗಿದೆ.

    ಕಳೆದ ಮಾರ್ಚ್ ನಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮೂಲಕ ಹಿಂದೂ ದಲಿತ ಮಹಿಳೆ ಕೃಷ್ಣ ಕುಮಾರಿ ಎಂಬವರು ಮೊದಲ ಸೆನೆಟರ್ ಆಗಿ ಆಯ್ಕೆ ಆಗಿದ್ದರು.