Tag: Hindu Tradition

  • ಬಿಹಾರ ವರನ ಕೈ ಹಿಡಿದ ಜರ್ಮನಿ ಮಹಿಳೆ

    ಬಿಹಾರ ವರನ ಕೈ ಹಿಡಿದ ಜರ್ಮನಿ ಮಹಿಳೆ

    ಪಾಟ್ನಾ: ಪ್ರೀತಿಗೆ ಜಾತಿ, ಧರ್ಮ, ಭಾಷೆ ಇಲ್ಲ ಎಂಬುವುದಕ್ಕೆ ಸಾಕಷ್ಟು ಉದಾಹರಣೆಗಳಿದೆ. ಪ್ರೀತಿ ಎಂತಹವರ ಹೃದಯವನ್ನು ಸಹ ಕರಗಿಸುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಜರ್ಮನಿಯ ಮಹಿಳೆಯೊಬ್ಬಳು ಬಿಹಾರದ ನವಾಡದ ವ್ಯಕ್ತಿಯೊಂದಿಗೆ ಭಾರತೀಯ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದಾರೆ. ಇದೀಗ ಈ ದಂಪತಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಲಾರಿಸ್ಸಾ ಬೆಲ್ಚ್ ಅವರು ಜರ್ಮನಿಯಲ್ಲಿ ಹುಟ್ಟಿ ಬೆಳೆದರು. ಇದೀಗ ಬಿಹಾರದ ನವಾಡದ ಸತ್ಯೇಂದ್ರ ಕುಮಾರ್ ಅವರನ್ನು ವಿವಾಹವಾಗಿದ್ದಾರೆ. ಇಬ್ಬರು ಸ್ವೀಡನ್‍ನಲ್ಲಿ ಸಂಶೋಧನಾ ವಿದ್ಯಾರ್ಥಿಗಳಾಗಿದ್ದು, ಸತ್ಯೇಂದ್ರ ಅವರು ಚರ್ಮದ ಕ್ಯಾನ್ಸರ್ ಸಂಶೋಧನೆ ನಡೆಸುತ್ತಿದ್ದರೆ, ಲಾರಿಸ್ಸಾ ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು. ಇದನ್ನೂ ಓದಿ: ರೇಣುಕಾಚಾರ್ಯ, ಪ್ರತಾಪಸಿಂಹ ವಿರುದ್ಧದ 4 ಕೇಸ್‌ ವಾಪಸ್‌ ಪಡೆದ ಸರ್ಕಾರ- ಹೈಕೋರ್ಟ್‌ ಗರಂ

    2019 ಇಬ್ಬರಿಗೂ ಪರಿಚಯವಾಗಿ ನಂತರ ಸ್ನೇಹದಿಂದ ಪರಸ್ಪರ ಪ್ರೀತಿಸಲು ಆರಂಭಿಸಿದರು. ಮೂರು ವರ್ಷಗಳ ಬಳಿಕ ಇದೀಗ ಸಪ್ತಪದಿ ತುಳಿದಿದ್ದಾರೆ. ಸದ್ಯ ವೈರಲ್ ಆಗುತ್ತಿರುವ ಫೋಟೋದಲ್ಲಿ ಲಾರಿಸ್ಸಾ ಕೆಂಪು ಬಣ್ಣದ ಲೆಹೆಂಗಾ ತೊಟ್ಟು, ಚಿನ್ನಾಭರಣ ಧರಿಸಿ ದೇಸಿ ಲುಕ್‍ನಲ್ಲಿ ಮಿಂಚುತ್ತಿದ್ದರೆ, ಸತ್ಯೇಂದ್ರ ಅವರು ಗೋಲ್ಡನ್ ಕಲರ್ ಶೇರ್ವಾನಿ ಧರಿಸಿರುವುದನ್ನನು ಕಾಣಬಹುದಾಗಿದೆ.

    ಭಾರತದ ಬಗ್ಗೆ ಮಾತನಾಡಿರುವ ಲಾರಿಸ್ಸಾ, ಇಬ್ಬರೂ ಭಾರತೀಯ ಸಂಪ್ರದಾಯದಂತೆ ಮದುವೆಯಾಗಲು ಬಯಸಿದೇವು. ಇಲ್ಲಿನ ಭಾಷೆ ಹಾಗೂ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಬಹಳ ಉತ್ಸುಕಳಾಗಿದ್ದೇನೆ. ನಾನು ಭಾರತದಲ್ಲಿಯೇ ನನ್ನ ಜೀವನವನ್ನು ಆನಂದದಿಂದ ಕಳೆಯಲು ಬಂದಿದ್ದೇನೆ. ಇಲ್ಲಿನ ಜನರು ತುಂಬಾ ಒಳ್ಳೆಯವರು, ನಮ್ಮ ಸಂಸ್ಕೃತಿಗೂ, ಭಾರತೀಯ ಸಂಸ್ಕೃತಿಗೂ ವ್ಯತ್ಯಾಸವಿದೆ. ನನಗೆ ಹಿಂದಿ ಹೆಚ್ಚು ಅರ್ಥವಾಗುವುದಿಲ್ಲ. ಆದರೆ ಸತ್ಯೇಂದ್ರ ಅವರು ಅನುವಾದಿಸಲು ಸಹಾಯ ಮಾಡುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ನೀರು ಕುಡಿಯೋಕೆ ಹೊರಟ ಅಶೋಕ್ ಕಾಲೆಳೆದ ಸಿದ್ದರಾಮಯ್ಯ, ಯಡಿಯೂರಪ್ಪ..!


    German woman, Bihar man, marriage, Hindu tradition

  • ಯೋಗ’ಯೋಗಾ’ – ವಿಯೆಟ್ನಾಂ  ಯುವತಿಯ ಕೈಹಿಡಿದ ಹಾವೇರಿಯ ಯುವಕ

    ಯೋಗ’ಯೋಗಾ’ – ವಿಯೆಟ್ನಾಂ ಯುವತಿಯ ಕೈಹಿಡಿದ ಹಾವೇರಿಯ ಯುವಕ

    – ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವದಂಪತಿ

    ಹಾವೇರಿ: ಇಂದು ಜಿಲ್ಲೆಯಲ್ಲೊಂದು ಅಪರೂಪದ ಮದುವೆ ನಡೆದಿದೆ. ವಿಯೆಟ್ನಾಂನ ಯುವತಿ ಜಿಲ್ಲೆಯ ಹಳ್ಳಿಯ ಯುವಕನನ್ನ ವರಿಸಿದ್ದಾಳೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ರಾಮತೀರ್ಥಹೊಸಕೊಪ್ಪ ಗ್ರಾಮದಲ್ಲಿ ಈ ಅಪರೂಪದ ಮದುವೆ ನಡೆಯಿತು.

    ವಿಯೆಟ್ನಾಂ ಯುವತಿಗೆ ತಾಳಿ ಕಟ್ಟಿ ಬಾಳಸಂಗಾತಿಯಾಗಿ ಸ್ವೀಕಾರ ಮಾಡಿದ ಯುವಕನ ಹೆಸರು ಪ್ರದೀಪ್ ಖಂಡನವರ. ಐಟಿಐ ಮುಗಿಸಿ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಯೋಗದಲ್ಲಿ ಪರಿಣಿತಿ ಪಡೆದಿದ್ದ ಪ್ರದೀಪ್ ಸ್ನೇಹಿತರ ಜೊತೆಗೂಡಿ ವಿಯೆಟ್ನಾಂಗೆ ಯೋಗ ಕಲಿಸೋಕೆ ಎಂದು ಹೋಗಿದ್ದರು. ಕಳೆದ ಎಂಟು ವರ್ಷಗಳಿಂದ ಯೋಗ ಶಿಕ್ಷಕನಾಗಿ ವಿಯೆಟ್ನಾಂನ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದರು. ಇದನ್ನೂ ಓದಿ: ‘ಸುಶಾಂತ್ ಸ್ಟಾರ್ ಅಲ್ಲ’ ಎಂದು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬಂದಿರಲಿಲ್ಲ: ಅಭಿಷೇಕ್ ಕಪೂರ್

    ಅದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಕುಯಾನ್ ತ್ರಾಂಗ್(ಪ್ರೀತಿ) ಯುವತಿಯೊಂದಿಗೆ ಪ್ರೇಮಾಂಕುರ ಆಗಿತ್ತು. ಕಳೆದ ಕೆಲವು ವರ್ಷಗಳಿಂದ ಇಬ್ಬರ ನಡುವೆ ಒಬ್ಬರನ್ನೊಬ್ಬರು ಬಿಟ್ಟಿಲಾರದಷ್ಟು ಪ್ರೀತಿ ಆಗಾದವಾಗಿ ಬೆಳೆದಿತ್ತು. ನಂತರ ಪ್ರದೀಪ್ ತನ್ನ ಪ್ರೀತಿ, ಪ್ರೇಮದ ವಿಚಾರವನ್ನ ಮನೆಯವರಿಗೆ ತಿಳಿಸಿ ಮನೆಯವರ ಅನುಮತಿ ಮೇರೆಗೆ ಇವತ್ತು ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

    ಹಿಂದೂ ಸಂಪ್ರದಾಯದಂತೆ ಪ್ರದೀಪ್ ಮನೆಯ ಮುಂದೆ ಚಪ್ಪರ ಹಾಕಿ ಸಂಭ್ರಮದಿಂದ ಮದುವೆ ಮಾಡಲಾಯಿತು. ಮನೆಯ ಮುಂದೆ ಹಾಕಿದ್ದ ಚಪ್ಪರದಲ್ಲಿ ವಧು-ವರರಿಗೆ ಸುರಿಗೆ ನೀರು ಹಾಕಿ, ಬಾಸಿಂಗ ಕಟ್ಟಿ ತಾಳಿ ಕಟ್ಟಿಸಲಾಯಿತು. ವಿಯಟ್ನಾಂ ಯುವತಿ ಪುರೋಹಿತರ ಮಂತ್ರ ಘೋಷಣೆಗಳೊಂದಿಗೆ ಪ್ರದೀಪ್ ಜೊತೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಳು.

    ಪ್ರೀತಿಗೆ ಓರ್ವ ಸಹೋದರಿ ಮತ್ತು ತಾಯಿ ಇದ್ದಾರೆ. ಆದರೆ ಸಹೋದರಿಗೆ ಹೆರಿಗೆ ಆಗಿದ್ದರಿಂದ ತಾಯಿ ಸಹೋದರಿಯ ಜೊತೆಗಿದ್ದಾರೆ. ಆದರೆ ಮದುವೆ ನಿಶ್ಚಯವಾಗಿ ದಿನಾಂಕ ಫಿಕ್ಸ್ ಆಗಿದ್ದರಿಂದ ಇವತ್ತು ಪ್ರದೀಪ್ ಮತ್ತು ಪ್ರೀತಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಿಂದೂ ಸಂಪ್ರದಾಯದಂತೆ ನಡೆದ ಮದುವೆ ಮಂಗಳವಾದ್ಯಗಳೊಂದಿಗೆ ಅದ್ಧೂರಿಯಾಗಿ ನಡೆಯಿತು. ಇದನ್ನೂ ಓದಿ: 263 ಪಾಸಿಟಿವ್, 7 ಸಾವು – ಇಂದು 2,25,152 ಜನರಿಗೆ ಲಸಿಕೆ

    ಪರಸ್ಪರ ಹಾರ ಬದಲಿಸಿಕೊಂಡು ದಾಂಪತ್ಯಕ್ಕೆ ಕಾಲಿಟ್ಟ ಇಬ್ಬರು ಅರುಂಧತಿ ನಕ್ಷತ್ರ ನೋಡಿ ಖುಷಿಪಟ್ಟರು. ಯುವಕನ ಸಂಬಂಧಿಕರು, ಸ್ನೇಹಿತರು ಹಾಗೂ ಗ್ರಾಮದ ನೂರಾರು ಜನರು ಮದುವೆಗೆ ಬಂದು ವಧು-ವರರಿಗೆ ಶುಭ ಹಾರೈಸಿದರು.

  • ಅನಾಥ ಹಿಂದು ಯುವತಿಯನ್ನ ಸಾಕಿ ಹಿಂದು ಸಂಪ್ರದಾಯದಂತೆ ಮದುವೆ

    ಅನಾಥ ಹಿಂದು ಯುವತಿಯನ್ನ ಸಾಕಿ ಹಿಂದು ಸಂಪ್ರದಾಯದಂತೆ ಮದುವೆ

    – ಸೌಹಾರ್ದತೆಗೆ ಸಾಕ್ಷಿಯಾದ ವಿಜಯಪುರದ ಮಹಿಬೂಬ
    – ಸಾಕು ಮಗಳ ಅದ್ಧೂರಿ ಮದುವೆ

    ವಿಜಯಪುರ: ಅನಾಥ ಹಿಂದು ಬಾಲಕಿಯನ್ನ ಸಾಕಿ, ಸಲುಹಿ ನಂತರ ಹಿಂದು ಧರ್ಮದಂತೆಮದುವೆ ಮಾಡಿಸಿದ ಅಪರೂಪದ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ನಡೆದಿದೆ.

    10 ವರ್ಷದ ಹಿಂದೆ ತಂದೆ, ತಾಯಿಯನ್ನ ಕಳೆದುಕೊಂಡ ಪೂಜಾ ಅಜ್ಜಿಯ ಊರಾದ ಆಲಮೇಲದಲ್ಲಿ ಬಂದು ವಾಸವಾಗಿದ್ದಳು. ಅದೇ ಓಣಿಯಲ್ಲಿ ಮಹಿಬೂಬ ಮಸಳಿ ಎಂಬವರು ವಾಸವಿದ್ದರು. ಪೂಜಾಳ ದುರಾದೃಷ್ಟಕ್ಕೆ ಅವಳ ಅಜ್ಜಿಯೂ ಸಾವನ್ನಪ್ಪಿದ್ದರು. ಇದನ್ನೂ ಓದಿ: ಹಿಂದೂಗಳ ಅಂಗಡಿ ರಕ್ಷಿಸಿದ ಮುಸ್ಲಿಂ, ಮುಸ್ಲಿಮರ ಜೀವ ಉಳಿಸಿದ ಹಿಂದೂ- ಘರ್ಷಣೆಯಲ್ಲೂ ಸೌಹಾರ್ದ ಗೀತೆ

    ತದನಂತರ ಮಹಿಬೂಬ ಅವರೇ ಪೂಜಾಳನ್ನ ತಮ್ಮ ಮನೆಯಲ್ಲಿಟ್ಟುಕೊಂಡು ಮಗಳಂತೆ ಸಾಕಿ, ಸಲುಹಿದ್ದರು. ಇದೀಗ ಮಹಿಬೂಬ ಅವರು ತಮ್ಮ ಮನೆಯ ಮುಂದೆ ಪೂಜಾಳನ್ನ ಹಿಂದು ಸಂಪ್ರದಾಯದಂತೆ ಹಿಂದು ಯುವಕನಿಗೆ ಕೊಟ್ಟು ಅದ್ಧೂರಿ ಮದುವೆ ಮಾಡಿಕೊಟ್ಟು ಇತರರಿಗೆ ಮಾದರಿ ಆಗಿದ್ದಾರೆ. ಇದನ್ನೂ ಓದಿ: ಹಿಂದೂ ಯುವತಿಯ ಮದುವೆ ಮಾಡಿದ ಉಳ್ಳಾಲದ ಮುಸ್ಲಿಂ ಕುಟುಂಬ

  • ಸಾಕು ಮಗಳನ್ನ ಹಿಂದೂ ಯುವಕನೊಂದಿಗೆ ಮದ್ವೆ ಮಾಡಿದ ಮುಸ್ಲಿಂ ದಂಪತಿ

    ಸಾಕು ಮಗಳನ್ನ ಹಿಂದೂ ಯುವಕನೊಂದಿಗೆ ಮದ್ವೆ ಮಾಡಿದ ಮುಸ್ಲಿಂ ದಂಪತಿ

    – ಪೋಷಕರಿಲ್ಲದೇ ಅನಾಥಳಾಗಿದ್ದಾಗ ದತ್ತು ಪಡೆದಿದ್ದ ದಂಪತಿ

    ತಿರುವನಂತಪುರಂ: ಮುಸ್ಲಿಂ ದಂಪತಿ ತಮ್ಮ ಸಾಕು ಮಗಳನ್ನು ಸ್ವಂತ ಮಗಳಂತೆ ಸಾಕಿ-ಸಲಹಿದ್ದರು. ಕೊನೆಗೆ ಆಕೆಯ ಇಷ್ಟದಂತೆ ಹಿಂದೂ ಹುಡುಗನ ಜೊತೆಯಲ್ಲಿಯೇ ವಿವಾಹ ಮಾಡಿರುವ ಅಪರೂಪದ ಕೋಮು ಸೌಹಾರ್ದತೆಯ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ.

    ಅಬ್ದುಲ್ಲಾ ಮತ್ತು ಖದೀಜಾ ಮುಸ್ಲಿಂ ದಂಪತಿ ತಮ್ಮ ಸಾಕು ಮಗಳು ರಾಜೇಶ್ವರಿಗೆ ಹಿಂದೂ ಹುಡುಗನ ಜೊತೆ ವಿವಾಹ ಮಾಡಿದ್ದಾರೆ. ಕೇರಳದ ಭಾಗವತಿ ದೇವಸ್ಥಾನದಲ್ಲಿ ಭಾನುವಾರ ಈ ವಿವಾಹ ಸಮಾರಂಭ ನಡೆದಿದೆ. ಮುಸ್ಲಿಂ ದಂಪತಿಯ ಮಗಳು ರಾಜೇಶ್ವರಿ ಹಿಂದೂ ಸಂಪ್ರದಾಯದಂತೆ ವಿಷ್ಣು ಪ್ರಸಾದ್ ಜೊತೆ ಮದುವೆಯಾಗಿದ್ದಾಳೆ. ಇದನ್ನೂ ಓದಿ: ಪ್ರಿಯತಮೆಗೆ ಕ್ಯಾನ್ಸರ್- MA ಕನಸು ಬಿಟ್ಟು ದಿನ ಕೂಲಿ ಕೆಲಸಗಾರನಾದ

    ಈ ಅಪರೂಪದ ಮದುವೆಗೆ ಹಿಂದೂ ಮತ್ತು ಮುಸ್ಲಿಂ ಕುಟುಂಬದವರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು. ವಧು ರಾಜೇಶ್ವರಿ ತಂದೆ, ಅಬ್ದುಲ್ಲಾ ಅವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮೃತಪಟ್ಟಿದ್ದರು. ಆಕೆಯ ತಾಯಿಯೂ ಕೂಡ ರಾಜೇಶ್ವರಿ ಮಗುವಾಗಿದ್ದಾಗ ಸಾವನ್ನಪ್ಪಿದ್ದರು. ಕೊನೆಗೆ ರಾಜೇಶ್ವರಿ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥಳಾಗಿದ್ದಳು. ಕೊನೆಗೆ ಅಬ್ದುಲ್ಲಾ ಮತ್ತು ಖದೀಜಾ ರಾಜೇಶ್ವರಿಯನ್ನು ದತ್ತು ಪಡೆದರು.

    ರಾಜೇಶ್ವರಿ, ಅಬ್ದುಲ್ಲಾ ಮತ್ತು ಖದೀಜಾ ಅವರ ಮೂವರು ಗಂಡು ಮಕ್ಕಳಾದ ಶಮೀಮ್, ನಜೀಬ್ ಮತ್ತು ಶೆರೀಫ್ ಅವರೊಂದಿಗೆ ಬೆಳೆದಿದ್ದಳು. ಮುಸ್ಲಿಂ ದಂಪತಿ ಸಾಕು ಮಗಳನ್ನು ಚೆನ್ನಾಗಿ ಸಾಕಿ, ಶಿಕ್ಷಣವನ್ನೂ ಕೊಡಿಸಿದ್ದರು. ಕೊನೆಗೆ ಆಕೆಯ ಇಷ್ಟದಂತೆ ಹಿಂದೂ ಹುಡುಗನ ಜೊತೆ ವಿವಾಹ ಕೂಡ ಮಾಡಿಸಿದ್ದಾರೆ.

    ಜಾತಿ, ಧರ್ಮವನ್ನು ಮೀರಿ ಕೇರಳದ ಕಾಯಂಕುಲಂನ ಮಸೀದಿಯಲ್ಲಿ ರಾಜೇಶ್ವರಿ ಮತ್ತು ವಿಷ್ಣು ಪ್ರಸಾದ್ ಜೋಡಿಯ ಹಿಂದೂ ವಿವಾಹ ಸಮಾರಂಭವನ್ನು ಆಯೋಜಿಸಿತ್ತು.

  • ಹಿಂದೂ ಸಂಪ್ರದಾಯದಂತೆ ಮನೆ ಗೃಹಪ್ರವೇಶ ಮಾಡಿದ ಮುಸ್ಲಿಂ ಕುಟುಂಬ

    ಹಿಂದೂ ಸಂಪ್ರದಾಯದಂತೆ ಮನೆ ಗೃಹಪ್ರವೇಶ ಮಾಡಿದ ಮುಸ್ಲಿಂ ಕುಟುಂಬ

    ವಿಜಯಪುರ: ಕಳೆದ ತಿಂಗಳು ನೂತನ ದರ್ಗಾವನ್ನು ಹಿಂದೂ ಧರ್ಮದ ಪ್ರಕಾರ ಪ್ರವೇಶ ಮಾಡಿ ವಿಜಯಪುರದತ್ತ ರಾಜ್ಯದ ಗಮನವನ್ನು ಮುಸ್ಲಿಂ ಬಾಂಧವರು ಸೆಳೆದಿದ್ದರು. ಇದೀಗ ವಿಜಯಪುರದ ಮುಸ್ಲಿಂ ಕುಟುಂಬವೊಂದು ನೂತನ ಮನೆಯ ಗೃಹ ಪ್ರವೇಶವನ್ನು ಹಿಂದೂ ಸಂಸ್ಕೃತಿ ಪ್ರಕಾರ ಮಾಡಿ ಮತ್ತೆ ರಾಜ್ಯದ ಗಮನವನ್ನು ತನ್ನತ್ತ ಸೆಳೆದಿದೆ.

    ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಗಬೆಟ್ಟ ಗ್ರಾಮದ ಲಾಲಸಾಬ ನದಾಫ್ ಎಂಬುವರುವ ಡಿ.5 ರಂದು ನಾಗರಬೆಟ್ಟ ಗ್ರಾಮದಲ್ಲಿ ತಮ್ಮ ನೂತನ ಮನೆಯ ಗೃಹ ಪ್ರವೇಶವನ್ನು ಹಿಂದೂ ಸಂಸ್ಕೃತಿ ಪ್ರಕಾರ ನೆರವೇರಿಸಿದ್ದಾರೆ. ನವಗ್ರಹ ಹಾಗೂ ಲಕ್ಷ್ಮೀ ಪೂಜೆ ಮಾಡಿ ಗೃಹಪ್ರವೇಶ ಮಾಡಿದ್ದಾರೆ.

    ಲಾಲಸಾಬ ನದಾಫ್ ನಾಗರಬೆಟ್ಟದ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿದ್ದು, ಹಿಂದು ಧರ್ಮದ ಗೆಳಯರನ್ನ ಹೆಚ್ಚಾಗಿ ಹೊಂದಿದ್ದಾರೆ. ಇನ್ನು ನಾವು ಹಳ್ಳಿ ಜನರಾಗಿದ್ದು ನಾವು ಇಲ್ಲಿ ಎಲ್ಲ ಧರ್ಮದವರು ಒಂದಾಗಿಯೇ ಇರುತ್ತೇವೆ. ನಮ್ಮಲ್ಲಿ ಯಾವುದೆ ಬೇಧ ಭಾವ ಇರಲ್ಲ. ಅಲ್ಲದೆ ಎಲ್ಲ ಧರ್ಮವನ್ನು ಗೌರವಿಸುತ್ತೇವೆ. ಹಲವಾರು ವರ್ಷಗಳಿಂದ ನಮ್ಮ ಕುಟುಂಬ ಮುಸ್ಲಿಂ ಧರ್ಮದೊಂದಿಗೆ ಹಿಂದು ಧರ್ಮವನ್ನು ಪಾಲಿಸುತ್ತ ಬಂದಿದೆ. ಅದೇ ಕಾರಣಕ್ಕೆ ಗೃಹಪ್ರವೇಶದ ವೇಳೆ ಕುರಾನ್ ಪಠಣವನ್ನು ಮಾಡಿ ನವಗೃಹ ಹಾಗೂ ಲಕ್ಷ್ಮೀ ಪೂಜೆ ಮಾಡಿದ್ದೇವೆ ಎಂದು ಹೇಳುತ್ತಾರೆ.

    ಲಾಲಸಾಬ ಕುಟುಂಬದ ಭಾವೈಕ್ಯತೆಯ ಭಾವ ಇತರರಿಗೆ ಮಾದರಿಯಾಗಿದೆ. ಇನ್ನು ಲಾಲಸಾಬ ಅವರ ಈ ಕಾರ್ಯಕ್ಕೆ ಪ್ರಶಂಸೆಗಳ ಮಹಾಪೂರ ಹರಿದು ಬರುತ್ತಿದೆ.

  • ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಚಿರು-ಮೇಘನಾ!

    ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಚಿರು-ಮೇಘನಾ!

    ಬೆಂಗಳೂರು: ಕಳೆದ ಒಂದು ವಾರದಿಂದ ಚಿರು ಹಾಗೂ ಮೇಘನಾ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ.

    ಹಿಂದೂ ಸಂಪ್ರದಾಯದಂತೆ ಶಾಸ್ತ್ರಗಳು ನೆರವೇರಲಿದ್ದು, ಇಂದು ಪ್ಯಾಲೇಸ್ ಗ್ರೌಂಡ್ ನ ವೈಟ್ ಪೆಟೆಲ್ಸ್ ನಲ್ಲಿ ವರಪೂಜೆ ನಡೆಯುತ್ತಿದೆ. ಕಂಕಣ ಹಾಗೂ ಲಗ್ನ ಕಟ್ಟುವ ಶಾಸ್ತ್ರದಲ್ಲಿ ಎರಡು ಕುಟುಂಬಸ್ಥರ ಜೊತೆಗೆ ಆಪ್ತರು ಕೂಡ ಭಾಗಿಯಾಗಲಿದ್ದಾರೆ.

    ವರ ಪೂಜೆಗೆ ವೈಟ್ ಅಂಡ್ ಗೋಲ್ಡನ್ ಥೀಮ್ ನಲ್ಲಿ ವೇದಿಕೆ ಸಜ್ಜಾಗಿದೆ. ಕ್ರಿಶ್ಚಿಯನ್ ಸಂಪ್ರದಾಯದಂತೆ ಚಿರು- ಮೇಘನಾ ಭಾನುವಾರ ಸೇಂಟ್ ಆಂಟೋನಿ ಫ್ರೈಯರಿ ಚರ್ಚ್ ನಲ್ಲಿ ಮದುವೆಯಾಗಿದ್ದರು. ಬೆಳಗ್ಗೆ 10:30ರ ಮಿಥುನ ಲಗ್ನದಲ್ಲಿ ಚಿರು-ಮೇಘನಾ ಹಿಂದೂ ಸಂಪ್ರದಾಯದಂತೆ ಮದುವೆ ನಡೆಯಲಿದೆ.

    ಇಂದು ಸಂಜೆ 7:30ಕ್ಕೆ ಆರತಕ್ಷತೆ ಹಮ್ಮಿಕೊಂಡಿದ್ದು, ಸಿನಿಮಾ ರಂಗದ ಹಲವು ಗಣ್ಯರು ಸಾಕ್ಷಿಯಾಗಲಿದ್ದಾರೆ.

    https://www.youtube.com/watch?v=oqU3Q89z2UY