Tag: Hindu Temple

  • ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಬಿಲ್‌ಗೆ ಪರಿಷತ್‌ನಲ್ಲಿ ಸೋಲು; ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗ

    ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಬಿಲ್‌ಗೆ ಪರಿಷತ್‌ನಲ್ಲಿ ಸೋಲು; ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗ

    – ಮೇಲ್ಮನೆಯಲ್ಲಿ ದೋಸ್ತಿಗಳಿಂದ ಜೈಶ್ರೀರಾಮ್ ಘೋಷಣೆ
    – ಕಾಂಗ್ರೆಸ್ ಶಾಸಕರು, ಸಚಿವರಿಂದ ಜೈಭೀಮ್, ಭಾರತ್ ಮಾತಾಕಿ ಜೈ ಘೋಷಣೆ

    ಬೆಂಗಳೂರು: ಬಿಜೆಪಿ-ಕಾಂಗ್ರೆಸ್ (BJP – Congress) ನಡುವೆ ಸಂಘರ್ಷಕ್ಕೆ ಕಾರಣವಾದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ ಪರಿಷತ್‌ನಲ್ಲಿ (Legislative Council) ತಿರಸ್ಕೃತಗೊಂಡಿದ್ದು, ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ.

    ಸರ್ಕಾರದ ತಿದ್ದುಪಡಿ ಮಸೂದೆ ತಿರಸ್ಕೃತಗೊಳ್ಳುತ್ತಿದ್ದಂತೆ ಬಿಜೆಪಿ ಸದಸ್ಯರು ಜೈಶ್ರೀರಾಮ್ (Jai Sriram) ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅಲ್ಲಿದ್ದ ಬೆರಳೆಣಿಕೆಯಷ್ಟು ಕಾಂಗ್ರೆಸ್ ಸದಸ್ಯರು ಜೈಭೀಮ್, ಭಾರತ್ ಮಾತಾಕಿ ಜೈ ಎಂಬ ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಗೋಧ್ರಾ ಮಾದರಿಯಲ್ಲಿ ರೈಲು ಸುಟ್ಟು ಹಾಕುವುದಾಗಿ ಬೆದರಿಕೆ: ಸಮಗ್ರ ತನಿಖೆಗೆ ಸಿ.ಟಿ.ರವಿ ಆಗ್ರಹ

    ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಈ ಮಸೂದೆಯನ್ನು ಮಂಡಿಸುತ್ತಲೇ ನಿರೀಕ್ಷೆಯಂತೆಯೇ ಬಿಜೆಪಿ-ಜೆಡಿಎಸ್ ಶಾಸಕರು ತೀವ್ರವಾಗಿ ವಿರೋಧಿಸಿದ್ರು. ಒಂದು ಕೋಟಿ ರೂ.ಗಿಂತಲೂ ಅಧಿಕ ಆದಾಯ ಬರುವ ದೇವಾಲಯಗಳಲ್ಲಿ 10% ಹಣ ಪಡೆಯೋ ಸರ್ಕಾರದ ನಿಲುವು ಸರಿಯಲ್ಲ. ಅಸಲಿಗೆ ದೇವಾಲಯದ ಹಣ ಯಾಕೆ ಪಡೆದುಕೊಳ್ತೀರಾ? ಸರ್ಕಾರವೇ 100 ಕೋಟಿ ಹಣ ಬಿಡುಗಡೆ ಮಾಡಲಿ ಎಂದು ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು. ಇದನ್ನೂ ಓದಿ: ಅಯೋಧ್ಯೆ ಯಾತ್ರಿಕರ ರೈಲು ಗಲಾಟೆ ಕಾಂಗ್ರೆಸ್ ತುಷ್ಟೀಕರಣ ರಾಜಕಾರಣದ ಫಲ: ಪ್ರಹ್ಲಾದ್ ಜೋಶಿ

    ಜೆಡಿಎಸ್ ಸದಸ್ಯ ಶರವಣ, ಈ ಸರ್ಕಾರ ದೇವರ ಹಣದಲ್ಲೂ ಪರ್ಸೆಂಟೇಜ್ ಪಡೆಯೋಕೆ ಹೋಗ್ತಿದೆ ಎಂದು ಆರೋಪಿಸಿದರು. ಇದಕ್ಕೆ ಆಡಳಿತ ಪಕ್ಷದಿಂದ ತೀವ್ರ ಆಕ್ರೋಶ ವ್ಯಕ್ತವಾಯ್ತು. ಆದ್ರೂ ತಗ್ಗದ ವಿಪಕ್ಷಗಳು ಈ ಮಸೂದೆಯನ್ನ ವಾಪಸ್ ಪಡೆಯಬೇಕು, ಇಲ್ಲವೇ ಮತಕ್ಕೆ ಹಾಕಬೇಕು ಎಂದು ಪಟ್ಟು ಹಿಡಿದು ಕುಳಿತವು. ಇದಕ್ಕೆ ಸಚಿವ ರಾಮಲಿಂಗಾರೆಡ್ಡಿ ತಣ್ಣಗಾದರು. ಕೆಲ ತಿದ್ದುಪಡಿಗಳೊಂದಿಗೆ ಸೋಮವಾರ ಮತ್ತೆ ಮಂಡಿಸುತ್ತೇವೆ ಎಂಬ ಸಚಿವರ ಮಾತಿಗೆ ಉಪಸಭಾಪತಿಗಳು ಆಕ್ಷೇಪ ವ್ಯಕ್ತಪಡಿಸಿದರು. ಹಾಗೆ ಮಾಡಲು ಆಗಲ್ಲ ಎಂದು ಸೂಚನೆ ನೀಡಿದರು. ಕೊನೆಗೆ ಉಪಸಭಾಪತಿಗಳು ಮಸೂದೆಯನ್ನು ಮತಕ್ಕೆ ಹಾಕಿದ್ದು, ಸರ್ಕಾರಕ್ಕೆ ಸೋಲಾಯಿತು.

    ಸರ್ಕಾರದ ವಿರುದ್ಧವೇ ಖಂಡನಾ ನಿರ್ಣಯ:
    ಕೇಂದ್ರದ ವಿರುದ್ಧ ಎರಡು ನಿರ್ಣಯಗಳನ್ನು ಮಂಡಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರ ಗುರುವಾರ ವಿಪಕ್ಷಗಳಿಗೆ ಶಾಕ್ ನೀಡಿತ್ತು. ಶುಕ್ರವಾರ ರಾಜ್ಯ ಸರ್ಕಾರದ ವಿರುದ್ಧ ಖಂಡನಾ ನಿರ್ಣಯ ಮಂಡಿಸುವ ಮೂಲಕ ಬಿಜೆಪಿ ಟಕ್ಕರ್ ನೀಡಿದೆ. ಸರ್ಕಾರದ ಹಣಕಾಸು ನೀತಿ ಸರಿಯಿಲ್ಲ ಮತ್ತು ಕೇಂದ್ರದ ವಿರುದ್ಧ ಸುಳ್ಳು ಆರೋಪ ಮಾಡ್ತಿದ್ದಾರೆ ಎಂದು ಆರೋಪಿಸಿ ವಿಪಕ್ಷ ನಾಯಕ ಅಶೋಕ್ ಖಂಡನಾ ನಿರ್ಣಯ ಮಂಡಿಸಿದರು. ಇದನ್ನೂ ಓದಿ: ಡಾ.ಮಂಜುನಾಥ್ ಏನು ತೀರ್ಮಾನ ಮಾಡ್ತಾರೆ ಎಂದು ಸಮಯ ಬಂದಾಗ ನೋಡೋಣ: ಹೆಚ್‍ಡಿಕೆ

  • ಅಬುಧಾಬಿಯ ಹಿಂದೂ ದೇವಾಲಯದ ಉದ್ಘಾಟನೆಯಲ್ಲಿ ಅಕ್ಷಯ್, ವಿವೇಕ್ ಒಬೆರಾಯ್

    ಅಬುಧಾಬಿಯ ಹಿಂದೂ ದೇವಾಲಯದ ಉದ್ಘಾಟನೆಯಲ್ಲಿ ಅಕ್ಷಯ್, ವಿವೇಕ್ ಒಬೆರಾಯ್

    ರಬ್ಬರ ನೆಲದಲ್ಲಿ ನಿರ್ಮಿಸಲಾಗಿರುವ ಮೊದಲ ಹಿಂದೂ ದೇವಾಲಯವನ್ನು ಭಾರತದ ಪ್ರಧಾನಿ ನರೇಂದ್ರ (Narendra Modi) ಮೋದಿ ಅವರು ಇಂದು (ಫೆ.14) ಲೋಕಾರ್ಪಣೆಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar), ವಿವೇಕ್ ಒಬೆರಾಯ್, ದಿಲೀಪ್ ಜೋಶಿ, ಸಿಂಗರ್ ಶಂಕರ್ ಮಹಾದೇವನ್ ಭಾಗಿಯಾಗಿದ್ದಾರೆ.

    ಅಬುಧಾಬಿಯ ಹಿಂದೂ ದೇವಾಲಯದ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಿರುವುದ್ದಕ್ಕೆ ಅಕ್ಷಯ್ ಕುಮಾರ್ ಮತ್ತು ವಿವೇಕ್ ಒಬೆರಾಯ್ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಅತ್ಯಂತ ಸುಂದರವಾದ ದೇವಾಲಯವಾಗಿದ್ದು, ಇಂದು ದೇವರ ಸೇವೆ ಮಾಡುವ ಸೌಭಾಗ್ಯ ನನಗಿತ್ತು ಎಂದು ವಿವೇಕ್ ಒಬೆರಾಯ್ (Vivek Oberoi) ಮಾತನಾಡಿದ್ದಾರೆ.

    ಅಂದಹಾಗೆ, ಅರಬ್ ಸಂಯುಕ್ತ ಸಂಸ್ಥಾನದ (ಯುಎಇ) ಬೋಚಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ ಹಿಂದೂ ದೇವಾಲಯವನ್ನು ಮೋದಿ (Narendra Modi) ಫೆ.14ರ ಸಂಜೆ ಉದ್ಘಾಟಿಸಿದರು.

    ದೇವಾಲಯ ಉದ್ಘಾಟನೆಗೂ ಮುನ್ನ ಮಂದಿರದ ಹೊರಗಡೆ ಕಲ್ಯಾಣಿಗೆ ಗಂಗಾ ಪೂಜೆ ಕಾರ್ಯವನ್ನು ಮೋದಿ ನೆರವೇರಿಸಿದರು. ನಂತರ ಪ್ರವೇಶದ್ವಾರದಲ್ಲಿ ಟೇಪ್ ಕತ್ತರಿಸುವ ಮೂಲಕ ದೇವಾಲಯವನ್ನು ಲೋಕಾರ್ಪಣೆಗೊಳಿಸಿದರು. ಇದೇ ವೇಳೆ ಪ್ರಧಾನಿ ಮೋದಿಗೆ ಈಶ್ವರಚರಣದಾಸ ಸ್ವಾಮೀಜಿ ಸೇರಿದಂತೆ ಇತರೆ ಸ್ವಾಮೀಜಿಗಳು ಸಾಥ್ ನೀಡಿದರು. ಈ ವೇಳೆ ಸ್ವಾಮೀಜಿಗಳು ಭವ್ಯ ಮಂದಿರದ ರಚನೆ ಕುರಿತು ಮೋದಿ ಅವರಿಗೆ ಮಾಹಿತಿ ನೀಡಿದರು.

    ನಂತರ ದೇವಾಲಯದಲ್ಲಿ ಮೋದಿ ಆರತಿ ಬೆಳಗಿದರು. ಮಂದಿರದ ದೇವರಿಗೆ ಪುಷ್ಪವನ್ನು ಅರ್ಪಿಸಿ ಪ್ರಾರ್ಥಿಸಿದರು. 27 ಎಕರೆ ಜಾಗದಲ್ಲಿ 900 ಕೋಟಿ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಿಸಲಾಗಿದೆ.

  • ಅರಬ್ಬರ ನೆಲದಲ್ಲಿ ಹಿಂದೂ ಮಂದಿರ – ವಿಶ್ವದ ಮೂರನೇ ಅತಿ ದೊಡ್ಡ ದೇವಸ್ಥಾನ ಇಂದು ಲೋಕಾರ್ಪಣೆ

    ಅರಬ್ಬರ ನೆಲದಲ್ಲಿ ಹಿಂದೂ ಮಂದಿರ – ವಿಶ್ವದ ಮೂರನೇ ಅತಿ ದೊಡ್ಡ ದೇವಸ್ಥಾನ ಇಂದು ಲೋಕಾರ್ಪಣೆ

    ಅಬುಧಾಬಿ: ಇಂದು (ಫೆ.14) ಅಬುಧಾಬಿಯಲ್ಲಿ ಬೋಚಸನ್‌ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ ಅಥವಾ ಬಿಎಪಿಎಸ್ (BAPS) ಸೊಸೈಟಿ ನಿರ್ಮಿಸಿರುವ ವಿಸ್ತಾರವಾದ ಹಿಂದೂ ದೇವಾಲಯವನ್ನು (Hindu Temple) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಲಿದ್ದಾರೆ.

    27 ಎಕರೆ ಭೂಮಿಯಲ್ಲಿ ನಿರ್ಮಿಸಲಾದ ಈ ದೇವಾಲಯ ಅಬುಧಾಬಿಯ (Abu Dhabi) ಮೊದಲ ಹಿಂದೂ ಕಲ್ಲಿನ ದೇವಾಲಯವಾಗಿದ್ದು, ಭಾರತೀಯ ಸಂಸ್ಕೃತಿಯ ವಿಶಿಷ್ಟ ಮಿಶ್ರಣ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಗುರುತನ್ನು ಹೊಂದಿದೆ. ಇದನ್ನೂ ಓದಿ: ಫೆ.14 ಕ್ಕೆ ಬಿಎಪಿಎಸ್‌ ಹಿಂದೂ ದೇವಾಲಯ ಉದ್ಘಾಟನೆ; ಎಲ್ಲಿ? ದೇವಸ್ಥಾನದ ವೈಶಿಷ್ಟ್ಯವೇನು?

    ಪ್ರಧಾನಿ ನರೇಂದ್ರ ಮೋದಿಯವರ ಎರಡು ದಿನದ ಅರಬ್ ಪ್ರವಾಸದಲ್ಲಿ ಈ ದೇವಾಲಯದ ಉದ್ಘಾಟನೆಯನ್ನು ಮಾಡಲಿದ್ದಾರೆ. ಇದು ಯುಎಇಯಲ್ಲಿ ಉದ್ಘಾಟನೆಗೊಂಡ ಎರಡನೇ ಅತಿ ದೊಡ್ಡ ಹಿಂದೂ ದೇವಾಲಯವಾಗಿದೆ. ಮಾರ್ಚ್ 1 ರಂದು ಸಾರ್ವಜನಿಕರಿಗೆ ತೆರೆಯಲಾಗುವ ದೇವಾಲಯದ ಸಮರ್ಪಣೆ ಸಮಾರಂಭಕ್ಕೂ ಪ್ರಧಾನಿ ಮೋದಿ ನೇತೃತ್ವ ವಹಿಸಲಿದ್ದಾರೆ. ಇದನ್ನೂ ಓದಿ: ಪುಲ್ವಾಮಾ ದಾಳಿಗೆ 5 ವರ್ಷ: 2019ರ ಫೆ.14 ರಂದು ನಡೆದಿದ್ದು ಏನು?

    2024ರ ವರ್ಷ ಹಿಂದೂಗಳಿಗೆ ಹರ್ಷ ತಂದಿದೆ. ಹೊಸ ವರ್ಷದ ಮೊದಲ ತಿಂಗಳಲ್ಲೇ ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯ ಸಂತಸ ಒಂದುಕಡೆಯಾದರೆ, 2ನೇ ತಿಂಗಳಲ್ಲಿ ಮುಸ್ಲಿಮರ ನೆಲದಲ್ಲಿ ಮೊಟ್ಟ ಮೊದಲ ಐತಿಹಾಸಿಕ ಹಿಂದೂ ದೇವಾಲಯ ಲೋಕಾರ್ಪಣೆ ಕಣ್ತುಂಬಿಕೊಳ್ಳುವ ಸೌಭಾಗ್ಯ ಹಿಂದೂಗಳಿಗೆ ಒಲಿದು ಬಂದಿದೆ. ಇದನ್ನೂ ಓದಿ: ಹೃದಯದ ಮೌನ.. ಹೃದಯಕೆ ಸೀದಾ.. ತಲುಪುವ ಹಾಗೆ ಮಾತಾಡು ನೀ…….

    ಮುಸ್ಲಿಮರ ನೆಲದಲ್ಲಿ ಲೋಕಾರ್ಪಣೆಗೊಳ್ಳುತ್ತಿರುವ ಮೊದಲ ಬಿಎಪಿಎಸ್ ಹಿಂದೂ ದೇವಾಲಯ ಎಂಬ ಹೆಗ್ಗಳಿಕೆಗೆ ಈ ದೇವಾಲಯ ಪಾತ್ರವಾಗಲಿದೆ. ಈ ದೇವಾಲಯವು ಭಾರತದ ಹೊರಗಿನ ಅತ್ಯಂತ ದೊಡ್ಡ ಮತ್ತು ಅತ್ಯಂತ ಸುಂದರವಾದ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಪಶ್ಚಿಮ ಏಷ್ಯಾದ ಅತಿದೊಡ್ಡ ಹಿಂದೂ ದೇವಾಲಯವೂ ಹೌದು. ಇದನ್ನೂ ಓದಿ: ಉಡುಪಿಯಲ್ಲಿ ನಾಲ್ವರ ಹತ್ಯೆ ಕೇಸ್‌ – ಆಯ್ನಾಜ್ ಮೇಲಿನ ವಿಪರೀತ ವ್ಯಾಮೋಹವೇ ಕೊಲೆಗೆ ಕಾರಣ

    ಫೆಬ್ರವರಿ 2018 ರಲ್ಲಿ ಪ್ರಧಾನಿ ಮೋದಿ ಅವರು ದೇವಾಲಯದ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಡಿಸೆಂಬರ್ 2019ರಲ್ಲಿ ನಿರ್ಮಾಣ ಪ್ರಾರಂಭವಾಯಿತು. ದೇವಾಲಯವನ್ನು 5.4 ಹೆಕ್ಟೇರ್ ಭೂಮಿ ಜಾಗದಲ್ಲಿ ನಿರ್ಮಿಸಲಾಗುತ್ತಿದೆ. 700 ಕೋಟಿ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಿಸಲಾಗಿದೆ. ಇದನ್ನೂ ಓದಿ: ಭಾರತ ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ- ಅಬುಧಾಬಿಯಲ್ಲಿ ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ಮೋದಿ

  • ಮತ್ತೆ ಮುನ್ನೆಲೆಗೆ ಬಂತು ಮಳಲಿ ಮಸೀದಿ – ಆಸ್ತಿ ತನ್ನದೆಂದು ಸಾಬೀತುಪಡಿಸಲು ವಕ್ಫ್‌ ಬೋರ್ಡ್‌ ತಯಾರಿ

    ಮತ್ತೆ ಮುನ್ನೆಲೆಗೆ ಬಂತು ಮಳಲಿ ಮಸೀದಿ – ಆಸ್ತಿ ತನ್ನದೆಂದು ಸಾಬೀತುಪಡಿಸಲು ವಕ್ಫ್‌ ಬೋರ್ಡ್‌ ತಯಾರಿ

    – ಜಿಲ್ಲಾ ನ್ಯಾಯಾಲಯಕ್ಕೆ ವಿಚಾರಣೆಗೆ ಹೈಕೋರ್ಟ್ ಆದೇಶ

    ಮಂಗಳೂರು: ಜ್ಞಾನವಾಪಿ ಮಸೀದಿ (Gyanvapi Mosque) ವಿವಾದದ ಮಧ್ಯೆ ಇದೀಗ ಮಂಗಳೂರಿನ ಮಳಲಿ ಮಸೀದಿಯ (Malali Mosque) ವಿವಾದವು ಮುನ್ನಲೆಗೆ ಬಂದಿದೆ. ಈ ಮಸೀದಿಯ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯವೇ ಮಾಡಲಿ ಎಂದು ಹೈಕೋರ್ಟ್ ಆದೇಶ ನೀಡಿದೆ. ಹೀಗಾಗಿ ಇಡೀ ಪ್ರಕರಣದ ಹೊಣೆಯನ್ನು ಇದೀಗ ವಕ್ಫ್‌ ಬೋರ್ಡ್‌ ಕೈಗೆತ್ತಿಕೊಂಡಿದ್ದು, ಮಸೀದಿ ವಕ್ಫ್‌ ಬೋರ್ಡ್‌ (Waqf Board) ಆಸ್ತಿಯೆಂದು ಸಾಬೀತುಪಡಿಸಲು ಮುಂದಾಗಿದೆ.

    ಕಳೆದ ವರ್ಷ ಮಂಗಳೂರಿನ ಹೊರವಲಯದ ಮಳಲಿ ಜುಮ್ಮಾ ಮಸೀದಿಯ ಅಭಿವೃದ್ಧಿ ಕಾಮಗಾರಿ ಮಾಡುತ್ತಿದ್ದ ವೇಳೆ ಮಸೀದಿಯ ಮೇಲ್ಛಾವಣಿ ಹಿಂದೂ ದೇವಸ್ಥಾನದ (Hindu Temple) ಶೈಲಿಯಲ್ಲಿ ಇದೆ. ಅಲ್ಲಿ ಪಾಣಿಪೀಠ ಸೇರಿದಂತೆ ದೇವಸ್ಥಾನ ಹಲವು ಕುರುಹುಗಳಿದೆ ಎಂದು ವಿಶ್ವ ಹಿಂದೂ ಪರಿಷತ್ (VHP) ಮಸೀದಿಯ ಕಾಮಗಾರಿಯನ್ನು ನಿಲ್ಲಿಸಲು ಆಕ್ಷೇಪ ಎತ್ತಿತ್ತು. ಬಳಿಕ ತಾಂಬೂಲ ಪ್ರಶ್ನೆ ಇಡಲಾಗಿತ್ತು. ಅದರಲ್ಲೂ ಮಸೀದಿಯೊಳಗೆ ಶಿವ ಸಾನಿಧ್ಯ ಇದೆ ಎಂದು ಗೊತ್ತಾಗಿತ್ತು. ಹೀಗಾಗಿ ವಿಎಚ್‌ಪಿ ಮಸೀದಿ ಕಾಮಗಾರಿಯನ್ನು ನಿಲ್ಲಿಸಬೇಕು ಜೊತೆಗೆ ಮಸೀದಿಯ ಸರ್ವೇ ಕಾರ್ಯ ನಡೆಸಬೇಕೆಂದು ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದಾವೆ ಹೂಡಿತ್ತು.  ಇದನ್ನೂ ಓದಿ: ಪ್ರತಿಷ್ಠಿತ ಆಸ್ಪತ್ರೆಗಳ ಒಕ್ಕೂಟದ ಸಾರಥಿಯಾಗ್ತಾರಾ ಡಾ.ಸಿ.ಎನ್ ಮಂಜುನಾಥ್?

    ಇದನ್ನ ಪ್ರಶ್ನಿಸಿ ಮಳಲಿ ಮಸೀದಿ ಕಮಿಟಿ ಈ ಮಸೀದಿ ವಕ್ಫ್ ಬೋರ್ಡ್‌ಗೆ ಸೇರಿದ ಆಸ್ತಿ ಹೈಕೋರ್ಟ್ (High Court) ಮೊರೆ ಹೋಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮತ್ತೆ ಜಿಲ್ಲಾ ನ್ಯಾಯಾಲಯವೇ ವಿಚಾರಣೆ ನಡೆಸಬೇಕೆಂದು ಜ.31ರಂದು ಆದೇಶಿಸಿದೆ.

    ಮಳಲಿ ಮಸೀದಿ ವಕ್ಫ್ ಬೋರ್ಡ್‌ ಅಧೀನದಲ್ಲಿರುವುದರಿಂದ ವಕ್ಫ್ ಟ್ರಿಬ್ಯುನಲ್‌ಗೆ ಪ್ರಕರಣ ಹಸ್ತಾಂತರ ಆಗಬೇಕೆಂದು ಮಳಲಿ ಮಸೀದಿ ಆಡಳಿತ ಕಮಿಟಿ ಹೈಕೋರ್ಟ್ ಗಮನಕ್ಕೆ ತಂದಿದೆ. ಹೀಗಾಗಿ ಈ ಮಸೀದಿ ವಕ್ಫ್ ಬೋರ್ಡ್‌ ಆಸ್ತಿ ಹೌದೋ ಅಲ್ಲವೇ ಎಂಬುದನ್ನು ಕೆಳ ನ್ಯಾಯಾಲಯವೇ ವಿಚಾರಣೆ ನಡೆಸಬೇಕೆಂದು ಹೈಕೋರ್ಟ್ ಆದೇಶಿಸಿದೆ. ಹೀಗಾಗಿ ಮತ್ತೆ ಜಿಲ್ಲಾ ನ್ಯಾಯಾಲಯದಲ್ಲೇ ಮಸೀದಿ ಆಸ್ತಿಯ ಬಗ್ಗೆ ವಿಚಾರಣೆ ನಡೆಯಲಿದೆ.

    ಈ ಮಸೀದಿ ವಕ್ಫ್‌ ಆಸ್ತಿ ಎನ್ನುವುದಕ್ಕೆ ಸುಮಾರು 700 ವರ್ಷಗಳ ದಾಖಲೆಗಳು ಇದೆ. ಅದನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಮಸೀದಿ ಸಮಿತಿಯವರು ತಯಾರು ನಡೆಸಿದ್ದಾರೆ.

     

  • ಜ್ಞಾನವಾಪಿ ಮಸೀದಿ ಜಾಗದಲ್ಲೇ ಹಿಂದೂ ದೇವಾಲಯವಿತ್ತು – ಪುರಾತತ್ವ ಇಲಾಖೆ ವರದಿ ಬಹಿರಂಗ

    ಜ್ಞಾನವಾಪಿ ಮಸೀದಿ ಜಾಗದಲ್ಲೇ ಹಿಂದೂ ದೇವಾಲಯವಿತ್ತು – ಪುರಾತತ್ವ ಇಲಾಖೆ ವರದಿ ಬಹಿರಂಗ

    ಲಕ್ನೋ: ಅಲಹಾಬಾದ್ ಕೋರ್ಟ್ (Allahabad Court) ನಿರ್ದೇಶನದ ಮೇರೆಗೆ ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲೇ ಇರುವ ಜ್ಞಾನವಾಪಿ ಮಸೀದಿಯಲ್ಲಿ (Gyanvapi Mosque) ಭಾರತೀಯ ಪುರಾತತ್ವ ಇಲಾಖೆಯಿಂದ ನಡೆಸಲಾಗಿದ್ದ ವೈಜ್ಞಾನಿಕ ಸಮೀಕ್ಷಾ ವರದಿ ಬಹಿರಂಗಗೊಂಡಿದೆ.

    ಜ್ಞಾನವಾಪಿ ಮಸೀದಿ ಜಾಗದಲ್ಲಿ ಮೊದಲು ಹಿಂದೂ ದೇವಾಲಯ (Hindu Temple) ಇತ್ತು ಅಂತಾ ಪುರಾತತ್ವ ಸರ್ವೇಕ್ಷಣಾ ವರದಿ ಹೇಳಿದೆ ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ. ಕೋರ್ಟ್ ಆದೇಶದನ್ವಯ ವರದಿ ಪಡೆದಿರುವ ಅವರು ಸುದ್ದಿಗೋಷ್ಠಿ ನಡೆಸಿ ವರದಿಯಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

    Gyanvapi mosque, 

    ಮಸೀದಿಗಿಂತ ಮುಂಚೆ ದೊಡ್ಡ ಹಿಂದೂ ದೇವಾಲಯದ ರಚನೆಯನ್ನು ಸರ್ವೆ ವರದಿ ಎತ್ತಿ ತೋರಿಸಿದೆ ಎಂದು ಹೇಳಿದ್ದಾರೆ. ಜನಾರ್ದನ, ರುದ್ರ ಮತ್ತು ಉಮೇಶ್ವರ ಮುಂತಾದ ಮೂರು ದೇವತೆಗಳ ಹೆಸರುಗಳು ಮಸೀದಿಯಲ್ಲಿ ಲಭ್ಯವಾದ ಶಾಸನಗಳಲ್ಲಿ ಕಂಡುಬರುತ್ತವೆ. ಮಸೀದಿ ಪಶ್ಚಿಮ ಗೋಡೆ ಹಿಂದೆ ನಿರ್ಮಾಣ ಮಾಡಿದ್ದ ಹಿಂದೂ ದೇವಾಲಯದ್ದಾಗಿದೆ. 17ನೇ ಶತಮಾನದಲ್ಲಿ ಈ ಮಂದಿರವನ್ನು ನಾಶ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: Padma Awards 2024: ಕರ್ನಾಟಕದ 9 ಮಂದಿ ಸೇರಿ 132 ಜನರಿಗೆ ‘ಪದ್ಮ’ ಪ್ರಶಸ್ತಿ – ಸಂಪೂರ್ಣ ಪಟ್ಟಿ ಇಲ್ಲಿದೆ..

    ವರದಿಯಲ್ಲಿ ಏನಿದೆ?
    ಜ್ಞಾನವಾಪಿ ಮಸೀದಿಗೂ ಮುನ್ನ ದೇವಸ್ಥಾನ ಇತ್ತು. ಮಸೀದಿಯನ್ನು ನಿರ್ಮಿಸಲು ದೇವಾಲಯವನ್ನು ನಾಶಪಡಿಸಲಾಗಿದೆ. ಸರ್ವೆ ವೇಳೆ ಕಟ್ಟಡದ ರಚನೆಗೆ ಯಾವುದೇ ಹಾನಿ ಉಂಟಾಗಿಲ್ಲ, ಶೋಧಿಸಿದ ಎಲ್ಲಾ ವಸ್ತುಗಳನ್ನು ದಾಖಲಿಸಲಾಗಿದೆ. ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ, ಅಸ್ತಿತ್ವದಲ್ಲಿರುವ ರಚನೆಯಲ್ಲಿ ಹಿಂದಿನ ರಚನೆಯ ಕಂಬಗಳ ಬಳಕೆಯಾಗಿದೆ. ಸ್ತಂಭಗಳನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡಲಾಗಿದೆ. ಇದನ್ನೂ ಓದಿ: ಕನ್ನಡಿಗ ಯೋಧ ಹುತಾತ್ಮ ಕ್ಯಾಪ್ಟನ್ ಪ್ರಾಂಜಲ್‌ಗೆ ‘ಶೌರ್ಯ ಚಕ್ರ’ ಪ್ರಶಸ್ತಿ ಘೋಷಣೆ

    ಹೊಸ ರಚನೆಯ ನಿರ್ಮಾಣದಲ್ಲಿ ಮೊದಲೇ ಅಸ್ತಿತ್ವದಲ್ಲಿರುವ ದೇವಾಲಯದ ಭಾಗಗಳನ್ನು ಮರುಬಳಕೆ ಮಾಡಲಾಗಿದೆ. ದೇವಾಲಯವು ದೊಡ್ಡ ಕೇಂದ್ರವನ್ನು ಮಸೀದಿಯ ಸಭಾಂಗಣವಾಗಿ ಬಳಸಲಾಗುತ್ತಿದೆ. ಈಗಿರುವ ಮಸೀದಿಯಲ್ಲಿ ಹಿಂದಿನ ರಚನೆಯ 34 ಶಾಸನಗಳನ್ನು ಬಳಸಲಾಗಿದೆ. ಮರು ಬಳಕೆ ವೇಳೆ ಕುರುಹು ನಾಶ ಮಾಡಲಾಗಿದೆ. ಈ ಮಸೀದಿಯನ್ನು ನಿರ್ಮಿಸಲು ದೇವಾಲಯವನ್ನು ನಾಶಪಡಿಸಲಾಗಿದೆ. 17ನೇ ಶತಮಾನದಲ್ಲಿ ಈ ಮಂದಿರವನ್ನು ನಾಶ ಮಾಡಲಾಗಿದೆ ಎಂದು ಸಮೀಕ್ಷೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

  • ಅಮೆರಿಕಾದಲ್ಲಿ ಹಿಂದೂ ದೇಗುಲದ ಗೋಡೆ ಮೇಲೆ ಖಲಿಸ್ತಾನಿ ಪರ ಬರಹ- ಭಾರೀ ಖಂಡನೆ

    ಅಮೆರಿಕಾದಲ್ಲಿ ಹಿಂದೂ ದೇಗುಲದ ಗೋಡೆ ಮೇಲೆ ಖಲಿಸ್ತಾನಿ ಪರ ಬರಹ- ಭಾರೀ ಖಂಡನೆ

    ನ್ಯೂಯಾರ್ಕ್: ಅಮೆರಿಕಾದ ಕ್ಯಾಲಿಫೋರ್ನಿಯಾದ (California) ನೆವಾರ್ಕ್ ಸಿಟಿಯಲ್ಲಿ (Newark City) ಹಿಂದೂ ದೇವಾಲಯದ ಗೋಡೆಯಲ್ಲಿ ಖಲಿಸ್ತಾನಿ ಪರ ಘೋಷಣೆಗಳನ್ನು ಬರೆಯಲಾಗಿದೆ. ಈ ಕುರಿತು ಇದೀಗ ಭಾರೀ ಖಂಡನೆ ವ್ಯಕ್ತವಾಗುತ್ತಿದೆ.

    ಹಿಂದೂ ಅಮೇರಿಕನ್ ಫೌಂಡೇಶನ್ ತನ್ನ ಎಕ್ಸ್ ಖಾತೆಯಲ್ಲಿ, ಸ್ವಾಮಿನಾರಾಯಣ ಮಂದಿರ ವಸನಾ ಸಂಸ್ಥೆಯ (Swaminarayan Mandir Vasana Sanstha) ಗೋಡೆಗಳ ಮೇಲೆ ಘೋಷಣೆಗಳನ್ನು (Pro-Khalistani Slogans) ಬರೆದಿರುವ ಫೋಟೋಗಳನ್ನು ಹಂಚಿಕೊಂಡಿದೆ. ಫೋಟೋದಲ್ಲಿ, ದೇಗುಲದ ಗೋಡೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಭಾರತದ (India) ವಿರುದ್ಧ ದ್ವೇಷಪೂರಿತ ಬರಹಗಳನ್ನು ಬರೆಯಲಾಗಿದೆ.

    ಘಟನೆಯ ಕುರಿತು ಸಂಪೂರ್ಣ ತನಿಖೆಯಾಗಬೇಕು ಎಂದು ಪ್ರತಿಷ್ಠಾನ ಒತ್ತಾಯಿಸಿದೆ. ಅಲ್ಲದೆ ಈ ಕುರಿತು ನೆವಾರ್ಕ್ ಪೊಲೀಸ್ ಇಲಾಖೆ ಹಾಗೂ ನ್ಯಾಯಾಂಗ ನಾಗರಿಕ ಹಕ್ಕುಗಳ ವಿಭಾಗಕ್ಕೆ ದೂರು ನೀಡಿದೆ. ಇದನ್ನೂ ಓದಿ: JDU ಮುಖ್ಯಸ್ಥರನ್ನು ಕಿತ್ತೆಸೆದು ತಾವೇ ಹುದ್ದೆ ಅಲಂಕರಿಸುತ್ತಾರಾ ಬಿಹಾರ ಸಿಎಂ?

    ಸ್ವಾಮಿನಾರಾಯಣ ಮಂದಿರ ವಸನಾ ಸಂಸ್ಥೆಯ ಗೋಡೆಯ ಮೇಲೆ ಬರೆದಿರುವ ದ್ಷೇಷದ ಬರಹಗಳನ್ನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್ ಖಂಡಿಸಿದೆ. ಇದನ್ನು ಬರೆದಿರುವ ಕಿಡಿಗೇಡಿಗಳ ವಿರುದ್ಧ ತ್ವರಿತ ತನಿಖೆ ಮತ್ತು ಕಠಿಣ ಕ್ರಮಕ್ಕಾಗಿ ಯುಎಸ್ ಅಧಿಕಾರಿಗಳಿಗೆ ಒತ್ತಡ ಹೇರಿದೆ.

    ಕ್ಯಾಲಿಫೋರ್ನಿಯಾದ ನೆವಾರ್ಕ್‍ನಲ್ಲಿರುವ ಎಸ್‍ಎಂವಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರದ ಗೋಡೆಯಲ್ಲಿ ಭಾರತ ವಿರೋಧಿ ಬರಹದ ಮೂಲಕ ವಿರೂಪಗೊಳಿಸಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಈ ಘಟನೆಯು ಭಾರತೀಯ ಸಮುದಾಯದ ಜನರ ಭಾವನೆಗಳಿಗೆ ಧಕ್ಕೆ ತಂದಿದೆ. ಈ ಕುರಿತು ಶೀಘ್ರವೇ ತನಿಖೆ ನಡೆಸಿ ಹಾಗೂ ಈ ಕೃತ್ಯ ಎಸಗಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದಾಗಿ ನಾವು ಒತ್ತಾಯಿಸಿದ್ದೇವೆ ಎಂದು ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ಕಾನ್ಸುಲೇಟ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಅಮೇರಿಕಾದಲ್ಲಿ ಹಿಂದೂ ದೇವಾಲಯವನ್ನು ವಿರೂಪಗೊಳಿಸಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಘಟನೆಗಳು ದೇಶ ಹಾಗೂ ನೆರೆಯ ಕೆನಡಾದಲ್ಲಿಯೂ ನಡೆದಿವೆ.

  • ಅಮೆರಿಕದಲ್ಲಿ ಅತಿ ದೊಡ್ಡ ಹಿಂದೂ ದೇವಾಲಯ ಉದ್ಘಾಟನೆ

    ಅಮೆರಿಕದಲ್ಲಿ ಅತಿ ದೊಡ್ಡ ಹಿಂದೂ ದೇವಾಲಯ ಉದ್ಘಾಟನೆ

    ವಾಷಿಂಗ್ಟನ್: ಭಾರತದ ಹೊರಗಿನ ಅತಿ ದೊಡ್ಡ ಹಿಂದೂ ದೇವಾಲಯ ಅಮೆರಿಕದಲ್ಲಿ ಉದ್ಘಾಟನೆಗೊಂಡಿದೆ. BAPS ಸ್ವಾಮಿನಾರಾಯಣ ಅಕ್ಷರಧಾಮ (BAPS Swaminarayan Akshardham) ದೇವಾಲಯವು ಅಮೆರಿಕದ (America) ನ್ಯೂಜೆರ್ಸಿಯಲ್ಲಿ ಭಾನುವಾರ ಭಕ್ತಾದಿಗಳಿಗೆ ಬಾಗಿಲು ತೆರೆಯಿತು.

    ನ್ಯೂಜೆರ್ಸಿಯ (New Jersey) ರಾಬಿನ್ಸ್‌ವಿಲ್ಲೆ ನಗರದಲ್ಲಿರುವ ಈ ದೇವಾಲಯವು ಆಧುನಿಕ ಯುಗದಲ್ಲಿ ಭಾರತದ ಹೊರಗಿನ ಅತಿದೊಡ್ಡ ಹಿಂದೂ ದೇವಾಲಯವಾಗಿದೆ ಎಂದು ಹೇಳಲಾಗುತ್ತದೆ. ಬಿಎಪಿಎಸ್‌ ಸ್ವಾಮಿನಾರಾಯಣ ಅಕ್ಷರಧಾಮಕ್ಕೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದು ಅಭಿನಂದನೆ ಸಲ್ಲಿಸಿದ್ದಾರೆ. ‘ವಿಶ್ವದಾದ್ಯಂತ ಅಪಾರ ಸಂಖ್ಯೆಯ ಭಕ್ತರಿಗೆ ಇದು ಆಧ್ಯಾತ್ಮಿಕ ಮಹತ್ವದ ಸಂದರ್ಭವಾಗಿದೆ’ ಎಂದು ಮೋದಿ ಬಣ್ಣಿಸಿದ್ದಾರೆ. ಇದನ್ನೂ ಓದಿ: ಕಳೆದ 14 ವರ್ಷಗಳಿಂದ ಇದ್ದು, ಭಯ ಇಲ್ಲ: ಇಸ್ರೇಲಿನಲ್ಲಿದ್ದ ಕನ್ನಡಿಗನ ಮಾತು

    ಈ ದೇವಾಲಯವನ್ನು ಇಟಲಿ ಮತ್ತು ಬಲ್ಗೇರಿಯಾದ ವಿಧದ ಅಮೃತಶಿಲೆಯಿಂದ ರಚಿಸಲಾಗಿದೆ. ಈ ವಾಸ್ತುಶಿಲ್ಪದ ದೇವಾಲಯವು ವಿಶಾಲವಾದ 126 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ದೇವಾಲಯದ ಗೋಡೆಗಳಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಮತ್ತು ಅಬ್ರಹಾಂ ಲಿಂಕನ್ ಸೇರಿದಂತೆ ಐತಿಹಾಸಿಕ ವ್ಯಕ್ತಿಗಳ ಪ್ರತಿರೂಪವನ್ನು ಕೆತ್ತನೆ ಮಾಡಲಾಗಿದೆ ಎಂದು ದೇವಾಲಯದ ಸ್ವಯಂಸೇವಕ ಮತ್ತು ಕೊಲಂಬಿಯಾ ವಿಶ್ವವಿದ್ಯಾನಿಲಯದ ಧಾರ್ಮಿಕ ವಿದ್ವಾಂಸ ಯೋಗಿ ತ್ರಿವೇದಿ ತಿಳಿಸಿದ್ದಾರೆ.

    2011 ರಲ್ಲಿ ಅಕ್ಷರಧಾಮ ದೇವಾಲಯ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಪ್ರಪಂಚದಾದ್ಯಂತದ 12,500 ಸ್ವಯಂಸೇವಕರು ಈ ದೇವಾಲಯವನ್ನು ನಿರ್ಮಿಸಿದ್ದಾರೆ. ಇದನ್ನೂ ಓದಿ: ಹಮಾಸ್ ರಾಕೆಟ್ ದಾಳಿಯಿಂದ ಕೇರಳದ ಶೀಜಾ ಆನಂದ್‍ಗೆ ಗಾಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೆನಡಾದಲ್ಲಿ ಮತ್ತೊಂದು ಹಿಂದೂ ದೇವಾಲಯ ಧ್ವಂಸ – ಖಲಿಸ್ತಾನಿ ಉಗ್ರರ ಪೋಸ್ಟರ್‌ ಅಂಟಿಸಿ ವಿಕೃತಿ

    ಕೆನಡಾದಲ್ಲಿ ಮತ್ತೊಂದು ಹಿಂದೂ ದೇವಾಲಯ ಧ್ವಂಸ – ಖಲಿಸ್ತಾನಿ ಉಗ್ರರ ಪೋಸ್ಟರ್‌ ಅಂಟಿಸಿ ವಿಕೃತಿ

    ಒಟ್ಟೋವಾ: ಕೆನಡಾದ (Canada) ಬ್ರಿಟಿಷ್ ಕೊಲಂಬಿಯಾದಲ್ಲಿರುವ ಹಿಂದೂ ದೇವಾಲಯವನ್ನು (Hindu Temple) ಶನಿವಾರ ಮಧ್ಯರಾತ್ರಿ ಧ್ವಂಸಗೊಳಿಸಲಾಗಿದೆ. ಅಲ್ಲದೇ ಹತ್ಯೆಯಾಗಿರುವ ಖಲಿಸ್ತಾನಿ ಭಯೋತ್ಪಾದಕರ (Khalistani Terrorist’s) ಪೋಸ್ಟರ್‌ಗಳನ್ನು ದೇವಾಲಯದ ಮುಖ್ಯ ಬಾಗಿಲಿಗೆ ಅಂಟಿಸಿರುವ ಘಟನೆ ನಡೆದಿದೆ.

    ಜೂನ್ 18 ರ ಹತ್ಯೆಯಲ್ಲಿ ಭಾರತದ ಪಾತ್ರವನ್ನು ಕೆನಡಾ ತನಿಖೆ ಮಾಡುತ್ತದೆ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಬಾಗಿಲಿಗೆ ಅಂಟಿಸಲಾಗಿದ್ದ ಪೋಸ್ಟರ್‌ನಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಫೋಟೋ ಕೂಡ ಇತ್ತು. ಇದನ್ನೂ ಓದಿ: 14ರ ಬಾಲಕಿ ಪಕ್ಕದಲ್ಲಿ ಕುಳಿತು ಹಸ್ತಮೈಥುನ – ಭಾರತೀಯ ಅಮೆರಿಕನ್ ಡಾಕ್ಟರ್‌ ಅರೆಸ್ಟ್‌!

    ಹರ್ದೀಪ್ ಸಿಂಗ್ ನಿಜ್ಜರ್ ಕೆನಡಾದ ಸರ್ರೆಯಲ್ಲಿರುವ ಗುರುನಾನಕ್ ಸಿಖ್ ಗುರುದ್ವಾರ ಸಾಹಿಬ್‌ನ ಮುಖ್ಯಸ್ಥನಾಗಿದ್ದ. ಜೂನ್ 18 ರಂದು ಸಂಜೆ ಗುರುದ್ವಾರದ ಆವರಣದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಆತನನ್ನು ಕೊಂದಿದ್ದರು.

    ಧ್ವಂಸಗೊಳಿಸಲಾದ ದೇವಾಲಯವು ಸರ್ರೆಯಲ್ಲಿರುವ ಲಕ್ಷ್ಮಿ ನಾರಾಯಣ ಮಂದಿರ. ಬ್ರಿಟಿಷ್ ಕೊಲಂಬಿಯಾದಲ್ಲಿನ ಅತಿದೊಡ್ಡ ಮತ್ತು ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಕೆನಡಾದಲ್ಲಿ ಈ ವರ್ಷ ನಡೆದ ಮೂರನೇ ದೇವಸ್ಥಾನ ಧ್ವಂಸ ಘಟನೆ ಇದಾಗಿದೆ. ಇದನ್ನೂ ಓದಿ: ಜಗತ್ತಿನ ಬೃಹತ್ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಹೆಚ್‍ಡಿಕೆ

    ಜನವರಿ 31 ರಂದು, ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಪ್ರಮುಖ ಹಿಂದೂ ದೇವಾಲಯವನ್ನು ಭಾರತ ವಿರೋಧಿ ಗೀಚುಬರಹದೊಂದಿಗೆ ಧ್ವಂಸಗೊಳಿಸಲಾಗಿತ್ತು. ಈ ಕೃತ್ಯ ಭಾರತೀಯ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು.

    ಈ ವರ್ಷದ ಏಪ್ರಿಲ್‌ನಲ್ಲಿ ಕೆನಡಾದ ಒಂಟಾರಿಯೊದಲ್ಲಿರುವ ಮತ್ತೊಂದು ಹಿಂದೂ ದೇವಾಲಯವನ್ನು ಭಾರತ ವಿರೋಧಿ ಗೀಚುಬರಹದಿಂದ ಧ್ವಂಸಗೊಳಿಸಲಾಗಿತ್ತು. ವಿಂಡ್ಸರ್ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದು, ಇಬ್ಬರು ಶಂಕಿತರು ಹಿಂದೂ ದೇವಾಲಯದ ಗೋಡೆಗಳ ಮೇಲೆ ಪೇಂಟಿಂಗ್ ಎರಚಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಂಗ್ಲಾದಲ್ಲಿ ಹಿಂದೂ ದೇಗುಲ ಧ್ವಂಸ- ಆರೋಪಿಯ ಬಂಧನ

    ಬಾಂಗ್ಲಾದಲ್ಲಿ ಹಿಂದೂ ದೇಗುಲ ಧ್ವಂಸ- ಆರೋಪಿಯ ಬಂಧನ

    ಢಾಕಾ: ಬಾಂಗ್ಲಾದೇಶದ (Bangladesh) ಬ್ರಾಹ್ಮಣಬಾರಿಯಾ ಜಿಲ್ಲೆಯಲ್ಲಿ ಹಿಂದೂ ದೇಗುಲವನ್ನು ಧ್ವಂಸಗೊಳಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತನನ್ನು ಖಲೀಲ್ ಮಿಯಾ(36) ಎಂದು ಗುರುತಿಸಲಾಗಿದೆ. ಈತ ನಿಯಾಮತ್‍ಪುರ ಗ್ರಾಮದಲ್ಲಿರುವ ನಿಯಾಮತ್ ಪುರ್ ದುರ್ಗಾ ದೇವಸ್ಥಾನವನ್ನು (Durga Temple) ಧ್ವಂಸಗೊಳಿಸಿದ್ದಾನೆ.

    ದೇಗುಲ ಧ್ವಂಸದ ವಿಚಾರ ಕೂಡಲೇ ಭಾರೀ ಸುದ್ದಿಯಾಯಿತು. ಕೂಡಲೇ ಸ್ಥಳದಲ್ಲಿ ಜಮಾಯಿಸಿದ ಜನ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಬ್ರಾಹ್ಮಣಬಾರಿಯಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಶೆಖಾವತ್ ಹುಸೈನ್ ಪ್ರತಿಕ್ರಿಯಿಸಿ, ಬಂಧಿತನ ಕೃತ್ಯದ ಹಿಂದಿನ ಉದ್ದೇಶವೇನು..? ಅಲ್ಲದೆ ಈ ಕೃತ್ಯದ ಹಿಂದೆ ಯಾರದ್ದಾರೆ ಎಂಬುದರ ಬಗ್ಗೆ ತಣಿಕೆ ನಡೆಸುವುದಾಗಿ ತಿಳಿಸಿದ್ದಾರೆ.

    ಈ ವಿಧ್ವಂಸಕ ಕೃತ್ಯವು ಸ್ಥಳೀಯ ಹಿಂದೂ ಸಮುದಾಯದ ಸದಸ್ಯರಲ್ಲಿ ಕೋಪ ಮತ್ತು ಅಸಮಾಧಾನವನ್ನು ಹುಟ್ಟುಹಾಕಿದೆ ಎಂದು ನಿಯಾಮತ್‍ಪುರ ಸರ್ವಜನನ ದುರ್ಗಾ ದೇವಸ್ಥಾನದ ಅಧ್ಯಕ್ಷ ಜಗದೀಶ್ ದಾಸ್ ತಿಳಿಸಿದ್ದಾರೆ.  ಇದನ್ನೂ ಓದಿ: ಪತ್ನಿ, ಮಗಳ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟ ಪ್ರಭುದೇವ್

    ನಿಯಾಮತ್‍ಪುರ ಗ್ರಾಮದ ತನ್ನ ಸಹೋದರಿಯ ಮನೆಗೆ ಬಂದಿದ್ದ ವೇಳೆ ಖಲೀಲ್ ಈ ಕೃತ ಎಸಗಿದ್ದಾನೆ. ಸ್ಥಳೀಯ ನಿವಾಸಿಗಳ ಸಣ್ಣ ಜಗಳ ಉಲ್ಬಣಗೊಂಡು ದುರ್ಗಾ ದೇವಸ್ಥಾನದೊಳಗಿನ ಐದರಿಂದ ಆರು ವಿಗ್ರಹಗಳನ್ನು ಧ್ವಂಸ ಮಾಡಲು ಕಾರಣವಾಯಿತು ಎಂಬುದಾಗಿ ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ.

    ಜಗದೀಶ್ ದಾಸ್ ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಮತ್ತು ತ್ವರಿತ ವಿಚಾರಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇತ್ತ ಘಟನೆ ಸಂಬಂಧ ಸಮಗ್ರ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಕಿಸ್ತಾನದಲ್ಲಿ 150 ವರ್ಷದಷ್ಟು ಹಳೆಯ ಹಿಂದೂ ದೇವಾಲಯ ನೆಲಸಮ – ಬೆಳಗ್ಗೆ ಎದ್ದು ನೋಡಿದ ಹಿಂದೂಗಳಿಗೆ ಶಾಕ್!

    ಪಾಕಿಸ್ತಾನದಲ್ಲಿ 150 ವರ್ಷದಷ್ಟು ಹಳೆಯ ಹಿಂದೂ ದೇವಾಲಯ ನೆಲಸಮ – ಬೆಳಗ್ಗೆ ಎದ್ದು ನೋಡಿದ ಹಿಂದೂಗಳಿಗೆ ಶಾಕ್!

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಕರಾಚಿಯ (Karachi) ಸೋಲ್ಜರ್ ಬಜಾರ್‌ನಲ್ಲಿದ್ದ 150 ವರ್ಷಗಳಷ್ಟು ಹಳೆಯದಾದ ಮಾರಿ ಮಾತಾ ಹಿಂದೂ ದೇವಾಲಯವನ್ನು (Hindu Temple) ನೆಲಸಮಗೊಳಿಸಲಾಗಿದೆ.

    ಶುಕ್ರವಾರ ತಡರಾತ್ರಿ ಈ ಪ್ರದೇಶದಲ್ಲಿ ವಿದ್ಯುತ್ ಇಲ್ಲದ ಸಂದರ್ಭದಲ್ಲಿ ನೆಲಸಮ ಕಾರ್ಯಾಚರಣೆ ನಡೆದಿದೆ. ಬುಲ್ಡೋಜರ್‌ ಬಳಸಿ ರಾತ್ರಿಯೆಲ್ಲಾ ಕಾರ್ಯಾಚರಣೆ ನಡೆಸಿ ಹೊರಗಿನ ಗೋಡೆಗಳು ಮತ್ತು ಮುಖ್ಯ ಗೇಟ್ ಅನ್ನು ಹಾಗೆಯೇ ಬಿಟ್ಟು, ಒಳಗಿನ ದೇವಾಲಯದ ಸಂಪೂರ್ಣ ರಚನೆಯನ್ನು ಕೆಡವಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಇದನ್ನೂ ಓದಿ: ಅವಳಿನ್ನೂ ಮುಸಲ್ಮಾನಳಲ್ಲ, ಪಾಕಿಸ್ತಾನಕ್ಕೆ ಬರೋದು ಬೇಡ – ಪಾಕ್ ಮಹಿಳೆ ಪೋಷಕರ ಫಸ್ಟ್ ರಿಯಾಕ್ಷನ್

    ಮಾರಿ ಮಾತಾ ದೇವಸ್ಥಾನವು ಮುಖಿ ಚೋಹಿತ್ರಮ್ ರಸ್ತೆಯಲ್ಲಿದೆ. ಸೋಲ್ಜರ್ ಬಜಾರ್ ಪೊಲೀಸ್ ಠಾಣೆಗೆ ಬಹಳ ಹತ್ತಿರದಲ್ಲಿದೆ. ಬುಲ್ಡೋಜರ್‌ನಿಂದ ದೇವಸ್ಥಾನ ಕೆಡವುತ್ತಿದ್ದ ವ್ಯಕ್ತಿಗಳಿಗೆ ಪೊಲೀಸರು ವ್ಯಾನ್‌ಗಳಲ್ಲಿ ಬಂದು ರಕ್ಷಣೆ ನೀಡಿದ್ದರು ಎಂದು ಸ್ಥಳೀಯ ಪತ್ರಿಕೆ ಡಾನ್‌ ವರದಿ ಮಾಡಿದೆ.

    ಸ್ಥಳೀಯರಾದ ಶ್ರೀರಾಮ್ ನಾಥ್ ಮಿಶ್ರ ಮಹಾರಾಜ್ ಪ್ರತಿಕ್ರಿಯಿಸಿ, ಈ ದೇವಾಲಯವನ್ನು ಇದನ್ನು 150 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಅದರ ಅಂಗಳದಲ್ಲಿ ಹೂತಿಟ್ಟಿರುವ ಹಳೆಯ ನಿಧಿಗಳ ಬಗ್ಗೆ ನಾವು ಕಥೆಗಳನ್ನು ಕೇಳಿದ್ದೇವೆ. ಕೆಲವು ಸಮಯದಿಂದ ಅದರ ಮೇಲೆ ಕಣ್ಣಿಟ್ಟಿದ್ದವು ಈ ಕೆಲಸ ಮಾಡಿರಬಹುದು ಎಂದು ದೂರಿದ್ದಾರೆ. ಇದನ್ನೂ ಓದಿ: ನೇಪಾಳದ ಆಸ್ಪತ್ರೆ-ಶಾಲೆಗಳಿಗೆ ಅಂಬುಲೆನ್ಸ್, ಶಾಲಾ ವಾಹನ ಗಿಫ್ಟ್ ಕೊಟ್ಟ ಭಾರತ

    ಮಂದಿರವು ಕರಾಚಿಯ ಮದ್ರಾಸಿ ಹಿಂದೂ ಸಮುದಾಯದ ನಿರ್ವಹಣೆಯಲ್ಲಿತ್ತು. ಇದು ಅತ್ಯಂತ ಹಳೆಯ ದೇವಾಲಯವಾಗಿದ್ದರಿಂದ ಸ್ವಲ್ಪ ಶಿಥಿಲಾವಸ್ತೆಗೊಂಡಿತ್ತು. ದೇವಾಲಯ ನವೀಕರಣಕ್ಕಾಗಿ ಅಲ್ಲಿದ್ದ ಹಿಂದೂ ದೇವರ ವಿಗ್ರಹಗಳನ್ನು ತಾತ್ಕಾಲಿಕವಾಗಿ ಬೇರೆಡೆ ಸ್ಥಳಾಂತರಿಸಲಾಗಿತ್ತು. ಆದರೆ ನಿನ್ನೆ ರಾತ್ರಿ ಮಾರಿ ಮಾತಾ ದೇವಾಲಯವನ್ನು ಕೆಡವಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಇಮ್ರಾನ್ ಹಶ್ಮಿ ಮತ್ತು ರೇಖಾ ಎಕೆಎ ನಾಗಿನ್ ಬಾಯಿ ಎಂಬಿಬ್ಬರು ವ್ಯಕ್ತಿಗಳು ಈ ಸ್ಥಳವನ್ನು ತೊರೆಯುವಂತೆ ನಮ್ಮನ್ನು ಒತ್ತಾಯಿಸುತ್ತಿದ್ದಾರೆ. ಈ ದೇವಸ್ಥಾನದ ಸ್ಥಳವನ್ನು ಬೇರೆಯವರಿಗೆ ಮಾರಾಟ ಮಾಡಲು ಇವರಿಬ್ಬರು ಯೋಜಿಸಿದ್ದರು. ಆ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸುವ ಪ್ಲಾನ್‌ ಇತ್ತು ಎಂದು ಮದ್ರಾಸಿ ಹಿಂದೂ ಗುಂಪಿನ ಸದಸ್ಯರೊಬ್ಬರು ಆರೋಪಿಸಿದ್ದಾರೆ. ಇದನ್ನೂ ಓದಿ: ಅಮೆರಿಕದ ಅಲಾಸ್ಕಾ ಬಳಿ 7.4 ತೀವ್ರತೆಯ ಭಾರೀ ಭೂಕಂಪ – ಸುನಾಮಿ ಎಚ್ಚರಿಕೆ

    ಪಾಕಿಸ್ತಾನ-ಹಿಂದೂ ಕೌನ್ಸಿಲ್, ಮುಖ್ಯಮಂತ್ರಿ ಸೈಯದ್ ಮುರಾದ್ ಅಲಿ ಶಾ ಮತ್ತು ಸಿಂಧ್ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್‌ಗೆ ಮದ್ರಾಸಿ ಹಿಂದೂ ಸಮುದಾಯ ದೂರು ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]