Tag: Hindu Remark Row

  • ಅಶ್ಲೀಲ ಸತೀಶ್ ಜಾರಕಿಹೊಳಿಯನ್ನು ಹಿಂದೂಸ್ಥಾನದಿಂದ ಗಡಿಪಾರು ಮಾಡಿ: ಬಿಜೆಪಿ ಒತ್ತಾಯ

    ಅಶ್ಲೀಲ ಸತೀಶ್ ಜಾರಕಿಹೊಳಿಯನ್ನು ಹಿಂದೂಸ್ಥಾನದಿಂದ ಗಡಿಪಾರು ಮಾಡಿ: ಬಿಜೆಪಿ ಒತ್ತಾಯ

    ಉಡುಪಿ: ಪರ್ಷಿಯನ್ (Persian)  ಭಾಷೆಯಲ್ಲಿ ಹಿಂದೂ ಪದಕ್ಕೆ ಅಶ್ಲೀಲ ಅರ್ಥ ಇದೆ ಎಂದ ಸತೀಶ್ ಜಾರಕಿಹಳಿ (Satish Jarkiholi) ವಿರುದ್ಧ ಕರಾವಳಿ ಜಿಲ್ಲೆ ಉಡುಪಿಯಲ್ಲಿ (Udupi) ವಿರೋಧ ವ್ಯಕ್ತವಾಗಿದೆ. ಕಡಿಯಾಳಿಯಲ್ಲಿ ಜಮಾಯಿಸಿದ ಬಿಜೆಪಿ (BJP) ನಾಯಕರು ಮತ್ತು ಕಾರ್ಯಕರ್ತರು ಈ ಹೇಳಿಕೆಯ ವಿರುದ್ಧ ಅಸಮಾಧಾನ ಹೊರಹಾಕಿ, ಗಡಿಪಾರಿಗೆ ಆಗ್ರಹಿಸಿದರು.

    ಹಿಂದೂ (Hindu) ಶಬ್ಧದ ಬಗ್ಗೆ ತಕರಾರು ಇರುವ ಸತೀಶ್ ಜಾರಕಿಹೊಳಿಯನ್ನು ಬಂಧಿಸಿ, ಹಿಂದೂಸ್ಥಾನದಿಂದ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಅವಕಾಶ ಸಿಕ್ಕಾಗಲೆಲ್ಲ ಕಾಂಗ್ರೆಸ್ (Congress) ಹಿಂದೂಗಳ ಅವಹೇಳನ ಮಾಡುತ್ತಾ ಬಂದಿದೆ. ರಾಮ ಮಂದಿರ, ರಾಮ ಸೇತು, ಕಾಶ್ಮೀರ ವಿಚಾರದಲ್ಲೂ ಇದನ್ನೇ ಮಾಡಿದ್ದರು. ಜಾರಕಿಹೊಳಿ ತನ್ನ ಹೇಳಿಕೆಗೆ ಬದ್ಧ ಎನ್ನುತ್ತಿದ್ದಾರೆ. ಇದು ಕಾಂಗ್ರೆಸ್‍ನ ಕುಟಿಲ ಮಾನಸಿಕತೆಗೆ ಸಾಕ್ಷಿ. ವಿಕಿಪೀಡಿಯಾದಲ್ಲಿ ನೆಹರು ಇಂದಿರಾಗಾಂಧಿ ಬಗೆಗೂ ಸಾಕಷ್ಟು ವಿಚಾರಗಳಿವೆ. ಎಲ್ಲಾ ವಿಚಾರವನ್ನು ಹೇಳಿದರೆ ಕಾಂಗ್ರೆಸ್‍ಗೆ ಜನ ಚಪ್ಪಲಿಯಲ್ಲಿ ಹೊಡಿತಾರೆ ಎಂದು ಜಿಲ್ಲಾಧ್ಯಕ್ಷ ಕುಯಿಲಾಡಿ ಗರಂ ಆದರು. ಇದನ್ನೂ ಓದಿ: ಸುದ್ದಿಗೋಷ್ಠಿ ಕರೆದು ಸಿದ್ದರಾಮಯ್ಯ ವಿರುದ್ಧ ಅಶ್ಲೀಲ ಮಾತು

    ನಾವು ಕಾಂಗ್ರೆಸ್ ಮನಸ್ಥಿತಿಗೆ ಇಳಿಯಲ್ಲ. ರಾಜಕೀಯ ಪಕ್ಷಕ್ಕೆ ಗೌರವ ಕೊಡುತ್ತೇವೆ. ಅಶ್ಲೀಲ ಸತೀಶ್ ಜಾರಕಿಹೊಳಿಯನ್ನು ಗಡಿಪಾರು ಮಾಡಿ. ಇಲ್ಲವೇ, ರಾಜ್ಯ ವ್ಯಾಪಿ ಉಗ್ರ ಪ್ರತಿಭಟನೆಗೆ ಎದುರಿಸಲು ಸಿದ್ಧರಾಗಿ ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದರು. ಇದನ್ನೂ ಓದಿ: `ಹಿಂದೂ’ ಅಶ್ಲೀಲ ಪದ ಅನ್ನೋದು ಯಾವ ಪುಸ್ತಕದಲ್ಲಿದೆ ನನಗಂತೂ ಗೊತ್ತಿಲ್ಲ: ಡಿಕೆಶಿ

    ಶಾಸಕ ರಘುಪತಿ ಭಟ್ ಮಾತನಾಡಿ, ಸತೀಶ್ ಜಾರಕಿಹೊಳಿ ಕ್ಷಮೆಕೇಳಿ ತನ್ನ ಮಾತನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸ್ಥಾನದಿಂದ ಉಚ್ಚಾಟನೆ ಮಾಡಬೇಕು ಎಂದು ಒತ್ತಾಯಿಸಿದರು. ಸತೀಶ್ ಜಾರಕಿಹೊಳಿ ತನ್ನ ಹೇಳಿಕೆಯನ್ನು ಪ್ರತಿಪಾದಿಸುತ್ತಿದ್ದಾರೆ. ಸತೀಶ್ ಜಾರಕಿಹೊಳಿ ಹೇಳಿಕೆ ಜವಾಬ್ದಾರಿಯನ್ನು ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳಬೇಕು. ಕಾಂಗ್ರೆಸ್ ತನ್ನ ಜವಾಬ್ದಾರಿ ಪ್ರದರ್ಶಿಸಬೇಕು. ಕ್ಷಮೆಕೇಳಿ ಇಲ್ಲವೇ ಕಾರ್ಯಾದ್ಯಕ್ಷ ಸ್ಥಾನದಿಂದ ಉಚ್ಛಾಟಿಸಿ. ಕಾಂಗ್ರೆಸ್ ಪಕ್ಷದ ಹಿಂದೂಗಳು ಜಾಗೃತರಾಗಬೇಕು. ಧರ್ಮದ ವಿಚಾರದಲ್ಲಿ ರಾಜಕೀಯ ಹೇಳಿಕೆಗಳು ಸರಿಯಲ್ಲ. ಕಾಂಗ್ರೆಸ್ ಪಕ್ಷ ಈ ಮಾತನ್ನು ಒಪ್ಪದಿದ್ದರೆ ಸ್ಪಷ್ಟಪಡಿಸಬೇಕು ಎಂದು ಶಾಸಕರು ಒತ್ತಾಯ ಮಾಡಿದರು.

    ಕಾಂಗ್ರೆಸ್‍ನ ಹಿಂದೂಗಳು ಜಾರಕಿಹೊಳಿ ಹೇಳಿಕೆಯನ್ನು ಸಹಿಸಿಕೊಳ್ಳುತ್ತೀರಾ? ಕಾಂಗ್ರೆಸ್‍ನ ಮಾನಸಿಕತೆ ಏನು ಎಂಬುದು ಸ್ಪಷ್ಟವಾಗಬೇಕು. ಕಾಂಗ್ರೆಸ್‍ನ ಕಾರ್ಯಕರ್ತರು ಜಾರಕಿಹೊಳಿಯ ಹೇಳಿಕೆ ವಿರುದ್ಧ ಧನಿ ಎತ್ತಬೇಕು ಎಂದು ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು. ಬಿಜೆಪಿಯ ಜಿಲ್ಲಾ ಮಟ್ಟದ ನಾಯಕರು ನಗರ ಸಭೆಯ ಪ್ರತಿನಿಧಿಗಳು ಬಿಜೆಪಿ ಪಕ್ಷದ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್‍ನವರ ರಕ್ತದಲ್ಲಿ ಅವರ ಡಿಎನ್‍ಎನಲ್ಲೂ ಹಿಂದೂ ವಿರೋಧಿ ಭಾವನೆ ಇದೆ: ಆರ್.ಅಶೋಕ್

    ಕಾಂಗ್ರೆಸ್‍ನವರ ರಕ್ತದಲ್ಲಿ ಅವರ ಡಿಎನ್‍ಎನಲ್ಲೂ ಹಿಂದೂ ವಿರೋಧಿ ಭಾವನೆ ಇದೆ: ಆರ್.ಅಶೋಕ್

    ಚಿಕ್ಕಬಳ್ಳಾಪುರ: ಕಾಂಗ್ರೆಸ್‍ನವರ (Congress) ರಕ್ತದಲ್ಲಿ ಅವರ ಡಿಎನ್‍ಎನಲ್ಲೇ (DNA) ಹಿಂದೂ ವಿರೋಧಿ ಭಾವನೆ ಬಂದಿದೆ ಎಂದು ಸತೀಶ್ ಜಾರಕಿಹೊಳಿ (Satish Jarkiholi) ಹಿಂದೂ ಪದದ ಹೇಳಿಕೆ ಸಂಬಂಧ ಕಂದಾಯ ಸಚಿವ ಆರ್.ಅಶೋಕ್ (R.Ashok) ಕಿಡಿಕಾರಿದ್ದಾರೆ.

    ನೆಹರು ಕಾಲದಿಂದಲೂ ಕಾಂಗ್ರೆಸ್ ಹಿಂದೂ ವಿರೋಧಿ. ಗುಜರಾತ್‍ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಕಟ್ಟಿಸಿದ್ದ ದೇವಸ್ಥಾನ ಒಡೆದಾಗಲೂ ನೆಹರು ಬೆಂಬಲ ನೀಡಲಿಲ್ಲ. ಕಾಂಗ್ರೆಸ್‍ನವರಿಗೆ ಪ್ರತಿದಿನ ಹಿಂದೂಗಳನ್ನು ಬೈಯಲಿಲ್ಲ ಅಂದ್ರೆ ಅವರಿಗೆ ನಿದ್ದೆ ಬರಲ್ಲ. ಕಾಂಗ್ರೆಸ್‍ನವರು ತೋರಿಕೆಗಾಗಿ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರಿಗೆ ಧಮ್ ಇದ್ರೆ ತಾಕತ್ ಇದ್ರೆ ಸತೀಶ್ ಜಾರಕಿಹೊಳಿ ಮೇಲೆ ಕ್ರಮ ಕೈಗೊಳ್ಳಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸೇ ಅಶ್ಲೀಲ- ಜಾರಕಿಹೊಳಿ ವಿರುದ್ಧ ಆರಗ ಜ್ಞಾನೇಂದ್ರ ಕಿಡಿ

    ಸುರ್ಜೇವಾಲ ಅವರು ಮಾತನಾಡಿ ತಪ್ಪು ಅಂತ ಹೇಳಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಲಿ. ನೋಟಿಸ್ ಕೊಡುವ ಧಮ್, ತಾಕತ್ ಇಲ್ಲ. ಸುಮ್ಮನೆ ಹೇಳಿಕೆ ಕೊಟ್ರೆ ಪ್ರಯೋಜನವಿಲ್ಲ. ಭಾರತೀಯ ಪರಂಪರೆ ಹಿಂದೂ ಧರ್ಮದ ಜೀವನ ಪದ್ಧತಿ ಅಂತ ಸುಪ್ರೀಂಕೋರ್ಟ್ ಸಹ ವ್ಯಾಖ್ಯಾನ ಮಾಡಿದೆ. ಮಲಯಾಳಂ, ತೆಲುಗು ಅಂತ ಬೇರೆ ಬೇರೆ ಭಾಷೆಗಳಲ್ಲಿ ಕನ್ನಡ ಪದ ಬೇರೆ, ಬೇರೆ ಅರ್ಥ ಬರಬಹುದು ಅದಲ್ಲ ಮುಖ್ಯ. ಭಾರತೀಯ ಭಾಷೆಯಲ್ಲಿ ಹಿಂದೂ ಪದಕ್ಕೆ ಪವಿತ್ರವಾದ ಸ್ಥಾನಮಾನವಿದೆ. ಹಿಂದೂ ಧರ್ಮಕ್ಕಾಗಿ ಪ್ರಾಣ ಕೊಡಲು ಕೋಟ್ಯಂತರ ಜನ ಈ ನಾಡಿನಲ್ಲಿ ಬದುಕಿದ್ದಾರೆ. ಇನ್ಮುಂದೆ ಇಂತಹ ಕಿಡಿಗೇಡಿ ಹೇಳಿಕೆ ಕೊಡುವ ಮುನ್ನ ಎಚ್ಚರಿಕೆಯಿಂದಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿದ ಕೂಡಲೇ ಒಕ್ಕಲಿಗರು ಬಿಜೆಪಿ ಹಿಂದೆ ಹೋಗೋದಿಲ್ಲ: ಕುಮಾರಸ್ವಾಮಿ

    ಮುಸ್ಲಿಮರು ಪ್ರಪಂಚಕ್ಕೆ ಒಬ್ಬರೆ ದೇವರು ಅಂತೆಲ್ಲ ಹೇಳ್ತಾರೆ. ನಮ್ಮ ಧರ್ಮ ಯಾವತ್ತು ಆ ರೀತಿ ಹೇಳಿಲ್ಲ. ನೀವು ಯಾಕೆ ಅವರ ಬಗ್ಗೆ ಎಲ್ಲೂ ಮಾತನಾಡಲ್ಲ. ಸ್ಮಶಾನದಲ್ಲಿ ಹಿಂದೂಗಳನ್ನು ಕರೆದುಕೊಂಡು ಹೋಗಿ ಮದುವೆ ಮಾಡ್ತಿರಲ್ಲ. ಮುಸ್ಲಿಮರನ್ನು ಕಬರ್ ಸ್ಥಾನಕ್ಕೆ ಕರೆದುಕೊಂಡು ಹೋಗಿ ಮದುವೆ ಮಾಡಿ ಅದು ಆಗಲ್ಲ ಯಾಕೆ? ಕ್ರಿಶ್ಚಿಯನ್ನರನ್ನು ಶಿಲುಬೆ ಸಮಾಧಿ ಬಳಿ ಕರೆದುಕೊಂಡು ಹೋಗಿ ಮದುವೆ ಮಾಡಿ ಅದು ಆಗಲ್ಲ. ಹಿಂದೂಗಳನ್ನು ಮಾತ್ರ ಕರೆದುಕೊಂಡು ಹೋಗಿ ಮಾಡ್ತೀರಾ? ಹಿಂದೂಗಳು ಇದೀಗ ಎಚ್ಚೆತ್ತುಕೊಂಡಿದ್ದಾರೆ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸದೃಢವಾಗಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕ ಮುಕ್ತ ಕಾಂಗ್ರೆಸ್ ಆಗಿ ಜನ ಮಾಡ್ತಾರೆ ಅಂತ ಆಕ್ರೋಶ ಹೊರಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]