Tag: Hindu Religion

  • ಸಾಯುವ ಮುನ್ನ ʻಹೇ ರಾಮ್‌ʼ ಎಂದಿದ್ದ ಮಹಾತ್ಮ ಗಾಂಧಿ ಆದರ್ಶವನ್ನೇ ಕಾಂಗ್ರೆಸ್‌ ಅನುಸರಿಸುತ್ತದೆ: ಪ್ರಿಯಾಂಕಾ ಗಾಂಧಿ

    ಸಾಯುವ ಮುನ್ನ ʻಹೇ ರಾಮ್‌ʼ ಎಂದಿದ್ದ ಮಹಾತ್ಮ ಗಾಂಧಿ ಆದರ್ಶವನ್ನೇ ಕಾಂಗ್ರೆಸ್‌ ಅನುಸರಿಸುತ್ತದೆ: ಪ್ರಿಯಾಂಕಾ ಗಾಂಧಿ

    – ಮೋದಿ ವಿರುದ್ಧ ಕೈ ನಾಯಕಿ ಮತ್ತೆ ಕಿಡಿ

    ಲಕ್ನೋ: ಸಾಯುವ ಮೊದಲು ʻಹೇ ರಾಮ್ʼ ಎಂದು ಘೋಷಣೆ ಕೂಗಿದ ಮಹಾತ್ಮ ಗಾಂಧಿಯವರ ಆದರ್ಶವನ್ನು ಕಾಂಗ್ರೆಸ್‌ ಅನುಸರಿಸುತ್ತದೆ. ಆದ್ರೆ ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ತಿರಸ್ಕರಿಸಿದ ಕಾರಣಕ್ಕೆ ಮೋದಿ (PM Modi) ಕಾಂಗ್ರೆಸ್‌ ಅನ್ನು ಧರ್ಮ ವಿರೋಧಿ ಎಂದು ಆರೋಪಿಸುವುದು ತಪ್ಪು ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಅಸಮಾಧಾನ ಹೊರಹಾಕಿದ್ದಾರೆ

    ರಾಯ್‌ಬರೇಲಿ ಕ್ಷೇತ್ರದ ʻಚೌಡಾ ಮಿಲ್ ವೃತ್ತದಲ್ಲಿʼ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಯುವ ಮುನ್ನ ʻಹೇ ರಾಮ್‌ʼ ಘೋಷಣೆ ಕೂಗಿದ ಮಹಾತ್ಮ ಗಾಂಧಿ (Mahatma Gandhi) ಅವರ ಆದರ್ಶವನ್ನು ಕಾಂಗ್ರೆಸ್‌ ಪಕ್ಷವು ಪಾಲಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಹುಲ್‌ ಗಾಂಧಿ ಭೇಟಿ ಬಳಿಕ ಬದಲಾಯ್ತು ಕ್ಷೌರದಂಗಡಿ ಲಕ್‌ – ಅಂಗಡಿಗೆ ಗ್ರಾಹಕರ ದಂಡು

    ಹಿಂದೂ ಧರ್ಮದ (Hindu Religion) ಚಾಂಪಿಯನ್‌, ಗೋ ರಕ್ಷಕರು ಎಂದು ಬಿಜೆಪಿ ಹೇಳಿಕೊಳ್ಳುತ್ತದೆ. ಆದ್ರೆ ತಮ್ಮದೇ ಪಕ್ಷ ಆಡಳಿತದಲ್ಲಿರುವ ಉತ್ತರ ಪ್ರದೇಶದಲ್ಲಿ ಗೋಶಾಲೆಗಳ ಸ್ಥಿತಿ ದಯನೀಯವಾಗಿದೆ. ಗೋ ಶಾಲೆಗಳಲ್ಲಿ (Cowsheds) ಸತ್ತಿರುವ ಹಸುಗಳ ಮಾಂಸವನ್ನು ನಾಯಿಗಳು ತಿನ್ನುತ್ತಿವೆ. ಅಷ್ಟೊಂದು ದಯನೀಯ ಸ್ಥಿತಿ ತಲುಪಿದೆ. ಆದ್ರೆ ಕಾಂಗ್ರೆಸ್‌ ಆಡಳಿತದಲ್ಲಿರುವ ಛತ್ತೀಸ್‌ಗಢದಲ್ಲಿ ಗೋಶಾಲೆಗಳ ಸ್ಥಿತಿ ಸುಧಾರಣೆಯಾಗಿದೆ. ಗೋಶಾಲೆಗಳನ್ನು ನಡೆಸುತ್ತಿರುವ ಸ್ವಸಹಾಯ ಗುಂಪುಗಳಿಗೂ ಅನುಕೂಲವೇ ಆಗಿದೆ ಎಂದು ತಿಳಿಸಿದ್ದಾರೆ.

    ಇನ್ನೂ ರಾಹುಲ್‌ ಗಾಂಧಿ ಪರ ಪ್ರಚಾರ ನಡೆಸಿದ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್‌ ಗ್ಯಾರಂಟಿಗಳ ಬಗ್ಗೆ ಪ್ರಸ್ತಾಪಿಸಿದರು. ಇಂಡಿಯಾ ಒಕ್ಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ್ರೆ ಕೊಟ್ಟ ಭರವಸೆಗಳನ್ನು ಈಡೇರಿಸಲಿದೆ. ಉತ್ತರ ಪ್ರದೇಶದಲ್ಲಿ ಪದೇ ಪದೇ ಆಗುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆಗೆ ಬ್ರೇಕ್‌ ಹಾಕಲಿದೆ. ಅಗ್ನಿವೀರ್‌ ಯೋಜನೆಯನ್ನು ರದ್ದುಗೊಳಿಸಲಿದೆ. ಮುಖ್ಯವಾಗಿ ಸಣ್ಣ ಉದ್ಯಮಿಗಳ ಸಹಾಯಕ್ಕಾಗಿ 5,000 ಕೋಟಿ ರೂ. ನಿಧಿಯನ್ನು ರಚಿಸಲಿದೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಪೆನ್‌ಡ್ರೈವ್ ಪ್ರಕರಣದಲ್ಲಿ ಅವರ ಕುಟುಂಬದವರೇ ಶಾಸಕ, ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡಲಿ: ಪ್ರಿಯಾಂಕ್ ಖರ್ಗೆ

  • ಯುಗಾದಿ ಚಂದ್ರನ ದರ್ಶನ – ಏನಿದರ ಮಹತ್ವ?

    ಯುಗಾದಿ ಚಂದ್ರನ ದರ್ಶನ – ಏನಿದರ ಮಹತ್ವ?

    ಹಿಂದೂ ಧರ್ಮದ (Hindu Religion) ಬಹುತೇಕ ಆಚರಣೆಗಳು ಪ್ರಕೃತಿಯೊಂದಿಗೆ ಸಂಬಂಧ ಹೊಂದಿವೆ. ಅದೇ ರೀತಿ ಯುಗಾದಿ ಹಬ್ಬ (Ugadi Festival) ಸಹ ಪ್ರಕೃತಿ ವಸಂತ ಕಾಲದ ಉತ್ತುಂಗದಲ್ಲಿದ್ದಾಗ ಆಚರಿಸುವ ವಿಶೇಷ ಹಬ್ಬವಾಗಿದೆ. ಈ ಸಮಯದಲ್ಲಿ ಪ್ರಕೃತಿಯೇ ಹಸಿರು, ಹೂವಿನ ತಳಿರು ತೋರಣ ಕಟ್ಟಿ ಸಂಭ್ರಮಿಸುತ್ತಿರುತ್ತದೆ. ಈ ಹಬ್ಬದಂದು ಸಂಜೆ ಚಂದ್ರನ (Moon) ದರ್ಶನಕ್ಕೆ ಸಹ ವಿಶೇಷ ಮಹತ್ವವಿದೆ.

    ಗಣಪತಿ ತನ್ನ ವಾಹನ ಇಲಿಯನ್ನೇರಿ ಹೋಗುತ್ತಿದ್ದಾಗ ಆಯತಪ್ಪಿ ಬೀಳುತ್ತಾನೆ. ಇದನ್ನು ಕಂಡು ಆಕಾಶದಲ್ಲಿದ್ದ ಚಂದ್ರ ನಗುತ್ತಾನೆ. ಇದನ್ನು ನೋಡಿದ ಗಣೇಶ, ಚೌತಿಯ ದಿನ ಚಂದ್ರನನ್ನು ನೋಡಿದರೆ ಅಪವಾದ ಬರಲಿ ಎಂದು ಶಾಪ ನೀಡುತ್ತಾನೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಶಾಪ ವಿಮೋಚನೆಗೆ ಯುಗಾದಿ ಚಂದ್ರನ ದರ್ಶನ ಮಾಡಬೇಕು ಎಂಬ ನಂಬಿಕೆ ಇದೆ.

    ಚಂದ್ರ ಶುದ್ಧತೆ, ಬುದ್ಧಿವಂತಿಕೆಯ ಸಂಕೇತ

    ಹಿಂದೂ ಧರ್ಮದ ಪ್ರಕಾರ, ಚಂದ್ರ ನವಗ್ರಹಗಳಲ್ಲಿ ಒಬ್ಬ, ಶುದ್ಧತೆ, ಬುದ್ಧಿವಂತಿಕೆ ಹಾಗೂ ಉತ್ತಮ ನಡವಳಿಕೆಯ ಸಂಕೇತವಾಗಿ ಆತನನ್ನು ಬಿಂಬಿಸಲಾಗುತ್ತದೆ. ಅಂತಹ ಚಂದ್ರನನ್ನು ವರ್ಷದ ಆದಿ ಪರ್ವವಾದ ಯುಗಾದಿಯಂದು ದರ್ಶನ ಪಡೆದರೆ, ಇಡೀ ವರ್ಷವೆಲ್ಲಾ ಸುಖ-ಸಂತೋಷದಿಂದ ಇರುತ್ತಾರೆ ಎಂಬ ನಂಬಿಕೆ ಇದೆ. ಇದೇ ನಂಬಿಕೆಯಿಂದ ಹಿಂದಿನಿಂದಲೂ ಯುಗಾದಿ ಚಂದ್ರನನ್ನು ನೋಡುವುದು ವಾಡಿಕೆಯಾಗಿದೆ. ಯುಗಾದಿಯ ಹಿಂದಿನ ದಿನ ಅಮಾವಾಸ್ಯೆಯಲ್ಲಿ ಬರುವುದರಿಂದ ಮರು ದಿನ ಚಂದ್ರನ ದರ್ಶನಕ್ಕೆ ಪುಣ್ಯ ಮಾಡಿರಬೇಕು!

    ಚಂದ್ರ ದರ್ಶನದಿಂದ ಮಳೆ-ಬೆಳೆ ಲೆಕ್ಕಾಚಾರ

    ಯುಗಾದಿ ದಿನದಂದು ಕಾಣಿಸುವ ಚಂದ್ರನನ್ನು ಆಧರಿಸಿ ಹಿಂದೆ ಆ ವರ್ಷದ ಮಳೆ-ಬೆಳೆ, ರೋಗ-ರುಜಿನಗಳು, ಏಳು-ಬೀಳುಗಳ ಬಗ್ಗೆ ಚಿಂತನೆ ಮಾಡುತ್ತಿದ್ದರು. ಯುಗಾದಿಯಂದು ಚಂದ್ರನು ಅತ್ಯಂತ ಚಿಕ್ಕದಾಗಿ ಸಣ್ಣ ಗೆರೆಯ ರೀತಿಯಲ್ಲಿ ಕಾಣ ಸಿಗುತ್ತಾನೆ. ಇದನ್ನು ಆಧರಿಸಿ ವರ್ಷದ ಭವಿಷ್ಯವನ್ನು ನಿರ್ಧರಿಸುತ್ತಿದ್ದರು. ಅದಕ್ಕೆಂದೇ ಹೊಸ ವರ್ಷದ ಪಂಚಾಂಗವನ್ನು ಪಠಿಸಿ, ಅನಂತರ ಚಂದ್ರ ದರ್ಶನವನ್ನು ಮಾಡಲಾಗುತ್ತದೆ.

  • ಬಹುತ್ವವನ್ನು ಅಳವಡಿಸಿಕೊಂಡಿರುವುದು ಹಿಂದೂ ಧರ್ಮ ಮಾತ್ರ: ಸಿ.ಟಿ.ರವಿ

    ಬಹುತ್ವವನ್ನು ಅಳವಡಿಸಿಕೊಂಡಿರುವುದು ಹಿಂದೂ ಧರ್ಮ ಮಾತ್ರ: ಸಿ.ಟಿ.ರವಿ

    ಚಿಕ್ಕಮಗಳೂರು: ಸಿಎಂ ಸಿದ್ದರಾಮಯ್ಯನವರು (Siddaramaiah) ಯಾವಾಗಲೂ ಬಹುತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ ಬಹುತ್ವವನ್ನ ಒಪ್ಪಿಕೊಂಡು, ಅಳವಡಿಸಿಕೊಂಡಿರುವುದು ಕೇವಲ ಹಿಂದೂ ಧರ್ಮ (Hindu Religion) ಮಾತ್ರ, ಬಹುತ್ವಕ್ಕೆ ಬೆಲೆ ಇರುವುದು ಹಿಂದೂ ಧರ್ಮದಲ್ಲಿಯೇ ಎಂದು ಮಾಜಿ ಸಚಿವ ಸಿ.ಟಿ.ರವಿ (CT Ravi) ಹೇಳಿದ್ದಾರೆ.

    ಚಿಕ್ಕಮಗಳೂರು (Chikkamagaluru) ತಾಲೂಕಿನ ದತ್ತ ಪೀಠದಲ್ಲಿ ನಡೆದ ದತ್ತ ಜಯಂತಿಯ (Datta Jayanthi) ಹೋಮ ಪೂಜೆಯ ಬಳಿಕ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಹಮ್ಮಿಕೊಂಡಿದ್ದ ದತ್ತ ಮಾಲೆ ಜಯಂತಿ ಕಾರ್ಯಕ್ರಮ ವಿದ್ಯುಕ್ತವಾಗಿ ಸಂಪನ್ನಗೊಂಡಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೂಡ ವಿಶೇಷ ಧನ್ಯವಾದ ಎಂದರು. ಸರ್ಕಾರದ ಪ್ರತಿನಿಧಿಯಾಗಿ ಯಾರಾದರೂ ಒಬ್ಬರು ಭಾಗವಹಿಸಬೇಕಾಗಿತ್ತು. ಸರ್ಕಾರದ ಪ್ರತಿನಿಧಿಗಳಾಗಿ ಯಾರು ಬಾರದೇ ಇರುವುದು ದುರಾದೃಷ್ಟಕರ ಹಾಗೂ ನೋವಿನ ಸಂಗತಿ ಎಂದರು. ಇದನ್ನೂ ಓದಿ: ಯೂಟ್ಯೂಬ್‌ನಲ್ಲಿ ವಿಶ್ವದಾಖಲೆ ಬರೆದ ನರೇಂದ್ರ ಮೋದಿ

    ಇದು ಮುಜರಾಯಿ ಇಲಾಖೆಗೆ ಸೇರಿದ ದತ್ತಾತ್ರೇಯ ಸ್ವಾಮಿ ದೇವಸ್ಥಾನವಾಗಿದ್ದು, ಯಾರಾದರೂ ಒಬ್ಬರು ಭಾಗವಹಿಸಬೇಕಾದದ್ದು ಕ್ರಮವಾಗಿತ್ತು. ಯಾರೂ ಭಾಗವಹಿಸದೇ ಇರುವುದು ದುರಾದೃಷ್ಟಕರ. ಅವರ ಮನಸ್ಸಿನಲ್ಲಿ ಹಿಂದೂ ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸಿದರೆ ಜಾತ್ಯಾತೀತತೆಗೆ ಭಂಗ ಬರುತ್ತದೆ ಎಂಬ ಭಾವನೆ ಇರಬಹುದು. ಈದ್ ಮಿಲಾದ್‌ನಲ್ಲಿ ಪಾಲ್ಗೊಳ್ಳುತ್ತಾರೆ. ದತ್ತ ಜಯಂತಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದರೆ ಏನರ್ಥ? ಯಾವ ಸಂದೇಶ ಕೊಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪಾಕಿಸ್ತಾನದ ಜೊತೆ ಭಾರತ ಸಂಬಂಧವನ್ನು ಸುಧಾರಿಸದೇ ಇದ್ದಲ್ಲಿ ಕಾಶ್ಮೀರಕ್ಕೆ ಗಾಜಾ ಪರಿಸ್ಥಿತಿ ಬರಬಹುದು: ಫಾರೂಖ್ ಅಬ್ದುಲ್ಲಾ

    ನಾವು ಹಿಂದೂ ಭಾವನೆಗಳ ಜೊತೆಗಿಲ್ಲ ಎಂಬ ಸಂದೇಶವನ್ನು ಅವರು ಕೊಡುತ್ತಿದ್ದಾರೆಂದು ನನಗೆ ಅನಿಸುತ್ತಿದೆ. ಹಿಂದೂ ಧರ್ಮ ಮಾತ್ರ ಜಗತ್ತಿನ ಎಲ್ಲವನ್ನು ಒಳಗೊಳ್ಳುವಂತದ್ದು. ಇಲ್ಲಿ ಬಹುತ್ವಕ್ಕೆ ಅವಕಾಶವಿದೆ. ಅವರವರ ಭಾವಕ್ಕೆ, ಭಕ್ತಿಗೆ ತೆರನಾಗಿ ಇರುತಿಹನು ಶಿವಯೋಗಿ ಎಂಬ ತತ್ವದ ಮೇಲೆ ನಂಬಿಕೆ ಇಟ್ಟಿರುವುದು ಹಿಂದೂ ಧರ್ಮ. ಜಗತ್ತಿನ ಯಾವ ಶಕ್ತಿಯೂ ಕೂಡ ಶಿವನನ್ನು ಹಿಂದೂ ಧರ್ಮದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಬ್ರಹ್ಮ, ವಿಷ್ಣು, ಮಹೇಶ್ವರರು ಏಕೀಭಾವವಾಗಿ ಅವತರಿಸಿರುವುದೇ ದತ್ತಾತ್ರೇಯರ ಅವತಾರ. ಯಾವ ಶಕ್ತಿಯೂ ಕೂಡ ಅದನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಕಲ್ಕಡ್ಕ ಪ್ರಭಾಕರ ಭಟ್‌ ವಿರುದ್ಧ ಎಫ್‌ಐಆರ್‌ ದಾಖಲು

  • ಪತ್ರ ಬರೆದು ಬೆದರಿಕೆ ಹಾಕಿದ್ದರೆ ಪ್ರಗತಿಪರರು ಸುಮ್ಮನಾಗುತ್ತಿದ್ದರು: ಶಿವಾಜಿರಾವ್‌ ಜಾಧವ್‌ ಹೇಳಿದ್ದೇನು?

    ಪತ್ರ ಬರೆದು ಬೆದರಿಕೆ ಹಾಕಿದ್ದರೆ ಪ್ರಗತಿಪರರು ಸುಮ್ಮನಾಗುತ್ತಿದ್ದರು: ಶಿವಾಜಿರಾವ್‌ ಜಾಧವ್‌ ಹೇಳಿದ್ದೇನು?

    ಬೆಂಗಳೂರು: ಹಿಂದೂ ಧರ್ಮದ (Hindu Religion) ಬಗ್ಗೆ ಅವಹೇಳನ ಮಾಡಿದ್ದಕ್ಕೆ ಪತ್ರ ಬರೆದು ಬೆದರಿಕೆ ಹಾಕಿದ್ದರೆ ಪ್ರಗತಿಪರರು ಸುಮ್ಮನಾಗುತ್ತಿದ್ದರು. ಈ ಕಾರಣಕ್ಕೆ ನಾನು ಪತ್ರ ಬರೆಯುತ್ತಿದ್ದೆ ಎಂದು ಆರೋಪಿ ಶಿವಾಜಿರಾವ್ ಜಾಧವ್‌ (Shivaji Rao Jadhav) ಸಿಸಿಬಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

    ಸಾಹಿತಿಗಳಿಗೆ ಬೆದಿಕೆ ಹಾಕಿದ ಪ್ರಕಣಕ್ಕೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ ಸಿಸಿಬಿ ಪೊಲೀಸರು (CCB Police) ಶಿವಾಜಿ ರಾವ್‌ನನ್ನು ಬಂಧಿಸಿದ್ದು, ಕೋರ್ಟ್‌ 13 ದಿನ ಪೊಲೀಸ್‌ ಕಸ್ಟಡಿಗೆ (Police Custody) ನೀಡಿದೆ. ಪೊಲೀಸರ ವಿಚಾರಣೆ ಸಮಯದಲ್ಲಿ ಹಲವು ವಿಷಯಗಳನ್ನು ತಿಳಿಸಿದ್ದಾನೆ ಎಂದು ಸಿಸಿಬಿ ಮೂಲಗಳು ಪಬ್ಲಿಕ್‌ ಟಿವಿಗೆ ತಿಳಿಸಿವೆ.  ಇದನ್ನೂ ಓದಿ: ಹಿಂದುತ್ವದ ಮೇಲೆ ಆತನಿಗೆ ಒಲವಿತ್ತು, ಪತ್ರದಲ್ಲಿ ಮನವಿ ಮಾಡಿರಬಹುದು – ಆರೋಪಿ ಶಿವಾಜಿರಾವ್ ಜಾಧವ್ ಸಹೋದರ

     

    ಏನು ಬಾಯಿಬಿಟ್ಟಿದ್ದಾನೆ?
    ಸಾಹಿತಿಗಳ ಬಾಯಿ ಮುಚ್ಚಿಸಲು ನನಗೆ ಬೇರೆ ಯಾವುದೇ ದಾರಿಯೂ ಸಿಕ್ಕಿರಲಿಲ್ಲ. ಪತ್ರ ಬರೆದು ಬೆದರಿಕೆ ಹಾಕುವುದು ಒಂದೇ ನನ್ನ ಮುಂದಿದ್ದ ದಾರಿಯಾಗಿತ್ತು. ನಾನು ಪತ್ರ ಬರೆದ ಬಳಿಕ ಎಲ್ಲರೂ ಸುಮ್ಮನಿರುತ್ತಿದ್ದರು. ಹಿಂದೂ ಧರ್ಮದ ಬಗ್ಗೆ ವಿರೋಧವಾಗಿ ಮಾತನಾಡುವುದನ್ನು ನಿಲ್ಲಿಸುತ್ತಿದ್ದರು. 2008 ರಲ್ಲಿಯೇ ಇದು ನನಗೆ ಮನವರಿಕೆಯಾಗಿತ್ತು. ಇದನ್ನೂ ಓದಿ: ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ – ದಾವಣಗೆರೆ ಮೂಲದ ಹಿಂದೂ ಸಂಘಟನೆಯ ಸಂಚಾಲಕ ಅರೆಸ್ಟ್‌

    2008 ರಲ್ಲಿ ಯು ಆರ್ ಅನಂತಮೂರ್ತಿ, ಭಗವಾನ್ ಅವರಿಗೆ ಪತ್ರ ಬರೆದು ಬೆದರಿಸಿದ್ದೆ. ಪತ್ರದ ಬಳಿಕ ಇವರು ಸುಮ್ಮನಾಗಿದ್ದರು.  ಇತ್ತಿಚೀನ ದಿನಗಳಲ್ಲಿ ಈ ಸಾಹಿತಿಗಳದ್ದು ಹೆಚ್ಚಾಗಿತ್ತು. ಅದಕ್ಕೆ ಅವರಿಗೆ ಪತ್ರ ಬರೆದು ಹೆದರಿಸಿದ್ದೆ. ನನಗೆ ಶಕ್ತಿ ಇದ್ದಿದ್ದರೆ ಮತ್ತೊಂದು ಗೌರಿ ಲಂಕೇಶ್ ಹತ್ಯೆಯ ರೀತಿ ಆಗುತ್ತಿತ್ತು. ನಾನು ಪತ್ರ ಬರೆದ ಬಳಿಕ ಅವರು ವಿರೋಧವಾಗಿ ಮಾತನಾಡುವುದನ್ನು ನಿಲ್ಲಿಸಿದ್ದರು. ಈ ಕಾರಣಕ್ಕೆ ನಾನು ಪತ್ರ ಬರೆಯುತ್ತಿದ್ದೆ ಎಂದು ಹೇಳಿರುವುದಾಗಿ ಸಿಸಿಬಿ ಮೂಲಗಳು ತಿಳಿಸಿವೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಂದೂ ಧರ್ಮಕ್ಕೆ ಅಪಮಾನ ಮಾಡಿಲ್ಲ, ಧರ್ಮದ ಬಗ್ಗೆ ಗೌರವವಿದೆ: ಪರಮೇಶ್ವರ್

    ಹಿಂದೂ ಧರ್ಮಕ್ಕೆ ಅಪಮಾನ ಮಾಡಿಲ್ಲ, ಧರ್ಮದ ಬಗ್ಗೆ ಗೌರವವಿದೆ: ಪರಮೇಶ್ವರ್

    ಬೆಂಗಳೂರು: ಹಿಂದೂ ಧರ್ಮದ (Hindu Religion) ವಿರುದ್ಧ ಅವಹೇಳನಕಾರಿಯಾಗಿ ನಾನು ಮಾತಾಡಿಲ್ಲ. ಅದನ್ನ ಬೇರೆ ರೀತಿ ಅರ್ಥೈಸುವ ಕೆಲಸವನ್ನು ನಾನು ಯಾವತ್ತೂ ಮಾಡಿಲ್ಲ. ನಾವೆಲ್ಲ ಹಿಂದೂಗಳು ಎಂದು ಗೇಹ ಸಚಿವ ಪರಮೇಶ್ವರ್ (G. Parameshwar) ಸ್ಪಷ್ಟಣೆ ನೀಡಿದ್ದಾರೆ.

    ಹಿಂದೂ ಧರ್ಮ ಬಗ್ಗೆ ವಿವಾದಿತ ಹೇಳಿಕೆ ಸಂಬಂಧ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಬೆಳಗ್ಗೆ ಎದ್ದರೆ ಗಣಪತಿಯನ್ನ ನೆನಪು ಮಾಡಿಕೊಳ್ತೀವಿ. ನಾನು ಬೆಳೆಗ್ಗೆ ಎದ್ದ ಕೂಡಲೇ ಲಕ್ಷ್ಮಿ ಶ್ಲೋಕ ಹೇಳುತ್ತೇನೆ. ಮಲಗೋವಾಗ ಹನುಮನ ಶ್ಲೋಕ ಹೇಳ್ತೀನಿ ಎಂದು ಎರಡೂ ಶ್ಲೋಕ ಹೇಳಿದರು.

    ಬಿಜೆಪಿಯವರಿಗೆ (BJP) ಈ ಶ್ಲೋಕಗಳು ಬರೊಲ್ಲ. ಅವರಿಗೆ ಕೇಳಿ ನೋಡಿ ಇದನ್ನ ಹೇಳ್ತಾರಾ ಅಂತ ಬಿಜೆಪಿ ನಾಯಕರಿಗೆ ಪರಮೇಶ್ವರ್ ಸವಾಲೆಸೆದರು. ಅದಕ್ಕೆ ನಾನು ಹೇಳಿದ್ದು ಕೃಷ್ಣ ಹುಟ್ಟಿದ ದಿನ ಧರ್ಮ ಅಧರ್ಮ ಆದಾಗ, ನೀತಿ, ಅನೀತಿ ಆದಾಗ ಕೃಷ್ಣ ಮತ್ತೆ ಹುಟ್ಟಿ ಬರುತ್ತೇನೆ ಅಂತ ಹೇಳುತ್ತಾನೆ. ಇದನ್ನೇ ನಾನು ಹೇಳಿದ್ದು ಯಧಾ ಯಧಾಹೀ ಧರ್ಮಸ್ಯ ಅಂತ. ಹಿಂದೂ ಧರ್ಮ ಯಾವಾಗ ಹುಟ್ಟಿತು ಅಂತ ನಾನು ಪ್ರಶ್ನೆ ಮಾಡಿಲ್ಲ. ಪದೇ ಪದೇ ನಾನು ಅದನ್ನೇ ಹೇಳಲು ಉದ್ಯೋಗ ಅಲ್ಲ ಎಂದರು.  ಇದನ್ನೂ ಓದಿ: ಇಂಡಿಯಾ, ಭಾರತದ ನಡುವಿನ ವ್ಯತ್ಯಾಸ ವಿವರಿಸಿದ್ದ ಲಾಲೂ ಹಳೆಯ ವೀಡಿಯೋ ವೈರಲ್

    ನಾನು ಹೇಳಿದ್ದು ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಈ ದೇಶದಲ್ಲಿ ಹುಟ್ಟಿದ ಧರ್ಮದ ಬಗ್ಗೆ ಸ್ಟಡಿ ಮಾಡಿದ್ರು. ಅದನ್ನ ನಾನು ಹೇಳಿದ್ದು. ಅವರು ಹೇಳಿದ್ದನ್ನ ನಾನು ಹೇಳಿದ್ದು. ಅವರ ಪ್ರಕಾರ ಜೈನ, ಮುಸ್ಲಿಂ ಧರ್ಮ ಸ್ಥಾಪನೆ ಮಾಡಿದವರು ಇದ್ದರು. ಆದರೆ ಹಿಂದೂ ಧರ್ಮಕ್ಕೆ ಇಲ್ಲ ಅಂತ ಹೇಳಿದ್ದರು. ಅಷ್ಟು ಹೇಳಿದ್ದಕ್ಕೆ ಬಿಜೆಪಿ ಅವರು ಬೊಬ್ಬೆ ಹೊಡೆಯುತ್ತಿದ್ದಾರೆ. ನಾನೇನು ಅವಹೇಳನಕಾರಿಯಾಗಿ ಮಾತಾಡಿಲ್ಲ. ಹಿಂದೂ ಧರ್ಮದ ಮೇಲೆ ನಮಗೆ ಇರೋ ಗೌರವ ಅವರಿಗೆ ಇದೆಯಾ ಎಂದು ಪರಂ ಪ್ರಶ್ನಿಸಿದರು.

    ಬಿಜೆಪಿಯವರು ಇದನ್ನ ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಅದೇ ಕೆಲಸ. ಅವರು ಅದನ್ನೆ ಮಾಡಬೇಕು. ಅಭಿವೃದ್ಧಿ ಬಗ್ಗೆ ಮಾತಾಡೋದಿಲ್ಲ. ಕೇಂದ್ರ ಸರ್ಕಾರ ಇನ್ನು ನಮಗೆ ಒಂದು ರೂಪಾಯಿ ಹಣ ಬಿಡುಗಡೆ ಮಾಡಿಲ್ಲ. ಈ ವರ್ಷದಲ್ಲಿ ಒಂದು ರೂಪಾಯಿ ಹಣ ಕೊಟ್ಟಿಲ್ಲ. ಅದರ ಬಗ್ಗೆ ಬಿಜೆಪಿ ಅವರು ಮಾತಾಡಲಿ. ಅಭಿವೃದ್ಧಿ ಬಗ್ಗೆ ಮಾತಾಡಲಿ ಸಲಹೆ ಕೊಡಲಿ. ಅದು ಬಿಟ್ಟು ಯಾವುದರ ಬಗ್ಗೆಯೋ ಮಾತಾಡ್ತಾರೆ ಎಂದು ಬಿಜೆಪಿ ವಿರುದ್ಧ ಪರಮೇಶ್ವರ್ ಕಿಡಿಕಾರಿದರು.

    ಇನ್ನು ಪರಮೇಶ್ವರ್ ಹೇಳಿಕೆಗೆ ಮಾಜಿ ಸಿಎಂ ಯಡಿಯೂರಪ್ಪ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,‌ ಯಡಿಯೂರಪ್ಪ ಟ್ವೀಟ್ ನೋಡಿದೆ.ಅವರಿಗೂ ಇತ್ತು ಒಂದು ಕಾಲದಲ್ಲಿ ಹಾಗೆ. ಅವರು ದೊಡ್ಡವರು,ಹಿರಿಯರು ಇದ್ದಾರೆ. ನಾನು ಅವರ ಬಗ್ಗೆ ಮಾತಾಡೊಲ್ಲ.ನಾನು ಅವಹೇಳನಕಾರಿಯ ಮಾತು ಆಡಿಲ್ಲ.ಮುಂದೆ ಮತ್ತೆ ಅದನ್ನ ವಿಶ್ಲೇಷಣೆ ಮಾಡೋದು ಅರ್ಥವಿಲ್ಲ ಎಂದರು.

    ಬಿಜೆಪಿಯವರು ಇದನ್ನ ರಾಜಕೀಯಕ್ಕೆ ಬಳಕೆ ಮಾಡಿಕೊಳ್ತಿದ್ದಾರೆ.ಅವರಿಗೆ ಅದೇ ಕೆಲಸ.ಅವರು ಅದನ್ನೆ ಮಾಡಬೇಕು.ಅಭಿವೃದ್ಧಿ ಬಗ್ಗೆ ಮಾತಾಡೋದಿಲ್ಲ. ಕೇಂದ್ರ ಸರ್ಕಾರ ಇನ್ನು ನಮಗೆ ಒಂದು ರೂಪಾಯಿ ಹಣ ಬಿಡುಗಡೆ ‌ಮಾಡಿಲ್ಲ.ಈ ವರ್ಷದಲ್ಲಿ ‌ಒಂದು ರೂಪಾಯಿ ಹಣ ಕೊಟ್ಟಿಲ್ಲ.ಅದರ ಬಗ್ಗೆ ಬಿಜೆಪಿ ಅವರು ಮಾತಾಡಲಿ. ಅಭಿವೃದ್ಧಿ ಬಗ್ಗೆ ಮಾತಾಡಲಿ ಸಲಹೆ ಕೊಡಲಿ. ಅದು ಬಿಟ್ಟು ಯಾವುದರ ಬಗ್ಗೆಯೋ ಮಾತಾಡ್ತಾರೆ ಅಂತ ಬಿಜೆಪಿ ವಿರುದ್ದ ಪರಮೇಶ್ವರ್ ಕಿಡಿಕಾರಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ಹಿಂದೂ’ ಭಾರತೀಯ ಪದವೇ ಅಲ್ಲ, ನಾನು ಹೇಳಿದ್ದರಲ್ಲಿ ತಪ್ಪಿಲ್ಲ: ಸತೀಶ್ ಜಾರಕಿಹೊಳಿ

    `ಹಿಂದೂ’ ಭಾರತೀಯ ಪದವೇ ಅಲ್ಲ, ನಾನು ಹೇಳಿದ್ದರಲ್ಲಿ ತಪ್ಪಿಲ್ಲ: ಸತೀಶ್ ಜಾರಕಿಹೊಳಿ

    ಬೆಳಗಾವಿ: `ಹಿಂದೂ’ (Hindu Word) ಶಬ್ಧ ಭಾರತೀಯ ಪದವೇ ಅಲ್ಲ, ಪರ್ಷಿಯನ್ ಭಾಷೆಯ (Persian Language) ಪದ, ನಾನು ಹೇಳಿದ್ದರಲ್ಲಿ ಏನೂ ತಪ್ಪಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi)  ಸಮರ್ಥಿಸಿಕೊಂಡಿದ್ದಾರೆ.

    ಈ ಕುರಿತು ಮತ್ತೊಮ್ಮೆ ಸ್ಪಷ್ಟನೆ ನೀಡಿರುವ ಜಾರಕಿಹೊಳಿ, 8 ನಿಮಿಷ 17 ಸೆಕೆಂಡ್‌ಗಳ ಸುದೀರ್ಘ ವೀಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ. ನಿಪ್ಪಾಣಿಯಲ್ಲಿ ಮಾನವ ಬಂಧುತ್ವ ವೇದಿಕೆ ಕಾರ್ಯಕ್ರಮದಲ್ಲಿ ಹೇಳಿದ ಒಂದು ಶಬ್ದದ ವಿಷಯ ಮೇಲೆ ಇವತ್ತು ಇಡೀ ರಾಷ್ಟ್ರ ರಾಜ್ಯದ ಎಲ್ಲಾ ಕಡೆ ಚರ್ಚೆ, ವಿಮರ್ಶೆ ಆಗುತ್ತಿದೆ. ಟೀಕೆಗಳು ಕೇಳಿಬರುತ್ತಿವೆ. ಹೀಗಾಗಿ ಸ್ಪಷ್ಟೀಕರಣ ಕೊಡುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಹಿಂದೂ’ ಭಾರತೀಯ ಪದವೇ ಅಲ್ಲ, ಪರ್ಷಿಯನ್ ಪದ – ಅರ್ಥ ಬಹಳ ಅಶ್ಲೀಲವಾಗಿದೆ: ಸತೀಶ್ ಜಾರಕಿಹೊಳಿ

    `ಹಿಂದೂ’ ಶಬ್ದ ಪರ್ಷಿಯನ್ ಭಾಷೆಯಿಂದ ಬಂದಿದ್ದು ಅಂತಾ ಉಲ್ಲೇಖ ಮಾಡಿದ್ದು ನಿಜ. ಹಿಂದೂ ಶಬ್ದದ (Hindu Word) ಬಗ್ಗೆ ಕೆಲವು ನಿಂದನೆ ಮಾಡುವಂತ ಸಾಕಷ್ಟು ಶಬ್ದಗಳು ದಾಖಲೆಗಳಲ್ಲಿ ಸಿಗುತ್ತವೆ. ಅದರ ಬಗ್ಗೆ ನಾನು ಕೋಟ್ ಮಾಡಿದ್ದೇನೆ, ಅದು ಸತೀಶ್ ಜಾರಕಿಹೊಳಿ (Satish Jarkiholi) ಮಾತಲ್ಲ. ಈ ರೀತಿಯ ಭಾಷಣಗಳು ದೇಶದಲ್ಲಿ ಸಾವಿರಾರು ಆಗಿವೆ. ಆದರೂ ಇವತ್ತು ನಾನು ಹೇಳಿದ್ದನ್ನು ದೊಡ್ಡಮಟ್ಟದಲ್ಲಿ ವಿಶ್ಲೇಷಣೆ ಮಾಡ್ತಿದ್ದಾರೆ ಎಂದು ಆಕ್ಷೇಪಿಸಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ತೆಪ್ಪೋತ್ಸವ – ತುಂಗಭದ್ರಾ ನದಿಯಲ್ಲಿ ಬೆಳಕಿನ ಸಂಭ್ರಮ

    ಹಿಂದೂ, ಪಾರ್ಸಿ, ಇಸ್ಲಾಂ (Muslim), ಜೈನ ಹಾಗೂ ಬೌದ್ಧ ಧರ್ಮ ಯಾವುದೇ ಇರಲಿ, ಜಾತಿ – ಧರ್ಮವನ್ನು ಮೀರಿ ನಾವು ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ನಾನು ಹೇಳಿದರಲ್ಲಿ ಯಾವುದೂ ತಪ್ಪಿಲ್ಲ. `ಹಿಂದೂ’ ಶಬ್ಧ ಪರ್ಷಿಯನ್ ಭಾಷೆಯಿಂದ ಬಂದಿದ್ದಕ್ಕೆ ನೂರಾರು ದಾಖಲೆ ಇವೆ. ಆರ್ಯ ಸಮಾಜದ ಸ್ಥಾಪಕರು ದಯಾನಂದ ಸರಸ್ವತಿ ರಚಿಸಿದ `ಸತ್ಯಾರ್ಥ ಪ್ರಕಾಶ’, ಡಾ.ಜಿ.ಎಸ್.ಪಾಟೀಲ ಬರೆದಂತಹ `ಬಸವ ಭಾರತ’ ಪುಸ್ತಕದಲ್ಲಿ ಹಾಗೂ ಬಾಲಗಂಗಾಧರ ತಿಲಕ್‌ರವರ ಕೇಸರಿ ಪತ್ರಿಕೆಯಲ್ಲೂ ಉಲ್ಲೇಖ ಇದೆ. ಸಾಕಷ್ಟು ವೆಬ್‌ಸೈಟ್, ವಿಕಿಪೀಡಿಯದಲ್ಲಿ ಮಾಹಿತಿ ಲಭ್ಯ ಇದೆ. ಆದರೆ ನನ್ನ ಹೇಳಿಕೆಯನ್ನು ಉಕ್ರೇನ್-ರಷ್ಯಾ ಯುದ್ಶ ಮಾದರಿಯಲ್ಲಿ, ಸರ್ಜಿಕಲ್ ಸ್ಟ್ರೈಕ್‌ ಮಾದರಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಹಿಂದೂ ಧರ್ಮದ ವಿಷಯ ಬಂದಾಗ ಇಷ್ಟು ವೈಭವಕರೀಸೋದು ಸರಿಯಲ್ಲ. ಹಿಂದೂಗಳ ಕೊಲೆಯಾದರೆ ಅದಕ್ಕೆ ವಿಶೇಷವಾದ ಸ್ಥಾನಮಾನ, ದಲಿತರು ಯಾರಾದರೂ ತೀರಿಕೊಂಡರೆ ಅದಕ್ಕೆ ಸ್ಥಾನಮಾನ ಇಲ್ಲ ಇದು ನಿಲ್ಲಬೇಕು. ಹಿಂದೂ ಧರ್ಮದ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ ಭಾಷಣ ಒಮ್ಮೆ ಕೇಳಬೇಕು. ಹಿಂದೂ ಧರ್ಮ ಅಂದ್ರೆ ಅದು `ವೇ ಆಫ್ ಲೈಫ್’ ನಮ್ಮ ಬಾಳ್ವೆ ಅಂದಿದ್ದಾರೆ. ಸುಪ್ರೀಂಕೋರ್ಟ್ ಸಹ ತನ್ನ ತೀರ್ಪಿನಲ್ಲಿ ಹೇಳಿದೆ. ನಾನೇನು ಯಾರನ್ನು ಅಪಮಾನ ಮಾಡುವ ಉದ್ದೇಶ ಇಲ್ಲ. ನನ್ನ ಭಾಷಣ ಇನ್ನೂ ಹತ್ತು ಸಲ ನೋಡಿ, ತಪ್ಪಿದ್ರೆ ಚರ್ಚೆ ಮುಂದುವರಿಸಿ. ಸುಖಾ ಸುಮ್ಮನೇ ಆರೋಪ ಮಾಡುತ್ತಿದ್ದರೆ ಮಾನಹಾನಿ ಮೊಕದ್ದಮೆ, ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಎರಡು ದಿನಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ `ಹಿಂದೂ’ ಭಾರತೀಯ ಪದವೇ ಅಲ್ಲ, ಪರ್ಷಿಯನ್ ಪದ ಅದರ ಅರ್ಥ ಬಹಳ ಅಶ್ಲೀಲವಾಗಿದೆ ಎಂದು ಹೇಳಿ ವಿವಾದಕ್ಕೀಡಾದರು.

    Live Tv
    [brid partner=56869869 player=32851 video=960834 autoplay=true]

  • ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯ – 9 ಮಂದಿ ವಿರುದ್ಧ ಕೇಸ್, ಮೂವರು ಅರೆಸ್ಟ್

    ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯ – 9 ಮಂದಿ ವಿರುದ್ಧ ಕೇಸ್, ಮೂವರು ಅರೆಸ್ಟ್

    ಲಕ್ನೋ: ಲಾಕ್‌ಡೌನ್ (LockDown) ಸಂದರ್ಭದಲ್ಲಿ ಮಾಡಿದ ಸಹಾಯಕ್ಕಾಗಿ ಉತ್ತರಪ್ರದೇಶ (UttarPradesh) ಮೀರತ್‌ನಲ್ಲಿ ಕೆಲವರಿಗೆ ಮತಾಂತರಗೊಳ್ಳುವಂತೆ (Religious Conversion) ಒತ್ತಡ ಹೇರಲಾಗುತ್ತಿದೆ ಎನ್ನುವ ಆರೋಪದ ಮೇಲೆ ಮೂವರು ಮಹಿಳೆಯರು ಸೇರಿದಂತೆ 9 ಮಂದಿ ವಿರುದ್ಧ ಕೇಸ್ (FIR) ದಾಖಲಿಸಲಾಗಿದೆ.

    ಮೀರತ್‌ನ ಬ್ರಹ್ಮಪುರಿ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಳನ್ನು ಛಬಿಲಿ ಅಲಿಯಾಸ್ ಶಿವ, ಬಿನ್ವಾ, ಅನಿಲ್, ಸರ್ದಾರ್, ನಿಕ್ಕು, ಬಸಂತ್, ಪ್ರೇಮಾ, ತಿತ್ಲಿ ಮತ್ತು ರೀನಾ ಎಂದು ಗುರುತಿಸಲಾಗಿದೆ. ಅವರ ವಿರುದ್ಧ ಮತಾಂತರ ನಿಷೇಧ ಕಾಯ್ದೆಯ (Religious Conversion Act) ಸೆಕ್ಷನ್ 3, 5(1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು, ಉಳಿದ 6 ಮಂದಿಗಾಗಿ ಬಲೆ ಬೀಸಲಾಗಿದೆ ಎಂದು ಮೀರತ್ ಎಸ್ಪಿ ಪಿಯೂಷ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಪುನೀತ್ ಜೀವನ ಪಠ್ಯಪುಸ್ತಕಕ್ಕೆ ಸೇರಿಸಿ ಬೇಡಿಕೆಗೆ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ

    ಪ್ರಾಥಮಿಕ ತನಿಖಾ ವರದಿಯ ಪ್ರಕಾರ, ಆರೋಪಿಗಳು ಈ ಪ್ರದೇಶ ವ್ಯಾಪ್ತಿಯಲ್ಲಿರುವ ಬಡವರಿಗೆ ಕೋವಿಡ್ (Covid) ಸಂದರ್ಭದಲ್ಲಿ ಆಹಾರ (Food) ಹಾಗೂ ಆರ್ಥಿಕ ನೆರವು ನೀಡಿದ್ದರು. ಅದಕ್ಕೆ ಪ್ರತಿಯಾಗಿ ಅವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದರು. ಅಷ್ಟೇ ಅಲ್ಲದೇ ಕಾಲೋನಿ ಜನರ ಮನೆಗಳಲ್ಲಿರುವ ಹಿಂದೂ ದೇವರ ಫೋಟೋಗಳನ್ನು ಕಿತ್ತೆಸೆಯುತ್ತಿದ್ದರು. ಘಟನೆ ಬಗ್ಗೆ ಪೊಲೀಸರಿಗೆ ತಿಳಿಸಿದ್ರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ರೋಹಿತ್ ಸಿಂಗ್ ಸಜ್ವಾನ್ ಹೇಳಿದ್ದಾರೆ. ಇದನ್ನೂ ಓದಿ: ನಾನ್‍ ಸ್ಟ್ರೈಕರ್ ರನೌಟ್‍ನಿಂದ ಪಾರಾಗಲು ಹೊಸ ಐಡಿಯ ಹುಡುಕಿದ ಗ್ಲೆನ್ ಫಿಲಿಪ್ಸ್

    ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ (BJP) ನಾಯಕ ದೀಪಕ್ ಶರ್ಮಾ, ಇಲ್ಲಿನ 100ಕ್ಕೂ ಹೆಚ್ಚು ಜನರನ್ನು ಮತಾಂತರ ಮಾಡಲಾಗಿದೆ. ಕಳೆದ 3 ವರ್ಷಗಳಿಂದಲೂ ಇದು ನಡೆಯುತ್ತಲೇ ಇದೆ. ಅವರು ಮತಾಂತರಗೊಳ್ಳಲಿ ಅಂತಲೇ ಜನರಿಗೆ ಪಡಿತರ ಹಾಗೂ ಹಣದ ಸಹಾಯ ನೀಡಲಾಗಿದೆ. ನಂತರ ಮತಾಂತರಕ್ಕೆ ಒತ್ತಾಯಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವೀರಗಾಸೆ ವಿವಾದ: ಡಾಲಿ ಕಟೌಟ್‌ಗೆ ಚಪ್ಪಲಿ ಹಾರ ಹಾಕಿ ಭಜರಂಗದಳ ಆಕ್ರೋಶ

    ವೀರಗಾಸೆ ವಿವಾದ: ಡಾಲಿ ಕಟೌಟ್‌ಗೆ ಚಪ್ಪಲಿ ಹಾರ ಹಾಕಿ ಭಜರಂಗದಳ ಆಕ್ರೋಶ

    ತುಮಕೂರು: ಹೆಡ್ ಬುಷ್ (Headbush) ಸಿನಿಮಾದಲ್ಲಿ (Cinema) ವೀರಗಾಸೆ (Veeragase) ಕುಣಿತಕ್ಕೆ ಅಪಮಾನ ಮಾಡಲಾಗಿದೆ. ಇದರಿಂದ ಹಿಂದೂ ಧರ್ಮಕ್ಕೆ (Hindu Religion) ಅವಮಾನವಾಗಿದೆ ಎಂದು ಆರೋಪಿಸಿ ಭಜರಂಗದಳದ (Bajrang Dal) ಕಾರ್ಯಕರ್ತರು ಡಾಲಿ ಧನಂಜಯ್ ಕಟೌಟ್‌ಗೆ ಚಪ್ಪಲಿ ಹಾರ ಹಾಕಿ, ಕಪ್ಪು ಮಸಿ ಬಳಿದು ಆಕ್ರೋಶ ಹೊರಹಾಕಿದ ಘಟನೆ ತಿಪಟೂರು ನಗರದ ಲಕ್ಷ್ಮೀ ಚಿತ್ರಮಂದಿರದ ಆವರಣದಲ್ಲಿ ನಡೆದಿದೆ.

    ಡಾಲಿ ಧನಂಜಯ (Dhananjaya) ಕ್ಷಮೆ ಕೇಳಬೇಕು ಹಾಗೂ ಚಿತ್ರದಿಂದ ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕಬೇಕು ಎಂದು ಪ್ರತಿಭಟನಾಕಾರು ಆಗ್ರಹಿಸಿದ್ದಾರೆ. ಇಲ್ಲದಿದ್ದರೇ ಯಾವ ಚಿತ್ರಮಂದಿರಗಳಲ್ಲೂ ಈ ಚಿತ್ರ ಪ್ರದರ್ಶನ ಮಾಡದಂತೆ ತಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬೆಳಕಿನ ಹಬ್ಬಕ್ಕೆ ‘ಕೆಜಿಎಫ್’ ಬೆಡಗಿಯ ಹೊಸ ಫೋಟೋ ಶೂಟ್

    ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ (Head bush) ಸಿನಿಮಾದಲ್ಲಿ (Cinema) ಕರಗ ಮತ್ತು ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಸಿನಿಮಾ ಬೈಕಾಟ್ ಕೂಗು ಒಂದೆಡೆ ಕೇಳಿಬಂದಿದ್ದರೆ, ಮತ್ತೊಂದೆಡೆ ಅಭಿಮಾನಿಗಳು ಡಾಲಿ ಧನಂಜಯ್ ಪರವಾಗಿದ್ದೇವೆ ಎಂಬ ಧ್ವನಿ ಎತ್ತಿದ್ದಾರೆ. ಇದನ್ನೂ ಓದಿ: ಅಪ್ಪು ಗಂಧದಗುಡಿ ರಿಲೀಸ್‍ಗೆ ಕೌಂಟ್‍ಡೌನ್- ಮೊದಲ ಬಾರಿಗೆ ಅಶ್ವಿನಿ ವಿಶೇಷ ಸಂದರ್ಶನ

    ಕನ್ನಡದ ಇತರ ಸ್ಟಾರ್ ನಟ ಜೊತೆಗಿರುವ ಡಾಲಿ ಧನಂಜಯ್ ಫೋಟೋ ಹಾಗೂ ಅವರು ಮಾತನಾಡಿರುವ ವೀಡಿಯೋಗಳ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಹ್ಯಾಷ್ ಟ್ಯಾಗ್ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • `ಕಾಂತಾರ’ದಂತೆ ನನ್ನ ಸಿನಿಮಾ ಹಿಟ್‌ಆಗಲ್ಲ ಅಂತ ಚೇತನ್‌ಗೆ ಹೊಟ್ಟೆಕಿಚ್ಚು – ಸೂಲಿಬೆಲೆ

    `ಕಾಂತಾರ’ದಂತೆ ನನ್ನ ಸಿನಿಮಾ ಹಿಟ್‌ಆಗಲ್ಲ ಅಂತ ಚೇತನ್‌ಗೆ ಹೊಟ್ಟೆಕಿಚ್ಚು – ಸೂಲಿಬೆಲೆ

    ಹುಬ್ಬಳ್ಳಿ: ಕಾಂತಾರ (Kantara) ರೀತಿಯಲ್ಲಿ ತನ್ನ ಸಿನಿಮಾ (Cinema) ಹಿಟ್ ಆಗಲ್ಲ ಅಂತಾ ನಟ ಚೇತನ್‌ಗೆ (Chetan Ahimsa) ಹೊಟ್ಟೆ ಕಿಚ್ಚು ಇರಬಹುದು. ಹಾಗಾಗಿ ಈ ರೀತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ತಿರುಗೇಟು ನೀಡಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ (PubliTV) ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, `ಕಾಂತಾರ’ ಸಿನಿಮಾ ಕುರಿತಂತೆ ನಟ ಚೇತನ್ ನೀಡಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ಒಬ್ಬ ನಟನೂ ಅಲ್ಲ ಎಡಪಂಥೀಯ ವ್ಯಕ್ತಿಯೂ ಅಲ್ಲ ಎಂದಿದ್ದಾರೆ. ಇದನ್ನೂ ಓದಿ: ರಿಷಬ್ ಹೇಳಿದ ಹಿಂದೂ ಪದ ಒಪ್ಪಲ್ಲ, ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ: ಸಮರ್ಥಿಸಿದ ಚೇತನ್

    ನಟ ಚೇತನ ಅಂತೋರು ಬುಡಕಟ್ಟು ಜನಾಂಗದವರನ್ನು ಹಿಂದೂ ಧರ್ಮದಿಂದ ಬೇರೆ ಮಾಡುವ ಹುನ್ನಾರ ನಡೆಸಿದ್ದಾರೆ. ಆದರೆ ಅವರಿಗೆ ಗೊತ್ತಿಲ್ಲ ಆದಿವಾಸಿ ಜನಾಂಗ, ದಲಿತ, ಹೀಗೆ ಎಲ್ಲರನ್ನೂ ಸೇರಿ ಹಿಂದೂ ಧರ್ಮವಾಗಿದೆ. ಆಕಾಶಕ್ಕೆ ಮುಖ ಮಾಡಿ ಉಗಳುವ ಕೆಲಸ ಮಾಡ್ತಿದ್ದಾರೆ. ಆದರೆ ಅದೇ ಅವರ ಮುಖಕ್ಕೆ ಬೀಳುತ್ತದೆ. ಈ ಹಿಂದೆ, ಹಿಂದಿಯಲ್ಲಿ ಹಿಂದೂ ಧರ್ಮದ ಅವಹೇಳನ ಮಾಡಿ ಸಿನಿಮಾ ಮಾಡಲಾಗುತ್ತಿತ್ತು. ಆಗ ಚೇತನ್‌ನಂತವರು ಸುಮ್ಮನಿದ್ದರು ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ನೀಡಿದ ಆದೇಶದಿಂದ ದೊಡ್ಮನೆ ಶೇಕ್

    ಹಿಂದೂ ಧರ್ಮ (Hindu Religion) ಅವಹೇಳನವೇ ಅವರಿಗೆ ಬೇಕಿತ್ತು. ಆದರೆ ಇತ್ತೀಚೆಗೆ ಹಿಂದೂ ಧರ್ಮದ ಪರಂಪರೆ, ಆಚರಣೆ, ಸನಾತನ ಧರ್ಮ ಬಗ್ಗೆ ಜಾಗೃತಿ ಮೂಡಿಸುವ ಸಿನಿಮಾಗಳು ಬರುತ್ತಿದ್ದು, ಇದು ಅವರಿಗೆ ಸಹಿಸಲಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ

    Live Tv
    [brid partner=56869869 player=32851 video=960834 autoplay=true]

  • ಹಿಂದೂಧರ್ಮವನ್ನು ಪುನರ್ ಸಂಘಟಿಸುವ ಕೆಲಸ ಆಗಬೇಕಿದೆ: ಚಕ್ರವರ್ತಿ ಸೂಲಿಬೆಲೆ

    ಹಿಂದೂಧರ್ಮವನ್ನು ಪುನರ್ ಸಂಘಟಿಸುವ ಕೆಲಸ ಆಗಬೇಕಿದೆ: ಚಕ್ರವರ್ತಿ ಸೂಲಿಬೆಲೆ

    ಬೆಳಗಾವಿ: ಹಿಂದೂ ಕಾರ್ಯಕರ್ತರ ಹತ್ಯೆ ಹೆಚ್ಚಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಹಿಂದೂಧರ್ಮವನ್ನು ಪುನರ್‌ ಸಂಘಟಿಸುವ ಕೆಲಸ ಆಗಬೇಕಿದೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

    ನಗರದ ಸಮಾದೇವಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಕರ್ ಗಣೇಶೋತ್ಸವ ಅಂತಾ ಇಡೀ ರಾಜ್ಯ ಆಚರಣೆ ಮಾಡುತ್ತಿದೆ. ಹಿಂದೂಧರ್ಮವನ್ನು ಪುನರ್ ಸಂಘಟಿಸುವ ಕೆಲಸ ಆಗಬೇಕಿದೆ. ಇತ್ತೀಚಿನ ದಿನಗಳಲ್ಲಿ ನೋಡಿದಾಗ ಹಿಂದೂಧರ್ಮದ ಕಾರ್ಯಕರ್ತರನ್ನು ದಾರಿಯಲ್ಲಿ ಹೇಗೆ ಬೇಕಾದರೂ ಕೊಲ್ಲಬಹುದು ಅಂದುಕೊಂಡಿದ್ದಾರೆ. ಹೀಗಾಗಿ ಹಿಂದೂಧರ್ಮವನ್ನು ಪುನರ್ ಸಂಘಟಿಸುವ ಅಗತ್ಯತೆ ಇದೆ. ನಮ್ಮಲ್ಲಿರುವ ನ್ಯೂನತೆಯನ್ನು ಸರಿಪಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ದೆಹಲಿಗೆ ಹೊರಟ ಬಿಎಸ್‌ವೈ – ಇಂದು ಸಂಜೆ ಮೋದಿ ಭೇಟಿ

    ಹಿಂದೂಧರ್ಮವನ್ನು ಪುನರ್‌ ಸಂಘಟಿಸಲು ಸಾವರ್ಕರ್ ಮತ್ತೆ ಜೀವಂತಗೊಂಡಿದ್ದಾರೆ. ಸಾವರ್ಕರ್, ತಿಲಕ್‌ರು ಇಲ್ಲದೇ ಏನಿಲ್ಲ. ಎಲ್ಲರೂ ಸೇರಿ ವಿಶಿಷ್ಠವಾಗಿ ಗಣೇಶೋತ್ಸವ ಆಚರಣೆ ಮಾಡೋಣ. ಸಾವರ್ಕರ್ ಯಾರಿಗೋ ಒಬ್ಬರಿಗೆ ಸೇರಿದವರಲ್ಲ. ದೇಶಕ್ಕೆ ಸೇರಿರುವ ಸಾರ್ವಕರ್ ಅವರನ್ನು ಎಲ್ಲರೂ ಪ್ರತಿಷ್ಠಾಪನೆ ಮಾಡಬೇಕು ಎಂದು ಕರೆ ನೀಡಿದರು.

    ಸತೀಶ ಜಾರಕಿಹೊಳಿ‌ ಅವರು ದೇವರ ಪೂಜೆಯನ್ನು ಧಿಕ್ಕರಿಸುತ್ತಾರೆ. ಆದರೆ ದೇಹವಿಲ್ಲದ ಸಾರ್ವಕರ್ ಅವರು ಸತೀಶ ಜಾರಕಿಹೊಳಿ‌ ಅವರನ್ನು ಗಣೇಶೋತ್ಸವ ಪೆಂಡಾಲ್ ವರೆಗೂ ಕರೆದುಕೊಂಡು ಬಂದಿದ್ದಾರೆ. ಸಾರ್ವಕರ್ ಬದುಕಿದ್ದಾಗ ಪ್ರೇರಣೆ ಕೊಟ್ಟಿದ್ದರಲ್ಲದೇ ಸತ್ತ ಮೇಲೂ ಅವರ ಆತ್ಮ ಪ್ರೇರಣೆ ಕೊಡುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಶಿವಮೊಗ್ಗ SDPI ಕಚೇರಿ ಮೇಲೆ ಪೊಲೀಸರ ದಾಳಿ – ಮಹತ್ವದ ದಾಖಲೆ ವಶಕ್ಕೆ

    Live Tv
    [brid partner=56869869 player=32851 video=960834 autoplay=true]