Tag: Hindu Priest

  • ಬಾಂಗ್ಲಾದಲ್ಲಿ ಪ್ರತಿಭಟನೆ ವೇಳೆ ವಕೀಲನ ಹತ್ಯೆ – ಮತ್ತೆ ಭುಗಿಲೆದ್ದ ಆಕ್ರೋಶ

    ಬಾಂಗ್ಲಾದಲ್ಲಿ ಪ್ರತಿಭಟನೆ ವೇಳೆ ವಕೀಲನ ಹತ್ಯೆ – ಮತ್ತೆ ಭುಗಿಲೆದ್ದ ಆಕ್ರೋಶ

    ಢಾಕಾ: ಇಸ್ಕಾನ್ (ISKCON) ಸಂಸ್ಥೆಯ ಧಾರ್ಮಿಕ ನಾಯಕ ಚಿನ್ಮಯ್‌ ಕೃಷ್ಣ ದಾಸ್ ಬ್ರಹ್ಮಚಾರಿ (Chinmoy Krishna Das Brahmachari) ಅವರ ಬಂಧನ ಖಂಡಿಸಿ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ಭದ್ರತಾ ಸಿಬ್ಬಂದಿ ಮತ್ತು ಹಿಂದೂ ಸಮುದಾಯದ ನಾಯಕನ ಅನುಯಾಯಿಗಳ ನಡುವಿನ ಘರ್ಷಣೆಯಲ್ಲಿ ವಕೀಲರೊಬ್ಬರು ಹತ್ಯೆಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಮೃತ ವಕೀಲನನ್ನು 35 ವರ್ಷದ ಸೈಫುಲ್ ಇಸ್ಲಾಂ ಅಲಿಫ್‌ (Saiful Islam Alif) ಎಂದು ಗುರುತಿಸಲಾಗಿದೆ. ಈತ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಚಟ್ಟೋಗ್ರಾಮ್ ಜಿಲ್ಲಾ ವಕೀಲರ ಸಂಘದ ಸದಸ್ಯ ಎಂದು ಢಾಕಾದ ಪತ್ರಿಕೆಯೊಂದು ವರದಿ ಮಾಡಿದೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಉಪ ಆಯುಕ್ತ ಲಿಯಾಕತ್ ಅಲಿ ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕ ಮಧ್ಯಸ್ಥಿಕೆಯಲ್ಲಿ ಇಸ್ರೇಲ್‌-ಹಿಜ್ಬುಲ್ಲಾ ನಡುವೆ ಕದನ ವಿರಾಮ ಘೋಷಣೆ

    ಈ ಕುರಿತು ಚಿತ್ತಗಾಂಗ್ ವಕೀಲರ ಸಂಘದ ಅಧ್ಯಕ್ಷ ನಜೀಮ್ ಉದ್ದೀನ್ ಚೌಧರಿ ಮಾತನಾಡಿ, ಪ್ರತಿಭಟನಾ ಸಂದರ್ಭದಲ್ಲಿ ಪೊಲೀಸರ ತಂಡವೊಂದು ವಕೀಲನನ್ನು ಎಳೆದೊಯ್ದು ಕೊಂದಿದ್ದಾರೆ ಎಂದು ಆರೋಪಿದ್ದಾರೆ. ಇದನ್ನೂ ಓದಿ: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಜಾನ್ಸ್ ಟಿನ್ನಿಸ್‌ವುಡ್ 112ನೇ ವಯಸ್ಸಿನಲ್ಲಿ ನಿಧನ

    ದಾಸರ್‌ರನ್ನ ಎಳೆದೊಯ್ಯುವ ವೇಳೆ ಅವರು ಉದ್ರಿಕ್ತರು ಶಾಂತವಾಗಿರುವಂತೆ ಕೇಳಿಕೊಂಡರು. ಆದ್ರೆ ಪ್ರತಿಭಟನೆ ನಿಲ್ಲದ ಕಾರಣ, ಭದ್ರತಾ ಸಿಬ್ಬಂದಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದರು. ಧ್ವನಿ ಗ್ರೆನೇಡ್‌, ಅಶ್ರುವಾಯು ಶೆಲ್‌ಗಳು ಮತ್ತು ಲಾಠಿ ಚಾರ್ಜ್‌ ಅಸ್ತ್ರಗಳನ್ನು ಬಳಸಿ ಪ್ರತಿಭಟನಾಕಾರರನ್ನು ಚದುರಿಸಿದರು.

    ಕೃಷ್ಣ ದಾಸ್‌ ಅವರು ಬಾಂಗ್ಲಾ ತೊರೆಯಲು ಮುಂದಾಗುತ್ತಿದ್ದಾಗ ಸೋಮವಾರ (ನ.25) ಅಧಿಕಾರಿಗಳು ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆದರು ಮತ್ತು ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿದೆ. ಇವರ ಬಂಧನ ಬಗ್ಗೆ ಅಧಿಕಾರಿಗಳು ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇದನ್ನೂ ಓದಿ: ಪಾಕ್‌ ಹಿಂಸಾಚಾರಕ್ಕೆ ನಾಲ್ವರು ಸೈನಿಕರು ಸೇರಿ 5 ಸಾವು – ಸೇನೆಯಿಂದ ಕಂಡಲ್ಲಿ ಗುಂಡು ಆದೇಶ

    ಚಿನ್ಮಯ್‌ ಕೃಷ್ಣ ದಾಸ್ ಬ್ರಹ್ಮಚಾರಿ ಯಾರು?
    ಚಿನ್ಮಯ್‌ ಕೃಷ್ಣ ದಾಸ್ ಬ್ರಹ್ಮಚಾರಿ ಅವರು ಹಿಂದೂ ಸಂಘಟನೆಯಾದ ಇಸ್ಕಾನ್ ಸಂಸ್ಥಾಪಕರಲ್ಲಿ ಒಬ್ಬರು ಮತ್ತು ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತರ ಪ್ರಮುಖ ವಕೀಲರಾಗಿದ್ದಾರೆ. ಸನಾತನ ಜಾಗರಣ್‌ ಮಂಚ್‌, ಬಾಂಗ್ಲಾದೇಶ ಸನಾತನ ಜಾಗರಣ ಮಂಚ್‌ ವಕ್ತಾರರು ಮತ್ತು ಪುಂಡರೀಕ್ ಧಾಮದ ಪ್ರಾಂಶುಪಾಲರಾಗಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಬಗ್ಗೆ ಅವರು ಧ್ವನಿ ಎತ್ತಿದ್ದರು.

    ಮಾಜಿ ಪ್ರಧಾನಿ ಶೇಖ್ ಹಸೀನಾ ಅಧಿಕಾರದಿಂದ ಕೆಳಗಿಳಿದ ನಂತರ ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ನಡೆಯುತ್ತಿದೆ. ಮೊಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರವು ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರವನ್ನು ತಡೆಯಲು ವಿಫಲವಾಗಿದೆ ಎಂದು ಟೀಕಿಸಿದ್ದರು. ಕಳೆದ ತಿಂಗಳು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಯಾರಾದರೂ ನಮ್ಮನ್ನು ಈ ದೇಶದಿಂದ ಹೊರಹಾಕಿ ಶಾಂತಿಯಿಂದ ಬದುಕಬಹುದು ಎಂದು ಬಯಸಿದರೆ ಇಲ್ಲಿ ಪ್ರಜಾಪ್ರಭುತ್ವ ಇರುವುದಿಲ್ಲ. ನಮ್ಮ ದೇಶ ಅಫ್ಘಾನಿಸ್ತಾನ ಅಥವಾ ಸಿರಿಯಾ ಆಗುತ್ತದೆ ಎಂದು ಹೇಳಿದ್ದರು.

  • ಡೆಮಾಕ್ರಟಿಕ್ ಪಕ್ಷದ ಸಭೆಯಲ್ಲಿ ವೇದಮಂತ್ರಗಳ ಸದ್ದು – ಅಮೆರಿಕದಲ್ಲಿ ಬೆಂಗಳೂರು ಅರ್ಚಕರಿಂದ ವಿಶೇಷ ಪ್ರಾರ್ಥನೆ!

    ಡೆಮಾಕ್ರಟಿಕ್ ಪಕ್ಷದ ಸಭೆಯಲ್ಲಿ ವೇದಮಂತ್ರಗಳ ಸದ್ದು – ಅಮೆರಿಕದಲ್ಲಿ ಬೆಂಗಳೂರು ಅರ್ಚಕರಿಂದ ವಿಶೇಷ ಪ್ರಾರ್ಥನೆ!

    – ರಾಕೇಶ್‌ಭಟ್ ಬಗ್ಗೆ ಪೇಜಾವರ ಶ್ರೀ ಮೆಚ್ಚುಗೆ

    ವಾಷಿಂಗ್ಟನ್: ಅಮೆರಿಕದ (USA) ಚಿಕಾಗೋದಲ್ಲಿ ನಡೀತಿರುವ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ (Democratic National Convention) 3ನೇ ದಿನ ಹಿಂದೂ ಸಂಪ್ರದಾಯಂತೆ ವೇದ ಮಂತ್ರಗಳೊಂದಿಗೆ ಆರಂಭವಾಗಿದ್ದು ವಿಶೇಷ.

    ಅಮೆರಿಕದಲ್ಲಿ ಈ ರೀತಿ ನಡೀತಿರೋದು ಇದು ಮೊದಲ ಬಾರಿ. ದೇಶದ ಐಕ್ಯತೆಯನ್ನು ಪ್ರತಿಪಾದಿಸಿದ ಬೆಂಗಳೂರು ಮೂಲದ ಅರ್ಚಕ ರಾಕೇಶ್ ಭಟ್ (Bengaluru Priest Rakesh Bhatt), ಸಂಸ್ಕೃತ ಶ್ಲೋಕಗಳನ್ನು ಪಠಿಸುತ್ತಾ ದೇವರ ಆಶೀರ್ವಚನ ಕೋರಿದ್ರು.

    ನಾವೆಲ್ಲ ಒಂದೇ ಕುಟುಂಬ.. ಸತ್ಯವೇ ನಮ್ಮ ಬುನಾದಿ.. ಅದೇ ನಮ್ಮನ್ನು ಗೆಲ್ಲಿಸುತ್ತದೆ.. ಕತ್ತಲಿನಿಂದ ಬೆಳಕಿನೆಡೆಗೆ.. ಸಾವಿನಿಂದ ಅಮರತ್ವದವರೆಗೂ ನಮ್ಮನ್ನು ನಡೆಸಿ ಎಂದು ಆ ದೇವರನ್ನು ಕೋರುತ್ತಿರುವೆ. ಓಂ ಶಾಂತಿ.. ಶಾಂತಿ ಶಾಂತಿ ಎಂದು ರಾಕೇಶ್ ಭಟ್ ಪ್ರಾರ್ಥಿಸಿದ್ರು.

    ಈ ಬಗ್ಗೆ ಅಮೆರಿಕದಲ್ಲಿರುವ ಹಿಂದೂಗಳು ಸಂತಸ ವ್ಯಕ್ತಪಡಿಸಿದ್ದಾರೆ. ಅಮೆರಿಕಾದಲ್ಲಿ ಹಿಂದೂ ಸಮಾಜಕ್ಕೆ ಹೆಚ್ಚುತ್ತಿರುವ ಆದರಣೆ, ಪ್ರಾಮುಖ್ಯತೆಯನ್ನು ಇದು ತೋರಿಸುತ್ತದೆ ಎಂದು ಹಿಂದೂ ಮುಖಂಡರು (Hindu Leader) ಹೇಳಿದ್ದಾರೆ. ಪೇಜಾವರ ಶ್ರೀಗಳು ಮೆಚ್ಚುಗೆ ಸೂಚಿಸಿದ್ದಾರೆ. ಬೆಂಗಳೂರಿನ ಪೇಜಾವರ ಮಠದಲ್ಲಿ ಶಿಕ್ಷಣ ಪಡೆದಿರುವ ರಾಕೇಶ್ ಭಟ್, 2013ರಿಂದ ಮೇರಿಲ್ಯಾಂಡ್‌ನ ಶಿವವಿಷ್ಣು ದೇವಾಲಯದಲ್ಲಿ ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸ್ತಿದ್ದಾರೆ.

  • ದತ್ತ ಪೀಠಕ್ಕೆ ಶೀಘ್ರವೇ ಹಿಂದೂ ಅರ್ಚಕರನ್ನು ನೇಮಿಸಿ- ಸಿಎಂಗೆ ಬಜರಂಗದಳ ಮನವಿ

    ದತ್ತ ಪೀಠಕ್ಕೆ ಶೀಘ್ರವೇ ಹಿಂದೂ ಅರ್ಚಕರನ್ನು ನೇಮಿಸಿ- ಸಿಎಂಗೆ ಬಜರಂಗದಳ ಮನವಿ

    ಚಿಕ್ಕಮಗಳೂರು/ಬೆಂಗಳೂರು: ದತ್ತ ಪೀಠಕ್ಕೆ ಶೀಘ್ರವೇ ಹಿಂದೂ ಅರ್ಚಕರನ್ನು ನೇಮಕ ಮಾಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಜರಂಗದಳದಿಂದ ಇಂದು ಮನವಿ ಸಲ್ಲಿಸಲಾಯಿತು.

    ಚಿಕ್ಕಮಗಳೂರಿನ ದತ್ತ ಪೀಠವು ಹಿಂದಿನ ಹಲವು ದಶಕಗಳಿಂದ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು ದುರದೃಷ್ಟವಶಾತ್ ಅಲ್ಲಿ ಮುಸ್ಲಿಂ ಮೌಲ್ವಿಗಳು ಪೂಜೆ ಸಲ್ಲಿಸುತ್ತಿದ್ದು, ಪ್ರಸ್ತುತ ಹೈಕೋರ್ಟ್ ತೀರ್ಪಿನ ಪ್ರಕಾರ ಮೌಲ್ವಿಗಳ ನೇಮಕಾತಿಯನ್ನು ರದ್ದುಪಡಿಸಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಹಿಂದೂ ಸಮಾಜವು ಈ ಒಂದು ಅಪೇಕ್ಷೆಯನ್ನು ಮುಂದಿಟ್ಟುಕೊಂಡು ಹೋರಾಟವನ್ನು ನಡೆಸುತ್ತಾ ಬಂದಿದೆ.

    ಹೈಕೋರ್ಟಿನ ಈ ತೀರ್ಪು ಹಿಂದೂ ಸಮಾಜದಲ್ಲಿ ಸಂತಸವನ್ನು ತಂದಿದೆ ಹಾಗೂ ಹಿಂದೂ ಸಮಾಜದ ನಂಬಿಕೆಗಳಿಗೆ ಬೆಲೆ ಸಿಕ್ಕಂತಾಗಿದೆ. ನ್ಯಾಯಾಲಯದ ಈ ತೀರ್ಪು ಹಿಂದೂ ಸಮಾಜದ ಗೆಲುವಾಗಿದೆ. ನ್ಯಾಯಾಲಯವು ನೀಡಿದ ತೀರ್ಪಿನಂತೆ ತಾವು ತಕ್ಷಣ ದತ್ತಪೀಠದಲ್ಲಿ ಹಿಂದೂ ಅರ್ಚಕರನ್ನು ನೇಮಿಸಬೇಕು. ಅಲ್ಲದೆ ಡಿಸೆಂಬರ್ 18 ರಂದು ದತ್ತ ಜಯಂತಿಯ ಪ್ರಯುಕ್ತ ನಡೆಯುವ 3 ದಿನದ ಕಾರ್ಯಕ್ರಮಕ್ಕೆ ಸಂಪೂರ್ಣ ಹಿಂದೂ ಧಾರ್ಮಿಕ ವಿಧಿ-ವಿಧಾನದಂತೆ ನಡೆಸಲು ಅನುವು ಮಾಡಿಕೊಡಬೇಕು. ತಾವು ಕೂಡ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಸಿಎಂಗೆ ಸಲ್ಲಿಸಿರುವ ಮನವಿಯಲ್ಲಿ ಬಜರಂಗದಳ ರಾಜ್ಯ ಸಂಚಾಲಕ ಕೆ.ಆರ್ ಸುನಿಲ್ ತಿಳಿಸಿದ್ದಾರೆ.

    ಈ ಸಂದರ್ಭದಲ್ಲಿ ರಘು ಸಕಲೇಶಪುರ ಮತ್ತು ಮುರಳಿ ಕೃಷ್ಣ ಹಸಂತಡ್ಕ ಅವರುಗಳು ಜೊತೆಗಿದ್ದರು. ಇದನ್ನೂ ಓದಿ: ದತ್ತಪೀಠದಲ್ಲಿ ಮುಜಾವರ್ ನೇಮಕ ರದ್ದು – ಮತ್ತೆ ಸರ್ಕಾರದ ಅಂಗಳಕ್ಕೆ ಚೆಂಡು

    ಕೋರ್ಟ್ ತೀರ್ಪು:
    ವಿವಾದಿತ ಬಾಬಾಬುಡೆನ್‍ಗಿರಿಯ ದತ್ತಾತ್ರೇಯ ಪೀಠದ ಪೂಜೆಗೆ ಮೌಲ್ವಿ ನೇಮಕ ಮಾಡಿದ್ದ ಆದೇಶವನ್ನು ಕಳೆದ 7 ದಿನಗಳ ಹಿಂದೆ ಹೈಕೋರ್ಟ್ ರದ್ದು ಮಾಡಿದೆ. 2018ರ ಮಾರ್ಚ್ 19ರಂದು ದತ್ತಾತ್ರೇಯ ಪೀಠದ ಪೂಜೆಗೆ ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್‍ರನ್ನು ಧಾರ್ಮಿಕ ದತ್ತಿ ಇಲಾಖೆ ನೇಮಿಸಿತ್ತು. ಇದನ್ನು ಪ್ರಶ್ನಿಸಿ ಸಂವರ್ಧನಾ ಸಮಿತಿ ಕೋರ್ಟ್ ಮೊರೆ ಹೋಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದಿನೇಶ್ ಕುಮಾರ್ ನೇತೃತ್ವದ ನ್ಯಾಯಪೀಠ, ಮೌಲ್ವಿ ನೇಮಕಾತಿಯನ್ನು ರದ್ದು ಮಾಡಿ ಆದೇಶ ಹೊರಡಿಸಿದೆ. ಅಲ್ಲದೆ ಈ ಪ್ರಕರಣವನ್ನು ಹೊಸದಾಗಿ ಪರಿಗಣಿಸಿ ಕಾನೂನಿನ ಪ್ರಕಾರ ಸೂಕ್ತ ನಿರ್ಧಾರ ಕೈಗೊಳ್ಳಿ ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

  • ಹಿಂದೂ ಧರ್ಮವನ್ನು ಬಿಜೆಪಿ ಸರ್ಕಾರ ಸರ್ವನಾಶ ಮಾಡುತ್ತಿದೆ: ಋಷಿಕುಮಾರ ಸ್ವಾಮೀಜಿ

    ಹಿಂದೂ ಧರ್ಮವನ್ನು ಬಿಜೆಪಿ ಸರ್ಕಾರ ಸರ್ವನಾಶ ಮಾಡುತ್ತಿದೆ: ಋಷಿಕುಮಾರ ಸ್ವಾಮೀಜಿ

    -ಒಂದೇ ಒಂದು ಕರೆ ನೀಡಿದರೆ ಕೇಂದ್ರ ಸರ್ಕಾರವೇ ಅಲ್ಲಾಡುತ್ತೆ

    ಚಿಕ್ಕಮಗಳೂರು: ಹಿಂದೂ ಧರ್ಮವನ್ನು ಕಾಂಗ್ರೆಸ್ ಅಥವಾ ಕುಮಾರಸ್ವಾಮಿ ನಾಶ ಮಾಡಿಲ್ಲ. ಬಿಜೆಪಿ ಸರ್ಕಾರವೇ ಸರ್ವನಾಶ ಮಾಡುತ್ತಿದೆ ಎಂದು ಕಾಳಿಮಠದ ಋಷಿಕುಮಾರ ಸ್ವಾಮೀಜಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಇಂದು ಶ್ರೀರಾಮಸೇನೆ ನೇತೃತ್ವದಲ್ಲಿ ದತ್ತಪೀಠದಲ್ಲಿ ಮುಜಾವರ್ ನೇಮಕಾತಿಯನ್ನು ಹೈಕೋರ್ಟ್ ರದ್ದುಪಡಿಸಿದ ಖುಷಿಯಲ್ಲಿ ಋಷಿಕುಮಾರ ಸ್ವಾಮೀಜಿ ದತ್ತಪೀಠಕ್ಕೆ ಆಗಮಿಸಿದ್ದರು. ದತ್ತಾತ್ರೇಯ ಸ್ವಾಮೀಜಿಯ ಗುರುವಾಗಿರುವುದರಿಂದ ದತ್ತಾತ್ರೇಯನಿಗೆ ವಿಶೇಷ ಪೂಜೆ ಸಲ್ಲಿಸಲು ಬಂದಿದ್ದರು ಆದರೆ, ಜಿಲ್ಲಾಡಳಿತ ದತ್ತಪಾದುಕೆ ದರ್ಶನಕ್ಕೆ ಅವಕಾಶ ನೀಡಿತೋ ವಿನಃ ದತ್ತಪಾದುಕೆಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಿಲ್ಲ. ಕೂಡಲೇ ಋಷಿಕುಮಾರ ಸ್ವಾಮಿಜಿ, ಶ್ರೀರಾಮಸೇನೆ ರಾಜ್ಯ ಸಂಚಾಲಕ ಗಂಗಾಧರ್ ಕುಲಕರ್ಣಿ ಸೇರಿದಂತೆ ಎರಡ್ಮೂರು ಸ್ವಾಮೀಜಿಗಳು ಹಾಗೂ ಶ್ರೀರಾಮಸೇನೆ ಕಾರ್ಯಕರ್ತರು ದತ್ತ ಗುಹೆಯೊಳಗೆ ಧರಣಿಗೆ ಕೂತರು. ಸಾಧು-ಸಂತರಿಗೆ ಪೂಜೆಗೆ ಅವಕಾಶ ಇಲ್ಲವೆಂದು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಕೂಡ ಹೇಳಿಲ್ಲ. ಆದರೆ, ನೀವು ಹೊಸ ಸಂಪ್ರದಾಯ ಹುಟ್ಟುಹಾಕಿದ್ದೀರಾ ಎಂದು ಗುಹೆಯೊಳಗೆ ಸುಮಾರು ಎರಡು ಗಂಟೆಗಳ ಕಾಲ ಧರಣಿ ಕೂತು ದತ್ತ ಹಾಗೂ ಶ್ರೀರಾಮ ಸ್ಮರಣೆ ಮಾಡಿದರು. ಇದನ್ನೂ ಓದಿ: ದತ್ತಪೀಠಕ್ಕೆ ಮೌಲ್ವಿ ನೇಮಕ ರದ್ದು

    ದತ್ತಪೀಠಕ್ಕೆ ಬಂದ ಹೊರಗಿನ ಭಕ್ತರು ಹಾಗೂ ಪ್ರವಾಸಿಗರಿಗೆ ತೊಂದರೆಯಾಗಬಾರದೆಂದು ಧರಣಿಯನ್ನು ಕೈಬಿಟ್ಟು ಹೊರಬಂದು ಮಾತನಾಡಿದ ಅವರು, ಸರ್ಕಾರಕ್ಕೆ ನಾಚಿಕೆಗೇಡು, ಅಸಯ್ಯ ನಿಮ್ಮನ್ನು ನಂಬಿ ಹಿಂದೂಗಳು ಜೈ…ಜೈ….ಜೈ… ಅಂದಿದ್ದೇ, ಅಂದಿದ್ದು ಅಷ್ಟೆ ಹಿಂದೂಗಳಿಗೆ ಸಿಕ್ಕಿದ್ದು. ದತ್ತಪೀಠದಲ್ಲಿ ಮೈಕ್ ಹಾಕಿಕೊಂಡು ಬಾಂಗ್ ಕೂಗಲು ಅವಕಾಶ ನೀಡಿದ ಸರ್ಕಾರ ಇಂದು ನಮಗೆ ಅರ್ಚನೆ ಮಾಡಲು ಏಕೆ ಬಿಡಲ್ಲ ಎಂದು ಪ್ರಶ್ನಿಸಿದರು.

    ಮುಂದಿನ ದಿನಗಳಲ್ಲಿ ಅವಕಾಶ ನೀಡದಿದ್ದರೆ ರಾಜ್ಯದ ಎಲ್ಲಾ ಮಠಾಧೀಶರು ಜಾಗೃತರಾಗಿ, ನಾವೆಲ್ಲಾ ಸಣ್ಣ-ಪುಟ್ಟ ಮಠದವರು. ಬಾಳೆಹೊನ್ನೂರು-ಆದಿಚುಂಚನಗಿರಿ ಪೀಠಕ್ಕಿಂತ ದೊಡ್ಡ ಮಠ ಬೇಕಾ ಒಂದೇ ಒಂದು ಕರೆ ನೀಡಿದರೆ ಕೇಂದ್ರ ಸರ್ಕಾರವೇ ಅಲ್ಲಾಡುತ್ತೆ. ರಾಮಸೇನೆ, ಬಜರಂಗದಳ, ಆರ್‌ಎಸ್‌ಎಸ್‌ ಪರವೂ ಮಾತನಾಡಬೇಡಿ, ಹಿಂದೂ ಧರ್ಮದ ದೇವಸ್ಥಾನಗಳ ಬಗ್ಗೆ ಮಾತನಾಡಿ. ನಾವು ಚಿಕ್ಕವರು ಗುಬ್ಬಚ್ಚಿ ಹೋಗಿ ಗಿಡಗದ ಮುಂದೆ ಯುದ್ಧ ಮಾಡಿದಂತೆ ಆಗುತ್ತೆ. ದೊಡ್ಡ-ದೊಡ್ಡ ಮಠಾಧೀಶರೆಲ್ಲಾ ಬಂದು ದತ್ತಪೀಠಕ್ಕೆ ಯತಿ-ಸಾಧು-ಸಂತರನ್ನು ಪೂಜೆ ಸಲ್ಲಿಸಲು ಏಕೆ ಬಿಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದತ್ತಪೀಠದಲ್ಲಿ ಮುಜಾವರ್ ನೇಮಕ ರದ್ದು – ಮತ್ತೆ ಸರ್ಕಾರದ ಅಂಗಳಕ್ಕೆ ಚೆಂಡು

    ಮತಾಂತರ ತಡೆ ಕಾಯ್ದೆ ಜಾರಿಗೆ ತರುತ್ತೇವೆ ಎಂದೊಡನೆ ಊರಲ್ಲಿರೋ ಪಾದ್ರಿಗಳೆಲ್ಲಾ ಒಗ್ಗಟ್ಟಾಗಿ ಕೂತಿದ್ದಾರೆ. ನಿಮಗೆ ನಾಚಿಕೆ ಆಗಲ್ವಾ. ಹಿಂದೂ ಧರ್ಮದ ಹೆಸರೇಳಿಕೊಂಡು ಮಠದ ಅನ್ನ ತಿನ್ನುತ್ತಿದ್ದೇವೆ. ಆಚೆಗೆ ಮಾತ್ರ ಬರಲ್ಲ. ಎದ್ದು ಹೊರ ಬನ್ನಿ ಎಂದು ಮಠಾಧೀಶರ ವಿರುದ್ಧವೂ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಪಿತೃಪಕ್ಷದಲ್ಲಿ ಥಿಯೇಟರ್ ಓಪನ್ ಮಾಡಲ್ಲ – ಉಡುಪಿ ಚಿತ್ರಮಂದಿರ ಮಾಲೀಕರ ತೀರ್ಮಾನ