Tag: Hindu Organisations

  • ಉಡುಪಿ| ಗ್ರಾಪಂ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿಯಿಂದ ಪ್ರಾರ್ಥನೆ – ಹಿಂದೂ ಸಂಘಟನೆಗಳ ಅಸಮಾಧಾನ

    ಉಡುಪಿ| ಗ್ರಾಪಂ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿಯಿಂದ ಪ್ರಾರ್ಥನೆ – ಹಿಂದೂ ಸಂಘಟನೆಗಳ ಅಸಮಾಧಾನ

    – ಗುರುವಾರ ಸಂಜೆ ದುವಾ- ಶುಕ್ರವಾರ ಬೆಳಗ್ಗೆ ಗಣಹೋಮ
    ಉಡುಪಿ: ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯತ್‌ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿಯೊಬ್ಬರು ಪ್ರಾರ್ಥನೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
    ಗ್ರಾಪಂ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿ ಪ್ರಾರ್ಥನೆ ಮಾಡುತ್ತಿರುವ ವೀಡಿಯೋವನ್ನು ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಹಿಂದೂ ಸಂಘಟನೆಗಳು ಅಸಮಾಧಾನ ಹೊರಹಾಕಿವೆ.
    ಪಂಚಾಯತ್ ಉಪಾಧ್ಯಕ್ಷ ಅಧಿಕಾರ ಸ್ವೀಕರಿಸುವ ವೇಳೆ ಮುಸ್ಲಿಂ ಮೌಲ್ವಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಗಂಗೊಳ್ಳಿಯಲ್ಲಿ ಕಾಂಗ್ರೆಸ್-ಎಸ್‌ಡಿಪಿಐ ಅಧಿಕಾರ ಹಂಚಿಕೆ ವೇಳೆ ಘಟನೆ ನಡೆದಿದೆ.
    ಈ ಗ್ರಾಮ ಪಂಚಾಯಿತಿಯು ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಎಸ್‌ಡಿಪಿಐ ಮುಖಂಡರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿ ದುವಾ ಮಾಡಿಸಿದ್ದಾರೆ.
    ಕಾಂಗ್ರೆಸ್ ಸದಸ್ಯೆ ಜಯಂತಿ ಖಾರ್ವಿ ಎಂಬವರಿಗೆ ಅಧ್ಯಕ್ಷ ಸ್ಥಾನ ಹಾಗೂ ಎಸ್‌ಡಿಪಿಐ ಬೆಂಬಲಿತ ಸದಸ್ಯ ತಬ್ರೇಜ್‌ಗೆ ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ. ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ವೇಳೆ ಮೌಲ್ವಿ ಕರೆಸಿ ಪ್ರಾರ್ಥನೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.
    ಗುರುವಾರ ಸಂಜೆ ದುವಾ- ಶುಕ್ರವಾರ ಬೆಳಗ್ಗೆ ಗಣಹೋಮ
    ಗುರುವಾರ ಸಂಜೆ ಉಪಾಧ್ಯಕ್ಷ ತಬ್ರೇಸ್ ಮುಸ್ಲಿಂ ಧಾರ್ಮಿಕ ಪ್ರಾರ್ಥನೆ ಮಾಡಿದ ಬಗ್ಗೆ ಅಕ್ಷೇಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಶುಕ್ರವಾರ ಕಾಂಗ್ರೆಸ್ ಸದಸ್ಯರಿಂದ ಗಂಗೊಳ್ಳಿ ಪಂಚಾಯತ್‌ನಲ್ಲಿ ಗಣಪತಿ ಹೋಮ ನಡೆಸಲಾಗಿದೆ.
    ಪಂಚಾಯತ್ ಅಧ್ಯಕ್ಷೆ ಜಯಂತಿ ನೇತೃತ್ವದಲ್ಲಿ ಗಣಪತಿ ಹೋಮ ನಡೆದಿದೆ. 30 ವರ್ಷ ಬಿಜೆಪಿ ತೆಕ್ಕೆಯಲ್ಲಿದ್ದ ಪಂಚಾಯತ್ ಅಧಿಕಾರ, ಎರಡು ದಶಕದ ಬಳಿಕ ಕಾಂಗ್ರೆಸ್‌ ಪಾಲಾಗಿದೆ. ಎಸ್‌ಡಿಪಿಐ ಜೊತೆಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್‌ ಅಧಿಕಾರ ಹಿಡಿದಿದೆ. 12 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್‌ಗೆ ಎಸ್‌ಡಿಪಿಐನ ಏಳು ಸದಸ್ಯರು ಬೆಂಬಲ ನೀಡಿದ್ದಾರೆ. ಪಂಚಾಯತ್‌ನಲ್ಲಿ ಬಿಜೆಪಿ 12 ಸದಸ್ಯ ಬಲ ಹೊಂದಿದೆ.
  • The Kerala Story: ದಾವಣಗೆರೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಸಿನಿ ಪ್ರದರ್ಶನ

    The Kerala Story: ದಾವಣಗೆರೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಸಿನಿ ಪ್ರದರ್ಶನ

    – ಮೇ 26ರಂದೂ ಎರಡು ಶೋ ಪ್ರದರ್ಶನ ಉಚಿತ

    ದಾವಣಗೆರೆ: ದೇಶಾದ್ಯಂತ ಭಾರೀ ವಿವಾದ ಹುಟ್ಟುಹಾಕಿರುವ `ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಸಾಕಷ್ಟು ಸುದ್ದಿ ಮಾಡುತ್ತಿದೆ. ಕೆಲವು ರಾಜ್ಯಗಳಲ್ಲಿ ಸಿನಿಮಾ ಪ್ರದರ್ಶನ ನೀಡದಂತೆ ಬ್ಯಾನ್ ಮಾಡಿದ್ದು, ಕೆಲವೆಡೆ ಲವ್ ಜಿಹಾದ್ ಬಗ್ಗೆ ಜಾಗೃತಿ ಮೂಡಿಸುವ ಸಿನಿಮಾ ಎಂದು ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಈ ನಡುವೆ ದಾವಣಗೆರೆಯಲ್ಲಿ (Davanagere) ಶಾಲಾ, ಕಾಲೇಜು ವಿದ್ಯಾರ್ಥಿನಿಯರಿಗೆ (College Students) ಉಚಿತವಾಗಿ ಸಿನಿಮಾ ಪ್ರದರ್ಶನ ಏರ್ಪಡಿಸಿದ್ದು. ಪ್ರೇರಣಾ ಯುವ ಸಂಸ್ಥೆ ಹಾಗೂ ಹಿಂದೂ ಜಾಗರಣ ವೇದಿಕೆ ಸಹಯೋಗದಲ್ಲಿ ನಗರದ ತ್ರಿಶೋಲ್ ಚಿತ್ರಮಂದಿರಗಳಲ್ಲಿ ಗುರುವಾರ ಹಾಗೂ ಶುಕ್ರವಾರ (ಮೇ 26) ಎರಡು ಪ್ರದರ್ಶನಗಳನ್ನ ಕೇವಲ ವಿದ್ಯಾರ್ಥಿನಿಯರು ಮಾತ್ರ ವೀಕ್ಷಿಸಿಲು ಅವಕಾಶ ಮಾಡಿಕೊಡಲಾಗಿದೆ.

    ಮೊದಲ ದಿನವೇ ದಾವಣಗೆರೆಯ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿನಿಯರು ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಹಿಂದೂ ಜಾಗರಣ ವೇದಿಕೆಯ ಮುಖಂಡ ಹಾಗೂ ಮಾಜಿ ಮೇಯರ್ ಎಸ್.ಟಿ ವೀರೇಶ್ ಸೇರಿದಂತೆ ಹಲವು ಹಿಂದೂ ಪರ ಸಂಘಟನೆಯ ಮುಖಂಡರು (Hindu Organisations) ವಿದ್ಯಾರ್ಥಿನಿಯರಿಗೆ ಸಾಥ್ ನೀಡಿದ್ದಾರೆ.

    ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಜಾಗೃತವಾಗಲು ಈ ಸಿನಿಮಾ ಸಹಕಾರಿಯಾಗಿದೆ. ಅಲ್ಲದೆ ನೈಜ್ಯ ಘಟನೆಗಳನ್ನು ಒಳಗೊಂಡ ಸಿನಿಮಾವಾಗಿದೆ. ಇದನ್ನು ಪ್ರತಿಯೊಬ್ಬರು ನೋಡಬೇಕು ಎಂದು ವಿದ್ಯಾರ್ಥಿನಿಯರು ಹಾಗೂ ಹಿಂದೂಪರ ಸಂಘಟನೆ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.

  • ಕರ್ನಾಟಕದಲ್ಲೀಗ ಲವ್ ಜಿಹಾದ್ ಹೋರಾಟದ ಕಾವು

    ಕರ್ನಾಟಕದಲ್ಲೀಗ ಲವ್ ಜಿಹಾದ್ ಹೋರಾಟದ ಕಾವು

    ಬೆಂಗಳೂರು: ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ, ಹಲಾಲ್ ಫೈಟ್, ಹಿಜಬ್ ವಿವಾದ ಹಾಗೂ ಧರ್ಮ ದಂಗಲ್ ಕುಲುಮೆಯಲ್ಲಿರುವ ಕರ್ನಾಟಕದಲ್ಲಿ ಈಗ ಲವ್ ಜಿಹಾದ್ ಮೆಗಾ ಕ್ಯಾಂಪೇನ್ ಶುರುವಾಗಿದೆ. ಈ ಬಾರಿ ಹಿಂದೂ ಸಂಘಟನೆಗಳು (Hindu Organisations) ವಿಭಿನ್ನವಾಗಿ ಲವ್ ಜಿಹಾದ್ (Love Jihad) ವಿರುದ್ಧ ಹೋರಾಟಕ್ಕೆ ಅಖಾಡ ಸಿದ್ಧಮಾಡಿಕೊಂಡಿದೆ.

    ದೆಹಲಿಯ ಶ್ರದ್ಧಾ ವಾಕರ್ (Shraddha Walker) ಅಮಾನುಷ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಅಫ್ತಾಬ್ ಅಮೀನ್ ಪೂನಾವಾಲನ (Aftab Amin Poonawala) ಕ್ರೂರ ವರ್ತನೆ, ಶ್ರದ್ಧಾ ದೇಹವನ್ನು 35 ಪೀಸ್‌ಗಳಾಗಿ ಕತ್ತರಿಸಿದ್ದು ಇವೆಲ್ಲವೂ ಜನಾಕ್ರೋಶಕ್ಕೆ ಕಾರಣವಾಗಿದೆ. ಈಗ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಜಾಗೃತಿ ಮೂಡಿಸುವ ಸಲುವಾಗಿ ಹಿಂದೂ ಸಂಘನೆಗಳು ಹೊಸ ಅಭಿಯಾನ ಶುರು ಮಾಡಿವೆ. ಇದನ್ನೂ ಓದಿ: ಕುಕ್ಕೆಯಲ್ಲಿ ಮೊದಲ ಬಾರಿಗೆ ವ್ಯಾಪಾರದಿಂದ ದೂರ ಉಳಿದ ಮುಸ್ಲಿಂ ವ್ಯಾಪಾರಿಗಳು- ಸಂಘರ್ಷವಿಲ್ಲದೆ ಜಾತ್ರೆ ಸಂಪನ್ನ

    ಕರಾವಳಿ ಭಾಗದಲ್ಲಿ ಈಗಾಗಲೇ ನಾನಾ ಕಡೆ ಲವ್ ಜಿಹಾದ್ (Love Jihad) ಜಾಗೃತಿಗಾಗಿ ಪೋಸ್ಟರ್ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ಹಿಂದೂ ಹುಡುಗಿ ಶ್ರದ್ಧಾ ವಾಕಾರ್ ದೇಹವನ್ನು 35 ಪೀಸ್ ಮಾಡಲಾಯ್ತು. ಇದಕ್ಕೆ ಕಾರಣ ಲವ್ ಜಿಹಾದ್. ನೀವು ಈಕೆಯಂತೆ ಈ ಜಾಲಕ್ಕೆ ಬಲಿಯಾಗಬೇಡಿ ಅಂತಾ ಪೋಸ್ಟರ್ ಅಳವಡಿಸಲಾಗಿದೆ. ಇದನ್ನೂ ಓದಿ: ಶ್ರದ್ಧಾ ಹತ್ಯೆ ಮಾಡಿದ್ದು ನಾನೇ, ಆ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ – ಪಾಲಿಗ್ರಾಫ್ ಪರೀಕ್ಷೆಯಲ್ಲಿ ಅಫ್ತಾಬ್ ಹೇಳಿಕೆ

    ಲವ್ ಜಿಹಾದ್ ಜಾಗೃತಿ ಮೂಡಿಸಲು ಇದೇ ವಿಚಾರವಾಗಿ ಹೋರಾಟದ ರೂಪುರೇಷೆಗೂ ಹಿಂದೂ ಸಂಘಟನೆಗಳು ಅಖಾಡ ಸಿದ್ಧಪಡಿಸಿಕೊಂಡಿವೆ. ರಾಜ್ಯದ ನಾನಾ ಕಡೆಗಳಲ್ಲಿ ಪೋಸ್ಟರ್ ಅಳವಡಿಸಲು ಚಿಂತನೆ ನಡೆಸಿವೆ. ಲವ್ ಜಿಹಾದ್ ವಿರುದ್ಧ ವ್ಯಾಪಕ ಹೋರಾಟ ನಡೆಸುವ ಬಗ್ಗೆಯೂ ಸಂಘಟನೆಗಳು ಪ್ಲ್ಯಾನ್‌ ಮಾಡಿವೆ.

    Live Tv
    [brid partner=56869869 player=32851 video=960834 autoplay=true]