Tag: Hindu Muslim Community

  • ಕಲಬುರಗಿ | ಲಾಡ್ಲೇ ಮಶಾಕ್ ದರ್ಗಾದ ಶಿವಲಿಂಗ ಪೂಜೆಗೆ ಹಿಂದೂ ಕಾರ್ಯಕರ್ತರಿಂದ ಸಿದ್ಧತೆ

    ಕಲಬುರಗಿ | ಲಾಡ್ಲೇ ಮಶಾಕ್ ದರ್ಗಾದ ಶಿವಲಿಂಗ ಪೂಜೆಗೆ ಹಿಂದೂ ಕಾರ್ಯಕರ್ತರಿಂದ ಸಿದ್ಧತೆ

    – ಆಳಂದ ಪಟ್ಟಣದಲ್ಲಿ ನಿಷೇಧಾಜ್ಞೆ, ಬಿಗಿ ಪೊಲೀಸ್ ಬಂದೋಬಸ್ತ್

    ಕಲಬುರಗಿ: ಪ್ರತಿ ವರ್ಷ ಶಿವರಾತ್ರಿ (Shivaratri )ಬಂದ್ರೆ ಸಾಕು ಕಲಬುರಗಿಯ ವಿವಾದಿತ ಲಾಡ್ಲೇ ಮಶಾಕ್ ದರ್ಗಾ (Ladley Mashak Dargah) ಆವರಣದಲ್ಲಿರುವ ಶಿವಲಿಂಗ ಪೂಜೆ ವಿವಾದ ಜೋರಾಗುತ್ತದೆ. ಅದೇ ರೀತಿ ಈ ಬಾರಿ ಸಹ ರಾಘವ ಚೈತನ್ಯ ಶಿವಲಿಂಗ ಪೂಜೆ ವಿವಾದ ಎದಿದ್ದು ಹಿಂದೂಗಳ ಪೂಜೆಗೆ ನ್ಯಾಯಲಯ ಗ್ರೀನ್ ಸಿಗ್ನಲ್ ನೀಡಿದೆ. ಆ ಮೂಲಕ ಮಹಾ ಶಿವರಾತ್ರಿಯಂದು ರಾಘವ ಚೈತನ್ಯ ಶಿವಲಿಂಗದ ಪೂಜೆಗೆ ಹಿಂದೂಗಳು ಉತ್ಸುಕರಾಗಿದ್ದಾರೆ. ಈಗಾಗಲೇ ಪೂಜೆ ಸಲ್ಲಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

    ಸದ್ಯದಲ್ಲೇ ಇಂದು ಯಾರ‍್ಯಾರು ಪೂಜೆಗೆ ತೆರಳುತ್ತರೆ ಎನ್ನುವ ಪಟ್ಟಿ ಸಿದ್ಧಪಡಿಸಲಿದ್ದರೆ. ಬಳಿಕ ಪೂಜೆಗೆ ದರ್ಗಾಕ್ಕೆ ತೆರಳುವ 15 ಜನರ ಪಟ್ಟಿಯನ್ನು ಪೊಲೀಸರಿಗೆ ನಿಡಲಾಗುತ್ತದೆ. ಬಳಿಕ ಹಿಂದೂ ಕಾರ್ಯಕರ್ತರಿಂದ ಮಧ್ಯಾಹ್ನ 2 ರಿಂದ ಸಂಜೆ 6 ಗಂಟೆ ವರೆಗೆ ಶಿವಲಿಂಗ ಪೂಜೆ (Shivalinga Pooja) ನೆರವೇರಲಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಮಹಾ ಶಿವರಾತ್ರಿ ಸಂಭ್ರಮ – ಮಧ್ಯರಾತ್ರಿಯಿಂದಲೇ ಸಾಲುಗಟ್ಟಿ ನಿಂತ ಶಿವಭಕ್ತರು

    ಆಳಂದ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ:
    ಲಾಡ್ಲೇ ಮಶಾಕ್‌ ದರ್ಗಾ ಆವರಣದಲ್ಲಿರುವ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆಗೆ ಹೈಕೋರ್ಟ್ ಅವಕಾಶ ಹಿನ್ನಲೆ ಹಿಂದೂ ಕಾರ್ಯಕರ್ತರಿಂದ ಪೂಜೆ ಸಿದ್ಧತೆ ನಡೆಯುತ್ತಿದೆ. ಈ ಹಿನ್ನೆಲೆ ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು 163 ಅನ್ವಯ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಜೊತೆಗೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನ ನಿಯೋಜಿಸಲಾಗಿದೆ. ಇದನ್ನೂ ಓದಿ: ಕಾಡು ಮಲ್ಲೇಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ – ಮುಂಜಾನೆಯಿಂದಲೇ ಶಿವಲಿಂಗಕ್ಕೆ ರುದ್ರಾಭಿಷೇಕ

    ಕಳೆದ ಮೂರು ವರ್ಷಗಳಿಂದ ಕಲಬುರಗಿ ಜಿಲ್ಲೆ ಆಳಂದ ಪಟ್ಟದ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಪೂಜೆ ಇಡೀ ರಾಜ್ಯದಲ್ಲೆ ದೊಡ್ಡ ಸಂಚಲನ ಮೂಡಿಸಿತ್ತು. ಕಳೆದ ವರ್ಷದಂತೆ ಈ ಬಾರಿ ಸಹ ದರ್ಗಾದ ಆವರಣದಲ್ಲಿರುವ ಶಿವಲಿಂಗಕ್ಕೆ ಮಹಾ ಶಿವರಾತ್ರಿಯಂದು ಪೂಜೆಗೆ ಅವಕಾಶ ಕೋರಿ ಹಿಂದೂಪರ ಸಂಘಟನೆಗಳು ನ್ಯಾಯಲಯದ ಮೊರೆ ಹೋಗಿದ್ದವು. ಆದ್ರೆ ದರ್ಗಾ ಸಮಿತಿಯವರು ಲಾಡ್ಲೇ ಮಶಾಕ್ ದರ್ಗಾದಲ್ಲಿ ಶಿವಲಿಂಗ ಇಲ್ಲ ಪೂಜೆಗೆ ಅವಕಾಶ ಕೋಡಬಾರದು ಅಂತಾ ಅರ್ಜಿ ಸಲ್ಲಿಕೆ ಮಾಡಿದ್ದರು. ಹಿಂದೂಗಳು ಸಲ್ಲಿಸಿದ್ದ ಅರ್ಜಿ ಮತ್ತು ಲಾಡ್ಲೇ ಮಶಾಕ್ ದರ್ಗಾದವರು ಸಲ್ಲಿಸಿದ್ದ ಅರ್ಜಿಯನ್ನ ವಿಚಾರಣೆ ನಡೆಸಿದ ಕೋರ್ಟ್ ಕಮಿಟಿ ರಚಿಸಿತ್ತು. ವಿವಾದಿತ ದರ್ಗಾಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿತ್ತು. ಅದ್ರಂತೆ ಕಮಿಟಿ ದರ್ಗಾಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಿದೆ. ಇದೀಗ ಕೋರ್ಟ್ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 15 ಜನ ಹಿಂದೂಗಳಿಗೆ ಪೂಜೆ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟಿದೆ.

    ವಿವಾದಿತ ದರ್ಗಾದಲ್ಲಿ ಹಿಂದೂಗಳು ಪೂಜೆ ಮಾತ್ರ ಸಲ್ಲಿಸಬೇಕು. ಪೂಜೆಯ ಹೊರತುಪಡಿಸಿ ಬೇರೆ ಯಾವುದೇ ಜಿರ್ಣೋದ್ಧಾರ ಕೆಲಸ ಮಾಡದಂತೆ ಕೋರ್ಟ್ ಸೂಚಿಸಿದೆ. ರಾಜಕೀಯ ನಾಯಕರನ್ನ ಕರೆದೊಯ್ದು ಪೂಜೆ ಮಾಡುವ ಬದಲು ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡುವ ಭಕ್ತರನ್ನು ಕರೆದೊಯ್ಯುವಂತೆ ಸೂಚಿಸಿದೆ. ಈ ಮಧ್ಯೆ ದರ್ಗಾದಲ್ಲಿನ ಶಿವಲಿಂಗ ಜಾಗದ ವಿಚಾರವಾಗಿ ಹಿಂದೂಗಳ ಹೋರಾಟ ಮುಂದುವರೆಯಲಿದೆ ಅಂತಾ ಆಂದೋಲಾ ಶ್ರೀ ಹೇಳಿದ್ದಾರೆ. ಇದನ್ನೂ ಓದಿ: ಶಿವರಾತ್ರಿ ವಿಶೇಷ: ಹಿಂದೂಗಳ ಆದ್ಯ ತೀರ್ಥಕ್ಷೇತ್ರ – ಮಾರಿಷಸ್‌ನ ಮಂಗಲ ಮಹಾದೇವ ಶಿವಾಲಯ!

  • ಲಾಡ್ಲೇ ಮಶಾಕ್ ದರ್ಗಾದ ಶಿವಲಿಂಗ ಪೂಜೆಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ – ಆಂದೋಲಾ ಶ್ರೀಗಿಲ್ಲ ಪೂಜೆ ಭಾಗ್ಯ

    ಲಾಡ್ಲೇ ಮಶಾಕ್ ದರ್ಗಾದ ಶಿವಲಿಂಗ ಪೂಜೆಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ – ಆಂದೋಲಾ ಶ್ರೀಗಿಲ್ಲ ಪೂಜೆ ಭಾಗ್ಯ

    ಕಲಬುರಗಿ: ಆಳಂದದ ವಿವಾದಿತ ಲಾಡ್ಲೇ ಮಶಾಕ್ ದರ್ಗಾದಲ್ಲಿರುವ (Ladley Mashak Dargah) ಶಿವಲಿಂಗಕ್ಕೆ ಶಿವರಾತ್ರಿಯಂದು (Shivaratri) ಪೂಜೆ ಸಲ್ಲಿಸಲು ಹೈಕೋರ್ಟ್‌ ಅನುಮತಿ ನೀಡಿದೆ.

    ಮಹಾಶಿವರಾತ್ರಿಯಂದು ಪೂಜೆ ಸಲ್ಲಿಕೆಗೆ ಅವಕಾಶ ಕೋರಿ ಹಿಂದೂಗಳು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ಕಲಬುರಗಿ (Kalaburagi) ಪೀಠ ಪೂಜೆಗೆ ಅನುಮತಿ ನೀಡಿದೆ. ಫೆ.26ರಂದು ಮಧ್ಯಾಹ್ನ 2:00 ರಿಂದ 6:00ರ ವರೆಗೆ ಪೂಜೆಗೆ ಅವಕಾಶ ನೀಡಿದೆ. ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಹೊರತುಪಡಿಸಿ ಉಳಿದವರಿಗೆ ಪೂಜೆಗೆ ಅವಕಾಶ ನೀಡಿ ನ್ಯಾಯಾಲಯ ಆದೇಶಿಸಿದೆ. ಇದನ್ನೂ ಓದಿ: Haveri | ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ – ಪ್ರಯಾಣಿಕರು ಪಾರು

    ಕಳೆದ ಬಾರಿ ನ್ಯಾಯಾಲಯ ಎರಡು ಸಮುದಾಯದ 15 ಜನರಿಗೆ ಪೂಜೆ ಮತ್ತು ಪ್ರಾರ್ಥನೆಗೆ ಅವಕಾಶ ನೀಡಿತ್ತು. ಬಳಿಕ ಕೋಮು ಗಲಭೆ ಮರುಕಳಿಸದಂತೆ ಕಲಬುರಗಿ ಜಿಲ್ಲಾ ಪೊಲೀಸರು ವ್ಯಾಪಕ ಬಂದೋಬಸ್ತ್ ಕೈಗೊಂಡಿದ್ದರು. ಎರಡು ಧರ್ಮದ ಜನ ನಿರ್ವಿಘ್ನವಾಗಿ ಲಾಡ್ಲೇ ಮಶಾಕ್ ದರ್ಗಾದಲ್ಲಿ ಪೂಜೆ ಸಲ್ಲಿಸಿದ್ದರು. ಇದನ್ನೂ ಓದಿ: ಚಾ.ನಗರ: SSLC, 2nd PUC ಪರೀಕ್ಷೆ – ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ

  • ಕಲಬುರಗಿಯ ದರ್ಗಾ ಆವರಣದಲ್ಲಿ ಹಿಂದೂಗಳಿಂದ ಶಿವರಾತ್ರಿ, ಮುಸ್ಲಿಮರಿಂದ ಉರುಸ್ ಆಚರಣೆ

    ಕಲಬುರಗಿಯ ದರ್ಗಾ ಆವರಣದಲ್ಲಿ ಹಿಂದೂಗಳಿಂದ ಶಿವರಾತ್ರಿ, ಮುಸ್ಲಿಮರಿಂದ ಉರುಸ್ ಆಚರಣೆ

    – ಫೆಬ್ರವರಿ 18, 19ರಂದು ನಿಷೇಧಾಜ್ಞೆ ಜಾರಿ
    – ಅಹಿತಕರ ಘಟನೆ ತಡೆಗೆ ಸಿಟಿಟಿವಿ, ಡ್ರೋನ್ ಕಣ್ಗಾವಲು

    ಕಲಬುರಗಿ: ಇಲ್ಲಿನ ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾದಲ್ಲಿ (Dargah) ಸ್ಥಾಪನೆಯಾಗಿರುವ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸುವ ವಿಚಾರದಲ್ಲಿ ಹಿಂದೂಗಳಿಗೆ ಮತ್ತೊಂದು ಗೆಲುವು ಸಿಕ್ಕಿದೆ.

    ಶಿವಲಿಂಗಕ್ಕೆ ಪೂಜೆ ಸಲ್ಲಿಸುವ ವಿಚಾರವಾಗಿ ವಕ್ಫ್ ಟ್ರಿಬುನಲ್ (Karnataka Wakf Tribunal) ಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ದರ್ಗಾ ಸಮಿತಿಗೆ ಸೋಲಾಗಿದೆ. ಇದನ್ನೂ ಓದಿ: ಕರಾಚಿಯಲ್ಲಿ ಪೊಲೀಸ್ ಮುಖ್ಯಸ್ಥರ ಕಚೇರಿಗೆ ನುಗ್ಗಿದ ಉಗ್ರರು – ಗುಂಡಿನ ದಾಳಿ

    ಶಿವರಾತ್ರಿ (MahaShivaratri) ದಿನದಂದೇ ದರ್ಗಾದಲ್ಲಿ ಉರುಸ್ ಕೂಡ ನಡೆಯಬೇಕಿತ್ತು. ಈ ಹಿನ್ನೆಲೆ ಬೆಳಗ್ಗೆ ಮುಸ್ಲಿಮರು, ಮಧ್ಯಾಹ್ನ 2 ಗಂಟೆ ನಂತರ ಹಿಂದೂಗಳು ಪೂಜೆ ನೆರವೇರಿಸುವಂತೆ ಕಳೆದ 4 ದಿನಗಳ ಹಿಂದೆ ಕಲಬುರಗಿ ವಕ್ಫ್ ಟ್ರಿಬುನಲ್ ಕೋರ್ಟ್ ಆದೇಶಿಸಿತ್ತು. ಆದರೆ ದರ್ಗಾ ಸಮಿತಿ ಇದನ್ನ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು. ಇದನ್ನೂ ಓದಿ: ಕಾಡ್ಗಿಚ್ಚಿಗೆ ಸಿಲುಕಿ ಬೆಂದು ಹೋಗಿದ್ದ ಫಾರೆಸ್ಟ್ ಗಾರ್ಡ್ ಸಾವು

    KALABURAGI DARGA 3

    ನ್ಯಾಯಮೂರ್ತಿ ಜೆ.ಎಮ್ ಖಾಜಿ ನೇತೃತ್ವದ ಏಕಸದಸ್ಯ ಪೀಠವು ಟ್ರಿಬುನಲ್ ಕೋರ್ಟ್ ಆದೇಶ ಪಾಲಿಸುವಂತೆ ಆಳಂದ ಲಾಡ್ಲೇ ಮಶಾಕ್ ದರ್ಗಾ ಸಮಿತಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ವಿವಾದಿತ ದರ್ಗಾ ಆವರಣದಲ್ಲಿ ಮುಸ್ಲಿಮರು ಶನಿವಾರ (ಫೆ.18) ಬೆಳಗ್ಗೆ 8 ರಿಂದ ಮಧ್ಯಾಹ್ನ 2ರ ವರೆಗೆ ಉರುಸ್ ಆಚರಿಸಲಿದ್ದಾರೆ. ನಂತರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಹಿಂದೂಗಳು ದರ್ಗಾ ಆವರಣದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲಿದ್ದಾರೆ.

    ಕೇಂದ್ರ ಸಚಿವ ಭಗವಂತ್ ಖೂಬಾ (Bhagwanth Khuba) ನೇತೃತ್ವದಲ್ಲಿ ಶ್ರೀರಾಮಸೇನೆ (Sri Ram Sena) ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶಾಸಕರಾದ ಬಸವರಾಜ್ ಮತ್ತಿಮೂಡ್, ರಾಜಕುಮಾರ ಪಾಟೀಲ್ ತೆಲ್ಕೂರ್, ಸುಭಾಷ್ ಗುತ್ತೆದಾರ್ ಸೇರಿ ಪೂಜೆ ಸಲ್ಲಿಸಲಿದ್ದಾರೆ.

    KALABURAGI DARGA 5

    ನಿಷೇಧಾಜ್ಷೆ ಜಾರಿ: ಶನಿವಾರ ಮತ್ತು ಭಾನುವಾರ ಮಧ್ಯರಾತ್ರಿ ವರೆಗೆ ಆಳಂದ ಪಟ್ಟಣದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಒಬ್ಬರು ಎಸ್ಪಿ, 9 ಡಿವೈಎಸ್ಪಿ, 73 ಪಿಎಸ್‌ಐ, 26 ಸಿಪಿಐ, 90 ಎಎಸ್‌ಐ, 11 ಕೆಎಸ್‌ಆರ್‌ಪಿ ತುಕಡಿ, 4 ಕ್ವಿಕ್ ರೆಸ್ಪಾನ್ಸ್ ಟೀಂ, 5 ಡಿಎಆರ್ ತುಕಡಿ ಸೇರಿದಂತೆ ಸಾವಿರಕ್ಕೂ ಅಧಿಕ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಅಲ್ಲದೇ ದರ್ಗಾ ಸುತ್ತ ಅತ್ಯಾಧುನಿಕ ಸಿಸಿ ಕ್ಯಾಮೆರಾ, 10 ಡ್ರೋನ್ ಕ್ಯಾಮೆರಾಗಳ ಮೂಲಕ ಚಲನವಲನ ವೀಕ್ಷಣೆ ಮಾಡಲಾಗುತ್ತಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k