Tag: Hindu merchants

  • ಇತಿಹಾಸ ಪ್ರಸಿದ್ಧ ಬನವಾಸಿ ಮಧುಕೇಶ್ವರ ರಥೋತ್ಸವಕ್ಕೆ ಹಿಂದೂಯೇತರ ವ್ಯಾಪಾರಿಗಳಿಗೆ ನಿರ್ಬಂಧ

    ಇತಿಹಾಸ ಪ್ರಸಿದ್ಧ ಬನವಾಸಿ ಮಧುಕೇಶ್ವರ ರಥೋತ್ಸವಕ್ಕೆ ಹಿಂದೂಯೇತರ ವ್ಯಾಪಾರಿಗಳಿಗೆ ನಿರ್ಬಂಧ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯ ಉಮಾಮಧುಕೇಶ್ವರ ದೇವರ ರಥೋತ್ಸವದಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ  ನಿರ್ಬಂಧ ವಿಧಿಸಲಾಗಿದೆ.

    ಇತಿಹಾಸ ಪ್ರಸಿದ್ಧ ಬನವಾಸಿಯ ಉಮಾಮಧುಕೇಶ್ವರ ದೇವರ ರಥೋತ್ಸವ ಏ.11, 12 ರಂದು ನಡೆಯಲಿದೆ. ಈ ವೇಳೆ ದೇವಸ್ಥಾನದ ಸಮೀಪದ ಕಟ್ಟಡ ಅಥವಾ ನಿವೇಶನಗಳಲ್ಲಿ ಹಿಂದೂಯೇತರರಿಗೆ ಮಳಿಗೆ ಗುತ್ತಿಗೆ ಅಥವಾ ಬಾಡಿಗೆ ನೀಡದಿರಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿರ್ಧರಿಸಿದ್ದು, ದೇವಸ್ಥಾನದ ಆವರಣದಲ್ಲಿ ಬ್ಯಾನರ್ ಅಳವಡಿಸಿದೆ. ಇದನ್ನೂ ಓದಿ: ಜನಾಂಗ, ಧರ್ಮ, ಪಕ್ಷವನ್ನು ಬದಿಗಿರಿಸಿ ದೇಶಕ್ಕಾಗಿ ಒಂದಾಗಿ: ಮುತ್ತಯ್ಯ ಮುರುಳೀಧರನ್

    ದೇವಸ್ಥಾನದ ಸಮೀಪದ ಜಮೀನು ಕಟ್ಟಡ ಅಥವಾ ನಿವೇಶನಗಳು ಸೇರಿದಂತೆ ಯಾವುದೇ ಸ್ವತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆಗೆ ನೀಡತಕ್ಕದ್ದಲ್ಲ ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದ್ದು, ರಥೋತ್ಸವದ ಸಂದರ್ಭದಲ್ಲಿ ನೂರಾರು ಮಳಿಗೆಗಳನ್ನು ತೆರೆಯಲಾಗುತ್ತದೆ. ಆದರೆ, ಈ ಬಾರಿ ಹಿಂದೂ ಧರ್ಮೀಯರಿಗೆ ಮಾತ್ರ ಅವಕಾಶ ನೀಡುವುದಾಗಿ ಸಮಿತಿ ತಿಳಿಸಿದ್ದು ಇದೀಗ ಮುಸ್ಲಿಂ ಹೊರತಾಗಿಯೂ ಇತರೆ ಜನಾಂಗದವರಿಗೂ ಇದರ ಬಿಸಿ ತಟ್ಟಲು ಪ್ರಾರಂಭಿಸಿದೆ. ಇದನ್ನೂ ಓದಿ: ಬೆಳಗಾವಿ ಜಿಲ್ಲೆ ವಿಭಜನೆ ಮಾಡುವಂತೆ ಮತ್ತೆ ಉಮೇಶ ಕತ್ತಿ ಒತ್ತಾಯ

    ಸೋಮವಾರ ದಿನ ವಿವಿಧ ಹಿಂದೂ ಸಂಘಟನೆಯವರು ದೇವಸ್ಥಾನದ ಆಡಳಿತಮಂಡಳಿಯವರನ್ನು ಸಂಪರ್ಕಿಸಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ನಿಯಮದ ಅನ್ವಯ ಹಿಂದೂಯೇತರರಿಗೆ ಅವಕಾಶ ನೀಡಬಾರದು ಎಂದು ಮನವಿ ನೀಡಿತ್ತು. ಈ ಹಿನ್ನಲೆಯಲ್ಲಿ ದೇವಸ್ಥಾನದ ವ್ಯವಸ್ಥಾಪಕ ಸಮಿತಿ ಈ ನಿರ್ಧಾರವನ್ನು ಕೈಗೊಂಡಿದೆ.

  • ಉಪ್ಪಿನಂಗಡಿಯ ಹಿಂದೂ ಮಾಲೀಕತ್ವದ ಅಂಗಡಿಗಳ ಬಗ್ಗೆ ಅಪಪ್ರಚಾರ, ದೂರು ದಾಖಲು

    ಉಪ್ಪಿನಂಗಡಿಯ ಹಿಂದೂ ಮಾಲೀಕತ್ವದ ಅಂಗಡಿಗಳ ಬಗ್ಗೆ ಅಪಪ್ರಚಾರ, ದೂರು ದಾಖಲು

    ಮಂಗಳೂರು: ದ.ಕ ಜಿಲ್ಲೆಯ ಉಪ್ಪಿನಂಗಡಿಯ ಹಿಂದೂ ಮಾಲೀಕತ್ವದ ಅಂಗಡಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರದ ಸಂದೇಶವೊಂದು ಹರಿದಾಡುತ್ತಿದೆ.

    ಉಪ್ಪಿನಂಗಡಿಯ 32 ಹಿಂದೂ ಅಂಗಡಿಗಳ ಹೆಸರು ಉಲ್ಲೇಖಿಸಿ ಅಪಪ್ರಚಾರ ಮಾಡಲಾಗಿದೆ. ಹಿಂದೂ ವರ್ತಕರ ಬೇಕರಿ, ಮೆಡಿಕಲ್, ಸಲೂನ್, ಜನರಲ್ ಸ್ಟೋರ್‌ಗಳ ಹೆಸರಲ್ಲಿ ಸಂದೇಶ ವೈರಲ್ ಆಗಿದೆ. ನಗರದ ವರ್ತಕರ ಸಂಘವು ನಕಲಿ ಸಂದೇಶ ಪ್ರಕಟಿಸಿದ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದೆ. ಇದನ್ನೂ ಓದಿ: ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಗೆ ಸ್ವಾಗತ: ಡಿಕೆಶಿ

    ಎಲ್ಲಾ ಸಮುದಾಯದವರು ನಮ್ಮ ಗ್ರಾಹಕರು.ಇದನ್ನು ಹಾಳು ಮಾಡುವ ರೀತಿ ಸಂದೇಶ ಕಳುಹಿಸಲಾಗಿದೆ. ಮತೀಯ ಸಾಮರಸ್ಯ ಹಾಳು ಮಾಡುವವರ ವಿರುದ್ಧ ಹಿಂದೂ ವರ್ತಕರ ಸಂಘವು ಕ್ರಮಕ್ಕೆ ಆಗ್ರಹಿಸಿದೆ. ಇದನ್ನೂ ಓದಿ: ಮಾತುಬಾರದ ಬಾಲಕನ ಕೊಂದು ಗೋಣಿ ಚೀಲದಲ್ಲಿ ತುಂಬಿ ಎಸೆದ್ರು

    ದೂರಿನಲ್ಲಿ ಏನಿದೆ?
    ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಶಾಂತಿ ಭಂಗ ಹಾಗೂ ಮತೀಯ ದ್ವೇಷ ಮೂಡಿಸುವ ರೀತಿಯಲ್ಲಿ ದುಷ್ಕರ್ಮಿಗಳು ಸಂದೇಶವೊಂದನ್ನು ಸೃಷ್ಟಿಸಿಕೊಂಡು ಸಮಾಜದಲ್ಲಿ ದ್ವೇಷ ಮೂಡಿಸುವ ತನ್ಮೂಲಕ ವ್ಯವಹಾರಿಕ ತೊಂದರೆಯೊಡ್ಡುವ ಕೃತ್ಯವನ್ನು ಎಸಗಿರುತ್ತಾರೆ. ಈ ಸಂದೇಶದಲ್ಲಿ ಹಿಂದೂ ವರ್ತಕರ ಒಕ್ಕೂಟ ಉಪ್ಪಿನಂಗಡಿ ಎಂದು ಉಲ್ಲೇಖಿಸಿ ನಮ್ಮ ಅಂಗಡಿಗಳ ಹೆಸರನ್ನು ಸೇರಿದಂತೆ ಒಟ್ಟು 32 ಹಿಂದೂ ಸಮುದಾಯದ ಅಂಗಡಿಗಳ ಹೆಸರನ್ನು ಬಳಸಿ ‘ನಮ್ಮ ಅಂಗಡಿಗಳಿಂದ ಯಾವುದೇ ಸಾಮಗ್ರಿಗಳನ್ನು ಮುಸ್ಲಿಮರಿಗೆ ಕೊಡುವುದಿಲ್ಲ. ನಮಗೆ ಹಿಂದೂ ಸಹೋದರರ ವ್ಯಾಪಾರ ಧಾರಾಳ’ ಎಂಬಿತ್ಯಾದಿ ಮತೀಯ ದ್ವೇಷದ ವಾಕ್ಯಗಳನ್ನು ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ರೀತಿಯ ಸಂದೇಶ ಕಳುಹಿಸಿ ಮತೀಯ ಸಾಮರಸ್ಯ ಹಾಳು ಮಾಡುವವರ ವಿರುದ್ದ ಕ್ರಮ ಕೈಗೊಳ್ಳಬೇಕು.