Tag: hindu leader

  • ಹೈಕೋರ್ಟ್‌ ಆದೇಶ ಉಲ್ಲಂಘನೆ – ವಿಶ್ವ ಹಿಂದೂ ಪರಿಷತ್​ ಮುಖಂಡ ಶರಣ್ ಪಂಪ್ ವೆಲ್‌ಗೆ 2 ಲಕ್ಷ ದಂಡ

    ಹೈಕೋರ್ಟ್‌ ಆದೇಶ ಉಲ್ಲಂಘನೆ – ವಿಶ್ವ ಹಿಂದೂ ಪರಿಷತ್​ ಮುಖಂಡ ಶರಣ್ ಪಂಪ್ ವೆಲ್‌ಗೆ 2 ಲಕ್ಷ ದಂಡ

    ಚಿತ್ರದುರ್ಗ: ಹೈಕೋರ್ಟ್‌ ಆದೇಶ ಉಲ್ಲಂಘನೆ ಹಿನ್ನೆಲೆ ವಿಶ್ವ ಹಿಂದೂ ಪರಿಷತ್​​ ಸಹ ಕಾರ್ಯದರ್ಶಿ ಶರಣ್ ಪಂಪ್​​ವೆಲ್​​ಗೆ (Sharan Pumpwell) ಹೈಕೋರ್ಟ್ 2 ಲಕ್ಷ ರೂ. ದಂಡ (Court Fine) ವಿಧಿಸಿದೆ.

    ರಾಜ್ಯ ಲೀಗಲ್ ಸರ್ವೀಸ್ ಅಥಾರಿಟಿಗೆ 1 ಲಕ್ಷ ರೂ, ಮತ್ತು ಪೊಲೀಸ್ ಕ್ಷೇಮಾಭಿವೃದ್ಧಿ ನಿಧಿಗೆ 1 ಲಕ್ಷ ರೂ ನೀಡಲು ಬುಧವಾರ ಕೋರ್ಟ್‌ (Karnataka Highcourt) ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: ಗೆಳೆಯನ ಬರ್ತ್‌ಡೇ ಸಂಭ್ರಮದಲ್ಲಿದ್ದ ಯುವಕ ಹೊಳೆಗೆ ಕಾಲುಜಾರಿ ಬಿದ್ದು ನೀರುಪಾಲು 

    ಇತ್ತೀಚೆಗೆ ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಹಿನ್ನಲೆ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಡಳಿತ ಶರಣ್ ಪಂಪ್​​ವೆಲ್​​ಗೆ ನಿರ್ಬಂಧ ವಿಧಿಸಿತ್ತು. ಈ ನಿರ್ಬಂಧ ಪ್ರಶ್ನಸಿ ಶರಣ್ ಪಂಪ್​​ವೆಲ್​​ ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ಕೆಲ ಷರತ್ತು ವಿಧಿಸಿ ಜಿಲ್ಲಾಡಳಿತದ ನಿರ್ಬಂಧವನ್ನು ಹೈಕೋರ್ಟ್ ತೆರವುಗೊಳಿಸಿತ್ತು. ಇದನ್ನೂ ಓದಿ: `ಬಿಗ್ ಬಾಸ್’ಗೆ ರಿಲೀಫ್ ಕೊಡುತ್ತಾ ಸರ್ಕಾರ? – ಜಿಲ್ಲಾಡಳಿತಕ್ಕೆ ಜಾಲಿವುಡ್ ಕೊಟ್ಟ ಅರ್ಜಿಯಲ್ಲಿ ಏನಿದೆ..?

    ಸೆ.13ರಂದು ಮಹಾಗಣಪತಿ ಶೋಭಾಯಾತ್ರೆ ವೇಳೆ ದರ್ಶನಕ್ಕೆ ಅವಕಾಶ ಕಲ್ಪಿಸಿತ್ತು. ಅಂದು ಬೆಳಗ್ಗೆ 10:30 ರಿಂದ 12:30ರ ವರೆಗೆ ದರ್ಶನಕ್ಕೆ ಕೋರ್ಟ್‌ ಅವಕಾಶ ಕಲ್ಪಿಸಿತ್ತು. ಆದ್ರೆ ಪಂಪ್‌ವೆಲ್‌ 12:45ರ ವರೆಗೆ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ಅಲ್ಲದೇ ಶೋಭಾಯಾತ್ರೆಯಲ್ಲಿ ಭಾಷಣ ಕೂಡ ಮಾಡಿದ್ದರು. ಇದರಿಂದ ಆದೇಶ ಉಲ್ಲಂಘನೆ ಬಗ್ಗೆ ಪೊಲೀಸರು ಹೈಕೋರ್ಟ್‌ ಗಮನಕ್ಕೆ ತಂದಿದ್ದರು. ಬಳಿಕ ಆದೇಶ ಉಲ್ಲಂಘಿಸಿದ್ದಕ್ಕೆ ಹೈಕೋರ್ಟ್ ದಂಡ ವಿಧಿಸಿ ಆದೇಶ ಹೊರಡಿಸಿತು. ಇದನ್ನೂ ಓದಿ: ಬಿಗ್‌ ಬಾಸ್‌ ತಂಡಕ್ಕೆ ಮತ್ತೆ ಶಾಕ್‌ – ಕೆಲವೇ ಹೊತ್ತಲ್ಲಿ ಈಗಲ್‌ಟನ್ ರೆಸಾರ್ಟ್‌ನಿಂದ 17 ಸ್ಪರ್ಧಿಗಳು ಶಿಫ್ಟ್ ಬೇರೆಡೆಗೆ ಶಿಫ್ಟ್‌

  • ರಾಮಮಂದಿರ ಕಟ್ಟೋದ್ರಿಂದ ಹಿಂದೂ ನಾಯಕನಾಗಲು ಸಾಧ್ಯವಿಲ್ಲ: ಮೋಹನ್‌ ಭಾಗವತ್‌

    ರಾಮಮಂದಿರ ಕಟ್ಟೋದ್ರಿಂದ ಹಿಂದೂ ನಾಯಕನಾಗಲು ಸಾಧ್ಯವಿಲ್ಲ: ಮೋಹನ್‌ ಭಾಗವತ್‌

    – ಹೊಸ ಮಂದಿರ-ಮಸೀದಿ ವಿವಾದದಿಂದ ಬಹುತ್ವ ಭಾರತಕ್ಕೆ ಪೆಟ್ಟು ಎಂದ ಆರ್‌ಎಸ್‌ಎಸ್‌ ಮುಖ್ಯಸ್ಥ

    ಮುಂಬೈ: ರಾಮಮಂದಿರ (Ram Mandir) ಕಟ್ಟುವ ಮೂಲಕ ಹಿಂದೂ ನಾಯಕನಾಗಲು ಸಾಧ್ಯವಿಲ್ಲ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ (Mohan Bhagwat) ಹೇಳಿದ್ದಾರೆ.

    ಪುಣೆ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವಗುರು ಭಾರತ್ (Vishwaguru India) ಎಂಬ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಳಿಕ, ಹೊಸ ಮಂದಿರ-ಮಸೀದಿ ವಿವಾದಗಳನ್ನು ಉದ್ದೇಶಪೂರ್ವಕವಾಗಿ ಹುಟ್ಟುಹಾಕಲಾಗುತ್ತಿದೆ. ಇಂತಹ ವಿವಾದಗಳನ್ನು ಸೃಷ್ಟಿಸುವ ಮೂಲಕ ಕೆಲವರು ತಾವು ಹಿಂದೂ ನಾಯಕ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದರಿಂದ ಸಮಾಜಕ್ಕಾಗುವ ಹಾನಿಯನ್ನು ನಾವು ಅರಿಯಬೇಕಿದೆ. ರಾಮಮಂದಿರ ಕಟ್ಟುವ ಮೂಲಕ ಹಿಂದೂ ನಾಯಕನಾಗಲು ಸಾಧ್ಯವಿಲ್ಲ. ರಾಮಮಂದಿರ ಭಾರತೀಯರ ನಂಬಿಕೆ, ಹಿಂದೂಗಳ ನಂಬಿಕೆಯ ವಿಷಯವಾಗಿದೆ ಎಂದಿದ್ದಾರೆ.

    ದೇಶದಲ್ಲಿ ಯುಗಯುಗಾಂತರಗಳಿಂದ ವಿವಿಧ ಧರ್ಮ, ಜಾತಿ, ಮತ, ಮತ, ಸಿದ್ಧಾಂತಗಳ ಜನರು ಸೌಹಾರ್ದತೆಯಿಂದ ಬಾಳುತ್ತಿದ್ದಾರೆ. ಅದಕ್ಕಾಗಿಯೇ ನಾವು ವಿಭಜನೆಯ ಭಾಷೆಯನ್ನು ಬಿಟ್ಟು, ಅಲ್ಪಸಂಖ್ಯಾತ-ಬಹುಸಂಖ್ಯಾತ ತಾರತಮ್ಯ ಮರೆತು ಹೋರಾಡಬೇಕು. ನಮ್ಮ ಅಂತರ್ಗತ ಸಂಸ್ಕೃತಿಯ ಅಡಿಯಲ್ಲಿ ನಾವು ಒಂದಾಗಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಬೆಳಗಾವಿ ಕೋರ್ಟ್ ಹಾಲ್‌ನಲ್ಲಿ ಕಣ್ಣೀರಿಟ್ಟ ಸಿ.ಟಿ ರವಿ – ಜಾಮೀನಿಗೆ ವಕೀಲರ ಮನವಿ, ಆದೇಶ ಕಾಯ್ದಿರಿಸಿದ ಕೊರ್ಟ್

    ಭಾರತ ದೇಶವಿಂದು ಪ್ರಗತಿ ಹೊಂದುತ್ತಿದೆ, ಅದರಂತೆ ನೈತಿಕ ಹಾದಿಯಲ್ಲಿ ದಾಪುಗಾಲು ಹಾಕುವ ಅಗತ್ಯವಿದೆ. ಎಲ್ಲರನ್ನೂ ಒಳಗೊಳ್ಳುವ ಸಮಾಜಕ್ಕಾಗಿ ನಾವು ಪ್ರತಿಪಾದನೆ ಮಾಡಬೇಕಿದೆ. ಅದು ಸಂಭವಿಸಿದ್ರೆ, ಮುಂದಿನ 20 ವರ್ಷಗಳಲ್ಲಿ ನಾವು ವಿಶ್ವಗುರು ಸ್ಥಾನಮಾನ ಸಾಧಿಸಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಟಿ ರವಿ ಹೇಳಿಕೆ ಸತ್ಯಶೋಧನೆ ಆಗುವ ಮೊದಲು ಯಾವ್ದೇ ನಿರ್ಧಾರಕ್ಕೆ ಬರೋದು ತಪ್ಪು: ಬೊಮ್ಮಾಯಿ

    ದೇಶವು ಸಾಮರಸ್ಯದಿಂದ ಬದುಕಬಹುದು ಎಂಬುದನ್ನು ನಾವು ಜಗತ್ತಿಗೆ ತೋರಿಸಬೇಕಾಗಿದೆ. ಭಾರತೀಯ ಸಮಾಜದ ಬಹುತ್ವವನ್ನು ಎತ್ತಿ ಹಿಡಿಯುವ ಕೆಲಸ ಸಮಸ್ತ ಭಾರತೀಯರದ್ದಾಗಿದೆ. ಮಂದಿರ-ಮಸೀದಿ ವಿವಾದಗಳು ಈ ಪ್ರಯತ್ನಕ್ಕೆ ಮುಳುವಾಗಿವೆ. ರಾಮ ಮಂದಿರ ಹಿಂದೂಗಳ ನಂಬಿಕೆಯ ವಿಷಯವಾಗಿದ್ದರಿಂದ, ಅದರ ನಿರ್ಮಾಣಕ್ಕಾಗಿ ಸಂಘವು ಅವಿರತ ಪ್ರಯತ್ನ ನಡೆಸಿತು. ಆದರೆ ಈಗ ರಾಜಕೀಯ ಲಾಭಕ್ಕಾಗಿ ಹೊಸದಾಗಿ ಸೃಷ್ಟಿಸಲಾಗುತ್ತಿರುವ ಮಂದಿರ-ಮಸೀದಿ ವಿವಾದಗಳು ಸಂಘಕ್ಕೆ ಸ್ವೀಕಾರ್ಹವಲ್ಲ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಅಮಿತ್‌ ಶಾ ಹೇಳಿಕೆ ಗದ್ದಲ, ಕಾಂಗ್ರೆಸ್‌ ಪ್ರತಿಭಟನೆ; ಅಧಿವೇಶನದ ಕೊನೆಯ ದಿನವೂ ಕಲಾಪ ಮುಂದೂಡಿಕೆ! 

  • ಹಿಂದೂ ನಾಯಕನ ತಲೆಗೆ ಗುಂಡಿಕ್ಕಿ ಬರ್ಬರ ಹತ್ಯೆ

    ಹಿಂದೂ ನಾಯಕನ ತಲೆಗೆ ಗುಂಡಿಕ್ಕಿ ಬರ್ಬರ ಹತ್ಯೆ

    ಲಕ್ನೋ: ಶನಿವಾರ ತಾನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ವಿಶ್ವ ಹಿಂದೂ ಮಹಾಸಭಾ ನಾಯಕನನ್ನು ತಲೆಗೆ ಗುಂಡಿಕ್ಕಿ ಇಂದು ಉತ್ತರ ಪ್ರದೇಶದ ಲಕ್ನೋದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

    ಕೊಲೆಯಾದ ಹಿಂದೂ ನಾಯಕನನ್ನು ರಂಜಿತ್ ಬಚ್ಚನ್ ಎಂದು ಗುರುತಿಸಲಾಗಿದೆ. ಇಂದು ತನ್ನ ಸಂಬಂಧಿ ಅದಿತ್ಯ ಜೊತೆಗೆ ಹೊರಗೆ ಬಂದ ರಂಜಿತ್ ಬಚ್ಚನ್ ಅವರನ್ನು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ತಲೆಗೆ ಗುಂಡಿಕ್ಕಿ ಕೊಂದು ಹಾಕಿದ್ದಾರೆ. ಈ ಘಟನೆಯಲ್ಲಿ ಅದಿತ್ಯ ಅವರೂ ಕೂಡ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕತ್ಸೆ ಕೊಡಿಸಲಾಗುತ್ತಿದೆ.

    ವಾಕಿಂಗ್ ಮಾಡುತ್ತಿದ್ದ ರಂಜೀತ್ ಬಚ್ಚನ್ ಅವರ ಬಳಿ ಬಂದ ಹಲ್ಲೆ ಮಾಡಿದ ಆರೋಪಿ, ಮೊದಲು ಕರೆ ಮಾಡಲು ಫೋನ್ ಕೇಳಿದ್ದಾನೆ. ಅವರು ಕೊಟ್ಟಿಲ್ಲ. ಇದಾದ ನಂತರ ತನ್ನ ಬಳಿ ಇದ್ದ ಪಿಸ್ತೂಲ್‍ನಿಂದ ರಂಜಿತ್ ಬಚ್ಚನ್ ಅವರ ತಲೆಗೆ ಗುಂಡು ಹಾರಿಸಿದ್ದಾನೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ರಂಜಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಎಸಿಪಿ ಅಭಯ್ ಮಿಶ್ರಾ ಮಾಹಿತಿ ನೀಡಿದ್ದಾರೆ.

    ಈ ವೇಳೆ ಮಾತನಾಡಿದ ರಂಜಿತ್ ಬಚ್ಚನ್ ಅವರ ಸಹೋದರ ಸಂಬಂಧಿ ಮನೋಜ್ ಕುಮಾರ್ ಶರ್ಮಾ, ರಂಜಿತ್ ಅವರು ಶನಿವಾರ ತನ್ನ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಇದರ ಜೊತೆಗೆ ಸಿಎಎ ಮತ್ತು ಎನ್.ಆರ್.ಸಿಗೆ ಬೆಂಬಲಿಸುವ ಪಾರ್ಟಿಯನ್ನು ಆಯೋಜಿಸಿದ್ದರು ಎಂದು ತಿಳಿಸಿದ್ದಾರೆ. ರಂಜಿತ್ ಬಚ್ಚನ್ ಅವರ ಸಾವಿನ ಸುದ್ದಿ ತಿಳಿದ ಅವರ ಬೆಂಬಲಿಗರು ಪೊಲೀಸ್ ಠಾಣೆಯ ಮುಂದೆ ಪೊಲೀಸರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡಿದ್ದಾರೆ.

    ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಹಿಂದೂ ನಾಯಕರ ಸರಣಿ ಹತ್ಯೆ ನಡೆಯುತ್ತಿದ್ದು, ಕಳೆದ ನಾಲ್ಕು ತಿಂಗಳಲ್ಲಿ ಇಬ್ಬರು ಹಿಂದೂ ನಾಯಕರನ್ನು ಕೊಲೆ ಮಾಡಲಾಗಿದೆ. ಹೀಗೆ ಕಳೆದ ಆಕ್ಟೋಬರ್ ನಲ್ಲಿ ಹಿಂದೂ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಕಮಲೇಶ್ ತಿವಾರಿ ಅವರನ್ನು ಅವರ ನಿವಾಸದಲ್ಲಿ ಹತ್ಯೆ ಮಾಡಲಾಗಿತ್ತು.

  • ಇಬ್ಬರು ಮಾಸ್ಟರ್ ಮೈಂಡ್‍ಗಳಿಗಾಗಿ ಹುಡುಕಾಟ

    ಇಬ್ಬರು ಮಾಸ್ಟರ್ ಮೈಂಡ್‍ಗಳಿಗಾಗಿ ಹುಡುಕಾಟ

    ಬೆಂಗಳೂರು: ಸಿಲಿಕಾನ್ ಸಿಟಿಯನ್ನು ಬ್ಲಾಸ್ಟ್ ಮಾಡಬೇಕು, ಹಿಂದೂ ಮುಖಂಡರ ಹತ್ಯೆ ಮಾಡಬೇಕು ಅಂತ ಅಂದುಕೊಂಡಿದ್ದ ತಂಡವನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಮೆಹಬೂಬ್ ಪಾಷಾ ಬಾಯಿಬಿಟ್ಟಿರೋ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

    ಅದು ಕೂಡ ಮುಖ್ಯಮಂತ್ರಿಗಳ ಜಿಲ್ಲೆ ಶಿವಮೊಗ್ಗದಲ್ಲಿ. ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಇಬ್ಬರು ಮಾಸ್ಟರ್ ಮೈಂಡ್ ಗಳು ಇದ್ದಾರೆ ಅನ್ನೋ ಮಾಹಿತಿಯನ್ನು ಮೆಹಬೂಬ್ ಪಾಷಾ ಬಾಯಿ ಬಿಟ್ಟಿದ್ದಾನೆ. ಮೆಹಬೂಬ್ ಪಾಷಾ ಕೇವಲ ಹುಡುಗರನ್ನು ನೇಮಕಾತಿ ಮಾಡಿಕೊಳ್ಳೋದು ಟ್ರೈನಿಂಗ್ ಕೊಡಿಸೋದು ಅಷ್ಟೇ. ತೀರ್ಥಹಳ್ಳಿಯಲ್ಲಿ ಇದ್ದವರು ಯಾವ ರೀತಿ ಕೆಲಸ ಮುಗಿಸಿಬೇಕು ಅಂತ ತೀರ್ಮಾನ ಮಾಡುತ್ತಾ ಇದ್ದರು. ಇದನ್ನೂ ಓದಿ: ಒಂದು ಹತ್ಯೆ ಯತ್ನ – ಆರು ಕೇಸ್ ರೀ ಓಪನ್

    ಶ್ರೀಲಂಕಾದ ಬ್ಲಾಸ್ಟ್ ನಲ್ಲಿ ಪಾಲ್ಗೊಂಡಿದ್ದ ಸಂಘಟನೆಯವರೇ ಇದರಲ್ಲೂ ಇದ್ದಾರೆ ಅನ್ನೋ ಅನುಮಾನ ಕಾಡುತ್ತಾ ಇದೆ. ಮೆಹಬೂಬ್ ಪಾಷಾ ಬಂಧನವಾದ ಕೂಡಲೇ ತೀರ್ಥಹಳ್ಳಿಯ ಇಬ್ಬರು ಪರಾರಿಯಾಗಿದ್ದಾರೆ. ಸದ್ಯ ಆ ಇಬ್ಬರು ಸಿಕ್ಕರೆ ಸ್ಫೋಟಕ ಮಾಹಿತಿ ಬಹಿರಂಗವಾಗಲಿದೆ. ಇದನ್ನೂ ಓದಿ: ಒಬ್ಬ ಹಿಂದೂ ಆಗಿ ಸಾಯೋದಕ್ಕೆ ಹೆದರಿ ಬದುಕುವ ಜೀವ ನನ್ನದಲ್ಲ: ಸೂಲಿಬೆಲೆ