Tag: Hindu jagarana vedike

  • ಕೊಡಗು | ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಗೂಡ್ಸ್‌ ವಾಹನ ಪಲ್ಟಿ

    ಕೊಡಗು | ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಗೂಡ್ಸ್‌ ವಾಹನ ಪಲ್ಟಿ

    ಮಡಿಕೇರಿ: ಅಕ್ರಮವಾಗಿ ಗೋವುಗಳನ್ನು (Cows) ಸಾಗಿಸುತ್ತಿದ್ದ ಗೂಡ್ಸ್‌ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಕೊಡಗು (Kodagu) ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ರಸ್ತೆಯಲ್ಲಿನ ಕಾಗಡಿಕಟ್ಟೆ ಬಳಿ ಇಂದು ಬೆಳಗ್ಗಿನ ಜಾವ 2:30 ಗಂಟೆ ಸುಮಾರಿಗೆ ನಡೆದಿದೆ.

    ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನ ಸಂಖ್ಯೆ KA13-B 3078ರಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಅಪಘಾತದಲ್ಲಿ ಮೂರು ಗೋವುಗಳು ಗಾಯಗೊಂಡಿವೆ. ಘಟನೆಯಲ್ಲಿ ಗಾಯಗೊಂಡಿದ್ದ ಇಬ್ಬರು ಆರೋಪಿಗಳನ್ನು ತಡರಾತ್ರಿಯೇ ಬೆರೆಡೆಗೆ ಸಾಗಿಸಲಾಗಿದೆ. ಆರೋಪಿಕಡೆಯವರು ಇನ್ನೋವಾ ಕಾರಿನಲ್ಲಿ ಬೇರೆಡೆಗೆ ಸಾಗಿಸಿದ್ದಾರೆ.

    ಅಪಘಾತದ (Accident) ಬಳಿಕ ಕೊಡಗಿನಲ್ಲಿ ಗೋವುಗಳ ಅಕ್ರಮ ಸಾಗಾಟ ಹಾಗೂ ಹಾಗೂ ಗೋಹತ್ಯೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಪೊಲೀಸರು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದಾರೆ.

    ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ
    ಘಟನೆ ಬಳಿಕ, ತಪ್ಪಿತಸ್ಥರ ವಿರುದ್ಧ ಪೊಲೀಸ್‌ ಇಲಾಖೆ ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೇ ಕ್ರಮ ಕೈಗೊಳ್ಳಬೇಕು. ಇಲ್ಲಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂದು ಜಾಗರಣ ವೇದಿಕೆ ಮುಖಂಡ ಬೋಜೆಗೌಡ ಎಚ್ಚರಿಸಿದ್ದಾರೆ.

  • ಮಂಗಳೂರು | ಹಿಂದೂ ಮುಖಂಡನ ಮೊಬೈಲ್‍ನಲ್ಲಿ ಕರಾವಳಿ ರಾಜಕಾರಣಿಯ 50 ಅಶ್ಲೀಲ ವಿಡಿಯೋ!

    ಮಂಗಳೂರು | ಹಿಂದೂ ಮುಖಂಡನ ಮೊಬೈಲ್‍ನಲ್ಲಿ ಕರಾವಳಿ ರಾಜಕಾರಣಿಯ 50 ಅಶ್ಲೀಲ ವಿಡಿಯೋ!

    ಮಂಗಳೂರು: ಹಿಂದೂ ಮುಖಂಡನ ಮೊಬೈಲ್‍ನಲ್ಲಿ (Mobile) ಕರಾವಳಿಯ ರಾಜಕಾರಣಿಯೊಬ್ಬರ 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ.

    ಹಿಂದೂ ಜಾಗರಣಾ ವೇದಿಕೆ (Hindu Jagarana Vedike) ದಕ್ಷಿಣ ಕನ್ನಡ (Dakshina Kannda) ಜಿಲ್ಲಾ ಸಹಸಂಯೋಜಕ ಸಮಿತ್ ರಾಜ್ ದರೆಗುಡ್ಡೆ ಮೊಬೈಲ್‍ನಲ್ಲಿ ವಿಡಿಯೋಗಳು ಪತ್ತೆಯಾಗಿವೆ. ಮಂಗಳೂರು (Mangaluru) ಪೊಲೀಸರು ಪ್ರಕರಣವೊಂದರ ತನಿಖೆ ನಡೆಸುವಾಗ ವಿಡಿಯೋಗಳು ಪತ್ತೆಯಾಗಿವೆ. ಇದನ್ನೂ ಓದಿ: ಲೇಡಿಸ್ ಬಾರ್‌ಗಳಲ್ಲಿ ನಿಯಮ ಉಲ್ಲಂಘನೆ – ಪ್ರತಿದಿನ ಸಿಸಿಟಿವಿ ಫೂಟೇಜ್ ಕೊಡುವಂತೆ ಸಿಸಿಬಿ ರೂಲ್ಸ್

    ಅಪಘಾತವೆಸಗಿದ ಖಾಸಗಿ ಬಸ್‍ಗೆ ಕಲ್ಲು ತೂರಿ ಹಾನಿಗೊಳಿಸಿದ ಪ್ರಕರಣದಲ್ಲಿ ಸಮಿತ್‍ನನ್ನು ಮೂಡಬಿದ್ರೆ ಪೊಲೀಸರು ಬಂಧಿಸಿದ್ದರು. ಪ್ರಕರಣದ ಹೆಚ್ಚಿನ ತನಿಖೆಗಾಗಿ ಮೊಬೈಲ್ ವಶಕ್ಕೆ ಪಡೆದಿದ್ದರು. ದತ್ತಾಂಶಗಳನ್ನು ಪಡೆಯಲು ಕೋರ್ಟ್ ಮತ್ತು ಮೇಲಾಧಿಕಾರಿ ಅನುಮತಿ ಪಡೆಯಲಾಗಿತ್ತು. ಅನುಮತಿಯ ಬಳಿಕ ಮಂಗಳೂರಿನ ಸೆನ್ ಲ್ಯಾಬ್‍ನಲ್ಲಿ ಡಾಟಾ Extract ವೇಳೆ 50ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಇರುವುದು ಪತ್ತೆಯಾಗಿದೆ. ಇದರ ಬೆನ್ನಲ್ಲೇ ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ದೂರು ನೀಡಿದ್ದು, ಮೂಡಬಿದ್ರೆ ಠಾಣೆಯಲ್ಲಿ ಪ್ರತ್ಯೇಕ ಎಫ್‍ಐಆರ್ ದಾಖಲಾಗಿದೆ.

    ವಿಡಿಯೋ ತುಣುಕುಗಳನ್ನು ಪ್ರಸಾರ ಮಾಡುವ ಅಥವಾ ಇನ್ಯಾರಿಗೋ ಕಳುಹಿಸುವ ಸಾಧ್ಯತೆ ಇದೆ ಎಂದು ಎಫ್‍ಐಆರ್ ದಾಖಲಾಗಿದೆ. ಬಸ್‍ಗೆ ಕಲ್ಲು ತೂರಿದ ಕೇಸ್‍ನಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡಿರುವ ಸಮಿತ್ ರಾಜ್‍ನನ್ನು ಮತ್ತೆ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಇದನ್ನೂ ಓದಿ: ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್‌ – ಕತಾರ್‌ನಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅರೆಸ್ಟ್‌

  • ಶ್ರೀಕಾಂತ್‌ ಶೆಟ್ಟಿಗೆ 3 ತಿಂಗಳು ಬಾಗಲಕೋಟೆ ಪ್ರವೇಶಕ್ಕೆ ನಿರ್ಬಂಧ

    ಶ್ರೀಕಾಂತ್‌ ಶೆಟ್ಟಿಗೆ 3 ತಿಂಗಳು ಬಾಗಲಕೋಟೆ ಪ್ರವೇಶಕ್ಕೆ ನಿರ್ಬಂಧ

    ಬಾಗಲಕೋಟೆ: ಹಿಂದೂ ಜಾಗರಣ ವೇದಿಕೆಯ (Hindu Jagarana Vedike) ಪ್ರಾಂತ ಕಾರ್ಯಕಾರಿ ಸದಸ್ಯ ಶ್ರೀಕಾಂತ್ ಶೆಟ್ಟಿ (Shrikanth Shetty) ಅವರಿಗೆ ಮೂರು ತಿಂಗಳು ಜಿಲ್ಲಾ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

    ಮುಧೋಳದಲ್ಲಿರುವ ಶಿವಾಜಿ ನಗರದಲ್ಲಿ ಇಂದು ಹಿಂದೂ ಹೃದಯ ಸಾಮ್ರಾಟ ಶ್ರೀ ಛತ್ರಪತಿ ಶಿವಾಜಿ (Shivaji) ಕಂಚಿನ ಮೂರ್ತಿ ಉದ್ಘಾಟನಾ ಕಾರ್ಯಕ್ರಮ ಆಯೋಜನೆಗೊಂಡಿದೆ. ಈ ಕಾರ್ಯಕ್ರಮ ಮುಖ್ಯ ಭಾಷಣಕಾರರಾಗಿ ಶ್ರೀಕಾಂತ ಶೆಟ್ಟಿ ಅವರನ್ನು ಆಹ್ವಾನಿಸಲಾಗಿತ್ತು.

    ಭಾಷಣ ಮೂಲಕ ಕೋಮು ಸಾಮರಸ್ಯ ಕದಡುವ ಸಾಧ್ಯತೆ ಇರುವ ಕಾರಣ ನೀಡಿ ಜಿಲ್ಲಾಡಳಿತ ಶ್ರೀಕಾಂತ ಶೆಟ್ಟಿ ಅವರಿಗೆ 3 ತಿಂಗಳು ಬಾಗಲಕೋಟೆ (Bagalkote) ಪ್ರವೇಶಕ್ಕೆ ನಿರ್ಬಂಧ ಹೇರಿ ಆದೇಶ ಪ್ರಕಟಿಸಿದೆ.

    ಆದೇಶದಲ್ಲಿ ಏನಿದೆ?
    ಮುಧೋಳ ಶಹರವು ಮತೀಯವಾಗಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು ಇಲ್ಲಿ ಮತೀಯವಾಗಿ ಸಣ್ಣ ಘಟನೆಗಳು ಸಂಭವಿಸಿದ್ದಲ್ಲಿ ರಾಜ್ಯ ಮತ್ತು ರಾಷ್ಟ್ರ ವ್ಯಾಪ್ತಿಯಲ್ಲಿ ಪ್ರಚಾರ ಪಡೆದು ವಿವಿಧ ಅನ್ಯ ಧರ್ಮಿಯ ರಾಜ್ಯ ಮತ್ತು ರಾಷ್ಟ್ರ ನಾಯಕರು ಭೇಟಿ ನೀಡಿ ಭಾಷಣವನ್ನು ಮಾಡುವುದರಿಂದ ಸಾಮರಸ್ಯದ ಜೀವನಕ್ಕೆ ಅಡೆತಡೆ ಉಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಂಭವ ಇರುತ್ತದೆ. ಇದನ್ನೂ ಓದಿ: RSS ಮುಖಂಡನ ಮನೆ ಮೇಲೆ ಮಧ್ಯರಾತ್ರಿ ದಾಳಿ – ಕಾರಣ ಕೇಳಿ ದ.ಕ.ಎಸ್‌ಪಿಗೆ ಹೈಕೋರ್ಟ್‌ ನೋಟಿಸ್‌

    ಸೆಪ್ಟೆಂಬರ್‌ 09, 2015 ರಂದು ಗಣೇಶ ವಿಸರ್ಜನೆ ಕಾರ್ಯಕ್ರಮದ ಕಾಲಕ್ಕೆ ಜರುಗಿದ ಕೋಮು ಗಲಭೆಗೆ ಸಂಬಂಧಿಸಿದಂತೆ ಒಟ್ಟು 28 ಪ್ರಕರಣಗಳು ಮುಧೋಳ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದು ಒಟ್ಟು 9.46 ಕೋಟಿ ರೂ. ಮೌಲ್ಯದ ಆಸ್ತಿ ಪಾಸ್ತಿ ಸುಟ್ಟು ಹಾನಿಯಾಗಿತ್ತು. ಮುಧೋಳ ನಗರದಲ್ಲಿ ಇಲ್ಲಿಯವರೆಗೆ ಇದ್ದ ದ್ವೇಷಮಯ ವಾತಾವರಣವು ಸ್ವಲ್ಪ ತಿಳಿಯಾಗುತ್ತಿದ್ದು, ಉಭಯ ಕೋಮಿನ ಜನರು ಹಿಂದಿನ ಕಹಿ ಘಟನೆಗಳನ್ನು ಮರೆತು ಸಾಮರಸ್ಯದತ್ತ ವಾಲುತ್ತಿದ್ದಾರೆ.

    ಶ್ರೀಕಾಂತ ಶೆಟ್ಟಿ ಇವರು ಈ ಮೊದಲು ಯಾವುದೇ ಕಾರ್ಯಕ್ರಮಕ್ಕೆ ಹೋದಲ್ಲಿ ಪ್ರಚೋದನಕಾರಿ ಭಾಷಣ ಮಾಡುತ್ತಾ ಕೋಮು ಸಾಮರಸ್ಯವನ್ನು ಹದಗೆಡಿಸುತ್ತಾ ಬಂದಿದ್ದು ಅವರ ಮೇಲೆ ದ್ವೇಷ ಭಾಷಣ ಮತ್ತು ಅನ್ಯಧರ್ಮಿಯರ ವಿರುದ್ದ ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯದ ಹಲವೆಡೆ ಶ್ರೀಕಾಂತ್‌ ಶೆಟ್ಟಿ ಮೇಲೆ ಪ್ರಕರಣಗಳು ದಾಖಲಾಗಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

  • 2047ಕ್ಕೆ ಭಾರತವನ್ನು ಇಸ್ಲಾಮೀಕರಣ ಮಾಡುವ ತಂತ್ರ ರೂಪಿಸಲಾಗಿದೆ‌: ಜಗದೀಶ್ ಕಾರಂತ್

    2047ಕ್ಕೆ ಭಾರತವನ್ನು ಇಸ್ಲಾಮೀಕರಣ ಮಾಡುವ ತಂತ್ರ ರೂಪಿಸಲಾಗಿದೆ‌: ಜಗದೀಶ್ ಕಾರಂತ್

    ರಾಯಚೂರು: ಈ ಹಿಂದೆ ಮುಸ್ಲಿಮರಿಗೆ ಪಾಕಿಸ್ತಾನ (Pakistan) ಬಿಟ್ಟುಕೊಡಲಾಗಿದೆ, ಹಿಂದೂಗಳಿಗೆ ಹಿಂದೂಸ್ತಾನ ಅಂತ ಸುಮ್ಮನಾಗಿದ್ದೆವು. ಆದ್ರೆ 2047ಕ್ಕೆ ಇಡೀ ಭಾರತವನ್ನು ಇಸ್ಲಾಮೀಕರಣ ಮಾಡುವ ತಂತ್ರ ರೂಪಿಸಲಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ (Hindu Jagarana Vedike) ದಕ್ಷಿಣ ವಲಯ ಸಂಯೋಜನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಆತಂಕ ವ್ಯಕ್ತಪಡಿಸಿದ್ದಾರೆ.

    ರಾಯಚೂರಿನಲ್ಲಿ (Raichur) ದೇವಾಲಯ ಸಂವರ್ಧನಾ ಸಮಿತಿ ಆಯೋಜಿಸಿದ್ದ ದೇವಾಲಯದ ಭಕ್ತ ಮಂಡಳಿ ಚಿಂತನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ. ಬಿಹಾರದಲ್ಲಿ ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಬೇರೆಯದ್ದೇ ಸತ್ಯ ಬೆಳಕಿಗೆ ಬಂದಿದೆ. ಆರೋಪಿಗಳು ಬಾಯ್ಬಿಟ್ಟ ಸತ್ಯ ಭಯಾನಕವಾಗಿತ್ತು. ಅದೇನೆಂದರೆ 2047ರ ವೇಳೆಗೆ ಭಾರತವನ್ನು ಇಸ್ಲಾಮೀಕರಣ ಮಾಡುವ ತಂತ್ರ ರೂಪಿಸಲಾಗಿದೆ ಎಂಬ ಸತ್ಯ ಬೆಳಕಿಗೆ ಬಂದಿದೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ ಯಶಸ್ವಿ; 20 ಸಾವಿರ ಜನ ಭಾಗಿ, 11,000 ಅರ್ಜಿ ಸಲ್ಲಿಕೆ

    ಇಸ್ಲಾಮೀಕರಣದ ಹುಳ ಭಾರತದಲ್ಲಿ ಹರಿದಾಡುತ್ತಿದೆ. ಕೆಲವರ ಮೆದುಳಿಗೆ ನುಸುಳಿಬಿಟ್ಟಿದೆ. ಅದನ್ನ ಸಾಧಿಸಲು ಆಯ್ದುಕೊಂಡಿರುವುದು ಎರಡು ದಾರಿ. ಒಂದು ಅಂಬೇಡ್ಕರ್ ಸಂವಿಧಾನದ ದಾರಿ, ಮತ್ತೊಂದು ಟಿಪ್ಪುವಿನ ಖಡ್ಗ. ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು 272 ಸ್ಥಾನ ಬೇಕು. ಹೀಗಾಗಿ ಮುಸಲ್ಮಾನರೇ ಗೆಲ್ಲಬಹುದಾದ ಕ್ಷೇತ್ರಗಳನ್ನ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಸಮಯ ಸಿಕ್ಕಾಗ ವಿದ್ಯಾರ್ಥಿ ಮನೆಗೇ ಹೋಗಿ ಸೆಕ್ಸ್‌ ಮಾಡ್ತಿದ್ದೆ – ತಪ್ಪೊಪ್ಪಿಕೊಂಡ ಶಿಕ್ಷಕಿಗೆ 50 ವರ್ಷ ಜೈಲು

    ಜಿನ್ನಾ ತಂತ್ರ ಮತ್ತೆ ಪುನಶ್ಚೇತನ:
    ಮುಸ್ಲಿಮರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ, ಹಾಗಾಗಿ ಜಾತಿನೆಲೆಗಟ್ಟಿನಲ್ಲಿ ಹಿಂದೂ ಸಮಾಜವನ್ನು ಒಡೆದು ಗೆಲ್ಲಬಹುದಾದಂತಹ ಕ್ಷೇತ್ರಗಳನ್ನು ಗುರುತಿಸುತ್ತಿದ್ದಾರೆ. 1947ರಲ್ಲಿ ಮೊಹಮದ್ ಅಲಿ‌ ಜಿನ್ನಾ ಇದೇ ತಂತ್ರ ಬಳಸಿದ್ದರು. ಆಗ ಇಬ್ಬರು ದಲಿತ ನಾಯಕರಿದ್ದರು. ಅಂಬೇಡ್ಕರ್ ಹಾಗೂ ಜೋಗೇಂದ್ರನಾಥ್ ಮಂಡಲ್. ಬಂಗಾಳದ ಜೋಗೇಂದ್ರನಾಥ್ ಮಂಡಲ್‌ರನ್ನ ತನ್ನ ವಿಶ್ವಾಸಕ್ಕೆ ತೆಗೆದುಕೊಂಡರು, ಅದಕ್ಕೆ ಮಂಡಲ್ ಪ್ರತ್ಯೇಕ ಪಾಕಿಸ್ತಾನಕ್ಕೆ ಬೆಂಬಲ ಕೊಟ್ಟರು. ಅದೇ ತಂತ್ರದ ಪುನಶ್ಚೇತನ ನಡೆದಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

    ಮತಾಂತರ ಅಡ್ಡೆಯಾಗ್ತಿದೆ ಕೃಷ್ಣಾ ನದಿ ದಂಡೆ:
    ಅಲ್ಲದೇ ಆಂಧ್ರ ಪ್ರದೇಶದಲ್ಲಿ ಕೃಷ್ಣಾ ನದಿ ಮತಾಂತರ ಅಡ್ಡೆಯ ದಂಡೆಯಾಗುತ್ತಿದೆ. ಮತಾಂತರಕ್ಕಾಗಿಯೇ ಅಲ್ಲಿ ಸರ್ಕಾರದಿಂದ ಸ್ನಾನ ಘಟ್ಟ ಮಾಡಲಾಗಿದೆ. ಜನರನ್ನ ನೀರಿನಲ್ಲಿ ಮುಳುಗಿಸಿ ಮತಾಂತರ ಮಾಡಲಾಗುತ್ತಿದೆ. ಆದ್ದರಿಂದ ಈಗ ಸಾಮಾಜಿಕ ಸುರಕ್ಷತೆಗೆ ಈಗ ಒತ್ತು ಕೊಡಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಪರಶುರಾಮ ಥೀಂ ಪಾರ್ಕ್ ಬಗ್ಗೆ ಸಿಐಡಿ ತನಿಖೆ ನಡೆಸುವುದನ್ನು ಸ್ವಾಗತಿಸುತ್ತೇನೆ: ಸುನಿಲ್ ಕುಮಾರ್

  • ಫೋನಲ್ಲಿ ಮಾತನಾಡುತ್ತಿದ್ದ ವಿವಾಹಿತೆಯ ಮೇಲೆ ಅತ್ಯಾಚಾರ ಯತ್ನ – ಆರೋಪಿಗಳಿಗಾಗಿ ಪೊಲೀಸರ ಶೋಧ

    ಫೋನಲ್ಲಿ ಮಾತನಾಡುತ್ತಿದ್ದ ವಿವಾಹಿತೆಯ ಮೇಲೆ ಅತ್ಯಾಚಾರ ಯತ್ನ – ಆರೋಪಿಗಳಿಗಾಗಿ ಪೊಲೀಸರ ಶೋಧ

    ಮಡಿಕೇರಿ: ವಿವಾಹಿತೆಯ ಮೇಲೆ ತಡರಾತ್ರಿ ಅತ್ಯಾಚಾರಕ್ಕೆ (Rape) ಯತ್ನಿಸಿರುವ ಘಟನೆ ಕೊಡಗು (Kodagu) ಜಿಲ್ಲೆಯ ಸೋಮವಾರಪೇಟೆ (Somwarpet) ತಾಲೂಕಿನ ಬಿಳಿಗೆರೆ (Biligere)  ಗ್ರಾಮದಲ್ಲಿ ನಡೆದಿದೆ.

    19 ವರ್ಷದ ವಿವಾಹಿತೆ ರಾತ್ರಿ 9:30ರ ವೇಳೆಗೆ ಮನೆ ಮುಂಭಾಗದಲ್ಲಿ ಪೋನ್‌ನಲ್ಲಿ (Phone) ಮಾತಾನಾಡುತ್ತಿದ್ದಳು. ಈ ಸಂದರ್ಭ ಆಟೋದಲ್ಲಿ (Auto Rickshaw) ಬಂದಿಳಿದ ಮೂವರು ಯುವಕರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇದನ್ನೂ ಓದಿ: ಸಂಸದರಾಗಲು ಹೊರಟ್ಟಿದ್ದ ಸಿದ್ದರಾಮಯ್ಯ ಸಿಎಂ ಆಗಿದ್ದು ಹೇಗೆ?

    ನಂದಿಮೊಟ್ಟೆಯ ರಾಜ, ಹಟ್ಟಿಹೊಳೆಯ ನೌಶದ್, ಇಗ್ಗೋಡ್ಲಿನ ಫಾರೂಕ್ ಎಂಬವರು ಈ ಪ್ರಕರಣದ ಪ್ರಮುಖ ಆರೋಪಿಗಳು. ಬಲತ್ಕಾರವಾಗಿ ಗೃಹಿಣಿಯನ್ನು ಕಾಫಿತೋಟದೊಳಗೆ ಎಳೆದೊಯ್ಯುತ್ತಿದ್ದ ಸಂದರ್ಭ ಆಕೆ ಜೋರಾಗಿ ಕಿರುಚಲಾರಂಭಿಸಿದಳು. ಇದನ್ನು ಗಮನಿಸಿದ ಆಕೆಯ ಸಂಬಂಧಿಕರು ಭಯಭೀತರಾಗಿ ಕೂಡಲೇ ಸ್ಥಳೀಯರಿಗೆ ಹಾಗೂ ಹಿಂದೂ ಜಾಗರಣ ವೇದಿಕೆಯ (Hindu Jagarana Vedike) ಪ್ರಮುಖರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಕ್ಷಣಾರ್ಧದಲ್ಲಿ ಘಟನಾ ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಓರ್ವ ಆರೋಪಿಯಾದ ರಾಜ ಹಾಗೂ ದುಷ್ಕೃತ್ಯಕ್ಕೆ ಬಳಸಿದ್ದ ಎರಡು ಆಟೋಗಳನ್ನು ವಶಕ್ಕೆ ಪಡೆದಿದ್ದಾರೆ. ಈ ದುಷ್ಕೃತ್ಯದಲ್ಲಿ ತೊಡಗಿದ್ದ ಇನ್ನಿಬ್ಬರು ಆರೋಪಿಗಳಾದ ನೌಶದ್ ಹಾಗೂ ಫಾರೂಕ್ ಪರಾರಿಯಾಗಿದ್ದಾರೆ. ಇದನ್ನೂ ಓದಿ: ದೂರು ಕೊಡಲು ಹೋದ ಯುವತಿಯನ್ನೇ ಮಂಚಕ್ಕೆ ಕರೆದಿದ್ದ ಇನ್‌ಸ್ಪೆಕ್ಟರ್‌ ಅಮಾನತು  

    ಫಾರೂಕ್ ಮಾದಾಪುರದಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ. ದುಷ್ಕೃತ್ಯಕ್ಕೆ ಬಳಸಿರುವ 2 ಆಟೋರಿಕ್ಷಾಗಳು ನೌಶದ್ ಹಾಗೂ ರಶೀದ್ ಎಂಬವರಿಗೆ ಸೇರಿದ್ದಾಗಿದೆ. ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಓರ್ವ ಆರೋಪಿ ಹಾಗೂ ಎರಡು ಆಟೋರಿಕ್ಷಾಗಳನ್ನು ಸೋಮವಾರಪೇಟೆ ಪೋಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳು ಹೊರದೇಶಗಳಿಗೆ ಪಲಾಯನವಾಗುವ ಸಾಧ್ಯತೆಯಿರುವುದರಿಂದ ದುಷ್ಕೃತ್ಯ ನಡೆಸಿದ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ತಪ್ಪಿದಲ್ಲಿ ಅನ್ಯಾಯಕ್ಕೊಳಗಾದ ವಿವಾಹಿತೆ ಹಾಗೂ ಅವರ ಕುಟುಂಬ ವರ್ಗಕ್ಕೆ ನ್ಯಾಯ ದೊರಕಿಸಲು ಸಂಘಟನೆಯ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಲಾರಿ ಡಿಕ್ಕಿ – ಹೆದ್ದಾರಿಯಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದ ಏಳು ಲಕ್ಷ ಮೌಲ್ಯದ ಮದ್ಯ

    ಘಟನೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ಇದನ್ನೂ ಓದಿ: ಗರ್ಭಪಾತಕ್ಕೆ ಯತ್ನ – 19ರ ಯುವತಿ ಸಾವು

  • ಹಿಂದೂಗಳ ಹತ್ಯೆ ಹಿಂದೆ ದೊಡ್ಡ ಫಿಲಾಸಫಿ ಇದೆ – ಪುಷ್ಪೇಂದ್ರ ಕುಲಶ್ರೇಷ್ಠ

    ಹಿಂದೂಗಳ ಹತ್ಯೆ ಹಿಂದೆ ದೊಡ್ಡ ಫಿಲಾಸಫಿ ಇದೆ – ಪುಷ್ಪೇಂದ್ರ ಕುಲಶ್ರೇಷ್ಠ

    ಬೀದರ್: ಹಿಂದೂಗಳ ಹತ್ಯೆ (Hindus Murder) ಹಿಂದೆ ಒಂದು ದೊಡ್ಡ ಫಿಲಾಸಫಿ ಇದೆ. ಹಾಗಾಗಿಯೇ ಈ ದೇಶವನ್ನು ಒಡೆಯೋರು ಹಾಗೂ ದೇಶವನ್ನು ಉಳಿಸೋರ ಮಧ್ಯೆ ಕಂದಕ ನಿರ್ಮಾಣವಾಗಿದೆ ಎಂದು ಚಿಂತಕ ಪುಷ್ಪೇಂದ್ರ ಕುಲಶ್ರೇಷ್ಟ (Pushpendra Kulshreshtha) ಹಿಂದೂಗಳ ಹತ್ಯೆಯನ್ನ ತೀವ್ರವಾಗಿ ಖಂಡಿಸಿದರು.

    ರಾಷ್ಟ್ರೀಯ ಹಿಂದೂ ಜಾಗರಣ ಸಮಿತಿ (Hindu Jagarana Vedike) ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಜ್ಞಾನವಾಪಿಯಲ್ಲಿ (Gyanvapi Masjid) ಶಿವನ ಮೂರ್ತಿ ಧ್ವಂಸ ಮಾಡಿ ಅಲ್ಲಿ ಮಸೀದಿ ನಿರ್ಮಾಣ ಮಾಡಲಾಗಿತ್ತು. ಮಸೀದಿಯಲ್ಲಿ ಶಿವಲಿಂಗ ಹಾಗೂ ನಂದಿ ಸಿಕ್ಕಿದ್ದು ಜ್ಞಾನವ್ಯಾಪಿಯಲ್ಲಿರುವ ಮಸೀದಿ ಅಸಲಿ ಅಲ್ಲ ಎಂಬುದನ್ನು ತೋರಿಸಿತು. ಏಕೆಂದರೆ ಔರಂಗಜೇಬ್ ಹಾಗೂ ಮುಸ್ಲಿಮರು ಧ್ವಂಸ ಮಾಡಿರುವ ಮೂರ್ತಿಗಳು ಅಲ್ಲಿಯೇ ಇವೆ ಎಂದು ಹೇಳಿದರು. ಇದನ್ನೂ ಓದಿ: ಕೊರೊನಾಗೆ ತತ್ತರಿಸಿದ ಚೀನಾ – ದೈನಂದಿನ ಪ್ರಕರಣಗಳ ಸಂಖ್ಯೆ ಪ್ರಕಟಿಸದಿರಲು ನಿರ್ಧಾರ

    ದೆಹಲಿಯಲ್ಲಿ ಶ್ರದ್ಧಾ ವಾಕರ್ (Shraddha Walker) ಹತ್ಯೆ ನಡೆಯಿತು. ಇನ್ನೂ ಅನೇಕ ಹಿಂದೂಗಳ ಹತ್ಯೆ ಈ ದೇಶದಲ್ಲಿ ನಡೆದಿವೆ. ಕೆಲವರು ನಾವು `ವಂದೇ ಮಾತರಂ’ ಹಾಡು ಹಾಡಲ್ಲಾ ನಾವು ಬರೀ ಅಲ್ಲಾಗೆ ವಂದನೆ ಮಾಡುತ್ತೇವೆ. ವಕ್ಫ್ ಬೋರ್ಡ್ ಖಾಸಗಿ ಬೋರ್ಡ್ ಆಗಿದ್ದು ಅಲ್ಲಿ ಕೆಲಸ ಮಾಡುವ ಪದಾಧಿಕಾರಿಗಳು ಸರ್ಕಾರಿ ನೌಕರರಾಗಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಮನೆ ಕೂಡಾ ವಕ್ಫ್ ಬೋರ್ಡ್ ನಿರ್ಮಾಣ ಮಾಡಿದ್ದಾರೆ ಎಂದು ಕುಲಶ್ರೇಷ್ಠ ತಿಳಿಸಿದ್ದಾರೆ. ಇದನ್ನೂ ಓದಿ: ಜಲೀಲ್‌ ಹತ್ಯೆ ಕೇಸ್‌ – ಇಬ್ಬರು ಮಹಿಳೆಯರ ವಿಚಾರಣೆ, ಗಾಂಜಾ ಮಾಫಿಯಾದ ವಾಸನೆ

    Live Tv
    [brid partner=56869869 player=32851 video=960834 autoplay=true]

  • ಜಾಮಿಯಾದಲ್ಲಿನ ಅಕ್ರಮ ಮದರಸಾ ತೆರವಿಗೆ ಹಿಂದೂ ಜಾಗರಣ ವೇದಿಕೆ ಗಡುವು

    ಜಾಮಿಯಾದಲ್ಲಿನ ಅಕ್ರಮ ಮದರಸಾ ತೆರವಿಗೆ ಹಿಂದೂ ಜಾಗರಣ ವೇದಿಕೆ ಗಡುವು

    ಮಂಡ್ಯ: ಸಾಕಷ್ಟು ವಿವಾದ ಸೃಷ್ಟಿಸಿರುವ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣದ (Srirangapatna) ಜಾಮಿಯಾ ಮಸೀದಿ (Jamia Masjid) ವಿವಾದ ಇದೀಗ ಮತ್ತೆ ಭುಗಿಲೆದ್ದಿದೆ. ಜಾಮಿಯಾ ಮಸೀದಿಯ ಒಳಭಾಗದಲ್ಲಿ ನಡೆಯುತ್ತಿರುವ ಮದರಸಾ ತೆರವಿಗೆ ಹಿಂದೂ ಜಾಗರಣ ವೇದಿಕೆ (Hindu Jagarana Vedike) ಮಂಡ್ಯ ಜಿಲ್ಲಾಡಳಿತಕ್ಕೆ ಗಡುವು ನೀಡಿದೆ.

    ಐತಿಹಾಸಿಕ ಸ್ಥಳವಾಗಿರುವ ಜಾಮಿಯಾ ಮಸೀದಿ ಅಲ್ಲ, ಅದು ಮಂದಿರ ಎಂದು ಅತ್ತ ಬಜರಂಗಸೇನೆ ಹೈಕೋರ್ಟ್ ಮೆಟ್ಟಿಲೇರುವ ಮೂಲಕ ಕಾನೂನು ಹೋರಾಟವನ್ನು ಆರಂಭಿಸಿದೆ. ಇತ್ತ ಹಿಂದೂ ಜಾಗರಣ ವೇದಿಕೆ ಮಸೀದಿಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮದರಸಾ ತೆರವಿಗೆ ಹೋರಾಟವನ್ನು ಆರಂಭಿಸಿದೆ.

    1934 ರಲ್ಲಿ ಜಾಮಿಯಾ ಮಸೀದಿ ಪ್ರಾಚ್ಯವಸ್ತು ಮತ್ತು ಭಾರತೀಯ ಪರಿವೀಕ್ಷಣಾ ಇಲಾಖೆಗೆ ಸೇರಿದ್ದು, ಈ ಕಟ್ಟಡದಲ್ಲಿ ಮದರಸಾದಂತಹ ಚಟುವಟಿಕೆಗಳನ್ನು ನಡೆಸಲು ಅವಕಾಶವಿಲ್ಲ. ಹೀಗಿದ್ದರೂ ಕೂಡಾ ಜಾಮಿಯಾ ಮಸೀದಿಯಲ್ಲಿ ಅಕ್ರಮವಾಗಿ ಮದರಸಾ ನಡೆಸಲಾಗುತ್ತಿದ್ದು, ಕಳೆದ ಹಲವು ವರ್ಷಗಳಿಂದ ಹಿಂದೂಪರ ಸಂಘಟನೆಗಳು ಅಕ್ರಮ ಮದರಸಾ ತೆರವು ಮಾಡಬೇಕೆಂದು ಆಗ್ರಹ ಮಾಡುತ್ತಿವೆ. ಇಷ್ಟಾದರೂ ಕೂಡಾ ಕ್ರಮ ಕೈಗೊಳ್ಳದ ಹಿನ್ನೆಲೆ ಹಿಂದೂ ಜಾಗರಣಾ ವೇದಿಕೆ ಪ್ರಾಚ್ಯವಸ್ತು ಮತ್ತು ಭಾರತೀಯ ಪರಿವೀಕ್ಷಣಾ ಇಲಾಖೆಗೆ ಗಡುವು ನೀಡಿದೆ. ಇದನ್ನೂ ಓದಿ: ಕೊಟ್ಟ ಮಾತು ಉಳಿಸಿದ ಬಿಜೆಪಿ – ಸಭಾಪತಿ ಸ್ಥಾನಕ್ಕೆ ಹೊರಟ್ಟಿ ನಾಮಪತ್ರ ಸಲ್ಲಿಕೆ

    ಜಾಮಿಯಾ ಮಸೀದಿಯಲ್ಲಿ ನಡೆಯುತ್ತಿರುವ ಅಕ್ರಮ ಮದರಸಾವನ್ನು 10 ದಿನಗಳ ಒಳಗೆ ತೆರವು ಮಾಡಬೇಕು. ಇಲ್ಲವಾದಲ್ಲಿ ನಮಗೂ ಪ್ರತಿ ಶನಿವಾರ ಹನುಮಾನ್ ಚಾಲೀಸ ಹಾಗೂ ಭಜನೆಗೆ ಅವಕಾಶ ನೀಡಬೇಕು. ಇವೆರಡೂ ಆಗಲಿಲ್ಲ ಎಂದರೆ ಪ್ರಾಚ್ಯವಸ್ತು ಮತ್ತು ಭಾರತೀಯ ಪರಿವೀಕ್ಷಣಾ ಇಲಾಖೆ ಎದುರು ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಸುನಿಲ್ ಕುಮಾರ್ ವಿರುದ್ಧ ಸಿಡಿದ ಹಿಂದೂ ಕಾರ್ಯಕರ್ತರು

    Live Tv
    [brid partner=56869869 player=32851 video=960834 autoplay=true]

  • ದೇಶೀಯ ಭಯೋತ್ಪಾದನೆಗೆ ಮದರಸಾಗಳೇ ಕಾರಣ – ಹಿಂದೂ ಜಾಗರಣಾ ವೇದಿಕೆ ಕಿಡಿ

    ದೇಶೀಯ ಭಯೋತ್ಪಾದನೆಗೆ ಮದರಸಾಗಳೇ ಕಾರಣ – ಹಿಂದೂ ಜಾಗರಣಾ ವೇದಿಕೆ ಕಿಡಿ

    ಉಡುಪಿ: ದೇಶೀಯ ಭಯೋತ್ಪಾದನೆಗೆ ಮದರಸಾಗಳೇ ಕಾರಣ. ದೇಶಾದ್ಯಂತ ಮದರಸಗಳಿಗೆ ಲಗಾಮು ಹಾಕಿದರೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್‍ರಂತಹ ದುಷ್ಕೃತ್ಯಗಳನ್ನು ತಡೆಯಬಹುದು. ಮುಸ್ಲಿಂ ಭಯೋತ್ಪಾದನೆ ಸೃಷ್ಟಿಯಾಗಿರುವ ಕೇಂದ್ರವಾಗಿ ಮದರಸಗಳು ಪರಿವರ್ತನೆಯಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಮದರಾಸಗಳ ವಿರುದ್ಧ ವಾಗ್ದಾಳಿ ನಡೆಸಿದೆ.

    ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಹತ್ಯೆಯನ್ನು ಖಂಡಿಸಿ, ಉಡುಪಿಯಲ್ಲಿ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ಮಾಡಿದೆ. ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದರೂ ಸುಮಾರು ಎರಡು ಕಿಲೋಮೀಟರ್‌ಗಳ ಕಾಲ ನೂರಾರು ಹಿಂದೂ ಕಾರ್ಯಕರ್ತರು ಘಟನೆಯ ವಿರುದ್ಧ ಧಿಕ್ಕಾರ ಕೂಗುತ್ತಾ ಸಾಗಿದರು. ಬಿಜೆಪಿಯ ನೂಪುರ್ ಶರ್ಮ ಹೇಳಿಕೆಯನ್ನು ಬೆಂಬಲಿಸಿದ ಕಾರಣಕ್ಕೆ ಉದಯಪುರದಲ್ಲಿ ಕನ್ಹಯ್ಯ ಲಾಲ್ ಹತ್ಯೆಯಾಗಿದೆ. ಈ ಬೆಳವಣಿಗೆಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಕರಾವಳಿಯಲ್ಲಿ ಹಿಂದೂ ಜಾಗರಣ ವೇದಿಕೆ ಮುಂದಾಳತ್ವದಲ್ಲಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಬಿಜೆಪಿ ಪದಾಧಿಕಾರಿಗಳು ಪ್ರತಿಭಟನೆ ಮಾಡುವ ಮೂಲಕ ಘಟನೆಯನ್ನು ಖಂಡಿಸಿದರು. ಇದನ್ನೂ ಓದಿ: ಕನ್ಹಯ್ಯಾ ಲಾಲ್ ಕುಟುಂಬಕ್ಕೆ ನೆರವು – 24 ಗಂಟೆಯಲ್ಲಿ ಬಂತು 1 ಕೋಟಿ

    ಹಿಂದೂ ಜಾಗರಣ ವೇದಿಕೆ ಮುಖಂಡ ಪ್ರಕಾಶ್ ಕುಕ್ಕೆಹಳ್ಳಿ ಮಾತನಾಡಿ, ಇಸ್ಲಾಂನ ಭಯೋತ್ಪಾದನೆ ಮತ್ತು ಕ್ರೌರ್ಯತೆ ಮಿತಿಮೀರಿದ ಹಿನ್ನೆಲೆಯಲ್ಲಿ ನಡೆದ ಘಟನೆ ಇದು. ಹಿಂದೂ ಜಾಗರಣ ವೇದಿಕೆ ಇದನ್ನು ಖಂಡಿಸುತ್ತದೆ. ದೇಶಾದ್ಯಂತ ಮದರಸಗಳಿಗೆ ಲಗಾಮು ಹಾಕಿದರೆ ಇಂತಹ ದುಷ್ಕೃತ್ಯಗಳನ್ನು ತಡೆಯಬಹುದು. ಮುಸ್ಲಿಂ ಭಯೋತ್ಪಾದನೆ ಸೃಷ್ಟಿಯಾಗಿರುವ ಕೇಂದ್ರವಾಗಿ ಮದರಸಗಳು ಪರಿವರ್ತನೆಯಾಗಿದೆ. ಆ ಬಗ್ಗೆ ನಿಗಾವಹಿಸಬೇಕು. ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ, ಸಮಾಜದಲ್ಲಿ ಅನ್ಯಾಯ ಅಹಿತಕರ ಘಟನೆಗಳನ್ನು ಈ ಭಯೋತ್ಪಾದನಾ ಕೃತ್ಯವನ್ನು ತಡೆಗಟ್ಟಿ. ಸಾಧ್ಯವಾಗದಿದ್ದರೆ ಹಿಂದೂ ಸಮಾಜ ಇಂತಹ ದುಷ್ಟರನ್ನು ಮಟ್ಟಹಾಕುತ್ತದೆ. ಆರೋಪಿಗಳ ಬಂಧನ ಆಗಿದೆ. ಆದರೆ ಆರೋಪಿಗಳು ಎಲ್ಲದಕ್ಕೂ ಕೂಡ ಸಿದ್ಧತೆ ಮಾಡಿಕೊಂಡು ಈ ಕೃತ್ಯ ಎಸಗಿದ್ದು ಎಂಬುದು ಜಗಜ್ಜಾಹೀರಾಗಿದೆ. ಒಂದು ಕೊಲೆಯನ್ನು ಮೊಬೈಲ್ ಶೂಟಿಂಗ್ ಮಾಡಿ ಲೈವ್ ಮಾಡುವ ತನಕ ಮನಸ್ಥಿತಿ ಬಂದಿದೆ ಎಂದರೆ ಇದು ಭಯೋತ್ಪಾದನೆ ಹೊರತು ಮತ್ತೇನು ಅಲ್ಲ. ಕೊಲೆಯ ನಂತರ ಮತ್ತೊಂದು ವೀಡಿಯೋ ಮಾಡಿ ತಾವು ಮಾಡಿರುವ ಕೃತ್ಯವನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇಬ್ಬರಿಗೆ ಮರಣದಂಡನೆ ಕೊಟ್ಟರು ಅದಕ್ಕೂ ಅವರು ಸಿದ್ಧರಾಗಿರುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: 4 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ ಗಲ್ಲು

    ಉದಯಪುರದ ಇಬ್ಬರೂ ಭಯೋತ್ಪಾದಕರಂತೆ ದೇಶಾದ್ಯಂತ ಭಯೋತ್ಪಾದಕರು ಹುಟ್ಟಿದ್ದಾರೆ. ಆರಂಭಿಕ ಹಂತದಿಂದಲೇ ಇಂತಹದ್ದನ್ನು ಕಿತ್ತು ಹಾಕುವ ಕೆಲಸ ಆಗಬೇಕಾಗಿದೆ. ಇಸ್ಲಾಮ್‌ನ ಮುಖ ಏನು ಎಂಬುದನ್ನು ತೋರಿಸಲು ಅವರಿಬ್ಬರು ಹೊರಟಿದ್ದಾರೆ. ಕ್ರೌರ್ಯದ ಮುಖಾಂತರ ಭಯವನ್ನು ಹುಟ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ. ಮುಸಲ್ಮಾನರು ಮತ್ತು ಇಸ್ಲಾಮ್‌ನ ಬಗ್ಗೆ ಯಾರಾದರೂ ಮಾತನಾಡಿದರೆ ಇದೇ ಗತಿ ಎಂಬ ಸಂದೇಶವನ್ನು ಕೊಡಲು ಹೊರಟಿದ್ದಾರೆ. ಇಂತಹ ಘಟನೆಗಳು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಇದೆ. ಭಾರತದಲ್ಲಿ ಇದು ಪಸರಿಸಲು ಶುರುವಾಗಿದೆ. ಇಂತಹ ಶಕ್ತಿಗಳನ್ನು ಪ್ರಾರಂಭದಲ್ಲೇ ಮಟ್ಟಹಾಕಬೇಕು ಎಂದರು.

    ಉಡುಪಿ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆ ಅಜ್ಜರಕಾಡು ಹುತಾತ್ಮ ವೇದಿಕೆಯ ಬಳಿ ಸಮಾಪನಗೊಂಡಿತು ಸಭೆಯಲ್ಲಿ ಘಟನೆಯನ್ನು ಖಂಡಿಸಲಾಯಿತು. ಇಂತಹ ಘಟನೆ ಮರುಕಳಿಸುವಂತೆ ಕೇಂದ್ರ ಮತ್ತು ಆಯಾಯ ರಾಜ್ಯ ಸರ್ಕಾರಗಳು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

    Live Tv

  • ಮುತಾಲಿಕ್ ಬರುವುದಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕೊರಗಜ್ಜನಿಗೆ ದೂರು

    ಮುತಾಲಿಕ್ ಬರುವುದಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕೊರಗಜ್ಜನಿಗೆ ದೂರು

    ಉಡುಪಿ: ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಉಡುಪಿ ಜಿಲ್ಲಾ ಪ್ರವೇಶಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕೊರಗಜ್ಜನಿಗೆ ದೂರು ನೀಡಿದ ಪ್ರಸಂಗ ನಡೆದಿದೆ.

    ಮುತಾಲಿಕ್ ನಿಷೇಧ ಹೇರಿರುವ ಸಂಬಂಧ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಕುಂದಾಪುರ ತಾಲೂಕು ಮುಳ್ಳಿಕಟ್ಟೆ ಕೊರಗಜ್ಜನ ಮೊರೆಹೋಗಿದ್ದಾರೆ. ಗಂಗೊಳ್ಳಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಏಳು ಕಿಲೋಮೀಟರ್ ಪಾದಯಾತ್ರೆ ಮಾಡಿ ಕೊರಗಜ್ಜನಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲೂ ಬುಲ್ಡೋಜರ್ ಕಾರ್ಯಾಚರಣೆಗೆ ಹೆಚ್ಚಿದ ಒತ್ತಡ: ಬಿಜೆಪಿಯಲ್ಲಿ ಭಿನ್ನ ನಿಲುವು

    ಹಿಂದೂ ಜಾಗರಣ ವೇದಿಕೆಯಿಂದ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಪೂಜೆಯ ಧಾರ್ಮಿಕ ಸಭೆಯಲ್ಲಿ ಪ್ರಮೋದ್ ಮುತಾಲಿಕ್ ಭಾಗವಹಿಸಬೇಕಿದ್ದರು. ಆದರೆ ಸರ್ಕಾರ ಮುತಾಲಿಕ್ ಜಿಲ್ಲೆಗೆ ಬರದಂತೆ ನಿಷೇಧಾಜ್ಞೆ ಹೊರಡಿಸಿತ್ತು. ಅಲ್ಲದೆ ಮುತಾಲಿಕ್ ಬಂದರೆ ಶಾಂತಿ ಕದಡುತ್ತದೆ ಎಂದು ಜಿಲ್ಲಾಡಳಿತ ಹೇಳಿತ್ತು.

    ಆ ಬಳಿಕ ಮುತಾಲಿಕ್ ಆಗಮನಕ್ಕೆ ತಡೆ ಒಡ್ಡಿದವರ ವಿರುದ್ಧ ಹಿಂದೂ ಕಾರ್ಯಕರ್ತರಲ್ಲಿ ಆಕ್ರೋಶ ಹೊರಹಾಕಿದ್ದರು. ಮುತಾಲಿಕ್ ನಿಷೇಧದ ಹಿಂದೆ ಕಾಣದ ಕೈಗಳ ಕೈವಾಡ ಇದೆ. ಅವರನ್ನು ಕೊರಗಜ್ಜನೇ ಶಿಕ್ಷಿಸಲಿ ಎಂದು ಕಾರ್ಯಕರ್ತರು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಮಾಸ್ಕ್ ಕಡ್ಡಾಯ – ಹಾಕದಿದ್ದರೆ 500 ರೂ. ದಂಡ

  • ಆಲ್‍ಖೈದಾ ಉಗ್ರನನ್ನು RSS ಮುಖಂಡ ಅಂದ್ರೂ ಆಶ್ಚರ್ಯವಿಲ್ಲ- ಸಿದ್ದು ವಿರುದ್ಧ ಹಿಂದೂ ಜಾಗರಣಾ ವೇದಿಕೆ ಕಿಡಿ

    ಆಲ್‍ಖೈದಾ ಉಗ್ರನನ್ನು RSS ಮುಖಂಡ ಅಂದ್ರೂ ಆಶ್ಚರ್ಯವಿಲ್ಲ- ಸಿದ್ದು ವಿರುದ್ಧ ಹಿಂದೂ ಜಾಗರಣಾ ವೇದಿಕೆ ಕಿಡಿ

    ಉಡುಪಿ: ಆಲ್‍ಖೈದಾ ಉಗ್ರ ವೀಡಿಯೋ ಬಿಡುಗಡೆ ಮಾಡುವ ಮೂಲಕ ಕರ್ನಾಟಕದ ಹಿಜಬ್ ಹೋರಾಟವನ್ನು ಬೆಂಬಲಿಸಿದ್ದಾನೆ. ವೀಡಿಯೋ ಬಿಜೆಪಿ ಮತ್ತು ಸಂಘ ಪರಿವಾರದ ಸೃಷ್ಟಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಹಿಂದೂ ಜಾಗರಣ ವೇದಿಕೆ ತೀವ್ರ ವಾಗ್ದಾಳಿ ನಡೆಸಿದೆ.

    ಉಡುಪಿ ಜಿಲ್ಲೆಯಲ್ಲಿ ಡಿಸೆಂಬರ್ ಅಂತ್ಯಕ್ಕೆ ಹಿಜಬ್ ಹೋರಾಟ ಆರಂಭವಾಗಿತ್ತು. ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿ ಹೋರಾಟದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಬಿಜಾಪುರ ನಂತರ ಬೇರೆ ಬೇರೆ ಆಯಾಮಗಳಲ್ಲಿ ಹಿಂದೂ-ಮುಸಲ್ಮಾನರ ನಡುವೆ ಸಂಘರ್ಷ ಏರ್ಪಟ್ಟಿದೆ. ಈ ನಡುವೆ ಹಿಜಬ್ ಹೋರಾಟವನ್ನು ಮುಂದುವರಿಸಿದರು. ಆಲ್-ಖೈದಾ ಉಗ್ರ ಆಯ್ಮಾನ್ ಅಲ್ ಜವಹಿರಿ ವೀಡಿಯೋ ಬಿಡುಗಡೆ ಮಾಡಿದ್ದಾನೆ. ಇದು ಬಿಜೆಪಿ ಸಂಘಪರಿವಾರ ಸೃಷ್ಟಿಸಿದ ವೀಡಿಯೋ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಹಿಜಬ್‍ನ್ನು ಸಿದ್ದರಾಮಯ್ಯ ಬಲವಾಗಿ ಬೆಂಬಲಿಸುತ್ತಾ ಬಂದಿದ್ದಾರೆ. ಡಿಕೆಶಿ ಈಗ ನಡೆಯುತ್ತಿರುವ ಬೆಳವಣಿಗೆಯನ್ನು ಎಲ್ಲೂ ಸಮರ್ಥಿಸಿಕೊಂಡು ಹೋಗಿಲ್ಲ. ಡಿ.ಕೆ. ಶಿವಕುಮಾರ್‌ಗೆ ವಾಸ್ತವದ ಅರಿವಿದೆ. ಸಿದ್ದರಾಮಯ್ಯ ಹಿಂದೂ ಸಮಾಜ ಪರವಾಗಿ ಎಂದೂ ನಿಂತಿಲ್ಲ. ಜೀವನಪೂರ್ತಿ ಮುಸಲ್ಮಾನ ತುಷ್ಟೀಕರಣ ಅನುಸರಿಸಿದವರು. ಹಿಂದೂ ಸಮಾಜ ಯಾವುದೇ ನಿರೀಕ್ಷೆಯನ್ನು ಇಟ್ಟುಕೊಂಡಿಲ್ಲ ಎಂದು ಹಿಂದೂ ಜಾಗರಣ ವೇದಿಕೆಯ ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ ಕಿಡಿಕಾರಿದರು.

    ಸಿಎಂ ಇಬ್ರಾಹಿಂ ಕೂಡಾ, ವಿಡಿಯೋ ಬಿಡುಗಡೆಯನ್ನು ಪ್ರಶ್ನಿಸಿ ಹೇಳಿಕೆ ನೀಡಿದ್ದಾರೆ. ಇದು ಸುಳ್ಳು ಎಂದಿದ್ದರು. ಸಿಎಂ ಇಬ್ರಾಹಿಂ ಕಾಮಿಡಿ ಪೀಸ್. ನಾವದನ್ನು ಗಂಭೀರವಾಗಿ ಕಾಮಿಡಿಯಾಗಿಯೇ ಪರಿಗಣಿಸಿಲ್ಲ. ಉಗ್ರನ ವೀಡಿಯೋ ಸಂಘ ಪರಿವಾರ ಸೃಷ್ಟಿ ಅಂತಾರೆ. ವೀಡಿಯೋದಲ್ಲಿ ಇರುವ ಆಲ್ ಖೈದ ಮುಖ್ಯಸ್ಥ ಆರ್‌ಎಸ್‍ಎಸ್‍ನ ಸ್ವಯಂಸೇವಕ ಎಂದು ಹೇಳುವ ಸಾಧ್ಯತೆ ಇದೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ವಿಗ್ರಹ ಮಾಡೋದು ಹರಾಮ್, ಆದ್ರೇ ಜೀವನೋಪಾಯಕ್ಕೆ ಅದು ಅನಿವಾರ್ಯ: ಉಮರ್ ಷರೀಫ್

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನಸ್ಥಿತಿ ಮತ್ತು ಮಾನಸಿಕತೆಗೆ ತಕ್ಕಂತೆ ಮಾತನಾಡುತ್ತಾರೆ. ಮುಸಲ್ಮಾನರ ತುಷ್ಟೀಕರಣವೇ ಅವರಿಗೆ ಮುಖ್ಯ. ಈಶ್ವರಪ್ಪರ ನಾಲಿಗೆ ಮತ್ತು ಮೆದುಳಿಗೆ ಸಂಬಂಧ ಇಲ್ಲ ಅಂತೀರಿ. ನಿಮ್ಮ ಮೆದುಳು ಮತ್ತು ನಾಲಿಗೆಗೆ ಸಂಬಂಧ ಇದೆಯೇ ಎಂದು ಪ್ರಕಾಶ್ ಕುಕ್ಕೆಹಳ್ಳಿ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರೈತಸಂಘದಿಂದ ಪರ್ಯಾಯ ರಾಜಕಾರಣ: ಕೋಡಿಹಳ್ಳಿ