Tag: Hindu Community

  • ಹಿಂದೂಗಳು ಒಟ್ಟಾಗಿರಬೇಕೆಂಬುದು ಸಾವರ್ಕರ್ ಕನಸಾಗಿತ್ತು – ಮೊಮ್ಮಗ ಸಾತ್ಯಕಿ ಸಾವರ್ಕರ್

    ಹಿಂದೂಗಳು ಒಟ್ಟಾಗಿರಬೇಕೆಂಬುದು ಸಾವರ್ಕರ್ ಕನಸಾಗಿತ್ತು – ಮೊಮ್ಮಗ ಸಾತ್ಯಕಿ ಸಾವರ್ಕರ್

    ಶಿವಮೊಗ್ಗ: ಹಿಂದೂಗಳು (Hindu Community) ಒಗ್ಗಟ್ಟಾಗಿರಬೇಕೆಂಬುದು ಸಾವರ್ಕರ್ (VD Savarkar) ಅವರ ಕನಸಾಗಿತ್ತು ಎಂದು ವಿ.ಡಿ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಅಶೋಕ್‌ ಸಾವರ್ಕರ್ (Satyaki Ashok Savarkar) ಹೇಳಿದ್ದಾರೆ.

    ಶಿವಮೊಗ್ಗದಲ್ಲಿ (Shivamogga) `ಸಾವರ್ಕರ್ ಸಾಮ್ರಾಜ್ಯ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಸಾವರ್ಕರ್ ಅವರಿಗೆ ಆಗಸ್ಟ್ 13 ರಂದು ಅಪಮಾನಿಸಲಾಗಿತ್ತು. ಶಿವಮೊಗ್ಗದ ಯುವ ದೇಶಪ್ರೇಮಿಗಳು ಇದನ್ನು ಮರೆಯಲಿಲ್ಲ. ಆದರೆ ಹಿಂದೂಗಳು ಒಗ್ಗಟ್ಟಾಗಿರಬೇಕೆಂಬುದು ಸಾವರ್ಕರ್ ಅವರ ಕನಸಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಬುದ್ಧಿವಂತರು ಯಾವಾಗಲು ಏಕಾಂಗಿಯಾಗಿಯೇ ಕೆಲಸ ಮಾಡ್ತಾರೆ.. ಯಾಕೆ ಗೊತ್ತಾ?

    ಸಾವರ್ಕರ್ ಅವರ ಹಿಂದುತ್ವದ (Hinduism) ಮಂತ್ರ ವಾಕ್ಯ ಎಲ್ಲರೂ ಜ್ಞಾಪಕವಿಟ್ಟುಕೊಳ್ಳಬೇಕು. ಭಾರತದ ಮೇಲೆ ಅನೇಕ ಆಕ್ರಮಣಗಳಾಗಿವೆ. ಆದರೆ ಅನೇಕ ಮಹನೀಯರು, ಯೋಧರು, ಶಿವಾಜಿ ಮಹರಾಜ್, ರಾಣಪ್ರತಾಪ್ ಸಿಂಗ್‌ರಂತಹ ಪರಾಕ್ರಮಿಗಳು ಹಿಂದೂಸ್ಥಾನವನ್ನು ಉಳಿಸಲು ತ್ಯಾಗ, ಬಲಿದಾನ ಮಾಡಿದ್ದಾರೆ. ಇಂದಿನ ಈ ದೀಪ ಬೆಳಗಿಸಿರುವುದು, ಇಡೀ ವಿಶ್ವವೇ ನೋಡುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಪಾದಯಾತ್ರೆ – ಕೈ-ಕೈ ಹಿಡಿದು ಹೆಜ್ಜೆ ಹಾಕಿದ ರಾಹುಲ್, ರಮ್ಯಾ

    ಈ ಕಾರ್ಯಕ್ರಮದ ಮೂಲಕ ದೇಶಭಕ್ತರನ್ನು ಎಚ್ಚರಿಸುವ ಕೆಲಸವಾಗಬೇಕು. ಸಾವರ್ಕರ್ ಅವರು ಹೊಂದಿದ್ದ ಧೇಯೋದ್ದೇಶಗಳನ್ನು ನಾಡಿನೆಲ್ಲೆಡೆ ಮತ್ತೆ ಪಸರಿಸಬೇಕು. ಅನೇಕ ದುಷ್ಟಶಕ್ತಿಗಳು ದೇಶದ ಮೇಲೆ ಆಕ್ರಮಣ ಮಾಡಲು ಹೊಂಚು ಹಾಕುತ್ತಿದ್ದು, ಇದನ್ನು ಮೆಟ್ಟಿ ನಿಲ್ಲುವ ಯೋಜನೆ ನಾವೆಲ್ಲರೂ ರೂಪಿಸಬೇಕು ಎಂದು ಕರೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನೀವು ಒಬ್ಬರನ್ನ ಮದ್ವೆಯಾಗಿ ಮೂವರನ್ನ ಇಟ್ಟುಕೊಳ್ತೀರಾ – ಹಿಂದೂಗಳ ಟೀಕಿಸಿದ್ದ ಶೌಕತ್ ಅಲಿ ವಿರುದ್ಧ ಕೇಸ್

    ನೀವು ಒಬ್ಬರನ್ನ ಮದ್ವೆಯಾಗಿ ಮೂವರನ್ನ ಇಟ್ಟುಕೊಳ್ತೀರಾ – ಹಿಂದೂಗಳ ಟೀಕಿಸಿದ್ದ ಶೌಕತ್ ಅಲಿ ವಿರುದ್ಧ ಕೇಸ್

    ಲಕ್ನೋ: ಉತ್ತರಪ್ರದೇಶದ (UttarPradesh) ಸಂಭಾಲ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಹಿಂದೂಗಳ (Hindu Community) ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಎಐಎಂಐಎಂ (AIMIM) ಅಧ್ಯಕ್ಷ ಶೌಕತ್ ಅಲಿ (Shaukat Ali) ವಿರುದ್ಧ ಕೋಮು ಸೌಹಾರ್ದತೆಗೆ ಧಕ್ಕೆ ತಂದಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

    ಶೌಕತ್ ಅಲಿ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 153-A (ಧರ್ಮ, ಜನಾಂಗ, ಜನ್ಮ ಸ್ಥಳ, ಭಾಷೆ, ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು) ಮತ್ತು 295-A (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: 10ರ ಬಾಲಕಿಯನ್ನು ರೇಪ್ ಮಾಡಿ ಕೊಲೆ ಮಾಡಿದ್ದ ವ್ಯಕ್ತಿಗೆ ಮರಣದಂಡನೆ

    ಶೌಕತ್ ಅಲಿ ಹೇಳಿದ್ದೇನು?: ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶೌಕತ್ ಅಲಿ (Shaukat Ali), 832 ವರ್ಷಗಳ ಕಾಲ ಮುಸ್ಲಿಮರು (Muslims) ಹಿಂದೂಗಳ ಮೇಲೆ ಆಳ್ವಿಕೆ ನಡೆಸಿದರು. ಆಗ ಹಿಂದೂಗಳು ಮುಸ್ಲಿಂ ದೊರೆಗಳ ಮುಂದೆ ಕೈ ಜೋಡಿಸಿ `ಜಿ, ಹುಜೂರ್’ ಎಂದು ತಲೆಬಾಗುತ್ತಿದ್ದರು. ಮುಸ್ಲಿಮರು ಎರಡು ಬಾರಿ ಮದುವೆಯಾಗುತ್ತಾರೆ (Marriage). ಇಬ್ಬರನ್ನೂ ಗೌರವದಿಂದ ನೋಡಿಕೊಳ್ಳುತ್ತಾರೆ. ಆದರೆ ಹಿಂದೂಗಳು ಒಬ್ಬರನ್ನು ಮದುವೆಯಾಗಿ, ಮೂವರು ಪ್ರೇಯಸಿಯರನ್ನ ಇಟ್ಟುಕೊಳ್ಳುತ್ತಾರೆ ಎಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ಈ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಶಾಲಾ ಪ್ರಾರ್ಥನೆ ವೇಳೆ ಕುಸಿದು ಬಿದ್ದು ಬಾಲಕಿ ಸಾವು!

    ಮುಂದುವರಿದು ಮಾತನಾಡಿದ ಅಲಿ, ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೊಂದುತ್ತಾರೆ, ಎರಡು ಮದುವೆಯಾಗುತ್ತಾರೆ ಎಂದು ಹಿಂದೂಗಳು ಆರೋಪಿಸುತ್ತಾರೆ. ನಾವು ಎರಡು ಬಾರಿ ಮದುವೆಯಾಗುತ್ತೇವೆ ನಿಜ. ಆದರೆ ಇಬ್ಬರು ಹೆಂಡತಿಯರಿಗೂ ಗೌರವ ನೀಡುತ್ತೇವೆ. ಆದರೆ ನೀವು ಒಬ್ಬರನ್ನು ಮದುವೆಯಾಗಿ ಮೂವರು ಪ್ರೇಯಸಿಯರನ್ನು ಇಟ್ಟುಕೊಳ್ಳುವುದು ಯಾರಿಗೂ ತಿಳಿದಿಲ್ಲ. ಅವರಲ್ಲಿ ಯಾರಿಗೂ ನೀವು ಗೌರವ ಕೊಡುವುದಿಲ್ಲ ಎಂದು ಕಿಡಿಕಾರಿದರು. ಮುಂದೆ ಬಿಜೆಪಿ ದುರ್ಬಲವಾದಾಗ ಹಿಂದೂಗಳು ಮುಸ್ಲಿಮರ ಹಿಂದೆ ಬರುತ್ತಾರೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಾಕಿಸ್ತಾನದಲ್ಲಿ ಹಿಂದೂ ಮಹಿಳೆ, ಬಾಲಕಿಯರ ಕಿಡ್ನಾಪ್- ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ ಮದುವೆ

    ಪಾಕಿಸ್ತಾನದಲ್ಲಿ ಹಿಂದೂ ಮಹಿಳೆ, ಬಾಲಕಿಯರ ಕಿಡ್ನಾಪ್- ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ ಮದುವೆ

    ಇಸ್ಲಾಮಾಬಾದ್: ಅಲ್ಪಸಂಖ್ಯಾತ ಹಿಂದೂಗಳ (Hindu Community) ಮೇಲೆ ಪಾಕಿಸ್ತಾನದಲ್ಲಿ (Pakistan) ನಿರಂತರ ದೌರ್ಜನ್ಯ ಮುಂದುವರಿದಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮತ್ತೊಂದು ಘಟನೆ ನಡೆದಿದೆ.

    ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಮಹಿಳೆ (Hindu Women) ಮತ್ತು ಇಬ್ಬರು ಬಾಲಕಿಯರನ್ನು ಕಿಡ್ನ್ಯಾಪ್‌ (Kidnap) ಮಾಡಲಾಗಿದ್ದು, ಅವರಲ್ಲಿ ಇಬ್ಬರನ್ನು ಬಲವಂತವಾಗಿ ಇಸ್ಲಾಂಗೆ (Islam) ಮತಾಂತರಿಸಿ, ಮದುವೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಊಹಾಪೋಹಗಳಿಗೆ ಕಿವಿಗೊಡದಂತೆ SMK ನಿವಾಸದಿಂದ ಸಂದೇಶ

    ಮೀನಾ ಮೇಘವಾರ್ (14) ಎಂಬ ಹಿಂದೂ ಬಾಲಕಿಯನ್ನು ನಾಸರ್‌ಪುರ ಪ್ರದೇಶದಿಂದ ಅಪಹರಿಸಲಾಗಿದೆ. ಮೀರ್‌ಪುರ್‌ಖಾಸ್ ಪಟ್ಟಣದ ಮಾರುಕಟ್ಟೆಯಿಂದ ಮನೆಗೆ ಹಿಂದಿರುಗುತ್ತಿದ್ದ ಮತ್ತೊಬ್ಬ ಬಾಲಕಿಯನ್ನೂ ಅಪಹರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಫ್ರೆಂಡ್ಸ್ ಜೊತೆ ಪಾರ್ಟಿಗೆ ಬಂದಿದ್ದ ಮಹಿಳೆ ಬಟ್ಟೆ ಹರಿದು ಬೌನ್ಸರ್ಸ್‍ನಿಂದ ಹಲ್ಲೆ

    ಮತ್ತೊಂದೆಡೆ ವಿವಾಹಿತ ಹಿಂದೂ ಮಹಿಳೆಯೊಬ್ಬರು ಮೀರ್‌ಪುರ್‌ಖಾಸ್‌ನಿಂದ ಕಾಣೆಯಾಗಿದ್ದು, ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ನಂತರ ಅವರು ಮುಸ್ಲಿಂ (Muslim) ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ಮಹಿಳೆಗೆ ಮೂರು ಮಕ್ಕಳಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಮಹಿಳೆಯ ಪತಿ ರವಿ ಕುರ್ಮಿ ಅವರು ದೂರು ನೀಡಿದ್ದು, ಎಫ್‌ಐಆರ್ (FIR) ದಾಖಲಿಸಲು ಪೊಲೀಸರು (Police) ನಿರಾಕರಿಸಿದ್ದಾರೆ ಎನ್ನಲಾಗಿದೆ. ನೆರೆಯ ಅಹ್ಮದ್ ಚಾಂಡಿಯೊ ಎಂಬಾತ ತನ್ನ ಪತ್ನಿಗೆ ಹಿಂಸೆ ನೀಡುತ್ತಿದ್ದ. ಬಲವಂತವಾಗಿ ಅಪಹರಿಸಿ ಇಸ್ಲಾಂಗೆ ಮತಾಂತರಿಸಿದ್ದಾನೆ ಎಂದು ರವಿ ಆರೋಪಿಸಿದ್ದಾರೆ.

    ಆದರೆ ವಿವಾಹಿತ ಮಹಿಳೆ ರಾಖಿ ತನ್ನ ಸ್ವಂತ ಇಚ್ಛೆಯ ಮೇರೆಗೆ ಮತಾಂತರಗೊಂಡಿರುವುದಾಗಿಯೂ, ಮುಸ್ಲಿಂ ಪುರುಷನನ್ನು ಮದುವೆಯಾಗಿರುವುದಾಗಿಯೂ ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಮೂರೂ ಪ್ರಕರಣಗಳನ್ನೂ ತನಿಖೆ ಮಾಡಲಾಗುತ್ತಿದೆ ಎಂದು ಮೀರ್‌ಪುರ್‌ಖಾಸ್ ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಾಕ್‌ನಲ್ಲಿ ಭೀಕರ ಪ್ರವಾಹ – ಸಂತ್ರಸ್ತರಿಗೆ ದೇವಾಲಯದಲ್ಲಿ ಆಶ್ರಯ ನೀಡಿದ ಹಿಂದೂ ಸಮುದಾಯ

    ಪಾಕ್‌ನಲ್ಲಿ ಭೀಕರ ಪ್ರವಾಹ – ಸಂತ್ರಸ್ತರಿಗೆ ದೇವಾಲಯದಲ್ಲಿ ಆಶ್ರಯ ನೀಡಿದ ಹಿಂದೂ ಸಮುದಾಯ

    ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಭೀಕರ ಪ್ರವಾಹದಿಂದಾಗಿ (pakistan flood) ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ದೇವಾಲಯದಲ್ಲಿ ಆಶ್ರಯ ನೀಡುವ ಮೂಲಕ ಹಿಂದೂ ಸಮುದಾಯವೊಂದು ಧಾರ್ಮಿಕ ಸೌಹಾರ್ದತೆ ಮೆರೆದಿದೆ.

    ಭೀಕರ ಪ್ರವಾಹವು ಪಾಕಿಸ್ತಾನದ 80 ಜಿಲ್ಲೆಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ. ದೇಶದಲ್ಲಿ ಪ್ರವಾಹದಿಂದ ಸತ್ತವರ ಸಂಖ್ಯೆ ಸುಮಾರು 1,200 ತಲುಪಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಭೀಕರ ಪ್ರವಾಹ – 1,300ಕ್ಕೂ ಹೆಚ್ಚು ಮಂದಿ ಬಲಿ

    ಬಲೂಚಿಸ್ತಾನದ ಕಚ್ಚಿ ಜಿಲ್ಲೆಯ ಜಲಾಲ್ ಖಾನ್ ಎಂಬ ಪುಟ್ಟ ಗ್ರಾಮವು ಪ್ರವಾಹದಿಂದಾಗಿ ಪ್ರಾಂತ್ಯದ ಉಳಿದ ಭಾಗಗಳಿಂದ ಸಂಪರ್ಕ ಕಡಿತಗೊಂಡಿದೆ. ದೇಶದಲ್ಲಿ ಪ್ರವಾಹದಿಂದಾಗಿ ಮನೆಗಳನ್ನು ನಾಶವಾಗಿವೆ. ಸ್ಥಳೀಯರಿಗೆ ಆಶ್ರಯ ಒದಗಿಸಲು ಬಾಬಾ ಮಧುದಾಸ್ ಮಂದಿರದ ಬಾಗಿಲು ತೆರೆಯಲಾಗಿದೆ.

    ಪಾಕಿಸ್ತಾನದಲ್ಲಿ ದಾಖಲೆಯ ಮಳೆ ಹಾಗೂ ಭಾರೀ ಪ್ರವಾಹವು ಹಸಿವು ಮತ್ತು ವಿವಿಧ ಕಾಯಿಲೆಗಳಿಗೆ ಕಾರಣವಾಗಿದೆ. ಇದು 33 ಮಿಲಿಯನ್ ಜನರ ಮೇಲೆ ಪರಿಣಾಮ ಬೀರಿದೆ. ಪ್ರವಾಹ ಪೀಡಿತರು ಅಗತ್ಯ ಸಂಪನ್ಮೂಲಗಳಿಂದ ವಂಚಿತರಾಗಿ ದುಸ್ತರ ಬದುಕು ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಪ್ರವಾಹದಿಂದ ನಲುಗಿದ ಪಾಕಿಸ್ತಾನ – ಭಾರೀ ಮೊತ್ತದ ಸಹಾಯಕ್ಕೆ ಮುಂದಾದ ಐಎಂಎಫ್

    ದೇಶದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಇನ್ನೂ ಜನಜೀವನ ಸಹಜ ಸ್ಥಿತಿಗೆ ಬಾರದಂತಾಗಿದೆ. ಜನರು ಅನಿವಾರ್ಯವಾಗಿ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳುವಂತಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹಿಂದೂಗಳಿಗೂ ಇಲ್ಲಿ ನನ್ನಷ್ಟೇ ಹಕ್ಕಿದೆ – ಬಾಂಗ್ಲಾದೇಶ ಪ್ರಧಾನಿ ಹೇಳಿಕೆ

    ಹಿಂದೂಗಳಿಗೂ ಇಲ್ಲಿ ನನ್ನಷ್ಟೇ ಹಕ್ಕಿದೆ – ಬಾಂಗ್ಲಾದೇಶ ಪ್ರಧಾನಿ ಹೇಳಿಕೆ

    ಢಾಕಾ: ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಇಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅಲ್ಲಿನ ಹಿಂದೂ ಸಮುದಾಯದ ಜನರೊಂದಿಗೆ ಸಂವಾದ ನಡೆಸಿದ್ದಾರೆ.

    ಈ ವೇಳೆ ಮಾತನಾಡಿದ ಅವರು, ಈ ದೇಶದಲ್ಲಿರುವ ಹಿಂದೂ ಸಮಯದಾಯಕ್ಕೆ ನನ್ನಷ್ಟೇ ಹಕ್ಕುಗಳಿವೆ. ನೀವು ಈ ದೇಶದ ಪ್ರಜೆಗಳೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಲಗಿದ್ದಾಗ ಐಟಿಬಿಪಿ ಶಿಬಿರದಿಂದ ಯೋಧರ ಎರಡು AK-47 ರೈಫಲ್ ಕಳವು – ವಿಶೇಷ ತಂಡದಿಂದ ತಲಾಶ್

    ಹಿಂದೂ ಸಮುದಾಯದ ಮಂದಿ ಅಲ್ಪಸಂಖ್ಯಾತರೆಂದು ಭಾವಿಸಬಾರದು. ಇಲ್ಲಿ ಎಲ್ಲಾ ಧರ್ಮದ ಜನರು ಸಮಾನ ಹಕ್ಕುಗಳೊಂದಿಗೆ ಬದುಕಬೇಕೆಂದು ನಾವು ಬಯಸುತ್ತೇವೆ. ನೀವೂ ಈ ದೇಶದ ಪ್ರಜೆಗಳು, ಇಲ್ಲಿ ನನ್ನಂತೆಯೇ ನಿಮಗೂ ಸಮಾನ ಹಕ್ಕುಗಳಿವೆ. ನೀವು ಯಾವಾಗಲೂ ಈ ದೇಶದ ಪ್ರಜೆಗಳೆಂದು ಭಾವಿಸುವುದರಿಂದ ನೀವೂ ಸಮಾನ ಹಕ್ಕುಗಳನ್ನು ಅನುಭವಿಸುತ್ತೀರಿ. ನಾವು ಕೂಡ ನಿಮ್ಮನ್ನು ಆ ರೀತಿಯಲ್ಲಿ ನೋಡಲು ಬಯಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೊಟ್ಟೆಯ ವಿಭಿನ್ನ ಬಳಕೆ: ಕಾಂಗ್ರೆಸ್-ದಾಸೋಹ, ಬಿಜೆಪಿ-ಜನದ್ರೋಹ – ʼಕೈʼ ಟೀಕೆ

    ದೇಶದಲ್ಲಿ ಅಹಿತಕರ ಘಟನೆ ನಡೆದಾಗ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯಕ್ಕೆ ಯಾವುದೇ ಹಕ್ಕು ಇಲ್ಲ ಎಂಬಂತೆ ಬಣ್ಣ ಕಟ್ಟಲಾಗಿದೆ. ಹಿಂದೂಗಳ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದಾಗ ಸ್ಥಳೀಯ ಸರ್ಕಾರಗಳೂ ಗಮನ ಕೊಡುತ್ತಿಲ್ಲ ಎನ್ನುವುದೂ ಇದಕ್ಕೆ ಕಾರಣವಾಗಿದೆ. ಇನ್ನು ಮುಂದೆ ಅದು ಆಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 1,100 ಎನ್‌ಕೌಂಟರ್ ಪೊಲೀಸರಿಂದಲೇ ಮಾಡಿಸ್ತೇವೆ – ಹಿಂದೂ ಸಮಾಜದ ಮುಖಂಡ

    1,100 ಎನ್‌ಕೌಂಟರ್ ಪೊಲೀಸರಿಂದಲೇ ಮಾಡಿಸ್ತೇವೆ – ಹಿಂದೂ ಸಮಾಜದ ಮುಖಂಡ

    ಶಿವಮೊಗ್ಗ: ಪೊಲೀಸರು ಈಗ ಮಾಡಿದ್ರೆ 2 ಎನ್‌ಕೌಂಟರ್, 5 ವರ್ಷದ ಬಳಿಕ ಮಾಡಿದ್ರೆ 1,100 ಎನ್‌ಕೌಂಟರ್ ಅದನ್ನೂ ನಿಮ್ಮ ಕೈಯಲ್ಲೇ ಮಾಡಿಸುತ್ತೇವೆ ಎಂದು ಹಿಂದೂ ಸಮಾಜದ ಮುಖಂಡ ಯಾದವಕೃಷ್ಣ ಬಿಜೆಪಿ ಮುಖಂಡರ ಎದುರೇ ಮಾರ್ಮಿಕವಾಗಿ ಎಚ್ಚರಿಕೆ ನೀಡಿದ್ದಾರೆ.

    ಪ್ರವೀಣ್ ನೆಟ್ಟಾರು ಹತ್ಯೆ ವಿರೋಧಿಸಿ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ನಗರದ ಗೋಪಿ ವೃತ್ತದಲ್ಲಿ ಹಿಂದೂಪರ ಸಂಘಟನೆಗಳಿಂದ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಯಾದವಕೃಷ್ಣ, ಇನ್ನೂ ನಾವು ಬಿಜೆಪಿ ನಾಯಕರ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇವೆ. ಅದನ್ನು ಅವರು ಉಳಿಸಿಕೊಳ್ಳಬೇಕು. ಪೊಲೀಸರು ಈಗ ಎನ್‌ಕೌಂಟರ್ ಮಾಡಿದ್ರೆ 2, 5 ವರ್ಷದ ಬಳಿಕ ಎನ್‌ಕೌಂಟರ್ ಮಾಡಿದರೆ 1,100 ಮಾಡಬೇಕಾಗುತ್ತದೆ. ಅದನ್ನೂ ನಿಮ್ಮ ಕೈಯಲ್ಲೇ ಮಾಡಿಸುತ್ತೇವೆ. ಈಗಲೇ 2 ಮಾಡಿ ಮುಗಿಸಿಬಿಡಿ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.

    ಭಾರತದ ಮುಸ್ಲಿಮರು ಒಂದು ಕ್ಷಣ ಯೋಚಿಸಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದೆ. ಮುಸ್ಲಿಂ ಮುಖಂಡರು ತಮ್ಮ ಸಮಾಜದಲ್ಲಿರುವ ಕೆಟ್ಟವರಿಗೆ ಬುದ್ಧಿ ಹೇಳಿ ತಿದ್ದಬೇಕು. ಅವರು ಹೆಬ್ಬಾವನ್ನು ಸಾಕುತ್ತಿದ್ದಾರೆ. ಕೊನೆಗೊಂದು ದಿನ ಹೆಬ್ಬಾವೇ ಅವರನ್ನು ನುಂಗುತ್ತದೆ, ಅದಕ್ಕೂ ಮುನ್ನವೇ ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

    ಗೆಲ್ಲಿಸಿರೋದು ಕಾರಲ್ಲಿ ಓಡಾಡೋಕಲ್ಲ: ಹಿಂದೂ ಸಮಾಜ, ಬಿಜೆಪಿಯನ್ನು ಗೆಲ್ಲಿಸಿರುವುದು ಪಕ್ಷದ ನಾಯಕರನ್ನು ಕಾರಿನಲ್ಲಿ ಓಡಾಡಿಸಲು ಅಲ್ಲ. ಹಿಂದೂ ಯುವಕರ ಹತ್ಯೆಯಾಗುತ್ತಿದ್ದರೂ ಮೂಕ ಪ್ರೇಕ್ಷಕರಾಗುತ್ತಿದ್ದೇವೆ. ಕರಾವಳಿ ಭಾಗದಲ್ಲಿ ಬಿಜೆಪಿಯೇ ಗೆದ್ದಿದೆ. 6 ಬಾರಿ ಗೆದ್ದು ಶಾಸಕರಾದವರು ಅಲ್ಲಿದ್ದಾರೆ. ಹಿಂದೂ ಸಮಾಜ ಬಿಜೆಪಿ ನಾಯಕರನ್ನು ಗೆಲ್ಲಿಸಿರುವುದು ಇವರನ್ನು ಕಾರಿನಲ್ಲಿ ಓಡಾಡಿ ಟೈರ್ ಸವೆಸಲು ಅಲ್ಲ. ಹಿಂದೂ ಸಮಾಜವನ್ನು ರಕ್ಷಣೆ ಮಾಡಬೇಕಾದವರು ಅದನ್ನು ಮರೆಯುತ್ತಿದ್ದಾರೆ. ಇದು ಹೀಗೆ ಮುಂದುವರೆಯಬಾರದು ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಿಂದೂ ಯುವತಿಯ ಅಪಹರಣ, ಬಲವಂತದಿಂದ ಮತಾಂತರ ಮಾಡಿ ಮುಸ್ಲಿಂ ಯುವಕನೊಂದಿಗೆ ಮದುವೆ

    ಹಿಂದೂ ಯುವತಿಯ ಅಪಹರಣ, ಬಲವಂತದಿಂದ ಮತಾಂತರ ಮಾಡಿ ಮುಸ್ಲಿಂ ಯುವಕನೊಂದಿಗೆ ಮದುವೆ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಿಂದೂ ಯುವತಿಯನ್ನು ಅಪಹರಣ ಮಾಡಿ ಬಲವಂತದಿಂದ ಇಸ್ಲಾಂಗೆ ಮತಾಂತರ ಮಾಡಿ ಬಳಿಕ ಆಕೆಯನ್ನು ಮುಸ್ಲಿಂ ಯುವಕನೊಂದಿಗೆ ಮದುವೆ ಮಾಡಿಸಲಾಗಿದೆ ಎಂದು ವರದಿಯಾಗಿದೆ.

    ಸಂತ್ರಸ್ತ ಹಿಂದೂ ಯುವತಿ ಕರೀನಾಳನ್ನು ಮತಾಂತರಗೊಳಿಸಿ ಖಲಿಲ್ ರೆಹಮಾನ್ ಜೊನೊ ಎಂಬ ಮುಸ್ಲಿಂ ಯುವಕನೊಂದಿಗೆ ಮದುವೆ ಮಾಡಲಾಗಿದೆ. ಖಲಿಲ್ ಪಾಕಿಸ್ತಾನದ ಮೀರ್ ಮೊಹಮ್ಮದ್ ಜೊನೊ ಹಳ್ಳಿಯ ನಿವಾಸಿ. ಈತ ಖಾಜಿ ಅಹ್ಮದ್ ನಗರದ ಉನ್ನರ್ ಮುಹಲ್ಲಾದಿಂದ ಯುವತಿಯನ್ನು ಅಪಹರಿಸಿ ಮತಾಂತರಗೊಳಿಸಿ, ಬಳಿಕ ಮದುವೆಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

    ಯುವತಿ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಸೆಕ್ಷನ್ 365-ಬಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಯುವಕ ಖಲೀಲ್ ಹಾಗೂ ಅವನ ತಂದೆ ಅಸ್ಗರ್ ಜೋನೋ ಇಬ್ಬರನ್ನೂ ಬಂಧಿಸಲಾಗಿದೆ. ಈ ಘಟನೆಗೆ ದೇಶದ ವಿವಿಧ ಮಾನವ ಹಕ್ಕು ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೆಲವೆಡೆ ಹಿಂದೂಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಕ್ಷಣಕ್ಷಣಕ್ಕೂ ವಿಷಮ ಸ್ಥಿತಿ – ಓರ್ವ ನಾಗರಿಕ ಸಾವು, 35 ಮಂದಿಗೆ ಗಾಯ

    ಈ ಕುರಿತು ಮಾತನಾಡಿರುವ ಹಿಂದೂ ಪಂಚಾಯತ್ ನಾಯಕ ಮನೋಮಾಲ್, ಹಿಂದೂ ಯುವತಿಗೆ ಪ್ರಾಣ ಬೆದರಿಕೆಯೊಡ್ಡಿ ಬಲವಂತದಿಂದ ಮತಾಂತರ ಮಾಡಲಾಗಿದೆ. ಪಾಕಿಸ್ತಾನದಲ್ಲಿ ಹಿಂದೂ ಸಮುದಾಯ ಆತಂಕದಲ್ಲಿದ್ದು, ಇತ್ತೀಚಿನ ದಿನಗಳಲ್ಲಿ ಬಲವಂತದ ಮತಾಂತರ ಪ್ರಕರಣಗಳು ಹೆಚ್ಚುತ್ತಿವೆ. ಪೊಲೀಸ್ ಇಲಾಖೆ ಹಿಂದೂಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಕೋರಿದ್ದಾರೆ. ಇದನ್ನೂ ಓದಿ: ಉತ್ತರ ಕೊರಿಯಾದೊಂದಿಗಿನ ಸಂಬಂಧವನ್ನು ಕಡಿತಗೊಳಿಸಿದ ಉಕ್ರೇನ್

    ಈ ವರ್ಷದ ಆರಂಭದಲ್ಲಿಯೂ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ತನ್ನ ಮನೆಯಲ್ಲೇ ಹಿಂದೂ ಯುವತಿ ಪೂಜಾ ಕುಮಾರಿಯನ್ನು ಮುಸ್ಲಿಂ ವ್ಯಕ್ತಿಯೊಬ್ಬ ಗುಂಡುಹಾರಿಸಿ ಹತ್ಯೆಮಾಡಿದ್ದನು ಎಂದು ಹೇಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಲವ್ ಜಿಹಾದ್ ಬದಲಿಗೆ `ಲವ್ ಕೇಸರಿ’ ಟ್ರೆಂಡ್ ಸೃಷ್ಟಿಸಲು ಶ್ರೀರಾಮಸೇನೆ ಕರೆ

    ಲವ್ ಜಿಹಾದ್ ಬದಲಿಗೆ `ಲವ್ ಕೇಸರಿ’ ಟ್ರೆಂಡ್ ಸೃಷ್ಟಿಸಲು ಶ್ರೀರಾಮಸೇನೆ ಕರೆ

    ರಾಯಚೂರು: ಶ್ರೀರಾಮನವಮಿ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ `ಲವ್ ಕೇಸರಿ’ ಎಂಬ ಟ್ರೆಂಡ್ ಸೃಷ್ಟಿಸಲು ಶ್ರೀರಾಮಸೇನೆ ಕರೆ ನೀಡಿದೆ.

    ರಾಯಚೂರು ನಗರದಲ್ಲಿ ನಡೆದಿದ್ದ ಕಾರ್ಯಕ್ರಮದ ವೇಳೆ ಶ್ರೀರಾಮಸೇನೆ ರಾಯಚೂರು ಜಿಲ್ಲಾ ಸಂಚಾಲಕ ರಾಜಾಚಂದ್ರ ರಾಮನಗೌಡ `ಲವ್ ಜಿಹಾದ್ ಬದಲು, ಲವ್ ಕೇಸರಿ ಮಾಡಿ’ ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ರಾಮನವಮಿ ರ‍್ಯಾಲಿ ವೇಳೆ ಕೋಮುಸಂಘರ್ಷ: 4 ರಾಜ್ಯಗಳಲ್ಲಿ ನಡೆದಿದ್ದೇನು?

    SHRIRAMASENE

    ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಯಚೂರು ಜಿಲ್ಲೆಯಲ್ಲಿ ಇನ್ನುಮುಂದೆ ಯಾವುದೇ ಲವ್ ಜಿಹಾದ್ ಪ್ರಕರಣ ಬರಬಾರದು. ಹಾಗಾಗಿ ಲವ್ ಕೇಸರಿ ಮಾಡಿ, ನೀವು ಮಾಡಲೇಬೇಕು. ಲವ್ ಜಿಹಾದ್ ಹೆಸರಿನಲ್ಲಿ ನಮ್ಮ ಮನೆ ಹೆಣ್ಣುಮಕ್ಕಳನ್ನು ಮಕ್ಕಳು ಹೆರುವ ಯಂತ್ರಗಳನ್ನಾಗಿ ಮಾಡಿಕೊಂಡಿದ್ದಾರೆ. ನಮ್ಮನೆ ಹೆಣ್ಮಕ್ಕಳನ್ನು ಕರೆದುಕೊಂಡು ಹೋಗಿ ಕಪ್ಪು ಬುರ್ಕಾ ಹಾಕಿಸಿ ಬಿಸಿಲಲ್ಲಿ ತಿರುಗಾಡುವಂತೆ ಮಾಡುತ್ತಾರೆ. ಅವರನ್ನು ಹಾಗೆಯೇ ಸುಮ್ಮನೇ ಬಿಡಬೇಕಾ ಎಂದು ಪ್ರಶ್ನಿಸಿದ್ದಾರೆ.  ಇದನ್ನೂ ಓದಿ: ಕಲಬುರಗಿ ವಿವಿ ಆವರಣದಲ್ಲಿ ರಾಮನವಮಿ ಆಚರಿಸ್ತಿದ್ದ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಹಲ್ಲೆ

    RAMANAVAMI
    ಸಾಂದರ್ಭಿಕ ಚಿತ್ರ

    ಕೆಲ ಮುಸ್ಲಿಮರು ಒಂದೊಂದು ವಾರ ಸ್ನಾನ ಮಾಡಲ್ಲ, ಆದ್ರೆ ಸೆಂಟ್ ಹಾಕಿಕೊಂಡು ಹೆಣ್ಮಕ್ಕಳ ಹಿಂದೆ ಓಡಾಡ್ತಾರೆ. ಆದರೆ ನಮ್ಮ ಹೆಣ್ಣುಮಕ್ಕಳಿಗೆ ಎಲ್ಲಿ ಹೇಳಿಕೊಳ್ಳಬೇಕು ಎಂಬುದು ಗೊತ್ತಿರುವುದಿಲ್ಲ. ಈ ವೇದಿಕೆ ಮೂಲಕ ಅವರಿಗೆ ಕರೆ ನೀಡುತ್ತಿದ್ದೇವೆ. ಒಂದು ವೇಳೆ ಮುಸ್ಲಿಮರು ಹಿಂದೂ ಹೆಣ್ಣುಮಕ್ಕಳಿಗೆ ತೊಂದರೆ ಕೊಟ್ಟರೆ ನಮ್ಮ ಬಳಿ ಹೇಳಿ, ಅವರ ಮರ್ಮಾಂಗವನ್ನೇ ಕತ್ತರಿಸಿ ಹಾಕೋಣ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಅಲ್ಲದೇ ನೀವು ಸುಮ್ಮನೆ ಒಂದು ತಲ್ವಾರ್ ಇಟ್ಟುಕೊಳ್ಳಿ. ಅವರು ನಿಮ್ಮ ಮೇಲೆ ದಾಳಿ ಮಾಡಲು ಬಂದೇ ಬರುತ್ತಾರೆ. ಆಗ ನೀವೇ ಅವರನ್ನು ಕೊಚ್ಚಿ ಹಾಕಿ ಎಂಬ ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದಾರೆ.

  • ಶ್ರೀರಾಮನ ಹೆಸರಿನಲ್ಲಿ ಮುಸ್ಲಿಮರ ಶಾಂತಿಗೆ ಭಂಗ ತರುವುದು ಬೇಡ: ಹೆಚ್‌ಡಿಕೆ ಮನವಿ

    ಶ್ರೀರಾಮನ ಹೆಸರಿನಲ್ಲಿ ಮುಸ್ಲಿಮರ ಶಾಂತಿಗೆ ಭಂಗ ತರುವುದು ಬೇಡ: ಹೆಚ್‌ಡಿಕೆ ಮನವಿ

    ಬೆಂಗಳೂರು: ಮತ್ತೆ ಮುಸ್ಲಿಮರ ಓಲೈಕೆಗೆ ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡುವ ಮೂಲಕ ಸಮುದಾಯದ ಪರ ಧ್ವನಿ ಎತ್ತಿದ್ದಾರೆ.

    ಶ್ರೀರಾಮನ ಹೆಸರಿನಲ್ಲಿ ಶೋಭಾಯಾತ್ರೆ ನಡೆಸಲು ನನ್ನದೇನೂ ಅಭ್ಯಂತರವಿಲ್ಲ, ಅದಕ್ಕೆ ನನ್ನ ಬೆಂಬಲವಿದೆ. ಆದರೆ ಶೋಭಾಯಾತ್ರೆ ಹೆಸರಿನಲ್ಲಿ ಇನ್ನೊಂದು ಸಮುದಾಯ ವಾಸ ಮಾಡುವ ಬೀದಿಗಳಲ್ಲಿ ಅಥವಾ ಅವರ ಪ್ರಾರ್ಥನಾ ಮಂದಿರಗಳ ಮುಂದೆ ಡಿಜೆ ಸೆಟ್ಟುಗಳನ್ನು ಹಾಕಿಕೊಂಡು 15-20 ನಿಮಿಷ ಕಾಲ ಕುಣಿಯುವುದು, ಕೇಕೆ ಹಾಕುವುದು ಇತ್ಯಾದಿ ಮಾಡುವುದು ಬೇಡವೆಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ನಡೀತಿರೋ ಬೆಳವಣಿಗೆಗಳು ಆಡಳಿತ ಪಕ್ಷಕ್ಕೆ ಗೌರವ ತರುವುದಿಲ್ಲ: ಮಾಧುಸ್ವಾಮಿ ಅಸಮಾಧಾನ

    ಇದರಿಂದ ಶಾಂತಿ ಕದಡುತ್ತದೆ, ಹಾಗಾಗುವುದು ಬೇಡ. ಒಂದು ಸಮುದಾಯದ ಜನರು ಈಗ ಉಪವಾಸ ಆಚರಣೆಯಲ್ಲಿದ್ದಾರೆ. ಶೋಭಾಯಾತ್ರೆ ಹಿಂದೂಗಳು ವಾಸ ಮಾಡುವ ಬಡಾವಣೆ, ಬೀದಿಗಳಲ್ಲಿ ಮಾಡಿ, ಅರ್ಧ ಗಂಟೆ ಸಾಲದಿದ್ದರೆ, ಒಂದು ಗಂಟೆ ಮಾಡಿ. ಇದಕ್ಕೆ ನನ್ನ ಬೆಂಬಲವಿದೆ. ಈ ಸಮಯದಲ್ಲಿ ಅವರ ಬಡಾವಣೆಗಳಿಗೆ ಹೋಗಿ ಶಾಂತಿಗೆ ಭಂಗ ತರುವುದು ಬೇಡ. ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡುತ್ತೇನೆ. ಇದನ್ನೂ ಓದಿ: ಸೇಡು ತೀರಿಸಿಕೊಳ್ಳಲ್ಲ, ಕಾನೂನು ತನ್ನ ಮಾರ್ಗವನ್ನು ತೆಗೆದುಕೊಳ್ಳುತ್ತೆ: ಶೆಹಬಾಜ್ ಷರೀಫ್

    KUMARASWAMY

    ಶ್ರೀರಾಮಚಂದ್ರ ಮಹಾಪ್ರಭು ನಮ್ಮೆಲ್ಲರ ಆರಾಧ್ಯ ದೈವ. ಅಷ್ಟೇ ಅಲ್ಲ; ಮನುಕುಲಕ್ಕೆ ಆದರ್ಶ, ತ್ಯಾಗ, ಸರಳತೆ, ಶಾಂತಿ, ಸಹನೆ, ಮೌಲ್ಯಗಳ ದಿವ್ಯಬೆಳಕು ತೋರಿದ ನಮ್ಮೊಳಗಿನ ದೈವ. ರಾಮರಾಜ್ಯವು ಸರ್ವ ಜನಾಂಗದ ಶಾಂತಿಯ ತೋಟವಾಗಿತ್ತು. ಈ ಹಿನ್ನೆಲೆಯಲ್ಲಿ ರಾಮನವಮಿ ಹಬ್ಬವನ್ನು ಭಕ್ತಿ-ಶ್ರದ್ಧೆಯಿಂದ ಆಚರಿಸೋಣ ಎಂದು ಕರೆ ನೀಡಿದ್ದಾರೆ.