Tag: Hindu American Foundation

  • ‘ಗೋ ಬ್ಯಾಕ್ ಹಿಂದೂ’: ಅಮೆರಿಕದ ಸ್ವಾಮಿನಾರಾಯಣ ದೇವಸ್ಥಾನ ಆವರಣದಲ್ಲಿ ಆಕ್ಷೇಪಾರ್ಹ ಬರವಣಿಗೆ

    ‘ಗೋ ಬ್ಯಾಕ್ ಹಿಂದೂ’: ಅಮೆರಿಕದ ಸ್ವಾಮಿನಾರಾಯಣ ದೇವಸ್ಥಾನ ಆವರಣದಲ್ಲಿ ಆಕ್ಷೇಪಾರ್ಹ ಬರವಣಿಗೆ

    ಸ್ಯಾಕ್ರಮೆಂಟೊ: ಅಮೆರಿಕದಲ್ಲಿರುವ (America) ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನಗಳನ್ನು (BAPS Swaminarayana Temple) ನಿರಂತರವಾಗಿ ಗುರಿಯಾಗಿಸಿಕೊಂಡಿದ್ದು, ಹಿಂದೂ ವಿರೋಧಿ ಹೇಳಿಕೆಯನ್ನು ಬರೆಯಲಾಗುತ್ತಿದೆ. ನ್ಯೂಯಾರ್ಕ್ (NewYork) ಘಟನೆ ಬೆನ್ನಲ್ಲೆ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿರುವ ಶ್ರೀ ಸ್ವಾಮಿನಾರಾಯಣ ದೇವಾಲಯವನ್ನು ಗುರಿಯಾಗಿರಿಸಿಕೊಳ್ಳಲಾಗಿದೆ. ದೇವಸ್ಥಾನದ ಹೊರಭಾಗದಲ್ಲಿರುವ ಬೋರ್ಡ್ ಮೇಲೆ ಹಿಂದೂ ವಿರೋಧಿ ಹೇಳಿಕೆಗಳನ್ನು ಬರೆಯಲಾಗಿದೆ.

    ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ದೇವಸ್ಥಾನವು ರಾಂಚೋ ಕಾರ್ಡೋವಾ ಪ್ರದೇಶದಲ್ಲಿ ಆರ್ಮ್ಸ್ಟ್ರಾಂಗ್ ಅವೆನ್ಯೂದಲ್ಲಿದೆ. ಇದು ಸ್ಯಾಕ್ರಮೆಂಟೊ ಮಾಥರ್ ವಿಮಾನ ನಿಲ್ದಾಣದ ಉತ್ತರ ಭಾಗದಲ್ಲಿದೆ. ದೇವಸ್ಥಾನದ ಹೊರಗಿರುವ ಬೋರ್ಡ್ ಮೇಲೆ ‘ಗೋ ಬ್ಯಾಕ್ ಹಿಂದೂ’ ಎಂದು ಬರೆಯಲಾಗಿದ್ದು, ಸ್ಯಾಕ್ರಮೆಂಟೊ ಕೌಂಟಿಯ ಪೊಲೀಸ್ ಅಧಿಕಾರಿಗಳು ‘ದ್ವೇಷ ಅಪರಾಧ’ವನ್ನು ತನಿಖೆ ಮಾಡುತ್ತಿದ್ದಾರೆ. ಇದನ್ನೂ ಓದಿ: ತಮಿಳುನಾಡು ಮಾಜಿ ಸಚಿವ ಸೆಂಥಿಲ್ ಬಾಲಾಜಿಗೆ ಸುಪ್ರೀಂ ಜಾಮೀನು

    ಪಾರ್ಕಿಂಗ್ ಲಾಟ್ ಮುಂಭಾಗದ ಸೈನ್ ಬೋರ್ಡ್‌ನಲ್ಲಿ ಭಾರತ ಸರ್ಕಾರ ಎಂದು ನಮೂದಿಸಿ ಈ ಹೇಳಿಕೆ ಬರೆಯಲಾಗಿದೆ. ದಾಳಿಕೋರರು ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ನೀರಿನ ಮಾರ್ಗವನ್ನೂ ಕಡಿತಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ಮೋದಿ (Narendra Modi) ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ದಾಳಿಗಳು ನಡೆದಿವೆ.

    ಇದಕ್ಕೂ ಮೊದಲು ಸೆ.17 ರಂದು ನ್ಯೂಯಾರ್ಕ್‌ನ ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ದೇವಸ್ಥಾನದಲ್ಲಿ ವಿಧ್ವಂಸಕ ಘಟನೆ ನಡೆದಿತ್ತು. ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕೂಡ ಶ್ರೀ ಸ್ವಾಮಿನಾರಾಯಣ ದೇವಸ್ಥಾನದ ವಿಧ್ವಂಸಕತೆಯನ್ನು ಖಂಡಿಸಿದರು ಮತ್ತು ಅದನ್ನು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು: ಕಾಂಗ್ರೆಸ್ ನಾಯಕ ಕೆ.ಬಿ.ಕೋಳಿವಾಡ

    ದೇಶದಲ್ಲಿ ಪದೇ ಪದೇ ದ್ವೇಷ ಮತ್ತು ಹಿಂಸಾಚಾರದ ಘಟನೆಗಳ ಬಗ್ಗೆ ಕಾಂಗ್ರೆಸ್ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಭಾರತೀಯ-ಅಮೆರಿಕನ್ ಶಾಸಕ ಥಾನೇದಾರ್ ಅವರು ಈ ಹೇಯ ಕೃತ್ಯವನ್ನು ಬಲವಾಗಿ ಖಂಡಿಸಿದರು ಮತ್ತು ಇಂತಹ ‘ವಿಧ್ವಂಸಕ, ಧರ್ಮಾಂಧತೆ ಮತ್ತು ದ್ವೇಷದ’ ಕೃತ್ಯಗಳನ್ನು ಕೂಲಂಕಷವಾಗಿ ತನಿಖೆ ಮಾಡಬೇಕು ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ಬಿಜೆಪಿ ನಾಯಕನ ಪತ್ನಿ ವಿರುದ್ಧ ಮಾನಹಾನಿ ಹೇಳಿಕೆ – ಸಂಜಯ್ ರಾವತ್‍ಗೆ 15 ದಿನಗಳ ಜೈಲು!

  • ನ್ಯೂಯಾರ್ಕ್‌ನಲ್ಲಿ ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನ ಧ್ವಂಸ

    ನ್ಯೂಯಾರ್ಕ್‌ನಲ್ಲಿ ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನ ಧ್ವಂಸ

    ನ್ಯೂಯಾರ್ಕ್: ಮೆಲ್ವಿಲ್ಲೆಯಲ್ಲಿರುವ (Melville) ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನವನ್ನು (BAPS Swaminayaran Temple) ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.

    ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ (Indian Consulate General) ಅಮೆರಿಕಾದ ಕಾನೂನು ಅಧಿಕಾರಗಳ ಮುಂದೆ ವಿಷಯವನ್ನು ಪ್ರಸ್ತಾಪಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದೆ.ಇದನ್ನೂ ಓದಿ: ಉಡುಪಿ: ಇನ್ನೊಬ್ಬರ ಜೀವ ಉಳಿಸಲು ಹೋಗಿ ತನ್ನ ಪ್ರಾಣವನ್ನೇ ತೆತ್ತ ಶಿಕ್ಷಕಿ ಅರ್ಚನಾ ಕಾಮತ್

    ಮೆಲ್ವಿಲ್ಲೆಯಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನ ಧ್ವಂಸಗೊಳಿಸಿರುವ ಸಂಬಂಧ ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಖಂಡಿಸಿದ್ದು, ಇದು ಸ್ವೀಕಾರವಲ್ಲ ಹಾಗೂ ಅಮೆರಿಕಾದ ಕಾನೂನು ಅಧಿಕಾರಿಗಳು ಹೇಯ ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

    ಅಮೆರಿಕಾದ ಹಿಂದೂ ಸಂಸ್ಥೆಯು (Hindu American Foudation) ಬಿಎಪಿಎಸ್, ಹಿಂದೂ ದೇವಾಲಯದ ಧ್ವಂಸಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಅಮೆರಿಕಾದ ನ್ಯಾಯ ಇಲಾಖೆಗೆ ತಿಳಿಸಿದೆ.

    ಕ್ಯಾಲಿಫೋನಿರ್ಯಾ ಹಾಗೂ ಕೆನಡಾದ ದೇವಸ್ಥಾನಗಳ ಮೇಲೆ ಆದ ದಾಳಿ ಬಳಿಕ, ಅದೇ ರೀತಿಯಲ್ಲಿ ನ್ಯೂಯಾರ್ಕ್ ದೇವಸ್ಥಾನದ ಧ್ವಂಸ ನಡೆದಿದೆ ಎಂದು ಅಮೆರಿಕಾದ ಹಿಂದೂ ಸಂಸ್ಥೆಯು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದೆ.ಇದನ್ನೂ ಓದಿ: ಲೇಡಿ ಸೂಪರ್ ಸ್ಟಾರ್‌ಗೆ ತಮಿಳು ಡೈರೆಕ್ಟರ್ ಸುಂದರ್ ಸಿ. ಆ್ಯಕ್ಷನ್ ಕಟ್