ಹುಬ್ಬಳ್ಳಿ: ಪಾಕಿಸ್ತಾನದ ವಿರುದ್ಧ ಯುದ್ಧ ಬೇಡ ಎಂದಿದ್ದ ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿಕೆ ಖಂಡಿಸಿ ಪೋಸ್ಟ್ ಹಾಕಿದ್ದ ಹಿಂದೂ ಕಾರ್ಯಕರ್ತನ ಮೇಲೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಈ ಕುರಿತು ಹಿಂದೂ ಕಾರ್ಯಕರ್ತ ಶಿವಾನಂದ ಸತ್ತಿಗೇರಿ ಪ್ರತಿಕ್ರಿಯಿಸಿದ್ದು, ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ನಡೆ ಸರಿಯಿಲ್ಲ. ರಾಜ್ಯದಲ್ಲಿರುವ ಹಿಂದೂ ಕಾರ್ಯಕರ್ತರ ಮೇಲೆ ಕೇಸ್‌ಗಳ ಸುರಿಮಳೆ ಸುರಿಸುತ್ತಿದ್ದಾರೆ. ಈ ಮೂಲಕ ಹಿಂದೂ ಕಾರ್ಯಕರ್ತರನ್ನು ಬೆದರಿಸುವ ತಂತ್ರ ನಡೆಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲಗೆ ಗಡೀಪಾರು ನೋಟಿಸ್
ಸಿದ್ದರಾಮಯ್ಯನವರ ಪ್ರಚೋದನಕಾರಿ ಹೇಳಿಕೆ ವಿರುದ್ಧ ಪೋಸ್ಟ್ ಮಾಡಿದ್ದೆ. ಡಿಲೀಟ್ ಆದ ಒಂದು ತಿಂಗಳ ನಂತರ ಇದೀಗ ಪ್ರಕರಣ ದಾಖಲಾಗಿದೆ. ಈ ರೀತಿ ಪ್ರಕರಣ ದಾಖಲು ಮಾಡಿರುವುದು ಸರಿಯಲ್ಲ. ಈ ಬಗ್ಗೆ ನಾನು ಕಾನೂನು ಹೋರಾಟ ನಡೆಸುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾನೆ.
ಕಳೆದ ಏ.28 ರಂದು ಬಜರಂಗದಳ ಕಾರ್ಯಕರ್ತ ಶಿವಾನಂದ ಸತ್ತಿಗೇರಿ ಪಾಕಿಸ್ತಾನದ ವಿರುದ್ಧ ಯುದ್ಧ ಬೇಡ ಎಂಬ ಸಿಎಂ ಸಿದ್ಧರಾಮಯ್ಯ ಹೇಳಿಕೆ ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಪೋಸ್ಟ್ನಲ್ಲಿ ಸಿಎಂ ಅವರಿಗೆ ಗೋಡ್ಸೆ ಬೇಕಾಗಿದ್ದಾರೆ ಎಂದು ಉಲ್ಲೇಖಿಸಿದ್ದರು. ಬಳಿಕ ಪೊಲೀಸರು ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿಸಿದ್ದರು.ಇದನ್ನೂ ಓದಿ: Chikkaballapura | ಲಾಂಗ್‌ನಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಣೆ – ಆಟೋ ಚಾಲಕ ಅರೆಸ್ಟ್
– ಭರತ್ ಕುಮ್ಡೇಲ್‌ಗೆ ಜೀವ ಬೆದರಿಕೆ; ಡೇಟ್ ಫಿಕ್ಸ್ ಮಾಡಿ ಪೋಸ್ಟ್
ಮಂಗಳೂರು: ಸುಹಾಸ್ ಶೆಟ್ಟಿ (Suhas Shetty) ಬೆನ್ನಲ್ಲೇ ಮಂಗಳೂರಲ್ಲಿ ಮತ್ತೊಬ್ಬ ಹಿಂದೂ ಮುಖಂಡನ (Hindu Activist) ಹತ್ಯೆಗೆ ಸಂಚು ರೂಪಿಸಲಾಗಿದೆ. ಭರತ್ ಕುಮ್ಡೇಲ್‌ಗೆ ಜೀವ ಬೆದರಿಕೆ ಇದ್ದು, ಡೀಟ್ ಫಿಕ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹರಿದಾಡುತ್ತಿದೆ.
ಎಸ್‌ಡಿಪಿಐ ಮುಖಂಡ ಅಶ್ರಫ್ ಕಲಾಯಿ ಹತ್ಯೆಯ ಪ್ರಮುಖ ಆರೋಪಿ ಭರತ್ ಕುಮ್ಡೇಲು. 2017ರ ಜೂನ್ 21 ರಂದು ಅಶ್ರಫ್ ಹತ್ಯೆಯಾಗಿತ್ತು. ಬಂಟ್ವಾಳದ ಬೆಂಜನಪದವು ಎಂಬಲ್ಲಿ ಅಶ್ರಫ್ ಬರ್ಬರವಾಗಿ ಹತ್ಯೆಗೀಡಾಗಿದ್ದ. ಎಸ್‌ಡಿಪಿಐನಲ್ಲಿ ಅಶ್ರಫ್ ಮುಂಚೂಣಿಯಲ್ಲಿದ್ದ. ಆತನ ಹತ್ಯೆ ಬಳಿಕ ಪ್ರತೀಕಾರವಾಗಿ ಬಂಟ್ವಾಳದ ಶರತ್ ಮಡಿವಾಳ ಹತ್ಯೆಯಾಗಿತ್ತು.
ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಶರಣ್ ಪಂಪ್ವೆಲ್, ಭರತ್ ಕುಮ್ಡೇಲ್‌ಗೆ ಜೀವ ಬೆದರಿಕೆ ಹಾಕಲಾಗಿದೆ. ಮುಂದಿನ ಟಾರ್ಗೆಟ್ ಶರಣ್ ಪಂಪ್ವೆಲ್ ಎಂದು ಪೋಸ್ಟ್ ಹರಿಬಿಡಲಾಗಿದೆ. ಪೊಲೀಸ್ ಇಲಾಖೆಯ ಕ್ರಮದ ನಡುವೆ ದ್ವೇಷ ಕಾರುವ ಪೋಸ್ಟ್ ಹಾಕಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಮುಖಂಡರಿಗೆ ಜೀವ ಬೆದರಿಕೆ ಒಡ್ಡಲಾಗಿದೆ. ವಿಹೆಚ್‌ಪಿ ಮುಖಂಡ ಶರಣ್ ಪಂಪ್ವೆಲ್ ಹಾಗೂ ಭಜರಂಗದಳ ಮುಖಂಡ ಭರತ್ ಕುಮ್ಡೇಲ್‌ಗೆ ಜೀವಬೆದರಿಕೆ ಬಂದಿದೆ. ಇದನ್ನೂ ಓದಿ: ಪಹಲ್ಗಾಮ್ ದಾಳಿ, ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ಚಿಕ್ಕಮಗಳೂರು ಬಂದ್‌ಗೆ ಕರೆ
ಬೆಂಗಳೂರು: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಕೇಸ್ (Suhas Shetty Case) ಅನ್ನು ಎನ್‌ಐಎಗೆ ವಹಿಸಬೇಕು ಎಂದು ಮಾಜಿ ಸಿಎಂ ಸದಾನಂದ ಗೌಡ (Sadananda Gowda) ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದೊಂದು ಟೋಟಲ್ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹೇಗೆ ಹದಗೆಟ್ಟಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿ. ಒಂದೆರೆಡು ಕೇಸ್ ಅಲ್ಲ. ಬ್ಯಾಂಕ್ ದರೋಡೆ ಸೇರಿ ಅನೇಕ ಕೇಸ್ ಆಗಿವೆ. ಸರ್ಕಾರ ಕೊಲೆ ಮಾಡೋ ಇಂತಹವರಿಗೆ ಬೆಂಬಲ ಕೊಡುವ ರಾಜನೀತಿ ಮಾಡುತ್ತಿದೆ. ಹಿಂದೂಗಳನ್ನು ಎರಡನೇ ದರ್ಜೆ ರೀತಿ ನೋಡುತ್ತಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೆ. ಯುದ್ಧ ಮಾಡಬೇಡಿ ಎನ್ನುತ್ತಾರೆ. ಇವತ್ತು ಹೋಗಿ ಗೃಹ ಸಚಿವರು ಸಭೆ ಮಾಡುತ್ತಿದ್ದಾರೆ. ಕೇವಲ ಮುಸ್ಲಿಂ ಸಂಘಟನೆಗಳನ್ನು ಕರೆದು ಸಭೆ ಮಾಡುತ್ತಿದ್ದಾರೆ. ಸ್ಥಳೀಯ ಶಾಸಕರನ್ನು ಕರೆದಿಲ್ಲ. ಇದು ಯಾವ ಸರ್ಕಾರದ ನೀತಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆ ವೇಳೆ ಕಾಣಿಸಿಕೊಂಡಿದ್ದ ಬುರ್ಖಾಧಾರಿ ಮಹಿಳೆಯರ ಬಗ್ಗೆ ಪೊಲೀಸ್ ಕಮಿಷನರ್ ಹೇಳಿದ್ದೇನು?
ಸುಹಾಸ್ ಕೇಸ್‌ನಲ್ಲಿ 8 ಜನರ ಬಂಧನ ಆಗಿದೆ. ಆದರೆ ಅಶ್ರಫ್ ಕೊಲೆ ಕೇಸ್‌ನಲ್ಲಿ 25 ಜನ ಅರೆಸ್ಟ್ ಮಾಡ್ತಾರೆ. ಆದರೆ ಈ ಕೇಸ್ ನಲ್ಲಿ ಅಲ್ಲೇ 25 ಜನ ಇದ್ದರು,ಬುರ್ಕಾ ಹಾಕಿರೋ ವಿಡಿಯೋ ಇದ್ದರು ಅರೆಸ್ಟ್ ಆಗಿಲ್ಲ. ಈ ಸರ್ಕಾರ ಮೈನಾರಿಟಿ ಪರ ಅಂತ ತೋರಿಸಿಸೋಕೆ ಹೋಗ್ತಿದೆ.ಈ ಸರ್ಕಾರ ಈ ಕೇಸ್ ನಲ್ಲಿ ಏನು ಮಾಡೊಲ್ಲ. ಜನರು ಬೀದಿಗೆ ಇಳಿಯಬೇಕು. ಹೀಗಾಗಿ ಈ ಕೇಸ್ ಎನಐಎಗೆ ತನಿಖೆಗೆ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ ಪ್ರಕರಣ – 8 ಆರೋಪಿಗಳ ಬಂಧನ
ಕರಾವಳಿ ಭಾಗದಲ್ಲಿ ಇಂತಹ ಕೇಸ್ ಹೆಚ್ಚು ಆಗುತ್ತಿದೆ. ಹೀಗಾಗಿ ಎನ್‌ಐಎ (NIA) ಬ್ರ‍್ಯಾಂಚ್ ಈ ಭಾಗದಲ್ಲಿ ಪ್ರಾರಂಭ ಮಾಡಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಿದರು. ಈ ಸರ್ಕಾರ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ. ಕೇವಲ ಸಚಿವರು ಮೈನಾರಿಟಿ ಅವರನ್ನು ಕರೆದು ಸಭೆ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳನ್ನು ಕರೆದಿಲ್ಲ. ಇಂತಹ ಘಟನೆ ಆದರೆ ಆರ್‌ಎಸ್‌ಎಸ್, ಬಿಜೆಪಿ ಬಿಟ್ಟರೆ ಇವರು ಬೇರೆ ಯಾರ ಮೇಲೂ ಹೇಳಲ್ಲ. ಇಂತಹ ರಾಜನೀತಿ ಸಮಾಜಕ್ಕೆ ದೊಡ್ಡ ಮಾರಕ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪಾಕಿಸ್ತಾನದ ಬೇಹುಗಾರಿಕಾ ಏಜೆನ್ಸಿಯಿಂದ ಕದಂಬ ನೌಕಾ ನೆಲೆಯ ಯುದ್ಧ ಹಡಗುಗಳ ಮಾಹಿತಿ ಪಡೆಯಲು ಯತ್ನ!
ಕೊಲೆಗೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಕೊಲೆ ಮಾಡುವ ಪೋಸ್ಟರ್ ಹರಿದಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸುಹಾಸ್ ಶೆಟ್ಟಿಗೆ ರಕ್ಷಣೆ ಕೊಡಬೇಕಿತ್ತು. ಬೇರೆ ಕೇಸ್‌ನಲ್ಲಿ ಆರೋಪಿ ಆಗಿದ್ದ. ಸರ್ಕಾರ ಆತನ ಜೀವ ರಕ್ಷಣೆ ಮಾಡಬೇಕಿತ್ತು. ಇದನ್ನ ಮಾಡದೇ ಇರುವುದರಿಂದ ಇದಕ್ಕೆ ಒಂದು ಹಂತದಲ್ಲಿ ಸರ್ಕಾರದ ಲೋಪ ಇದೆ. ಒಲೈಕೆ ರಾಜಕೀಯ ಜಾಸ್ತಿ ಆಗುತ್ತಿದೆ. ಸರ್ಕಾರ ಇದನ್ನ ಬಿಡಬೇಕು. ಸರ್ಕಾರ ಒಂದು ಸಮುದಾಯಕ್ಕೆ ಬೆಂಬಲ ಕೊಡುತ್ತಿದೆ. ಕರಾವಳಿ ಭಾಗದಲ್ಲಿ ಎಲ್ಲಾ ಹಿಂದೂಗಳು ಬೀದಿಗೆ ಇಳಿದರೆ ಏನು ಆಗಬಹುದು. ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು. ಈ ಸರ್ಕಾರ ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ರಕ್ಷಣೆ ಕೊಡೋದಲ್ಲ ಬಹುಸಂಖ್ಯಾತರ ರಕ್ಷಣೆಯೂ ಮಾಡಬೇಕು ಎಂದು ಹರಿಹಾಯ್ದರು. ಇದನ್ನೂ ಓದಿ: ಎಲ್ಲಾ ಸಮುದಾಯಗಳಿಗೆ ನ್ಯಾಯ ಕೊಡಲು ಕೇಂದ್ರದಿಂದ ಜಾತಿಗಣತಿ: ಸದಾನಂದಗೌಡ
ಅಲ್ಪಸಂಖ್ಯಾತರಿಂದ ಕಾಂಗ್ರೆಸ್ 15 ಸೀಟು ಗೆದ್ದಿರಬಹುದು. ಉಳಿದ ಸೀಟು ಯಾರಿಂದ ಗೆದ್ದಿರಿ. ಜೆಡಿಎಸ್ ಈಗ ಎನ್‌ಡಿಎ ಜೊತೆ ಬಂದಿದೆ. ಅವರ ಜೊತೆ ಇದ್ದ ಅಲ್ಪಸಂಖ್ಯಾತರ ಮತಗಳ ಒಲೈಕೆ ಮಾಡೋಣ ಎಂದು ಹೋಗುತ್ತಿದ್ದಾರೆ. ಕ್ರಿಶ್ಚಿಯನ್ನರು ಕರಾವಳಿ ಭಾಗದಲ್ಲಿ ಇದ್ದಾರೆ. ಅವರು ಹೀಗೆ ಮಾಡುತ್ತಾರೆ. ಕಾಂಗ್ರೆಸ್ ಅವರು ಸತ್ಯ ಹರಿಶ್ಚಂದ್ರರ ರೀತಿ ಮಾತನಾಡುತ್ತಾರೆ. ಆದರೆ ಅವರು ಮಾಡುವುದೆಲ್ಲಾ ದುರ್ಯೋಧನನ ಪಾತ್ರವೇ ಎಂದು ಗುಡುಗಿದರು. ಇದನ್ನೂ ಓದಿ: ಜಮೀರ್ ಪಾಕಿಸ್ತಾನದಲ್ಲಿ ಬೇಡ, ತಮ್ಮ ಕ್ಷೇತ್ರದಲ್ಲೇ ಸೂಸೈಡ್ ಬಾಂಬರ್ ಆಗಿ ಆತ್ಮಾಹುತಿ ಮಾಡಿಕೊಳ್ಳಲಿ – ಸದಾನಂದಗೌಡ
ಸುಹಾಸ್ ಶೆಟ್ಟಿಯನ್ನು ಪ್ರತೀಕಾರದ ಹತ್ಯೆ ಮಾಡಿದ್ದೇವೆ ಎಂದು ಬಂಧಿತ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಸುಫಾರಿ ಹಂತಕರು ಐದು ಲಕ್ಷಕ್ಕಾಗಿ ನಡುರಸ್ತೆಯಲ್ಲೇ ಹಿಂದೂ ಕಾರ್ಯಕರ್ತನನ್ನು ಬರ್ಬರವಾಗಿ ಹತ್ಯೆ ನಡೆಸಿದ್ದಾರೆ.
ಕಳೆದ ಮೇ 1 ರಂದು ರಾತ್ರಿ 8:30ರ ಸುಮಾರಿಗೆ ಮಂಗಳೂರು ಹೊರವಲಯದ ಬಜಪೆ ಕಿನ್ನಿಪದವು ಎಂಬಲ್ಲಿ ನಡು ರಸ್ತೆಯಲ್ಲೇ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ಏಳು ಮಂದಿ ಹಾಗೂ ಸುಫಾರಿ ಕೊಟ್ಟ ಓರ್ವ ಸೇರಿ ಒಟ್ಟು ಎಂಟು ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ ಕೋಮುಗಲಭೆ ನಿಗ್ರಹ ಪಡೆ ರಚನೆ: ಸಚಿವ ಪರಮೇಶ್ವರ್ ಘೋಷಣೆ
ಮಂಗಳೂರು: ಹಿಂದೂ ಕಾರ್ಯಕರ್ತ (Hindu Activist) ಸುಹಾಸ್ ಶೆಟ್ಟಿ (Suhas Shetty) ಹತ್ಯೆ ಪ್ರಕರಣದ ಬೆನ್ನಲ್ಲೇ ಮಂಗಳೂರಿನ (Mangaluru) ಸುತ್ತಮುತ್ತ ಮೂವರಿಗೆ ಚಾಕು ಇರಿತವಾಗಿದೆ.
ನಗರದ ಹೊರವಲಯದ ಕಣ್ಣೂರಿನಲ್ಲಿ ಮುಂಜಾನೆ 3 ಗಂಟೆಗೆ ಯುವಕನೊಬ್ಬನಿಗೆ ಚಾಕು ಇರಿಯಲಾಗಿದೆ. ಐವರು ದುಷ್ಕರ್ಮಿಗಳು, ನಗರದ ಮಾರುಕಟ್ಟೆ ಕೆಲಸಕ್ಕೆ ಹೋಗುತ್ತಿದ್ದ ಇರ್ಶಾದ್ ಎಂಬ ಯುವಕನ ಮೇಲೆ ದಾಳಿ ಮಾಡಿ ಚಾಕು ಇರಿದಿದ್ದಾರೆ. ಈ ವೇಳೆ, ಮನೆಯೊಂದಕ್ಕೆ ಓಡಿ ಹೋಗಿ ಇರ್ಶಾದ್ ಜೀವ ಉಳಿಸಿಕೊಂಡಿದ್ದಾನೆ. ಗಾಯಾಳುವಿಗೆ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಹಿಂದುತ್ವಕ್ಕಾಗಿ ಪ್ರಾಣವನ್ನೇ ಕೊಡ್ತೇನೆ ಅಂತಿದ್ದವನ ಜೀವವನ್ನೇ ತೆಗೆದ್ರು: ಸುಹಾಸ್ ಶೆಟ್ಟಿ ತಾಯಿ ಕಣ್ಣೀರು
ಕೊಂಚಾಡಿ ಹಾಗೂ ಉಳ್ಳಾಲದಲ್ಲಿ ಸಹ ಇಬ್ಬರಿಗೆ ಚಾಕು ಇರಿಯಲಾಗಿದೆ. ತಡರಾತ್ರಿ ಈ ದಾಳಿ ನಡೆದಿದ್ದು, ಮೂವರು ಗಾಯಾಳುಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಗುರುವಾರ ಬಜ್ಪೆಯ ಕಿನ್ನಿಪದವು ಬಳಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ನಡೆದಿತ್ತು. ಸುರತ್ಕಲ್‍ನ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿಯನ್ನು ರಾತ್ರಿ ಹೊಂಚು ಹಾಕಿ ಸುಮಾರು 10 ಮಂದಿ ಸೇರಿ ತಲವಾರಿನಿಂದ ಹತ್ಯೆ ಮಾಡಿದ್ದರು. ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಮಂಗಳೂರಿನಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆಗೆ ಪಾಕಿಸ್ತಾನ್ ಜಿಂದಾಬಾದ್ ಕಾರಣ: ಆರ್.ಅಶೋಕ್ ಕಿಡಿ
– ಮಾರ್ಚ್ ಅಂತ್ಯದಲ್ಲೇ ಹತ್ಯೆಗೆ ನಡೆದಿತ್ತು ಪ್ಲ್ಯಾನ್; ರಿವೇಂಜ್ ಸೂನ್ ಎಂದು ಪೋಸ್ಟ್
ಮಂಗಳೂರು: ಮಾರ್ಚ್ ಅಂತ್ಯದಲ್ಲೇ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಹತ್ಯೆಗೆ ಹಂತಕರು ಪ್ಲ್ಯಾನ್ ಮಾಡಿದ್ದರು ಎಂಬ ವಿಚಾರ ಸೋಷಿಯಲ್ ಮೀಡಿಯಾ ಪೋಸ್ಟ್ಗಳಿಂದ ಬಹಿರಂಗವಾಗಿದೆ.
ಟಾರ್ಗೆಟ್ ಫಿಕ್ಸ್ ಮಾಡಿ ಸ್ವತಃ ಸುಹಾಸ್‌ಗೆ ಹಂತಕರ ತಂಡ ಟ್ಯಾಗ್ ಮಾಡಿತ್ತು. ಆಗಲೇ ಆ ಟ್ಯಾಗ್ ಮಾಡಿದ್ದ ವೀಡಿಯೋ ಸುಹಾಸ್ ಶೆಟ್ಟಿ ಡೌನ್‌ಲೋಡ್ ಮಾಡಿಕೊಂಡಿದ್ದರು. ಟಾರ್ಗೆಟ್ ಕಿಲ್ಲರ್ ಹೆಸರಿನ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಸುಹಾಸ್‌ಗೆ ಟಾರ್ಗೆಟ್ ಫಿಕ್ಸ್ ಎಂದು ಹಾಕಲಾಗಿತ್ತು. ಫಾಜಿಲ್ ಫೋಟೊ ಜೊತೆಗೆ ಸುಹಾಸ್ ಫೋಟೊ ಹಾಕಿ ಟಾರ್ಗೆಟ್ ದಿನಾಂಕ ನಿಗದಿಪಡಿಸಿದ್ದರು. ರಿವೇಂಜ್ ಸೂನ್ ಎಂದು ಸುಹಾಸ್ ಫೋಟೋ ಹಾಕಿ ಪೋಸ್ಟ್ ಮಾಡಿದ್ದರು.
ಮಂಗಳೂರಿನಲ್ಲಿ ನಡೆದ ಬಶೀರ್ ಹತ್ಯೆ ಆರೋಪಿ ರಿವೇಂಜ್ ಬಗ್ಗೆಯೂ ಪೋಸ್ಟ್ ಹಾಕಲಾಗಿತ್ತು. ಬಶೀರ್ ಹತ್ಯೆ ಪ್ರಕರಣ 2018ರ ಜ.3 ರಂದು ನಡೆದಿತ್ತು. ಬಶೀರ್ ಹತ್ಯೆ ಆರೋಪಿ ಶ್ರೀಜಿತ್ ಫೋಟೋ ಕೂಡ ಬಳಸಿ ರಿವೇಂಜ್ ಸೂನ್ ಎಂದು ಪೋಸ್ಟ್ ಹಾಕಲಾಗಿತ್ತು. ಆದರೆ, ಹೇಳಿದಂತೆ ಫಾಜಿಲ್ ಹತ್ಯೆ ಆರೋಪಿ ಸುಹಾಸ್‌ನನ್ನು ಆರೋಪಿಗಳು ಹತ್ಯೆ ಮಾಡಿದ್ದಾರೆ. 2022ರ ಜು.28 ರಂದು ನಡೆದಿದ್ದ ಸುರತ್ಕಲ್‌ನ ಫಾಜಿಲ್ ಹತ್ಯೆಗೆ ಪ್ರತೀಕಾರ ಎಂದು ಹೇಳಲಾಗಿದೆ. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆಗೆ ಪಾಕಿಸ್ತಾನ್ ಜಿಂದಾಬಾದ್ ಕಾರಣ: ಆರ್.ಅಶೋಕ್ ಕಿಡಿ
ಮಂಗಳೂರು: ಬಜ್ಪೆ ಕಿನ್ನಿಪದವು (Bajpe Kinnipadavu) ಬಳಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಸ್ನೇಹಿತರೊಂದಿಗೆ ಬರುತ್ತಿದ್ದ ಇನ್ನೋವಾ ಕಾರಿಗೆ ಮೀನಿನ ಟೆಂಪೋ ಗುದ್ದಿಸಿ ಬಳಿಕ ಬರ್ಬರವಾಗಿ ಕೊಲೆ ಮಾಡಲಾಗಿದೆ.
ಸುಹಾಸ್ ಶೆಟ್ಟಿ ಬರುತ್ತಿದ್ದ ಇನ್ನೋವಾ ಕಾರನ್ನು ಮೀನಿನ ಟೆಂಪೋ ಹಾಗೂ ಒಂದು ಸ್ವಿಫ್ಟ್ ಕಾರು ಹಿಂಬಾಲಿಸಿಕೊಂಡು ಬಂದಿತ್ತು. ನಂತರ ಮೀನಿನ ಟೆಂಪೋವನ್ನು ಸುಹಾಸ್ ಇದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆಸಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇನ್ನೋವಾ ಕಾರು ಸಲೂನ್‌ಗೆ ನುಗ್ಗಿದೆ. ಬಳಿಕ ಸ್ವಿಫ್ಟ್ ಕಾರಿನಲ್ಲಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಸಾರ್ವಜನಿಕ ರಸ್ತೆಯಲ್ಲೇ ಸುಹಾಸ್‌ನನ್ನು ಬರ್ಬರವಾಗಿ ಕೊಲೆಗೈದು ಅಲ್ಲಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆ
ಘಟನೆ ಬಳಿಕ ಸುಹಾಸ್‌ನನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ. ಘಟನೆಯ ಬಳಿಕ ಆಸ್ಪತ್ರೆ ಮುಂಭಾಗ ಭಾರೀ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದಾರೆ. ಅಲ್ಲದೇ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಭರತ್ ಶೆಟ್ಟಿ ಕೂಡ ಆಗಮಿಸಿದ್ದಾರೆ. ಸದ್ಯ ಸುಹಾಸ್ ಪೋಷಕರು ಬೆಳ್ತಂಗಡಿಯಲ್ಲಿದ್ದಾರೆ. ಸುಹಾಸ್ ಶೆಟ್ಟಿ ಸ್ಥಳೀಯವಾಗಿ ಸಾಕಷ್ಟು ಕಾರ್ಯಕರ್ತರನ್ನು ಹೊಂದಿದ್ದ. ಇದನ್ನೂ ಓದಿ: ಆರತಿ ವೇಳೆ ಬೆಂಕಿ ತಗುಲಿ ತೀವ್ರ ಗಾಯ – ಕೇಂದ್ರ ಮಾಜಿ ಸಚಿವೆ ಗಿರಿಜಾ ವ್ಯಾಸ್ ನಿಧನ
ಘಟನೆ ಬಳಿಕ ಮಂಗಳೂರಿನ ಹಲವೆಡೆ ಪೊಲೀಸರು ನಾಕಾ ಬಂದಿ ಹಾಕಿದ್ದಾರೆ. ಸೂಕ್ಷ್ಮ ಪ್ರದೇಶದಲ್ಲಿ ರಾತ್ರಿ ಇಡೀ ಗಸ್ತು ತಿರುಗಲು ಸೂಚನೆ ನೀಡಲಾಗಿದೆ. ಅಲ್ಲದೇ ಮಂಗಳೂರು ನಗರಕ್ಕೆ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಪ್ರೇಮ ವಿವಾಹವಾದ ಹಿಂದೂ, ಮುಸ್ಲಿಮ್ ಜೋಡಿ – ಈಗ ರಕ್ಷಣೆಗೆ ಪೊಲೀಸರ ಮೊರೆ
ಘಟನೆ ಸಂಬಂಧ ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್ ಮಾಧ್ಯಮಗಳೊಂದಿಗೆ ಮಾತನಾಡಿ, ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. ರಾತ್ರಿ 8:30ರ ಸುಮಾರಿಗೆ ರೌಡಿಶೀಟರ್ ಸುಹಾಸ್ ಶೆಟ್ಟಿ ಮೇಲೆ ಹಲ್ಲೆ ಆಗಿದೆ. ಇನ್ನೋವಾ ಕಾರಿನಲ್ಲಿ ಬರುತ್ತಿದ್ದ ಸುಹಾಸ್ ಶೆಟ್ಟಿಯನ್ನು ಅಡ್ಡಗಟ್ಟಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸುಹಾಸ್ ಶೆಟ್ಟಿ ಸಾವನಪ್ಪಿದ್ದಾರೆ. ಸುಹಾಸ್ ಜೊತೆ ಇದ್ದ ಸ್ನೇಹಿತರಿಗೂ ಗಾಯವಾಗಿದೆ. ದುಷ್ಕರ್ಮಿಗಳನ್ನು ಪತ್ತೆ ಮಾಡಿ ಬಂಧಿಸಲಾಗುವುದು. ಪ್ರತಿಕಾರದ ಹತ್ಯೆ ಎಂಬುದು ತನಿಖೆ ಬಳಿಕ ತಿಳಿಯಲಿದೆ ಎಂದರು. ಇದನ್ನೂ ಓದಿ: ಯುದ್ಧ ಭೀತಿ – ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 10 ದಿನ ಮದರಸಾ ಬಂದ್!
ಸುಹಾಸ್ ಶೆಟ್ಟಿ ಸುರತ್ಕಲ್‌ನ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ 2022ರ ಜುಲೈ 28ರಂದು ಸುರತ್ಕಲ್‌ನಲ್ಲಿ ಫಾಜಿಲ್ ಹತ್ಯೆ ನಡೆದಿತ್ತು. ಈ ಹತ್ಯೆ ಪ್ರಕರಣದಲ್ಲಿ ಸುಹಾಸ್ ಶೆಟ್ಟಿ ಮತ್ತು ಇತರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಹಿಂದೆ ಬಜರಂಗದಳದ ಗೋರಕ್ಷಾ ವಿಭಾಗದ ಸದಸ್ಯನಾಗಿದ್ದ ಸುಹಾಸ್ ಶೆಟ್ಟಿಗೆ ಜೈಲಿನಿಂದ ಹೊರ ಬಂದ ನಂತರ ಯಾವುದೇ ಜವಾಬ್ದಾರಿ ಇರಲಿಲ್ಲ. ಇದನ್ನೂ ಓದಿ: Bengaluru | ಮಳೆಗೆ ಆಟೋದ ಮೇಲೆ ಬಿದ್ದ ಮರ – ಚಾಲಕ ಸಾವು
– ಶಿರಸಿಯಲ್ಲಿ ತನಿಖೆ ನೆಪದಲ್ಲಿ ಹಲ್ಲೆ ನಡೆಸಿದ್ರಾ ಎಸ್‌ಪಿ?
ಕಾರವಾರ: ವಿಚಾರಣೆ ನೆಪದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತನನ್ನು ಠಾಣೆಗೆ ಕರೆಸಿ ಎಸ್.ಪಿ ಎಂ.ನಾರಾಯಣ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಭಟ್ಕಳದಲ್ಲಿ (Bhatkal) ಬಿಜೆಪಿ ಮುಖಂಡರು ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಹೆದ್ದಾರಿ ತಡೆದು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಾರೆ.
ಮಂಗಳವಾರ ಶಿರಸಿಯಲ್ಲಿ ರೌಡಿಶೀಟರ್ ಪೆರೇಡ್ ಮಾಡಿದ್ದ ಎಸ್.ಪಿ ಎಂ.ನಾರಾಯಣ್‌ರವರು 6 ಪ್ರಕರಣದಲ್ಲಿ ಆರೋಪಿಯಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಗಡಿಪಾರಾಗಿದ್ದ ಆಟೋ ಚಾಲಕ ಶ್ರೀನಿವಾಸ ನಾಯ್ಕರನ್ನು ಮಂಗಳವಾರ ಬೆಳಗ್ಗೆ ಭಟ್ಕಳ ಪೊಲೀಸರು ಶಿರಸಿಗೆ ಕರೆದೊಯ್ದಿದ್ದರು. ಶಿರಸಿ ನಗರ ಠಾಣೆಯಲ್ಲಿ ಇದ್ದ ಎಸ್.ಪಿ ಎಂ.ನಾರಾಯಣ್‌ರವರು ತನಿಖೆ ನೆಪದಲ್ಲಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಡೀಸೆಲ್ ಬೆಲೆ ಏರಿಕೆ – ಖಾಸಗಿ ಬಸ್ ಪ್ರಯಾಣ ದರ ದುಬಾರಿ!
ಈ ಆರೋಪದ ಬೆನ್ನಲ್ಲೇ ಬಿಜೆಪಿ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳು ಭಟ್ಕಳ ಶಹರಾ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು. ಪ್ರತಿಭಟನೆಯಲ್ಲಿ ಮಾಜಿ ಬಿಜೆಪಿ ಶಾಸಕ ಸುನೀಲ್ ನಾಯ್ಕ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು. ಪ್ರತಿಭಟನಾ ಸ್ಥಳಕ್ಕೆ ಎಸ್.ಪಿ ಆಗಮಿಸಿ ಕ್ಷಮೆ ಕೋರುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಈ ವೇಳೆ ಭಟ್ಕಳದ ಡಿವೈಎಸ್‌ಪಿ ಮಹೇಶ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.
ಮಂಡ್ಯ: ಇಲ್ಲಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜದ ಪರ ಪ್ರತಿಭಟನೆ ನಡೆಸಿದ್ದ ಹಿಂದೂ ಕಾರ್ಯಕರ್ತರ ವಿರುದ್ಧ ರೌಡಿಶೀಟರ್ ಯಾಕೆ ತೆಗೆಯಬಾರದು ಎಂದು ಸಮಜಾಯಿಸಿ ಕೊಡುವಂತೆ ಪೊಲೀಸರು ನೋಟಿಸ್ ಹೊರಡಿಸಿದ್ದಾರೆ.
ಪ್ರತಿಭಟನೆ ಸಂಬಂಧ ಈಗಾಗಲೇ ಹಲವರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಇದೀಗ ಈ ಪೈಕಿ ವಿಹೆಚ್‍ಪಿಯ ಮೈಸೂರು ಭಾಗದ ಸಹಕಾರ್ಯದರ್ಶಿ ಚಿಕ್ಕಬಳ್ಳಿ ಬಾಲು ಸೇರಿದಂತೆ ಕಾರ್ತಿಕ್ ಹಾಗೂ ಹರೀಶ್ ಎಂಬವರಿಗೆ ನೋಟಿಸ್ ಕಳುಹಿಸಲಾಗಿದೆ. ಈ ನೋಟಿಸ್ ವಿರುದ್ಧ ಹಿಂದೂ ಕಾರ್ಯಕರ್ತರು ಕೆರಗೋಡಿನ ಧ್ವಜ ಸ್ತಂಭಕ್ಕೆ ಪೂಜೆ ಮಾಡಿ ಬಳಿಕ ಪೊಲೀಸ್ ಠಾಣೆವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ವೇಳೆ, ಹಿಂದೂ ಕಾರ್ಯಕರ್ತರಿಗೆ ಪೊಲೀಸರು ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪಿಸಿದರು. ಬಳಿಕ ಡಿವೈಎಸ್‍ಪಿಗೆ ಮನವಿ ಸಲ್ಲಿಸಿ ಕೆರಗೋಡು ಠಾಣೆಯ ಎಸ್‍ಐ ಹಾಗೂ ಪಿಎಸ್‍ಐ ಮೇಲೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಡಿವೈಎಸ್‍ಪಿ ಈ ಬಗ್ಗೆ ಕ್ರಮಕೈಗೊಳ್ಳುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈ ಬಿಡಲಾಯಿತು.
ಏನಿದು ಪ್ರಕರಣ?: ಕೆರಗೋಡಿನಲ್ಲಿ ರಾಷ್ಟ್ರಧ್ವಜ ಹಾರಿಸಲು ಅನುಮತಿ ಪಡೆದು, ಹನುಮ ಧ್ವಜ ಹಾರಿಸಿದ್ದರು. ಬಳಿಕ 108 ಅಡಿ ಧ್ವಜಸ್ತಂಭದಲ್ಲಿದ್ದ ಹನುಮ ಧ್ವಜವನ್ನು ಪೊಲೀಸರು ಕೆಳಗಿಳಿಸಿದ್ದರು. ಇದರ ವಿರುದ್ಧ ಹಿಂದೂ ಕಾರ್ಯಕರ್ತರು ಪೊಲೀಸರು ಹಾಗೂ ಜಿಲ್ಲಾಡಳಿತದ ವಿರುದ್ಧ ಪ್ರತಿಭಟಿಸಿದ್ದರು. ಈ ವೇಳೆ ಕೆಲವೆಡೆ ಅಹಿತಕರ ಘಟನೆಗಳು ನಡೆದಿದ್ದವು.
ಮಂಗಳೂರು: ಜನವರಿ 22 ರಂದು ಅಯೋಧ್ಯೆಯಲ್ಲಿ (Ayodhya Ram Mandir) ರಾಮನ ವಿಗ್ರಹ ಪ್ರತಿಷ್ಠಾಪನೆಗೆ (Pran Prathistha Ceremony) ಪೂರ್ವಭಾವಿಯಾಗಿ ಮಂತ್ರಾಕ್ಷತೆ ವಿತರಣೆಗೆ ಸ್ವಯಂಸೇವಕರಾಗಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರೊಬ್ಬರ ಮೇಲೆ ಹಲ್ಲೆ ನಡೆದಿದೆ.
ನಡೆದಿದ್ದೇನು..?: ಸಂತೋಷ್ ಅವರು ಮುಂಡೂರು ಗ್ರಾಮದಲ್ಲಿ ಮಂತ್ರಾಕ್ಷತೆ ಹಂಚುವ ಜವಾಬ್ದಾರಿ ಹೊತ್ತಿದ್ದರು. ಹೀಗೆ ಮಂತ್ರಾಕ್ಷತೆ ಹಂಚಿ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ನಿವಾಸಿ ಧನಂಜಯ್ ಮತ್ತು ತಂಡ ಕೃತ್ಯ ಎಸಗಿದೆ ಎಂದು ಆರೋಪಿಸಲಾಗಿದೆ. ಹಲ್ಲೆ ನಡೆಸಿದ ದುಷ್ಕಮಿಗಳು ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದವರು ಎನ್ನಲಾಗಿದೆ.
ಮಂತ್ರಾಕ್ಷತೆಯನ್ನು ಸಂತೋಷ್ ಮನೆಮನೆಗೆ ಹಂಚುವುದಕ್ಕೆ ಹಲ್ಲೆಗೈದ ತಂಡ ವಿರೋಧ ವ್ಯಕ್ತಪಡಿಸಿತ್ತು. ಆದರೆ ಸಂತೋಷ್ ಮಂತ್ರಾಕ್ಷತೆ ಹಂಚಿದ್ದರು. ಇದೇ ದ್ವೇಷದಿಂದ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ದುಷ್ಕರ್ಮಿಗಳು ಮಗ ಸಂತೋಷ್ ಮೇಲೆ ಹಲ್ಲೆ ನಡೆಸುತ್ತಿದ್ದಾಗ ಅವರ ತಾಯಿ ತಡೆಯಲು ಬಂದಿದ್ದಾರೆ. ಈ ವೇಳೆ ಸಂತೋಷ್ ತಾಯಿ ಮೇಲೂ ಹಲ್ಲೆಗೈದಿದ್ದಾರೆ. ಸದ್ಯ ಗಾಯಗೊಂಡ ಸಂತೋಷ್ ಹಾಗೂ ತಾಯಿಯನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣ ಸಂಬಂಧ ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಜೆಪಿ (BJP) ಆಗ್ರಹಿಸಿದೆ. ಇತ್ತ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾತನಾಡಿ, ಇದೊಂದು ರಾಜಕೀಯ ಪ್ರೇರಿತ ಹಲ್ಲೆಯಾಗಿದೆ. ಈ ಹಲ್ಲೆ ನಡೆಸಿದವರನ್ನು ತಕ್ಷಣವೇ ಬಂಧಿಸುವಂತೆ ಸರ್ಕಾರ ಮತ್ತು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.
ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.