Tag: hindi

  • ಹಿಂದಿಯಲ್ಲಿ ವ್ಯವಹರಿಸಬೇಕೆನ್ನುವುದು ಸಾಂಸ್ಕೃತಿಕ ಭಯೋತ್ಪಾದನೆ: ಅಮಿತ್‌ ಶಾಗೆ ಸಿದ್ದು ತಿರುಗೇಟು

    ಹಿಂದಿಯಲ್ಲಿ ವ್ಯವಹರಿಸಬೇಕೆನ್ನುವುದು ಸಾಂಸ್ಕೃತಿಕ ಭಯೋತ್ಪಾದನೆ: ಅಮಿತ್‌ ಶಾಗೆ ಸಿದ್ದು ತಿರುಗೇಟು

    ಬೆಂಗಳೂರು: ಹಿಂದಿ ಭಾಷೆ ಬಳಸುವಂತೆ ಅಮಿತ್ ಶಾ ಫರ್ಮಾನು ಹೊರಡಿಸಿರುವುದು ಅತ್ಯಂತ ಆಕ್ಷೇಪಾರ್ಹ ನಡವಳಿಕೆಯಾಗಿದೆ. ಒಬ್ಬ ಸ್ವಾಭಿಮಾನಿ ಕನ್ನಡಿಗನಾಗಿ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಲು, ಸಾಲು ಟ್ವೀಟ್ ಮಾಡುವ ಮೂಲಕವಾಗಿ ಗೃಹಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

    ಟ್ವೀಟ್‌ನಲ್ಲಿ ಏನಿದೆ?: ಹಿಂದಿ, ಇಂಗ್ಲೀಷ್, ತಮಿಳು, ಮಲೆಯಾಳಂ, ಗುಜರಾತಿ ಸೇರಿದಂತೆ ಯಾವ ಭಾಷೆಗೂ ನಾವು ವಿರೋಧಿಗಳಲ್ಲ. ಆದರೆ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ. ಯಾವುದೇ ಒಂದು ಭಾಷೆಯನ್ನು ಹೇರಲು ಹೊರಟರೆ ಸಹಿಸಲು ಸಾಧ್ಯ ಇಲ್ಲ. ನಮ್ಮ ಭಾಷಾ ನಿಲುವು ಮತ್ತು ದೇಶ-ರಾಜ್ಯಗಳ ಸಂಬಂಧವನ್ನು ರಾಷ್ಟ್ರಕವಿ ಕುವೆಂಪು ಅವರು ದಶಕಗಳ ಹಿಂದೆಯೇ ಸ್ಪಷ್ಟವಾಗಿ ವ್ಯಾಖ್ಯಾನಿಸಿದ್ದಾರೆ. ಜಯಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ಎನ್ನುವ ಕವಿ ನುಡಿಯೇ ನಮ್ಮ ಭಾಷಾ ಸಿದ್ಧಾಂತ.

    ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಹಿಂದಿಯನ್ನು ರಾಷ್ಟ್ರಭಾಷೆ ಎನ್ನುವ ರೀತಿಯಲ್ಲಿ ಬಿಂಬಿಸುವ ಜೊತೆಯಲ್ಲಿ, ರಾಜ್ಯ ಭಾಷೆಗಳನ್ನು ದಮನಿಸುವ ಪ್ರಯತ್ನ ನಡೆಯುತ್ತಲೇ ಇದೆ. ಇದನ್ನು ಹಿಂದಿಯೇತರ ಭಾಷೆಗಳನ್ನಾಡುವ ರಾಜ್ಯಗಳು ಕೂಡಿ ಪ್ರತಿಭಟಿಸುವ ಕಾಲ ಸನ್ನಿಹಿತವಾಗಿದೆ.

    ಗುಜರಾತಿನಿಂದ ಬಂದಿರುವ ಅಮಿತ್ ಷಾ ಅವರ ಮಾತೃಭಾಷೆ ಗುಜರಾತಿ. ಇವರು ತಮ್ಮ ಮಾತೃಭಾಷೆಯನ್ನೇ ಕಡೆಗಣಿಸಿ ಹಿಂದಿ ಭಾಷೆಯ ಗುಲಾಮಗಿರಿ ಮಾಡುತ್ತಿರುವುದು ವಿಷಾದನೀಯವಾಗಿದೆ.

    ಅಮಿತ್‌ ಶಾ ಅವರ ತವರು ಗುಜರಾತ್ ರಾಜ್ಯದ ಮಣ್ಣಿನ ಮಗನಾದ ಮಹಾತ್ಮ ಗಾಂಧೀಜಿ ಬಹು ಸಂಸ್ಕೃತಿ, ಬಹುಭಾಷೆಗಳ ಪ್ರತಿಪಾದಕರಾಗಿದ್ದರು. ಆದರೆ ಅಮಿತ್ ಶಾ ಅವರಿಗೆ ಗಾಂಧೀಜಿಯವರಿಗಿಂತ ಏಕ ಸಂಸ್ಕೃತಿ, ಏಕಭಾಷೆಯ ಪ್ರತಿಪಾದಕರಾದ ಸೂಡೊ ರಾಷ್ಟ್ರೀಯವಾದಿ ಸಾವರ್ಕರ್ ಪ್ರಿಯರಾಗಿರುವುದು ದುರಂತವಾಗಿದೆ. ಇದನ್ನೂ ಓದಿ: ತುರ್ತು ಭೂಸ್ಪರ್ಶ ವೇಳೆ ಕಾರ್ಗೋ ವಿಮಾನ ಇಬ್ಬಾಗ

    ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಒಡಿಸ್ಸಾ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳು ಸೇರಿದಂತೆ ದೇಶದ ಬಹುತೇಕ ರಾಜ್ಯಗಳು ಹಿಂದಿಯನ್ನು ಅಧಿಕೃತ ಸಂಪರ್ಕಭಾಷೆಯಾಗಿ ಬಳಸುವುದಿಲ್ಲ. ಅವುಗಳ ಜೊತೆಯಲ್ಲಿ ಹಿಂದಿಯಲ್ಲಿ ವ್ಯವಹರಿಸಬೇಕೆನ್ನುವುದು ಸಾಂಸ್ಕೃತಿಕ ಭಯೋತ್ಪಾದನೆಯಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಸಸ್ಪೆಂಡ್‌

    ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಹೇಳಿಕೆ ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾಗಿರುವುದು ಮಾತ್ರವಲ್ಲ, ಮಾತೃಭಾಷೆಗಳಿಗೆ ಮಾಡಿರುವ ಅವಮಾನವಾಗಿದೆ. ಅನಗತ್ಯ ಘರ್ಷಣೆಗೆ ಎಡೆಮಾಡಿಕೊಡುವ ಈ ಬೇಜವಾಬ್ದಾರಿ ಹೇಳಿಕೆಯನ್ನು ಅಮಿತ್ ಶಾ ಅವರು ತಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

     

  • ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿ ಭಾಷೆ ಬಳಕೆಯಾಗಬೇಕು: ಅಮಿತ್ ಶಾ

    ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿ ಭಾಷೆ ಬಳಕೆಯಾಗಬೇಕು: ಅಮಿತ್ ಶಾ

    ನವದೆಹಲಿ: ಇಂಗ್ಲಿಷ್‌ಗೆ ಪರ್ಯಾಯವಾಗಿ ದೇಶದಲ್ಲಿ ಹಿಂದಿ ಬಳಕೆಯಾಗಬೇಕು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

    ಸಂಸದೀಯ ಅಧಿಕೃತ ಭಾಷಾ ಸಮಿತಿಯ 37ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದೀಗ ಸಚಿವ ಸಂಪುಟದ ಶೇ.70ರಷ್ಟು ಕಾರ್ಯಸೂಚಿ ಹಿಂದಿಯಲ್ಲೇ ಸಿದ್ಧವಾಗಿದೆ ಎಂದು ಸಭೆಗೆ ತಿಳಿಸಿದರು. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಭ್ರಷ್ಟಾಚಾರ ಕಿತ್ತೊಗೆಯುವ ಸಮಯ ಬಂದಿದೆ: ಕೇಜ್ರಿವಾಲ್

    Amith

    ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಧಿಕೃತ ಭಾಷೆಯಲ್ಲಿ ಸರ್ಕಾರ ಸಂವಹನ ನಡೆಸಬೇಕು ಎಂದು ನಿರ್ಧರಿಸಿದ್ದಾರೆ. ಇದು ಖಂಡಿತವಾಗಿಯೂ ಹಿಂದಿಯ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ. ದೇಶದ ಅಧಿಕೃತ ಭಾಷೆಯನ್ನು ಘೋಷಿಸುವ ಮೂಲಕ ದೇಶದ ಏಕತೆಯ ಪ್ರಮುಖ ಭಾಗವನ್ನಾಗಿ ಮಾಡುವ ಸಮಯ ಇದೀಗ ಬಂದಿದೆ. ಒಂದು ರಾಜ್ಯದ ಜನರು ಇನ್ನೊಂದು ರಾಜ್ಯದ ಜನರ ಜೊತೆ ಭಾರತದ ಭಾಷೆಯಲ್ಲೇ ಸಂವಹನ ಮಾಡಬೇಕು ಎಂದು ಅಮಿತ್ ಶಾ ಹೇಳಿದರು.

    ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿಯನ್ನೇ ಬಳಸಬೇಕು ವಿನಾ: ಬೇರೆ ಭಾಷೆಯನ್ನಲ್ಲ. ಬೇರೆ ಭಾಷೆಯಲ್ಲಿರುವ ಪದಗಳನ್ನು ಹಿಂದಿಗೆ ತರುವ ಮೂಲಕ ಭಾಷೆಯನ್ನು ಸರಳಗೊಳಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಹಿಂದೂ ಅಸ್ತಿತ್ವಕ್ಕಾಗಿ ಶಸ್ತ್ರಾಸ್ತ್ರ ಹಿಡಿಯುವಂತಾಗಿದೆ: ಯತಿ ನರಸಿಂಹಾನಂದ ವಿರುದ್ಧ ಖರ್ಗೆ ಕಿಡಿ 

    shah

    ಈಗಾಗಲೇ 8 ಈಶಾನ್ಯ ರಾಜ್ಯಗಳಲ್ಲಿ 22,000 ಹಿಂದಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈಶಾನ್ಯದ 9 ಬುಡಕಟ್ಟು ಸಮುದಾಯಗಳು ತಮ್ಮ ಉಪಭಾಷೆಗಳ ಲಿಪಿಗಳನ್ನು ದೇವನಗರಿಗೆ ಪರಿವರ್ತಿಸಿದ್ದಾರೆ. ಈಶಾನ್ಯದ ಎಲ್ಲ 8 ರಾಜ್ಯಗಳು ಶಾಲೆಗಳಲ್ಲಿ 10ನೇ ತರಗತಿಯವರೆಗೆ ಹಿಂದಿಯನ್ನು ಕಡ್ಡಾಯಗೊಳಿಸಲು ಒಪ್ಪಿಕೊಂಡಿವೆ. ಹೀಗಾಗಿ ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿ ಭಾಷೆಯನ್ನೇ ಅನುಷ್ಠಾನಗೊಳಿಸಬೇಕು ಎಂದು ಅಮಿತ್ ಶಾ ಸಭೆಗೆ ತಿಳಿಸಿದ್ದಾರೆ.

  • ನಾವು ಹಿಂದಿ ವಿರೋಧಿಯಲ್ಲ, ಹಿಂದಿ ಹೇರಿಕೆಯನ್ನು ಮಾತ್ರ ವಿರೋಧಿಸುತ್ತೇವೆ: ಸ್ಟಾಲಿನ್

    ನಾವು ಹಿಂದಿ ವಿರೋಧಿಯಲ್ಲ, ಹಿಂದಿ ಹೇರಿಕೆಯನ್ನು ಮಾತ್ರ ವಿರೋಧಿಸುತ್ತೇವೆ: ಸ್ಟಾಲಿನ್

    ಚೆನ್ನೈ: ನಾವು ಹಿಂದಿಯನ್ನು ವಿರೋಧಿಸುವುದಿಲ್ಲ, ಹಿಂದಿ ಹೇರಿಕೆಯನ್ನು ಮಾತ್ರ ವಿರೋಧಿಸುತ್ತೇವೆ. ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ.

    ಹುತಾತ್ಮರಿಗೆ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಣ್ಣಾ (ಸಿಎನ್ ಅಣ್ಣಾದೊರೈ) ಅವರು 1967ರಲ್ಲಿ ಅಧಿಕಾರಕ್ಕೆ ಬಂದಾಗ ದ್ವಿಭಾಷಾ ನೀತಿಯನ್ನು ಜಾರಿಗೆ ತಂದು ರಾಜ್ಯಕ್ಕೆ ತಮಿಳುನಾಡು ಅಂತ ಹೆಸರಿಟ್ಟರು. ರಾಜ್ಯದ ಭಾಷೆಗಳನ್ನು ರಾಷ್ಟ್ರದ ಅಧಿಕೃತ ಭಾಷೆಗಳನ್ನಾಗಿ ಮಾಡುವ ಕಾನೂನುಗಳನ್ನು ತಿದ್ದುಪಡಿ ಮಾಡಲು ಇನ್ನು ನಾವು ಹೆಣಗಾಡುತ್ತಿದ್ದೇವೆ. ನಾವು ತಮಿಳಿಗರು ಎಂದು ಹೇಳಿಕೊಳ್ಳುವುದಕ್ಕೆ ನಮಗೆ ಯಾವುದೇ ಸಂಕುಚಿತ ಮನಸ್ಸನ್ನು ಹೊಂದಿಲ್ಲ. ನಾವು ಹಿಂದಿ ಮಾತ್ರವಲ್ಲ. ಯಾವುದೇ ಭಾಷೆಯ ವಿರೋಧಿಗಳಲ್ಲ ಎಂದಿದ್ದಾರೆ. ಇದನ್ನೂ ಓದಿ: ಪದ್ಮಭೂಷಣ ಪ್ರಶಸ್ತಿ ನಿರಾಕರಿಸಿದ ಬುದ್ಧದೇವ್ ಭಟ್ಟಾಚಾರ್ಯ

    ನಾವು ಹಿಂದಿಯನ್ನು ವಿರೋಧಿಸುವುದಿಲ್ಲ, ಹಿಂದಿ ಹೇರಿಕೆಯನ್ನು ಮಾತ್ರ ವಿರೋಧಿಸುತ್ತೇವೆ. ನಾವು ತಮಿಳನ್ನು ಇಷ್ಟಪಡುತ್ತೇವೆ. ಹಾಗೆಂದ ಮಾತ್ರಕ್ಕೆ ನಾವು ಇನ್ನೊಂದು ಭಾಷೆಯನ್ನು ದ್ವೇಷಿಸುತ್ತೇವೆ ಎಂದು ಅರ್ಥವಲ್ಲ. ಒಂದು ಭಾಷೆಯನ್ನು ಕಲಿಯಲು ಒಬ್ಬ ವ್ಯಕ್ತಿಗೆ ಆಸಕ್ತಿ ಬರಬೇಕು ಮತ್ತು ಅದನ್ನು ಎಂದಿಗೂ ಹೇರಬಾರದು ಹೇಳಿದ್ದಾರೆ.

    ಹಿಂದಿಯನ್ನು ಹೇರಲು ಬಯಸುವವರು ಅದನ್ನು ಪ್ರಾಬಲ್ಯದ ಸಂಕೇತವೆಂದು ಪರಿಗಣಿಸುತ್ತಾರೆ. ಒಂದೇ ಧರ್ಮ ಇರಬೇಕು ಎಂದು ಕೊಂಡಂತೆ, ಒಂದೇ ಭಾಷೆ ಇರಬೇಕು ಎಂದು ಭಾವಿಸುತ್ತಾರೆ. ಹಿಂದಿಯನ್ನು ಹೇರಲು ಬಯಸುವವರು ಹಿಂದಿ ಭಾಷಿಕರನ್ನು ಎಲ್ಲಾ ಇಲಾಖೆಗಳಲ್ಲಿ ಸೇರಿಸಿ ಹಿಂದಿ ಭಾಷಿಕರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಲು ಬಯಸುತ್ತಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಈಗ ಮನೆಯಲ್ಲೇ ಕುಳಿತು ಡಿಎಲ್‌ ನವೀಕರಣ ಮಾಡಿ

    ಒಬ್ಬರ ಮಾತೃಭಾಷೆಯನ್ನು ಹಿಂದಿಯಾಗಿ ಬದಲಾಯಿಸಲು ಪ್ರಯತ್ನಿಸುತ್ತಿರುವುದನ್ನು ನಾವು ವಿರೋಧಿಸುತ್ತೇವೆ. ಅವರಿಗೆ ತಮಿಳು ಮತ್ತು ತಮಿಳುನಾಡು ಕಹಿಯಾಗಿವೆ ಎಂದರು. ಅಲ್ಲದೇ ತಮಿಳುನಾಡು ಟ್ಯಾಬ್ಲೋವನ್ನು ತಿರಸ್ಕರಿಸಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದಿದ್ದಾರೆ.

  • ಹಿಂದಿಯನ್ನು ವಿರೋಧಿಸುವವರು, ಉರ್ದುವನ್ನು ವಿರೋಧಿಸಲ್ಲ ಯಾಕೆ: ಯತ್ನಾಳ್

    ಹಿಂದಿಯನ್ನು ವಿರೋಧಿಸುವವರು, ಉರ್ದುವನ್ನು ವಿರೋಧಿಸಲ್ಲ ಯಾಕೆ: ಯತ್ನಾಳ್

    ಬೆಳಗಾವಿ: ಈ ದೇಶದ ಅನ್ನ ತಿಂದು, ಈ ದೇಶದ ನೀರು ಕುಡಿದು, ಪಾಕಿಸ್ತಾನದ ಪರವಾಗಿ ಮಾತನಾಡುವವರ ಬಗ್ಗೆ ನಾವು ಮಾತನಾಡಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಸಭೆಯಲ್ಲಿ ಹೇಳಿದ್ದಾರೆ.

    ಸಮಗ್ರವಾಗಿ ನಡೆಯುತ್ತಿರುವ ದೇಶ ವಿರುದ್ಧ ಚಟುವಟಿಕೆಗಳ ಹಿಂದೆ ದೊಡ್ಡ ಷಡ್ಯಂತ್ರವಿದೆ. ಭಾರತ ಉಳಿದ್ರೇನೆ ಕನ್ನಡ ಉಳಿಯುತ್ತದೆ ಮರಾಠಿ ಉಳಿಯುತ್ತದೆ. ಭಾರತ ಇಲ್ಲದ್ದಿದ್ದರೆ ಕನ್ನಡನೂ ಇಲ್ಲ ಮರಾಠಿಯು ಇಲ್ಲ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಮತಾಂತರ ತಡೆ ಮಸೂದೆಗೆ ವಿರೋಧ ಇದೆ: ಸಿದ್ದರಾಮಯ್ಯ

    ಹಿಂದಿಯಲ್ಲಿ ಉಲ್ಲೇಖಗಳನ್ನು ಬರೆದರೆ ವಿರೋಧಿಸುತ್ತಾರೆ. ಅದೇ ಉರ್ದು ಭಾಷೆಯಲ್ಲಿ ಬರೆದರೆ ಯಾರು ಕೇಳುವುದಿಲ್ಲ. ಹಿಂದಿ ವಿರೋಧ ಮಾಡುವವರು ಉರ್ದು ಯಾಕೆ ವಿರೋಧ ಮಾಡುವುದಿಲ್ಲ. ಇದರ ಹಿಂದೆ ವಿರೋಧ ಪಕ್ಷದವರ ದೊಡ್ಡ ಷಡ್ಯಂತ್ರವಿದೆ ಎಂದು ಗಂಭೀರ ಆರೋಪ ಮಾಡಿದರು.

    ಎಲ್ಲರ ಬಣ್ಣ ಬಯಲಾಗಬೇಕು. ಪಾಕಿಸ್ತಾನ ಪರ ಘೋಷಣೆ ಕೂಗೋರು, ಉರ್ದು ಭಾಷೆಯಲ್ಲಿ ಬೋರ್ಡ್ ಬರೆಯುವವರನ್ನು ಗಡಿಪಾರು ಮಾಡಬೇಕು ಎಂಬ ಹೇಳಿಕೆಗೆ ವಿರೋಧ ಪಕ್ಷದವರು ಯತ್ನಾಳ್ ಅವರು ಸಂವಿಧಾನ ಬಾಹಿರ ಹೇಳಿಕೆ ಕೊಡುತ್ತಿದ್ದಾರೆ ಎಂದಾಗ ನಾನು ಹಿಂದುತ್ವದ ಪರ ಮಾತಾಡುತ್ತಿದ್ದೇನೆ ಎಂದು ಯತ್ನಾಳ್ ತಿರುಗೇಟು ನೀಡಿದರು.

    ಈ ವಿಚಾರವಾಗಿ ನಡೆದ ಕಲಾಪದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಜಟಾಪಟಿ ನಡೆದಿದ್ದು ಈ ವೇಳೆ ಜೈ ಶ್ರೀರಾಂ ಎಂಬ ಘೋಷಣೆಯು ವಿಧಾನಸಭೆಯಲ್ಲಿ ಮೊಳಗಿತು. ಇದನ್ನೂ ಓದಿ: ಎಂಇಎಸ್ ಪುಂಡಾಟಿಕೆ ಹಿಂದೆ ಕಾಂಗ್ರೆಸ್ ಇದೆ – ಡಿಕೆಶಿ ವಿರುದ್ಧ ಸಿ.ಟಿ.ರವಿ ಆಕ್ರೋಶ 

  • ಅ.11 ರಿಂದ ಕನ್ನಡದಲ್ಲಿ ಬರಲಿದೆ ತಿರುಪತಿ ಚಾನೆಲ್

    ಅ.11 ರಿಂದ ಕನ್ನಡದಲ್ಲಿ ಬರಲಿದೆ ತಿರುಪತಿ ಚಾನೆಲ್

    ತಿರುಪತಿ: ಇಲ್ಲಿಯವರೆಗೆ ತೆಲುಗಿನನಲ್ಲಿ ಮಾತ್ರ ಪ್ರಸರಾವಾಗುತ್ತಿದ್ದ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ ಅ.11 ರಿಂದ ಕನ್ನಡ ಮತ್ತು ಹಿಂದಿಯಲ್ಲಿ ಪ್ರಸಾರವಾಗಲಿದೆ.

    ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ನಿರ್ವಹಿಸುವ ಈ ಚಾನೆಲ್ ಬ್ರಹ್ಮೋತ್ಸವದ ಗರುಡಸೇವಾ ಆಚರಣೆಯ ವೇಳೆ ಈ ಚಾನೆಲಿಗೆ ಆಂಧ್ರ ಸಿಎಂ ಜಗನ್ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ಬಿಡ್ ಗೆದ್ದ ಟಾಟಾ – ಮಾತೃ ಸಂಸ್ಥೆಗೆ ಮಾರಾಟ

    ಈ ಕಾರ್ಯಕ್ರಮಕ್ಕೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಟಿಟಿಡಿ ಆಹ್ವಾನ ನೀಡಿದೆ.  ಇದನ್ನೂ ಓದಿ: ಮದುವೆ ಊಟಕ್ಕೆ ಕರೆದಿಲ್ಲವೆಂದು ಫೋಟೋಗಳನ್ನೇ ಡಿಲೀಟ್ ಮಾಡಿದ ಫೋಟೋಗ್ರಾಫರ್!

    2008ರಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೇಲ್ 24 ಗಂಟೆಯ ತೆಲುಗಿನ ವಾಹಿನಿಯನ್ನು ಉದ್ಘಾಟಿಸಿದ್ದರು. ದಶಕದ ಬಳಿಕ ತಮಿಳಿನಲ್ಲೂ ಪ್ರಸಾರ ಮಾಡಿತ್ತು. ಇದನ್ನೂ ಓದಿ: ಪೋಷಕರೇ ಎಚ್ಚರ: ಆಟವಾಡುವಾಗ ಆಯತಪ್ಪಿ 11ನೇ ಮಹಡಿಯಿಂದ ಬಿದ್ದು ಬಾಲಕ ಸಾವು

    ಅ.7 ರಂದು ಆರಂಭವಾಗಲಿರುವ ತಿರುಪತಿ ಬಾಲಾಜಿ ವಾರ್ಷಿಕ ನವರಾತ್ರಿ ಬ್ರಹ್ಮೋತ್ಸವ ಭಕ್ತರ ಪಾಲ್ಗೊಳ್ಳುವಿಕೆ ಇಲ್ಲದೇ ನಡೆಯಲಿದೆ. ಕಳೆದ ವರ್ಷವೂ ಈ ಧಾರ್ಮಿಕ ಕಾರ್ಯಕ್ರಮ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಮತಿ ಇರಲಿಲ್ಲ. ಈ ವರ್ಷವೂ ಕೋವಿಡ್‌ ಹಿನ್ನೆಲೆಯಲ್ಲಿ ಭಕ್ತರಿಗೆ ಅನುಮತಿ ನೀಡುವುದಿಲ್ಲ ಎಂದು ಟಿಟಿಡಿ ಹೇಳಿದೆ.

  • ಬ್ಯಾಂಕ್‍ನಲ್ಲಿ ಹಿಂದಿ ಬೇಡ, ಚೆಕ್ಕುಗಳು ಕನ್ನಡದಲ್ಲೇ ಇರಬೇಕು: ವಾಟಾಳ್

    ಬ್ಯಾಂಕ್‍ನಲ್ಲಿ ಹಿಂದಿ ಬೇಡ, ಚೆಕ್ಕುಗಳು ಕನ್ನಡದಲ್ಲೇ ಇರಬೇಕು: ವಾಟಾಳ್

    ಬೆಂಗಳೂರು: ಕರ್ನಾಟಕ ರಾಜ್ಯದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಭಾರಿ ಚಳವಳಿ ನೆಡೆಸಿದರು.

    ವಾಟಾಳ್ ನಾಗರಾಜ್ ಜೊತೆಗೂಡಿದ ಹಲವು ಕನ್ನಡ ಪರ ಸಂಘಟನೆಗಳ ನಾಯಕರು ಭಾರತೀಯ ಸ್ಟೇಟ್ ಬ್ಯಾಂಕ್ ಮುಂಭಾಗ ಹಿಂದಿ ಭಾಷೆ ಹೊಂದಿರುವ ಚೆಕ್ ಸುಡುವ ಮೂಲಕ ಶುಕ್ರವಾರ ವಿಭಿನ್ನ ಪ್ರತಿಭಟನೆಗೆ ಮುಂದಾದರು.

    ಕನ್ನಡವೇ ಸಾರ್ವಭೌಮ, ಕನ್ನಡವೇ ಚಕ್ರವರ್ತಿ: ಇಡೀ ರಾಜ್ಯದಲ್ಲಿ ಎಲ್ಲಾ ಬ್ಯಾಂಕುಗಳ ಚೆಕ್ಕುಗಳು ಕನ್ನಡದಲ್ಲಿಯೇ ಇರಬೇಕು. ನಮಗೆ ಹಿಂದಿ ಬೇಡವೇ ಬೇಡ. ಈ ನಾಡಿನ ಭಾಷೆ ಕನ್ನಡ ಹೀಗಾಗಿ ಎಲ್ಲೆಲ್ಲೂ ಕನ್ನಡವಾಗಬೇಕು. ಬ್ಯಾಂಕ್‍ಗಳಲ್ಲಿ ಸಂಪೂರ್ಣ ಕನ್ನಡ ಬಳಸಬೇಕು. ಕನ್ನಡವೇ ಸಾರ್ವಭೌಮ, ಕನ್ನಡವೇ ಚಕ್ರವರ್ತಿ, ಬ್ಯಾಂಕುಗಳಲ್ಲಿ ಹಿಂದಿ ಬೇಡ, ಚೆಕ್ಕುಗಳು ಕನ್ನಡದಲ್ಲೇ ಇರಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ:  ರಾಮ, ಕೃಷ್ಣ, ಶಿವ ಭಾರತದ ಮುಸ್ಲಿಮರ ಪೂರ್ವಜರು: ಆನಂದ್ ಸ್ವರೂಪ್ ಶುಕ್ಲಾ

    ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ ನಾಗರಾಜ್ ರೈಲ್ವೆ, ಅಂಚೆ ಕಛೇರಿಗಳಲ್ಲಿ ಹಿಂದಿ ಬೇಡ. ಕನ್ನಡಿಗರಿಗೆ ಬ್ಯಾಂಕ್‍ಗಳಲ್ಲಿ ಅತೀ ಹೆಚ್ಚು ಉದ್ಯೋಗವಕಾಶ ಸಿಗಬೇಕು. ಬ್ಯಾಂಕ್ ಅಧಿಕಾರಿಗಳು ಕನ್ನಡಿಗರಾಗಿಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯುತ್ತದೆ ಎಂದರು.

  • ಹಿಂದಿ ಭಾಷೆ ಬಗ್ಗೆ ವಿರೋಧವಿಲ್ಲ, ಒತ್ತಾಯಪೂರ್ವಕ ಹೇರಿಕೆಗೆ ಖಂಡನೆ: ಶರವಣ

    ಹಿಂದಿ ಭಾಷೆ ಬಗ್ಗೆ ವಿರೋಧವಿಲ್ಲ, ಒತ್ತಾಯಪೂರ್ವಕ ಹೇರಿಕೆಗೆ ಖಂಡನೆ: ಶರವಣ

    ಬೆಂಗಳೂರು: ಹಿಂದಿ ಭಾಷೆಯ ಬಗ್ಗೆ ನಮಗೆ ಯಾವುದೇ ವಿರೋಧವಿಲ್ಲ, ಸರ್ವ ಭಾಷೆಯನ್ನು ನಾವು ಗೌರವಿಸುತ್ತೇವೆ. ಆದರೆ ಹಿಂದಿಯನ್ನು ಒತ್ತಾಯ ಪೂರ್ವಕವಾಗಿ ಹೇರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೆವೆ, ಇದು ಆರು ಕೋಟಿ ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ ಎಂದು ವಿಧಾನ ಪರಿಷತ್ ಮಾಜಿ ಶಾಸಕರಾದ ಟಿ. ಎ. ಶರವಣ ತಿಳಿಸಿದರು.

    ಶರವಣ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿ ಕನ್ನಡದ ಉಳಿವಿಗಾಗಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ನಮ್ಮ ನೆಲ -ಜಲ -ಭಾಷೆಯ ಉಳಿವಿನ ಬಗ್ಗೆ ಪ್ರಶ್ನೆ ಬಂದರೆ, ಜೆಡಿಎಸ್ ಪಕ್ಷ ತನ್ನ ಸಂಪೂರ್ಣ ಬೆಂಬಲ ನೀಡಿ ನಮ್ಮ ಜನತೆಗೆ ಬೆಂಗಾವಲಾಗಿ ನಿಲ್ಲುತ್ತಾ ಬಂದಿದೆ, ಮುಂಬರುವ ದಿನಗಳಲ್ಲೂ ಪೂರ್ಣ ಬೆಂಬಲ ನೀಡುತ್ತದೆ ಎಂದರು.

    ದೇಶಕ್ಕೆ ಕನ್ನಡಿಗನನ್ನು ಪ್ರಧಾನ ಮಂತ್ರಿಯಾಗಿ ಕೊಟ್ಟ ನಮ್ಮ ಪಕ್ಷ, ಮುಂದೆ ಇಂತಹ ಸೌಭಾಗ್ಯ ನಮ್ಮ ಕನ್ನಡಕ್ಕೆ ದೊರಕುತ್ತದೆ ಎಂಬುದು ಸಂಶಯ, ಅಂತಹ ಪ್ರಾದೇಶಿಕ ಪಕ್ಷ ಯಾವುದೇ ಸಂದರ್ಭದಲ್ಲಿ ಯಾರಿಗೂ ಹೆದರದೆ ನಮ್ಮ ಜನರ ರಕ್ಷಣೆಗೆ ಪಣತೊಟ್ಟು ನಿಲ್ಲುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಎಲ್ಲ ಭಾಷೆಯನ್ನು ಗೌರವಿಸುತ್ತೇವೆ, ಯಾವುದೇ ಹೇರಿಕೆ ಸಲ್ಲದು: ಧನಂಜಯ್

    ಸಾಹಿತ್ಯ ಸಂಸ್ಕೃತಿಯಲ್ಲಿ, ಕಲೆಯಲ್ಲಿ ಉತ್ತುಂಗದಲ್ಲಿರುವ ನಮ್ಮ ಭಾಷೆಗೆ ಕಿಂಚಿತ್ತು ಚ್ಯುತಿ ಬರಲು ನಮ್ಮ ಜೆಡಿಎಸ್ ಪಕ್ಷ ಎಂದು ಬಿಡುವುದಿಲ್ಲ. ಇದು ಹೀಗೆ ಮುಂದುವರಿದರೆ ಮುಂಬರುವ ದಿನಗಳಲ್ಲಿ ಮತ್ತಷ್ಟು ತೀವ್ರವಾಗಿ ಹೋರಾಟ ನಡೆಸುವುದಾಗಿ ಶರವಣ ಎಚ್ಚರಿಕೆ ನೀಡಿದರು.

  • ಗೂಗಲ್ ಕ್ಷಮೆ ಕೋರಿದೆ, ಒಕ್ಕೂಟ ಸರ್ಕಾರಗಳು ಕನ್ನಡಕ್ಕೆ ಎಷ್ಟು ಮಾನ್ಯತೆ ನೀಡಿವೆ? – ಎಚ್‍ಡಿಕೆ ಕಿಡಿ

    ಗೂಗಲ್ ಕ್ಷಮೆ ಕೋರಿದೆ, ಒಕ್ಕೂಟ ಸರ್ಕಾರಗಳು ಕನ್ನಡಕ್ಕೆ ಎಷ್ಟು ಮಾನ್ಯತೆ ನೀಡಿವೆ? – ಎಚ್‍ಡಿಕೆ ಕಿಡಿ

    ಬೆಂಗಳೂರು: ಗೂಗಲ್ ತನ್ನ ತಪ್ಪು ಒಪ್ಪಿಕೊಂಡಿದೆ. ಜಾಗತಿಕವಾಗಿ ಕ್ಷಮೆ ಕೋರಿದೆ. ಆದರೆ, ಸ್ವಾತಂತ್ರ್ಯ ನಂತರದಲ್ಲಿ ರಚನೆಯಾದ ಒಕ್ಕೂಟ ಸರ್ಕಾರಗಳು ಕನ್ನಡಕ್ಕೆ ಎಷ್ಟು ಮಾನ್ಯತೆ ನೀಡಿವೆ? ಕನ್ನಡಕ್ಕೆ ಆದ ಅನ್ಯಾಯ ಸರಿಪಡಿಸಲು ಎಷ್ಟು ಪ್ರಾಮಾಣಿಕವಾಗಿ ಪ್ರಯತ್ನಿಸಿವೆ ಎಂದು ಪ್ರಶ್ನಿಸಿ ಮಾಜಿ ಸಿಎಂ ಕುಮಾರಸ್ವಾಮಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಈ ಸಂಬಂಧ ಸರಣಿ ಟ್ವೀಟ್ ಮಾಡಿ ಕೇಂದ್ರ ಸರ್ಕಾರದ ಸೇವೆ, ಹಿಂದಿ ಹೇರಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಕನ್ನಡಿಗರ ಭಾಷಾಭಿಮಾನವನ್ನು ಗೂಗಲ್, ಅಮೆಜಾನ್ ಕೆಣಕಿದ್ದವೋ, ಇಲ್ಲವೇ ಪಟ್ಟಭದ್ರರು ಕೆಣಕಿದ್ದರೋ.. ಆದರೆ, ಕನ್ನಡಿಗರು ಖಚಿತವಾಗಿ ಸಿಡಿಯುತ್ತಾರೆ ಎಂಬ ಉತ್ತರ ಕೆಣಕಿದವರಿಗೆ ಸಿಕ್ಕಿದೆ. ಆದರೆ, ಈ ಸಣ್ಣ ವಿಚಾರಗಳೇ ವೈಭವೀಕರಣಗೊಂಡು, ಚರ್ಚೆಯಾಗಬೇಕಾದ ಗಂಭೀರ ವಿಚಾರಗಳು ಮರೆಯಾಗದಿರಲಿ. ಕನ್ನಡ, ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯ ದೊಡ್ಡದಿದೆ. ಇದನ್ನೂ ಓದಿ: ಗೂಗಲ್ ಸರ್ಚ್ ನಲ್ಲಿ ಕುವೆಂಪು ಫೋಟೋ ಬಂದಿದ್ದು ಹೇಗೆ? ಇಲ್ಲಿದೆ ಡೂಡಲ್ ಸೃಷ್ಟಿಕರ್ತನ ಕತೆ

    ಕನ್ನಡದ ವಿಚಾರದಲ್ಲಿನ ಅಜಾಗರೂಕತೆ, ಅಸೂಕ್ಷ್ಮತೆ, ಭಂಡತನವನ್ನು ನಾವು ಪ್ರಶ್ನೆ ಮಾಡಬೇಕಿತ್ತು, ಮಾಡಿದ್ದೇವೆ. ಆದರೆ, ಯಕಶ್ಚಿತ್‌ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ನಮ್ಮ ಹೋರಾಟಗಳನ್ನು ಕೇಂದ್ರೀಕರಿಸಿ ಏನು ಉಪಯೋಗ? ನಮ್ಮ ಹೋರಾಟ ಇರಬೇಕಾದ್ದು ಒಕ್ಕೂಟ ವ್ಯವಸ್ಥೆಯಲ್ಲಿನ ನಮ್ಮ ಹಕ್ಕುಗಳಿಗಾಗಿ. ನಮಗೆ ಸಿಗಬೇಕಾದ ನ್ಯಾಯದ ವಿಚಾರಕ್ಕಾಗಿ.

    ಗೂಗಲ್ ಆಲ್ಗಾರಿದಮ್‌ನ ಸಮಸ್ಯೆಯಿಂದಾಗಿ ಕನ್ನಡಕ್ಕೆ ಅಪಮಾನವಾಗಿರಬಹುದು. ಆದರೆ, ಗೂಗಲ್‌ ತನ್ನ ತಪ್ಪು ಒಪ್ಪಿಕೊಂಡಿದೆ. ಜಾಗತಿಕವಾಗಿ ಕ್ಷಮೆ ಕೋರಿದೆ. ಆದರೆ, ಸ್ವಾತಂತ್ರ್ಯ ನಂತರದಲ್ಲಿ ರಚನೆಯಾದ ಒಕ್ಕೂಟ ಸರ್ಕಾರಗಳು ಕನ್ನಡಕ್ಕೆ ಎಷ್ಟು ಮಾನ್ಯತೆ ನೀಡಿವೆ? ಕನ್ನಡಕ್ಕೆ ಆದ ಅನ್ಯಾಯ ಸರಿಪಡಿಸಲು ಎಷ್ಟು ಪ್ರಾಮಾಣಿಕವಾಗಿ ಪ್ರಯತ್ನಿಸಿವೆ?

    ಕೇಂದ್ರ ಸರ್ಕಾರಗಳೆಲ್ಲವೂ ಅಪಮಾರ್ಗದಲ್ಲಿ ಹಿಂದಿಯನ್ನು ಹೇರಿಕೊಂಡೇ ಬಂದಿವೆ. ಕನ್ನಡವನ್ನು 3ನೇ ದರ್ಜೆ ಭಾಷೆಯಾಗಿ ಕಾಣುತ್ತಾ ಬಂದಿವೆ. ಇತ್ತೀಚಿನ ವರ್ಷಗಳಲ್ಲಂತೂ ಹಿಂದಿ ಹೇರಿಕೆಯ ಪ್ರಯತ್ನ ಅತ್ಯಂತ ಪ್ರಬಲವಾಗಿ ನಡೆಯುತ್ತಿದೆ. ‘ಒಂದು ದೇಶ ಒಂದು ಭಾಷೆ‘ ಪರಿಕಲ್ಪನೆ ಅಡಿಯಲ್ಲಿ ಹಿಂದಿಯನ್ನು ರಾಷ್ಟ್ರಭಾಷೆ ಮಾಡುವ ಪ್ರಯತ್ನಗಳಾಗುತ್ತಿವೆ. ಇದನ್ನೂ ಓದಿ: ಗೂಗಲ್ ತೆಕ್ಕೆಗೆ ಬೆಂಗಳೂರಿನ ‘ವೇರ್ ಈಸ್ ಮೈ ಟ್ರೈನ್’ ಆ್ಯಪ್ ಕಂಪನಿ

    ಕೇಂದ್ರ ಸರ್ಕಾರದ ನೌಕರಿ ಸಿಗಬೇಕಿದ್ದರೆ ಹಿಂದಿ ಭಾಷೆ ಬರಬೇಕೆಂಬ ಷರತ್ತುಗಳು, ಹಿಂದಿಯಲ್ಲೇ ಪರೀಕ್ಷೆ ಬರೆಯಬೇಕೆಂಬ ನಿಬಂಧನೆಗಳು, ತ್ರಿಭಾಷಾ ಸೂತ್ರವೆಂಬ ಕುಣಿಕೆಗಳು ಹಿಂದಿ ಹೇರಿಕೆಯ ಸ್ಪಷ್ಟ ಪ್ರಯತ್ನಗಳು. ಸ್ಥಳೀಯ ಭಾಷೆಗಳನ್ನು ಕೊಲ್ಲುವ ಅಜೆಂಡಾಗಳು. ನಮ್ಮಹೋರಾಟಗಳು ಇಂಥ ಮಾರಕ ಅಜೆಂಡಾಗಳ ವಿರುದ್ಧ ಇರಬೇಕು ಎಂಬುದು ನನ್ನ ಅಭಿಪ್ರಾಯ.

    ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿದರೆ ಮಾನ್ಯತೆ ಸಿಗುವುದಿಲ್ಲ, ಗಂಭೀರವಾಗಿಯೂ ಆಲಿಸುವುದಿಲ್ಲ. ಕೇಂದ್ರದ ಪ್ರಕಟಣೆಗಳು ಸ್ಥಳೀಯ ಭಾಷೆಯಲ್ಲಿ ಸಿಗುವುದಿಲ್ಲ. ಕೇಂದ್ರದ ಸೇವೆಗಳು ಕನ್ನಡದಲ್ಲಿಲ್ಲ. ಅಧಿಕಾರಿಗಳು, ಸಿಬ್ಬಂದಿ ಕನ್ನಡದಲ್ಲಿ ಮಾತನಾಡುವುದಿಲ್ಲ. ವೆಬ್‌ಸೈಟ್‌ಗಳಲ್ಲಿ ಕನ್ನಡವಿಲ್ಲ. ಗ್ರಾಹಕ ಸೇವೆ ಕನ್ನಡದಲ್ಲಿ ಸಿಗುವುದಿಲ್ಲ.

    ನಮ್ಮ ಜಿಎಸ್‌ಟಿ ಪಾಲು ನಮಗೆ ಸಿಗುವುದಿಲ್ಲ, ನೆರೆ–ಬರ ಪರಿಹಾರವಿಲ್ಲ, ಕನ್ನಡಿಗರು ಉಸಿರುಗಟ್ಟಿ ಸಾಯುತ್ತಿದ್ದರೂ ಆಮ್ಲಜನಕ ನೀಡುವುದಿಲ್ಲ, ಕಾಯಿಲೆಗೆ ಔಷಧ ನೀಡುವುದಿಲ್ಲ. ಕರ್ನಾಟಕದಿಂದ ಬರಬೇಕಾದ್ದನ್ನು ವಸೂಲಿ ಮಾಡದೇ ಬಿಡುವುದಿಲ್ಲ. ಇದೆಲ್ಲವೂ ಕನ್ನಡ, ಕನ್ನಡಿಗರ ಮೇಲಿನ ದರ್ಪವಲ್ಲದೇ ಮತ್ತೇನಲ್ಲ. ನಮ್ಮ ಹೋರಾಟ ಇದರ ವಿರುದ್ಧವೂ ಇರಬೇಕು. ಇದನ್ನೂ ಓದಿ: 11 ಸಾವಿರ ಕೋಟಿ ಜಿಎಸ್‍ಟಿ ಪರಿಹಾರ ಮೊತ್ತ ಬಿಡುಗಡೆ ಮಾಡಿ – ಬೊಮ್ಮಾಯಿ

    ರಾಜಕೀಯದಲ್ಲಿನ ಹಿಂದಿ ಪಾರಮ್ಯವನ್ನು ಕಣ್ಣಾರೆ ಕಂಡವನು ನಾನು. ಕನ್ನಡಿಗ ಎಚ್ ಡಿ ದೇವೇಗೌಡರು 11 ತಿಂಗಳು ಪ್ರಧಾನ ಮಂತ್ರಿಯಾಗಿದ್ದರು. ಭಾಷೆಯ ವಿಚಾರದಲ್ಲಿ ಅವರೆಷ್ಟು ನೋವು ಅನುಭವಿಸಬೇಕಾಯಿತು ಎಂಬುದು ಈಗ ಗುಟ್ಟಾಗಿ ಏನೂ ಉಳಿದಿಲ್ಲ. ಹಿಂದಿಯೇತರರು ದೇಶದ ಅತ್ಯುನ್ನತ ಸ್ಥಾನ ವಹಿಸಿಕೊಳ್ಳುವುದನ್ನು ಹಿಂದಿ ಲಾಭಿ ಎಂದೂ ಸಹಿಸುವುದಿಲ್ಲ.

    ಕನ್ನಡಕ್ಕಾಗುತ್ತಿರುವ ಅನ್ಯಾಯದ ವಿಚಾರದಲ್ಲಿ ಮಾಧ್ಯಮಗಳು ಇನ್ನಷ್ಟು ಕ್ರಿಯಾಶೀಲವಾಗಿ ವರ್ತಿಸಬೇಕಾಗಿದೆ. ಹಲವು ಮಾಧ್ಯಮಗಳು ಆ ಕೆಲಸ ಮಾಡುತ್ತಿವೆ. ಜನರಲ್ಲಿನ ಭಾಷಾಭಿಮಾನವನ್ನು ಕಾಲಕಾಲಕ್ಕೆ ಬಡಿದೆಬ್ಬಿಸಬೇಕಾದ ಜವಾಬ್ದಾರಿ ಮಾಧ್ಯಮಗಳದ್ದು. ಕನ್ನಡಕ್ಕಾಗುತ್ತಿರುವ ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಮಾಧ್ಯಮದ ಪಾಲ್ಗೊಳ್ಳುವಿಗೆ ಪ್ರಧಾನ.

    ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೂ ತಬ್ಬಲಿ ಮಕ್ಕಳಂತೆ ಬಾಳುವುದಿದೆಯಲ್ಲ ಅದು ಅಪಾಯಕಾರಿ. ಕನ್ನಡಿಗರು ತಬ್ಬಲಿಗಳಲ್ಲ. ರಾಜ್ಯ ಕಟ್ಟಿದವರು, ರಾಜ್ಯ ಆಳಿದವರು, ರಾಜ್ಯ ವಿಸ್ತರಿಸಿದವರು. ಅದು ನಮ್ಮ ಐತಿಹಾಸಿಕ ಗುಣ. ಕನ್ನಡಿಗರಾದ ನಮಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ನಮ್ಮ ಐತಿಹಾಸಿಕ, ಚಾರಿತ್ರಿಕ ಗುಣ ಜಾಗೃತವಾಗಬೇಕಾದ ಪರಿಸ್ಥಿತಿ ಬಂದಿದೆ.

  • ಹಿಂದಿ ಬರಲ್ಲ, ಲೋನ್ ಕೊಡಲ್ಲ- ವೈದ್ಯರ ಸಾಲದ ಅರ್ಜಿ ವಜಾಗೊಳಿಸಿದ ಬ್ಯಾಂಕ್

    ಹಿಂದಿ ಬರಲ್ಲ, ಲೋನ್ ಕೊಡಲ್ಲ- ವೈದ್ಯರ ಸಾಲದ ಅರ್ಜಿ ವಜಾಗೊಳಿಸಿದ ಬ್ಯಾಂಕ್

    – ಹಿಂದಿ ಮಾತ್ರ ಬರೋದು, ಲೋನ್ ಕೊಡಲ್ಲ ಎಂದ ಬ್ಯಾಂಕ್ ವ್ಯವಸ್ಥಾಪಕ

    ಚೆನ್ನೈ: ಹಿಂದಿ ಭಾಷೆ ಬಾರದ್ದಕ್ಕೆ ಸರ್ಕಾರಿ ನಿವೃತ್ತ ವೈದ್ಯರೊಬ್ಬರ ಸಾಲದ ಅರ್ಜಿಯನ್ನು ಬ್ಯಾಂಕ್ ವಜಾಗೊಳಿಸಿರುವ ಆಘಾತಕಾರಿ ಘಟನೆ ನಡೆದಿದೆ.

    ತಮಿಳುನಾಡಿನ ಅರಿಯಾಲೂರು ಜಿಲ್ಲೆಯ ಜಯಂಕೊಂಡನ್‍ನಲ್ಲಿ ಘಟನೆ ನಡೆದಿದ್ದು, ವೈದ್ಯ ಬಾಲಸುಬ್ರಹ್ಮಣಿಯನ್ ಅವರ ಸಾಲದ ಅರ್ಜಿಯನ್ನು ವಜಾಗೊಳಿಸಲಾಗಿದೆ. ಇಂಡಿಯನ್ ಓವರ್‍ಸೀಸ್ ಬ್ಯಾಂಕ್‍ನ ಗಂಗಾಯಿಕೊಂಡ ಚೋಝಾಪುರಂ ಶಾಖೆಯ ಅಧಿಕಾರಿಗಳು ಈ ರೀತಿ ವರ್ತಿಸಿದ್ದಾರೆ. ವೈದ್ಯರು ಕಳೆದ 15 ವರ್ಷಗಳಿಂದ ಈ ಶಾಖೆಯಲ್ಲಿ ಬ್ಯಾಂಕ್ ಖಾತೆ ಹೊಂದಿದ್ದು, ಕೇವಲ ಹಿಂದಿ ಬಾರದ ಒಂದೇ ಕಾರಣಕ್ಕೆ ಸಾಲದ ಅರ್ಜಿಯನ್ನು ವಜಾಗೊಳಿಸಲಾಗಿದೆ.

    ಸಾಲಕ್ಕಾಗಿ ವೈದ್ಯರು ಎಲ್ಲ ದಾಖಲೆಗಳನ್ನು ಒದಗಿಸಿದ್ದು, ಬ್ಯಾಂಕ್ ವ್ಯವಸ್ಥಾಪಕ ನನಗೆ ಹಿಂದಾ ಮಾತ್ರ ತಿಳಿದಿದೆ. ಸಾಲದ ಅರ್ಜಿಯನ್ನು ಎಂದು ಸಾಲದ ಅರ್ಜಿಯನ್ನು ಪುರಸ್ಕರಿಸಿಲ್ಲ. ಡಾ.ಬಾಲಸುಬ್ರಹ್ಮಣಿಯನ್ ಅವರು ಇದೀಗ ಬ್ಯಾಂಕ್‍ಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಅಲ್ಲದೆ ಮಾನಸಿಕ ಕಿರುಕುಳ ನೀಡಿದ್ದಕ್ಕೆ ಒಂದು ಲಕ್ಷ ರೂ. ಪರಿಹಾರದ ಬೇಡಿಕೆ ಇಟ್ಟಿದ್ದಾರೆ.

    ಈ ಕುರಿತು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದು, ಬ್ಯಾಂಕ್ ವ್ಯವಸ್ಥಾಪಕರ ನಡೆಯನ್ನು ಖಂಡಿಸಿದ್ದು, ತಮಿಳರ ಭಾವನೆಗಳೊಂದಿಗೆ ಆಟವಾಡಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

  • ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ: ದರ್ಶನ್‌

    ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ: ದರ್ಶನ್‌

    ಬೆಂಗಳೂರು: ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ. ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ. ಅದು ಕೇವಲ ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಸೀಮಿತವಾಗಿದ್ದರೆ ಒಳಿತು ಎಂದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ಪ್ರತಿ ವರ್ಷ ಆಚರಿಸಲ್ಪಡುತ್ತಿರುವ ಹಿಂದಿ ದಿವಸ್‌ ಬಗ್ಗೆ ಫೇಸ್‌ಬುಕ್‌ನಲ್ಲಿ ದೀರ್ಘವಾದ ಪೋಸ್ಟ್‌ ಬರೆದು ದರ್ಶನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಬಹಳ ವರ್ಷಗಳಿಂದಲೂ ಈ ಹಿಂದಿ ಹೇರಿಕೆ ಕಾಲ ಕ್ರಮೇಣ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಕರ್ನಾಟಕದ ಬಾರ್ಡರ್ ಪ್ರದೇಶಗಳಲ್ಲಿ ಅನ್ಯ ಭಾಷೆಗಳ ಬಳಕೆಯಿಂದ ನಮ್ಮ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯುಂಟಾಗುತ್ತಿದೆ. ಇದನ್ನು ಪ್ರತಿಭಟಿಸದೆ ನಾವು ಸುಮ್ಮನಿದ್ದರೆ ಮುಂದೆ ಕನ್ನಡಿಗ ಎನ್ನುವ ಅಸ್ತಿತ್ವವೇ ದೂರವಾಗುವ ದಿನಗಳು ಹತ್ತಿರದಲ್ಲೇ ಇದೆ.

    ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ. ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ. ಅದು ಕೇವಲ ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಸೀಮಿತವಾಗಿದ್ದರೆ ಒಳಿತು. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವುದು ನಮ್ಮ ಭಾರತ ಸಂವಿಧಾನದ ಪ್ರತೀಕವಾಗಿದೆ.

    ಯಾವುದೋ ಉತ್ತರದ ಒಂದು ಪ್ರಾದೇಶಿಕ ಭಾಷೆಯನ್ನು ನಮ್ಮ ಮೇಲೆ ಹೇರಿ ನಮ್ಮ ಸಂಸ್ಕೃತಿ, ಭಾಷೆ, ನೆಲೆಯನ್ನು ಕಸಿದುಕೊಳ್ಳುವುದು ಹೀನಾಯಕರ ಸಂಗತಿಯೆಂದರೆ ತಪ್ಪಾಗಲಾರದು. ನಮ್ಮ ಕೊನೆಯುಸಿರಿರುವವರೆಗೂ ಕನ್ನಡ ಪರವಾಗಿ ನಿಲ್ಲುತ್ತೇವೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ.

    ಬಹುಭಾಷಾ ಹಿರಿಯ ನಟ ಪ್ರಕಾಶ್‌ ರೈ ಅವರು, ಹಲವು ಭಾಷೆ ಬಲ್ಲೆ. ಹಲವು ಭಾಷೆಗಳಲ್ಲಿ ಕೆಲಸ ಮಾಡಬಲ್ಲೆ. ಆದರೆ ನನ್ನ ಕಲಿಕೆ, ನನ್ನ ಗ್ರಹಿಕೆ, ನನ್ನ ಬೇರು, ನನ್ನ ಶಕ್ತಿ, ನನ್ನ ಹೆಮ್ಮೆ ನನ್ನ ಮಾತೃಭಾಷೆ ಕನ್ನಡ ಹಿಂದಿ ಹೇರಿಕೆ ಬೇಡ ಎಂದು ಟ್ವೀಟ್‌ ಮಾಡಿದ್ದರು. ಇದನ್ನೂ ಓದಿ: ಭಾಷಾ ಅಹಂಕಾರದ ಸಂಕೇತವಾದ ಹಿಂದಿ ದಿವಸಕ್ಕೆ ಸ್ವಾಭಿಮಾನಿ ಕನ್ನಡಿಗರ ವಿರೋಧವಿದೆ: ಹೆಚ್‍ಡಿಕೆ

    ಕನ್ನಡದ ನಟ ಧನಂಜಯ್‌ ಅವರು, ನನ್ನ ದೇಶ ಭಾರತ. ನನ್ನ ಬೇರು ಕನ್ನಡ. ಎಲ್ಲ ಭಾಷೆಯನ್ನು ಗೌರವಿಸುತ್ತೇನೆ. ನನ್ನ ಭಾಷೆಯನ್ನು ಹೆಚ್ಚು ಪ್ರೀತಿಸುತ್ತೇನೆ. ಯಾವುದೇ ಹೇರಿಕೆ ಸಲ್ಲದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.