Tag: hindi

  • ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್ ಹಿಂದಿ ಆಲ್ಬಂ ಲೋಕಕ್ಕೆ ಎಂಟ್ರಿ

    ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್ ಹಿಂದಿ ಆಲ್ಬಂ ಲೋಕಕ್ಕೆ ಎಂಟ್ರಿ

    ಕ್ಷಿಣ ಭಾರತದ ಅತ್ಯಂತ ಜನಪ್ರಿಯ ಸಂಗೀತ ನಿರ್ದೇಶಕರಾದ ದೇವಿ ಶ್ರೀಪ್ರಸಾದ್ (Devi Sriprasad) ಅಲಿಯಾಸ್ ಡಿಎಸ್ಪಿ ಹಲವು ಚಿತ್ರಗಳಿಗೆ ಸಂಗೀತ ಸಂಯೋಜಿಸುವುದರ ಜೊತೆಗೆ ತಮ್ಮ ಹಿಟ್ ಹಾಡುಗಳ ಮೂಲಕ ಲಕ್ಷಾಂತರ ಜನರನ್ನು ರಂಜಿಸಿದ್ದಾರೆ. ಈಗ ಇದೇ ಮೊದಲ ಬಾರಿಗೆ ಅವರು ಸಿನಿಮಾ ಹೊರತುಪಡಿಸಿ ಆಲ್ಬಂ (Album) ಸಿಂಗಲ್ವೊಂದಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಅದೇ ‘ಓ ಪರಿ’.

    ಟಿ-ಸೀರೀಸ್ ಮೂಲಕ ಇದುವರೆಗೂ ಹಲವಾರು ಗಾಯಕರನ್ನು ಮತ್ತು ಸಂಗೀತಗಾರರನ್ನು ಮುನ್ನೆಲೆಗೆ ತಂದಿರುವ ಭೂಷಣ್ ಕುಮಾರ್, ಇದೇ ಮೊದಲ ಬಾರಿಗೆ ‘ರಾಕ್ಸ್ಟಾರ್’ ಎಂದೇ ಜನಪ್ರಿಯವಾಗಿರುವ ಡಿಎಸ್ಪಿ ಜೊತೆಗೆ ಕೈ ಜೋಡಿಸಿದ್ದಾರೆ. ಡಿಎಸ್ಪಿ ಸಂಯೋಜಿಸಿರುವ ‘ಓ ಪರಿ’ (Oh Pari) ಎಂಬ ಸಿಂಗಲ್ ಅನ್ನು ಟಿ-ಸೀರೀಸ್ ಮೂಲಕ ಹೊರತಂದಿದ್ದಾರೆ. ಈ ಹಾಡನ್ನು ಡಿಎಸ್ಪಿ ಅವರೇ ಹಾಡಿದ್ದು, ಇತ್ತೀಚೆಗೆ ಮುಂಬೈನಲ್ಲಿ ನಡೆದ ವಿಶೇಷ ಇವೆಂಟ್ನಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡು ಈಗಾಗಲೇ ಯೂಟ್ಯೂಬ್ನ ಟಿ-ಸೀರೀಸ್ ಚಾನಲ್ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ಜನಪ್ರಿಯವಾಗಿದೆ. ಅದರಲ್ಲೂ, ಡಿಎಸ್ಪಿ ಅವರ ಹುಕ್ ಸ್ಟೆಪ್ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಇದನ್ನೂ ಓದಿ:‘ಅರ್ಧಂಬರ್ಧ ಪ್ರೇಮಕಥೆ’ಯಲ್ಲಿ ಅರವಿಂದ್-ದಿವ್ಯಾ ಉರುಡುಗ ಜೋಡಿ

    ಈ ಹಾಡಿನ ವಿಶೇಷತೆಯೆಂದರೆ, ಇದು ಡಿಎಸ್ಪಿ ಅವರ ಮೊದಲ ಹಿಂದಿ ಸಿಂಗಲ್ ಆದರೂ, ಇದು ಹಿಂದಿಗೆ ಮಾತ್ರ ಸೀಮಿತವಲ್ಲ. ಇದೊಂದು ಪ್ಯಾನ್ ಇಂಡಿಯಾ ಹಾಡಾಗಿದ್ದು, ಹಿಂದಿಯಲ್ಲದೆ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಮೂಡಿಬಂದಿದೆ. ವಿಶೇಷವೆಂದರೆ, ಐದೂ ಭಾಷೆಗಳಲ್ಲಿ ಡಿಎಸ್ಪಿ ಅವರೇ ಈ ಹಾಡನ್ನು ಹಾಡಿದ್ದಾರೆ.

    ಈ ಹಾಡಿನ ಕುರಿತು ಮಾತನಾಡಿರುವ ಡಿಎಸ್ಪಿ, ‘ಹಿಂದಿ ಆಲ್ಬಂ ಕ್ಷೇತ್ರಕ್ಕೆ ಕಾಲಿಡುವುದಕ್ಕೆ ಕೆಲವು ಸಮಯದಿಂದ ಯೋಚಿಸುತ್ತಿದ್ದೆ. ಅದಕ್ಕೊಂದು ಅದ್ಭುತ ವೇದಿಕೆ ಕಲ್ಪಿಸಿದ್ದು ಭೂಷಣ್ ಕುಮಾರ್ ಅವರ ಟಿ-ಸೀರೀಸ್. ನನ್ನ ಬೇರೆ ಹಾಡುಗಳನ್ನು ಮೆಚ್ಚಿದಂತೆ ಈ ಹಾಡನ್ನು ಸಹ ಕೇಳುಗರು ಇಷ್ಟಪಡುತ್ತಾರೆ ಎಂಬ ನಂಬಿಕೆ ನನಗಿದೆ. ಮುಂದಿನ ದಿನಗಳಲ್ಲಿ ಈ ತರಹದ ಇನ್ನಷ್ಟು ಆಲ್ಬಂ ಹಾಡುಗಳನ್ನು ಬಿಡುಗಡೆ ಮಾಡುವ ಯೋಚನೆ ಇದೆ’ ಎಂದು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಶೋ ನಡೆಸಲು ಸಲ್ಮಾನ್ ಖಾನ್ ಗೆ 1000 ಕೋಟಿ ಸಂಭಾವನೆ: ಸತ್ಯ ಒಪ್ಪಿಕೊಂಡ ನಟ

    ‘ಬಿಗ್ ಬಾಸ್’ ಶೋ ನಡೆಸಲು ಸಲ್ಮಾನ್ ಖಾನ್ ಗೆ 1000 ಕೋಟಿ ಸಂಭಾವನೆ: ಸತ್ಯ ಒಪ್ಪಿಕೊಂಡ ನಟ

    ಹಿಂದಿಯ ಬಿಗ್ ಬಾಸ್ ಶೋ ನಡೆಸುವುದಕ್ಕಾಗಿ ಸಲ್ಮಾನ್ ಖಾನ್ (Salman Khan) ಭಾರೀ ಮೊತ್ತದ ಸಂಭಾವನೆ ಪಡೆಯುತ್ತಾರೆ ಎಂಬ ಸುದ್ದಿ ಬಾಲಿವುಡ್ ಅಂಗಳಲ್ಲಿ ಸಖತ್ ಸದ್ದು ಮಾಡಿತ್ತು. ಅದೊಂದು ದೊಡ್ಡ ಮೊತ್ತದ ಸಂಭಾವನೆ ಆಗಿರುವ ಕಾರಣದಿಂದಾಗಿ, ಉಳಿದ ಭಾಷೆಯಲ್ಲಿ ಬಿಗ್ ಬಾಸ್ ನಡೆಸಿಕೊಡುವ ಸಿಲಿಬ್ರಿಟಿಗಳು ಇನ್ನೆಷ್ಟು ಸಂಭಾವನೆ ಪಡೆಯಲಿದ್ದಾರೆ ಎಂಬ ಕುತೂಹಲ ಮೂಡಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ ಸಲ್ಮಾನ್.

    ಬಿಗ್ ಬಾಸ್ (Bigg Boss) ಶೋ ನಡೆಸುವುದಕ್ಕಾಗಿ ಸಲ್ಮಾನ್ ಸಾವಿರ ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನುವ ಸುದ್ದಿ ಅವರಿಗೂ ತಲುಪಿದೆ. ಈ ಸುದ್ದಿ ಓದಿ ಸ್ವತಃ ಸಲ್ಮಾನ್ ಬೆಚ್ಚಿ ಬಿದ್ದಿದ್ದಾರೆ. ಐಟಿ ದಾಳಿ ಮಾಡಿಸಲು ಯಾರಾದರೂ ಹುನ್ನಾರ ನಡೆಸಿದ್ದಾರಾ? ಎಂದು ತಮಾಷೆ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಸಲ್ಮಾನ್, ತಾವು ಈವರೆಗೂ ಸಾವಿರ ಕೋಟಿ ದುಡ್ಡನ್ನೇ ನೋಡಿಲ್ಲ. ಇನ್ನು ಸಂಭಾವನೆ ಪಡೆಯುವುದು ದೂರದ ಮಾತು ಅಂದಿದ್ದಾರೆ. ಇದನ್ನೂ ಓದಿ:ಮೇಘನಾ ರಾಜ್ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಪ್ರಜ್ವಲ್ ದೇವರಾಜ್

    ಈಗ ಹರಿದಾಡುತ್ತಿರುವ ಸಾವಿರ ಕೋಟಿ ಸಂಭಾವನೆಯಲ್ಲಿ (Salary) ಕಾಲು ಭಾಗದ ಹಣ ಬಂದರೆ ಅದೇ ನನಗೆ ಸಾವಿರ ಕೋಟಿ. ಆದರೆ, ಅದು ಸಾಧ್ಯವಿಲ್ಲವೆ? ನನಗೂ ಸಾವಿರ ಕೋಟಿ ಸಂಭಾವನೆ ಪಡೆಯಬೇಕು ಎನ್ನುವ ಆಸೆಯಿದೆ. ಅಂಥದ್ದೊಂದು ಕಾಲ ಯಾವಾಗ ಕೂಡಿ ಬರುತ್ತದೆಯೋ ಕಾದು ನೋಡಬೇಕು ಎಂದು ಅವರು ಮಾತನಾಡಿದ್ದಾರೆ. ಸಾವಿರ ಕೋಟಿ ಸಂಭಾವನೆಯನ್ನು ಪಡೆಯುತ್ತೇನೆ ಎನ್ನುವುದು ಸುಳ್ಳು ಎಂದೂ ಅವರು ತಿಳಿಸಿದ್ದಾರೆ.

    salman

    ಕಳೆದ ಕೆಲವು ಸೀಸನ್ ಗಳಿಂದಲೂ ಈ ಸಾವಿರ ಕೋಟಿ (Thousand Crores) ಲೆಕ್ಕಾಚಾರದ ಸುದ್ದಿ ಹೈಪ್ ಪಡೆಯುತ್ತಲೇ ಇತ್ತು. ಈವರೆಗೂ ಈ ಕುರಿತಾಗಿ ಸಲ್ಮಾನ್ ಪ್ರತಿಕ್ರಿಯಿಸಿರಲಿಲ್ಲ. ಈ ಬಾರಿ ಆ ಕುರಿತು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಈ ಕುರಿತಾದ ಸತ್ಯವನ್ನೂ ಅವರು ಒಪ್ಪಿಕೊಂಡಿದ್ದಾರೆ. ಅಲ್ಲದೇ, ಸಾವಿರ ಕೋಟಿ ಸಂಭಾವನೆಯನ್ನು ಪಡೆಯುವ ಆಸೆಯನ್ನೂ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೇಂದ್ರ, ರಾಜ್ಯ ಸರ್ಕಾರಗಳು ಕನ್ನಡದ ಕತ್ತು ಹಿಸುಕುವ ಕೆಲಸ ಮಾಡುತ್ತಿವೆ: ಕುಮಾರಸ್ವಾಮಿ

    ಕೇಂದ್ರ, ರಾಜ್ಯ ಸರ್ಕಾರಗಳು ಕನ್ನಡದ ಕತ್ತು ಹಿಸುಕುವ ಕೆಲಸ ಮಾಡುತ್ತಿವೆ: ಕುಮಾರಸ್ವಾಮಿ

    ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯದಲ್ಲಿ ಕನ್ನಡವನ್ನು ಧಿಕ್ಕರಿಸಿ ಹಿಂದಿ ದಿವಸ ಆಚರಿಸುತ್ತಿರುವುದು, ಅದಕ್ಕೆ ರಾಜ್ಯ ಬಿಜೆಪಿ(BJP) ಸರ್ಕಾರ ಬೆಂಬಲ ನೀಡುತ್ತಿರುವುದು ಅತ್ಯಂತ ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ‌ಕುಮಾರಸ್ವಾಮಿ(HD Kumaraswamy) ವಾಗ್ದಾಳಿ ನಡೆಸಿದರು.

    ಹಿಂದಿ ದಿವಸ ಆಚರಣೆ ಖಂಡಿಸಿ ವಿಧಾನಸೌಧ ಬಳಿಯ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ಕನ್ನಡ ಶಾಲು ಧರಿಸಿ ಹಾಗೂ ಕಪ್ಪು ಪಟ್ಟಿ ಕಟ್ಟಿಕೊಂಡು ಜೆಡಿಎಸ್(JDS) ಶಾಸಕರು ಪ್ರತಿಭಟನೆ ನಡೆಸಿದರು. ಕನ್ನಡ(Kannada) ಹಾಡು ಹಾಡಿ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

    bjP

    ಕೇಂದ್ರ ಸರ್ಕಾರಕ್ಕೆ ಭಾಷಾ ಸಹಿಷ್ಣುತೆ ಇಲ್ಲ. ರಾಜ್ಯಗಳ ಮೇಲೆ, ಅದರಲ್ಲೂ ಕರ್ನಾಟಕದ ಮೇಲೆ ಪದೇಪದೆ ಹಿಂದಿ ಹೇರಿಕೆ ಮಾಡುತ್ತಲೇ ಇದೆ. ಪ್ರಾದೇಶಿಕ ಭಾಷೆಗಳನ್ನು, ಮುಖ್ಯವಾಗಿ ಕನ್ನಡವನ್ನು ಹತ್ತಿಕ್ಕುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ನೇರವಾಗಿ ಆರೋಪಿಸಿದರು.

    ಕೇಂದ್ರ ಸರ್ಕಾರದಿಂದ ಇವತ್ತು ಹಿಂದಿ ಆಚರಣೆ ಮಾಡುತ್ತಿರುವುದಕ್ಕೆ ನಮ್ಮ ಪಕ್ಷ ಜಾತ್ಯತೀತ ಜನತಾದಳದ ವಿರೋಧ ಇದೆ. ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ದೇಶದಲ್ಲಿ ನಾನಾ ಭಾಷೆ ಮಾತಾಡುವ ನಾಗರಿಕರು ಇದ್ದಾರೆ. ಈಗಾಗಲೇ ಅಮೃತ ಮಹೋತ್ಸವ ಮಾಡಿದ್ದೇವೆ. ಅದರೂ ಕೇಂದ್ರ ಬಿಜೆಪಿ ಸರ್ಕಾರ ಕೇವಲ ಒಂದು ಭಾಷೆಯನ್ನು ರಾಜ್ಯಗಳ ಮೇಲೆ ಹೇರಿಕೆ ಮಾಡುತ್ತಿದೆ ಎಂದು ಕಿಡಿಕಾರಿದರು.

    ಒಂದು ಭಾಷೆ(Language) ಒಂದು ರಾಷ್ಟ್ರ ಎಂಬ ಗೃಹ ಸಚಿವರ ಹೇಳಿಕೆ ಸರಿಯಲ್ಲ. ಕೇವಲ ಹಿಂದಿ ಒಂದು ಭಾಷೆಯಿಂದ ಭಾರತ ಒಂದಾಗಿ ಉಳಿದಿಲ್ಲ. ವಿವಿಧತೆಯಲ್ಲಿ ಏಕತೆ ಭಾರತದ ಶಕ್ತಿ. ಅದನ್ನೇ ಹಾಳು ಮಾಡಿದರೆ ದೇಶವನ್ನು ಒಡೆದಂತೆ. ಅವರು ಕೆಲ ಭಾವನಾತ್ಮಕ ವಿಚಾರ ಕೆಣಕುತ್ತಾ ದೇಶವನ್ನು ವಿಭಜಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇವತ್ತು ಉತ್ತರ ಭಾರತದ ಕೆಲವು ಭಾಗದಲ್ಲಿ ಹಿಂದಿ(Hindi) ಇಲ್ಲ. ಅನೇಕ ರಾಜ್ಯಗಳಲ್ಲಿ ಅವರವರದ್ದೇ ಭಾಷೆ ಇದೆ. ತಮ್ಮ ಭಾಷೆಯನ್ನೇ ಮಾತನಾಡುತ್ತಾ ನೆಮ್ಮದಿಯಿಂದ ಇದ್ದಾರೆ. ಸಾವಿರಾರು ವರ್ಷಗಳ ಇತಿಹಾಸ ಇರುವ ಪ್ರಾದೇಶಿಕ ಭಾಷೆಗಳ ಕತ್ತನ್ನು ಹಿಸುಕುವ ಕೇಂದ್ರದ ನಡೆಗೆ ನಮ್ಮ ವಿರೋಧ ಇದೆ. ಕನ್ನಡದ ಬಗ್ಗೆ ಯಾಕಿಷ್ಟು ಅಸಹನೆ ಇವರಿಗೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದರು. ಇದನ್ನೂ ಓದಿ: ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಕುಸಿತ – 7 ಸಾವು, ಒಬ್ಬರ ಸ್ಥಿತಿ ಗಂಭೀರ

    ಹಿಂದಿ ದಿವಸದ ಹೆಸರಿನಲ್ಲಿ ಕನ್ನಡಿಗರ ತೆರಿಗೆ ಹಣ ವ್ಯಯ ಮಾಡೋದು ಎಷ್ಟು ಸರಿ? ಜನ ಈಗಾಗಲೇ ನೆರೆ ಹಾವಳಿಯಿಂದ ತತ್ತರಿಸಿದ್ದಾರೆ. ಅವರ ನೆರವಿಗೆ ಬಾರದೆ ಹಿಂದಿ ಭಾಷೆಯ ವಿಚಾರ ಸರ್ಕಾರಕ್ಕೆ ಮುಖ್ಯವಾಗಿದೆ. ಇದಕ್ಕೆ ಕನ್ನಡಿಗರ ಧಿಕ್ಕಾರವಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಉಮೇಶ್‌ ಕತ್ತಿ ಕುಟುಂಬಕ್ಕೆ ಸಚಿವ ಸ್ಥಾನ ನೀಡಲು ಅಭಿಮಾನಿಗಳ ಆಗ್ರಹ

    Live Tv
    [brid partner=56869869 player=32851 video=960834 autoplay=true]

  • ದುಷ್ಕರ್ಮಿಗಳಿಂದ ಕಿರುತೆರೆ ನಟ ಪುನಿತ್ ತಲ್ರೇಜಾ ಮೇಲೆ ಹಲ್ಲೆ

    ದುಷ್ಕರ್ಮಿಗಳಿಂದ ಕಿರುತೆರೆ ನಟ ಪುನಿತ್ ತಲ್ರೇಜಾ ಮೇಲೆ ಹಲ್ಲೆ

    ಕಿರುತೆರೆ ನಟ ಪುನಿತ್ ತಲ್ರೇಜಾ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ನಡೆದಿದೆ. ಈ ಪ್ರಕರಣ ಮಹಾರಾಷ್ಟ್ರದ, ಥಾಣೆ ಜಿಲ್ಲೆಯಲ್ಲಿ ನಡೆದಿದೆ. ನಟ ಪುನಿತ್ ಮನೆಗೆ ತೆರಳುವಾಗ ಇಬ್ಬರು ದುಷ್ಕರ್ಮಿಗಳಿಂದ ಹಲ್ಲೆ ನಡೆದಿದೆ.

    ಹಿಂದಿ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಪುನಿತ್ ತಲ್ರೇಜಾ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ನಡೆದಿದೆ. ಮಹಾರಾಷ್ಟ್ರದ, ಥಾಣೆ ಜಿಲ್ಲೆಯಲ್ಲಿ ಅಂಬರನಾಥ್ ಟೌನ್‌ಶಿಪ್‌ನಲ್ಲಿ ಈ ಪ್ರಕರಣ ನಡೆದಿದೆ. ನಟ ಪುನಿತ್ ಸೋಮವಾರ ರಾತ್ರಿ ಮನೆಗೆ ತೆರಳುವಾಗ ಇಬ್ಬರು ದುಷ್ಕರ್ಮಿಗಳು ರಾಡ್‌ನಿಂದ ಹೊಡೆದು, ನಟನ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ತಮ್ಮ ತಾಯಿಗೆ ಔಷಧಿಗಳನ್ನು ಖರೀದಿಸಿ ಸ್ಕೂಟರ್‌ನಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ನಟ ಪುನಿತ್ ಹಿಂದೆ ಬಂದ ಇಬ್ಬರು ವ್ಯಕ್ತಿಗಳು ಹಾರ್ನ್ ಮಾಡಿ, ದಾರಿ ಮಾಡಿಕೊಡದಿದ್ದಕ್ಕಾಗಿ ನಿಂದಿಸಿದ್ದಾರೆ. ನಂತರ ರಾಡ್‌ನಲ್ಲಿ ಹೊಡೆದು, ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಕುರಿತು ಅಂಬರನಾಥ್‌ದ ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ನಟ ಪುನಿತ್ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನಟ ರೋಹಿತ್ ವಿರುದ್ಧ ಕೊಲೆ ಬೆದರಿಕೆ ಸೇರಿದಂತೆ ಹಲವು ಆರೋಪ

    ನಟ ರೋಹಿತ್ ವಿರುದ್ಧ ಕೊಲೆ ಬೆದರಿಕೆ ಸೇರಿದಂತೆ ಹಲವು ಆರೋಪ

    ಹಿಂದಿಯ ಯೇ ರಿಶ್ತಾ ಕ್ಯಾ ಕೆಹಲಾತಾ ಹೈ ಧಾರಾವಾಹಿಯ ಖ್ಯಾತ ನಟ ರೋಹಿತ್ ಸೇಠಿಯಾ ಮೇಲೆ ಕೊಲೆ ಬೆದರಿಕೆಗೆ ಸೇರಿದಂತೆ ಹಲವು ಆರೋಪಗಳು ಕೇಳಿ ಬಂದಿದೆ. ಹಿಂದಿ ಧಾರಾವಾಹಿ ಲೋಕದ ಜನಪ್ರಿಯ ನಟರಾಗಿರುವ ರೋಹಿತ್, ಅದೇ ಧಾರಾವಾಹಿಯಲ್ಲಿ ನಟಿಸುತ್ತಿರುವ ನಿಶಾ ರಾವಲ್ ಒಟ್ಟಿಗೆ ಅಕ್ರಮ ಸಂಬಂಧದಲ್ಲಿ ಇದ್ದಾರೆ ಎಂದು ಸ್ವತಃ ನಿಶಾ ಪತಿಯೇ ಆರೋಪ ಮಾಡಿದ್ದಾರೆ. ಅಲ್ಲದೇ ರೋಹಿತ್ ವಿರುದ್ಧ ದೂರು ದಾಖಲಿಸಿದ್ದಾರೆ.

    ತನ್ನ ಪತ್ನಿಯೊಂದಿಗೆ ರೋಹಿತ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಸುದ್ದಿಗೋಷ್ಠಿ ನಡೆಸಿ, ಪತ್ನಿ ಮತ್ತು ರೋಹಿತ್ ವಿರುದ್ಧ ಆರೋಪಗಳ ಮಳೆಯನ್ನೇ ಸುರಿಸಿದ್ದಾರೆ. ಅಲ್ಲದೇ, ತನ್ನ ಸ್ವಂತ ಮನೆಯಲ್ಲೇ ತನ್ನೊಂದಿಗೆ ನಟಿಸುತ್ತಿರುವ ರೋಹಿತ್ ಜೊತೆ ಇರುತ್ತಾಳೆ. ನನ್ನನ್ನೇ ಮನೆ ಒಳಗೆ ಬಿಟ್ಟುಕೊಳ್ಳುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ:ಲಂಡನ್ ಸ್ಟುಡಿಯೋದಲ್ಲಿ ಕನ್ನಡ ಚಿತ್ರಕ್ಕೆ ಹಿನ್ನೆಲೆ ಸಂಗೀತ

    ನನ್ನನ್ನು ನಿಶಾ ಮದುವೆ ಆಗಿದ್ದರೂ, ತಾನು ಸಿಂಗಲ್ ಮದರ್ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಕಳೆದ ಐದಾರು ತಿಂಗಳಿಂದ ನನ್ನನ್ನು ಮನೆಗೆ ಸೇರಿಸಿಕೊಳ್ಳುತ್ತಿಲ್ಲ. ನನ್ನ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ನಿಶಾ ಮತ್ತು ರೋಹಿತ್ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಗುಂಡಿಟ್ಟು ಕೊಲ್ಲುವುದಾಗಿ ಪದೇ ಪದೇ ಹೇಳುತ್ತಾರೆ. ಹಾಗಾಗಿ ಸಾಕ್ಷಿ ಸಮೇತ ನಾನು ನ್ಯಾಯಾಲಯಕ್ಕೆ ಹೋಗುವೆ ಎಂದಿದ್ದಾರೆ ನಿಶಾ ಪತಿ.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ನಿರೂಪಣೆಗೆ ಸಲ್ಮಾನ್ ಖಾನ್ ಪಡೆಯೋದು 350 ಕೋಟಿ.  ಕಿಚ್ಚ ಸುದೀಪ್ ಸಂಭಾವನೆ ಎಷ್ಟು?

    ‘ಬಿಗ್ ಬಾಸ್’ ನಿರೂಪಣೆಗೆ ಸಲ್ಮಾನ್ ಖಾನ್ ಪಡೆಯೋದು 350 ಕೋಟಿ. ಕಿಚ್ಚ ಸುದೀಪ್ ಸಂಭಾವನೆ ಎಷ್ಟು?

    ಹಿಂದಿ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡಲು ಈ ಹಿಂದೆ ಸಲ್ಮಾನ್ ಖಾನ್ 350 ಕೋಟಿ ರೂಪಾಯಿಯನ್ನು ಸಂಭಾವನೆಯಾಗಿ ಪಡೆದಿದ್ದಾರೆ ಎನ್ನಲಾಗುತ್ತಿದೆ.  ಇದೀಗ ಹಿಂದಿ ಬಿಗ್ ಬಾಸ್ ಸೀಸನ್ 16ಕ್ಕೆ ಕ್ಷಣಗಣನೆ ಶುರುವಾಗಿದ್ದು, ಮತ್ತೆ ಸಲ್ಮಾನ್ ಖಾನ್ ಸಂಭಾವನೆಯ ಬಗ್ಗೆ ಚರ್ಚೆ ಶುರುವಾಗಿದೆ. ಈ ಬಾರಿ ಓಟಿಟಿ ಮತ್ತು ಟಿವಿಯಲ್ಲಿ ಪ್ರತ್ಯೇಕ ಕಾರ್ಯಕ್ರಮವನ್ನು ನಡೆಸಿ ಕೊಡಬೇಕಾಗಿದ್ದರಿಂದ ಸಲ್ಮಾನ್ ಖಾನ್ ಬರೋಬ್ಬರಿ ಸಾವಿರ ಕೋಟಿ ಸಂಭಾವನೆ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಲ್ಮಾನ್ ಖಾನ್ ಅಷ್ಟೊಂದು ಸಂಭಾವನೆ ಕೇಳಿದ್ದಾರೆ ಎಂದು ಸುದ್ದಿ ಆಗುತ್ತಿದ್ದಂತೆಯೇ ಕನ್ನಡದಲ್ಲಿ ಬಿಗ್ ಬಾಸ್ ನಡೆಸಿಕೊಡುವ ಕಿಚ್ಚ ಸುದೀಪ್ ಅವರ ಸಂಭಾವನೆ ಬಗ್ಗೆಯೂ ಸ್ಯಾಂಡಲ್ ವುಡ್ ನಲ್ಲಿ ಚರ್ಚೆ ಶುರುವಾಗಿದೆ. ಹಿಂದಿ ಬಿಗ್ ಬಾಸ್ ಮತ್ತು ಕನ್ನಡದ ಬಿಗ್ ಬಾಸ್ ಬಗ್ಗೆ ಹೋಲಿಕೆ ಮಾಡುವುದಕ್ಕೆ ಸಾಧ್ಯವಿಲ್ಲವಾದರೂ, ಕಿಚ್ಚನ ಸಂಭಾವನೆ ಕೂಡ ಕಡಿಮೆ ಇಲ್ಲ ಎನ್ನುತ್ತಾರೆ ಆಪ್ತರು. ಸುದೀಪ್ ಕೂಡ ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ನೂರು ಕೋಟಿಯಲ್ಲಿ ಬೇರೆ ಬೇರೆ ಲೆಕ್ಕಾಚಾರಗಳು ಇರುತ್ತವೆ ಎನ್ನುತ್ತವೆ ಮೂಲಗಳು. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್

    ಹಿಂದಿಯಲ್ಲಿ ಒಂದು ರೀತಿಯಲ್ಲಿ ಸಂಭಾವನೆ ಫಿಕ್ಸ್ ಆದರೆ, ಕನ್ನಡದಲ್ಲಿ ಬೇರೆ ರೀತಿಯ ಲೆಕ್ಕಾಚಾರಗಳನ್ನು ಹಾಕಿ ಸಂಭಾವನೆ ನಿಗದಿ ಮಾಡಲಾಗುತ್ತದೆ ಅಂತೆ. ಹಾಗಾಗಿ ಕನ್ನಡದಲ್ಲಿ ಒಂದೇ ಸಲ ನೂರು ಕೋಟಿ ಕೊಡುವುದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತವೆ ಮೂಲಗಳು. ಬಿಗ್ ಬಾಸ್ ಮಾತ್ರವಲ್ಲ, ರಿಯಾಲಿಟಿ ಶೋಗಳನ್ನು ನಡೆಸಿಕೊಡುವ ಕಲಾವಿದರ ಸಂಭಾವನೆ ನಿಗದಿ ಆಗುವುದು, ಕೇವಲ ಆ ಶೋಗೆ ಮಾತ್ರ ಆಗಿರುವುದಿಲ್ಲ. ಅವರ ಸಿನಿಮಾಗಳು ಸೇರಿದಂತೆ ಒಟ್ಟಾರೆ ಸಂಭಾವನೆ ನಿಗದಿ ಆಗುತ್ತವಂತೆ. ಹಾಗಾಗಿ ಕಿಚ್ಚ ಸುದೀಪ್ ಕೂಡ ನೂರಾರು ಕೋಟಿ ಸಂಭಾವನೆ ಪಡೆಯುವುದರಲ್ಲಿ ಅನುಮಾನವಿಲ್ಲ ಎಂದು ಹೇಳಲಾಗುತ್ತಿದೆ.

    ಆದರೆ, ವಾಹಿನಿಯಾಗಲಿ ಮತ್ತು ಸುದೀಪ್ ಅವರಾಗಲಿ ಈ ಬಗ್ಗೆ ಯಾವತ್ತೂ ಮಾತೂ ಆಡಿಲ್ಲ. ಅಧಿಕೃತವಾಗಿ ಘೋಷಣೆಯನ್ನೂ ಮಾಡಿಲ್ಲ. ಆಪ್ತರಲ್ಲಿ ಮಾತ್ರ ಈ ರೀತಿಯ ಗುಸುಗುಸು ಕೇಳಬಹುದಷ್ಟೇ. ಏನೇ ಆಗಲಿ, ನೂರಾರು ಕೋಟಿ ಸಂಭಾವನೆ ಪಡೆದುಕೊಂಡು ಕಾರ್ಯಕ್ರಮ ನಡೆಸಿಕೊಡುವಂತಹ ಅದೃಷ್ಟ ಸಿಗುವುದು ಕೆಲವೇ ಕೆಲವು ಜನರಿಗೆ. ಅದರಲ್ಲಿ ಸುದೀಪ್ ಕೂಡ ಒಬ್ಬರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಿಂದಿ ಹಿಂದುಳಿದ ರಾಜ್ಯಗಳ ಭಾಷೆ, ಇದು ಶೂದ್ರರಿಗೆ ಮಾತ್ರ: ಡಿಎಂಕೆ ಸಂಸದ

    ಹಿಂದಿ ಹಿಂದುಳಿದ ರಾಜ್ಯಗಳ ಭಾಷೆ, ಇದು ಶೂದ್ರರಿಗೆ ಮಾತ್ರ: ಡಿಎಂಕೆ ಸಂಸದ

    ಚೆನ್ನೈ: ಹಿಂದಿಯು ಹಿಂದುಳಿದ ರಾಜ್ಯಗಳ ಭಾಷೆ ಎಂದು ಹೇಳುವ ಮೂಲಕ ಡಿಎಂಕೆ(ದ್ರಾವಿಡ ಮುನ್ನೇತ್ರ ಕಳಗಂ) ಸಂಸದ ಟಿಕೆಎಸ್ ಇಳಂಗೋವನ್ ಭಾಷಾ ಚರ್ಚೆಯಲ್ಲಿ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.

    ಇಳಂಗೋವನ್ ಅವರು ಭಾಷಾ ವಿವಾದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡುವಾಗ, ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಂತಹ ಹಿಂದುಳಿದ ರಾಜ್ಯಗಳಲ್ಲಿ ಮಾತ್ರ ಹಿಂದಿ ಸ್ಥಳೀಯ ಭಾಷೆಯಾಗಿದೆ. ಹಿಂದಿ ಶೂದ್ರರಿಗೆ ಮಾತ್ರ ಎಂದು ಹೇಳುವ ಮೂಲಕ ಭಾಷೆಗೆ ಮೇಲು-ಕೀಳು ಭಾವನೆಯನ್ನು ತಂದಿದ್ದಾರೆ. ಇದನ್ನೂ ಓದಿ: ಹಿಂದಿಯಲ್ಲಿ ಮಾತನಾಡುವವರು ಪಾನಿಪೂರಿ ಮಾರುತ್ತಿದ್ದಾರೆ: TN ಸಚಿವ ಪೊನ್ಮುಡಿ

    ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣ, ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಮತ್ತು ಪಂಜಾಬ್ ದೇಶಗಳನ್ನು ನೋಡಿ. ಇವೆಲ್ಲವೂ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲವೇ? ಹಿಂದಿ ಈ ರಾಜ್ಯಗಳ ಜನರ ಮಾತೃಭಾಷೆಯಲ್ಲ ಎಂದು ಹೇಳಿದರು.

    ಹಿಂದಿ ನಮ್ಮನ್ನು ಶೂದ್ರರನ್ನಾಗಿ ಪರಿವರ್ತಿಸುತ್ತದೆ. ಹಿಂದಿ ನಮಗೆ ಒಳ್ಳೆಯದಲ್ಲ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಶ್ರೀರಂಗಪಟ್ಟಣ ಜಾಮಿಯಾ ವಿವಾದಕ್ಕೆ ಪುಸ್ತಕದಿಂದ ಟ್ವಿಸ್ಟ್ – ಅರ್ಚಕರ ಕೈ ಕತ್ತರಿಸಿ ಕಾವೇರಿಗೆ ವಿಗ್ರಹ ಎಸೆಯಲಾಗಿತ್ತು! 

    ಏಪ್ರಿಲ್‍ನಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ನವದೆಹಲಿಯಲ್ಲಿ ನಡೆದ ಸಂಸದೀಯ ಅಧಿಕೃತ ಭಾಷಾ ಸಮಿತಿಯ 37ನೇ ಸಭೆಯಲ್ಲಿ, ಹಿಂದಿಯನ್ನು ಇಂಗ್ಲಿಷ್‍ಗೆ ಪರ್ಯಾಯವಾಗಿ ಸ್ವೀಕರಿಸಬೇಕು. ಸ್ಥಳೀಯ ಭಾಷೆಯಾಗಿ ಅಲ್ಲ ಎಂದು ಹೇಳಿದ್ದರು.

  • ಹಿಂದಿಯಲ್ಲಿ ಮಾತನಾಡಿದ ಜಪಾನ್ ಬಾಲಕನನ್ನು ನೋಡಿ ಮೋದಿ ರಿಯಾಕ್ಷನ್ ಹೇಗಿತ್ತು?

    ಹಿಂದಿಯಲ್ಲಿ ಮಾತನಾಡಿದ ಜಪಾನ್ ಬಾಲಕನನ್ನು ನೋಡಿ ಮೋದಿ ರಿಯಾಕ್ಷನ್ ಹೇಗಿತ್ತು?

    ಟೋಕಿಯೊ: ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಎರಡು ದಿನಗಳ ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ಟೋಕಿಯೊದ ಹೋಟೆಲ್‍ನಲ್ಲಿ ಭಾರತೀಯ ವಲಸಿಗರು ಮತ್ತು ಜಪಾನ್ ನಾಗರಿಕರು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದರು. ಈ ವೇಳೆ ಅವರ ಜೊತೆಗಿನ ಸಂವಾದದಲ್ಲಿ ಜಪಾನಿನ ಮಕ್ಕಳೊಂದಿಗೆ ಅವರ ಸಂಭಾಷಣೆ ಎಲ್ಲರ ಗಮನ ಸೆಳೆಯಿತು.

    ಅಲ್ಲಿನ ಮಕ್ಕಳೊಂದಿಗಿನ ಮೋದಿಯವರ ಸಂವಾದದ ವೀಡಿಯೋಗಳು ಟ್ವಿಟ್ಟರ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಜಪಾನಿನ ಬಾಲಕನೊಬ್ಬ ಪ್ರಧಾನಿಯವರೊಂದಿಗೆ ಹಿಂದಿಯಲ್ಲಿ ಮಾತನಾಡಿದನು. ಇದನ್ನು ಕೇಳಿ ಅವರು ಆಶ್ಚರ್ಯಚಕಿತರಾಗಿದ್ದು, ಹುಡುಗನಿಗೆ ವಾಹ್! ನೀವು ಹಿಂದಿಯನ್ನು ಎಲ್ಲಿಂದ ಕಲಿತಿದ್ದೀರಿ.? ನೀವು ಅದನ್ನು ಚೆನ್ನಾಗಿ ಮಾತನಾಡುತ್ತೀರಿ ಎಂದು ಬಾಲಕನ ಜೊತೆ ಅಕ್ಕರೆಯಿಂದ ಮಾತನಾಡ ತೊಡಗಿದರು. ಇದನ್ನೂ ಓದಿ: ರಾಜ್ಯದಲ್ಲಿ ಶಾಂತನಾದ ವರುಣ, ತಗ್ಗಿದ ಪ್ರವಾಹ – ಚಿಕ್ಕಬಳ್ಳಾಪುರದ ಡ್ಯಾಮ್‍ನಲ್ಲಿ ಯುವಕನ ಕೋತಿಯಾಟ

    ಪ್ರಧಾನಿಯವರೊಂದಿಗೆ ಸಂವಾದ ನಡೆಸಿದ ಮಕ್ಕಳು ಅವರ ಆಟೋಗ್ರಾಫ್ ಸ್ವೀಕರಿಸಲು ಉತ್ಸುಕರಾಗಿದ್ದರು. ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ಭಾರತೀಯ ವಲಸಿಗರು ಭಾರತ್ ಮಾ ಕಾ ಶೇರ್ (ಭಾರತದ ಸಿಂಹ) ಎಂದು ಘೋಷಣೆ ಕೂಗಲಾರಂಭಿಸಿದರು. ಇದನ್ನೂ ಓದಿ: ಮದರಸಾದಲ್ಲಿ ಓದಿದ ಬಳಿಕ ಡಾಕ್ಟರ್, ಇಂಜಿನಿಯರ್ ಆಗಲು ಸಾಧ್ಯವಿಲ್ಲ: ಹಿಮಂತ್ ಬಿಸ್ವಾ ಶರ್ಮಾ

    ಜಪಾನ್ ಅಧ್ಯಕ್ಷ ಫ್ಯೂಮಿಯೋ ಕಿಶಿಡಾ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನ ಜಪಾಸ್ ಪ್ರವಾಸ ಕೈಗೊಂಡಿದ್ದು, ಅವರು ಅಲ್ಲಿ ಕ್ವಾಡ್ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ. ಭಾನುವಾರ ರಾತ್ರಿ ಭಾರತದಿಂದ ತೆರಳಿರುವ ಪ್ರಧಾನಿ ನಾಳೆ ಸಂಜೆವರೆಗೂ ಜಪಾನ್‍ನಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕ್ವಾಡ್ ಶೃಂಗ ಸಭೆಯಲ್ಲಿ ಎರಡು ದೇಶಗಳ ಉಪಕ್ರಮಗಳ ಬಗ್ಗೆ ಚರ್ಚೆಯಾಗಲಿದ್ದು, ಆಸಕ್ತಿಯ ವಿಷಯಗಳ ಬಗ್ಗೆ ಚರ್ಚಿಸಲು ಅವಕಾಶ ಇದೆ ಎಂದು ಪ್ರವಾಸಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

    ಇದೇ ವೇಳೆ ಅಮೇರಿಕ ಅಧ್ಯಕ್ಷ ಜೋ ಬೈಡನ್ ಜೊತೆಗೂ ಮೋದಿ ಸಭೆ ನಡೆಸಲಿದ್ದು, ಭಾರತದ ಅಮೇರಿಕದ ನಡುವೆ ದ್ವಿ ಪಕ್ಷೀಯ ಮಾತುಕತೆ ನಡೆಯಲಿದೆ. ಈ ಮಾತುಕತೆಯಲ್ಲಿ ಸಮಕಾಲಿಮ ಜಾಗತಿಕ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಯಲಿದೆ.

  • ಪ್ರಾದೇಶಿಕ ಭಾಷಾ ಮಹತ್ವ ಪ್ರಧಾನಿ ಮೋದಿ ಮಾತಿಗೆ ಸಂತಸ ವ್ಯಕ್ತ ಪಡಿಸಿದ ಕಿಚ್ಚ ಸುದೀಪ್

    ಪ್ರಾದೇಶಿಕ ಭಾಷಾ ಮಹತ್ವ ಪ್ರಧಾನಿ ಮೋದಿ ಮಾತಿಗೆ ಸಂತಸ ವ್ಯಕ್ತ ಪಡಿಸಿದ ಕಿಚ್ಚ ಸುದೀಪ್

    ರಾಷ್ಟ್ರ ಭಾಷೆ ವಿಚಾರವಾಗಿ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ ನಡುವೆ ಟ್ವಿಟರ್ ನಲ್ಲಿ ಯುದ್ಧವೇ ನಡೆಯಿತು. ಕೆಲವೇ ಗಂಟೆಗಳಲ್ಲಿ ನಡೆದ ಪ್ರಶ್ನೋತ್ತರ ರಾಷ್ಟ್ರದಾದ್ಯಂತ ಸಂಚಲನವುಂಟು ಮಾಡಿತ್ತು. ಅಜಯ್ ಮತ್ತು ಸುದೀಪ್ ಅವರು ತಮ್ಮ ತಮ್ಮ ಸಮರ್ಥನೆಗಳನ್ನು ಕೊಟ್ಟುಕೊಂಡು ಸುಮ್ಮನಾದರೂ, ಕೆಲವರು ಮಾತ್ರ ಈ ಕುರಿತು ಪರ ವಿರೋಧದ ಹೇಳಿಕೆಗಳನ್ನು ನೀಡುತ್ತಲೇ ಬಂದರು. ಈ ವಿಷಯ ತಣ್ಣಗಾಯಿತು ಎನ್ನುವಷ್ಟರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಈ ವಿಷಯದ ಬಗ್ಗೆ ಮಾತನಾಡಿ, ಮತ್ತೊಂದು ಸುತ್ತಿನ ಚರ್ಚೆಗೆ ನಾಂದಿ ಹಾಡಿದ್ದಾರೆ. ಇದನ್ನೂ ಓದಿ : ನಾಲ್ಕೈದು ವರ್ಷ ಪ್ರಶಾಂತ್ ನೀಲ್ ತೆಲುಗಿನಲ್ಲೇ ಲಾಕ್ : ಮತ್ತೆ ರಕ್ತದ ಹಿಂದೆ ಬಿದ್ದ ಕೆಜಿಎಫ್ ಡೈರೆಕ್ಟರ್

    ಜೈಪುರದಲ್ಲಿ ನಡೆಯುತ್ತಿರುವ ಬಿಜೆಪಿಯ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಪ್ರಾದೇಶಿಕ ಭಾಷೆಗಳ ಕುರಿತಾಗಿ ನಡೆಯುತ್ತಿರುವ ವಿವಾದಗಳನ್ನು ಗಮನಿಸುತ್ತಿದ್ದೇನೆ. ಭಾಷೆಗಳ ಆಧಾರದ ಮೇಲೆ ವಿವಾದಗಳು ಆಗಬಾರದು. ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ನಾವು ಸಂಸ್ಕೃತಿಯನ್ನು ಕಾಣುತ್ತಿದ್ದೇವೆ. ಅವೆಲ್ಲವೂ ಪೂಜ್ಯನೀಯ ಭಾಷೆಗಳು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರತಿ ಭಾಷೆಗೂ ಪ್ರಾಮುಖ್ಯತೆ ನೀಡಲಾಗಿದೆ’ ಎಂದು ಭಾಷಣ ಮಾಡಿದ್ದಾರೆ. ಈ ಕುರಿತು ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಬಾಡಿ ಶೇಮಿಂಗ್ ವಿರುದ್ಧ ನಟಿ ಮಯೂರಿ ಮಾತು

    ಮಾಧ್ಯಮಗಳ ಜೊತೆ ಮಾತನಾಡಿರುವ ಕಿಚ್ಚು ಸುದೀಪ್, ‘ನಾನು ರಾಷ್ಟ್ರ ಭಾಷೆಯ ಬಗ್ಗೆ ಮಾತನಾಡಿದಾಗ ಸುಖಾಸುಮ್ಮನೆ ವಿವಾದ ಮಾಡಲಾಯಿತು. ನಾನು ಅಂದಿದ್ದೇ ಬೇರೆ, ಅವರು ಅರ್ಥೈಸಿಕೊಂಡಿದ್ದೇ ಬೇರೆ. ಆಗ ನಾನು ಏನು ಮಾತನಾಡಿದ್ದೆನೋ, ಅದನ್ನೇ ಈಗ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದಾರೆ. ಆ ಮಾತಿಗೆ ಅವರಿಗೆ ಕೃತಜ್ಞತೆಗಳು’ ಎಂದಿದ್ದಾರೆ. ಇದನ್ನೂ ಓದಿ: 625ಕ್ಕೆ 619 ಅಂಕಗಳನ್ನು ಗಳಿಸಿದ `ಗಟ್ಟಿಮೇಳ’ ಖ್ಯಾತಿಯ ಮಹತಿ ಭಟ್

    ಪ್ರಾದೇಶಿಕ ಭಾಷಾ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದು, ಬಿಟೌನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಹಿಂದಿ ಭಾಷೆಯನ್ನು ಸಮರ್ಥಿಸಿಕೊಂಡು ಮಾತನಾಡಿದ ಅನೇಕ ಸ್ಟಾರ್ ನಟರು ಪ್ರಧಾನಿ ಮಾತಿನಿಂದಾಗಿ ಮೌನಕ್ಕೆ ಜಾರಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಬಾಲಿವುಡ್ ನಟರ ಅಜ್ಞಾನಕ್ಕೆ ಪ್ರಧಾನಿ ಸರಿಯಾಗಿಯೇ ಉತ್ತರಿಸಿದ್ದಾರೆ ಎಂದು ಟ್ರೋಲ್ ಕೂಡ ಮಾಡಲಾಗುತ್ತಿದೆ.

  • ಒಂದೇ ಬೋರ್ಡ್‍ನಲ್ಲಿ ಶಿಕ್ಷಕರಿಂದ ಹಿಂದಿ, ಉರ್ದು ಬೋಧನೆ – ವೀಡಿಯೋ ವೈರಲ್

    ಒಂದೇ ಬೋರ್ಡ್‍ನಲ್ಲಿ ಶಿಕ್ಷಕರಿಂದ ಹಿಂದಿ, ಉರ್ದು ಬೋಧನೆ – ವೀಡಿಯೋ ವೈರಲ್

    ಪಾಟ್ನಾ: ಬಿಹಾರದ ಶಾಲೆಯೊಂದರಲ್ಲಿ ಇಬ್ಬರು ಶಿಕ್ಷಕರು ಒಂದೇ ತರಗತಿಯ ಕೊಠಡಿಯಲ್ಲಿ ಏಕಕಾಲದಲ್ಲಿ ಮಕ್ಕಳಿಗೆ ಬೋರ್ಡ್ ಮೇಲೆ ಹಿಂದೂ ಹಾಗೂ ಉರ್ದು ಕಲಿಸುತ್ತಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ತರಗತಿಯಲ್ಲಿ ಕೆಲವು ಮಕ್ಕಳು ಮಾತ್ರ ಪಾಠ ಕೇಳುತ್ತಿದ್ದರೆ. ಮತ್ತೆ ಕೆಲವು ಮಕ್ಕಳು ಗಲಾಟೆ ಮಾಡುತ್ತಿದ್ದು, ಬೋರ್ಡ್ ಎದುರು ಹಿರಿಯ ಶಿಕ್ಷಕಿಯೊಬ್ಬರು ಕುಳಿತುಕೊಂಡು ಮಕ್ಕಳನ್ನು ಗಲಾಟೆ ಮಾಡದಂತೆ ನೋಡಿಕೊಳ್ಳುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ 5 ದಿನ ಭಾರೀ ಮಳೆ ಸಾಧ್ಯತೆ – ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್

    ಈ ಕುರಿತಂತೆ ಪ್ರತಿಕ್ರಿಯಿಸಿದ ಹಿಂದಿ ಶಿಕ್ಷಕಿ ಪ್ರಿಯಾಂಕಾ ಅವರು, 2017ರಲ್ಲಿ ಶಿಕ್ಷಣ ಇಲಾಖೆಯು ಉರ್ದು ಪ್ರಾಥಮಿಕ ಶಾಲೆಯನ್ನು ನಮ್ಮ ಶಾಲೆಗೆ ಸ್ಥಳಾಂತರಿಸಿದೆ. ನಮ್ಮ ಶಾಲೆಯಲ್ಲಿ ಸಾಕಷ್ಟು ಕೊಠಡಿಗಳಿಲ್ಲದ ಕಾರಣ, ಒಂದೇ ಬೋರ್ಡ್‍ನನ್ನು ಎರಡು ಭಾಗ ಮಾಡಿಕೊಂಡು ಹಿಂದಿ ಹಾಗೂ ಉರ್ದು ಶಿಕ್ಷಕರು ಏಕಕಾಲದಲ್ಲಿ ಮಕ್ಕಳಿಗೆ ಪಾಠ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಾಗಲಕೋಟೆ ಕೇಸ್‍ಗೆ ಟ್ವಿಸ್ಟ್ – ಮೊದಲು ಸಂಗೀತಾ ಹಲ್ಲೆ ಮಾಡಿದ್ದ ವೀಡಿಯೋ ವೈರಲ್

    ಬಿಹಾರದ ಕತಿಹಾರ್‍ನಲ್ಲಿರುವ ಆದರ್ಶ್ ಮಿಡಲ್ ಸ್ಕೂಲ್ ಪರಿಸ್ಥಿಯ ಬಗ್ಗೆ ಮಾತನಾಡಿದ ಜಿಲ್ಲಾ ಶಿಕ್ಷಣಾಧಿಕಾರಿ ಕಾಮೇಶ್ವರ ಗುಪ್ತಾ ಅವರು, ಆದರ್ಶ ಮಿಡಲ್ ಸ್ಕೂಲ್‍ನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾದರೆ ಉರ್ದು ಪ್ರಾಥಮಿಕ ಶಾಲೆಗೆ ಒಂದು ಕೊಠಡಿ ನೀಡಲಾಗುವುದು. ಎಲ್ಲ ಮಕ್ಕಳಿಗೂ ಒಂದೇ ಕೊಠಡಿಯಲ್ಲಿ ಒಂದೇ ಬೋರ್ಡ್‍ನಲ್ಲಿ ಪಾಠ ಮಾಡುವುದು ಒಳ್ಳೆಯದಲ್ಲಿ ಎಂದಿದ್ದಾರೆ.