ಬಾಲಿವುಡ್ ನಲ್ಲಿ ಕಾಂತಾರ (Kantara) ಹವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಾಕ್ಸ್ ಆಫೀಸಿನಲ್ಲೂ ಕೂಡ ಅದು ಹಿಂದೆ ಬಿದ್ದಿಲ್ಲ. ಈವರೆಗೂ ಚಿತ್ರದಿಂದ ಅಂದಾಜು 50 ಕೋಟಿ ಬಂದಿದೆ ಎಂದು ಹೇಳಲಾಗುತ್ತಿದೆ. ಸಿನಿ ಪಂಡಿತರ ಲೆಕ್ಕಾಚಾರದಲ್ಲೂ 45 ರಿಂದ 50 ಕೋಟಿ ಬಂದಿರಬಹುದು ಎನ್ನಲಾಗುತ್ತಿದೆ. ಆದರೆ, ನಿರ್ಮಾಪಕರಾಗಲಿ ಅಥವಾ ವಿತರಕರಾಗಲಿ ಈ ಕುರಿತು ಅಧಿಕೃತ ಹೇಳಿಕೆ ನೀಡಿಲ್ಲ.

ಕನ್ನಡದಲ್ಲೂ ಅಂದಾಜು ನೂರೈವತ್ತು ಕೋಟಿಗೂ ಅಧಿಕ ಹಣ ಮಾಡಿದರೆ, ಇತರ ಭಾಷೆಗಳಲ್ಲೂ ನೂರಾರು ಕೋಟಿ ಬಾಚಿದೆ. ಪ್ರತಿ ಭಾಷೆಯಲ್ಲೂ ಕನ್ನಡದ ಸಿನಿಮಾವನ್ನು ಕೊಂಡಾಡುತ್ತಿದ್ದಾರೆ. ಬಾಕ್ಸ್ ಆಫೀಸ್ ಕೂಡ ಧೂಳಿಪಟವಾಗಿದೆ. ಈ ಹೊತ್ತಿನಲ್ಲಿ ರಿಷಬ್ ಶೆಟ್ಟಿ (Rishabh Shetty) ವಿಮಾನದಲ್ಲಿ ಓಡಾಡುತ್ತಿರುವ ಫೋಟೋವನ್ನು ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡಿದೆ. ಇದನ್ನೂ ಓದಿ:ಖಾಸಗಿ ವಿಮಾನ ಖರೀದಿಸಿದ್ರಾ ರಿಷಬ್ ಶೆಟ್ಟಿ? ‘ಬಡವ್ರ ಮಕ್ಕಳು ಬೆಳಿಬೇಕು’ ಟ್ರೋಲ್

ಇತ್ತೀಚೆಗಷ್ಟೇ ರಿಷಬ್ ಆಡಿ ಕಾರು ತಗೆದುಕೊಂಡಿದ್ದರು. ಆ ಫೋಟೋ ಕೂಡ ಸಖತ್ ವೈರಲ್ ಆಗಿತ್ತು. ಇದೀಗ ರಿಷಬ್ ಅವರು ವಿಮಾನದಲ್ಲಿ ಅದರಲ್ಲೂ ಖಾಸಗಿ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ. ‘ಬಡವ್ರ ಮಕ್ಕಳು ಬೆಳಿಬೇಕು’ ಹೆಸರಿನಲ್ಲಿ ಟ್ರೋಲ್ ಕೂಡ ಮಾಡಲಾಗುತ್ತಿದೆ. ಸಾಕಷ್ಟು ಜನರು ಈ ಫೋಟೋವನ್ನು ಹಂಚಿಕೊಂಡಿದ್ದಾರೆ.

ಬಡವರ ಮಕ್ಕಳು ಬೆಳಿಬೇಕು ಎನ್ನುವ ಮಾತು ಡಾಲಿ ಧನಂಜಯ್ ಅವರದ್ದು. ಆ ಮಾತನ್ನು ರಿಷಬ್ ಶೆಟ್ಟಿಗೆ ಬಳಸಿಕೊಂಡು ಡಾಲಿಗೆ ಟಾಂಗ್ ಕೊಡಲಾಗುತ್ತಿದೆ. ವಿಮಾನದಲ್ಲಿ ಪ್ರಯಾಣದ ಮಾಡುತ್ತಿರುವ ರಿಷಬ್ ಶೆಟ್ಟಿ ಫೋಟೋಗೆ ಡಾಲಿ ಹೊಡೆದ ಡೈಲಾಗ್ ಅನ್ನು ಸೇರಿಸಿ ಟ್ರೋಲ್ ಮಾಡಲಾಗುತ್ತಿದೆ.

ಕಾಂತಾರ ಸಿನಿಮಾ ಮಾಡುತ್ತಿರುವ ಮೋಡಿ ಅಷ್ಟಿಷ್ಟಲ್ಲ. ರಿಷಬ್ ಶೆಟ್ಟಿ ಭಾರತದಾದ್ಯಂತ ಸುತ್ತುವಂತಾಗಿದೆ. ಎಲ್ಲ ಕಡೆ ಪ್ರಯಾಣ ಮಾಡಲು ಅವರಲ್ಲಿ ವೇಳೆಯಿಲ್ಲ. ಹಾಗಾಗಿ ಹೊಂಬಾಳೆ ಫಿಲ್ಮ್ಸ್ (Hombale Films) ನವರು ಬಾಡಿಗೆ ಖಾಸಗಿ ವಿಮಾನ ಬುಕ್ ಮಾಡಿ, ರಿಷಬ್ ಪ್ರಯಾಣಕ್ಕೆ ಅನುಕೂಲ ಕಲ್ಪಿಸಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಯಶ್ ಅವರಿಗೂ ಹಾಗೆಯೇ ಮಾಡಿತ್ತು ಹೊಂಬಾಳೆ ಫಿಲ್ಮ್ಸ್. ಹಾಗಾಗಿ ಇದು ರಿಷಬ್ ಖರೀದಿಸಿದ ವಿಮಾನವಲ್ಲ ಎನ್ನುವುದು ಸ್ಪಷ್ಟನೆ ವಿಚಾರ.





















