Tag: hindi

  • ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಮಾಜಿ ‘ನೀಲಿ’ತಾರೆ ಮಿಯಾ ಖಲೀಫಾ

    ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಮಾಜಿ ‘ನೀಲಿ’ತಾರೆ ಮಿಯಾ ಖಲೀಫಾ

    ನೀಲಿ ಸಿನಿಮಾಗಳ ಮಾಜಿ ತಾರೆ ಮಿಯಾ ಖಲೀಫಾ (Mia Khalifa) ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಲ್ಮಾನ್ ಖಾನ್ ನಡೆಸಿಕೊಡಲಿರುವ ಬಿಗ್ ಬಾಸ್ ಓಟಿಟಿ ಸೀಸನ್ 2ರಲ್ಲಿ (Bigg Boss OTT 2) ಮಿಯಾ ಭಾಗಿಯಾಗಲಿದ್ದಾರೆ ಎಂದು ಬಿ ಟೌನ್ ಮಾತಾಡಿಕೊಳ್ಳುತ್ತಿದೆ. ಬಿಗ್ ಬಾಸ್ ಮನೆ ಪ್ರವೇಶ ಮಾಡಲು ಕ್ಷಣಗಣನೆ ಶುರುವಾಗಿದ್ದು, ಮಿಯಾ ಪ್ರವೇಶಿಸಿದರೆ ಮನೆಯ ವಾತಾವರಣ ಹೇಗೆಲ್ಲ ಇರಲಿದೆ ಎನ್ನುವ ಕುರಿತು ಕುತೂಹಲ ಮೂಡಿದೆ.

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Hindi)) ಕಾರ್ಯಕ್ರಮಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಮೊದಲ ಬಿಗ್ ಬಾಸ್ ಒಟಿಟಿ ಯಶಸ್ವಿಯಾಗಿತ್ತು. ಈಗ 2ನೇ ಸೀಸನ್ ಬಿಗ್ ಬಾಸ್ ಒಟಿಟಿ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ:‘ದೇವರ ಆಟ ಬಲ್ಲವರಾರು’ ಎನ್ನುತ್ತಾ 3 ವರ್ಷಗಳ ನಂತರ ಬಣ್ಣ ಹಚ್ಚಿದ ಸಿಂಧೂ ಲೋಕನಾಥ

    ಸಲ್ಮಾನ್ ಖಾನ್ (Salman Khan) ನಿರೂಪಣೆಯ ಬಿಗ್ ಬಾಸ್ ಒಟಿಟಿ ಕಾರ್ಯಕ್ರಮದ ಫಸ್ಟ್ ಪ್ರೋಮೋ ರಿವೀಲ್ ಆಗಿದೆ. ಸಲ್ಲು ಭಾಯ್ ಎಂಟ್ರಿಗೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ. ಇಂದಿನಿಂದ ಒಟಿಟಿ ಬಿಗ್ ಬಾಸ್ ಶುರುವಾಗಲಿದೆ. ಜಿಯೋ ಸಿನಿಮಾ ವೇದಿಕೆಯಲ್ಲಿ ಲೈವ್ ಸ್ಟ್ರೀಮ್ ಆಗಲಿದೆ.

    ಮೊದಲ ಸೀಸನ್ ಬಿಗ್ ಬಾಸ್ ಒಟಿಟಿಯನ್ನ ಕರಣ್ ಜೋಹರ್ ನಿರೂಪಣೆ ಮಾಡಿದ್ದರು. ಆದರೆ 2ನೇ ಸೀಸನ್‌ನ ಸಲ್ಮಾನ್ ಖಾನ್ ನಿರೂಪಣೆ ಮಾಡುವ ಬಗ್ಗೆ ಅಧಿಕೃತ ಅಪ್‌ಡೇಟ್ ಹೊರಬಿದ್ದಿದೆ. ಜೊತೆಗೆ ಸಲ್ಮಾನ್ ಈ ಸೀಸನ್ ಹೇಗಿರಲಿದೆ ಎನ್ನುವ ಕುರಿತು ಮಾತನಾಡಿದ್ದಾರೆ.

     

    ಕಳೆದ ಸೀಸನ್‌ನಲ್ಲಿ ದಿವ್ಯಾ ಅಗರ್‌ವಾಲ್ ವಿನ್ನರ್ ಆಗಿದ್ದರು. ಉರ್ಫಿ ಜಾವೇದ್, ನಿಶಾಂತ್ ಭಟ್, ಶಮಿತಾ, ಪ್ರತೀಕ್, ನೇಹಾ ಸೇರಿದಂತೆ ಹಲವು ಸ್ಪರ್ಧಿಗಳು ಭಾಗವಹಿಸಿದ್ದರು. ಬಿಗ್ ಬಾಸ್ 2ನೇ ಸೀಸನ್‌ನಲ್ಲಿ ಯಾರೆಲ್ಲಾ ಇರುತ್ತಾರೆ ಎಂಬುದಕ್ಕೆ ಕಾದುನೋಡಬೇಕಿದೆ.

  • ಹೃದಯಾಘಾತದಿಂದ ಫೇಮಸ್ ನಟ ನಿತೇಶ್ ಪಾಂಡೆ ನಿಧನ

    ಹೃದಯಾಘಾತದಿಂದ ಫೇಮಸ್ ನಟ ನಿತೇಶ್ ಪಾಂಡೆ ನಿಧನ

    ರಡು ದಿನಗಳ ಹಿಂದೆಯಷ್ಟೇ ಹಿಂದಿ (Hindi) ಕಿರುತೆರೆಯು ನಟ, ಮಾಡೆಲ್ ಆದಿತ್ಯ ಸಿಂಗ್ ರಜಪೂತ್ ರನ್ನು ಕಳೆದುಕೊಂಡಿದೆ. ಅಗಲಿಕೆಯ ನೋವು ಇನ್ನೂ ಆರದ ಮುನ್ನವೇ ಮತ್ತೋರ್ವ ನಟನನ್ನು ಹಿಂದಿ ಕಿರುತೆರೆ ಕಳೆದುಕೊಂಡಿದೆ. ಹಲವಾರು ಧಾರಾವಾಹಿಗಳ ಮೂಲಕ ಫೇಮಸ್ ಆಗಿದ್ದ ನಿತೇಶ್ ಪಾಂಡೆ (Nitesh Pandey) ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ (Death). ಕಿರುತೆರೆ ಮಾತ್ರವಲ್ಲ, ಹಿರಿತೆರೆಯಲ್ಲೂ ನಿತೇಶ್ ಕೆಲಸ ಮಾಡಿದ್ದರು.

    ಪ್ಯಾರ್ ಕ ದರ್ದ್ ಹೈ ಮೀಟಾ ಮೀಟಾ ಪ್ಯಾರಾ ಪ್ಯಾರಾ ಧಾರಾವಾಹಿಯ ಮೂಲಕ ಫೇಮಸ್ ಆಗಿದ್ದ ನೀತೇಶ್ ಸದ್ಯ ಅನುಪಮಾ ಹೆಸರಿನ ಹಿಂದಿ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಈ ಧಾರಾವಾಹಿಯಲ್ಲಿ ಅವರು ಧೀರಜ್ ಕಪೂರ್ ಹೆಸರಿನ ಪಾತ್ರವನ್ನು ನಿರ್ವಹಿಸುತ್ತಿದ್ದರು. 1995ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು, ಅಲ್ಲಿಂದ ಈವರೆಗೂ ಸತತ ಒಂದಿಲ್ಲೊಂದು ಧಾರಾವಾಹಿಯಲ್ಲಿ ನಟಿಸುತ್ತಲೇ ಬಂದಿದ್ದಾರೆ. ಇದನ್ನೂ ಓದಿ:‘ರಾನಿ’ ಸಿನಿಮಾ ಸೆಟ್ ನಲ್ಲಿ ನಿರ್ದೇಶಕರ ಹುಟ್ಟುಹಬ್ಬ

    51ರ ವಯಸ್ಸಿನ ನಿತೇಶ್ ಗೆ ಪತ್ನಿ, ಒಬ್ಬರು ಸಹೋದರಿ ಹಾಗೂ ತಂದೆ ತಾಯಿಯನ್ನು ಅಗಲಿದ್ದಾರೆ. ಮೃತದೇಹವನ್ನು ತರಲು ನಿರ್ಮಾಪಕ ಹಾಗೂ ನಿತೇಶ್ ಭಾವ ಸಿದ್ಧಾರ್ಥ್ ನಗರ್ ಆಸ್ಪತ್ರೆಗೆ ತೆರಳಿದ್ದಾರೆ. ಎರಡು ದಿನಗಳ ಹಿಂದೆ ಆದಿತ್ಯ ಸಿಂಗ್ ರಜಪೂತ್, ನಿನ್ನೆಯಷ್ಟೇ ರಸ್ತೆ ಅಪಘಾತದಲ್ಲಿ ವೈಭವಿ ಉಪಾಧ್ಯಾಯ, ಇಂದು ನಿತೇಶ್ ಕಿರುತೆರೆಯನ್ನು (Television) ಅಗಲಿದ್ದಾರೆ.

  • ಹಿಂದಿ ಹೇರಿಕೆಯ ವಿರುದ್ಧ ರಮ್ಯಾ ಕಿಡಿಕಿಡಿ : ಬಾಲಿವುಡ್ ಬಗೆಗೂ ಪಾಠ

    ಹಿಂದಿ ಹೇರಿಕೆಯ ವಿರುದ್ಧ ರಮ್ಯಾ ಕಿಡಿಕಿಡಿ : ಬಾಲಿವುಡ್ ಬಗೆಗೂ ಪಾಠ

    ‘ನಾಟು ನಾಟು’ (Natu Natu) ಹಾಡಿಗೆ ಆಸ್ಕರ್ (Oscar) ಬರುತ್ತಿದ್ದಂತೆಯೇ ಮತ್ತೆ ಬಾಲಿವುಡ್ (Bollywood) ಮೇಲೆ ಹಲವರು ಮುಗಿ ಬಿದ್ದಿದ್ದಾರೆ. ಪ್ರಕಾಶ್ ರೈ (Prakash Rai) ಸೇರಿದಂತೆ ಕೆಲ ನಟರು ಆಸ್ಕರ್ ‍ಪ್ರಶಸ್ತಿಯನ್ನಿಟ್ಟುಕೊಂಡು ಬೇರೆ ಬೇರೆ ರೀತಿಯಲ್ಲಿ ಟಾಂಗ್ ನೀಡುತ್ತಿದ್ದಾರೆ. ಆರ್.ಆರ್.ಆರ್ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದವರ ವಿರುದ್ಧ ವಾಗ್ದಾಳಿ ಮಾಡಿರುವ ಅವರು, ಆಸ್ಕರ್ ಪ್ರಶಸ್ತಿ ಬಂದಿದ್ದಕ್ಕೆ ಈಗ ಏನ್ ಹೇಳ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ.

    ನಟಿ ರಮ್ಯಾ (Ramya) ಕೂಡ ಹಿಂದಿ ಹೇರಿಕೆ ಹಾಗೂ ಬಾಲಿವುಡ್ ಬಗ್ಗೆ ವಿಭಿನ್ನವಾದ ರೀತಿಯಲ್ಲೇ ಟ್ವೀಟ್ ಮಾಡಿದ್ದು, ಹಿಂದಿ (Hindi) ಮಾತಾಡಲ್ಲ ಎಂದು ವೈರಲ್ ಆಗಿದ್ದ ಆಟೋಡ್ರೈವರ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಭಾರತ ಹಲವು ಭಾಷೆಗಳನ್ನು, ನಾನಾ ರೀತಿಯ ಸಂಸ್ಕೃತಿಯನ್ನು ಹೊಂದಿರುವ ದೇಶ. ಯಾರೂ ಯಾರ ಮೇಲೆ ಹೇರಿಕೆ ಸಲ್ಲ. ಭಾರತ ಅಂದರೆ ಬಾಲಿವುಡ್ ಅಲ್ಲ, ಭಾರತ ಅಂದರೆ ಹಿಂದಿಯಲ್ಲ’ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ:  ಕ್ರಿಕೆಟರ್ ಶುಭಮನ್ ಗಿಲ್ ಬಗ್ಗೆ ಕೇಳಿದ್ದಕ್ಕೆ ನಾಚಿ ನೀರಾದ ರಶ್ಮಿಕಾ ಮಂದಣ್ಣ

    ಭಾಷಾ ವಿಚಾರವಾಗಿ ನಟಿ ರಮ್ಯಾ ಆಗಾಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಲೇ ಇರುತ್ತಾರೆ. ಅದರಲ್ಲೂ ದಕ್ಷಿಣ ಸಿನಿಮಾಗಳ ಬಗ್ಗೆಯೂ ಮೆಚ್ಚುಗೆ ನುಡಿಗಳನ್ನು ಆಡಿದ್ದಾರೆ. ನಾಟು ನಾಟು ತೆಲುಗಿನ ಸಿನಿಮಾ. ಆಸ್ಕರ್ ವೇದಿಕೆಯ ಮೇಲೆ ತೆಲುಗು ಗೀತೆಯನ್ನೇ ಹಾಡಿದ್ದು ಎಂದು ಬರೆಯುವ ಮೂಲಕ ಹಿಂದಿ ಹೇರಿಕೆಯನ್ನು ಬೇರೆ ಬೇರೆ ರೀತಿಯಲ್ಲಿ ವಿರೋಧಿಸಿದ್ದಾರೆ. ರಮ್ಯಾ ಟ್ವೀಟ್ ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.

  • ಸಿಲಿಂಡರ್ ಸ್ಫೋಟ: ಧಾರಾವಾಹಿ ಶೂಟಿಂಗ್ ಸೆಟ್ ಸಂಪೂರ್ಣ ಭಸ್ಮ

    ಸಿಲಿಂಡರ್ ಸ್ಫೋಟ: ಧಾರಾವಾಹಿ ಶೂಟಿಂಗ್ ಸೆಟ್ ಸಂಪೂರ್ಣ ಭಸ್ಮ

    ಹಿಂದಿಯ ಪ್ರಸಿದ್ಧ ಧಾರಾವಾಹಿ (Serial) ಸೆಟ್ (Set) ನಲ್ಲಿ ಭೀಕರ ಅಗ್ನಿದುರಂತ ಸಂಭವಿಸಿದ್ದು, ಇಡೀ ಸೆಟ್ ಬೆಂಕಿ ಆಹುತಿಯಾಗಿದೆ. ಹಿಂದಿಯ ಗಮ್ ಹೈ ಕಿಸೀಕೆ ಪ್ಯಾರ್ ಮೈ ಧಾರಾವಾಹಿಯ ಚಿತ್ರೀಕರಣ ಮುಂಬೈನ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿತ್ತು. ಈ ಧಾರಾವಾಹಿಗಾಗಿ ದೊಡ್ಡಮಟ್ಟದಲ್ಲಿ ಸೆಟ್ ಹಾಕಲಾಗಿತ್ತು. ಮಾರ್ಚ್ 10ರಂದು ಸೆಟ್ ನಲ್ಲಿದ್ದ ಸಿಲಿಂಡರ್ (Cylinder Blast) ಸ್ಫೋಟವಾಗಿದೆ. ಸುಮಾರು ನಾಲ್ಕು ಗಂಟೆ ಹೊತ್ತಿಗೆ ನಡೆದ ಘಟನೆಯಲ್ಲಿ ಪೂರ್ತಿ ಸೆಟ್ ಬೆಂಕಿಯಲ್ಲಿ ಭಸ್ಮವಾಗಿದೆ.

    ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಕಿ ನಂದಿಸುವಂತಹ ಯಾವುದೇ ಉಪಕರಣಗಳು ಸೆಟ್ ನಲ್ಲಿ ಇಲ್ಲದ ಕಾರಣದಿಂದಾಗಿ ವೇಗವಾಗಿ ಬೆಂಕಿ ಆವರಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಹಾಗಾಗಿ ಫಿಲ್ಮ್ ಸಿಟಿ ನಿರ್ದೇಶಕರ ವಿರುದ್ಧವೂ ಪ್ರಕರಣ ದಾಖಲಾಗಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದ ಉಪೇಂದ್ರ

    ಈ ಘಟನೆ ನಡೆದ ಸಂದರ್ಭದಲ್ಲಿ ಮಕ್ಕಳ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಬೆಂಕಿ ಬಿದ್ದ ವಿಷಯ ತಿಳಿಯುತ್ತಿದ್ದಂತೆಯೇ ಕೂಡಲೇ ಮಕ್ಕಳನ್ನು ಅಲಿಂದ ಬಚಾವ್ ಮಾಡಲಾಗಿದೆ. ಪಕ್ಕದಲ್ಲೇ ಮತ್ತೊಂದು ಧಾರಾವಾಹಿಯ ಸೆಟ್ ಕೂಡ ಹಾಕಲಾಗಿತ್ತು. ಅದಕ್ಕೂ ಹಾನಿಯಾಗಿದೆ ಎಂದಿದೆ ಧಾರಾವಾಹಿ ತಂಡ.

  • ಹಿಂದಿ ಹೇರಿಕೆ ಕುರಿತು ಮತ್ತೆ ಗುಡುಗಿದ ನಟ ಪ್ರಕಾಶ್ ರೈ

    ಹಿಂದಿ ಹೇರಿಕೆ ಕುರಿತು ಮತ್ತೆ ಗುಡುಗಿದ ನಟ ಪ್ರಕಾಶ್ ರೈ

    ಭಾಷಾ ವಿಚಾರದಲ್ಲಿ ಮತ್ತೆ ಪ್ರಶ್ನೆ ಮಾಡಿದ್ದಾರೆ ನಟ ಪ್ರಕಾಶ್ ರೈ (Prakash Rai). ಹಿಂದಿ (Hindi)ಹೇರಿಕೆಯನ್ನು ಯಾವತ್ತೂ ಸಹಿಸಲ್ಲ ಎನ್ನುವ ಅವರು ಎಲ್ಲ ಭಾಷೆಗೂ ಗೌರವ ಕೊಡುವುದಾಗಿ ಹೇಳಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ‘ನನ್ನ ಬೇರು, ನನ್ನ ಮೂಲ ಕನ್ನಡ. ನನ್ನ ತಾಯಿಯನ್ನು ಗೌರವಿಸದೆ ನಿನ್ನ ಹಿಂದಿಯನ್ನು ಹೇರಿದರೆ ನಾವು ಹೀಗೇ ಪ್ರತಿಭಟಿಸುತ್ತೇವೆ. ಹೆದರಲ್ಲ ಅಷ್ಟೇ’ ಎಂದು ಬರೆದುಕೊಂಡಿದ್ದಾರೆ.

    ಕನ್ನಡದ (Kannada) ವಿಚಾರವಾಗಿ ಪ್ರಕಾಶ್ ರೈ ಮತ್ತೆ ಮಾತನಾಡಿದ್ದಕ್ಕೆ ಕಾರಣವಿದೆ. ಈ ಹಿಂದೆ ಪ್ರಕಾಶ್ ರೈ ‘ನಂಗೆ ಹಿಂದಿ ಬರಲ್ಲ ಹೋಗ್ರಪ್ಪ’ ಎಂದು ಬರಹವಿರುವ ಟಿ ಶರ್ಟ್ ಹಾಕಿಕೊಂಡಿದ್ದರು. ಹಿಂದಿ ಹೇರಿಕೆಯನ್ನು ಬಲವಾಗಿ ವಿರೋಧಿಸಿದ್ದರು. ಇದಕ್ಕೆ ಆಕ್ಷೇಪನೆ ವ್ಯಕ್ತಪಡಿಸಿದ್ದ ಶಶಾಂಕ್ ಶೇಖರ್ ಝಾ (Shashank Shekhar Jha) ಎನ್ನುವವರು ಪ್ರಕಾಶ್ ರೈ ವಿರುದ್ಧ ಎಫ್‍.ಐ.ಆರ್ ಹಾಕಿದ್ದೀರಾ ಎಂದು ಪೊಲೀಸರಿಗೆ ಪ್ರಶ್ನೆ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಪ್ರಕಾಶ್ ರೈ ಸಿಡಿದೆದ್ದಿರಾ. ಇದನ್ನೂ ಓದಿ: ಬ್ಯಾಕ್‌ಲೆಸ್ ಫೋಟೋ ಶೇರ್‌, ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ `ಸಲಾರ್’ ನಟಿ

    ಸರಣಿಯ ಟ್ವೀಟ್ ಮಾಡಿರುವ ಪ್ರಕಾಶ್ ರೈ, ‘ನಾನು ಏಳು ಭಾಷೆಗಳನ್ನು ಬಲ್ಲೆ. ಒಂದು ಭಾಷೆಯನ್ನು ಕಲಿತು ಮಾತನಾಡುವುದು ಎಂದರೆ ಆ ಭಾಷೆಯ ಜನರನ್ನು ಗೌರವಿಸುವುದು. ನಾನು ಹೋಗುವಲ್ಲೆಲ್ಲಾ ಆಯಾ ಭಾಷೆಯಲ್ಲಿ ಸಂವಾದಿಸುತ್ತೇನೆ. ನನ್ನ ಭಾಷೆಯನ್ನು ಹೇರುವುದಿಲ್ಲ. ಆದರೆ, ನನ್ನ ಕನ್ನಡವನ್ನು ಅವಮಾನಿಸಿ ನಿಮ್ಮ ಭಾಷೆಯನ್ನು ಹೇರಿದರೆ ನಿಂತು ಹೋರಾಡುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.

    ಕನ್ನಡ ನೆಲೆ, ನುಡಿ ಬಗ್ಗೆ ಪ್ರಕಾಶ್ ರೈ ಮತ್ತೆ ಧ್ವನಿ ಎತ್ತಿದ್ದಕ್ಕೆ ಹಲವರು ಬೆಂಬಲವಾಗಿ ನಿಂತಿದ್ದಾರೆ. ಇನ್ನೂ ಕೆಲವರು ಟೀಕೆಯನ್ನೂ ಮಾಡಿದ್ದಾರೆ. ಕನ್ನಡದ ವಿಚಾರವಾಗಿ ಏನೇ ಟೀಕೆಗಳು ಬಂದರೂ, ನಾನು ಹೆದರುವುದಿಲ್ಲ. ಹಿಂದಿ ಹೇರಿಕೆಯನ್ನೂ ಸಹಿಸುವುದಿಲ್ಲ ಎಂದು ಪ್ರಕಾಶ್ ಉತ್ತರಿಸಿದ್ದಾರೆ. ಬಹುತೇಕ ಪ್ರಶ್ನೆಗಳಿಗೆ ಉತ್ತರಿಸುವಂತಹ ಕೆಲಸವನ್ನೂ ಅವರು ಮಾಡಿದ್ದಾರೆ.

  • ಕಪಿಲ್ ಶರ್ಮಾ ಶೋನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್

    ಕಪಿಲ್ ಶರ್ಮಾ ಶೋನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್

    ಹಿಂದಿಯ ಪ್ರತಿಷ್ಠಿತ ಟಾಕ್ ಶೋ ‘ಕಪಿಲ್ ಶರ್ಮಾ ಶೋ’ ನಲ್ಲಿ ಕನ್ನಡದ ಹೆಸರಾಂತ ನಟ ಗೋಲ್ಡನ್ ಸ್ಟಾರ್ ಗಣೇಶ್ ಭಾಗಿಯಾಗಿದ್ದಾರೆ. ಕಪಿಲ್ ಜೊತೆಗಿನ ಫೋಟೋವನ್ನು ಹಾಗೂ ಆ ಕಾರ್ಯಕ್ರಮಕ್ಕೆ ತಯಾರಿಯಾಗಿ ಕಾರು ಏರಿದ ವಿಡಿಯೋವನ್ನು ಗಣೇಶ್ ಹಂಚಿಕೊಂಡಿದ್ದಾರೆ. ಕಾಮಿಡಿ ಕಾರ್ಯಕ್ರಮದ ಮೂಲಕವೇ ಫೇಮಸ್ ಆಗಿರುವ ಗಣೇಶ್, ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದು ಮನರಂಜನೆಗೆ ಯಾವುದೇ ಕೊರತೆ ಆಗದು ಎನ್ನುತ್ತಿದ್ದಾರೆ ಅಭಿಮಾನಿಗಳು.

    ಕಪಿಲ್ ಜೊತೆಗಿನ ಶೋನಲ್ಲಿ ಈಗಾಗಲೇ ಕನ್ನಡದ ಹೆಸರಾಂತ ನಟ ಸುದೀಪ್ ಎರಡು ಬಾರಿ ಕಾಣಿಸಿಕೊಂಡಿದ್ದರು. ಈ ಶೋನಲ್ಲಿ ಎರಡು ಬಾರಿ ಕಾಣಿಸಿಕೊಂಡ ಮೊದಲ ಕನ್ನಡದ ನಟ ಎನ್ನುವ ಹೆಗ್ಗಳಿಕೆ ಸುದೀಪ್ ಅವರಿಗಿದೆ. ಸಲ್ಮಾನ್ ಖಾನ್ ಜೊತೆ ಒಂದು ಬಾರಿ ಸುದೀಪ್ ಕಾಣಿಸಿಕೊಂಡಿದ್ದರೆ, ಮತ್ತೊಂದು ಬಾರಿ ಸುನೀಲ್ ಶೆಟ್ಟಿ ಜೊತೆಯೂ ಅವರು ಕಪಿಲ್ ಶೋನಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಆಸ್ಕರ್ ವೇದಿಕೆಯಲ್ಲಿ `ನಾಟು ನಾಟು’ ಸಾಂಗ್ ಹಾಡಲಿದ್ದಾರೆ ಎಂ.ಎಂ ಕ್ಷೀರವಾಣಿ

    ಇದೀಗ ಗಣೇಶ್ ಕೂಡ ಆ ಶೋನಲ್ಲಿ ಪಾಲ್ಗೊಂಡಿದ್ದು, ಹೆಚ್ಚಿನ ವಿವರಗಳನ್ನು ಸದ್ಯದಲ್ಲೇ ನೀಡುವುದಾಗಿ ಅವರು ತಿಳಿಸಿದ್ದಾರೆ. ಗಣೇಶ್ ನಟನೆಯ ‘ಬಾನದಾರಿಯಲ್ಲಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಪ್ರಮೋಷನ್ ನಲ್ಲಿ ಅವರು ಭಾಗಿಯಾಗಲಿದ್ದಾರಾ ಅಥವಾ ಬೇರೆ ಯಾವುದಾದರೂ ಕಾರ್ಯಕ್ರಮದ ಸಲುವಾಗಿ ಅವರು ಅತಿಥಿಯಾಗಿ ಹೋಗಿದ್ದಾರಾ ಎನ್ನುವುದು ಗೊತ್ತಾಗಿಲ್ಲ. ಈ ವಿಷಯವನ್ನು ಅವರೇ ಸದ್ಯದಲ್ಲೇ ತಿಳಿಸುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಿಂದಿ ಸೇರಿ ಏಳು ಸಿನಿಮಾಗಳಲ್ಲಿ ರಾಗಿಣಿ ದ್ವಿವೇದಿ ಬ್ಯುಸಿ

    ಹಿಂದಿ ಸೇರಿ ಏಳು ಸಿನಿಮಾಗಳಲ್ಲಿ ರಾಗಿಣಿ ದ್ವಿವೇದಿ ಬ್ಯುಸಿ

    ಳೆದ ೧೩ ವರ್ಷದಿಂದ ಸ್ಯಾಂಡಲ್ ವುಡ್ ನಲ್ಲಿ ಸಕ್ರಿಯರಾಗಿರುವ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ (Ragini Dwivedi) ಈಗ ಹಿಂದಿ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಶೂಟಿಂಗ್ ನ್ನು ಲಂಡನ್ ನಲ್ಲಿ ಮುಗಿಸಿಕೊಂಡು ಬಂದಿರುವ ರಾಗಿಣಿ ಖುಷಿ ಹಂಚಿಕೊಳ್ಳಲು ಇತ್ತೀಚೆಗೆ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಾಗಿಣಿ ‘ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಜರ್ನಿ ಆಗಿದೆ. ಕಳೆದ ವರ್ಷ (೨೦೨೨) ಹೆಚ್ಚಾಗಿ ಶೂಟಿಂಗ್ ನಲ್ಲಿ ಬ್ಯುಸಿ ಇದ್ದೇ. ಈಗ ಹಿಂದಿ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಮೊದಲ ಹಂತದ ಶೂಟಿಂಗ್ ಮುಗಿದಿದೆ. ಇದೊಂದು ಹಾರರ್, ಥ್ರಿಲ್ಲರ್ ಚಿತ್ರವಾಗಿದ್ದು, ಯಶಸ್ವಿ ಸಿನಿಮಾಗಳ ನಿರ್ದೇಶಕ ಆಯುರ್ ಶರ್ಮಾ (Ayur Sharma) ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ’ ಎಂದರು.

    ‘ಚಿತ್ರದ ಹೆಸರು ‘ವಾಕ್ರೋ ಹೌಸ್’ (Walkro House). ಸಂಪೂರ್ಣ ಶೂಟಿಂಗ್ ಮುಗಿದ ಮೇಲೆ ತಂಡದೊಂದಿಗೆ ಮತ್ತೆ ಬರುತ್ತೇನೆ. ನಾನು ಇದರಲ್ಲಿ ಲಂಡನ್ ಬೇಸ್ ಬುಕ್ ರೈಟರ್ ಪಾತ್ರ ಮಾಡುತ್ತಿದ್ದು, ಮೊದಲ ಹಂತದ ಶೂಟಿಂಗ್ ಲಂಡನ್ ನಲ್ಲಿ ನಡೆದಿದೆ. ನನ್ನ ಜೊತೆ ಈ ಚಿತ್ರದಲ್ಲಿ ಪರಂವ್ಹಾ ಸೇರಿದಂತೆ ಸಾಕಷ್ಟು ಜನ ಒಳ್ಳೆ ಕಲಾವಿದರಿದ್ದಾರೆ. ನನ್ನ ಮೊದಲ ಹಿಂದಿ ಸಿನಿಮಾ ಹಾರರ್ ಆಗಿದ್ದು, ಒಳ್ಳೆ ಕಥೆ, ಪಾತ್ರ ಇದಿದ್ದರಿಂದ ಖುಷಿಯಾಗಿದ್ದೇನೆ. ಈ ಹಿಂದಿ ಸಿನಿಮಾ ಮಾಡತಾ ಇರೋದು ತಂದೆ-ತಾಯಿಗೆ ಖುಷಿ ಇದೆ. ಅವರ ಸಪೋರ್ಟ್ ನಿಂದಲೇ ನಾನು ಇಷ್ಟು ಬೆಳೆಯಲು ಆಗಿದ್ದು. ನಮ್ಮ ಕಷ್ಟ ಸುಖಗಳನ್ನು ತಂದೆ-ತಾಯಿಗಳಿಗೆ ಹೇಳಿಕೊಳ್ಳಬೇಕು ಆಗ ಅವರು ನಮಗೆ ಎಲ್ಲದಕ್ಕೂ ಸಪೋರ್ಟ್ ಮಾಡುತ್ತಾರೆ’ ಎನ್ನುತ್ತಾರೆ ರಾಗಿಣಿ. ಇದನ್ನೂ ಓದಿ:ಅಬ್ಬಬ್ಬಾ ಎನಿಸುವಷ್ಟಿದೆ ಸಮಂತಾ ಧರಿಸಿದ್ದ ಈ ಸೀರೆಯ ಬೆಲೆ?

    ಮುಂದುವರೆದು ಮಾತನಾಡಿದ ಅವರು ‘ಈ ಹಿಂದಿ ಸಿನಿಮಾ ಜೊತೆಗೆ ಮಲಯಾಳಂನಲ್ಲಿ ಒಂದು, ತಮಿಳು ಮೂರು ಹಾಗೂ ತೆಲುಗು ಒಂದು ಸಾಂಗ್ ಮಾಡಿದ್ದೇನೆ. ಸದ್ಯ ಕನ್ನಡದಲ್ಲಿ ೨ ಸಿನಿಮಾ ಮಾಡತಾ ಇದ್ದೇನೆ.  ಇಂದು ಎಲ್ಲಾ ಚಿತ್ರರಂಗದಲ್ಲಿ ಒಳ್ಳೆ ಸಿನಿಮಾಗಳು ಬರತಾ ಇದ್ದು ನಟನೆಗೆ ಒಳ್ಳೆ ಕ್ಯಾರೆಕ್ಟರ್ ಸಿಗತಾ ಇವೆ. ಒಟಿಟಿ ಬಂದು ನಮ್ಮಂತ ಕಲಾವಿದರಿಗೆ ದೊಡ್ಡ ವೇದಿಕೆ ಆಗಿದೆ. ಕನ್ನಡದ ‘ವಿಕ್ರಾಂತ್ ರೋಣ’, ‘ಕಾಂತಾರ’ ಸಿನಿಮಾಗಳು ಆಸ್ಕರ್ ಗೆ ಹೋಗಿರೋದು ಖುಷಿ ಕೊಟ್ಟಿತು’ ಎಂದಿದ್ದಾರೆ

    ಕನ್ನಡ ಸಿನಿಮಾ ಇಂಡಸ್ಟ್ರಿ ಕುರಿತಾಗಿಯೂ ಅವರು ಮಾತನಾಡಿ ‘ಕಾಂತರ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದು ಕನ್ನಡ ಇಂಡಸ್ಟ್ರೀಸ್ ಇಂದು ನ್ಯಾಷನಲ್ ಇಂಟರ್‌ನ್ಯಾಷನಲ್ ಹೋಗಿದೆ. ಇದು ನಮ್ಮ ಹೆಮ್ಮೆ ಎನ್ನಬಹುದು. ತುಂಬಾ ಕಡೆ ಕನ್ನಡ ಇಂಡಸ್ಟ್ರಿ ಬಗ್ಗೆ ಒಳ್ಳೆ ಮಾತುಗಳನ್ನು ಆಡುತ್ತಾರೆ. ಈ ವರ್ಷ ಮಾರ್ಚ್‌ ನಿಂದ ನನ್ನ ಸಿನಿಮಾಗಳು ಎಲ್ಲಾ ಭಾಷೆಯಿಂದ ಒಂದೊಂದು ರಿಲೀಸ್ ಆಗಬಹುದು. ‘ನಾನೊಬ್ಬ ಭಾರತೀಯ’ ಎಂಬ ತಮಿಳು ಚಿತ್ರದಲ್ಲಿ ಕಮಾಂಡೋ ಪಾತ್ರ ಮಾಡಲಿದ್ದು, ಇದು ನನಗೆ ವಿಷೇಶವಾದ ಸಿನಿಮಾ’ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಲಿವುಡ್ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪಾಲಾದ ‘ಕಬ್ಜ’ ವಿತರಣಾ ಹಕ್ಕು

    ಬಾಲಿವುಡ್ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪಾಲಾದ ‘ಕಬ್ಜ’ ವಿತರಣಾ ಹಕ್ಕು

    ಪೇಂದ್ರ ಮತ್ತು ‘ಕಿಚ್ಚ’ ಸುದೀಪ್ ಅಭಿನಯದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ದ ಹಿಂದಿ ಅವತರಣಿಕೆಯ ಹಕ್ಕುಗಳನ್ನು ಬಾಲಿವುಡ್ನ ಪ್ರತಿಷ್ಠಿತ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಆನಂದ್ ಮೋಷನ್ ಪಿಕ್ಚರ್ಸ್ ತನ್ನದಾಗಿಸಿಕೊಂಡಿದ್ದು, ಮೊದಲ ಹಂತವಾಗಿ ಇಂದು ಹಿಂದಿ ಟೀಸರ್ ಬಿಡುಗಡೆ ಮಾಡಿದೆ. ಶ್ರೀ ಸಿದ್ಧೇಶ್ವರ ಎಂಟರ್ಪ್ರೈಸಸ್ ಲಾಂಛನದಲ್ಲಿ ಆರ್. ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ‘ಕಬ್ಜ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಹಲವು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ.

    ಸ್ವಾತಂತ್ರ್ಯ ಹೋರಾಟಗಾರ ಅಮರೇಶ್ವರನ ಮಗ ಅರ್ಕೇಶ್ವರ, 1960-1984 ರ ಅವಧಿಯಲ್ಲಿ ಭಾರತದಲ್ಲಿ ಭೂಗತ ಜಗತ್ತಿನ ರಾಜನಾಗುತ್ತಾನೆ ಮತ್ತು ಭಾರತೀಯ ಇತಿಹಾಸದಲ್ಲಿ ತನ್ನ ಛಾಪು ಮೂಡಿಸುತ್ತಾನೆ. ಇಂಥದ್ದೊಂದು ಕಥೆ ಇರುವ ‘ಕಬ್ಜ’ ಚಿತ್ರದ ಬಗ್ಗೆ ಬರೀ ಕನ್ನಡವಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳಿವೆ. ‘ಕಬ್ಜ’ ಚಿತ್ರದ ವಿತರಣೆಯ ಹಕ್ಕುಗಳನ್ನು ಪಡೆದಿರುವ ಆನಂದ್ ಪಂಡಿತ್ ಮಾತನಾಡಿ, ಪ್ರೇಕ್ಷಕರ ಮನರಂಜಿಸುವುದೇ ನಮ್ಮ ಪ್ರಮುಖ ಉದ್ದೇಶ ಮತ್ತು ಕಬ್ಜ ಅಂತಹ ಒಂದು ಮನರಂಜನೆಯಾಗಲಿದೆ ಎಂದು ನಮಗೆ ಸಂಪೂರ್ಣ ನಂಬಿಕೆಯಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: `ಕೆಜಿಎಫ್’ ತಾತ ಕೃಷ್ಣ ಜಿ. ರಾವ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

    ಚಿತ್ರದ ಬಗ್ಗೆ ಮಾತನಾಡಿದ ನಾಯಕ ನಟ ಉಪೇಂದ್ರ, ‘ಭೂಗತಲೋಕದ ಹೊಸ ಅಧ್ಯಾಯವಾದ ಕಬ್ಜ ಚಿತ್ರೆದ ಹಿಂದಿ ಅವತರಣಿಕೆಯನ್ನು ಬಾಲಿವುಡ್‌ನ ಹೆಸರಾಂತ ನಿರ್ಮಾಪಕರಾದ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಬಿಡುಗಡೆ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ. ಅವರ ಸಹಕಾರ ಹೀಗೆಯೇ ಮುಂದುವರೆಯಲಿ’ ಎಂದು ಹೇಳಿದ್ದಾರೆ.  ಕಿಚ್ಚ ಸುದೀಪ ಸಹ ಈ ಕುರಿತು ಮಾತನಾಡಿದ್ದು, ‘ದಕ್ಷಿಣ ಭಾರತೀಯ ಸಿನಿಮಾಗಳು ಭಾರತೀಯ ಸಿನಿಮಾ ಎಂದು ಗುರುತಿಸಿಕೊಳ್ಳುತ್ತಿರುವ ಈ ಅದ್ಭುತ ಸಂದರ್ಭದಲ್ಲಿ ಖ್ಯಾತ ವಿತರಕ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ನಮ್ಮ ‘ಕಬ್ಜ’ ಸಿನಿಮಾವನ್ನು ಬಿಡುಗಡೆ ಮಾಡುತ್ತಿದೆ. ಇದು ಚಿತ್ರತಂಡದ ಕಠಿಣ ಪರಿಶ್ರಮಕ್ಕೆ ಸಿಕ್ಕ  ಪ್ರತಿಫಲ’ ಎಂದಿದ್ದಾರೆ.

    ‘ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಸಂಸ್ಥೆಯು ಕೈ ಜೋಡಿಸಿರುವುದು ನಮ್ಮ ಬದ್ಧತೆ ಮತ್ತು ಪ್ರಯತ್ನಕ್ಕೆ ಸಿಕ್ಕ ಮನ್ನಣೆ’ ಎನ್ನುವ ಆರ್. ಚಂದ್ರು, ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಿಸುವುದಾಗಿ ಹೇಳುತ್ತಾರೆ. ‘ಕಬ್ಜ’ ಚಿತ್ರದಲ್ಲಿ ಉಪೇಂದ್ರ, ಸುದೀಪ್, ಶ್ರೀಯಾ ಶರಣ್ ಸೇರಿದಂತೆ ಪ್ರತಿಭಾವಂತರ ದೊಡ್ಡ ದಂಡೇ ಇದ್ದು, ಚಿತ್ರಕ್ಕೆ ‘ಕೆಜಿಎಫ್’ ಖ್ಯಾತಿಯ ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಿಂದಿ ಸಿನಿಮಾ ತಿರಸ್ಕರಿಸಿ ಕನ್ನಡ ಪ್ರೇಮ ಮೆರೆದ ಝೈದ್ ಖಾನ್

    ಹಿಂದಿ ಸಿನಿಮಾ ತಿರಸ್ಕರಿಸಿ ಕನ್ನಡ ಪ್ರೇಮ ಮೆರೆದ ಝೈದ್ ಖಾನ್

    ನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಬನಾರಸ್ ಎಲ್ಲ ಭಾಷೆಗಳ ಪ್ರೇಕ್ಷಕರ ಮನಗೆದ್ದಿದೆ. ಅದರಲ್ಲಿಯೂ ವಿಶೇಷವಾಗಿ ಕನ್ನಡದ ಪ್ರೇಕ್ಷಕರಂತೂ ಝೈದ್ ಖಾನ್ ನಟನೆ ಕಂಡು ಭೇಷ್ ಅಂದಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಪಳಗಿದ ನಟನಂತೆ ನಟಿಸಿರೋ ಝದ್‍ಗೆ ಎಲ್ಲ ದಿಕ್ಕಿನಿಂದಲೂ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಝೈದ್ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಮುಖ್ಯ ನಾಯಕನಾಗಿ ನೆಲೆ ಕಂಡುಕೊಳ್ಳುತ್ತಾರೆಂಬಂಥಾ ನಂಬಿಕೆಯೂ ಬಲಗೊಂಡಿದೆ.

    ಇದೇ ಹೊತ್ತಿನಲ್ಲಿ ಝೈದ್ ಖಾನ್ ಅವರಿಗೆ ಬಾಲಿವುಡ್ಡಿನಿಂದ ಬಿಗ್ ಆಫರ್ ಒಂದು ಬಂದಿದೆ. ಹಿಂದಿಯ ಖ್ಯಾತ ನಿರ್ದೇಶಕರೋರ್ವರು ಝೈದ್ ಒಂದೊಳ್ಳೆ ಕಥೆ ಹಿಡಿದು ಝೈದ್‍ರನ್ನು ಸಂಪರ್ಕಿಸಿದ್ದಾರೆ. ಅದು ದೊಡ್ಡ ಬಜೆಟ್ಟಿನ ಚಿತ್ರ. ಪ್ರಸಿದ್ಧ ನಟಿಯೋರ್ವರು ಅದರಲ್ಲಿ ನಟಿಸಲಿದ್ದಾರಂತೆ. ಈ ಅವಕಾಶವನ್ನು ಝೈದ್ ಸೇರಿದಂತೆ ಯಾವ ನಾಯಕನೂ ನಿರಾಕರಿಸಲು ಸಾಧ್ಯವಿರಲಿಲ್ಲ. ಆದರೂ ಕೂಡಾ ಝೈದ್ ಅದನ್ನು ನಿರಾಕರಿಸಿದ್ದಾರೆ. ಅದಕ್ಕೆ ಕಾರಣವಾಗಿರೋದು ಅವರೊಳಗೆ ಹಾಸುಹೊಕ್ಕಾಗಿರುವ ಕನ್ನಡತನ! ಅದನ್ನೂ ಓದಿ:400 ಕೋಟಿ ಕ್ಲಬ್ ಸೇರಿ ದಾಖಲೆ ಬರೆದ ‘ಕಾಂತಾರ’ ಸಿನಿಮಾ

    ಝೈದ್ ಖಾನ್‍ರನ್ನು ಸಂಪರ್ಕಿಸಿದ್ದ ಆ ನಿರ್ದೇಶಕರು ವಿವರಿಸಿದ್ದೆಲ್ಲವೂ ಝೈದ್‍ಗೆ ಇಷ್ಟವಾಗಿತ್ತು. ಆದರೆ ಆ ಚಿತ್ರ ಹಿಂದಿಯಲ್ಲಿ ಮಾತ್ರವೇ ತಯಾರಾಗುತ್ತದೆಂಬ ವಿಚಾರ ಮಾತ್ರ ಝೈದ್ ಅವರಿಗೆ ಹಿಡಿಸಿರಲಿಲ್ಲ. ಅವರು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ತಯಾರು ಮಾಡುವಂತೆ ಕೇಳಿಕೊಂಡಿದ್ದರು. ಅದಕ್ಕೆ ಅತ್ತಲಿಂದ ಒಪ್ಪಿಗೆ ಬಂದಿರಲಿಲ್ಲ. ಆಗ ಝೈದ್ ಖಾನ್ `ನೀವು ನನ್ನನ್ನು ಅಪ್ರೋಚ್ ಮಾಡಲು ಕಾರಣವಾಗಿರೋದು ಬನಾರಸ್ ಚಿತ್ರ. ಅದು ಪ್ರಧಾನವಾಗಿ ತಯಾರಾಗಿರೋದು, ಗೆದ್ದಿರೋದು ಕನ್ನಡಿಗರಿಂದಲೇ. ನಾನು ಯಾವ ಕಾರಣಕ್ಕೂ ಕನ್ನಡ ಚಿತ್ರರಂಗವನ್ನು ಬಿಟ್ಟು ಹೋಗಲು ಸಿದ್ಧನಿಲ್ಲ’ ಎಂಬಂಥಾ ನಿಖರ ಉತ್ತರ ನೀಡಿ ಆ ಬಿಗ್ ಆಫರ್ ಅನ್ನು ತಿರಸ್ಕರಿಸಿದ್ದಾರಂತೆ. ಝೈದ್ ಖಾನ್ ಕನ್ನಡಪ್ರೇಮವನ್ನು, ಕನ್ನಡ ಚಿತ್ರರಂಗದ ಮೇಲೆ ಅವರಿಟ್ಟಿರುವ ಅಭಿಮಾನವನ್ನು ಮೆಚ್ಚಿಕೊಳ್ಳಲೇಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್‌ಗೆ ಹಾರಿದ ಹೊಂಬಾಳೆ ಫಿಲ್ಮ್ಸ್ : ಸದ್ಯದಲ್ಲೇ ಹಿಂದಿ ಸಿನಿಮಾ ಘೋಷಣೆ

    ಬಾಲಿವುಡ್‌ಗೆ ಹಾರಿದ ಹೊಂಬಾಳೆ ಫಿಲ್ಮ್ಸ್ : ಸದ್ಯದಲ್ಲೇ ಹಿಂದಿ ಸಿನಿಮಾ ಘೋಷಣೆ

    ಕೆಜಿಎಫ್ 1’ ಮತ್ತು ‘ಕೆಜಿಎಫ್ 2’ ಚಿತ್ರಗಳ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರೂ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ದು ಹೊಂಬಾಳೆ ಫಿಲಂಸ್. ಈಗ ಅದೇ ಸಂಸ್ಥೆಯಿಂದ ನಿರ್ಮಾಣವಾಗಿರುವ ‘ಕಾಂತಾರ’ ಚಿತ್ರವನ್ನು ಮನೆ ಮಂದಿಯೆಲ್ಲಾ ನೋಡಿ ಇಷ್ಟಪಟ್ಟಿದ್ದಾರೆ. ಹಿರಿಯರಿಂದ ಕಿರಿಯರವರೆಗೂ ಎಲ್ಲರೂ ಮೆಚ್ಚಿಕೊಂಡಿರುವ ಈ ಚಿತ್ರ ಎಲ್ಲರಿಗೂ ಇಷ್ಟವಾಗುವುದಕ್ಕೆ ಕಾರಣ ಚಿತ್ರದ ಕಥೆ ಮತ್ತು ಮೇಕಿಂಗ್. ಹೊಂಬಾಳೆ ಫಿಲಂಸ್ ಮೊದಲಿನಿಂದಲೂ ಕಥೆಗೆ ವಿಶೇಷವಾದ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದು, ಈಗಾಗಲೇ ‘ರಾಜ್ಕುಮಾರ’, ‘ಯುವರತ್ನ’, ‘ಕೆಜಿಎಫ್’ ಮುಂತಾದ ಚಿತ್ರಗಳು ಈ ವಿಷಯವನ್ನು ನಿರೂಪಿಸಿದೆ. ಈಗ ‘ಕಾಂತಾರ’ ಸಹ ಇದೇ ನಿಟ್ಟಿನಲ್ಲಿ ಸಾಗಿರುವುದಷ್ಟೇ ಅಲ್ಲ, ‘ಕೆಜಿಎಫ್’ ಸರಣಿಯ ನಂತರ ಒಂದೇ ಸಂಸ್ಥೆಯ ಇನ್ನೊಂದು ಚಿತ್ರ ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿರುವುದು ವಿಶೇಷ.

    ಬರೀ ಕನ್ನಡವಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಒಟ್ಟು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಹೊಂಬಾಳೆ ಫಿಲಂಸ್ ಸಂಸ್ಥೆಯು ಹಲವು ಚಿತ್ರಗಳನ್ನು ನಿರ್ಮಿಸುತ್ತಿದೆ. ಒಂದೇ ಸಂಸ್ಥೆಯಿಂದ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರ ನಿರ್ಮಾಣ ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ. ಇದನ್ನೂ ಓದಿ:ʻಕಮಾಂಡೋʼ ಶೂಟಿಂಗ್ ವೇಳೆ ರಾಗಿಣಿ ದ್ವಿವೇದಿ ಕೈಗೆ ಪೆಟ್ಟು

     

    ಈಗಾಗಲೇ ಕನ್ನಡದಲ್ಲಿ ಜಗ್ಗೇಶ್ ಅಭಿನಯದಲ್ಲಿ ಸಂತೋಷ್ ಆನಂದರಾಮ್ ನಿರ್ದೇಶಿಸುತ್ತಿರುವ ‘ರಾಘವೇಂದ್ರ ಸ್ಟೋರ್ಸ್’ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಶ್ರೀಮುರಳಿ ಅಭಿನಯದಲ್ಲಿ ಡಾ. ಸೂರಿ ನಿರ್ದೇಶಿಸುತ್ತಿರುವ ‘ಬಘೀರ’ ಚಿತ್ರವು ಚಿತ್ರೀಕರಣ ಹಂತದಲ್ಲಿದೆ. ರಕ್ಷಿತ್ ಅಭಿನಯದ ಮತ್ತು ನಿರ್ದೇಶನದ ‘ರಿಚರ್ಡ್ ಆಂಟೋನಿ’ ಮತ್ತು ಯುವ ರಾಜ್‌ಕುಮಾರ್‌ಗಾಗಿ ಸಂತೋಷ್ ಆನಂದರಾಮ್ ನಿರ್ದೇಶಿಸಲಿರುವ ಹೊಸ ಚಿತ್ರಗಳು ಸದ್ಯದಲ್ಲೇ ಶುರುವಾಗಲಿವೆ.

    ಬೇರೆ ಭಾಷೆಯ ಚಿತ್ರಗಳ ವಿಷಯಕ್ಕೆ ಬಂದರೆ, ತೆಲುಗಿನಲ್ಲಿ ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, 2023ರ ಸೆಪ್ಟೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ತಮಿಳಿನಲ್ಲಿ ಎರಡು ಚಿತ್ರಗಳನ್ನು ಹೊಂಬಾಳೆ ನಿರ್ಮಿಸುತ್ತಿದ್ದು, ಈ ಪೈಕಿ ಒಂದು ಚಿತ್ರವನ್ನು ‘ಸೂರರೈ ಪೊಟ್ರು’ ಖ್ಯಾತಿಯ ಸುಧಾ ಕೊಂಗರಾ ನಿರ್ದೇಶನ ಮಾಡಿದರೆ, ಇನ್ನೊಂದರ ಘೋಷಣೆ ಶೀಘ್ರದಲ್ಲೇ ಆಗಲಿದೆ. ಮಲಯಾಳಂನಲ್ಲೂ ಹೊಂಬಾಳೆ ಫಿಲಂಸ್ ವತಿಯಿಂದ ಎರಡು ಚಿತ್ರ ನಿರ್ಮಾಣವಾಗುತ್ತಿವೆ. ಫಹಾದ್ ಫಾಸಿಲ್ ಅಭಿನಯದ ‘ಧೂಮಂ’ ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದರೆ, ಪೃಥ್ವಿರಾಜ್ ಸುಕುಮಾರನ್ ನಟಿಸಿ-ನಿರ್ದೇಶಿಸಲಿರುವ ‘ಟೈಸನ್’ ಚಿತ್ರವು ಮುಂದಿನ ವರ್ಷ ಪ್ರಾರಂಭವಾಗಲಿದೆ. ಹಿಂದಿ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯಲಿದ್ದು ಸದ್ಯದಲ್ಲೇ ಅಧಿಕೃತ ಘೋಷಣೆಯಾಗಲಿದೆ.

    Live Tv
    [brid partner=56869869 player=32851 video=960834 autoplay=true]