Tag: hindi

  • ಹಿಂದಿ ಹೇರಿಕೆ ವಿರುದ್ಧ ದೊಡ್ಡ ಧ್ವನಿ ಎತ್ತಿದ ಕೀರ್ತಿ ಸುರೇಶ್

    ಹಿಂದಿ ಹೇರಿಕೆ ವಿರುದ್ಧ ದೊಡ್ಡ ಧ್ವನಿ ಎತ್ತಿದ ಕೀರ್ತಿ ಸುರೇಶ್

    `ಕೆಜಿಎಫ್ 2′ (Kgf 2) ಮತ್ತು `ಕಾಂತಾರ’ (Kantara), ಸಲಾರ್   ರೀತಿಯ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರುವ ಹೊಂಬಾಳೆ ಸಂಸ್ಥೆಯು ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದೆ. ಇದುವರೆಗೂ ಕನ್ನಡ, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್(Hombale Films) ರೂವಾರಿ ವಿಜಯ್ ಕಿರಗಂದೂರು, ಇದೇ ಮೊದಲ ಬಾರಿಗೆ ತಮಿಳು ಚಿತ್ರವೊಂದನ್ನು (Tamil Films) ನಿರ್ಮಿಸುತ್ತಿದ್ದಾರೆ. ಅದೇ ರಘುತಾತ (Raghutatha). ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಹಿಂದಿ ಹೇರಿಕೆಯ ವಿರುದ್ಧ ಕಥಾ ನಾಯಕಿ ಪ್ರತಿಭಟಿಸುವಂತಹ ಟೀಸರ್ ಇದಾಗಿದೆ.

     

    ಹಿಂದಿ ಹೇರಿಕೆಯ ಕುರಿತಂತೆ ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಚರ್ಚೆಯಾಗಿದೆ. ಅದೇ ವಿಷಯವನ್ನೇ ಇಟ್ಟುಕೊಂಡು ಟೀಸರ್ ರೆಡಿ ಮಾಡಿದ್ದಾರೆ ನಿರ್ದೇಶಕರು. ಹಿಂದಿ ಹೇರಿಕೆಯ ವಿರುದ್ಧ ಕೀರ್ತಿ ಸುರೇಶ್ (Keerthy Suresh) ಹೊಡೆದ ‘ಹಿಂದಿ ತೆರಿಯಾದ ಪೋಯ’ ಡೈಲಾಗ್ ಪಂಚಿಂಗ್ ಆಗಿದೆ. ಕೀರ್ತಿ ಸುರೇಶ್ ಅದ್ಭುತವಾಗಿಯೇ ನಟಿಸಿದ್ದಾರೆ.

    ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಮೊದಲ ತಮಿಳು ಚಿತ್ರವಿದು. ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುವ ಕೀರ್ತಿ ಸುರೇಶ್ ಈ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರದ ಮೊದಲ ಟೀಸರ್ ಇಂದು ಬಿಡುಗಡೆಯಾಗಿದೆ. ಈ ಹಿಂದೆ, `ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರೀಸ್ ಜತೆಗೆ ಕೆಲವು ಚಿತ್ರಗಳಿಗೆ ಕಥೆ-ಚಿತ್ರಕಥೆ ರಚಿಸಿದ್ದ ಸುಮನ್ ಕುಮಾರ್ ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ʻರಘುತಥಾʼ ಒಂದು ಮಹಿಳಾಪ್ರಧಾನ ಚಿತ್ರವಾಗಿದ್ದು, ಒಬ್ಬ ಯುವತಿಯ ಸುತ್ತ ಸುತ್ತುತ್ತದೆ. ಆಕೆ ತನ್ನ ನೆಲ ಮತ್ತು ಜನರ ಗುರುತನ್ನು ರಕ್ಷಿಸುವ ನಿಟ್ಟಿನಲ್ಲಿ ಏನೆಲ್ಲ ಸಾಹಸಗಳನ್ನು ಮಾಡುತ್ತಾಳೆ ಎಂಬುದನ್ನು ಈ ಕಥೆಯಲ್ಲಿ ಹಾಸ್ಯಮಯವಾಗಿ ಚಿತ್ರಿಸಲಾಗಿದೆ.

    ಇದೊಂದು ಕಾಮಿಡಿ ಡ್ರಾಮಾ ಚಿತ್ರವಾಗಿದ್ದು, ಸಮಾಜದ ವಿರುದ್ದ ಸವಾಲೆಸೆಯುವ ಒಬ್ಬ ಗಟ್ಟಿಗಿತ್ತಿ ಯುವತಿಯ ಸುತ್ತ ಸುತ್ತುತ್ತದೆ. ತನ್ನ ಸಿದ್ಧಾಂತಗಳನ್ನು ಎತ್ತಿಹಿಡಿಯುವುದರ ಜೊತೆಗೆ, ಸಮಾಜದ ವಿರುದ್ಧ ಹೋರಾಡುತ್ತಲೇ, ಆಕೆ ಹೇಗೆ ಎಲ್ಲರಿಗೂ ಸ್ಫೂರ್ತಿಯಾಗುತ್ತಾಳೆ ಎಂಬುದು ಚಿತ್ರದ ಕಥೆ.

     

    ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಜತೆಗೆ ಎಂ.ಎಸ್. ಭಾಸ್ಕರ್, ದೇವದರ್ಶಿನಿ, ರವೀಂದ್ರ ವಿಜಯ್, ಆನಂದ್ಸಾಮಿ, ರಾಜೇಶ್ ಬಾಲಕೃಷ್ಣನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಾಮಿನಿ ಯಜ್ಞಮೂರ್ತಿ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದು, ʻಜೈ ಭೀಮ್ʼ ಖ್ಯಾತಿಯ ಸೀನ್ ರೋಲ್ಡನ್ ಸಂಗೀತ ಸಂಯೋಜಿಸುತ್ತಿದ್ದಾರೆ.

  • ನನ್ನ ಅನುವಾದಕರಾಗಿರುವುದು ಅಪಾಯಕಾರಿ ಕೆಲಸ: ರಾಹುಲ್ ಗಾಂಧಿ ಹೀಗಂದಿದ್ಯಾಕೆ..?

    ನನ್ನ ಅನುವಾದಕರಾಗಿರುವುದು ಅಪಾಯಕಾರಿ ಕೆಲಸ: ರಾಹುಲ್ ಗಾಂಧಿ ಹೀಗಂದಿದ್ಯಾಕೆ..?

    ತಿರುವನಂತಪುರಂ: ನನ್ನ ಅನುವಾದಕರಾಗಿರುವುದು ಬಹಳ ಅಪಾಯಕಾರಿ ಕೆಲಸ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು (Rahul Gandhi Speech Translate) ಹೇಳಿದ್ದಾರೆ.

    ಕೋಝಿಕ್ಕೋಡ್‍ನಲ್ಲಿ ನಡೆದ ಪುಸ್ತಕ ಬಿಡುಗಡೆ (Book Releasing) ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮಾತನಾಡಿದ ಅವರು, ತೆಲಂಗಾಣದಲ್ಲಿ (Telangana) ನಡೆದ ಚುನಾವಣಾ ರ‍್ಯಾಲಿಯ ಬಳಿಕದ ಭಾಷಣದಲ್ಲಿ ನಡೆದ ಅವಾಂತರವನ್ನು ಉಲ್ಲೇಖಿಸಿದರು. ಭಾಷಣವನ್ನು ಅನುವಾದ ಮಾಡುತ್ತಿದ್ದಾಗ ನಡೆದ ಎಡವಟ್ಟನ್ನು ತಿಳಿಸುತ್ತಾ,  ನನ್ನ ಭಾಷಣ ಅನುವಾದ ಮಾಡುವುದು ಅಪಾಯಕಾರಿ ಕೆಲಸ ಎಂದು ಹಾಸ್ಯ ಮಾಡಿದ್ದಾರೆ.

    ನಾನು ಹಿಂದಿಯಲ್ಲಿ 5 ಪದಗಳನ್ನು ಹೇಳಿದ ಒಂದು ವಾಕ್ಯ, ತೆಲುಗಿನಲ್ಲಿ 5 ರಿಂದ 7 ಪದಗಳಲ್ಲಿ ಮುಗಿಯುತ್ತದೆ ಎಂಬುದು ನನ್ನ ಭಾವನೆ. ಆದರೆ ಅಲ್ಲಿ ಅದಕ್ಕಿಂತ ಹೆಚ್ಚಾಗುತ್ತಿತ್ತು. 5 ಪದಗಳಲ್ಲಿರುವ ನನ್ನ ಒಂದು ವಾಕ್ಯವನ್ನು 20-30 ಪದಗಳಲ್ಲಿ ಹೇಳುತ್ತಿದ್ದರು. ಇದರಿಂದ ನನಗೆ ಅನುಮಾನ ಬಂತು ಎಂದು ಹೇಳುತ್ತಾ ರಾಹುಲ್ ಗಾಂಧಿ ನಕ್ಕರು. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಆರಂಭದಲ್ಲೇ ವಿಘ್ನ- ನೀರು ಹರಿಸಿದ್ದರಿಂದ ಪೈಪ್‍ನಿಂದ ಸೋರಿಕೆ

    ಕೆಲವೊಂದು ಸಲ ತುಂಬಾ ನೀರಸವಾಗಿರುವುದನ್ನು ಏನಾದರೂ ಹೇಳಿದರೆ ಜನ ಚಪ್ಪಾಳೆ ತಟ್ಟಿ ಕುಣಿಯುತ್ತಿದ್ದರು. ರೋಮಾಂಚನಕಾರಿಯಾಗಿರುವುದನ್ನು ಹೇಳಿದರೆ ನೀರಸ ಪ್ರತಿಕ್ರಿಯೆ ನೀಡುತ್ತಾರೆ. ಇದು ನಂಗೆ ಕೋಪ ತರಿಸುವ ಬದಲು ನಗು ತರಿಸುವಂತೆ ಮಾಡುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಕೆಲವೊಮ್ಮೆ ಏನನ್ನೂ ಹೇಳಲು ಸಾಧ್ಯವಾಗದೆ ವೇದಿಕೆಯಲ್ಲಿದ್ದಾಗ ಪೂರ್ತಿ ನಗುತ್ತಲೇ ಇರಬೇಕಾಗುತ್ತದೆ ಎಂದು ಅವರು ಹೇಳಿದರು.

    ನಡೆದ ಘಟನೆಯನ್ನು ವಿವರಿಸಿದ ನಂತರ, ಕಾಂಗ್ರೆಸ್ ನಾಯಕ ತನ್ನ ಸ್ನೇಹಿತ ಸಮದಾನಿ ಉತ್ತಮ ಭಾಷಾಂತರಕಾರ ಎಂದು ಹೇಳಿದರು. ಸಮದಾನಿಯವರಿಗೆ ಅಂತಹ ಯಾವುದೇ ಸಮಸ್ಯೆಗಳಿಲ್ಲ ಎಂದು ರಾಹುಲ್ ತಿಳಿಸಿದರು. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಇಂಡಿಯನ್ ಯೂನಿಯ್ ಮುಸ್ಲಿಂ ಲೀಗ್ (ಐಯುಎಂಎಲ್) ಸಂಸದ ಅಬ್ದುಸ್ಸಮದ್ ಸಮದಾನಿಯವರು ರಾಹುಲ್ ಗಾಂಧಿ ಭಾಷಣ ಅನುವಾದ ಮಾಡಿದ್ದಾರೆ.

  • ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ ನಟನೆಯ ‘ಪೆಂಟಗನ್’ ಹಿಂದಿಯಲ್ಲಿ ರಿಲೀಸ್

    ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ ನಟನೆಯ ‘ಪೆಂಟಗನ್’ ಹಿಂದಿಯಲ್ಲಿ ರಿಲೀಸ್

    ದ್ಯ ಬಿಗ್ ಬಾಸ್ ಮನೆಯ ಕೇಂದ್ರಬಿಂದು ಆಗಿರುವ ನಟಿ ತನಿಷಾ ಕುಪ್ಪಂಡ ಮತ್ತು ಇತರರು ನಟನೆಯ ‘ಪೆಂಟಗನ್’ ಸಿನಿಮಾ ಹಿಂದಿಯಲ್ಲಿ (Hindi) ಬಿಡುಗಡೆ ಆಗಿದೆ. ‘ಪೆಂಟಗನ್’ ಈಗ ಹಿಂದಿ ಭಾಷೆಯಲ್ಲಿ ‘ಪೆಂಟಗನ್- ಪಾಂಚ್ ಕಾ ಧಮ್’ ಎಂದು dollywood play ನಲ್ಲಿ ಇಂದಿನಿಂದ ಪ್ರಸಾರವಾಗುತ್ತಿದೆ. ಐದು ಕಥೆಗಳು, ಐದು ನಿರ್ದೇಶಕರು ಹಾಗೂ ಹಲವಾರು ನಟರು ಈ ಸಿನಿಮಾದ ಭಾಗವಾಗಿದ್ದಾರೆ. ಗುರು ದೇಶಪಾಂಡೆ (Guru Deshpanda) ಅವರ ನಿರ್ಮಾಣ ಮತ್ತು ಸಾರಥ್ಯದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ರಾಘು ಶಿವಮೊಗ್ಗ, ಆಕಾಶ್ ಶ್ರೀವತ್ಸ, ಚಂದ್ರ ಮೋಹನ್, ಕಿರಣ್ ಕುಮಾರ್ ಮತ್ತು ಗುರು ದೇಶಪಾಂಡೆ ತಲಾ ಒಂದೊಂದು ಕಥೆಯನ್ನು ನಿರ್ದೇಶನ ಮಾಡಿದ್ದಾರೆ. ಕಿಶೋರ್, ಪ್ರಕಾಶ್ ಬೆಳವಾಡಿ, ರವಿಶಂಕರ್ ಸೇರಿದಂತೆ ಹೆಸರಾಂತ ತಾರಾ ಬಳಗವೇ ಸಿನಿಮಾ ದಲ್ಲಿದೆ.

    ನೆನಪಾಗುವ ತನಿಷಾ ವಿವಾದ

    ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ತನಿಷಾ ಪೆಂಟಗನ್ ಸಿನಿಮಾದ ಒಂದು ಕಥೆಯಲ್ಲಿ ಬೋಲ್ಡ್ ಆಗಿ ನಟಿಸಿದ್ದರು. ಈ ನಟಿಗೆ ಅನೇಕ ರೀತಿಯಲ್ಲಿ ಕಿರುಕುಳ ಆಗಿದೆ ಎಂದು ಈ ಹಿಂದೆ ಆರೋಪ ಮಾಡಿದ್ದರು. ಸಿನಿಮಾ ರಿಲೀಸ್ ವೇಳೆ ಯುಟ್ಯೂಬರ್ ಒಬ್ಬನ ಮೇಲೆ ಆರೋಪ ಮಾಡಿದ್ದ ತನಿಷಾ, ನಂತರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸೂಪರ್ ಹಿಟ್ ಸಿನಿಮಾದ ನಟನೊಬ್ಬನ ಮೇಲೆ ಗುರುತರ ಆರೋಪ ಮಾಡಿದ್ದರು.

    ಪೆಂಟಗನ್ (Pentagon) ಸಿನಿಮಾದ ಒಂದು ಕಥೆಯಲ್ಲಿ ತನಿಷಾ ಬೋಲ್ಡ್ ಆಗಿರುವಂಥ ಪಾತ್ರವನ್ನು ನಿರ್ವಹಿಸಿದ್ದಾರೆ. ಅದು ಡೇಟಿಂಗ್ ಆಪ್ ಕುರಿತಾದ ಕಥೆಯಾಗಿದ್ದರಿಂದ, ಪಾತ್ರವೇ ಡಿಮಾಂಡ್ ಮಾಡಿದ್ದರಿಂದ ಅಂಥದ್ದೊಂದು ಪಾತ್ರವನ್ನು ನಿರ್ವಹಿಸಿದ್ದೇನೆ ಎಂದಿದ್ದರು. ಆದರೆ, ರಾಜಾಹುಲಿ ಅಂತಹ ಹಿಟ್ ಸಿನಿಮಾದಲ್ಲಿ ಯಶ್ ಗೆಳೆಯನ ಪಾತ್ರ ಮಾಡಿದ್ದ ನಟನೊಬ್ಬ ತನಿಷಾಗೆ ಬ್ಲೂಫಿಲ್ಮ್ ಮಾಡ್ತೀಯಾ ಎಂದು ಸೋಷಿಯಲ್ ಮೀಡಿಯಾ ಮೂಲಕ ಪ್ರಶ್ನೆ ಮಾಡಿದ್ದಾರಂತೆ. ಆ ನಟನ ಬಗ್ಗೆ ಮಾತನಾಡಿದ ತನಿಷಾ ಪತ್ರಿಕಾಗೋಷ್ಠಿಯಲ್ಲೇ ಕಣ್ಣೀರಿಟ್ಟಿದ್ದರು.

    ಪೆಂಟಗನ್ ಸಿನಿಮಾದಲ್ಲಿ ಒಟ್ಟು ಐದು ಕಥೆಗಳಿವೆ. ಕನ್ನಡದ ಪ್ರೇಮ, ಸಾಮಾಜಿಕ ಸಂದೇಶ ಹಾಗೂ ಮನರಂಜನೆ ನೀಡುವಂತಹ ಎಲ್ಲ ಅಂಶಗಳು ಇದ್ದರೂ, ಕೇವಲ ಒಂದೇ ಒಂದು ಕಥೆಯ ಬಗ್ಗೆ ಈ ರೀತಿ ಮಾತನಾಡುವುದು ಸರಿ ಅಲ್ಲ ಎನ್ನುವುದು ತನಿಷಾ ಮಾತಾಗಿತ್ತು. ಐದು ಪ್ರತಿಭಾವಂತ ನಿರ್ದೇಶಕರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅವರು ನನ್ನಿಂದ ಕೆಟ್ಟ ರೀತಿಯಲ್ಲಿ ಪಾತ್ರ ಮಾಡಲು ಸಾಧ್ಯವಾ ಎನ್ನುವುದು ಅವರ ಪ್ರಶ್ನೆಯಾಗಿತ್ತು.

    `ಮಂಗಳಗೌರಿ ಮದುವೆ’ (Mangala Gowri Maduve) ಸೀರಿಯಲ್‌ನಲ್ಲಿ ಖಡಕ್ ವಿಲನ್ ಆಗಿ ಮನಗೆದ್ದ ತನಿಷಾ ಕುಪ್ಪಂಡ (Tanisha Kuppanda) ಅವರು (ಸಿನಿಮಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಯೂಟ್ಯೂಬರ್ ಅಸಭ್ಯ ಪ್ರಶ್ನೆಗೆ ತನಿಷಾ ಖಡಕ್ ವಾರ್ನಿಂಗ್ ಕೊಟ್ಟಿದ್ದರು.

     

    ನೀವು ನೀಲಿ ಚಿತ್ರದಲ್ಲಿ ನಟಿಸಲು ಸಿದ್ಧವಿದ್ದೀರಾ? ಎಂದು ಓರ್ವ ಯೂಟ್ಯೂಬರ್ ಪ್ರಶ್ನೆ ಮಾಡಿದ್ದರು. ಆಗ ಸಿಟ್ಟಾದ ತನಿಷಾ ಕುಪ್ಪಂಡ ಹಾಗಿದ್ರೆ ನಾನು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇರಬಾರದಿತ್ತು. ನೀಲಿ ಸಿನಿಮಾ ಇಂಡಸ್ಟ್ರಿಯಲ್ಲೇ ಇರಬೇಕಿತ್ತು. ಬೋಲ್ಡ್ ಆಗಿ ನಟಿಸಿದ್ದೀವಿ ಅಂದ ಮಾತ್ರಕ್ಕೆ. ಈ ತರಹ ಪ್ರಶ್ನೆ ಕೇಳೋದ್ರಲ್ಲಿ ಅರ್ಥವೇ ಇಲ್ಲ. ನೀಲಿ ಚಿತ್ರದ ತಾರೆಯರು ಬೆತ್ತಲಾಗುತ್ತಾರೆ. ನಾನು ನೀಲಿ ಚಿತ್ರದ ತಾರೆಯಲ್ಲ. ಯಾಕೆ ಈ ರೀತಿ ಪ್ರಶ್ನೆ ಮಾಡ್ತಿದ್ದೀರಾ.? ಪ್ರಶ್ನೆ ಮಾಡೋಕೂ ಮುನ್ನ ನಿಮಗೆ ಕಾಮನ್ ಸೆನ್ಸ್ ಇರಬೇಕು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರು ಬೆತ್ತಲೆ ಸಿನಿಮಾ ಮಾಡ್ತಿದ್ದಾರೆ? ಯಾಕೆ ಈ ರೀತಿ ಅಸಭ್ಯವಾಗಿ ಪ್ರಶ್ನೆಯನ್ನ ಕೇಳುತ್ತಿದ್ದೀರಾ? ಎಂದು ಹೇಳಿ ಸಂದರ್ಶನವನ್ನ ಮೊಟಕುಗೊಳಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಸ್ರೇಲ್‍ನಲ್ಲಿ ಕಿರುತೆರೆ ನಟಿ ಮಧುರಾ ನಾಯ್ಕ್ ಕುಟುಂಬಸ್ಥರ ಹತ್ಯೆ

    ಇಸ್ರೇಲ್‍ನಲ್ಲಿ ಕಿರುತೆರೆ ನಟಿ ಮಧುರಾ ನಾಯ್ಕ್ ಕುಟುಂಬಸ್ಥರ ಹತ್ಯೆ

    ಜೆರುಸಲೆಂ: ಇಸ್ರೇಲ್- ಪ್ಯಾಲೆಸ್ಟೈನ್ (Isreal- Palestine) ನಡುವೆ ಯುದ್ಧ ಜೋರಾಗಿದೆ. ಬಹುತೇಕ ಯುದ್ಧ ವಾಯು ಮಾರ್ಗದ ಮೂಲಕವೇ ನಡೆಯುತ್ತಿದೆ. ಇದೀಗ ಇಸ್ರೇಲ್‍ನಲ್ಲಿ ಹಮಾಸ್ ಬಂಡುಕೋರರ ಅಟ್ಟಹಾಸಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ.

     

    View this post on Instagram

     

    A post shared by Madhura Naik ???? (@madhura.naik)

    ಹಿಂದಿ ಕಿರುತೆರೆ ನಟಿ ಮಧುರಾ ನಾಯ್ಕ್ (Madhura Naik) ಕುಟುಂಬಸ್ಥರನ್ನು ಇಸ್ರೇಲ್‍ನಲ್ಲಿ ಹತ್ಯೆ ಮಾಡಲಾಗಿದೆ. ಈ ಬಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ನಟಿ ಮಧುರಾ ನಾಯ್ಕ್ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ಸಹೋದರಿ ಮತ್ತು ಆಕೆಯ ಪತಿಯನ್ನು ಹಮಾಸ್ (Hamas Terrorists) ಬಂಡೋಕೋರರು ಹತ್ಯೆ ಮಾಡಿದ್ದಾರೆ. ಮಕ್ಕಳ ಎದುರೇ ಅವರನ್ನು ಕೊಲ್ಲಲಾಗಿದೆ ಎಂದುನಟಿ ಮಧುರಾ ನಾಯಕ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಕಣ್ಣೀರಿಟ್ಟಿದ್ದಾರೆ.

    ಒಟ್ಟಿನಲ್ಲಿ ಒಂದು ಕಡೆ ಹಮಾಸ್ ನಿರಂತರ ರಾಕೆಟ್ ದಾಳಿ ನಡೆಸುತ್ತಿದ್ದರೆ ಮತ್ತೊಂದು ಕಡೆ ಇಸ್ರೇಲ್ ಯುದ್ಧ ವಿಮಾನಗಳ ಏರ್ ಸ್ಟೈಕ್ ಮಾಡುತ್ತಿದೆ. ಇಸ್ರೇಲ್‍ನ ಅಶ್ಕೆಲೋನ್ ಮೇಲೆ ಬುಧವಾರ ಹಮಾಸ್ ರಾಕೆಟ್ ದಾಳಿ ಮಾಡಿತ್ತು ಆದರೆ ಇಸ್ರೇಲ್‍ನ ಐರನ್ ಡೋಮ್ ರಕ್ಷಣಾ ಕ್ಷಿಪಣಿ ವ್ಯವಸ್ಥೆಯಿಂದ ರಾಕೆಟ್‍ಗಳನ್ನು ತಡೆದು ಗಾಳಿಯಲ್ಲಿ ಅವುಗಳನ್ನು ನಾಶ ಮಾಡಲಾಗಿದೆ. ಇದನ್ನೂ ಓದಿ: ನನ್ನ ಮಗಳು ಬದುಕಿದ್ದಾಳೆ, ಆಕೆಯನ್ನು ರಕ್ಷಿಸಿ – ಅರೆಬೆತ್ತಲೆ ಮೆರವಣಿಗೆಯಾಗಿದ್ದ ಶಾನಿ ಲೌಕ್ ತಾಯಿ ಮನವಿ

    ಇಸ್ರೇಲ್‍ನಲ್ಲಿ ಮೂವರು ಕೆನಡಿಯನ್ನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ನಾಪತ್ತೆಯಾಗಿದ್ದಾರೆ ಎಂದು ಕೆನಡಾದ ವಿದೇಶಾಂಗ ಸಚಿವ ಮೆಲಾನಿ ಜೋಲಿ ಹೇಳಿದ್ದಾರೆ. ಇಸ್ರೇಲ್, ಗಾಜಾ ಮತ್ತು ವೆಸ್ಟ್‍ಬ್ಯಾಂಕ್‍ನಲ್ಲಿ 4,700ಕ್ಕೂ ಹೆಚ್ಚು ಕೆನಡಾದ ನಾಗರಿಕರು ಮತ್ತು ಖಾಯಂ ನಿವಾಸಿಗಳು ಸರ್ಕಾರದಲ್ಲಿ ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ ಆರು ಜನರ ಸಂಪರ್ಕ ಇಲ್ಲ ಎಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಗ್ ಬಾಸ್ ಮನೆಯಲ್ಲಿ ಉರ್ಫಿ: ಕಾಸ್ಟ್ಯೂಮ್ ಕಂಡು ಬೆರಗಾದ ಮನೆಮಂದಿ

    ಬಿಗ್ ಬಾಸ್ ಮನೆಯಲ್ಲಿ ಉರ್ಫಿ: ಕಾಸ್ಟ್ಯೂಮ್ ಕಂಡು ಬೆರಗಾದ ಮನೆಮಂದಿ

    ನ್ನ ವಿಚಿತ್ರ ಕಾಸ್ಟ್ಯೂಮ್ (Costume) ಗಳಿಂದಲೇ ಹೆಸರಾಗಿರುವ ಉರ್ಫಿ ಜಾವೇದ್ (Urfi Javed), ಎರಡನೇ ಬಾರಿ ಬಿಗ್ ಬಾಸ್ (Big Boss) ಮನೆಗೆ ಹೊಸ್ತಿಲು ತುಳಿದಿದ್ದಾರೆ. ಬಿಗ್ ಬಾಸ್ ಮೂಲಕವೇ ಫೇಮಸ್ ಆಗಿದ್ದ ಉರ್ಫಿ ಆಗ ಮನೆಯಲ್ಲಿ ಇದ್ದದ್ದು ಕೇವಲ ಒಂದೇ ಒಂದು ವಾರ. ಆದರೂ, ಅವರು ಧರಿಸುತ್ತಿದ್ದ ಬಟ್ಟೆಯ ಕಾರಣದಿಂದಾಗಿಯೇ ಜನರನ್ನು ಸೆಳೆದಿದ್ದರು.

    ಇದೀಗ ಮತ್ತೆ ಉರ್ಫಿ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಹಿಂದಿ ಓಟಿಟಿಯಲ್ಲಿ (Big Boss Ott) ಪ್ರಸಾರ ಕಾಣುತ್ತಿರುವ ಬಿಗ್ ಬಾಸ್ ಮನೆ ಒಳಗೆ ವಿಚಿತ್ರ ಕಾಸ್ಟ್ಯೂಮ್ ಧರಿಸಿ ಬಂದಿದ್ದ ಉರ್ಫಿ ಕಂಡು ಮನೆಮಂದಿಯೇ ಬೆರಗಾಗಿದ್ದಾರೆ. ನಟ್ಟು, ಬೋಲ್ಟ್ ನಲ್ಲಿ ಬಿಗಿದಿದ್ದ ಬ್ರಾ ಧರಿಸಿಕೊಂಡು ಉರ್ಫಿ ಮನೆ ಪ್ರವೇಶ ಮಾಡಿದ್ದರು. ಜೊತೆಗೆ ಅವರ ಹೇರ್ ಸ್ಟೈಲ್ ಕಲರ್ ಕೂಡ ಕಣ್ಣಿಗೆ ಕುಕ್ಕುತ್ತಿತ್ತು.  ಇದನ್ನೂ ಓದಿ:ಗ್ಲ್ಯಾಮರ್ ಡಾಲ್‌ನಂತೆ ಕಂಗೊಳಿಸಿದ ಮೇಘಾ ಶೆಟ್ಟಿ

    ಈ ಹಿಂದೆ ತಾನು ಬಿಗ್ ಬಾಸ್ ಮನೆಗೆ ಬಂದಾಗ ಆಗಿನ ವಾತಾವರಣ ಹೇಗಿತ್ತು ಎನ್ನುವುದರ ಕುರಿತು ಉರ್ಫಿ ಮಾತನಾಡಿದ್ದಾರೆ. ಆ ಅನುಭವವನ್ನು ಹಲವರ ಜೊತೆ ಹಂಚಿಕೊಂಡಿದ್ದಾರೆ. ಅಲ್ಲದೇ ತಮ್ಮ ಕೆರಿಯರ್ ಗೆ ಬಿಗ್ ಬಾಸ್ ಮಾಡಿರುವ ಸಹಾಯದ ಬಗ್ಗೆಯೂ ಉರ್ಫಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

     

    ಈ ಬಾರಿ ಅವರು ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಹೋಗಿದ್ದಾರೆ. ಹಾಗಾಗಿ ಯಾವುದೇ ಟೆನ್ಷನ್ ಮಾಡಿಕೊಳ್ಳದೇ ಬಿಂದಾಸ್ ಆಗಿ ಮನೆಯೊಳಗೆ ಕಳೆದಿದ್ದಾರೆ. ತನ್ನನ್ನು ಮೆಚ್ಚುವವರ ಬಗ್ಗೆಯೂ ಹಲವು ಕಾಮೆಂಟ್ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಗ್ ಬಾಸ್ ಶೋನಲ್ಲೇ ‘ಧಮ್’ ಹೊಡೆದ ಸಲ್ಮಾನ್ ಖಾನ್

    ಬಿಗ್ ಬಾಸ್ ಶೋನಲ್ಲೇ ‘ಧಮ್’ ಹೊಡೆದ ಸಲ್ಮಾನ್ ಖಾನ್

    ಟಿಟಿ (OTT)ಗಾಗಿ ನಡೆಯುತ್ತಿರುವ ಹಿಂದಿಯ ಬಿಗ್ ಬಾಸ್ ಶೋನಲ್ಲಿ ಎಡವಟ್ಟೊಂದು ನಡೆದಿದೆ. ಈ ಶೋ ಅನ್ನು ನಿರೂಪಿಸುತ್ತಿರುವಾಗಲೇ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಸಿಗರೇಟು ಸೇವನೆ (Smoking) ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಆರೋಪಕ್ಕೆ ಪುಷ್ಠಿ ನೀಡುವಂತೆ ಅವರ ಕೈಯಲ್ಲಿ ಸಿಗರೇಟು ಇರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    ವಾರಾಂತ್ಯಕ್ಕೆ ಸಲ್ಮಾನ್ ಖಾನ್ (Salman Khan) ಬಿಗ್ ಬಾಸ್ ಮನೆಗೆ ಬಂದು, ಸ್ಪರ್ಧಾಳುಗಳ ಜೊತೆ ಮಾತನಾಡುತ್ತಾರೆ. ಸಾಕಷ್ಟು ಸಲ ಸ್ಪರ್ಧಿಗಳ ಕಾಲೆಳೆಯುತ್ತಾರೆ. ಒಂದೊಂದು ಬಾರಿ ಕೋಪವನ್ನೂ ಮಾಡಿಕೊಳ್ಳುತ್ತಾರೆ. ಮೊನ್ನೆಯಷ್ಟೇ ಲಿಪ್ ಲಾಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗರಂ ಆಗಿದ್ದ ಸಲ್ಮಾನ್, ‘ಇದೊಂದು ಫ್ಯಾಮಿಲಿ ಶೋ. ಎಲ್ಲೆ ಮೀರದಂತೆ ನಡೆದುಕೊಳ್ಳಿ’ ಎಂದು ಕಿವಿಮಾತು ಹೇಳಿದ್ದರು. ಅದಾದ ಎರಡೇ ವಾರಕ್ಕೆ ಸಿಗರೇಟು ಹಿಡಿದುಕೊಂಡಿರುವ ಸಲ್ಮಾನ್ ಫೋಟೋ ವೈರಲ್ ಆಗಿದೆ.

    ಸಲ್ಮಾನ್ ಗೆ ಟಾಂಗ್ ಕೊಟ್ಟಿದ್ದ ನಟಿ

    ಬಿಗ್ ಬಾಸ್ ನಲ್ಲಿ ನಡೆದ ಲಿಪ್ ಲಾಕ್ ಘಟನೆಯು ಪರ ವಿರೋಧದ ಮಾತುಗಳಿಗೆ ಕಾರಣವಾಗುತ್ತಿದೆ. ಈ ಶೋ ಅನ್ನು ನಡೆಸಿಕೊಡುತ್ತಿರುವ ಸಲ್ಮಾನ್ ಖಾನ್ ಲಿಪ್ ಲಾಕ್ ಮಾಡಿಕೊಂಡಿದ್ದ ನಟಿ ಆಕಾಂಕ್ಷಾ ಪುರಿ ಮತ್ತು ಮಾಡೆಲ್ ಜದ್ ಹದೀದ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದು ಫ್ಯಾಮಿಲಿ ಶೋ ಅಸಭ್ಯವಾಗಿ ನಡೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದ್ದರು.

    ಸಲ್ಮಾನ್ ಖಾನ್ ಆಡಿದ ಮಾತಿಗೆ ಬಿಗ್ ಬಾಸ್ ಮನೆಯಿಂದ ಆಚೆ ಬಂದಿರುವ ಆಕಾಂಕ್ಷ ಪುರಿ ತಿರುಗೇಟು ನೀಡಿದ್ದಾರೆ. ಅಸಭ್ಯದ ಬಗ್ಗೆ ಮಾತನಾಡುವ ನೀವು, ಆ ದೃಶ್ಯವನ್ನು ಪ್ರಸಾರ ಮಾಡಿದವರ ವಿರುದ್ಧ ಯಾಕೆ ಮಾತನಾಡುತ್ತಿಲ್ಲ ಎಂದಿದ್ದಾರೆ. ಫ್ಯಾಮಿಲಿ ಶೋ ಎನ್ನುವ ಎಚ್ಚರಿಕೆಯ ನಡುವೆಯೂ ಅದನ್ನು ಪ್ರಸಾರ ಮಾಡಬಾರದಿತ್ತು ಎಂದು ಸಲ್ಮಾನ್ ಮಾತಿಗೆ ತಿರುಗೇಟು ನೀಡಿದ್ದಾರೆ.

    ಬಿಗ್ ಬಾಸ್ ಶೋನಲ್ಲಿ ನಟಿ ಆಕಾಂಕ್ಷಾ ಪುರಿ ಮತ್ತು ಮಾಡೆಲ್ ಜದ್ ಹದೀದ್ (Jad Hadid) ಲಿಪ್ ಲಾಕ್ ಮಾಡಿಕೊಂಡ ವಿಚಾರ ಭಾರೀ ಸದ್ದು ಮಾಡಿತ್ತು. ಮೂವತ್ತು ಸೆಕೆಂಡ್ ಗಳ ಕಾಲ ಇಬ್ಬರೂ ಲಿಪ್ ಲಾಕ್ (Lip Lock) ಮಾಡಿಕೊಂಡಿದ್ದರು. ಆ ವಿಡಿಯೋ ಕೂಡ ವೈರಲ್ ಆಗಿತ್ತು. ಈ ವಿಚಾರವಾಗಿ ಸಲ್ಮಾನ್ ಖಾನ್ ಕೂಡ ಬೇಸರ ವ್ಯಕ್ತಪಡಿಸಿದ್ದರು. ಇದೊಂದು ಫ್ಯಾಮಿಲಿ ಶೋ ಎಲ್ಲೆ ಮೀರದಂತೆ ನಡೆದುಕೊಳ್ಳಿ ಎಂದು ಕಿವಿಮಾತು ಹೇಳಿದ್ದರು.

    ಲಿಪ್ ಲಾಕ್ ನನಗೆ ಬೇಸರವಿಲ್ಲ ಎಂದ ಆಕಾಂಕ್ಷಾ

    ಲಿಪ್ ಲಾಕ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಿಗ್ ಬಾಸ್ (Bigg Boss)  ಮನೆಯಿಂದ ಆಕಾಂಕ್ಷಾ ಪುರಿ (Akanksha Puri) ಹೊರ ಬಂದಿದ್ದರು. ದೊಡ್ಮನೆಯಲ್ಲಿ ಚೆನ್ನಾಗಿ ಆಟ ಆಡದೇ ಇರುವ ಕಾರಣಕ್ಕಾಗಿ ಅವರನ್ನು ಎಲಿಮಿನೇಟ್ ಮಾಡಲಾಗಿತ್ತು. ಬಿಗ್ ಬಾಸ್ ಮನೆಯಿಂದ ಆಕಾಂಕ್ಷಾ ಆಚೆ ಬರುತ್ತಿದ್ದಂತೆಯೇ ಲಿಪ್ ಲಾಪ್ ಬಗ್ಗೆಯೇ ಮಾಧ್ಯಮಗಳು ಪ್ರಶ್ನೆ ಮಾಡಿದ್ದವು.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಆಕಾಂಕ್ಷಾ, ‘ಲಿಪ್ ಲಾಕ್ ಮಾಡಿಕೊಂಡಿದ್ದಕ್ಕೆ ನನಗೆ ಯಾವುದೇ ಬೇಸರವಿಲ್ಲ. ಅದೊಂದು ಟಾಸ್ಕ್ ಆಗಿತ್ತು. ಅದನ್ನು ಟಾಸ್ಕ್ ಅಂದುಕೊಂಡೆ ನಾನು ಅದಕ್ಕೆ ಸಮ್ಮತಿಸಿದ್ದೆ ಮತ್ತು ಮಾಡಿದ್ದೆ. ಈ ಕುರಿತು ಯಾವುದೇ ಬೇಸರ ನನಗಿಲ್ಲ’ ಎಂದಿದ್ದರು.

     

    ಲಿಪ್ ಲಾಕ್ ಮಾಡಬೇಕು ಎನ್ನುವುದು ಟಾಸ್ಕ್ ಅಲ್ಲದೇ ಇದ್ದರೂ, ಮನೆಯಲ್ಲಿದ್ದವರು ಪ್ರಚೋದಿಸಿದರು ಎನ್ನುವ ಕಾರಣಕ್ಕಾಗಿ ನಡೆದ ಘಟನೆ ಅದಾಗಿದ್ದರೂ ಆಕಾಂಕ್ಷಾ ಮಾತ್ರ ಅದೊಂದು ಟಾಸ್ಕ್ ಎಂದು ಸಮರ್ಥಿಸಿದ್ದರು. ಆ ಟಾಸ್ಕ್ ಅನ್ನು ನಾನು ಮಾಡಲೇಬೇಕಿತ್ತು ಎಂದು ಹೇಳಿಕೊಂಡಿದ್ದರು.  ಜನ ಏನೇ ಅಂದರೂ, ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿದರು ನಾನು ನನ್ನ ಕೆಲಸ ಮಾಡಿದ್ದೇನೆ ಎಂದಿದ್ದಾರೆ ಆಕಾಂಕ್ಷಾ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಗ್ ಬಾಸ್ ಮನೆಯಲ್ಲಿ ಲಿಪ್ ಲಾಕ್ ಮಾಡಿದ್ದಕ್ಕೆ ಬೇಸರವಿಲ್ಲ : ನಟಿ ಆಕಾಂಕ್ಷಾ

    ಬಿಗ್ ಬಾಸ್ ಮನೆಯಲ್ಲಿ ಲಿಪ್ ಲಾಕ್ ಮಾಡಿದ್ದಕ್ಕೆ ಬೇಸರವಿಲ್ಲ : ನಟಿ ಆಕಾಂಕ್ಷಾ

    ಹಿಂದಿ (Hindi)  ಓಟಿಟಿಯಲ್ಲಿ (OTT) ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋನಲ್ಲಿ ನಟಿ ಆಕಾಂಕ್ಷಾ ಪುರಿ ಮತ್ತು ಮಾಡೆಲ್ ಜದ್ ಹದೀದ್ (Jad Hadid) ಲಿಪ್ ಲಾಕ್ ಮಾಡಿಕೊಂಡ ವಿಚಾರ ಭಾರೀ ಸದ್ದು ಮಾಡಿತ್ತು. ಮೂವತ್ತು ಸೆಕೆಂಡ್ ಗಳ ಕಾಲ ಇಬ್ಬರೂ ಲಿಪ್ ಲಾಕ್ (Lip Lock) ಮಾಡಿಕೊಂಡಿದ್ದರು. ಆ ವಿಡಿಯೋ ಕೂಡ ವೈರಲ್ ಆಗಿತ್ತು. ಮೊನ್ನೆ ಶನಿವಾರ ಈ ವಿಚಾರವಾಗಿ ಸಲ್ಮಾನ್ ಖಾನ್ ಕೂಡ ಬೇಸರ ವ್ಯಕ್ತಪಡಿಸಿದ್ದರು. ಇದೊಂದು ಫ್ಯಾಮಿಲಿ ಶೋ ಎಲ್ಲೆ ಮೀರದಂತೆ ನಡೆದುಕೊಳ್ಳಿ ಎಂದು ಕಿವಿಮಾತು ಹೇಳಿದ್ದರು.

    ಲಿಪ್ ಲಾಕ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಿಗ್ ಬಾಸ್ (Bigg Boss)  ಮನೆಯಿಂದ ಆಕಾಂಕ್ಷಾ ಪುರಿ (Akanksha Puri) ಹೊರ ಬಂದಿದ್ದಾರೆ. ದೊಡ್ಮನೆಯಲ್ಲಿ ಚೆನ್ನಾಗಿ ಆಟ ಆಡದೇ ಇರುವ ಕಾರಣಕ್ಕಾಗಿ ಅವರನ್ನು ಎಲಿಮಿನೇಟ್ ಮಾಡಲಾಗಿದೆ. ಬಿಗ್ ಬಾಸ್ ಮನೆಯಿಂದ ಆಕಾಂಕ್ಷಾ ಆಚೆ ಬರುತ್ತಿದ್ದಂತೆಯೇ ಲಿಪ್ ಲಾಪ್ ಬಗ್ಗೆಯೇ ಮಾಧ್ಯಮಗಳು ಪ್ರಶ್ನೆ ಮಾಡಿವೆ. ಇದನ್ನೂ ಓದಿ:ನಟಿ ಅನು ಗೌಡ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ- ಆಸ್ಪತ್ರೆಗೆ ದಾಖಲು

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಆಕಾಂಕ್ಷಾ, ‘ಲಿಪ್ ಲಾಕ್ ಮಾಡಿಕೊಂಡಿದ್ದಕ್ಕೆ ನನಗೆ ಯಾವುದೇ ಬೇಸರವಿಲ್ಲ. ಅದೊಂದು ಟಾಸ್ಕ್ ಆಗಿತ್ತು. ಅದನ್ನು ಟಾಸ್ಕ್ ಅಂದುಕೊಂಡೆ ನಾನು ಅದಕ್ಕೆ ಸಮ್ಮತಿಸಿದ್ದೆ ಮತ್ತು ಮಾಡಿದ್ದೆ. ಈ ಕುರಿತು ಯಾವುದೇ ಬೇಸರ ನನಗಿಲ್ಲ’ ಎಂದಿದ್ದಾರೆ.

     

    ಲಿಪ್ ಲಾಕ್ ಮಾಡಬೇಕು ಎನ್ನುವುದು ಟಾಸ್ಕ್ ಅಲ್ಲದೇ ಇದ್ದರೂ, ಮನೆಯಲ್ಲಿದ್ದವರು ಪ್ರಚೋದಿಸಿದರು ಎನ್ನುವ ಕಾರಣಕ್ಕಾಗಿ ನಡೆದ ಘಟನೆ ಅದಾಗಿದ್ದರೂ ಆಕಾಂಕ್ಷಾ ಮಾತ್ರ ಅದೊಂದು ಟಾಸ್ಕ್ ಎಂದು ಸಮರ್ಥಿಸಿದ್ದಾರೆ. ಆ ಟಾಸ್ಕ್ ಅನ್ನು ನಾನು ಮಾಡಲೇಬೇಕಿತ್ತು ಎಂದು ಹೇಳಿಕೊಂಡಿದ್ದಾರೆ.  ಜನ ಏನೇ ಅಂದರೂ, ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿದರು ನಾನು ನನ್ನ ಕೆಲಸ ಮಾಡಿದ್ದೇನೆ ಎಂದಿದ್ದಾರೆ ಆಕಾಂಕ್ಷಾ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಗ್ ಬಾಸ್ ಮನೆಯಲ್ಲಿ ಲಿಪ್ ಲಾಕ್ : ಬೇಸರಿಸಿಕೊಂಡ ಸಲ್ಮಾನ್ ಖಾನ್

    ಬಿಗ್ ಬಾಸ್ ಮನೆಯಲ್ಲಿ ಲಿಪ್ ಲಾಕ್ : ಬೇಸರಿಸಿಕೊಂಡ ಸಲ್ಮಾನ್ ಖಾನ್

    ಹಿಂದಿ ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಬ್ಬರು ಮೂವತ್ತು ಸೆಕೆಂಡ್ ಕಾಲ ಲಿಪ್ ಲಾಕ್ ಮಾಡಿಕೊಂಡಿದ್ದರು. ಇದು ಚರ್ಚೆಗೂ ಗ್ರಾಸವಾಗಿತ್ತು. ಈ ಕುರಿತು ಕಾರ್ಯಕ್ರಮ ನಡೆಸಿಕೊಡುವ ಸಲ್ಮಾನ್ ಖಾನ್ (Salman Khan) ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ನಿರೀಕ್ಷೆಯಂತೆ ಸಲ್ಮಾನ್ ಬೇಸರ ವ್ಯಕ್ತ ಪಡಿಸಿದ್ದಾರೆ. ಇದು ಫ್ಯಾಮಿಲಿ ಶೋ ಆಗಿರುವುದರಿಂದ ಆ ರೀತಿಯ ಘಟನೆಗಳನ್ನು ಸಹಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

    ಬಿಗ್ ಬಾಸ್ (Bigg Boss OTT)  ಮನೆಯಲ್ಲಿ ಏನು ಆಗಬಾರದು ಎಂದು ಪದೇ ಪದೇ ಸಲ್ಮಾನ್ ಖಾನ್ ಹೇಳುತ್ತಿದ್ದರೋ ಅದೇ ಆಗಿತ್ತು. ಇಬ್ಬರು ಸ್ಪರ್ಧಿಗಳ ಮುತ್ತಿನಾಟಕ್ಕೆ ಪ್ರೇಕ್ಷಕರು ತಲೆತಿರುಗಿ ಬಿದ್ದಿದ್ದರು. ಬಿಗ್ ಬಾಸ್ ಇದೊಂದು ಫ್ಯಾಮಿಲಿ ಶೋ. ದಯವಿಟ್ಟು ಎಲ್ಲೆ ಮೀರದಂತೆ ನಡೆದುಕೊಳ್ಳಿ ಎಂದು ಸಾಕಷ್ಟು ಬಾರಿ ಸಲ್ಮಾನ್ ಖಾನ್ ನಿರೂಪಣಾ ವೇಳೆಯಲ್ಲಿ ಹೇಳಿದ್ದರು. ಆದರೂ ಆಗಬಾರದ್ದು ಆಗಿ ಹೋಗಿತ್ತು. ಆದ ಘಟನೆಗೆ ಅನೇಕ ಪ್ರೇಕ್ಷಕರು ಛೀಮಾರಿ ಹಾಕಿದ್ದಾರೆ.

    ಮೊನ್ನೆ ಬಿಗ್ ಬಾಸ್ ಮನೆ ಸಖತ್ ಬಿಸಿ ಬಿಸಿಯಾಗಿತ್ತು. ಒಂದು ಕಡೆ ಆಕಾಂಕ್ಷಾ (Akanksha)  ಮತ್ತು ಜದ್ (Jad) ಏಕಾಂತದಲ್ಲಿ ಕೂತಿದ್ದರು. ಮತ್ತೊಂದು ಕಡೆ ಪೂಜಾ ಭಟ್ (Pooja Bhatt) ತಮ್ಮದೇ ಧ್ಯಾನದಲ್ಲಿ ಮಗ್ನರಾಗಿದ್ದರು. ಒಂದು ರೀತಿಯಲ್ಲಿ ಬಿಗ್ ಬಾಸ್ ಮನೆ ಪಡ್ಡೆಗಳು ರೊಮ್ಯಾಂಟಿಕ್ ಪಾರ್ಕ್ ಆಗಿತ್ತು. ಇಂತಹ ಸಮಯದಲ್ಲಿ ಸಚ್ ದೇವ್ ಸುಮ್ಮನಿರದೇ ‘ಆಕಾಂಕ್ಷ ಅವರು ಜಿದ್‍ ಗೆ ಕಿಸ್ ಮಾಡಬೇಕು’ ಎಂದು ಸವಾಲು ಎಸೆದೇ ಬಿಟ್ಟರು.

    ಸಚ್ ದೇವ್ (Sach Dev) ಇಂಥದ್ದೊಂದು ಬೇಡಿಕೆ ಇಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆಕಾಂಕ್ಷ ಮತ್ತು ಜದ್ ಗೆ ಇದು ಅನಿರೀಕ್ಷಿತವೂ ಅಲ್ಲ. ಏಕೆಂದರೆ ಅವರಿಬ್ಬರ ಮಧ್ಯ ಏನೋ ನಡೆಯುತ್ತಿದೆ ಎನ್ನುವಂತೆ ಸಾಕಷ್ಟು ಭಾರೀ ಅವರೇ ತೋರಿಸಿಕೊಂಡಿದ್ದಾರೆ. ಹಾಗಾಗಿ ಆಕಾಂಕ್ಷ ಮತ್ತು ಜಿದ್ ಅದನ್ನು ಮಾಡುತ್ತಾರೆ ಎನ್ನುವುದು ಸಚ್ ದೇವ್ ಊಹೆ ಆಗಿತ್ತು. ಈತನ ಬೇಡಿಕೆಯಂತೆ ಇಬ್ಬರೂ ಬರೋಬ್ಬರಿ 30 ಸೆಕೆಂಡ್ ಗಳ ಕಾಲ್ ಲಿಪ್ ಲಾಕ್ (Lip Lock) ನಲ್ಲೇ ಇದ್ದರು. ಇದನ್ನೂ ಓದಿ:ರೂಪೇಶ್ ಶೆಟ್ಟಿ ‘ಸರ್ಕಸ್’ಗೆ ಬಿಗ್ ಬಾಸ್ ಟೀಮ್ ಸಾಥ್

    ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ ಅದನ್ನು ಸದುಪಯೋಗ ಪಡಿಸಿಕೊಂಡ ಆಕಾಂಕ್ಷ ಮತ್ತು ಜದ್ ಬರೋಬ್ಬರಿ ಅರ್ಧ ನಿಮಿಷಗಳ ಕಾಲ್ ಲಿಪ್ ಲಾಕ್ ಮಾಡಿಕೊಂಡಿದ್ದರು. ಅದನ್ನು ಕಂಡು ಪೂಜಾ ಭಟ್ ಇರಿಸುಮುರುಸುಗೊಂಡರು. ಥೋ.. ಸಾಕು ನಿಲ್ಲಿಸಿ ಎಂದು ಕೂಗಾಡಿದರು. ಎಲ್ಲರೂ ಅದನ್ನು ಎಂಜಾಯ್ ಮಾಡುತ್ತಿದ್ದರಿಂದ ಪೂಜಾ ಕೂಗು ಯಾರಿಗೂ ಕೇಳಿಸದಂತಾಯಿತು.

     

    ಆಕಾಂಕ್ಷಾ ಮತ್ತು ಜದ್ ಲಿಪ್ ಲಾಕ್ ಮಾಡಿಕೊಂಡಿದ್ದ ವಿಡಿಯೋ ವೈರಲ್ ಆಗಿದೆ. ಅನೇಕರು ಅನೇಕ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಕೆಲವರು ಸ್ಕ್ರಿಪ್ಟ್ ರೀತಿಯಲ್ಲೇ ನಡೆದುಕೊಂಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಇಂಥದ್ದನ್ನು ಮಾಡುವುದಕ್ಕಾಗಿಯೇ ಇವರು ಇಲ್ಲಿಗೆ ಬಂದಿರುತ್ತಾರೆ ಎಂದು ಕಾಲೆಳೆದಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಗ್ ಬಾಸ್ ಮನೆಯಲ್ಲಿ 30 ಸೆಕೆಂಡ್ ಲಿಪ್ ಲಾಕ್: ಕಣ್ಮುಚ್ಚಿಕೊಂಡ  ಪೂಜಾ ಭಟ್

    ಬಿಗ್ ಬಾಸ್ ಮನೆಯಲ್ಲಿ 30 ಸೆಕೆಂಡ್ ಲಿಪ್ ಲಾಕ್: ಕಣ್ಮುಚ್ಚಿಕೊಂಡ ಪೂಜಾ ಭಟ್

    ಹಿಂದಿ ಬಿಗ್ ಬಾಸ್ (Bigg Boss OTT)  ಮನೆಯಲ್ಲಿ ಏನು ಆಗಬಾರದು ಎಂದು ಪದೇ ಪದೇ ಸಲ್ಮಾನ್ ಖಾನ್ ಹೇಳುತ್ತಿದ್ದರೋ ಅದೇ ಆಗಿದೆ. ಇಬ್ಬರು ಸ್ಪರ್ಧಿಗಳ ಮುತ್ತಿನಾಟಕ್ಕೆ ಪ್ರೇಕ್ಷಕರು ತಲೆತಿರುಗಿ ಬಿದ್ದಿದ್ದಾರೆ. ಬಿಗ್ ಬಾಸ್ ಇದೊಂದು ಫ್ಯಾಮಿಲಿ ಶೋ. ದಯವಿಟ್ಟು ಎಲ್ಲೆ ಮೀರದಂತೆ ನಡೆದುಕೊಳ್ಳಿ ಎಂದು ಸಾಕಷ್ಟು ಬಾರಿ ಸಲ್ಮಾನ್ ಖಾನ್ ನಿರೂಪಣಾ ವೇಳೆಯಲ್ಲಿ ಹೇಳಿದ್ದಾರೆ. ಆದರೆ, ನಿನ್ನೆ ನಡೆದ ಘಟನೆಗೆ ಅನೇಕ ಪ್ರೇಕ್ಷಕರು ಛೀಮಾರಿ ಹಾಕಿದ್ದಾರೆ.

    ನಿನ್ನೆ ಬಿಗ್ ಬಾಸ್ ಮನೆ ಸಖತ್ ಬಿಸಿ ಬಿಸಿಯಾಗಿತ್ತು. ಒಂದು ಕಡೆ ಆಕಾಂಕ್ಷಾ (Akanksha)  ಮತ್ತು ಜದ್ (Jad) ಏಕಾಂತದಲ್ಲಿ ಕೂತಿದ್ದರು. ಮತ್ತೊಂದು ಕಡೆ ಪೂಜಾ ಭಟ್ (Pooja Bhatt) ತಮ್ಮದೇ ಧ್ಯಾನದಲ್ಲಿ ಮಗ್ನರಾಗಿದ್ದರು. ಒಂದು ರೀತಿಯಲ್ಲಿ ಬಿಗ್ ಬಾಸ್ ಮನೆ ಪಡ್ಡೆಗಳು ರೊಮ್ಯಾಂಟಿಕ್ ಪಾರ್ಕ್ ಆಗಿತ್ತು. ಇಂತಹ ಸಮಯದಲ್ಲಿ ಸಚ್ ದೇವ್ ಸುಮ್ಮನಿರದೇ ‘ಆಕಾಂಕ್ಷ ಅವರು ಜಿದ್‍ ಗೆ ಕಿಸ್ ಮಾಡಬೇಕು’ ಎಂದು ಸವಾಲು ಎಸೆದೇ ಬಿಟ್ಟರು.

    ಸಚ್ ದೇವ್ (Sach Dev) ಇಂಥದ್ದೊಂದು ಬೇಡಿಕೆ ಇಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆಕಾಂಕ್ಷ ಮತ್ತು ಜದ್ ಗೆ ಇದು ಅನಿರೀಕ್ಷಿತವೂ ಅಲ್ಲ. ಏಕೆಂದರೆ ಅವರಿಬ್ಬರ ಮಧ್ಯ ಏನೋ ನಡೆಯುತ್ತಿದೆ ಎನ್ನುವಂತೆ ಸಾಕಷ್ಟು ಭಾರೀ ಅವರೇ ತೋರಿಸಿಕೊಂಡಿದ್ದಾರೆ. ಹಾಗಾಗಿ ಆಕಾಂಕ್ಷ ಮತ್ತು ಜಿದ್ ಅದನ್ನು ಮಾಡುತ್ತಾರೆ ಎನ್ನುವುದು ಸಚ್ ದೇವ್ ಊಹೆ ಆಗಿತ್ತು. ಈತನ ಬೇಡಿಕೆಯಂತೆ ಇಬ್ಬರೂ ಬರೋಬ್ಬರಿ 30 ಸೆಕೆಂಡ್ ಗಳ ಕಾಲ್ ಲಿಪ್ ಲಾಕ್ (Lip Lock) ನಲ್ಲೇ ಇದ್ದರು. ಇದನ್ನೂ ಓದಿ:‘ಎಮರ್ಜೆನ್ಸಿ’ ನಂತರದ ಸಿನಿಮಾ ಸುಳಿವು ಕೊಟ್ಟ ಕಂಗನಾ ರಣಾವತ್

    ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ ಅದನ್ನು ಸದುಪಯೋಗ ಪಡಿಸಿಕೊಂಡ ಆಕಾಂಕ್ಷ ಮತ್ತು ಜದ್ ಬರೋಬ್ಬರಿ ಅರ್ಧ ನಿಮಿಷಗಳ ಕಾಲ್ ಲಿಪ್ ಲಾಕ್ ಮಾಡಿಕೊಂಡಿದ್ದರು. ಅದನ್ನು ಕಂಡು ಪೂಜಾ ಭಟ್ ಇರಿಸುಮುರುಸುಗೊಂಡರು. ಥೋ.. ಸಾಕು ನಿಲ್ಲಿಸಿ ಎಂದು ಕೂಗಾಡಿದರು. ಎಲ್ಲರೂ ಅದನ್ನು ಎಂಜಾಯ್ ಮಾಡುತ್ತಿದ್ದರಿಂದ ಪೂಜಾ ಕೂಗು ಯಾರಿಗೂ ಕೇಳಿಸದಂತಾಯಿತು.

    ಆಕಾಂಕ್ಷಾ ಮತ್ತು ಜದ್ ಲಿಪ್ ಲಾಕ್ ಮಾಡಿಕೊಂಡಿದ್ದ ವಿಡಿಯೋ ವೈರಲ್ ಆಗಿದೆ. ಅನೇಕರು ಅನೇಕ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಸ್ಕ್ರಿಪ್ಟ್ ರೀತಿಯಲ್ಲೇ ನಡೆದುಕೊಂಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಇಂಥದ್ದನ್ನು ಮಾಡುವುದಕ್ಕಾಗಿಯೇ ಇವರು ಇಲ್ಲಿಗೆ ಬಂದಿರುತ್ತಾರೆ ಎಂದು ಕಾಲೆಳೆದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಗ್ ಬಾಸ್ ಓಟಿಟಿ 2: ಶುರುವಾದ 12 ಗಂಟೆ ಒಳಗೆ ಪುನೀತ್ ಕುಮಾರ್ ಔಟ್

    ಬಿಗ್ ಬಾಸ್ ಓಟಿಟಿ 2: ಶುರುವಾದ 12 ಗಂಟೆ ಒಳಗೆ ಪುನೀತ್ ಕುಮಾರ್ ಔಟ್

    ಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ (Hindi) ಬಿಗ್ ಬಾಸ್ ಓಟಿಟಿ ಸೀಸನ್ 2 (Bigg Boss OTT 2) ಶುರುವಾಗಿ ಕೇವಲ 12 ಗಂಟೆ ಒಳಗೆ ಒಬ್ಬರು ಸ್ಪರ್ಧಿಯನ್ನು ಮನೆಯಿಂದ ಹೊರ ಹಾಕಿದ್ದಾರೆ ಬಿಗ್ ಬಾಸ್. ಈ ಸೀಸನ್ ನ ಕೊನೆಯ ಸ್ಪರ್ಧಿಯಾಗಿ ಮನೆಯೊಳಗೆ ಕಾಲಿಟ್ಟಿದ್ದ ಪುನೀತ್ ಕುಮಾರ್, ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೊದಲ ಸ್ಪರ್ಧಿಯಾಗಿದ್ದಾರೆ. ಪುನೀತ್ ನಡವಳಿಕೆ ಇಷ್ಟವಾಗದೇ ಇರುವ ಕಾರಣದಿಂದಾಗಿ ಅವರನ್ನು ಎಲಿಮಿನೇಟ್ (Eliminate) ಮಾಡಲಾಗಿದೆ.

    ಪುನೀತ್ ಸೂಪರ್ ಸ್ಟಾರ್ ಎಂದು ತನ್ನನ್ನೇ ತಾನು ಕರೆದುಕೊಳ್ಳುತ್ತಿದ್ದ ಪುನೀತ್ (Puneet Kumar), ನಿರಾಸೆಯಿಂದಲೇ ಮನೆಯಿಂದ ಆಚೆ ಬಂದಿದ್ದಾರೆ. ಬೈಕ್ ರೇಸರ್ ಆಗಿ ಗುರುತಿಸಿಕೊಂಡಿರುವ ಇವರು, ಮೊದಲ ದಿನವೇ ಇತರ ಸ್ಪರ್ಧಿಗಳ ಜೊತೆ ಹೊಂದಾಣಿಕೆಯಾಗಲು ಕಷ್ಟ ಪಡುತ್ತಿದ್ದರು. ಒಂದು ರೀತಿಯಲ್ಲಿ ಇತರರಿಗೆ ಕಿರಿಕಿರಿ ಆಗುವಂತೆ ನಡೆದುಕೊಳ್ಳುತ್ತಿದ್ದರು. ಇದನ್ನೂ ಓದಿ:ನಟ ಸಂಚಾರಿ ವಿಜಯ್‌ ಅವರ 2ನೇ ವರ್ಷದ ಪುಣ್ಯಸ್ಮರಣೆ

    ಈ ಸೀಸನ್ ನಲ್ಲಿ ನೀಲಿ ಸಿನಿಮಾಗಳ ಮಾಜಿ ತಾರೆ ಮಿಯಾ ಖಲೀಫಾ (Mia Khalifa) ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈವರೆಗೂ ಮಿಯಾ ಮನೆ ಒಳಗೆ ಪ್ರವೇಶ ಮಾಡಿಲ್ಲ. ಅಚ್ಚರಿ ಎನ್ನುವಂತೆ ಎಂಟ್ರಿ ಕೊಡಲಿದ್ದಾರಾ ಕಾದು ನೋಡಬೇಕು. ಮಿಯಾ ಪ್ರವೇಶಿಸಿದರೆ ಮನೆಯ ವಾತಾವರಣ ಹೇಗೆಲ್ಲ ಇರಲಿದೆ ಎನ್ನುವ ಕುರಿತು ಕುತೂಹಲ ಮೂಡಿದೆ. ಈ ಹಿಂದೆ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಕೂಡ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿದ್ದರು.

     

    ಮೊದಲ ಸೀಸನ್ ಬಿಗ್ ಬಾಸ್ ಒಟಿಟಿಯನ್ನ ಕರಣ್ ಜೋಹರ್ ನಿರೂಪಣೆ ಮಾಡಿದ್ದರು. ಆದರೆ 2ನೇ ಸೀಸನ್‌ನ ಸಲ್ಮಾನ್ ಖಾನ್ (Salman Khan) ನಿರೂಪಣೆ  ಮಾಡುತ್ತಿದ್ದಾರೆ. ಜೊತೆಗೆ ಸಲ್ಮಾನ್ ಈ ಸೀಸನ್ ಹೇಗಿರಲಿದೆ ಎನ್ನುವ ಕುರಿತು ಮಾತನಾಡಿದ್ದಾರೆ. ವಿಚಿತ್ರ ಮನಸ್ಥಿತಿಯ ಸ್ಪರ್ಧಿಗಳು ಈಗಾಗಲೇ ಮನೆಗೆ ಪ್ರವೇಶ ಮಾಡಿದ್ದಾರೆ.