Tag: hindi wed series

  • ಹಿಂದಿ ವೆಬ್ ಸಿರೀಸ್‌ನಲ್ಲಿ `ರಂಗಿತರಂಗ’ ನಟಿ ರಾಧಿಕಾ ನಾರಾಯಣ್

    ಹಿಂದಿ ವೆಬ್ ಸಿರೀಸ್‌ನಲ್ಲಿ `ರಂಗಿತರಂಗ’ ನಟಿ ರಾಧಿಕಾ ನಾರಾಯಣ್

    `ರಂಗಿತರಂಗ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಟಿ ರಾಧಿಕಾ ನಾರಾಯಣ್, ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಹಿಂದಿ ವೆಬ್ ಸರಣಿಯತ್ತ ನಟಿ ರಾಧಿಕಾ ಮುಖ ಮಾಡಿದ್ದಾರೆ.

    ನಿರೂಪ್ ಭಂಡಾರಿ ನಟನೆಯ `ರಂಗಿತರಂಗ’ ಚಿತ್ರದ ಮೂಲಕ ನಾಯಕಿಯಾಗುವ ಮೂಲಕ ಚಂದನವನಕ್ಕೆ ಪರಿಚಿತರಾದ ರಾಧಿಕಾ, ಬಳಿಕ ಮುಂದಿನ ನಿಲ್ದಾಣ, ಯೂ ಟರ್ನ್, ಶಿವಾಜಿ ಸುರತ್ಕಲ್ ಚಿತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಸದಾ ಭಿನ್ನ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ರಾಧಿಕಾ ಇದೀಗ ಹಿಂದಿ ವೆಬ್ ಸಿರೀಸ್‌ನಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ: ಸರಕಾರಕ್ಕೆ ಟೀಸರ್ ಮೂಲಕ ಟಾಂಗ್ ಕೊಟ್ಟ ಟಾಲಿವುಡ್ ಬಾಲಕೃಷ್ಣ

    ಮಂಜು ನಂದನ್ ನಿರ್ದೇಶನದ `ಆಯ್ನಾ’ ವೆಬ್ ಸರಣಿಯಲ್ಲಿ ರಾಧಿಕಾ ನಟಿಸಲಿದ್ದಾರೆ. `ಆಯ್ನಾ’ ಚಿತ್ರದಲ್ಲಿನ ರಾಧಿಕಾ ಲುಕ್ ಇದೀಗ ರಿವೀಲ್ ಆಗಿದ್ದು, ಜೈಲಿನಲ್ಲಿ ಖೈದಿಯ ಲುಕ್‌ನಲ್ಲಿ ರಾಧಿಕಾ ಕಾಣಿಸಿಕೊಂಡಿದ್ದು, ಪೋಸ್ಟರ್ ಲುಕ್ಕಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ರಂಗಿತರಂಗ ಚಿತ್ರದ ನಟಿಯನ್ನು ಹೊಸ ಅವತಾರದಲ್ಲಿ ನೋಡಲು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.