ಬಾಲಿವುಡ್ (Bollywood) ನಿರ್ಮಾಪಕ- ನಿರ್ದೇಶಕ ದಿವಂಗತ ಯಶ್ ಚೋಪ್ರಾ (Yash Chopra) ಮಡದಿ ಪಮೇಲಾ ಚೋಪ್ರಾ (Pamela Chopra) ಅವರು ನಿಧನರಾಗಿದ್ದಾರೆ. ಚಿತ್ರರಂಗದಲ್ಲಿ ಗಾಯಕಿಯಾಗಿ ಪಮೇಲಾ ಚೋಪ್ರಾ ಗುರುತಿಸಿಕೊಂಡಿದ್ದರು. ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ದಾಖಲಾಗಿ ಕಳೆದ 15 ದಿನಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು (ಏಪ್ರಿಲ್ 20) ಬೆಳಗ್ಗೆ ಪಮೇಲಾ ಅವರು ನಿಧನರಾಗಿದ್ದಾರೆ. ಇದನ್ನೂ ಓದಿ:ಲಿಫ್ಟ್‌ನಲ್ಲಿ ಪತಿ ನಿಕ್ ಜೋನಸ್ ಜೊತೆ ಪ್ರಿಯಾಂಕಾ ಚೋಪ್ರಾ ರೊಮ್ಯಾನ್ಸ್
1970ರಲ್ಲಿ ಯಶ್ ಚೋಪ್ರಾ ಜೊತೆ ಪಮೇಲಾ ಚೋಪ್ರಾ ಮದುವೆ ನಡೆದಿತ್ತು. ಈ ದಂಪತಿಗೆ ಆದಿತ್ಯ- ಉದಯ್ ಇಬ್ಬರು ಮಕ್ಕಳಿದ್ದಾರೆ. ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಗಾಯಕಿಯಾಗಿದ್ದ ಪಮೇಲಾ ಪತಿ ಯಶ್ ಚೋಪ್ರಾ ಸಿನಿಮಾಗಳಿಗೆ ಹಾಡಿದ್ದರು. ‘ಕಬಿ ಕಬೀ’ ಚಿತ್ರದಿಂದ ‘ಮುಜ್‌ಸೇ ದೋಸ್ತಿ ಕರೊಗೆ’ ಚಿತ್ರಗಳವರೆಗೆ ಪಮೇಲಾ ಹಾಡಿದ್ದರು.
ಇದೀಗ ಮುಂಬೈನ ಪಮೇಲಾ ನಿವಾಸದಲ್ಲಿ ಪಮೇಲಾ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಚಿತ್ರರಂಗದ ಸ್ನೇಹಿತರು, ಆಪ್ತರು ಗಾಯಕಿ ಪಮೇಲಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರ ಅಂತ್ಯಕ್ರಿಯೆ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕಿದೆ.






ಬಿಟೌನ್ ಬೆಡಗಿ ಕಿಯಾರಾ -ಸಿದ್ ಹನಿಮೂನ್ ಮುಗಿಸಿ ಮುಂಬೈ ಮನೆಗೆ ಬಂದಿದ್ದಾರೆ. ಇಬ್ಬರೂ ತಮ್ಮ ಕೆಲಸದತ್ತ ಬ್ಯುಸಿಯಾಗಿದ್ದಾರೆ. ಸದ್ಯ ಮ್ಯಾಂಗೋ ಬಣ್ಣದ ಡ್ರೆಸ್‌ನಲ್ಲಿ ನಟಿ ಮಿಂಚಿದ್ದಾರೆ. ಫೋಟೋ ಬ್ಯಾಕ್‌ಗ್ರೌಂಡ್ ಕೂಡ ಮ್ಯಾಂಗೋ ಬಣ್ಣದಲ್ಲಿ ಇದೆ. ಜ್ಯೂಸ್ ಕಂಪನಿಯ ಜಾಹಿರಾತಿಗಾಗಿ ಕಿಯಾರಾ ಈ ರೀತಿಯ ಡ್ರೆಸ್ ಧರಿಸಿದ್ದಾರೆ.


ಇತ್ತೀಚೆಗೆ ಇಬ್ಬರ ಮಧ್ಯೆ ಕಿತ್ತಾಟ ನಡೆಯುತ್ತಲೇ ಇತ್ತು. ಈಗ ರಿಷಬ್ ಪಂತ್ ಕಾರು ಅಪಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಚಿಕಿತ್ಸೆ ನೀಡುವ ಕೆಲಸ ಆಗುತ್ತಿದೆ. ಈಗಲೂ ಊರ್ವಶಿ ಅವರು ರಿಷಬ್ ಅವರನ್ನು ಹಿಂಬಾಲಿಸಿದಂತಿದೆ. ರಿಷಬ್‌ಗೆ ಅಪಘಾತದ ವಿಚಾರ ತಿಳಿದಾಗ ʻಪ್ರಾರ್ಥನೆʼ (Prayer) ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದು ರಿಷಬ್‌ಗಾಗಿ ಹೇಳಿದ ಮಾತು ಎನ್ನಲಾಗಿತ್ತು. ಊರ್ವಶಿ ತಾಯಿ, ರಿಷಬ್ ಬೇಗ ಚೇತರಿಕೆ ಕಾಣಲಿ ಎಂದು ಬರೆದುಕೊಂಡಿದ್ದರು. ಇದಕ್ಕಾಗಿ ಊರ್ವಶಿಯನ್ನು ನೆಟ್ಟಿಗರು ಟೀಕೆ ಮಾಡಿದ್ದರು. ಇದನ್ನೂ ಓದಿ: 

















