Tag: hindi cinema

  • ಕಿರಿಕ್ ಪಾರ್ಟಿ ಹಿಂದಿ ರಿಮೇಕ್‍ನಲ್ಲಿ ನಟಿಸಲ್ಲ: ರಶ್ಮಿಕಾ ಮಂದಣ್ಣ

    ಕಿರಿಕ್ ಪಾರ್ಟಿ ಹಿಂದಿ ರಿಮೇಕ್‍ನಲ್ಲಿ ನಟಿಸಲ್ಲ: ರಶ್ಮಿಕಾ ಮಂದಣ್ಣ

    ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದ ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾದ ಹಿಂದಿ ರಿಮೇಕ್‍ನಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರೆ.

    ಕಿರಿಕ್ ಪಾರ್ಟಿ ಚಿತ್ರದ ಸಕ್ಸಸ್ ನಂತರ ಟಾಲಿವುಡ್, ಕಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಏನಾದರೂ ಹಿಂದಿಯಲ್ಲಿ ರಿಮೇಕ್ ಆದರೆ ನೀವು ನಟಿಸುತ್ತೀರಾ ಎಂಬ ಪ್ರಶ್ನೆಗೆ ನೋ ಎಂದಿದ್ದಾರೆ.

    ನಾನು ಕಿರಿಕ್ ಪಾರ್ಟಿ ರಿಮೇಕ್‍ನಲ್ಲಿ ಖಂಡಿತಾ ನಟಿಸುವುದಿಲ್ಲ. ಒಂದು ಬಾರಿ ನಾನು ಆ ಪಾತ್ರದಲ್ಲಿ ಅಭಿನಯಿಸುವ ಮೂಲಕ ಅದರ ಅನುಭವವನ್ನು ಫೀಲ್ ಮಾಡಿದ್ದೇನೆ. ಮತ್ತೆ ಅದರಲ್ಲಿಯೇ ನಟಿಸಿದರೆ ಹೊಸತನ ನೀಡಲು ಸಾಧ್ಯವಿಲ್ಲ. ಹೊಸ ಕಥೆಗಳ ಮೂಲಕ ಹೊಸ ಅನುಭವ ಪಡೆಯುವ ಅವಕಾಶ ಇರುವಾಗ ಮತ್ತೆ ನಾನೇಕೆ ಹಳೇ ಪಾತ್ರದಲ್ಲಿ ನಟಿಸಲಿ. ಒಮ್ಮೆ ಆ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ನಾನು ಮುಂದುವರಿಯುತ್ತೇನೆ. ನಾನು ನನ್ನದೇ ಸಿನಿಮಾಗಳ ರಿಮೇಕ್‍ನಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರೆ.

    ಸದ್ಯ ರಶ್ಮಿಕಾ ಮಂದಣ್ಣ ಟಾಲಿವುಡ್‍ನ ಪುಷ್ಪ ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್‍ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾಗೆ ಜೋಡಿಯಾಗಿ ಮಜ್ನು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲದೆ ಬಿಗ್‍ ಬಿ ಅಮಿತಾಬ್ ಬಚ್ಚನ್ ಜೊತೆ ಗುಡ್ ಬೈ ಸಿನಿಮಾದಲ್ಲಿ ಬಣ್ಣಹಚ್ಚಲಿದ್ದಾರೆ.

  • ಹಿಂದಿಯಲ್ಲೂ ಶುರುವಾಯ್ತು ಚಕ್ರವರ್ತಿ ದರ್ಶನ್ ಹವಾ!

    ಹಿಂದಿಯಲ್ಲೂ ಶುರುವಾಯ್ತು ಚಕ್ರವರ್ತಿ ದರ್ಶನ್ ಹವಾ!

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಬಾಕ್ಸಾಫೀಸ್ ಸುಲ್ತಾನ್ ಎಂದೇ ಕರೆಸಿಕೊಳ್ಳುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಅವರ ಚಿತ್ರಗಳೆಂದೂ ಇಂಥಾ ಬಿರುದಿಗೆ ಮೋಸ ಮಾಡಿಲ್ಲ. ಇದೀಗ ದರ್ಶನ್ ಅವರ ಹವಾ ಹಿಂದಿಗೂ ಹರಡಿಕೊಂಡಿದೆ. ಕಳೆದ ವರ್ಷ ದರ್ಶನ್ ಅವರು ನಟಿಸಿದ್ದ ಚಕ್ರವರ್ತಿ ಚಿತ್ರ ಹಿಂದಿಗೆ ಡಬ್ ಆಗಿ ಅಲ್ಲಿನ ಪ್ರೇಕ್ಷಕರನ್ನೂ ಸೆಳೆದುಕೊಂಡಿದೆ.

    ಚಕ್ರವರ್ತಿ ಚಿತ್ರದ ಹಿಂದಿ ಡಬ್ಬಿಂಗ್ ವರ್ಷನ್ ಇದೇ ತಿಂಗಳ ಮೂರನೇ ತಾರೀಕಿನಂದು ಯೂಟ್ಯೂಬಿನಲ್ಲಿ ಬಿಡುಗಡೆಯಾಗಿತ್ತು. ಅದು ಬಿಡುಗಡೆಯಾದ ಕ್ಷಣದಿಂದಲೇ ಯಾವ ಥರದಲ್ಲಿ ಕ್ರೇಜ್ ಸೃಷ್ಟಿಯಾಗಿತ್ತೆಂದರೆ ಎರಡು ದಿನ ಕಳೆಯೋದರೊಳಗೆ ಏಳು ಮಿಲಿಯನ್‍ಗೂ ಅಧಿಕ ಜನ ಅದನ್ನು ವೀಕ್ಷಿಸಿದ್ದಾರೆ. ಒಟ್ಟಾರೆ ಚಿತ್ರದ ಬಗ್ಗೆ, ದರ್ಶನ್ ಅವರ ಅಭಿನಯದ ಬಗ್ಗೆ ಮೆಚ್ಚುಗೆಗಳ ಮಹಾಪೂರವೇ ಹರಿದಿದೆ.

    ಈ ಕ್ಷಣಕ್ಕೂ ಚಕ್ರವರ್ತಿ ಹಿಂದಿ ವರ್ಷನ್ನಿನ ಅಬ್ಬರ ಏರುಗತಿ ಕಾಣುತ್ತಲೇ ಇದೆ. ಈ ಮೂಲಕವೇ ದರ್ಶನ್ ಅವರಿಗೆ ಬಾಲಿವುಡ್ ಮಟ್ಟದಲ್ಲಿಯೂ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಚಕ್ರವರ್ತಿ ಚಿತ್ರ ಬಿಡುಗಡೆಗೂ ಮುನ್ನವೇ ಬಾಲಿವುಡ್ ಚಿತ್ರಗಳನ್ನೇ ಮೀರಿಸುವಂಥಾ ಕ್ರೇಜ್ ಹುಟ್ಟು ಹಾಕಿತ್ತು. ಬಹು ನಿರೀಕ್ಷಿತ ಭಾರತೀಯ ಚಿತ್ರಗಳ ಸಾಲಿನಲ್ಲಿ ಮೊದಲ ಸ್ಥಾನ ಪಡೆದುಕೊಂಡಿತ್ತು. ಆ ಚಿತ್ರವೀಗ ಹಿಂದಿಗೆ ಡಬ್ ಆಗಿ ಅಲ್ಲಿಯೂ ಜನಮನ ಸೆಳೆದುಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮುಂದಿನ ವರ್ಷ ಶುರುವಾಗುತ್ತಾ ಸಡಕ್-2?

    ಮುಂದಿನ ವರ್ಷ ಶುರುವಾಗುತ್ತಾ ಸಡಕ್-2?

    ಮುಂಬೈ: 90ರ ದಶಕದಲ್ಲಿ ತೆರೆ ಕಂಡಿದ್ದ ಸಂಜಯ್ ದತ್ ನಾಯಕನಾಗಿದ್ದ ಸಡಕ್ ಚಿತ್ರ ಬಾಲಿವುಡ್‍ನ ಹಿಟ್ ಚಿತ್ರವಾಗಿ ದಾಖಲಾಗಿತ್ತು. ಕಥೆಯಿಂದ ಮೊದಲ್ಗೊಂಡು ಹಾಡಿನವರೆಗೆ ಎಲ್ಲವೂ ಜನಮನ ಸೆಳೆದಿತ್ತು. ಈ ಚಿತ್ರದಿಂದಲೇ ಸಂಜಯ್ ದತ್ ನಾಯಕನಾಗಿ ಬಾಲಿವುಡ್‍ನಲ್ಲಿ ಮತ್ತಷ್ಟು ಬೇಡಿಕೆ ಗಳಿಸಿಕೊಂಡಿದ್ದೀಗ ಇತಿಹಾಸ.

    ಇದೀಗ ಸಡಕ್ 2 ಚಿತ್ರ ಕಾರ್ಯಾರಂಭ ಮಾಡುವ ಬಗ್ಗೆ ಬಾಲಿವುಡ್ ತುಂಬಾ ಗುಲ್ಲೆದ್ದಿದೆ. ಇದು ನಿರ್ದೇಶಕ ಮಹೇಶ್ ಭಟ್ ಮತ್ತು ಮುಖೇಶ್ ಭಟ್ ಅವರುಗಳ ಕನಸಿನ ಪ್ರಾಜೆಕ್ಟ್. ಕಳೆದ ವರ್ಷವೇ ಈ ಚಿತ್ರದ ಬಗ್ಗೆ ಇವರಿಬ್ಬರೂ ಹೇಳಿಕೊಂಡಿದ್ದರು. ಆದರೆ ವರ್ಷಗಳ ಕಾಲ ಇದಕ್ಕಾಗಿ ತಯಾರಿ ನಡೆಸಿ ಬೇರೆ ಕೆಲಸ ಕಾರ್ಯಗಳಲ್ಲಿ ಕಳೆದು ಹೋಗಿದ್ದ ಭಟ್ ಬ್ರದರ್ಸ್ ಇದೀಗ ತಮ್ಮ ಕನಸಿನ ಸಡಕ್ ವಿಚಾರವಾಗಿ ಕಾರ್ಯಾರಂಭ ಮಾಡಿದಂತಿದೆ!

    ಸಡಕ್ 2 ಚಿತ್ರವನ್ನು 2019ರ ಆರಂಭದಲ್ಲಿಯೇ ಆರಂಭಿಸಲು ಭಟ್ ಬ್ರದರ್ಸ್ ನಿರ್ಧರಿಸಿದ್ದಾರೆ. ಆ ಸಮಯದಲ್ಲಿ ಸಮಯ ಹೊಂದಿಸುವ ಭರವಸೆ ಸಂಜಯ್ ದತ್ ಕಡೆಯಿಂದಲೂ ಸಿಕ್ಕಿದೆ. ತೊಂಭತ್ತರ ದಶಕದಲ್ಲಿ ಸಡಕ್ ಚಿತ್ರ ಸೃಷ್ಟಿಸಿದಂಥಾದ್ದೇ ದಾಖಲೆಯನ್ನು ಮತ್ತೊಮ್ಮೆ ಸೃಷ್ಟಿಸುವ ಸಲುವಾಗಿ ಭಟ್ ಬ್ರದರ್ಸ್ ಅಣಿಯಾಗಲಾರಂಭಿಸಿದ್ದಾರೆ.

    ಮಹೇಶ್ ಭಟ್ ಅವರ ಹೋಂ ಬ್ಯಾನರಿನಲ್ಲಿಯೇ ಈ ಚಿತ್ರ ತಯಾರಾಗಲಿದೆಯಂತೆ. ಈ ಚಿತ್ರದಲ್ಲಿ ಮಹೇಶ್ ಭಟ್ ಅವರ ಪುತ್ರಿ ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸೋದು ಪಕ್ಕಾ. ಅದ್ಯಾವ ಚಿತ್ರವೇ ಇದ್ದರೂ ಆಲಿಯಾ ತನ್ನ ಹೋಂ ಬ್ಯಾನರಿನ ಈ ಚಿತ್ರದಲ್ಲಿ ನಟಿಸಲು ತಯಾರಾಗಿದ್ದಾಳಂತೆ!.