Tag: Hindhu- Muslim

  • ಗುರುದ್ವಾರದ ಮೇಲೆ ದಾಳಿ: 100ಕ್ಕೂ ಹೆಚ್ಚು ಸಿಖ್ಖರು, ಹಿಂದೂಗಳಿಗೆ E-Visa

    ಗುರುದ್ವಾರದ ಮೇಲೆ ದಾಳಿ: 100ಕ್ಕೂ ಹೆಚ್ಚು ಸಿಖ್ಖರು, ಹಿಂದೂಗಳಿಗೆ E-Visa

    ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿಯಲ್ಲಿರುವ ಕಾರ್ತೆ ಪರ್ವಾನ್ ಗುರುದ್ವಾರದಲ್ಲಿ ಇಸ್ಲಾಮಿಕ್ ಸ್ಟೇಟ್ಸ್ ಭಯೋತ್ಪಾದಕರು ದಾಳಿ ನಡೆಸಿದ ನಂತರ ಭಾರತ ಸರ್ಕಾರ ಅಲ್ಲಿನ ಸಿಖ್ಖರು ಹಾಗೂ ಹಿಂದೂಗಳನ್ನು ರಕ್ಷಿಸಲು ಮುಂದಾಗಿದೆ.

    ಆಫ್ಘನ್‌ನಲ್ಲಿರುವ 100ಕ್ಕೂ ಹೆಚ್ಚು ಸಿಖ್ಖರು ಹಾಗೂ ಹಿಂದೂಗಳಿಗೆ ಇ-ವೀಸಾ ನೀಡುತ್ತಿದೆ. ನಿನ್ನೆ ತಡರಾತ್ರಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ. ಇದನ್ನೂ ಓದಿ: ಲಾಲೂ ಯಾದವ್ ಪಕ್ಷದ ಬೆಂಬಲದೊಂದಿಗೆ ಅಗ್ನಿಪಥ್ ವಿರೋಧಿಸಿ ಇಂದು ಬಿಹಾರ್ ಬಂದ್

    ಗುರುದ್ವಾರದ ಮೇಲಿನ ದಾಳಿಯ ಹೊಣೆಯನ್ನು ಇಸ್ಲಾಮಿಕ್ಸ್ ಸ್ಟೇಟ್ಸ್ ಖೊರಾಸನ ಪ್ರಾಂತ್ಯ (ISKP) ಹೊತ್ತಿದ್ದು, `ಅಬು ಮೊಹಮ್ಮದ್ ಅಲ್ ತಾಜಕಿ’ ಮುಸ್ಲಿಂ ಸಂಘಟನೆ ಮೂರು ಗಂಟೆಗಳ ಕಾಲ ದಾಳಿ ನಡೆಸಿದೆ. ಇಬ್ಬರು ಭದ್ರತಾ ಸಿಬ್ಬಂದಿಯನ್ನೂ ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದೆ. ಇದನ್ನೂ ಓದಿ: ‘ಅಗ್ನಿಪಥ್’ ವಿರೋಧದ ನಡುವೆ ಗೃಹ ಇಲಾಖೆಯಿಂದ ಮಹತ್ವದ ನಿರ್ಧಾರ 

    ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಕಾರ್ತೆ ಪರ್ವಾನ್ ಪ್ರದೇಶವನ್ನು ಸುತ್ತುವರಿದಿದ್ದ ಸೇನಾ ಪಡೆಗಳು ಹಲವು ದಾಳಿಕೋರರನ್ನು ಕೊಂದಿದೆ. ಆದರೆ ನಿಖರ ಅಂಕಿ-ಅಂಶಗಳು ಸಿಕ್ಕಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

    ಏನಿದು ಘಟನೆ?
    ಅಫ್ಘಾನಿಸ್ತಾನದ ರಾಜಧಾನಿಯಲ್ಲಿರುವ ಕಾರ್ತೆ ಪರ್ವಾನ್ ಗುರುದ್ವಾರದಲ್ಲಿ ನಿನ್ನೆ ಇಸ್ಲಾಮಿಕ್ ಸ್ಟೇಟ್ಸ್ ಭಯೋತ್ಪಾದಕರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ಹಲವು ಸ್ಫೋಟಗಳಿಂದ ಸಾವು ನೋವುಗಳಾಗಿದ್ದವು. ದಾಳಿಯಲ್ಲಿ ಸಿಖ್ಖ್ ವ್ಯಕ್ತಿ ಹಾಗೂ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು. ಈ ದಾಳಿಯ ಹಿಂದೆ ಐಸಿಸ್ ಖೊರಾಸನ್ ಕೈವಾಡವಿದೆ ಎಂದು ಶಂಕಿಸಲಾಗಿತ್ತು. ಅಫ್ಘಾನಿಸ್ತಾನದ ಭದ್ರತಾಪಡೆಗಳು ಈ ಪ್ರದೇಶವನ್ನು ಸುತ್ತುವರಿದು ಭಯೋತ್ಪಾದಕರ ವಿರುದ್ಧ ಹೋರಾಟ ಮುಂದುವರಿಸಿದ್ದವು. ಇದರಿಂದ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪರಿಸ್ಥಿತಿಯ ಮೇಲೆ ನಿಗಾ ಇರಿಸಿತ್ತು. ಇಂದು ಅಲ್ಲಿನ ಸಿಖ್ಖ್ ಹಾಗೂ ಹಿಂದೂಗಳಿಗೆ ಆದ್ಯತೆ ಮೇರೆಗೆ ಇ-ವೀಸಾ ನೀಡಲು ಸರ್ಕಾರ ಮುಂದಾಗಿದೆ.

    Live Tv

  • ಕೋಮುಸೂಕ್ಮ್ಷ ಪ್ರದೇಶದಲ್ಲಿ ಹಿಂದೂ, ಮುಸ್ಲಿಂ ಭಾಯಿಭಾಯಿ- ಈದ್ ಮಿಲಾದ್ ಮೆರವಣಿಗೆಗೆ ಹಿಂದೂಗಳ ಸಾಥ್

    ಕೋಮುಸೂಕ್ಮ್ಷ ಪ್ರದೇಶದಲ್ಲಿ ಹಿಂದೂ, ಮುಸ್ಲಿಂ ಭಾಯಿಭಾಯಿ- ಈದ್ ಮಿಲಾದ್ ಮೆರವಣಿಗೆಗೆ ಹಿಂದೂಗಳ ಸಾಥ್

    ಉಡುಪಿ: ಕೋಮುಸೂಕ್ಷ್ಮ ಪ್ರದೇಶವಾದ ಉಡುಪಿಯಲ್ಲಿ ಹಿಂದು ಮುಸ್ಲಿಂ ಭಾಯಿ ಭಾಯಿ ಅಂತ ಎರಡು ಧರ್ಮೀಯರು ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮ ಮಾಸವನ್ನು ವಿಶಿಷ್ಟವಾಗಿ ಆಚರಣೆ ಮಾಡಿದ್ದಾರೆ.

    ಉಡುಪಿಯ ಸಂತೆಕಟ್ಟೆ ಸಮೀಪದ ನೇಜಾರು ಪ್ರದೇಶ ಪೊಲೀಸರಿಗೆ ಸದಾ ತಲೆನೋವಿನ ಸ್ಥಳ. ನೇಜಾರಿನಲ್ಲಿ ಆಗಾಗ ಹಿಂದೂ ಮುಸ್ಲಿಂ ನಡುವೆ ಸಂಘರ್ಷಗಳು ನಡೆಯುತ್ತಿತ್ತು. ಆದರೆ ಈ ಬಾರಿ ನೇಜಾರ್ ಜುಮ್ಮಾ ಮಸೀದಿಯ ಆಶ್ರಯದಲ್ಲಿ ಈದ್ ಮಿಲಾದ್ ಮೆರವಣಿಗೆಗೆ ಹಿಂದೂಗಳು ಸಾಥ್ ಕೊಟ್ಟಿದ್ದಾರೆ.

    ಪ್ರವಾದಿ ಮಹಮ್ಮದರ ಸಂದೇಶ ಜಾಥಾ ನಡೆದಾಗ ಭಜನಾ ಮಂಡಳಿ ಹಾಗೂ ಯುವಕ ಸಂಘಗಳು ಶರಬತ್ತು, ಐಸ್ ಕ್ರೀಂ, ಪಾನಕ, ಸಿಹಿತಿಂಡಿ ಮಜ್ಜಿಗೆ ನೀಡಿದ್ದಾರೆ. ನೇಜಾರ್ ನಿಂದ ಆರಂಭವಾದ ಮೆರವಣಿಗೆ ಸಂತೆಕಟ್ಟೆ- ಕಲ್ಯಾಣಪುರದವರೆಗೆ ಸಾಗಿ ವಾಪಾಸ್ಸಾಗಿದೆ. ಮೆರವಣಿಗೆ ಸಾಗಿದ 5 ಕಿಲೋಮೀಟರ್ ಉದ್ದಕ್ಕೂ ಶ್ರೀ ಗುರೂ ಯುವಕ ಮಂಡಳಿ, ಶಾರದಾಂಬಾ ಭಜನಾ ಮಂಡಳಿ, ಸಂತಕಟ್ಟೆ ಟೆಂಪೋ ಚಾಲಕ ಮಾಲಕರು ಪಾನೀಯ, ತಿಂಡಿ-ತಿನಸುಗಳನ್ನು ಹಂಚಿದ್ದಾರೆ.

    ಮೆರವಣಿಗೆಯಲ್ಲಿ 1000 ಮಿಕ್ಕಿ, ದಫ್, ಸ್ಕೌಟ್ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು. ಈ ಬಾರಿ ಮೆರವಣಿಗೆ ವೇಳೆ ಪೊಲೀಸ್ ಇಲಾಖೆ ನಿರಾಳವಾಗುತ್ತು ಹಾಗೆಯೆ ಯಾವುದೇ ಗೊಂದಲಗಳಿಲ್ಲದೆ ಕಾರ್ಯಕ್ರಮ ನಡೆಯಿತು.

    ಇಸ್ಲಾಮಿಕ್ ಷರಿಯತ್ ಕಾಲೇಜು ಉಪಪ್ರಾಂಶುಪಾಲ ನೌಫಲ್ ಮದನಿ ಮಾತನಾಡಿ, ಈ ಬಾರಿ ತುಂಬಾ ಸಂತೋಷ ಆಗಿದೆ. ಹಿಂದೂಗಳಿಗೂ ಆಮಂತ್ರಣ ಕೊಟ್ಟಿದ್ದೇವೆ. ಅವರೂ ಊಟಕ್ಕೆ ಬಂದಿದ್ದಾರೆ. ಮೆರವಣಿಗೆ ವೇಳೆ ಜ್ಯೂಸ್, ಐಸ್ ಕ್ರೀಂ, ನೀರು ಕೊಟ್ಟು ಉತ್ತಮ ಬಾಂಧವ್ಯ ಸೃಷ್ಟಿಯಾಗುವಂತೆ ಮಾಡಿದ್ದಾರೆ. ಧಾರ್ಮಿಕ ಗ್ರಂಥದಲ್ಲಿ ಉಲ್ಲೇಖಿಸಿದಂತೆ ದೇಶವನ್ನು ಮೊದಲು ಪ್ರೀತಿಸಬೇಕು. ನೆರೆಮನೆಯವರು ಹಸಿದಿರುವಾಗ ತಾನೊಬ್ಬನೆ ಹಬ್ಬ ಮಾಡುವವ ಮುಸಲ್ಮಾನ ಅಲ್ಲ ಎಂಬ ಮಾತು ಈ ಬಾರಿ ನಿಜವಾಗಿದೆ. ಶಾಂತಿ, ಸಹಬಾಳ್ವೆ ಕರುಣೆಯಿಂದ ಮೆರವಣಿಗೆ ನಡೆದಿದೆ ಮುಂದೆಯೂ ಹೀಗೆಯೇ ಸಹಬಾಳ್ವೆಯಿಂದ ನೇಜಾರು ಪ್ರಸಿದ್ಧಿಯಾಗಲಿ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv