ನವದೆಹಲಿ: ಅದಾನಿ ಸಮೂಹದ (Adani Group) ಕಂಪನಿಯ ಬಗ್ಗೆ 2016 ರಿಂದ ಯಾವುದೇ ತನಿಖೆ ನಡೆಸಿಲ್ಲ ಎಂದು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ (SEBI) ಸುಪ್ರೀಂ ಕೋರ್ಟ್‌ಗೆ (Supreme Court) ತಿಳಿಸಿದೆ.
ಅದಾನಿ ಕಂಪನಿಯ ಹಿಂಡೆನ್‌ಬರ್ಗ್ (Hindenburg) ಮಾಡಿದ ಆರೋಪದ ಬಗ್ಗೆ ತನಿಖೆ ನಡೆಸಲು 6 ತಿಂಗಳು ಕಾಲಾವಕಾಶ ನೀಡಬೇಕೆಂದು ಕೋರಿ ಸೆಬಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಮುಖ್ಯ ನ್ಯಾ. ಡಿವೈ ಚಂದ್ರಚೂಡ್, ನ್ಯಾ. ಪಿಎಸ್ ನರಸಿಂಹ ಮತ್ತು ನಾ. ಜೆಬಿ ಪರ್ದಿವಾಲಾ ಪೀಠದಲ್ಲಿ ನಡೆಯಿತು.
ಈ ವೇಳೆ ಪೀಠ, ನಾವು ಈಗ 6 ತಿಂಗಳು ನೀಡಲು ಸಾಧ್ಯವಿಲ್ಲ. ಕೆಲಸದಲ್ಲಿ ಸ್ವಲ್ಪ ಎಚ್ಚರ ಅಗತ್ಯ. ಒಂದು ತಂಡವನ್ನು ರಚಿಸಿ ಕೆಲಸ ಮಾಡಿ. ನಾವು ಆಗಸ್ಟ್ ಮಧ್ಯದಲ್ಲಿ ಪ್ರಕರಣವನ್ನು ಪಟ್ಟಿ ಮಾಡಬಹುದುಎಂದು ಆದೇಶ ನೀಡಿತು.
ಶತಕೋಟ್ಯಧಿಪತಿ ಗೌತಮ್ ಅದಾನಿ ಸಮೂಹ ಮಾರಿಷಸ್ ಮೂಲದ ಶೆಲ್ ಕಂಪನಿಗಳನ್ನು ಬಳಸಿ ಸ್ಟಾಕ್ ಮಾರುಕಟ್ಟೆಯಲ್ಲಿ ಷೇರುಗಳ ಬೆಲೆಯನ್ನು ಕೃತಕವಾಗಿ ಹೆಚ್ಚಳ ಮಾಡಿದೆ ಎಂದು ಹಿಂಡೆನ್‌ಬರ್ಗ್ ಆರೋಪಿಸಿತ್ತು.
ತನಿಖೆ ಪೂರ್ಣಗೊಳಿಸಲು ಕಾಲವಕಾಶದ ಅಗತ್ಯವಿದೆ. ಇದುವರೆಗೂ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಹಾಗೂ ಇದುವರೆಗೂ ತಿಳಿದು ಬಂದ ಅಂಶಗಳನ್ನು ತಜ್ಞರ ಸಮಿತಿಯ ಗಮನಕ್ಕೆ ತರಲಾಗಿದೆ. ಅಲ್ಲದೆ ಹಿಂಡೆನ್‍ಬರ್ಗ್ ವರದಿಯಲ್ಲಿ ತಿಳಿಸಿರುವ 12 ಶಂಕಾಸ್ಪದ ವರ್ಗಾವಣೆಗಳ ಕುರಿತು ಆಳವಾದ ತನಿಖೆ ನಡೆಸಬೇಕಿದೆ. ಆ ವರ್ಗಾವಣೆಗಳ ಮಾಹಿತಿಗಳು ಜಟಿಲವಾಗಿವೆ. ಅಲ್ಲದೆ ಅಲ್ಲಿ ವಿವಿಧ ವರ್ಗಾವಣೆ ನಡೆದಿದೆ ಎಂದು ಸೆಬಿ ಅರ್ಜಿಯಲ್ಲಿ ಮನವಿ ಮಾಡಿತ್ತು.
ನವದೆಹಲಿ: ಅದಾನಿ ಗ್ರೂಪ್ ಆಫ್ ಕಂಪನಿಗಳ (Adani Group) ವಿರುದ್ಧದ ಹಿಂಡೆನ್‍ಬರ್ಗ್ (Hindenburg Research) ಸಂಶೋಧನಾ ವರದಿಯಲ್ಲಿನ ಆರೋಪಗಳ ಬಗ್ಗೆ ನಡೆಸುತ್ತಿರುವ ತನಿಖೆಯನ್ನು ಪೂರ್ಣಗೊಳಿಸಲು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾಗೆ (Securities and Exchange Board of India) ಮೂರು ತಿಂಗಳ ಕಾಲಾವಕಾಶವನ್ನು ಸುಪ್ರೀಂ (Supreme Court) ವಿಸ್ತರಿಸಿ ಶುಕ್ರವಾರ ಆದೇಶ ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (CJI) ಡಿವೈ ಚಂದ್ರಚೂಡ್ (DY Chandrachud), ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಜೆಬಿ ಪರ್ದಿವಾಲಾ ಅವರ ಪೀಠವು ಈ ಆದೇಶವನ್ನು ನೀಡಿದೆ. ಸೆಬಿಯ (SEBI) ಬೇಡಿಕೆಯಂತೆ ಆರು ತಿಂಗಳ ವಿಸ್ತರಣೆಯನ್ನು ನೀಡಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ. ಇದನ್ನೂ ಓದಿ: ಅದಾನಿ – ಹಿಂಡನ್‌ಬರ್ಗ್ : ಸುಪ್ರೀಂಗೆ ತನಿಖಾ ವರದಿ ಸಲ್ಲಿಕೆ
ತನ್ನ ತನಿಖಾ ವರದಿಯನ್ನು ಸಲ್ಲಿಸಲು ಆರು ತಿಂಗಳ ಕಾಲ ವಿಸ್ತರಣೆ ಕೋರಿ ಸೆಬಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ವಿಚಾರಣೆ ನಡೆಸಿತು. ಈ ವೇಳೆ ಸುಪ್ರೀಂ, ಕೆಲಸದಲ್ಲಿ ಸ್ವಲ್ಪ ಚುರುಕುತನದ ಅಗತ್ಯವಿದೆ. 6 ತಿಂಗಳುಗಳ ಕಾಲವಕಾಶ ನೀಡಲು ಸಾಧ್ಯವಿಲ್ಲ. ಒಂದು ತಂಡವನ್ನು ರಚಿಸಿ ಶೀಘ್ರ ತನಿಖೆ ಮುಗಿಸಿ. ಆಗಸ್ಟ್ ಮಧ್ಯದಲ್ಲಿ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಮೇ 15ರಂದು ಆದೇಶ ಪ್ರಕಟಿಸುವುದಾಗಿ ಹೇಳಿದೆ.
ಮಾ.2ರ ಸುಪ್ರೀಂ ಆದೇಶದಂತೆ ಮೇ 2ಕ್ಕೆ ತನಿಖೆ ಪೂರ್ಣಗೊಳ್ಳಬೇಕಿತ್ತು. ಆದರೆ ಹಿಂಡೆನ್‍ಬರ್ಗ್ ವರದಿಯಲ್ಲಿ ಉಲ್ಲೇಖಿಸಲಾದ 12 ಸಂಶಯಾಸ್ಪದ ವಹಿವಾಟುಗಳಿಗೆ ಕನಿಷ್ಠ 15 ತಿಂಗಳ ತನಿಖೆ ಅಗತ್ಯವಿದೆ. ಆದರೆ ಆರು ತಿಂಗಳು ಅವಕಾಶ ವಿಸ್ತರಿಸಿದರೆ ತನಿಖೆ ಪೂರ್ಣಗೊಳಿಸುವುದಾಗಿ ಕಳೆದ ತಿಂಗಳು ಸೆಬಿ ಸಲ್ಲಿಸಿದ್ದ ಮನವಿಯಲ್ಲಿ ಹೇಳಿತ್ತು.
ತನಿಖೆಗೆ ಬಹು ದೇಶೀಯ ಮತ್ತು ಅಂತರರಾಷ್ಟ್ರೀಯ ಬ್ಯಾಂಕ್‍ಗಳಿಂದ ಬ್ಯಾಂಕ್ ಸ್ಟೇಟ್‍ಮೆಂಟ್‍ಗಳನ್ನು ಪಡೆಯುವುದು ಅಗತ್ಯವಾಗಿರುತ್ತದೆ. ಬ್ಯಾಂಕ್ ಸ್ಟೇಟ್‍ಮೆಂಟ್‍ಗಳು 10 ವರ್ಷಗಳ ಹಿಂದೆ ಕೈಗೊಂಡ ವಹಿವಾಟುಗಳಿಗೆ ಸಹ ಸಂಬಂಧಿಸಿದೆ. ಇದು ಸಮಯ ತೆಗೆದುಕೊಳ್ಳುತ್ತದೆ ಎಂದು ಸೆಬಿ ನ್ಯಾಯಾಲಯಕ್ಕೆ ತಿಳಿಸಿತ್ತು.
ಷೇರು ಬೆಲೆಗಳನ್ನು ಕೃತಕವಾಗಿ ಹೆಚ್ಚಿಸುವ ಮೂಲಕ ಅದಾನಿ ಸಮೂಹದಿಂದ ವಂಚನೆಯಾಗಿದೆ ಎಂದು ಆರೋಪಿಸಿ ಹಿಂಡೆನ್‍ಬರ್ಗ್ ರಿಸರ್ಚ್ ವರದಿ ಪ್ರಕಟಿಸಿತ್ತು. ಇದಾದ ಬೆನ್ನಲ್ಲೇ ಅದಾನಿ ಕಂಪನಿಗಳ ಷೇರುಗಳ ಮೌಲ್ಯದಲ್ಲಿ ಭಾರೀ ಕುಸಿತ ಕಂಡಿದ್ದವು.
ಇನ್ನೊಂದೆಡೆ, ಹಿಂಡೆನ್‍ಬರ್ಗ್ ರಿಸರ್ಚ್‍ನ ಸಂಸ್ಥಾಪಕ ನಾಥನ್ ಆಂಡರ್ಸನ್ ಮತ್ತು ಭಾರತದಲ್ಲಿನ ಅದರ ಸಿಬ್ಬಂದಿ ವಿರುದ್ಧ ತನಿಖೆ ನಡೆಸಬೇಕು. ಅವರ ವಿರುದ್ಧ ಎಫ್‍ಐಆರ್ ದಾಖಲಿಸಲು ಸೆಬಿ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ಸುಪ್ರೀಂ ನಿರ್ದೇಶನ ನೀಡಬೇಕು ಎಂದು ಕೋರಿ ವಕೀಲ ಮನೋಹರ್ ಲಾಲ್ ಶರ್ಮಾ ಮನವಿ ಮಾಡಿದ್ದಾರೆ.
ನವದೆಹಲಿ: ಅದಾನಿ ಸಮೂಹದ ಕಂಪನಿಗಳ ವಿರುದ್ಧ ಹಿಂಡೆನ್‌ಬರ್ಗ್ (Hindenburg) ಸಂಶೋಧನಾ ವರದಿಯಲ್ಲಿನ ಆರೋಪಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ (Supreme Court) ನೇಮಕ ಮಾಡಿದ ಸಮಿತಿ ತನ್ನ ತನಿಖಾ ವರದಿಯನ್ನು ಸಲ್ಲಿಸಿದೆ.
ನಿವೃತ್ತ ನ್ಯಾಯಾಧೀಶ ಎ.ಎಂ ಸಪ್ರೆ ನೇತೃತ್ವದಲ್ಲಿ ಒ.ಪಿ. ಭಟ್, ನ್ಯಾಯಮೂರ್ತಿ ಜೆ.ಪಿ. ದೇವಧರ್, ಕೆ.ವಿ. ಕಾಮತ್, ನಂದನ್ ನಿಲೇಕಣಿ ಮತ್ತು ಸೋಮಶೇಖರ್ ಸುಂದರೇಶನ್ ಅವರನ್ನು ಒಳಗೊಂಡ ಸಮಿತಿಯನ್ನು ಸಿಜೆಐ ಡಿ.ವೈ. ಚಂದ್ರಚೂಡ್ (DY Chandrachud) ನೇತೃತ್ವದ ತ್ರಿ ಸದಸ್ಯ ಪೀಠ ಮಾರ್ಚ್‌ನಲ್ಲಿ ನೇಮಿಸಿತ್ತು. ಇಂದು ಸಮಿತಿ ವರದಿಯನ್ನು ಸಲ್ಲಿಸಿದ್ದು ಮೆ 12 ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.
ಅದಾನಿ ಕಂಪನಿಗಳಲ್ಲಿ ಅಕ್ರಮ ನಡೆದಿದೆಯೇ? ಷೇರುಗಳ ಮೌಲ್ಯ ಹೆಚ್ಚಿಸಲು ಕೃತಕ ಪ್ರಯತ್ನಗಳು ನಡೆದಿವೆಯೇ? ಸೆಬಿ ನಿಯಮಗಳ ಸೆಕ್ಷನ್ 19ರ ಉಲ್ಲಂಘನೆಯಾಗಿದೆಯೇ? ಹೂಡಿಕೆದಾರರ ರಕ್ಷಣೆಗೆ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಕೋರ್ಟ್ ಸಮಿತಿಗೆ ಸೂಚಿಸಿತ್ತು. ತನಿಖೆಯನ್ನು ನಡೆಸಿ ಎರಡು ತಿಂಗಳೊಳಗೆ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ವರದಿ ನೀಡಬೇಕು ಎಂದು ಕೋರ್ಟ್ ಆದೇಶಿಸಿತ್ತು. ಇದನ್ನೂ ಓದಿ: Karnataka Election 2023 Live – ರಾಜ್ಯದಲ್ಲಿ 1 ಗಂಟೆವರೆಗೆ 37.25% ಮತದಾನ
ಸೆಬಿ ಅಧ್ಯಕ್ಷರು ಎಲ್ಲಾ ಅಗತ್ಯ ಮಾಹಿತಿಯನ್ನು ತಜ್ಞರ ಸಮಿತಿಗೆ ಒದಗಿಸಬೇಕು. ಸಂಬಂಧಪಟ್ಟ ಕೇಂದ್ರ ಸರ್ಕಾರದ ಏಜೆನ್ಸಿಗಳು ಸಮಿತಿಯೊಂದಿಗೆ ಸಹಕರಿಸಬೇಕು ಕೋರ್ಟ್ ಸೂಚಿಸಿತ್ತು.
ಅದಾನಿ ಕಂಪನಿಗಳ ತನಿಖೆಗೆ ಸುಪ್ರೀಂ ಕೋರ್ಟ್ ಸಮಿತಿ ರಚಿಸಿದ್ದನ್ನು ಗೌತಮ್ ಅದಾನಿ (Gautam Adani) ಸ್ವಾಗತಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಅವರು, ಸಮಯ ಕಳೆದಂತೆ ಪ್ರಕರಣ ತಾರ್ಕಿಕ ಅಂತ್ಯ ಕಾಣಲಿದೆ. ಸತ್ಯ ಮೇಲುಗೈ ಸಾಧಿಸಲಿದೆ ಎಂದು ಹೇಳಿದ್ದರು.
6 ತಿಂಗಳು ಬೇಕು:
ತನಿಖೆ ಪೂರ್ಣಗೊಳಿಸಲು ಕಾಲವಕಾಶದ ಅಗತ್ಯವಿದೆ. ಇನ್ನೂ ಆರು ತಿಂಗಳು ಅವಕಾಶ ವಿಸ್ತರಣೆಗೆ ಸೆಬಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದೆ. ಇದುವರೆಗೂ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಹಾಗೂ ಇದುವರೆಗೂ ತಿಳಿದು ಬಂದ ಅಂಶಗಳನ್ನು ತಜ್ಞರ ಸಮಿತಿಯ ಗಮನಕ್ಕೆ ತರಲಾಗಿದೆ. ಅಲ್ಲದೆ ಹಿಂಡೆನ್‍ಬರ್ಗ್ ವರದಿಯಲ್ಲಿ ತಿಳಿಸಿರುವ 12 ಶಂಕಾಸ್ಪದ ವರ್ಗಾವಣೆಗಳ ಕುರಿತು ಆಳವಾದ ತನಿಖೆ ನಡೆಸಬೇಕಿದೆ. ಆ ವರ್ಗಾವಣೆಗಳ ಮಾಹಿತಿಗಳು ಜಟಿಲವಾಗಿವೆ ಎಂದು ಸೆಬಿ ತನ್ನ ಮನವಿಯಲ್ಲಿ ತಿಳಿಸಿತ್ತು.
ನವದೆಹಲಿ: ಅದಾನಿ ಗ್ರೂಪ್‍ನ ವರದಿ ನಂತರ ಅಮೆರಿಕ ಮೂಲದ ಹಿಂಡೆನ್‍ಬರ್ಗ್ (Hindenburg) ರಿಸರ್ಚ್ ಇದೀಗ ಮಾಜಿ ಟ್ವಿಟ್ವರ್ ಸಿಇಒ ಹಾಗೂ ಸಂಸ್ಥಾಪಕ ಜಾಕ್ ಡಾರ್ಸೆ (Jack Dorsey) ಸ್ಥಾಪಿಸಿದ ಪೇಮೆಂಟ್ ಕಂಪನಿಯಾದ ಬ್ಲಾಕ್ (Block) ವಿರುದ್ಧ ಹೊಸ ವರದಿಯನ್ನು ಬಿಡುಗಡೆ ಮಾಡಿದೆ.
ಹಿಂಡೆನ್‍ಬರ್ಗ್ ರಿಸರ್ಚ್ ಇದೀಗ ಬಿಡುಗಡೆ ಮಾಡಿರುವ ವರದಿಯಲ್ಲಿ ಬ್ಲಾಕ್ ಇಂಕ್‌ನ ಮೇಲೆ ಕಣ್ಣಿಟ್ಟಿದ್ದೆವು. ಈ ಹಿಂದೆ ಬ್ಲಾಕ್ ಇಂಕ್ ಕಂಪನಿಯನ್ನು ಅನ್ನು ಹಿಂದೆ ಸ್ಕ್ವೇರ್ ಇಂಕ್ ಎಂದು ಕರೆಯಲಾಗುತ್ತಿತ್ತು. ಬ್ಲಾಕ್ ಕಂಪನಿಯಲ್ಲಿ ಹಲವಾರು ಅವ್ಯವಹಾರಗಳು ನಡೆದಿವೆ. ಈ ಕಂಪನಿಯು ಹೂಡಿಕೆದಾರರಿಗೆ ತನ್ನ ಅಂಕಿ ಅಂಶಗಳ ಮಾಹಿತಿಯನ್ನು ತಪ್ಪಾಗಿ ಬಿಂಬಿಸುತ್ತಿದೆ. ಬ್ಲಾಕ್‍ನಲ್ಲಿರುವ ಖಾತೆಗಳು 40 – 75% ನಕಲಿಯಾಗಿದೆ. ಈ ಬಗ್ಗೆ 2 ವರ್ಷಗಳ ತನಿಖೆ ನಡೆಸಿರುವುದಾಗಿ ತಿಳಿಸಿದೆ.
ಬ್ಲಾಕ್‍ನ ಮಾಜಿ ಉದ್ಯೋಗಿಗಳನ್ನು, ಇಂಡಸ್ಟ್ರಿಯ ಪರಿಣಿಯತರನ್ನೂ ಸಂದರ್ಶಿಸಲಾಗಿದ್ದು, ಕಂಪನಿಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ ಎಂದು ಆರೋಪಿಸಿದೆ.
ಈ ಹಿಂದೆ ಜನವರಿಯಲ್ಲಿ ಹಿಂಡೆನ್‍ಬರ್ಗ್ ಅದಾನಿ ಸಮೂಹ ಷೇರು ಮಾರುಕಟ್ಟೆಯಲ್ಲಿ ಅಕ್ರಮ ಎಸಗಿದೆ. ಅಕ್ರಮದ ಮೂಲಕ ತನ್ನ ಸಮೂಹದ ಕಂಪನಿಯ ಷೇರು ಬೆಲೆಯನ್ನು ಏರಿಕೆ ಮಾಡಿದ ಎಂದು ಆರೋಪಿಸಿ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಷೇರಿನ ಮೌಲ್ಯ ಹೆಚ್ಚಿಸಲು ಹಲವಾರು ಶೆಲ್ ಕಂಪನಿಗಳನ್ನು ಬಳಸಿಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು. ವರದಿಯ ಬೆನ್ನಲ್ಲೆ ಅದಾನಿ ಗ್ರೂಪ್ ಷೇರುಗಳು ಕುಸಿತ ಕಂಡಿದ್ದವು. ಇದನ್ನೂ ಓದಿ: ಅಮೃತ್‍ಪಾಲ್‍ಗೆ ಆಶ್ರಯ ಕೊಟ್ಟಿದ್ದ ಮಹಿಳೆ ಅರೆಸ್ಟ್
ನವದೆಹಲಿ: ಅದಾನಿ ಗ್ರೂಪ್‍ನ (Adani group) ವರದಿಯ ನಂತರ ಅಮೆರಿಕ (America) ಮೂಲದ ಹಿಂಡೆನ್‍ಬರ್ಗ್ ರಿಸರ್ಚ್ ಸಂಸ್ಥೆ (Hindenburg) ಗುರುವಾರ ಮತ್ತೊಂದು ಹೊಸ ವರದಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ತನ್ನ ಟ್ವೀಟ್‍ನಲ್ಲಿ ಶೀಘ್ರದಲ್ಲೇ ಹೊಸ ವರದಿ ಬಿಡುಗಡೆ ಮಾಡುವುದಾಗಿ ಸಂಸ್ಥೆ ಪ್ರಕಟಿಸಿದೆ.
ಜನವರಿಯಲ್ಲಿ ಹಿಂಡೆನ್‍ಬರ್ಗ್ ಅದಾನಿ ಸಮೂಹ ಷೇರು ಮಾರುಕಟ್ಟೆಯಲ್ಲಿ ಅಕ್ರಮ ಎಸಗಿದೆ. ಅಕ್ರಮದ ಮೂಲಕ ತನ್ನ ಸಮೂಹದ ಕಂಪನಿಯ ಷೇರು ಬೆಲೆಯನ್ನು ಏರಿಕೆ ಮಾಡಿದ ಎಂದು ಆರೋಪಿಸಿ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಷೇರಿನ ಮೌಲ್ಯ ಹೆಚ್ಚಿಸಲು ಹಲವಾರು ಶೆಲ್ ಕಂಪನಿಗಳನ್ನು (shell companies) ಬಳಸಿಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು. ಇದನ್ನೂ ಓದಿ: ಮಹಿಳೆಯರ ಅಶ್ಲೀಲ ವೀಡಿಯೋಗಳನ್ನಿಟ್ಟುಕೊಂಡು ಬ್ಲಾಕ್‌ಮೇಲ್ – ಅಮೃತ್‌ಪಾಲ್ ಕರಾಳ ಮುಖ ಬಯಲು
ವರದಿಯ ಬೆನ್ನಲ್ಲೆ ಅದಾನಿ ಗ್ರೂಪ್ ಷೇರುಗಳು ಕುಸಿತ ಕಂಡಿದ್ದವು. ಈ ಬಗ್ಗೆ ಅದಾನಿ ಸಮೂಹ ಸಂಸ್ಥೆಗಳು ವರದಿಯ ಅಂಶಗಳನ್ನು ದುರುದ್ದೇಶಪೂರಿತ ಮತ್ತು ಆಧಾರರಹಿತ ಎಂದಿತ್ತು. ಅಲ್ಲದೇ ಭಾರತದ (India) ಮೇಲಿನ ದಾಳಿ ಇದಾಗಿದೆ ಎಂದು ತಿರುಗೇಟು ನೀಡಿತ್ತು. ಇದನ್ನೂ ಓದಿ: ಮನೆ ಬಿಟ್ಟು ನಾಪತ್ತೆಯಾದ ದಂಪತಿ – ಬೆಂಗಳೂರು ಪೊಲೀಸರಿಗೆ ಪೀಕಲಾಟ
ನವದೆಹಲಿ: ಹಿಂಡೆನ್‌ಬರ್ಗ್ (Hindenburg) ವರದಿ ಬಳಿಕ ಅದಾನಿ ಸಾಮ್ರಾಜ್ಯ ಪತನದತ್ತ ಮುಖ ಮಾಡಿದ್ದು, ಫೋರ್ಬ್ಸ್ (Forbes) ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿ (Gautam Adani) 3ನೇ ಸ್ಥಾನದಿಂದ 38ನೇ ಸ್ಥಾನಕ್ಕೆ ಕುಸಿದಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಕಂಪನಿಗಳ ನಿರಂತರ ಕುಸಿತದ ಪರಿಣಾಮದಿಂದಾಗಿ ಅವರು ದೊಡ್ಡ ಸಂಕಷ್ಟ ಎದುರಿಸುತ್ತಿದ್ದಾರೆ.
ಅದಾಗ್ಯೂ ಬ್ಲೂಮ್ ಬರ್ಗ್ ಬಿಲಿನೆಯರ್ಸ್ ಸೂಚ್ಯಂಕ (Bloomberg BillionairesIndex) ಪಟ್ಟಿಯಲ್ಲಿ ಗೌತಮ್ ಅದಾನಿ 30ನೇ ಸ್ಥಾನದಲ್ಲಿದ್ದಾರೆ. ಅವರು 40 ಶತಕೋಟಿ ಡಾಲರ್ ನಿವ್ವಳ ಮೌಲ್ಯ ಹೊಂದಿದ್ದಾರೆ ಎಂದು ಅದು ವರದಿ ಮಾಡಿದೆ. ಹಿಂಡೆನ್‌ಬರ್ಗ್ ವರದಿ ಬಳಿಕ ಅದಾನಿ 150 ಶತಕೋಟಿ ಡಾಲರ್ ಮೌಲ್ಯವನ್ನು ಕಳೆದುಕೊಂಡಿದ್ದಾರೆ ಎಂದು ಉಲ್ಲೇಖಿಸಿದೆ. ಇದನ್ನೂ ಓದಿ: Exit Polls: ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿಗೆ ಅಧಿಕಾರ – ಮೇಘಾಲಯದಲ್ಲಿ 3ನೇ ಸ್ಥಾನ
84.3 ಶತಕೋಟಿ ಡಾಲರ್ ನಿವ್ವಳ ಮೌಲ್ಯ ಹೊಂದಿರುವ ಮುಕೇಶ್ ಅಂಬಾನಿ (Mukesh Ambani) ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ. ಪೆಟ್ರೋಕೆಮಿಕಲ್ಸ್, ತೈಲ ಮತ್ತು ಅನಿಲ, ಟೆಲಿಕಾಂ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ರಿಲಯನ್ಸ್ ಹೂಡಿಕೆ ಮಾಡಿದೆ.
ನವದೆಹಲಿ: ಹಿಂಡೆನ್‌ಬರ್ಗ್ (Hindenburg) ವರದಿ ಬಳಿಕ ಉದ್ಯಮಿ ಗೌತಮ್ ಅದಾನಿ (Gautam Adani) ಕಂಪನಿಗಳ ಷೇರುಗಳಲ್ಲಿ ಭಾರೀ ಕುಸಿತ ಕಂಡಿದ್ದು ಅವರ ಸಂಪತ್ತಿನ ಮೌಲ್ಯ 5,000 ಕೋಟಿ ಡಾಲರ್(ಸುಮಾರು 4 ಲಕ್ಷ ಕೋಟಿ ರೂ.) ಕಡಿಮೆಯಾಗಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ (Bloomberg Billionaires Index) ನವೀಕರಿಸಿದ ಡೇಟಾದ ಪ್ರಕಾರ ಅವರ ಒಟ್ಟು ಸಂಪತ್ತು ಈಗ 49.1 ಬಿಲಿಯನ್ ಡಾಲರ್ (ಸುಮಾರು 4 ಲಕ್ಷ ಕೋಟಿ ರೂ.) ಆಗಿದೆ.
ಒಂದು ತಿಂಗಳ ಹಿಂದೆ ಗೌತಮ್ ಅದಾನಿ ಸಂಪತ್ತಿನ ಮೌಲ್ಯ ಸುಮಾರು 120 ಶತಕೋಟಿ ಡಾಲರ್ (ಸುಮಾರು 9.91 ಲಕ್ಷ ಕೋಟಿ ರೂ.) ನಷ್ಟಿತ್ತು. ಈ ಮೂಲಕ ಅವರು ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದರು. ಹಿಂಡೆನ್‌ಬರ್ಗ್ ವರದಿ ಬಳಿಕ ಷೇರುಗಳ ಕುಸಿತದಿಂದಾಗಿ ದೊಡ್ಡ ಪ್ರಮಾಣದ ಸಂಪತ್ತನ್ನು ಅದಾನಿ ಕಳೆದುಕೊಂಡಿದ್ದಾರೆ.
ಇದು ಕೈಗಾರಿಕಾ ಉದ್ಯಮಿ ಗೌತಮ್ ಅದಾನಿ ಸಂಗ್ರಹಿಸಿದ ವೈಯಕ್ತಿಕ ಸಂಪತ್ತಿನ ಮೇಲೆ ತೀವ್ರ ಪರಿಣಾಮ ಬೀರಿದೆ. ಅವರು ವರ್ಷದ ಆರಂಭದಿಂದ 71 ಶತಕೋಟಿ ಡಾಲರ್‌ನಷ್ಟು (ಸುಮಾರು 5 ಲಕ್ಷ ಕೋಟಿ ರೂ.) ಸಂಪತ್ತು ಕಳೆದುಕೊಂಡಿದ್ದಾರೆ. ಇದರಿಂದಾಗಿ 500 ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಪಟ್ಟಿಯಲ್ಲಿ ಹಂತ ಹಂತವಾಗಿ ಸ್ಥಾನ ಕಳೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್‌ನಂತೆ ಇನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲೂ ವೆರಿಫೈಡ್ ಖಾತೆಗಳಿಗೆ ದುಡ್ಡು ಪಾವತಿಸಬೇಕು
LIVE TV
[brid partner=56869869 player=32851 video=960834 autoplay=true]
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯನ್ನು (Narendra Modi) ಟೀಕಿಸಿ, ಉದ್ಯಮಿ ಗೌತಮ್ ಅದಾನಿ ಕುರಿತಾದ ಹಿಂಡನ್‍ಬರ್ಗ್ (Hindenburg) ಕುರಿತಾದ ವರದಿ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ಕೋಟ್ಯಧಿಪತಿ ಜಾರ್ಜ್ ಸೊರಸ್ (George Soros) ಅವರನ್ನು ಕೇಂದ್ರ ಸರ್ಕಾರ ಇಂದು ತರಾಟೆಗೆ ತೆಗೆದುಕೊಂಡಿದೆ.
ಜಾರ್ಜ್ ಸೊರಸ್ ಮ್ಯೂನಿಚ್ ಸೆಕ್ಯುರಿಟಿ ಕಾನ್ಫ್‍ರೆನ್ಸ್‍ನಲ್ಲಿ ಸೊರೊಸ್ ಅದಾನಿ ಕಂಪನಿಗಳ ವಂಚನೆ ಹಾಗೂ ಈ ಕುರಿತು ಪ್ರಧಾನಿ ಮೋದಿಯವರ ಮೌನದ ಕುರಿತು ಅವರು ಧ್ವನಿ ಎತ್ತಿದ್ದರು. ಮೋದಿಯವರ ಅಡಳಿತದ ಭಾರತವು ಕೆಳಮಟ್ಟಕ್ಕೆ ಕುಸಿಯುತ್ತಿದೆ. ಭಾರತ ಕ್ವಾಡ್ ದೇಶವಾಗಿದ್ದರೂ ರಷ್ಯಾದಿಂದ ತೈಲ ಖರೀದಿಸುತ್ತಿದೆ. ಭಾರತದಲ್ಲಿ ಪ್ರಜಾಸತ್ತಾತ್ಮಕ ಸುಧಾರಣೆಗಳನ್ನು ನಾನು ಬಯಸುತ್ತೇನೆ ಎಂದು ಸೊರಸ್ ಅಭಿಪ್ರಾಯ ಪಟ್ಟಿದ್ದರು. ಇದನ್ನೂ ಓದಿ: ಬಜೆಟ್‌ನಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ಅನುದಾನ: ಬೊಮ್ಮಾಯಿ ಭರವಸೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani), ಭಾರತವನ್ನು ಸಹಿಸಲಾಗದೆ ವಿದೇಶಿ ಶಕ್ತಿಗಳು ದಾಳಿ ನಡೆಸುತ್ತಿವೆ. ಇದರ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಪ್ರತಿಕ್ರಿಯಿಸುವ ಅಗತ್ಯವಿದೆ ಎಂದಿದ್ದಾರೆ.
ಯಾರು ಈ ಸೊರಸ್?
92 ವರ್ಷದ ಸೊರಸ್ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಯಹೂದಿ ಕುಟುಂಬದಲ್ಲಿ ಜನಿಸಿದ್ದ ಇವರು 17 ವರ್ಷದವರಿದ್ದಾಗ ನಾಝಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಹಂಗೇರಿಯನ್ನು ತೊರೆದು 1947ರಲ್ಲಿ ಲಂಡನ್ ಸೇರಿದ್ದರು. ನಂತರ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ತತ್ವಶಾಸ್ತ್ರ ಅಧ್ಯಯನ ಮಾಡಿದ್ದರು.
ವಿದ್ಯಾಭ್ಯಾಸದ ನಂತರ ಲಂಡನ್ ಮರ್ಚೆಂಟ್ ಬ್ಯಾಂಕ್ ಸಿಂಗರ್ ಮತ್ತು ಫ್ರೈಡ್‍ಲ್ಯಾಂಡರ್‍ಗೆ ಸೇರಿದರು. 1956ರಲ್ಲಿ ನ್ಯೂಯಾರ್ಕ್‍ಗೆ ತೆರಳಿದ ಅವರು ಯುರೋಪಿಯನ್ ಸೆಕ್ಯುರಿಟಿ ವಿಶ್ಲೇಷಕರಾಗಿ ಸೇರಿಕೊಂಡರು. 1973ರಲ್ಲಿ ಹೂಡಿಕೆ ಸಂಸ್ಥೆಯನ್ನು ಸ್ಥಾಪಿಸಿ ವಿದೇಶದ ಕಂಪನಿಗಳಲ್ಲಿ ಹಣ ಹೂಡಿ ಅದರಲ್ಲಿ ಯಶಸ್ಸು ಕಂಡರು.
ಸೊರಸ್ 8.5 ಶತಕೋಟಿ ಡಾಲರ್ ಒಡೆಯರಾಗಿದ್ದಾರೆ. ಪ್ರಜಾಪ್ರಭುತ್ವ ಹಾಗೂ ವಾಕ್ ಸ್ವಾತಂತ್ರ್ಯವನ್ನು ಉತ್ತೇಜಿಸುವ ಸಂಘಟನೆಗಳು ಹಾಗೂ ವ್ಯಕ್ತಿಗಳಿಗೆ ಅನುದಾನ ನೀಡುವ ಓಪನ್ ಸೊಸೈಟಿ ಫೌಂಡೇಶನ್‍ಗಳನ್ನು ಅವರು ಸ್ಥಾಪಿಸಿದ್ದಾರೆ. ಭಾರತದ ಹಲವು ಮಾಧ್ಯಮ ಸಂಸ್ಥೆಗಳಿಗೆ ಓಪನ್ ಸೊಸೈಟಿ ಅನುದಾನ ನೀಡುತ್ತಿದೆ. ಇದನ್ನೂ ಓದಿ: ನಕಲು ತಡೆಗೆ ಕಠಿಣ ಕ್ರಮ – ವಾರ್ಷಿಕ ಪರೀಕ್ಷೆಯ ಮೊದಲ ದಿನವೇ 4 ಲಕ್ಷ ವಿದ್ಯಾರ್ಥಿಗಳು ಗೈರು
ಶೀತಲ ಸಮರದ ಅಂತ್ಯದ ವೇಳೆಗೆ ಜೆಕಾಸ್ಲೋವಾಕಿಯ, ಪೋಲೆಂಡ್, ರಷ್ಯಾ ಮತ್ತು ಯುಗೊಸ್ಲಾವಿಯಾದಲ್ಲಿ ತಮ್ಮ ಸಂಸ್ಥೆಯನ್ನು ಸ್ಥಾಪಿಸಿದರು. ಇಂದು ಒಪನ್ ಸೊಸೈಟಿ ಫೌಂಡೇಶನ್ 70ಕ್ಕೂ ಹೆಚ್ಚು ದೇಶಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ರಾಜಕೀಯ ಚಳುವಳಿಯಲ್ಲಿ ಭಾಗವಹಿಸುವ ಅವರು ಬರಾಕ್ ಒಬಾಮ (Barack Obama), ಹಿಲರಿ ಕ್ಲಿಂಟನ್ ಮತ್ತು ಜೋ ಬೈಡನ್ (Joe Biden) ಅವರನ್ನು ಬೆಂಬಲಿಸಿದ್ದರು. ಹಾಗೆ ಚೀನಾ ಅಧ್ಯಕ್ಷ ಜಿನ್‍ಪಿಂಗ್, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಟರ್ಕಿ (Turkey) ಅಧ್ಯಕ್ಷ ಎರ್ಡೋಗನ್ ಅವರನ್ನು ವಿರೋಧಿಸಿದ್ದರು.
ಕಳೆದ ತಿಂಗಳು ಅಮೆರಿಕದ ಶಾರ್ಟ್ ಸೆಲ್ಲರ್ ಸಂಸ್ಥೆ ಹಿಂಡನ್‍ಬರ್ಗ್ ಸಂಸ್ಥೆ ಅದಾನಿ ಕಂಪನಿಯ ವಂಚನೆ ಕುರಿತಾದ ಸಂಶೋಧನ ವರದಿಯೊಂದನ್ನು ಪ್ರಕಟಿಸಿತ್ತು. ಇದಾದ ನಂತರ ಅದಾನಿ ಕಂಪನಿಯ ಷೇರುಗಳು ಕುಸಿತ ಕಂಡಿದ್ದವು. ಆದರೆ ಹಿಂಡನ್‍ಬರ್ಗ್ ವರದಿಯನ್ನು ಅದಾನಿ ಸಂಸ್ಥೆ ಅಲ್ಲಗಳೆದು ದೀರ್ಘವಾದ ಉತ್ತರ ನೀಡಿತ್ತು.
ಭಾರೀ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ಅಮೆರಿಕ ಡೌ ಜೋನ್ಸ್ ತನ್ನ ಸುಸ್ಥಿರ ಸೂಚ್ಯಂಕ ಪಟ್ಟಿಯಿಂದ ಅದಾನಿ ಎಂಟರ್‌ಪ್ರೈಸಸ್ (Adani Enterprises) ಷೇರುಗಳನ್ನು ಕೈಬಿಟ್ಟಿದೆ. ಈ ಮಧ್ಯೆ ಜಾಗತಿಕಕ ರೇಟಿಂಗ್ ಏಜೆನ್ಸಿ ಎಸ್ ಆಂಡ್‌ಪಿ ಅದಾನಿ ಎಲೆಕ್ಟ್ರಿಸಿಟಿ ಮತ್ತು ಅದಾನಿ ಪೋರ್ಟ್ಸ್ ಕಂಪನಿಗಳ ಶ್ರೇಯಾಂಕವನ್ನು ನೆಗೆಟಿವ್‌ಗೆ ಇಳಿಸಿದೆ.
ಗುರುವಾರದವರೆಗೆ ಅದಾನಿ ಕಂಪನಿಯ ಷೇರುಗಳು ಕುಸಿತ ಕಾಣುತ್ತಿದ್ದವು. ಆದರೆ ಶುಕ್ರವಾರ ಅದಾನಿ ಎಂಟರ್‌ಪೈಸಸ್, ಅದಾನಿ ಪೋರ್ಟ್ಸ್, ಎಸಿಸಿ, ಅಂಬುಜಾ ಸಿಮೆಂಟ್ ಕಂಪನಿಗಳ ಷೇರು ಚೇತರಿಕೆ ಕಂಡಿದೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಉದ್ಯಮಿ ಗೌತಮ್ ಅದಾನಿ ಸಮೂಹ (Gautam Adani Group) ಸಂಸ್ಥೆಗಳ ಷೇರುಗಳ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಬೆನ್ನಲ್ಲೇ 20 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದ್ದ ಎಫ್‌ಪಿಒ ಪ್ರಕ್ರಿಯೆಯನ್ನೇ ರದ್ದು ಮಾಡಿದೆ..
ಅಮೆರಿಕದ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ಪ್ರಕಟಿಸಿದ್ದ ವರದಿ ವಿಶ್ವಾದ್ಯಂತ ಸದ್ದು ಮಾಡಿತ್ತು. ವರದಿ ಪ್ರಕಟಗೊಂಡ ಬೆನ್ನಲ್ಲೇ ಅದಾನಿ (Gautam Adani) ಸಮೂಹ ಸಂಸ್ಥೆಗಳ ಷೇರು ಕಳೆದ ಮೂರ್ನಾಲ್ಕು ದಿನಗಳಲ್ಲಿ ಮತ್ತಷ್ಟು ಕುಸಿತ ಕಂಡ ಬೆನ್ನಲ್ಲೇ ಅದಾನಿ ಕಂಪನಿ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
20,000 ಕೋಟಿ ರೂ. ಮೌಲ್ಯದ ಎಫ್‌ಪಿಒಗೆ(ಮುಂದುವರಿದ ಸಾರ್ವಜನಿಕ ಕೊಡುಗೆ ಅಥವಾ ಹೊಸದಾಗಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ) ಅದಾನಿ ಕಂಪನಿಯು ಇತ್ತೀಚೆಗಷ್ಟೇ ಚಾಲನೆ ನೀಡಿತ್ತು. ಆದರೆ ಈಗ ಎಫ್‌ಪಿಒ ರದ್ದುಗೊಳಿಸಿ, ಹೂಡಿಕೆದಾರರಿಗೆ ಹಣ ವಾಪಸ್ ಕೊಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿತ್ತು. ಇದರ ಬೆನ್ನಲ್ಲೇ ಗೌತಮ್ ಅದಾನಿ (Gautam Adani) ಪ್ರತಿಕ್ರಿಯಿಸಿ ಹೂಡಿಕೆದಾರರ ಆಸಕ್ತಿ ಬಹಳ ಮುಖ್ಯ ಎಂದು ಹೇಳಿದ್ದಾರೆ.
ವಾಣಿಜ್ಯೋದ್ಯಮಿಯಾಗಿ 4 ದಶಕಗಳ ನನ್ನ ಪ್ರಯಾಣದಲ್ಲಿ ಹೂಡಿಕೆದಾರ ಸಮುದಾಯದಿಂದ ಅಗಾಧ ಬೆಂಬಲ ಪಡೆದಿದ್ದೇನೆ. ಜೀವನದಲ್ಲಿ ನಾನೇನಾದರೂ ಒಂದಷ್ಟು ಸಾಧಿಸಿದ್ದೇನೆಂದರೆ, ಅದು ಅವರ ನಂಬಿಕೆಯಿಂದ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ನನ್ನ ಎಲ್ಲಾ ಯಶಸ್ಸಿಗೆ ನಾನು ಅವರಿಗೆ ಋಣಿಯಾಗಿದ್ದೇನೆ. ನನಗೆ ನನ್ನ ಹೂಡಿಕೆದಾರರ ಹಿತಾಸಕ್ತಿ ಬಹಳ ಮುಖ್ಯ. ಮಿಕ್ಕೆಲ್ಲವೂ ಗೌಣ. ಆದ್ದರಿಂದ ಸಂಭಾವ್ಯ ನಷ್ಟದಿಂದ ಹೂಡಿಕೆದಾರರನ್ನು ರಕ್ಷಿಸಲು ನಾವು FPO ಅನ್ನು ಹಿಂತೆಗೆದುಕೊಂಡಿದ್ದೇವೆ ಎಂದು ಮಾತನಾಡಿದ್ದಾರೆ.
20,000 ಕೋಟಿ ರೂ. ಮೌಲ್ಯದ ಎಫ್‌ಪಿಒಗೆ ಅದಾನಿ ಕಂಪನಿಯು ಇತ್ತೀಚೆಗಷ್ಟೇ ಚಾಲನೆ ನೀಡಿತ್ತು. ಪ್ರತಿ ಷೇರಿಗೆ 3,112ರಿಂದ 3,276 ರೂ. ಆಫರ್ ಮಾಡಲಾಗಿತ್ತು. ಎಫ್‌ಪಿಒ ಬಿಡ್ ಸಲ್ಲಿಕೆ ಅವಧಿ ಮಂಗಳವಾರಷ್ಟೇ ಪೂರ್ಣಗೊಂಡಿತ್ತು.
ಅಮೆರಿಕದ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ಪ್ರಕಟಿಸಿದ ವರದಿ ಪರಿಣಾಮ ಅದಾನಿ ಸಮೂಹ ಸಂಸ್ಥೆಗಳ ಷೇರಿನಲ್ಲಿ ಕುಸಿತ ಆಗಿದೆ. ಷೇರುಗಳು ಹೀಗೇ ಕುಸಿಯುತ್ತಾ ಸಾಗಿದರೆ, ಶೀಘ್ರದಲ್ಲೇ ಅವರು ಏಷ್ಯಾದ ಶ್ರೀಮಂತ ವ್ಯಕ್ತಿಯ ಪಟ್ಟದಿಂದಲೂ ಕೆಳಗಿಳಿಯುವ ಸಾಧ್ಯತೆಗಳು ದಟ್ಟವಾಗಿವೆ.
Live Tv
[brid partner=56869869 player=32851 video=960834 autoplay=true]