Tag: Hindenburg Research

  • ಅದಾನಿ ಕಂಪನಿಗಳನ್ನು ಕಾಡಿದ್ದ ಹಿಂಡನ್‌ಬರ್ಗ್‌ಗೆ ಬೀಗ – ಬಂದ್‌ ಆಗಿದ್ದು ಯಾಕೆ?

    ಅದಾನಿ ಕಂಪನಿಗಳನ್ನು ಕಾಡಿದ್ದ ಹಿಂಡನ್‌ಬರ್ಗ್‌ಗೆ ಬೀಗ – ಬಂದ್‌ ಆಗಿದ್ದು ಯಾಕೆ?

    – ಯಾವುದೇ ಬೆದರಿಕೆಯಿಂದ ಮುಚ್ಚುತ್ತಿಲ್ಲ
    – ವೈಯಕ್ತಿಕ ಕಾರಣಗಳಿಂದಾಗಿ ಸಂಸ್ಥೆಯನ್ನು ಮುಚ್ಚುತ್ತಿದ್ದೇವೆ

    ವಾಷಿಂಗ್ಟನ್‌: ಅದಾನಿ ಸಮೂಹ ಕಂಪನಿಗಳನ್ನು (Adani Group) ಗುರಿಯಾಗಿ ವರದಿ ಪ್ರಕಟಿಸಿ ಸಂಚಲನ ಉಂಟುಮಾಡಿದ್ದ ಅಮೆರಿಕ ಶಾರ್ಟ್‌ ಸೆಲ್ಲಿಂಗ್‌ ಕಂಪನಿ ಹಿಂಡನ್‌ಬರ್ಗ್‌ ರಿಸರ್ಚ್‌ (Hindenburg Research) ಬಾಗಿಲು ಮುಚ್ಚಿದೆ.

    ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯನ್ನು ವಿಸರ್ಜಿಸಲು ನಿರ್ಧರಿಸಿದ್ದೇನೆ ಎಂದು ಎಂದು ಸಂಸ್ಥಾಪಕ ನೇಟ್ ಆಂಡರ್ಸನ್ (Nate Anderson) ಹೇಳಿದ್ದಾರೆ.

    ಅಚ್ಚರಿ ಏನೆಂದರೆ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಜ.20 ರಂದು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅಧಿಕಾರ ಸ್ವೀಕರಿಸಲು 4 ದಿನ ಮೊದಲೇ ಹಿಂಡನ್‌ಬರ್ಗ್‌ ಮುಚ್ಚುವ ನಿರ್ಧಾರ ಪ್ರಕಟವಾಗಿದೆ.

    ಈ ವಿಚಾರದ ಬಗ್ಗೆಯೂ ಅಂಡರ್ಸನ್‌ ಪ್ರತಿಕ್ರಿಯಿಸಿ, ಈ ಶಾರ್ಟ್ ಸೆಲ್ಲರ್ ನಿರ್ಧಾರದ ಹಿಂದೆ ಯಾವುದೇ ನಿರ್ದಿಷ್ಟ ಬೆದರಿಕೆ ಅಥವಾ ವೈಯಕ್ತಿಕ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಂಸ್ಥೆಯನ್ನು ಮುಚ್ಚಲು ನಿರ್ದಿಷ್ಟ ಕಾರಣ ಏನು ಎನ್ನುವುದನ್ನು ಹೇಳಿಲ್ಲ. ವೈಯಕ್ತಿಕ ಕಾರಣಗಳಿಂದಾಗಿ ಸಂಸ್ಥೆಯನ್ನು ಮುಚ್ಚುತ್ತಿದ್ದೇವೆ. ವೈಯಕ್ತಿಕ ಜೀವನಕ್ಕೆ ಹೆಚ್ಚು ಸಮಯ ನೀಡಲು ತಾನು ಈ ನಿರ್ಧಾರ ಮಾಡಿದ್ದಾಗಿ ಆಂಡರ್ಸನ್ ತಿಳಿಸಿದ್ದಾರೆ.

    2017ರಲ್ಲಿ ಸ್ಥಾಪನೆಯಾದ ಹಿಂಡನ್‌ಬರ್ಗ್‌ ಬಹುರಾಷ್ಟ್ರೀಯ ಕಾರ್ಪೋರೇಟ್‌ ಕಂಪನಿಗಳ ಮೋಸವನ್ನು ಬಯಲು ಮಾಡುವುದು ತನ್ನ ಉದ್ದೇಶ ಎಂದು ಹೇಳಿಕೊಂಡಿತ್ತು. ಹಲವಾರು ಕಂಪನಿಗಳ ಬಗ್ಗೆ ವರದಿ ಪ್ರಕಟಿಸಿತ್ತು. ಇದರಿಂದ ಹಲವು ಕಂಪನಿಗಳಿಗೆ ಆರ್ಥಿಕವಾಗಿ ಬಹಳ ಸಮಸ್ಯೆಯಾಗಿತ್ತು. ಈ ಹಿಂಡನ್‌ಬರ್ಗ್‌  ಸಂಸ್ಥೆಯ ಮೇಲೆ ಕಂಪನಿಗಳು ಕೇಸ್‌ ಹಾಕಿದ್ದವು.

    2023ರಲ್ಲಿ ಅದಾನಿ ಕಂಪನಿಯನ್ನು ಗುರಿಯಾಗಿಸಿದ್ದ ಹಿಂಡನ್‌ಬರ್ಗ್‌ ನಂತರ ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ ವಿರುದ್ಧವೇ ವರದಿ ಪ್ರಕಟಿಸಿತ್ತು. ಈ ವರದಿಗಳು ಪ್ರಕಟವಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗಿತ್ತು. ಅದಾನಿ ಕಂಪನಿಗಳ ಷೇರುಗಳ ಮೌಲ್ಯ ಭಾರೀ ಕುಸಿತಗೊಂಡಿತ್ತು.

    ಅದಾನಿ ಕಂಪನಿಗಳ ವಿರುದ್ಧ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ಸಮಿತಿ ರಚನೆ ಮಾಡಿತ್ತು. ಈ ಸಮಿತಿ ಅದಾನಿ ಕಂಪನಿ ಕೃತಕವಾಗಿ ಷೇರುಗಳ ಬೆಲೆ ಹೆಚ್ಚಳ ಮಾಡಿಲ್ಲ ಎಂದು ವರದಿ ಸಲ್ಲಿಸಿತ್ತು.

    ಲೋಕಸಭಾ ಅಧಿವೇಶನ ಆರಂಭಗೊಳ್ಳುವ ಸಮಯದಲ್ಲೇ ಹಿಂಡನ್‌ಬರ್ಗ್‌ ವರದಿ ಪ್ರಕಟ ಮಾಡುತ್ತಿತ್ತು. ಈ ವರದಿಯನ್ನು ಆಧಾರವಾಗಿಟ್ಟುಕೊಂಡು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವು. ಇದಕ್ಕೆ ಬಿಜೆಪಿ ಪ್ರತಿಕ್ರಿಯಿಸಿ ಹಿಂಡನ್‌ಬರ್ಗ್‌ನಲ್ಲಿ ಜಾರ್ಜ್‌ ಸೊರೊಸ್ (George Soros) ಮುಖ್ಯ ಹೂಡಿಕೆದಾರ. ಭಾರತದ ಆರ್ಥಿಕ ಬೆಳವಣಿಗೆಯನ್ನು ಹಳಿತಪ್ಪಿಸಲು ವಿದೇಶದಿಂದ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿತ್ತು.

    ಹಿಂಡನ್‌ಬರ್ಗ್‌ ಹೆಸರಿನಲ್ಲೇ ಶಾರ್ಟ್‌ ಸೆಲ್ಲಿಂಗ್‌ ಕಂಪನಿಯಾಗಿದೆ. ಉದ್ದೇಶಪೂರ್ವಕವಾಗಿ ತನ್ನ ಗ್ರಾಹಕರಿಗೆ ಲಾಭ ಮಾಡಲು ಈ ವರದಿ ಬಿಡುಗಡೆ ಮಾಡುತ್ತಿದೆ ಎಂಬ ಆರೋಪ ಬಂದಿತ್ತು.

    ಏನಿದು ಶಾರ್ಟ್‌ಸೆಲ್ಲಿಂಗ್‌?
    ಶಾರ್ಟ್ ಸೆಲ್ಲಿಂಗ್ ಎನ್ನುವುದು ಹೂಡಿಕೆಯ ತಂತ್ರವಾಗಿದ್ದು ಇದಕ್ಕೆ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಅವಕಾಶವಿದೆ. ಮುಂದಿನ ದಿನಗಳಲ್ಲಿ ಕಂಪನಿಯ ಷೇರು ಮೌಲ್ಯ ಕುಸಿಯಬಹುದು ಎಂಬುದನ್ನು ಮೊದಲೇ ಊಹಿಸಿ ನಿಗದಿತ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿ ನಂತರ ಆ ಕಂಪನಿಯ ಷೇರು ಮೌಲ್ಯ ಕುಸಿತಗೊಂಡಾಗ ಅವುಗಳನ್ನು ಕಡಿಮೆ ಬೆಲೆಗೆ ಮರು ಖರೀದಿಸಿ ಲಾಭ ಮಾಡುವುದಕ್ಕೆ ಶಾರ್ಟ್‌ ಸೆಲ್ಲಿಂಗ್‌ ಎಂದು ಕರೆಯಲಾಗುತ್ತದೆ. ಇದು ಒಂದು ರೀತಿಯಲ್ಲಿ ಅಪಾಯದ ಕಾರ್ಯಾಚರಣೆ. ಒಂದು ವೇಳೆ ಷೇರುಗಳ ಮೌಲ್ಯ ಕಡಿಮೆ ಆಗದೇ ಇದ್ದರೆ ಶಾರ್ಟ್‌ ಸೆಲ್ಲಿಂಗ್‌ ಟ್ರೇಡರ್‌ಗಳಿಗೆ ನಷ್ಟವಾಗುತ್ತದೆ.

     

    ಅದಾನಿಯಿಂದ ಎಫ್‌ಪಿಒ ರದ್ದು:
    20,000 ಕೋಟಿ ರೂ. ಮೌಲ್ಯದ ಎಫ್‌ಪಿಒಗೆ (ಮುಂದುವರಿದ ಸಾರ್ವಜನಿಕ ಕೊಡುಗೆ ಅಥವಾ ಹೊಸದಾಗಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ) ಅದಾನಿ ಕಂಪನಿ 2023ರ ಜನವರಿಯಲ್ಲಿ ಚಾಲನೆ ನೀಡಿತ್ತು. ಪ್ರತಿ ಷೇರಿಗೆ 3,112ರಿಂದ 3,276 ರೂ. ಆಫರ್‌ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹಿಂಡನ್‌ಬರ್ಗ್‌ ಅದಾನಿ ಕಂಪನಿ ವಿರುದ್ಧ ಸಂಶೋಧನಾ ವರದಿ ಬಿಡುಗಡೆ ಮಾಡಿತ್ತು. ವರದಿ ಬಳಿಕ ಅದಾನಿ ಕಂಪನಿಯ ಷೇರಿನ ಮೌಲ್ಯ ಕುಸಿತ ಕಂಡಿದ್ದರೂ ಎಫ್‌ಪಿಒ ಬಿಡ್‌ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿತ್ತು.

    ಷೇರುಗಳ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ನಂತರ 20 ಸಾವಿರ ಕೋಟಿ ರೂ. ಬಂಡವಾಳ ಸಂಗ್ರಹಿಸಲು ಮುಂದಾಗಿದ್ದ ಎಫ್‌ಪಿಒ ಪ್ರಕ್ರಿಯೆಯನ್ನೇ ಅದಾನಿ ಸಮೂಹ ರದ್ದು ಮಾಡಿತ್ತು. ನಮ್ಮ ಷೇರು ಮೌಲ್ಯ ಕುಸಿದಿದೆ. ಈ ಸಂದರ್ಭದಲ್ಲಿ ಎಫ್‌ಪಿಒನೊಂದಿಗೆ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂದು ಹೇಳಿ ಹೂಡಿಕೆದಾರರ ಹಣವನ್ನು ಮರಳಿಸಲಾಗುವುದು ಎಂದು ಗೌತಮ್‌ ಅದಾನಿ ತಿಳಿಸಿದ್ದರು.

     

  • ಗುತ್ತಿಗೆ ಪಡೆಯಲು ಭಾರತದಲ್ಲಿ 2,200 ಕೋಟಿ ಲಂಚ – ಅದಾನಿ ವಿರುದ್ಧ ಅಮೆರಿಕ ಕೋರ್ಟ್‌ ಅರೆಸ್ಟ್‌ ವಾರೆಂಟ್‌

    ಗುತ್ತಿಗೆ ಪಡೆಯಲು ಭಾರತದಲ್ಲಿ 2,200 ಕೋಟಿ ಲಂಚ – ಅದಾನಿ ವಿರುದ್ಧ ಅಮೆರಿಕ ಕೋರ್ಟ್‌ ಅರೆಸ್ಟ್‌ ವಾರೆಂಟ್‌

    – 5 ರಾಜ್ಯಗಳಲ್ಲಿ ಗುತ್ತಿಗೆಗಾಗಿ ಅಧಿಕಾರಿಗಳಿಗೆ ಲಂಚ
    – ಅಮೆರಿಕದಲ್ಲಿ ಹೂಡಿಕೆ ಸಂಗ್ರಹದಿಂದ ಹಿಂದೆ ಸರದಿ ಅದಾನಿ ಗ್ರೀನ್‌

    ವಾಷಿಂಗ್ಟನ್‌: ಕಳೆದ ವರ್ಷ ಭಾರತದಲ್ಲಿ 20,000 ಕೋಟಿ ರೂ. ಮೌಲ್ಯದ ಎಫ್‌ಪಿಒಗೆ (ಮುಂದುವರಿದ ಸಾರ್ವಜನಿಕ ಕೊಡುಗೆ ಅಥವಾ ಹೊಸದಾಗಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ) ಅದಾನಿ ಎಂಟರ್‌ಪ್ರೈಸಸ್‌ ಚಾಲನೆ ನೀಡುವ ಸಂದರ್ಭದಲ್ಲಿ ಹಿಂಡೆನ್‌ಬರ್ಗ್‌ ಸಂಶೋಧನಾ (Hindenburg Research) ವರದಿ ಪ್ರಕಟಗೊಂಡು ಶಾಕ್‌ ನೀಡಿತ್ತು. ಈಗ ಅಮೆರಿಕದಲ್ಲಿ ಅದಾನಿ ಗ್ರೀನ್‌ ಎನರ್ಜಿಗಾಗಿ (Adani Green Energy) 6,000 ಮಿಲಿಯನ್‌ ಅಮೆರಿಕನ್‌ ಡಾಲರ್‌ ಬಾಂಡ್‌ ಬಿಡುಗಡೆ ಮಾಡಿ ಹೂಡಿಕೆ ಸಂಗ್ರಹಿಸಲು ಮುಂದಾಗಿದ್ದ ಗೌತಮ್‌ ಅದಾನಿ ಅವರಿಗೆ ಅಮೆರಿಕ ನ್ಯಾಯಾಂಗ ಇಲಾಖೆ ಶಾಕ್‌ ನೀಡಿದೆ.

    ಗೌತಮ್‌ ಅದಾನಿ (Gautam Adani) ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಸೇರಿದಂತೆ ಇತರ ಏಳು ಅಧಿಕಾರಿಗಳು ಸೌರ ಶಕ್ತಿಯ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ 265 ಮಿಲಿಯನ್ ಡಾಲರ್‌ಗೂ (ಅಂದಾಜು 2238 ಕೋಟಿ ರೂ.) ಹೆಚ್ಚು ಲಂಚದ (Bribe) ಭರವಸೆ ನೀಡಿದ್ದಾರೆ ಎಂದು ಆರೋಪಿಸಿದೆ.

    ನ್ಯೂಯಾರ್ಕ್‌ ಕೋರ್ಟ್‌ ಗೌತಮ್ ಅದಾನಿ ಮತ್ತು ಸಾಗರ್ ಅದಾನಿಗೆ ಬಂಧನ ವಾರೆಂಟ್‌ ಹೊರಡಿಸಿದೆ. ಆ ವಾರೆಟ್‌ಗಳನ್ನು ವಿದೇಶಿ ಕಾನೂನು ಜಾರಿ ಸಂಸ್ಥೆಗಳಿಗೆ ಹಸ್ತಾಂತರಿಸಲು ಪ್ರಾಸಿಕ್ಯೂಟರ್‌ಗಳು ಯೋಜಿಸಿದ್ದಾರೆ ಎಂದು ವರದಿಯಾಗಿದೆ.

    ಗೌತಮ್ ಅದಾನಿ, ಸೈರಿಲ್ ಕೆಬನೆಸ್,  ಸಾಗರ್ ಅದಾನಿ, ವಿನೀತ್ ಜೈನ್, ರಂಜಿತ್ ಗುಪ್ತ, ಸೌರಭ್ ಅಗರ್ವಾಲ್, ದೀಪಕ್ ಮಲ್ಹೋತ್ರಾ, ರೂಪೇಶ್ ಅಗರ್ವಾಲ್ ಅವರ ವಿರುದ್ಧ  ವಂಚನೆ ಪಿತೂರಿ  ಆರೋಪ ಮಾಡಲಾಗಿದೆ. ಇದನ್ನೂ ಓದಿ: PUBLiC TV Impact| ಸರ್ಕಾರಕ್ಕೆ ರೇಷನ್ ಕಾರ್ಡ್ ಪರಿಷ್ಕರಣೆ ವರದಿ ಸಲ್ಲಿಕೆ: ರದ್ದಿಗೆ ಮಾನದಂಡ ಏನು?

    ಮಹತ್ವದ ಬೆಳವಣಿಗೆಯ ಬೆನ್ನಲ್ಲೇ 6,000 ಮಿಲಿಯನ್‌ ಅಮೆರಿಕನ್‌ ಡಾಲರ್‌ ಬಾಂಡ್‌ ಬಿಡುಗಡೆ ಮಾಡಿ ಹೂಡಿಕೆ ಆಕರ್ಷಿಸಲು ಮುಂದಾಗಿದ್ದ ಅದಾನಿ ಗ್ರೀನ್ ಎನರ್ಜಿ ಕಂಪನಿಯು ತನ್ನ ನಿರ್ಧಾರದಿಂದ ಹಿಂದೆ ಸರಿಯುದಾಗಿ ತಿಳಿಸಿದೆ.

    ಆರೋಪ ಏನು?
    ಅಧಿಕಾರಿಗಳಿಗೆ ಲಂಚ ನೀಡಿ ಹೂಡಿಕೆದಾರರನ್ನು ವಂಚಿಸಿದ್ದಾರೆ. ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಹೇಳಿಕೆಗಳ ಮೂಲಕ ಯುಎಸ್ ಹೂಡಿಕೆದಾರರು ಮತ್ತು ಜಾಗತಿಕ ಹಣಕಾಸು ಸಂಸ್ಥೆಗಳಿಂದ ಹಣವನ್ನು ಪಡೆದುಕೊಳ್ಳಲು ಬಹು ಶತಕೋಟಿ ಡಾಲರ್ ಯೋಜನೆಯಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

    ಅದಾನಿ ಗ್ರೀನ್ ಎನರ್ಜಿ ಮತ್ತು ಅಜುರೆ ಪವರ್ ಸಂಸ್ಥೆಗಳು ಭಾರತದಲ್ಲಿ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ದರದಲ್ಲಿ ಸೌರಶಕ್ತಿ ಗುತ್ತಿಗೆಗಳನ್ನು ಪಡೆಯಲು ಭಾರತೀಯ ಅಧಿಕಾರಿಗಳಿಗೆ 265 ಮಿಲಿಯನ್ ಡಾಲರ್​ಗೂ ಅಧಿಕ ಮೊತ್ತದಷ್ಟು ಲಂಚ ನೀಡಿದೆ. ಮುಂದಿನ ಎರಡು ದಶಕಗಳಲ್ಲಿ 2 ಶತಕೋಟಿ ಲಾಭವನ್ನು ಗಳಿಸಲು ಲಂಚ ನೀಡಲಾಗಿದೆ.

    ಅದಾನಿ ಗ್ರೀನ್ ಎನರ್ಜಿಗಾಗಿ 3 ಶತಕೋಟಿ ಡಾಲರ್‌ ಸಾಲ ಮತ್ತು ಬಾಂಡ್‌ಗಳನ್ನು ಪಡೆಯಲು ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಕಾರ್ಯನಿರ್ವಾಹಕ ವಿನೀತ್ ಜೈನ್ ಹೂಡಿಕೆದಾರರರಿಗೆ ಹಲವಾರು ವಿಷಯಗಳನ್ನು ಮರೆಮಾಡಿ ವಂಚಿಸಿದ್ದಾರೆ.

    ಸೌರಶಕ್ತಿ ಯೋಜನೆಗಾಗಿ 2021ರ ಜುಲೈ ಮತ್ತು 2022ರ ಫೆಬ್ರವರಿ ಸಮಯದಲ್ಲಿ ಆಂಧ್ರಪ್ರದೇಶದಲ್ಲಿ ಅಧಿಕಾರಿಗಳಿಗೆ 1,750 ಕೋಟಿ ರೂ. (228 ಮಿಲಿಯನ್ ಡಾಲರ್‌) ನೀಡಿದೆ. ಛತ್ತೀಸ್‌ಗಢ, ಒಡಿಶಾ, ತಮಿಳುನಾಡು ಮತ್ತು ಜಮ್ಮು ಮತ್ತು ಕಾಶ್ಮೀರದ ರಾಜ್ಯ ವಿದ್ಯುತ್ ಕಂಪನಿಗಳಿಗೆ ಲಂಚವನ್ನು ನೀಡಿದೆ ಎಂದು ಆರೋಪಿಸಿದೆ. ಈ ಆರೋಪಗಳು ವಿದೇಶಿ ಭ್ರಷ್ಟಚಾರ ಕಾಯ್ದೆಯ ಅಡಿಯಲ್ಲಿ ಬರುತ್ತದೆ ಎಂದು ಹೇಳಿದೆ.

    ಆರೋಪ ಪಟ್ಟಿಯಲ್ಲಿರುವ ಆರೋಪಗಳು ಸಾಬೀತಾಗುವವರೆಗೂ ಅವರನ್ನು ನಿರ್ದೋಷಿಗಳೆಂದು ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಹೇಳಿರುವುದಾಗಿ ಅಮೆರಿಕದ ಅಟಾರ್ನಿ ಕಚೇರಿ ತಿಳಿಸಿದೆ.

    ಅದಾನಿಯಿಂದ ಎಫ್‌ಪಿಒ ರದ್ದು:
    20,000 ಕೋಟಿ ರೂ. ಮೌಲ್ಯದ ಎಫ್‌ಪಿಒಗೆ (ಮುಂದುವರಿದ ಸಾರ್ವಜನಿಕ ಕೊಡುಗೆ ಅಥವಾ ಹೊಸದಾಗಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ) ಅದಾನಿ ಕಂಪನಿ 2023ರ ಜನವರಿಯಲ್ಲಿ ಚಾಲನೆ ನೀಡಿತ್ತು. ಪ್ರತಿ ಷೇರಿಗೆ 3,112ರಿಂದ 3,276 ರೂ. ಆಫರ್‌ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹಿಂಡೆನ್‌ಬರ್ಗ್‌ ಅದಾನಿ ಕಂಪನಿ ವಿರುದ್ಧ ಸಂಶೋಧನಾ ವರದಿ ಬಿಡುಗಡೆ ಮಾಡಿತ್ತು. ವರದಿ ಬಳಿಕ ಅದಾನಿ ಕಂಪನಿಯ ಷೇರಿನ ಮೌಲ್ಯ ಕುಸಿತ ಕಂಡಿದ್ದರೂ ಎಫ್‌ಪಿಒ ಬಿಡ್‌ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿತ್ತು.

    ಷೇರುಗಳ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ನಂತರ 20 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದ್ದ ಎಫ್‌ಪಿಒ ಪ್ರಕ್ರಿಯೆಯನ್ನೇ ಅದಾನಿ ಸಮೂಹ ರದ್ದು ಮಾಡಿತ್ತು. ನಮ್ಮ ಷೇರು (Share) ಮೌಲ್ಯ ಕುಸಿದಿದೆ. ಈ ಸಂದರ್ಭದಲ್ಲಿ ಎಫ್‌ಪಿಒನೊಂದಿಗೆ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂದು ಹೇಳಿ ಹೂಡಿಕೆದಾರರ ಹಣವನ್ನು ಮರಳಿಸಲಾಗುವುದು ಎಂದು ಗೌತಮ್‌ ಅದಾನಿ ತಿಳಿಸಿದ್ದರು.

     

  • ಹಿಂಡನ್‍ಬರ್ಗ್ ವರದಿ ವಿವಾದ – ತನಿಖೆಗೆ 3 ತಿಂಗಳ ಗಡುವು ನೀಡಿದ ಸುಪ್ರೀಂ

    ಹಿಂಡನ್‍ಬರ್ಗ್ ವರದಿ ವಿವಾದ – ತನಿಖೆಗೆ 3 ತಿಂಗಳ ಗಡುವು ನೀಡಿದ ಸುಪ್ರೀಂ

    ನವದೆಹಲಿ: ಅದಾನಿ ಗ್ರೂಪ್ ಆಫ್ ಕಂಪನಿಗಳ (Adani Group) ವಿರುದ್ಧದ ಹಿಂಡೆನ್‍ಬರ್ಗ್ (Hindenburg Research) ಸಂಶೋಧನಾ ವರದಿಯಲ್ಲಿನ ಆರೋಪಗಳ ಬಗ್ಗೆ ನಡೆಸುತ್ತಿರುವ ತನಿಖೆಯನ್ನು ಪೂರ್ಣಗೊಳಿಸಲು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾಗೆ (Securities and Exchange Board of India) ಮೂರು ತಿಂಗಳ ಕಾಲಾವಕಾಶವನ್ನು ಸುಪ್ರೀಂ (Supreme Court)‌ ವಿಸ್ತರಿಸಿ ಶುಕ್ರವಾರ ಆದೇಶ ನೀಡಿದೆ.

    ಭಾರತದ ಮುಖ್ಯ ನ್ಯಾಯಮೂರ್ತಿ (CJI) ಡಿವೈ ಚಂದ್ರಚೂಡ್ (DY Chandrachud), ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಜೆಬಿ ಪರ್ದಿವಾಲಾ ಅವರ ಪೀಠವು ಈ ಆದೇಶವನ್ನು ನೀಡಿದೆ. ಸೆಬಿಯ (SEBI) ಬೇಡಿಕೆಯಂತೆ ಆರು ತಿಂಗಳ ವಿಸ್ತರಣೆಯನ್ನು ನೀಡಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ. ಇದನ್ನೂ ಓದಿ: ಅದಾನಿ – ಹಿಂಡನ್‌ಬರ್ಗ್‌ : ಸುಪ್ರೀಂಗೆ ತನಿಖಾ ವರದಿ ಸಲ್ಲಿಕೆ

    ತನ್ನ ತನಿಖಾ ವರದಿಯನ್ನು ಸಲ್ಲಿಸಲು ಆರು ತಿಂಗಳ ಕಾಲ ವಿಸ್ತರಣೆ ಕೋರಿ ಸೆಬಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ವಿಚಾರಣೆ ನಡೆಸಿತು. ಈ ವೇಳೆ ಸುಪ್ರೀಂ, ಕೆಲಸದಲ್ಲಿ ಸ್ವಲ್ಪ ಚುರುಕುತನದ ಅಗತ್ಯವಿದೆ. 6 ತಿಂಗಳುಗಳ ಕಾಲವಕಾಶ ನೀಡಲು ಸಾಧ್ಯವಿಲ್ಲ. ಒಂದು ತಂಡವನ್ನು ರಚಿಸಿ ಶೀಘ್ರ ತನಿಖೆ ಮುಗಿಸಿ. ಆಗಸ್ಟ್ ಮಧ್ಯದಲ್ಲಿ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಮೇ 15ರಂದು ಆದೇಶ ಪ್ರಕಟಿಸುವುದಾಗಿ ಹೇಳಿದೆ.

    ಮಾ.2ರ ಸುಪ್ರೀಂ ಆದೇಶದಂತೆ ಮೇ 2ಕ್ಕೆ ತನಿಖೆ ಪೂರ್ಣಗೊಳ್ಳಬೇಕಿತ್ತು. ಆದರೆ ಹಿಂಡೆನ್‍ಬರ್ಗ್ ವರದಿಯಲ್ಲಿ ಉಲ್ಲೇಖಿಸಲಾದ 12 ಸಂಶಯಾಸ್ಪದ ವಹಿವಾಟುಗಳಿಗೆ ಕನಿಷ್ಠ 15 ತಿಂಗಳ ತನಿಖೆ ಅಗತ್ಯವಿದೆ. ಆದರೆ ಆರು ತಿಂಗಳು ಅವಕಾಶ ವಿಸ್ತರಿಸಿದರೆ ತನಿಖೆ ಪೂರ್ಣಗೊಳಿಸುವುದಾಗಿ ಕಳೆದ ತಿಂಗಳು ಸೆಬಿ ಸಲ್ಲಿಸಿದ್ದ ಮನವಿಯಲ್ಲಿ ಹೇಳಿತ್ತು.

    ತನಿಖೆಗೆ ಬಹು ದೇಶೀಯ ಮತ್ತು ಅಂತರರಾಷ್ಟ್ರೀಯ ಬ್ಯಾಂಕ್‍ಗಳಿಂದ ಬ್ಯಾಂಕ್ ಸ್ಟೇಟ್‍ಮೆಂಟ್‍ಗಳನ್ನು ಪಡೆಯುವುದು ಅಗತ್ಯವಾಗಿರುತ್ತದೆ. ಬ್ಯಾಂಕ್ ಸ್ಟೇಟ್‍ಮೆಂಟ್‍ಗಳು 10 ವರ್ಷಗಳ ಹಿಂದೆ ಕೈಗೊಂಡ ವಹಿವಾಟುಗಳಿಗೆ ಸಹ ಸಂಬಂಧಿಸಿದೆ. ಇದು ಸಮಯ ತೆಗೆದುಕೊಳ್ಳುತ್ತದೆ ಎಂದು ಸೆಬಿ ನ್ಯಾಯಾಲಯಕ್ಕೆ ತಿಳಿಸಿತ್ತು.

    ಷೇರು ಬೆಲೆಗಳನ್ನು ಕೃತಕವಾಗಿ ಹೆಚ್ಚಿಸುವ ಮೂಲಕ ಅದಾನಿ ಸಮೂಹದಿಂದ ವಂಚನೆಯಾಗಿದೆ ಎಂದು ಆರೋಪಿಸಿ ಹಿಂಡೆನ್‍ಬರ್ಗ್ ರಿಸರ್ಚ್ ವರದಿ ಪ್ರಕಟಿಸಿತ್ತು. ಇದಾದ ಬೆನ್ನಲ್ಲೇ ಅದಾನಿ ಕಂಪನಿಗಳ ಷೇರುಗಳ ಮೌಲ್ಯದಲ್ಲಿ ಭಾರೀ ಕುಸಿತ ಕಂಡಿದ್ದವು.

    ಇನ್ನೊಂದೆಡೆ, ಹಿಂಡೆನ್‍ಬರ್ಗ್ ರಿಸರ್ಚ್‍ನ ಸಂಸ್ಥಾಪಕ ನಾಥನ್ ಆಂಡರ್ಸನ್ ಮತ್ತು ಭಾರತದಲ್ಲಿನ ಅದರ ಸಿಬ್ಬಂದಿ ವಿರುದ್ಧ ತನಿಖೆ ನಡೆಸಬೇಕು. ಅವರ ವಿರುದ್ಧ ಎಫ್‍ಐಆರ್ ದಾಖಲಿಸಲು ಸೆಬಿ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ಸುಪ್ರೀಂ ನಿರ್ದೇಶನ ನೀಡಬೇಕು ಎಂದು ಕೋರಿ ವಕೀಲ ಮನೋಹರ್ ಲಾಲ್ ಶರ್ಮಾ ಮನವಿ ಮಾಡಿದ್ದಾರೆ.

    ಕಾಂಗ್ರೆಸ್ ನಾಯಕ ಡಾ. ಜಯಾ ಠಾಕೂರ್ ಅವರು ಹಿಂಡನ್‍ಬರ್ಗ್ ವರದಿ ಉಲ್ಲೇಖಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ಜೀವ ವಿಮಾ ನಿಗಮ (LIC) ಅದಾನಿ ಕಂಪನಿಗಳಲ್ಲಿ ಹೂಡಿಕೆ ಮಾಡಿದ ನಿರ್ಧಾರವನ್ನು ಪ್ರಶ್ನಿಸಿ ತನಿಖೆ ನಡೆಸಬೇಕು ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಹಿಂಡೆನ್‌ಬರ್ಗ್‌ ಸಂಶೋಧನಾ ವರದಿ ಸುಳ್ಳು, ಆಧಾರ ರಹಿತ: ಮಾರಿಷಸ್‌ ಸಂಸತ್ತಿಗೆ ಸರ್ಕಾರ ಉತ್ತರ

  • ನಮ್ಮ ಕಲ್ಲಿದ್ದಲಿನಿಂದ ಭಾರತದ ಲಕ್ಷಾಂತರ ಮಂದಿಗೆ ವಿದ್ಯುತ್‌: ಅದಾನಿ ಪರ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಬ್ಯಾಟಿಂಗ್‌

    ನಮ್ಮ ಕಲ್ಲಿದ್ದಲಿನಿಂದ ಭಾರತದ ಲಕ್ಷಾಂತರ ಮಂದಿಗೆ ವಿದ್ಯುತ್‌: ಅದಾನಿ ಪರ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಬ್ಯಾಟಿಂಗ್‌

    ನವದೆಹಲಿ: ಅದಾನಿ ಸಮೂಹದ (ಅದಾನಿ ಗ್ರೂಪ್) ವಿರುದ್ಧ ಅಮೆರಿಕದ ಹಿಂಡೆನ್ಬರ್ಗ್ ರಿಸರ್ಚ್ (ಹಿಂಡೆನ್ಬರ್ಗ್ ರಿಸರ್ಚ್) ಮಾಡಿದ ವಂಚನೆಗಳನ್ನು ಆಸ್ಟ್ರೇಲಿಯಾದ (ಆಸ್ಟ್ರೇಲಿಯಾ) ಮಾಜಿ ಪ್ರಧಾನಿ ಟೋನಿ ಅಬಾಟ್ (ಟೋನಿ ಅಬಾಟ್) ತಳ್ಳಿ ಹಾಕಿದ್ದು ನಿಯಂತ್ರಕರು ಈ ವಿಷಯವನ್ನು ಪರಿಶೀಲಿಸುತ್ತಾರೆ ಎಂದು ಹೇಳಿದ್ದಾರೆ.

    ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಆರೋಪಗಳನ್ನು ಮಾಡುವುದು ಸುಲಭ. ಆರೋಪ ಸಾಬೀತಾಗುವವರೆಗೂ ನೀವು ನಿರಪರಾಧಿ. ಆಸ್ಟ್ರೇಲಿಯಾದಲ್ಲಿ ಅದಾನಿ ಸಮೂಹವು ತೋರಿಸಿದ ನಂಬಿಕೆಗೆ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದರು.

    ಆಸ್ಟ್ರೇಲಿಯಾದಲ್ಲಿ ಶತಕೋಟಿ ಡಾಲರ್‌ ಅದಾನಿ ಹೂಡಿಕೆಯನ್ನು ನಮೂದಿಸಿದ ಅವರು, ಈ ಹೂಡಿಕೆಯಿಂದ ಆಸ್ಟ್ರೇಲಿಯಾದಲ್ಲಿ ಉದ್ಯೋಗ ಸೃಷ್ಟಿಯಾಗಿದೆ. ಅದಾನಿ ಸಮೂಹ ಯಾವುದೇ ಸುಂಕವನ್ನು ಪಡೆದಿದೆ ಕಲ್ಲಿದ್ದಲು (ಕಲ್ಲಿದ್ದಲು) ಆಮದು ಮಾಡಿದ ಭಾರತದಲ್ಲಿ ಜನರಿಗೆ 24×7 ವಿದ್ಯುತ್ ಲಭ್ಯವಿರುತ್ತದೆ ಎಂದು ಪ್ರಕಟಿಸಲಾಗಿದೆ.

    ವಿದ್ಯುತ್ ಇಲ್ಲದೇ ಇಂದು ಆಧುನಿಕ ಜೀವನ ನಡೆಸಲು ಸಾಧ್ಯವಿಲ್ಲ. ಮಧ್ಯ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಅದಾನಿ ಗಣಿಗಾರಿಕೆ (ಅದಾನಿ ಕ್ವೀನ್ಸ್‌ಲ್ಯಾಂಡ್ ಕೋಲ್‌ಮೈನ್) ನಡೆಯುತ್ತಿದೆ, ಆಸ್ಟ್ರೇಲಿಯನ್ ಕಲ್ಲಿದ್ದಲಿನ ಮೇಲಿನ ಸುಂಕಗಳನ್ನು ತೆಗೆದುಹಾಕಿರುವ ಒಪ್ಪಂದಕ್ಕೆ ನಾನು ಮೋದಿ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ವಿದ್ಯುದ್ದೀಕರಣಕ್ಕೆ ಸಹಾಯ ಮಾಡುವ ಅದಾನಿ ಮೂಲಕ ಆಸ್ಟ್ರೇಲಿಯದ ಕಲ್ಲಿದ್ದಲು ಭಾರತಕ್ಕೆ ಬರುತ್ತಿರುವುದಕ್ಕೆ ನನಗೆ ಬಹಳ ಸಂತೋಷವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಅದಾನಿ ಸಮೂಹ ಕಂಪನಿಗಳಲ್ಲಿ 15,446 ಕೋಟಿ ಹೂಡಿಕೆ – ಅದಾನಿ ಕೈ ಹಿಡಿದ ರಾಜೀವ್ ಜೈನ್ ಯಾರು?

    ಅದಾನಿ ಸಮೂಹವು ಆಸ್ಟ್ರೇಲಿಯಾದಲ್ಲಿ ಶತಕೋಟಿ ಡಾಲರ್ ಹೂಡಿಕೆ ಮಾಡಿದೆ. ಆಸ್ಟ್ರೇಲಿಯಾದಲ್ಲಿ ಉದ್ಯೋಗ ಮತ್ತು ಸಂಪತ್ತನ್ನು ಸೃಷ್ಟಿಸಿದ್ದಾರೆ ಎಂಬುದು ಆಸ್ಟ್ರೇಲಿಯಾದವನಾಗಿ ನನಗೆ ತಿಳಿದಿದೆ. ಆಸ್ಟ್ರೇಲಿಯಾದಲ್ಲಿ ಅದಾನಿ ಮತ್ತು ಅವರ ತಂಡವು ಪರಿಶ್ರಮವನ್ನು ತೋರಿದ ರೀತಿಯನ್ನು ನಾನು ಮೆಚ್ಚುತ್ತೇನೆ. ಅದಾನಿ ಕಾನೂನಿನ ಅಡಿಯಲ್ಲಿ ಕಾರ್ಯನಿರ್ವಹಿಸುವ ಕಂಪನಿಯಾಗಿದೆ.

    ಕ್ವೀನ್ಸ್‌ಲ್ಯಾಂಡ್ ಕರಾವಳಿ ಪಶ್ಚಿಮಕ್ಕೆ 300 ಕಿಮೀ ದೂರದಲ್ಲಿ ಅದಾನಿ ಗಣಿಗಾರಿಕೆ ನಡೆಯುತ್ತಿದೆ. ಇದು ಗಲಿಲಿ ಬೇಸಿನ್‌ನಿಂದ ಭಾರತ ಸೇರಿದಂತೆ ಏಷ್ಯಾದ ದೇಶಗಳಿಗೆ ಕಲ್ಲಿದ್ದಲನ್ನು ಸಾಗಿಸುತ್ತದೆ. ಈ ಗಣಿಗಾರಿಕೆಯಿಂದ ಕ್ವೀನ್ಸ್‌ಲ್ಯಾಂಡ್‌ನ ಸಾವಿರಾರು ಮಂದಿಗೆ ಉದ್ಯೋಗ ಸೃಷ್ಟಿಯಾಗಿದೆ.

  • ಅದಾನಿ ಸಮೂಹ ಕಂಪನಿಗಳಲ್ಲಿ 15,446 ಕೋಟಿ ಹೂಡಿಕೆ – ಅದಾನಿ ಕೈ ಹಿಡಿದ ರಾಜೀವ್‌ ಜೈನ್‌ ಯಾರು?

    ಅದಾನಿ ಸಮೂಹ ಕಂಪನಿಗಳಲ್ಲಿ 15,446 ಕೋಟಿ ಹೂಡಿಕೆ – ಅದಾನಿ ಕೈ ಹಿಡಿದ ರಾಜೀವ್‌ ಜೈನ್‌ ಯಾರು?

    ಅಹಮದಾಬಾದ್‌: ಅದಾನಿ ಸಮೂಹದ ಕಂಪನಿಗಳ (Adani Group Companies) 15,446 ಕೋಟಿ ರೂ. ಮೌಲ್ಯದ ಷೇರುಗಳನ್ನು ಅಮೆರಿಕದ GQG ಕಂಪನಿ (GQG Partners) ಖರೀದಿಸಿದೆ.

    ಅಮೆರಿಕದ ಹಿಂಡೆನ್‌ಬರ್ಗ್‌ ವರದಿಯಿಂದ (Hindenburg Research) ಅದಾನಿ ಕಂಪನಿಯ ಮಾರುಕಟ್ಟೆ ಮೌಲ್ಯ ಭಾರೀ ಇಳಿಕೆಯಾಗಿತ್ತು. ಈ ಮಧ್ಯೆ GQG ಕಂಪನಿ ಹೂಡಿಕೆ ಮಾಡುವ ಮೂಲಕ ಸಂಕಷ್ಟದಿಂದ ಪಾರು ಮಾಡಿದೆ. ಎಸ್‌ಬಿ ಅದಾನಿ ಫ್ಯಾಮಿಲಿ ಟ್ರಸ್ಟ್‌ ಈ ಷೇರುಗಳನ್ನು ಮಾರಾಟ ಮಾಡಿದೆ.

    GQG ಅಧ್ಯಕ್ಷ ಮತ್ತು ಸಿಐಒ ರಾಜೀವ್ ಜೈನ್ (Rajiv Jain) ಪ್ರತಿಕ್ರಿಯಿಸಿ, “ನಾನು ಅದಾನಿ ಕಂಪನಿಗಳಲ್ಲಿ ಹೂಡಿಕೆ ಮಾಡಲು ಉತ್ಸುಕನಾಗಿದ್ದೇನೆ. ಅದಾನಿ ಕಂಪನಿಗಳು ಭಾರತದಾದ್ಯಂತ ಮತ್ತು ಪ್ರಪಂಚದಾದ್ಯಂತ ದೊಡ್ಡ ಮತ್ತು ಪ್ರಮುಖ ಮೂಲಸೌಕರ್ಯ ಸ್ವತ್ತುಗಳನ್ನು ಹೊಂದಿವೆ ಮತ್ತು ನಿರ್ವಹಿಸುತ್ತವೆ. ಗೌತಮ್ ಅದಾನಿ ಈ ಪೀಳಿಗೆಯ ಅತ್ಯುತ್ತಮ ಉದ್ಯಮಿಯಾಗಿದ್ದಾರೆ. ಭಾರತದ ಆರ್ಥಿಕತೆ ಮತ್ತು ಇಂಧನ ಮೂಲಸೌಕರ್ಯವನ್ನು ಮುನ್ನಡೆಸಲು ಸಹಾಯ ಮಾಡುವ ಕಂಪನಿಗಳಲ್ಲಿ ಹೂಡಿಕೆ ಮಾಡಲು ನಾವು ಸಂತೋಷಪಡುತ್ತೇವೆ ಎಂದು ತಿಳಿಸಿದ್ದಾರೆ.

    GQG ವಿಶ್ವದ ಪ್ರಮುಖ ಜಾಗತಿಕ ಮತ್ತು ಉದಯೋನ್ಮುಖ ಮಾರುಕಟ್ಟೆಗಳ ಹೂಡಿಕೆದಾರರಲ್ಲಿ ಒಂದಾಗಿದೆ. 2023ರ ಜನವರಿ 31ರಂದು GQG ನೀಡಿದ ಮಾಹಿತಿ ಪ್ರಕಾರ 92 ಶತಕೋಟಿ ಡಾಲರ್‌ ಮೌಲ್ಯದ ಸ್ವತ್ತುಗಳನ್ನು ನಿರ್ವಹಿಸುತ್ತಿದೆ. ಆಸ್ಟ್ರೇಲಿಯದ ಸ್ಟಾಕ್ ಎಕ್ಸ್‌ಚೇಂಜ್‌ ಲಿಸ್ಟೆಡ್‌ ಕಂಪನಿಯಾಗಿದ್ದು, ಆಸ್ಟ್ರೇಲಿಯಾದ 2022 ಜಾಗತಿಕ ಇಕ್ವಿಟಿ ಮ್ಯಾನೇಜರ್‌ ಪ್ರಶಸ್ತಿಯನ್ನು ಪಡೆದಿದೆ. ಇದನ್ನೂ ಓದಿ: ಹಿಂಡೆನ್‌ಬರ್ಗ್ ರಿಪೋರ್ಟ್ – ಅದಾನಿ ಕಂಪನಿಗಳ ತನಿಖೆಗೆ ಸಮಿತಿ ರಚಿಸಿದ ಸುಪ್ರೀಂ

    GQG ಅಲ್ಲದೇ ಗೋಲ್ಡ್ಮನ್ ಸ್ಯಾಕ್ಸ್ ಟ್ರಸ್ಟ್ ಅದಾನಿ ಗ್ರೀನ್‌ ಎನರ್ಜಿ ಕಂಪನಿ 2.5 ಕೋಟಿ ಷೇರುಗಳನ್ನು ಗುರುವಾರ  ಖರೀದಿಸಿದೆ. ಎಸ್‌.ಬಿ. ಅದಾನಿ ಫ್ಯಾಮಿಲಿ ಟ್ರಸ್ಟ್‌ ಪ್ರತಿ ಷೇರನ್ನು 504.60 ರೂ.ಗೆ ಮಾರಾಟ ಮಾಡಿದೆ.

    ಯಾರು ರಾಜೀವ್ ಜೈನ್ ?
    ಭಾರತದಲ್ಲಿ ಹುಟ್ಟಿ ಬೆಳೆದ ಜೈನ್ 1990ರಲ್ಲಿ ಮಿಯಾಮಿ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಪದವಿ ಪಡೆಯಲು ಅಮೆರಿಕಗೆ ತೆರಳಿದರು.  1994ರಲ್ಲಿ ಸ್ವಿಜರ್ಲ್ಯಾಂಡ್ ಮೂಲದ ವೊಂಟೊಬೆಲ್‌ಗೆ ಸೇರಿದ ರಾಜೀವ್‌ ಜೈನ್‌ ಸಂಸ್ಥೆಯಲ್ಲಿ ವಿವಿಧ ಹುದ್ದೆ ಏರಿ 2002ರಲ್ಲಿ ಸಿಐಒ ಆಗಿ ನೇಮಕವಾಗಿದ್ದರು. ನಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಮುಖ್ಯ ಹೂಡಿಕೆ ಅಧಿಕಾರಿ ಮತ್ತು ಇಕ್ವಿಟಿಗಳ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದಾರೆ.

    23 ವರ್ಷಗಳ ಹೂಡಿಕೆಯ ಅನುಭವವನ್ನು ಹೊಂದಿರುವ ಇವರು 2016ರಲ್ಲಿ ತನ್ನದೇ ಆದ GQG ಹೂಡಿಕೆ ಸಂಸ್ಥೆಯನ್ನು ಸ್ಥಾಪಿಸಿದರು. ಭಾರತ ಐಟಿಸಿ, ಎಚ್‌ಡಿಎಫ್‌ಸಿ, ಆರ್‌ಐಎಲ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಸನ್ ಫಾರ್ಮಾ, ಇನ್ಫೋಸಿಸ್ ಮತ್ತು ಭಾರ್ತಿ ಏರ್‌ಟೆಲ್ ಕಂಪನಿಗಳಲ್ಲೂ ಇವರು ಹೂಡಿಕೆ ಮಾಡಿದ್ದಾರೆ.

  • ಅದಾನಿ ಎಂಟರ್‌ಪ್ರೈಸಸ್‌ಗೆ 820 ಕೋಟಿ ನಿವ್ವಳ ಲಾಭ – ಷೇರು ಬೆಲೆ ಜಿಗಿತ

    ಅದಾನಿ ಎಂಟರ್‌ಪ್ರೈಸಸ್‌ಗೆ 820 ಕೋಟಿ ನಿವ್ವಳ ಲಾಭ – ಷೇರು ಬೆಲೆ ಜಿಗಿತ

    ಮುಂಬೈ: ಅಕ್ಟೋಬರ್‌-ಡಿಸೆಂಬರ್‌ ಮೂರನೇ ತ್ರೈಮಾಸಿಕದಲ್ಲಿ ಅದಾನಿ ಎಂಟರ್‌ಪ್ರೈಸಸ್‌ (Adani Enterprises Ltd) 820 ಕೋಟಿ ರೂ. ನಿವ್ವಳ (Profit) ಲಾಭಗಳಿಸಿದೆ.

    2021ರ ಈ ಅವಧಿಯಲ್ಲಿ11.63 ಕೋಟಿ ರೂ. ನಷ್ಟ ಅನುಭವಿಸಿತ್ತು. ಹಿಂದಿನ ಈ ಅವಧಿಯಲ್ಲಿ 18,757.9 ಕೋಟಿ ರೂ. ಆದಾಯವಿದ್ದರೆ ಈ ಬಾರಿ ಇದು ಶೇ.42ರಷ್ಟು ಏರಿಕೆಯಾಗಿದ್ದು 26,612.2 ಕೋಟಿ ರೂ.ಗೆ ಜಿಗಿದಿದೆ.

    2022-23ರ ಹಣಕಾಸು ವರ್ಷದಲ್ಲಿ (Financial Year) ಅದಾನಿ ಎಂಟರ್‌ಪ್ರೈಸಸ್‌ 29,245 ಕೋಟಿ ರೂ. ಆದಾಯ ಮತ್ತು 582.80 ಕೋಟಿ ನಿವ್ವಳ ಲಾಭವನ್ನು ಗಳಿಸಬಹುದು ಬ್ಲೂಮ್‌ಬರ್ಗ್ ಅಂದಾಜಿಸಿದೆ. ಇದನ್ನೂ ಓದಿ: ಇಸ್ರೇಲಿನ ಹೈಫಾ ಬಂದರು ಅದಾನಿ ತೆಕ್ಕೆಗೆ

    ಅಮೆರಿಕದ ಹಿಂಡನ್‌ಬರ್ಗ್‌ ರಿಸರ್ಚ್‌ (Hindenburg Research) ಬಳಿಕ ಅದಾನಿ ಎಂಟರ್‌ಪ್ರೈಸಸ್‌ ಷೇರಿನ ಮೌಲ್ಯ ಶೇ.50ರಷ್ಟು ಕುಸಿತಕಂಡಿತ್ತು. ಆದರೆ ಮೂರನೇ ತ್ರೈಮಾಸಿಕದ ವರದಿ ಪ್ರಕಟಗೊಂಡ ಬೆನ್ನಲ್ಲೇ ಅದಾನಿ ಎಂಟರ್‌ಪ್ರೈಸಸ್‌ ಷೇರಿನ ಬೆಲೆ ಶೇ.1.91 ರಷ್ಟು ಏರಿಕೆ ಮಂಗಳವಾರ 1,750.30 ರೂ.ಗೆ(+32.75 ರೂ.) ವಹಿವಾಟು ಮುಗಿಸಿತು.

    ಕಳೆದ ಮೂರು ದಶಕಗಳಲ್ಲಿ, ಹಾಗೆಯೇ ತ್ರೈಮಾಸಿಕದಿಂದ ತ್ರೈಮಾಸಿಕ ಮತ್ತು ವರ್ಷದಿಂದ ವರ್ಷಕ್ಕೆ, ಅದಾನಿ ಎಂಟರ್‌ಪ್ರೈಸಸ್ ಭಾರತದ ಅತ್ಯಂತ ಯಶಸ್ವಿ ಮೂಲಸೌಕರ್ಯ ಕಂಪನಿಯನ್ನಾಗಿ ಹೊರಹೊಮ್ಮುತ್ತಿದೆ. ಪ್ರಸ್ತುತ ಮಾರುಕಟ್ಟೆಯ ಚಂಚಲತೆಯು ತಾತ್ಕಾಲಿಕವಾಗಿದೆ. ನಮ್ಮ ಯಶಸ್ಸಿಗೆ ನಮ್ಮ ಬಲವಾದ ಆಡಳಿತ, ಕಟ್ಟುನಿಟ್ಟಾದ ನಿಯಂತ್ರಕ ಅನುಸರಣೆ, ನಿರಂತರ ಕಾರ್ಯಕ್ಷಮತೆ ಮತ್ತು ಘನ ನಗದು ಹರಿವು ಕಾರಣ ಎಂದು ಕಂಪನಿಯ ಮುಖ್ಯಸ್ಥ ಗೌತಮ್‌ ಅದಾನಿ (Gautam Adani) ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 1 ವರದಿಗೆ ಕರಗಿತು 4 ಲಕ್ಷ ಕೋಟಿ ಸಂಪತ್ತು – 7ನೇ ಸ್ಥಾನಕ್ಕೆ ಜಾರಿದ ಅದಾನಿ: ಯಾವುದು ಎಷ್ಟು ಇಳಿಕೆ?

    1 ವರದಿಗೆ ಕರಗಿತು 4 ಲಕ್ಷ ಕೋಟಿ ಸಂಪತ್ತು – 7ನೇ ಸ್ಥಾನಕ್ಕೆ ಜಾರಿದ ಅದಾನಿ: ಯಾವುದು ಎಷ್ಟು ಇಳಿಕೆ?

    ಮುಂಬೈ: ವಿವಿಧ ಕಡೆಗಳಲ್ಲಿ ಹೂಡಿಕೆ ಮಾಡಿ ಕಳೆದ ವರ್ಷ ಷೇರು ಮಾರುಕಟ್ಟೆಯಲ್ಲಿ (Share Market) ಹೂಡಿಕೆದಾರರಿಗೆ ಬಂಪರ್‌ ಫಸಲು ನೀಡಿದ್ದ ಅದಾನಿ ಸಮೂಹದ (Adani Group) ಷೇರುಗಳು ಭಾರೀ ಇಳಿಕೆ ಕಂಡಿದೆ.

    ಲೆಕ್ಕಪತ್ರ ವಂಚನೆ ಮತ್ತು ಸ್ಟಾಕ್ ಮ್ಯಾನಿಪ್ಯುಲೇಷನ್ ಮಾಡಿದೆ ಎಂಬ ವರದಿ ಪ್ರಕಟವಾದ ಬೆನ್ನಲ್ಲೇ ಅದಾನಿ ಕಂಪನಿಗಳ ಷೇರುಗಳ ಮೌಲ್ಯ ಭಾರೀ ಇಳಿಕೆಯಾಗಿದ್ದು ಎರಡೇ ದಿನದಲ್ಲಿ 4 ಲಕ್ಷ ಕೋಟಿ ರೂ. ಸಂಪತ್ತು ಕರಗಿದೆ.

    ವರದಿ ಪ್ರಕಟವಾದ ದಿನವೇ 46 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದ್ದ ಅದಾನಿ ಗ್ರೂಪ್ ಇಂದು ಮತ್ತಷ್ಟು ನಷ್ಟ ಅನುಭವಿಸಿದೆ. 2020 ಮಾರ್ಚ್ ಬಳಿಕ ಅದಾನಿ ಸಮೂಹವು ಎದುರಿಸಿರುವ ಅತಿ ದೊಡ್ಡ ದೈನಂದಿನ ಕುಸಿತ ಇದಾಗಿದೆ. ಕಂಪನಿಗಳ ಮೌಲ್ಯ ಕುಸಿತವಾದ ಬೆನ್ನಲ್ಲೇ ಗೌತಮ್ ಆದಾನಿ (Gautam Adani) ಅವರ ಸಂಪತ್ತು ಭಾರೀ ಇಳಿಕೆಯಾಗಿದೆ. ಫೋರ್ಬ್ಸ್‌ ರಿಯಲ್‌ ಟೈಂ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಅದಾನಿ ಈಗ 7ನೇ ಸ್ಥಾನಕ್ಕೆ ಜಾರಿದ್ದಾರೆ.

    ಇಂದು ಅದಾನಿ ಎಂಟರ್‌ಪ್ರೈಸಸ್‌ (Adani Enterprises) ಮುಂದುವರಿದ ಸಾರ್ವಜನಿಕ ಕೊಡುಗೆ(FPO) ಅಥವಾ ಹೊಸ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ ಮಾಡಿದೆ. ಇಂದು ಒಟ್ಟು 3.63 ಲಕ್ಷ ಕೋಟಿ ಷೇರು ಖರೀದಿಗೆ ಬಿಡ್‌ ಬಂದಿದೆ. ಅದಾನಿ ಕಂಪನಿ ಆರಂಭದಲ್ಲಿ ಒಟ್ಟು 6.47 ಕೋಟಿ ಷೇರುಗಳನ್ನು ಬಿಡುಗಡೆ ಮಾಡಲು ಮುಂದಾಗಿತ್ತು. ಆದರೆ ಕೊನೆಯಲ್ಲಿ ಬದಲಾವಣೆ ಮಾಡಿ ಪ್ರಸ್ತುತ ಮಾರುಕಟ್ಟೆಗೆ 4.55 ಕೋಟಿ ಷೇರುಗಳನ್ನು ಮಾತ್ರ ಬಿಡುಗಡೆ ಮಾಡಿದೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಹೋಗಿದ್ದ ʼGo First’ಗೆ 10 ಲಕ್ಷ ದಂಡ

    ಎಷ್ಟು ಇಳಿಕೆ?
    ಅದಾನಿ ಪೋರ್ಟ್‌ ಒಂದು ಷೇರಿನ ಬೆಲೆ 699 ರೂ. ನಿಂದ 604 ರೂ.ಗೆ (-108 ರೂ.) ಇಳಿದರೆ ಅದಾನಿ ಎಂಟರ್‌ಪ್ರೈಸ್‌ 3,335 ರೂ. ನಿಂದ 2,768.50 (-620 ರೂ.) ಇಳಿದಿದೆ. ಅದಾನಿ ಟೋಟಲ್‌ ಗ್ಯಾಸ್‌ 3,477 ರೂ. ನಿಂದ 2,928 ರೂ.(-732 ರೂ.), ಅದಾನಿ ಟ್ರಾನ್ಸ್‌ಮಿಷನ್‌ ಲಿಮಿಟೆಡ್‌ 2,406 ರೂ. ನಿಂದ 2,014 ರೂ.(503.20 ರೂ.) ಇಳಿಕೆಯಾಗಿದೆ.

    ಅದಾನಿ ಗ್ರೀನ್‌ ಎನರ್ಜಿ 1,780 ರೂ. ನಿಂದ 1,486 ರೂ.(-371 ರೂ.), ಎಸಿಸಿ ಸಿಮೆಂಟ್ಸ್‌ 2,176 ರೂ. ನಿಂದ 1,899 ರೂ.(-265 ರೂ.), ಅಂಬುಜಾ ಸಿಮೆಂಟ್‌ 457 ರೂ. ನಿಂದ 383 ರೂ.(-76 ರೂ.) ಇಳಿದಿದೆ.

    ಒಟ್ಟು ಮೌಲ್ಯದಲ್ಲಿ ಎಷ್ಟು ಇಳಿಕೆ?
    ಅದಾನಿ ಎಂಟರ್‌ಪ್ರೈಸ್‌ 63 ಸಾವಿರ ಕೋಟಿ ರೂ., ಅದಾನಿ ಪೋರ್ಟ್‌ 41 ಸಾವಿರ ಕೋಟಿ ರೂ., ಅದಾನಿ ವಿಲ್ಮರ್‌ 7 ಸಾವಿರ ಕೋಟಿ, ಅದಾನಿ ಪವರ್‌ 10,300 ಕೋಟಿ ರೂ., ಅಂಬುಜಾ ಸಿಮೆಂಟ್‌ 31 ಸಾವಿರ ರೂ., ಎಸಿಸಿ 11,200 ಕೋಟಿ ರೂ., ಅದಾನಿ ಟ್ರಾನ್ಸ್‌ಮಿಷನ್‌ 83 ಸಾವಿರ ಕೋಟಿ ರೂ., ಅದಾನಿ ಟೋಟಲ್‌ 1.06 ಲಕ್ಷ ಕೋಟಿ ರೂ., ಅದಾನಿ ಗ್ರೀನ್‌ 68 ಸಾವಿರ ರೂ., ಎನ್‌ಡಿಟಿವಿ ಕಂಪನಿ 1,800 ಕೋಟಿ ರೂ.  ಮಾರುಕಟ್ಟೆ ಮೌಲ್ಯ ಇಳಿದಿದೆ..

    ಹಿಂಡೆನ್‍ಬರ್ಗ್ ವರದಿಯಲ್ಲಿ ಏನಿತ್ತು?
    ಎರಡು ವರ್ಷಗಳ ತನಿಖೆಯ ನಂತರ ಹಿಂಡೆನ್‍ಬರ್ಗ್ (Hindenburg Research) ವರದಿ ಪ್ರಕಟವಾಗಿದೆ. ದಶಕಗಳ ಅವಧಿಯ ವ್ಯವಹಾರದಲ್ಲಿ ಅದಾನಿ ಸಮೂಹ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆ ಎಸಗಿದೆ ಎಂದು ಆರೋಪಿಸಿದೆ.

    ಅದಾನಿ ಗ್ರೂಪ್‍ನ ಮಾಜಿ ಹಿರಿಯ ಕಾರ್ಯನಿರ್ವಾಹಕರು ಸೇರಿದಂತೆ ಹಲವಾರು ಜನರನ್ನು ಸಂಶೋಧನೆಗಾಗಿ ಸಂದರ್ಶಿಸಲಾಗಿದೆ. ಸಾವಿರಾರು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಹನ್ನೆರಡು ವಿವಿಧ ರಾಷ್ಟ್ರಗಳಲ್ಲಿ ಅದಾನಿ ಕಂಪನಿಗಳನ್ನು ವೀಕ್ಷಿಸಲಾಗಿದೆ ಎಂದು ಹೇಳಿದೆ. ಅದಾನಿ ಗ್ರೂಪ್ ಭಾರೀ ಸಾಲ ಮಾಡಿದೆ. ತಮ್ಮ ಸಾಲಗಳಿಗೆ ಷೇರುಗಳನ್ನೇ ಒತ್ತೆ ಇಡುತ್ತಿದೆ. ಇದರಿಂದಾಗಿ ಸಮೂಹದ ಆರ್ಥಿಕ ಸ್ಥಿತಿ ಅಪಾಯದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಅದಾನಿ ಲೀಗಲ್ ಗ್ರೂಪ್ ಮುಖಸ್ಥ ಜತಿನ್ ಜಲುಂಧ್ವಾಲಾ, ನಾವು ಪರಿಹಾರಕ್ಕಾಗಿ ಹಿಂಡೆನ್ ಬರ್ಗ್ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ. ಅಮೆರಿಕ ಹಾಗೂ ಭಾರತೀಯ ಕಾನೂನುಗಳ ಅಡಿ ಸಂಬಂಧಿತ ನಿಬಂಧನೆಗಳನ್ನ ಮೌಲ್ಯಮಾಪನ ಮಾಡುತ್ತಿದ್ದೇವೆ. ಮುಂದುವರಿದ ಸಾರ್ವಜನಿಕ ಕೊಡುಗೆ(FPO) ಪ್ರಕ್ರಿಯೆಯನ್ನು ಹಾಳು ಮಾಡುವ ದುರುದ್ದೇಶಪೂರಿತ ಪ್ರಯತ್ನ. ವರದಿಯನ್ನು ಪ್ರಕಟಿಸುವ ಮೊದಲು ಹಿಂಡೆನ್‌ಬರ್ಗ್ ರಿಸರ್ಚ್ ನಮ್ಮನ್ನು ಸಂಪರ್ಕಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ನಮ್ಮ ಸಮೂಹ ಎಲ್ಲಾ ಕಾನೂನುಗಳನ್ನು ಪಾಲಿಸುತ್ತದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k