Tag: Hindenburg

  • ಸೆಬಿಯಿಂದ ಕ್ಲೀನ್‌ಚಿಟ್‌| ಇಂದು ಒಂದೇ ದಿನ ಅದಾನಿ ಕಂಪನಿಗಳ ಮಾರುಕಟ್ಟೆ ಮೌಲ್ಯ 66 ಸಾವಿರ ಕೋಟಿಗೆ ಏರಿಕೆ

    ಸೆಬಿಯಿಂದ ಕ್ಲೀನ್‌ಚಿಟ್‌| ಇಂದು ಒಂದೇ ದಿನ ಅದಾನಿ ಕಂಪನಿಗಳ ಮಾರುಕಟ್ಟೆ ಮೌಲ್ಯ 66 ಸಾವಿರ ಕೋಟಿಗೆ ಏರಿಕೆ

    ಮುಂಬೈ: ಹಿಂಡನ್‌ಬರ್ಗ್‌ ಸಂಶೋಧನಾ ವರದಿಯಲ್ಲಿನ (Hindenburg Research Report) ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (SEBI) ಕ್ಲೀನ್‌ ಚಿಟ್‌ ನೀಡಿದ ಬೆನ್ನಲ್ಲೇ ಅದಾನಿ ಸಮೂಹ ಕಂಪನಿಗಳ (Adani Group) ಷೇರುಗಳ ಮೌಲ್ಯ ಏರಿಕೆ ಕಾಣಲು ಆರಂಭಿಸಿದೆ.

    ಇಂದು ಒಂದೇ ದಿನ ಅದಾನಿ ಕಂಪನಿಗಳ ಮಾರುಕಟ್ಟೆ ಮೌಲ್ಯ 66 ಸಾವಿರ ಕೋಟಿ ರೂ. ಏರಿಕೆಯಾಗಿದ್ದು ಈಗ ಒಟ್ಟು ಕಂಪನಿಗಳ  ಮೌಲ್ಯ 13.96 ಲಕ್ಷ ಕೋಟಿ ರೂ.ಗೆ ತಲುಪಿದೆ.

    ಯಾವುದು ಎಷ್ಟು ಏರಿಕೆ?
    ಪವರ್‌ – 13.42% (84.75ರೂ.), ಟೋಟಲ್‌ ಗ್ಯಾಸ್‌ – 7.55% (45.85 ರೂ.), ಅದಾನಿ ಎಂಟರ್‌ಪ್ರೈಸಸ್‌ -5.25% (126 ರೂ.), ಗ್ರೀನ್‌ ಎನರ್ಜಿ -5.48% (53.60 ರೂ.), ಅದಾನಿ ಎನರ್ಜಿ ಸಲ್ಯೂಷನ್ಸ್‌ – 4.94% (41.35 ರೂ.), ಅದಾನಿ ಪೋರ್ಟ್ಸ್‌- 1.15% (16.20 ರೂ.) ಭಾರೀ ಏರಿಕೆ ಕಂಡಿದೆ. ಇದರ ಜೊತೆ ಎಸಿಸಿ, ಅಂಬುಜಾ ಸಿಮೆಂಟ್‌ಗಳ ಷೇರುಗಳ ಮೌಲ್ಯವೂ ಏರಿದೆ.

    ಹಿಂಡನ್‌ಬರ್ಗ್‌ ಆರೋಪದಿಂದ ದೇಶೀಯ ಮತ್ತು ವಿದೇಶಿ ಹೂಡಿಕೆದಾರರು ಅದಾನಿ ಕಂಪನಿಗಳ ಷೇರು ಖರೀದಿಸಲು ಆಸಕ್ತಿ ತೋರಿಸುತ್ತಿರಲಿಲ್ಲ. ಆದರೆ ಈಗ ಸೆಬಿಯಿಂದ ಕ್ಲೀನ್‌ಚಿಟ್‌ ಸಿಕ್ಕಿದ ಬೆನ್ನಲ್ಲೇ ಹೂಡಿಕೆದಾರರು ಹೂಡಿಕೆ ಮಾಡಲು ಆರಂಭಿಸಿದ್ದರಿಂದ ಅದಾನಿ ಕಂಪನಿಗಳ ಷೇರುಗಳ ಮೌಲ್ಯ ಏರಿಕೆ ಕಾಣಲು ಆರಂಭಿಸಿದೆ. ಇದನ್ನೂ ಓದಿ:  ಅದಾನಿ ಕಂಪನಿಗಳನ್ನು ಕಾಡಿದ್ದ ಹಿಂಡನ್‌ಬರ್ಗ್‌ಗೆ ಬೀಗ – ಬಂದ್‌ ಆಗಿದ್ದು ಯಾಕೆ?

    ಸುದೀರ್ಘ ಅವಧಿಗಳ ಕಾಲ ತನಿಖೆ ನಡೆಸಿದ ಸೆಬಿ ಅದಾನಿ ಗ್ರೂಪ್‌ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ, ಆರೋಪವನ್ನು ಸಾಬೀತುಪಡಿಸಲು ಯಾವುದೇ ಬಲವಾದ ಸಾಕ್ಷಿಗಳು ಕಂಡುಬಂದಿಲ್ಲ ಎಂದು ತಿಳಿಸಿತ್ತು.

    2022 ರ ಸೆಪ್ಟೆಂಬರ್‌ನಲ್ಲಿ ಅದಾನಿ ಸಮೂಹದ ಮಾರುಕಟ್ಟೆ ಮೌಲ್ಯ 22 ಲಕ್ಷ ಕೋಟಿ ರೂ. ಇತ್ತು. 2023 ರ ಜನವರಿಯಲ್ಲಿ ಅದಾನಿ ಎಂಟರ್‌ಪ್ರೈಸಸ್‌ ಹೊಸ ಷೇರು ಬಿಡುಗಡೆ ಅಥವಾ ಎಫ್‌ಪಿಒ ಬಿಡುಗಡೆ ಮಾಡಲು ಮುಂದಾಗಿತ್ತು. ಈ ಸಂದರ್ಭದಲ್ಲಿ ಹಿಂಡನ್‌ಬರ್ಗ್‌ ತನ್ನ ಸಂಶೋಧನಾ ವರದಿ ಬಿಡುಗಡೆ ಮಾಡಿತ್ತು.

    ಅದಾನಿ ಸಮೂಹ ಮಾರಿಷಸ್ ಮೂಲದ ಶೆಲ್ ಕಂಪನಿಗಳನ್ನು ಬಳಸಿ ಸ್ಟಾಕ್‌ ಮಾರುಕಟ್ಟೆಯಲ್ಲಿ ನೈಜ ಬೆಲೆಗಿಂತ ಕೃತಕ ಬೆಲೆಯಲ್ಲಿ ಷೇರುಗಳನ್ನು ಮಾರಾಟ ಮಾಡುತ್ತಿದೆ. ಇದು ಅಕ್ರಮ ಎಂದು ಹಿಂಡನ್‌ಬರ್ಗ್‌ ಆರೋಪಿಸಿತ್ತು. ಈ ವರದಿ ಪ್ರಕಟವಾದ ನಂತರ ಅದಾನಿ ಸಂಪತ್ತು ಕರಗಲು ಆರಂಭವಾಗಿತ್ತು. ವರದಿ ಪ್ರಕಟಿಸಿದ ಬಳಿಕ 2023ರ ಫೆಬ್ರವರಿಯಲ್ಲಿ ಇದು 7 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿತ್ತು. ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದ ಗೌತಮ್‌ ಅದಾನಿ (Gautam Adani) ಅವರು 32ನೇ ಸ್ಥಾನಕ್ಕೆ ಜಾರಿದ್ದರು.

    ಹಿಂಡನ್‌ಬರ್ಗ್‌ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಇಡಿ ಮತ್ತು ಸುಪ್ರೀಂ ಕೋರ್ಟ್‌ ನೇಮಿಸಿದ ಸಮಿತಿ ತನಿಖೆ ನಡೆಸಿ ಅದಾನಿ ಕಂಪನಿ ಕ್ಲೀನ್‌ ಚಿಟ್‌ ನೀಡಿತ್ತು. ಮಾರಿಷಸ್‌ ಸರ್ಕಾರವೂ ಅದಾನಿ ಕಂಪನಿ ಯಾವುದೇ ಕಾನೂನು ಉಲ್ಲಂಘಿಸಿಲ್ಲ. ನಮ್ಮ ಕಾನೂನಿನ ಪ್ರಕಾರ ಮಾರಿಷಸ್‌ನಲ್ಲಿ ಶೆಲ್ ಕಂಪನಿಗಳಿಗೆ ಅವಕಾಶವಿಲ್ಲ. ನಮ್ಮ ಷರತ್ತನ್ನು ಒಪ್ಪಿದ ಒಪ್ಪಿದ ಕಂಪನಿಗಳನ್ನು ಶೆಲ್‌ ಕಂಪನಿಗಳು ಎಂದು ಹೇಳುವುದು ಆಧಾರ ರಹಿತ ಎಂದು ಹೇಳಿತ್ತು.

  • ಸೆಬಿ ಮಾಜಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ಗೆ ಲೋಕಪಾಲ್ ಕ್ಲೀನ್ ಚಿಟ್

    ಸೆಬಿ ಮಾಜಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ಗೆ ಲೋಕಪಾಲ್ ಕ್ಲೀನ್ ಚಿಟ್

    ನವದೆಹಲಿ: ಷೇರು ಮಾರುಕಟ್ಟೆ ವಂಚನೆ ಪ್ರಕರಣದಲ್ಲಿ ಸೆಬಿ ಮಾಜಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ಗೆ ಲೋಕಪಾಲ್‌ ಕ್ಲೀನ್ ಚಿಟ್ ನೀಡಿದೆ.

    ಮಾಧವಿ ಪುರಿ ಬುಚ್ ಅವರ ವಿರುದ್ಧ ಹಿಂಡೆನ್‌ಬರ್ಗ್-ಅದಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ದೂರುಗಳನ್ನು ಭಾರತೀಯ ಲೋಕಪಾಲ್ ವಜಾಗೊಳಿಸಿದೆ. ಭ್ರಷ್ಟಾಚಾರ ವಿರೋಧಿ ಒಂಬುಡ್ಸ್‌ಮನ್ ಆರೋಪಗಳಲ್ಲಿ ಯಾವುದೇ ಅರ್ಹತೆ ಇಲ್ಲ. ಊಹೆಯಿಂದ ಕೂಡಿದಂತಿದೆ. ಯಾವುದೇ ಪರಿಶೀಲಿಸಬಹುದಾದ ಪುರಾವೆಗಳ ಕೊರತೆಯಿದೆ ಎಂದು ಲೋಕಪಾಲ್‌ ಹೇಳಿದೆ.

    ಬುಧವಾರ ಹೊರಡಿಸಿದ ಆದೇಶದಲ್ಲಿ, ದೂರುಗಳು ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಅಡಿಯಲ್ಲಿ ತನಿಖೆಗೆ ಅಗತ್ಯವಾದ ಕಾನೂನು ಅವಶ್ಯಕತೆಗಳನ್ನು ಪೂರೈಸಿಲ್ಲ ಎಂದು ಹೇಳಲಾಗಿದೆ. ಆರೋಪಗಳು ಹೆಚ್ಚಾಗಿ ಊಹೆಗಳಿಂದ ಕೂಡಿವೆ. ಹೀಗಾಗಿ, ದೂರುಗಳನ್ನು ವಿಲೇವಾರಿ ಮಾಡಲಾಗುತ್ತದೆ ಎಂದು ಲೋಕಪಾಲ್‌ ತಿಳಿಸಿದೆ.

    ಹಿಂಡೆನ್‌ಬರ್ಗ್‌ ವರದಿ ಆಧರಿಸಿ ಮಾಧವಿ ವಿರುದ್ಧ ಪ್ರತ್ಯೇಕವಾಗಿ ಎರಡು ದೂರುಗಳು ದಾಖಲಾಗಿದ್ದವು. ಅದಾನಿ ಸಮೂಹದ ಸಾಗರೋತ್ತರ ಹೂಡಿಕೆಯಲ್ಲಿ ಮಾಧವಿ ಮತ್ತು ಅವರ ಪತಿ ಪಾಲುದಾರಿಕೆ ಹೊಂದಿದ್ದಾರೆಂದು ಹಂಡೆನ್‌ಬರ್ಗ್‌ ರಿಸರ್ಚ್‌ ಆರೋಪಿಸಿತ್ತು. ಇದನ್ನು ಮಾಧವಿ ಅವರು ಅಲ್ಲಗಳೆದಿದ್ದರು.

  • ಹಿಂಡನ್‌ಬರ್ಗ್‌ನಲ್ಲಿ ಸೊರೊಸ್ ಮುಖ್ಯ ಹೂಡಿಕೆದಾರ, ವಿದೇಶದಿಂದ ಭಾರತದ ವಿರುದ್ಧ ಪಿತೂರಿ: ರವಿಶಂಕರ್‌ ಪ್ರಸಾದ್

    ಹಿಂಡನ್‌ಬರ್ಗ್‌ನಲ್ಲಿ ಸೊರೊಸ್ ಮುಖ್ಯ ಹೂಡಿಕೆದಾರ, ವಿದೇಶದಿಂದ ಭಾರತದ ವಿರುದ್ಧ ಪಿತೂರಿ: ರವಿಶಂಕರ್‌ ಪ್ರಸಾದ್

    ನವದೆಹಲಿ: ಹಿಂಡನ್‌ಬರ್ಗ್‌ನಲ್ಲಿ ಜಾರ್ಜ್‌ ಸೊರೊಸ್ (George Soros) ಮುಖ್ಯ ಹೂಡಿಕೆದಾರ. ಭಾರತದ ಆರ್ಥಿಕ ಬೆಳವಣಿಗೆಯನ್ನು ಹಳಿತಪ್ಪಿಸಲು ವಿದೇಶದಿಂದ ಪಿತೂರಿ ನಡೆಯುತ್ತಿದೆ ಎಂದು ಮಾಜಿ ಕೇಂದ್ರ ಸಚಿವ, ಬಿಜೆಪಿ ವಕ್ತಾರ ರವಿಶಂಕರ್‌ ಪ್ರಸಾದ್‌ (Ravi Shankar Prasad) ದೂರಿದ್ದಾರೆ.

    ಹಿಂಡನ್‌ಬರ್ಗ್‌ ರಿಸರ್ಚ್‌ ಸೆಬಿ (SEBI) ಮುಖ್ಯಸ್ಥೆ ಮಾಧವಿ ಪುರಿ ಬುಚ್ (Madhabi Puru Buch) ವಿರುದ್ಧ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂಡನ್‌ಬರ್ಗ್‌ನಲ್ಲಿ ಯಾರ ಹೂಡಿಕೆ ಇದೆ? ಭಾರತದ ವಿರುದ್ಧ ನಿಯಮಿತವಾಗಿ ಪ್ರಚಾರ ಮಾಡುವ ಈ ಸಂಭಾವಿತ ಜಾರ್ಜ್ ಸೊರೊಸ್ ಬಗ್ಗೆ ನಿಮಗೆ ತಿಳಿದಿದೆಯೇ? ಅವರು ಹಿಂಡನ್‌ಬರ್ಗ್‌ನಲ್ಲಿ ಮುಖ್ಯ ಹೂಡಿಕೆದಾರರಾಗಿದ್ದಾರೆ ಎಂದು ಆರೋಪಿಸಿದರು.

    ಲೋಕಸಭಾ ಚುನಾವಣೆಗೆ (Lok Sabha Election) ಮುನ್ನ ಸೊರೊಸ್‌ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಮೋದಿ (NarendraModi) ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಹೇಳಿದ್ದರು. ಒಂದು ದೇಶದ ಆಡಳಿತವನ್ನು ಬದಲಾಯಿಸುವಲ್ಲಿ ಸೊರೊಸ್‌ ಕುಖ್ಯಾತಿಗಳಿಸಿದ್ದಾರೆ ಎಂದು ಕಿಡಿಕಾರಿದರು.

    ನರೇಂದ್ರ ಮೋದಿ ವಿರುದ್ಧ ದ್ವೇಷ ಸಾಧಿಸುತ್ತಿದ್ದ ಕಾಂಗ್ರೆಸ್‌ ಇಂದು ಭಾರತದ ವಿರುದ್ಧವೇ ದ್ವೇಷವನ್ನು ಬೆಳೆಸಿಕೊಂಡಿದೆ. ಭಾರತದ ಷೇರು ಮಾರುಕಟ್ಟೆಗೆ ತೊಂದರೆಯಾದರೆ ಸಣ್ಣ ಹೂಡಿಕೆದಾರರು ತೊಂದರೆಗೊಳಗಾಗುತ್ತಿದ್ದಾರೆ. ಈಗ ಇವರು ಈ ವಿಷಯದಲ್ಲಿ ಜೆಪಿಸಿ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್‌ ಭಾರತದ ಷೇರು ಮಾರುಕಟ್ಟೆ ಕುಸಿಯಲು ಬಯಸುತ್ತಿದೆ.  ಸಣ್ಣ ಹೂಡಿಕೆದಾರರು ಅಭಿವೃದ್ಧಿ ಹೊಂದಲು ಅವರು ಬಯಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

  • ಅದಾನಿ ಷೇರುಗಳಿಗೆ ಹಿಂಡನ್‌ಬರ್ಗ್ ರಿಪೋರ್ಟ್ ಶಾಕ್ – ಹಗರಣದಲ್ಲಿ ಸೆಬಿ ಅಧ್ಯಕ್ಷೆ ಭಾಗಿ ಆರೋಪ

    ಅದಾನಿ ಷೇರುಗಳಿಗೆ ಹಿಂಡನ್‌ಬರ್ಗ್ ರಿಪೋರ್ಟ್ ಶಾಕ್ – ಹಗರಣದಲ್ಲಿ ಸೆಬಿ ಅಧ್ಯಕ್ಷೆ ಭಾಗಿ ಆರೋಪ

    ನವದೆಹಲಿ: ಭಾರತದ ಷೇರುಮಾರುಕಟ್ಟೆಯ SEBI (ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ) ಅಧ್ಯಕ್ಷೆ ಮಾಧವಿ ಪೂರಿ ಬುಚ್ ವಿರುದ್ಧ ಅಮೆರಿಕಾದ ಶಾರ್ಟ್ ಸೆಲ್ಲರ್ ಹಿಂಡನ್‌ಬರ್ಗ್ (Hindenburg) ರಿಸರ್ಚ್ ಗಂಭೀರ ಆರೋಪ ಮಾಡಿದೆ.

    ಅದಾನಿ ಕಂಪನಿಯ (Adani Group) ಅವ್ಯವಹಾರದಲ್ಲಿ ಮಾಧವಿ ಬುಚ್ (Madhabi Puri Buch), ಪತಿ ಧವಲ್ ಬುಚ್ ಪಾಲುದಾರರಾಗಿದ್ದಾರೆ ಎಂದು ಆರೋಪಿಸಿದೆ. ಆದರೆ, ಅದಾನಿ ಸಮೂಹವು ಹಿಂಡನ್‌ಬರ್ಗ್ ಆರೋಪಗಳನ್ನು ತಳ್ಳಿಹಾಕಿದೆ. ಇದೆಲ್ಲವೂ ದುರುದ್ದೇಶಪೂರಿತವಾಗಿದೆ. ವೈಯಕ್ತಿಕ ಲಾಭಕ್ಕಾಗಿ ಮಾಹಿತಿಗಳನ್ನು ತಿರುಚಲಾಗುತ್ತಿದೆ ಎಂದು ಹೇಳುವ ಮೂಲಕ ಆರೋಪಗಳನ್ನು ತಿರಸ್ಕರಿಸಿದೆ. ಇದನ್ನೂ ಓದಿ: ಅಮರನಾಥ್ ಯಾತ್ರೆ ತಾತ್ಕಾಲಿಕ ರದ್ದು

    ಸೆಬಿ ಅಧ್ಯಕ್ಷೆ ಮಾಧವಿ ಪೂರಿ ಬುಚ್ ಹಾಗೂ ಪತಿ ಸಹಾ ತಮ್ಮ ವಿರುದ್ಧದ ಆರೋಪಗಳು ಆಧಾರರಹಿತ ಎಂದು ಹೇಳುವ ಮೂಲಕ ಆರೋಪಗಳನ್ನು ಅಲ್ಲಗಳೆದಿದ್ದಾರೆ.

    ಅದಾನಿ ಷೇರು ಹಗರಣದಲ್ಲಿ ಬುಚ್‌ ಮತ್ತು ಅವರ ಪತಿ ಭಾಗಿಯಾಗಿದ್ದಾರೆ. ಗೌತಮ್‌ ಅದಾನಿ ಅವರ ಸಾಗರೋತ್ತರ ಹೂಡಿಯಲ್ಲಿ ಇವರಿಬ್ಬರು ಪಾಲುದಾರರಾಗಿದ್ದಾರೆ. ಅದಾನಿ ಅವರು ಮಾರಿಷಸ್‌ ಮತ್ತು ಇನ್ನಿತರ ದೇಶಗಳಲ್ಲಿ ಹೊಂದಿರುವ ಶೆಲ್‌ ಕಂಪೆನಿಗಳ ಬಗ್ಗೆ ತನಿಖೆ ನಡೆಸಲು ಸೆಬಿ ಆಸಕ್ತಿ ತೋರದೇ ಇರುವುದು ಅಚ್ಚರಿ ಮೂಡಿಸಿದೆ ಎಂದು ಹಿಂಡನ್‌ಬರ್ಗ್‌ ಆರೋಪಿಸಿದೆ. ಇದನ್ನೂ ಓದಿ: ಸರ್ಕಾರಿ ಕೆಲಸ ತಿರಸ್ಕರಿಸಿದ ಒಲಿಂಪಿಕ್ಸ್‌ ಶೂಟಿಂಗ್‌ನಲ್ಲಿ ಕಂಚು ಗೆದ್ದ ಸರಬ್ಜೋತ್‌ ಸಿಂಗ್‌

    ಸೆಬಿ ಅಧ್ಯಕ್ಷೆ ಮಾಧವಿ ಯಾಕಿನ್ನೂ ರಾಜೀನಾಮೆ ಕೊಟ್ಟಿಲ್ಲ ಅಂತಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಜಂಟಿ ಸದನ ಸಮಿತಿ ತನಿಖೆಗೆ ಒಪ್ಪಿಸಬೇಕು ಅಂತಾ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ. ಈ ಮಧ್ಯೆ, ಮಾಧವಿ ಅವರು ಸ್ವಹಿತಾಸಕ್ತಿ ಏನೂ ಹೊಂದಿಲ್ಲ ಅಂತಾ ಸೆಬಿ ಸ್ಪಷ್ಟನೆ ನೀಡಿದೆ.

  • ಶೀಘ್ರವೇ ಭಾರತದ ದೊಡ್ಡ ಸುದ್ದಿ: ಬ್ರೇಕಿಂಗ್‌ ನ್ಯೂಸ್‌ ಕೊಟ್ಟ ಹಿಂಡನ್‌ಬರ್ಗ್‌

    ಶೀಘ್ರವೇ ಭಾರತದ ದೊಡ್ಡ ಸುದ್ದಿ: ಬ್ರೇಕಿಂಗ್‌ ನ್ಯೂಸ್‌ ಕೊಟ್ಟ ಹಿಂಡನ್‌ಬರ್ಗ್‌

    ನವದೆಹಲಿ: ಅದಾನಿ ಸಮೂಹ ಕಂಪನಿಗಳ (Adani Group Companies) ವಿರುದ್ಧ ವರದಿ ಪ್ರಕಟಿಸಿ ಷೇರು ಮೌಲ್ಯ ಕುಸಿತ ಮಾಡಿದ್ದ ಹಿಂಡನ್‌ಬರ್ಗ್‌ (Hindenburg Research) ಶೀಘ್ರವೇ ಭಾರತ ಬಗ್ಗೆ ದೊಡ್ಡ ಸುದ್ದಿ ಪ್ರಕಟಿಸುವುದಾಗಿ ತಿಳಿಸಿದೆ.

    ಅದಾನಿ ಕಂಪನಿಯ ಬಗ್ಗೆಯೋ ಅಥವಾ ಬೇರೆ ಯಾವುದೋ ಕಂಪನಿಯೋ ಅಥವಾ ಯಾವುದೋ ಕ್ಷೇತ್ರಗಳ ಕಂಪನಿಗಳ ಬಗ್ಗೆ ವರದಿ ಬಿಡುಗಡೆ ಮಾಡುತ್ತದೋ ಎನ್ನುವುದರ ಬಗ್ಗೆ ಯಾವುದೇ ವಿವರವನ್ನು ಹಿಂಡನ್‌ಬರ್ಗ್‌ ನೀಡಿಲ್ಲ.


    2023ರ ಜನವರಿಯಲ್ಲಿ ಅಮೆರಿಕದ ಶಾರ್ಟ್‌ ಸೆಲ್ಲಿಂಗ್‌ (Short Selling) ಕಂಪನಿ ಹಿಂಡನ್‌ಬರ್ಗ್‌ ಅದಾನಿ ಕಂಪನಿ ವಿರುದ್ಧ ಸಂಶೋಧನಾ ವರದಿ ಪ್ರಕಟಿಸಿತ್ತು. ಈ ವರದಿ ಪ್ರಕಟವಾದ ಬಳಿಕ ಅದಾನಿ ಕಂಪನಿಯ ಷೇರುಗಳ ಮೌಲ್ಯ ಭಾರೀ ಇಳಿಕೆಯಾಗಿತ್ತು. ನಂತರ ಪ್ರಕರಣ ಸುಪ್ರೀಂ ಕೋರ್ಟ್‌ (Supreme Court) ಮೆಟ್ಟಿಲೇರಿತ್ತು. ಜಾರಿ ನಿರ್ದೇಶನಾಲಯ (ED) ಇಡಿ ನಡೆಸಿದ ತನಿಖೆಯಲ್ಲಿ 16 ಕಂಪನಿಗಳು ಭಾರೀ ಲಾಭ ಮಾಡಿಕೊಂಡ ವಿಚಾರ ದೃಢಪಟ್ಟಿತ್ತು. ಇದನ್ನೂ ಓದಿ: ಅದಾನಿ ಷೇರು ಶಾರ್ಟ್‌ ಸೆಲ್ಲಿಂಗ್‌, 16 ಕಂಪನಿಗಳಿಗೆ ಭಾರೀ ಲಾಭ – ಇಡಿ ತನಿಖಾ ವರದಿಯಲ್ಲಿ ಏನಿದೆ?

    ಸುಪ್ರೀಂ ಕೋರ್ಟ್‌ ನೇಮಿಸಿದ್ದ ಸಮಿತಿಯೂ ಅದಾನಿ ಕಂಪನಿಗೆ ಕ್ಲೀನ್‌ ಚಿಟ್‌ ನೀಡಿತ್ತು. ತನಿಖಾ ವರದಿಗಳು ಪ್ರಕಟವಾಗುತ್ತಿದ್ದಂತೆ ನಿಧಾನವಾಗಿ ಅದಾನಿ ಕಂಪನಿಗಳ ಷೇರುಗಳ ಮೌಲ್ಯ ಏರಿಕೆಯಾಗಿತ್ತು. ಹಿಂಡನ್‌ಬರ್ಗ್‌ ವರದಿಯಿಂದ ವಿಶ್ವದ ಮೂರನೇ ಶ್ರೀಮಂತರ ವ್ಯಕ್ತಿಯಾಗಿದ್ದ ಗೌತಮ್‌ ಅದಾನಿ ಸಂಪತ್ತು ಕರಗಿ 30ನೇ ಸ್ಥಾನಕ್ಕೆ ಕುಸಿದಿದ್ದರು. ನಂತರ ಚೇತರಿಕೆ ಕಂಡು 12ನೇ ಸ್ಥಾನಕ್ಕೆ ಏರಿದ್ದಾರೆ. ಇದನ್ನೂ ಓದಿ: ಷೇರು ವಿವಾದ; ಅದಾನಿ ಗ್ರೂಪ್‌ಗೆ ಸುಪ್ರೀಂ ಕೋರ್ಟ್ ಸಮಿತಿ ಕ್ಲೀನ್ ಚಿಟ್

    ಏನಿದು ಶಾರ್ಟ್‌ ಸೆಲ್ಲಿಂಗ್‌?
    ಶಾರ್ಟ್ ಸೆಲ್ಲಿಂಗ್ ಎನ್ನುವುದು ಹೂಡಿಕೆಯ ತಂತ್ರವಾಗಿದ್ದು, ಮುಂದಿನ ದಿನಗಳಲ್ಲಿ ಕಂಪನಿಯ ಷೇರು ಮೌಲ್ಯ ಕುಸಿಯಬಹುದು ಎಂಬುದನ್ನು ಮೊದಲೇ ಊಹಿಸಿ ನಿಗದಿತ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿ ನಂತರ ಆ ಕಂಪನಿಯ ಷೇರು ಮೌಲ್ಯ ಕುಸಿತಗೊಂಡಾಗ ಅವುಗಳನ್ನು ಕಡಿಮೆ ಬೆಲೆಗೆ ಮರು ಖರೀದಿಸಿ ಲಾಭ ಮಾಡುವುದಕ್ಕೆ ಶಾರ್ಟ್‌ ಸೆಲ್ಲಿಂಗ್‌ ಎಂದು ಕರೆಯಲಾಗುತ್ತದೆ.

    ಅದಾನಿಯಿಂದ ಎಫ್‌ಪಿಒ ರದ್ದು:
    20,000 ಕೋಟಿ ರೂ. ಮೌಲ್ಯದ ಎಫ್‌ಪಿಒಗೆ (ಮುಂದುವರಿದ ಸಾರ್ವಜನಿಕ ಕೊಡುಗೆ ಅಥವಾ ಹೊಸದಾಗಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ) ಅದಾನಿ ಎಂಟರ್‌ಪ್ರೈಸಸ್‌ ಕಳೆದ ಜನವರಿಯಲ್ಲಿ ಚಾಲನೆ ನೀಡಿತ್ತು. ಪ್ರತಿ ಷೇರಿಗೆ 3,112ರಿಂದ 3,276 ರೂ. ಆಫರ್‌ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹಿಂಡನ್‌ಬರ್ಗ್‌ ಅದಾನಿ ಕಂಪನಿಗಳ ವಿರುದ್ಧ ಸಂಶೋಧನಾ ವರದಿ ಬಿಡುಗಡೆ ಮಾಡಿತ್ತು. ವರದಿ ಬಳಿಕ ಅದಾನಿ ಕಂಪನಿಗಳ ಷೇರಿನ ಮೌಲ್ಯ ಕುಸಿತ ಕಂಡಿದ್ದರೂ ಎಫ್‌ಪಿಒ ಬಿಡ್‌ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿತ್ತು. ಇದನ್ನೂ ಓದಿ: ಹಿಂಡನ್‌ಬರ್ಗ್‌ ಸಂಶೋಧನಾ ವರದಿ ಸುಳ್ಳು, ಆಧಾರ ರಹಿತ: ಅದಾನಿಗೆ ಮಾರಿಷಸ್‌ ಸರ್ಕಾರದಿಂದ ಕ್ಲೀನ್‌ ಚಿಟ್‌

    ಷೇರುಗಳ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ನಂತರ 20 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದ್ದ ಎಫ್‌ಪಿಒ ಪ್ರಕ್ರಿಯೆಯನ್ನೇ ಅದಾನಿ ಸಮೂಹ ರದ್ದು ಮಾಡಿತ್ತು. ನಮ್ಮ ಷೇರು (Share) ಮೌಲ್ಯ ಕುಸಿದಿದೆ. ಈ ಸಂದರ್ಭದಲ್ಲಿ ಎಫ್‌ಪಿಒನೊಂದಿಗೆ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂದು ಹೇಳಿ ಹೂಡಿಕೆದಾರರ ಹಣವನ್ನು ಮರಳಿಸಲಾಗುವುದು ಎಂದು ಗೌತಮ್‌ ಅದಾನಿ (Gautam Adani) ತಿಳಿಸಿದ್ದರು.

     

  • ಅದಾನಿ ಕೇಸ್‌ ತನಿಖೆ ನಡೆಸಲು ಸೆಬಿ ಸಮರ್ಥವಾಗಿದೆ – ಪತ್ರಿಕೆಯ ವರದಿಯನ್ನು ಅವಲಂಬಿಸಬೇಡಿ : ಸುಪ್ರೀಂ ಹೇಳಿದ್ದೇನು?

    ಅದಾನಿ ಕೇಸ್‌ ತನಿಖೆ ನಡೆಸಲು ಸೆಬಿ ಸಮರ್ಥವಾಗಿದೆ – ಪತ್ರಿಕೆಯ ವರದಿಯನ್ನು ಅವಲಂಬಿಸಬೇಡಿ : ಸುಪ್ರೀಂ ಹೇಳಿದ್ದೇನು?

    ನವದೆಹಲಿ: ಅದಾನಿ (Adani) ಹಿಂಡೆನ್‌ಬರ್ಗ್‌ ಶಾರ್ಟ್‌ ಸೆಲ್ಲಿಂಗ್‌ ಪ್ರಕರಣದಲ್ಲಿ ಸೆಬಿ ಬದಲು ಬೇರೆ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕೆಂಬ ವಾದವನ್ನು ಸುಪ್ರೀಂ ಕೋರ್ಟ್‌ (Supreme Court) ತಿರಸ್ಕರಿಸಿದೆ.

    ಈ ಪ್ರಕರಣದ ತನಿಖೆ ನಡೆಸಲು ಸೆಬಿ ಸಮರ್ಥವಾಗಿದೆ. ಮೂರು ತಿಂಗಳ ಒಳಗಡೆ ಸೆಬಿ ಸಂಪೂರ್ಣವಾಗಿ ತನಿಖೆ ನಡೆಸಬೇಕೆಂದು ಕೋರ್ಟ್‌ ಸೂಚಿಸಿದೆ.

    ಸಿಜೆಐ ಡಿವೈ ಚಂದ್ರಚೂಡ್, ನ್ಯಾ.ಜೆಬಿ ಪರ್ದಿವಾಲಾ ಮತ್ತು ನ್ಯಾ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ನವೆಂಬರ್‌ನಲ್ಲಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು.

    ಅದಾನಿ ಕಂಪನಿಗಳು ತನ್ನ ಷೇರಿನ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಿದೆ ಎಂದು ಹಿಂಡೆನ್‌ಬರ್ಗ್ ಸಂಶೋಧನಾ ವರದಿ (Hindenburg Research Report) ಬಳಿಕ ವಿವಿಧ ಅದಾನಿ ಕಂಪನಿಗಳ ಷೇರು ಮೌಲ್ಯದಲ್ಲಿ ತೀವ್ರ ಕುಸಿತವಾಗಿ ಸುಮಾರು 100 ಶತಕೋಟಿ ಡಾಲರ್‌ ಸಂಪತ್ತು ಕರಗಿತ್ತು. ಪ್ರಕರಣದ ತನಿಖೆ ವಿಶೇಷ ತನಿಖಾ ತಂಡ (SIT) ರಚಿಸಬೇಕು ಎಂದು ಕೋರಿ ಹಲವು ಮಂದಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದರು.  ಇದನ್ನೂ ಓದಿ: ಹಿಂಡೆನ್‌ಬರ್ಗ್‌ ಆರೋಪ ಅಪ್ರಸ್ತುತ – ಅಮೆರಿಕ ಹೇಳಿಕೆ ಬೆನ್ನಲ್ಲೇ ಅದಾನಿ ಕಂಪನಿಗಳ ಷೇರು ಮೌಲ್ಯ ಭಾರೀ ಏರಿಕೆ

    ಕೋರ್ಟ್‌ ಹೇಳಿದ್ದೇನು?
    ಅದಾನಿ ವಿರುದ್ಧದ 22 ಆರೋಪಗಳ ಪೈಕಿ 20ರ ತನಿಖೆಯನ್ನು ಪೂರ್ಣಗೊಳಿಸಿದೆ. ಸಾಲಿಸಿಟರ್ ಜನರಲ್ ಅವರ ಭರವಸೆಯನ್ನು ಗಣನೆಗೆ ತೆಗೆದುಕೊಂಡು ಇತರ ಎರಡು ಪ್ರಕರಣಗಳ ತನಿಖೆಯನ್ನು 3 ತಿಂಗಳೊಳಗೆ ಪೂರ್ಣಗೊಳಿಸಲು ನಾವು ಸೆಬಿಗೆ ನಿರ್ದೇಶಿಸುತ್ತೇವೆ.

    ತನಿಖೆಯನ್ನು ಸೆಬಿಯಿಂದ ಎಸ್‌ಐಟಿಗೆ ವರ್ಗಾಯಿಸಲು ಯಾವುದೇ ಆಧಾರವಿಲ್ಲ. ಸೆಬಿ ತನಿಖೆಯನ್ನು ಅನುಮಾನಿಸಲು ಒಸಿಸಿಆರ್‌ಪಿ (OCCRP: Organized Crime and Corruption Reporting Project) ವರದಿಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಒಸಿಸಿಆರ್‌ಪಿ ವರದಿಯನ್ನು ತಿರಸ್ಕರಿಸಲಾಗಿದೆ. ಯಾವುದೇ ಪರಿಶೀಲನೆಯಿಲ್ಲದೆ ಮೂರನೇ ಸಂಸ್ಥೆಯ ವರದಿಯನ್ನು ಪುರಾವೆಯಾಗಿ ಪರಿಗಣಿಸುವುದಿಲ್ಲ.

    ಈ ಪ್ರಕರಣದ ತನಿಖೆಯನ್ನು ಸೆಬಿಯಿಂದ ಬೇರೆ ಕಡೆ ವರ್ಗಾಯಿಸಬೇಕೆಂಬ ವಾದಕ್ಕೆ ಯಾವುದೇ ಆಧಾರವಿಲ್ಲ. ತಜ್ಞರ ಸಮಿತಿಯ ಸದಸ್ಯರ ಹಿತಾಸಕ್ತಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಾದಗಳನ್ನು ತಿರಸ್ಕರಿಸುತ್ತದೆ.

    ಭಾರತ ಸರ್ಕಾರ ಮತ್ತು ಸೆಬಿಯು ಹಿಂಡೆನ್‌ಬರ್ಗ್ ವರದಿಯಿಂದ ಶಾರ್ಟ್‌ ಸೆಲ್ಲಿಂಗ್‌ಗೆ ಸಂಬಂಧಿಸಿದಂತೆ ಯಾವುದೇ ಕಾನೂನು ಉಲ್ಲಂಘನೆಯಾಗಿದೆಯೇ ಎಂದು ಪರಿಶೀಲಿಸಬೇಕು. ಉಲ್ಲಂಘನೆಯಾಗಿದ್ದಲ್ಲಿ ಕಾನೂನು ಪ್ರಕಾರ ಕೈಗೊಳ್ಳಬೇಕು.

     

  • ಅದಾನಿ ಹಿಂಡೆನ್‌ಬರ್ಗ್‌ ಶಾರ್ಟ್‌ ಸೆಲ್ಲಿಂಗ್‌ ಕೇಸ್‌: ಸುಪ್ರೀಂನಿಂದ ಇಂದು ತೀರ್ಪು ಪ್ರಕಟ

    ಅದಾನಿ ಹಿಂಡೆನ್‌ಬರ್ಗ್‌ ಶಾರ್ಟ್‌ ಸೆಲ್ಲಿಂಗ್‌ ಕೇಸ್‌: ಸುಪ್ರೀಂನಿಂದ ಇಂದು ತೀರ್ಪು ಪ್ರಕಟ

    ನವದೆಹಲಿ: ಅದಾನಿ (Adani) ಸಮೂಹದ ಕಂಪನಿಗಳ ವಿರುದ್ಧ ಹಿಂಡೆನ್‌ಬರ್ಗ್‌ ಸಂಶೋಧನಾ ವರದಿಯಲ್ಲಿನ (Hindenburg Research Report) ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆಯ ತೀರ್ಪು ಇಂದು ಪ್ರಕಟವಾಗಲಿದ.

    ಸಿಜೆಐ ಡಿವೈ ಚಂದ್ರಚೂಡ್, ನ್ಯಾ. ಜೆಬಿ ಪರ್ದಿವಾಲಾ ಮತ್ತು ನ್ಯಾ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ನವೆಂಬರ್‌ನಲ್ಲಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಇದನ್ನೂ ಓದಿ: ಅದಾನಿ ಷೇರು ಶಾರ್ಟ್‌ ಸೆಲ್ಲಿಂಗ್‌, 16 ಕಂಪನಿಗಳಿಗೆ ಭಾರೀ ಲಾಭ – ಇಡಿ ತನಿಖಾ ವರದಿಯಲ್ಲಿ ಏನಿದೆ?

    ಅದಾನಿ ತನ್ನ ಷೇರಿನ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಿದೆ ಎಂದು ಹಿಂಡೆನ್‌ಬರ್ಗ್ ವರದಿ ಬಳಿಕ ವಿವಿಧ ಅದಾನಿ ಕಂಪನಿಗಳ ಷೇರು ಮೌಲ್ಯದಲ್ಲಿ ತೀವ್ರ ಕುಸಿತವಾಗಿ ಸುಮಾರು 100 ಶತಕೋಟಿ ಡಾಲರ್‌ ಸಂಪತ್ತು ಕರಗಿತ್ತು. ಪ್ರಕರಣ ತನಿಖೆಗೆ ಆಗ್ರಹಿಸಿ ಹಲವು ಅರ್ಜಿ ಸಲ್ಲಿಕೆಯಾಗಿದ್ದವು. ಇದನ್ನೂ ಓದಿ: ಇದು ಭಾರತದ ಮೇಲೆ ನಡೆಸಿದ ವ್ಯವಸ್ಥಿತ ದಾಳಿ – ಆರೋಪಗಳಿಗೆ 413 ಪುಟಗಳ ಉತ್ತರ ನೀಡಿದ ಅದಾನಿ ಗ್ರೂಪ್‌

    ಸುಪ್ರೀಂಕೋರ್ಟ್ ಈ ಪ್ರಕರಣ ಪರಿಶೀಲಿಸಲು ನಿವೃತ್ತ ನ್ಯಾಯಮೂರ್ತಿ ಎ.ಎಂ ಸಪ್ರೆ ನೇತೃತ್ವದ ತಜ್ಞರ ಸಮಿತಿಯನ್ನು ರಚಿಸುವುದರ ಜೊತೆಗೆ ಸ್ವತಂತ್ರವಾಗಿ ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಸೆಬಿಗೆ ಸೂಚಿಸಿತು. ತಜ್ಞರ ಸಮಿತಿಯು ಕಳೆದ ಮೇ ತಿಂಗಳಲ್ಲಿ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ಸೆಬಿಯ ಕಡೆಯಿಂದ ಯಾವುದೇ ಪ್ರಾಥಮಿಕ ಲೋಪ ಕಂಡುಬಂದಿಲ್ಲ ಎಂದು ಹೇಳಿತ್ತು‌.

    ಹಿಂಡೆನ್‌ಬರ್ಗ್ ಸಂಶೋಧನಾ ವರದಿಬಿಡುಗಡೆಯಾಗುವ ಸಮಯದಲ್ಲಿ ಅದಾನಿ ಸಮೂಹದ ಷೇರುಗಳನ್ನು ಶಾರ್ಟ್ ಸೆಲ್ಲಿಂಗ್ (Short Selling) ಮಾಡುವ ಮೂಲಕ ಒಂದು ಖಾಸಗಿ ಬ್ಯಾಂಕ್‌ ಸೇರಿದಂತೆ 16 ಸಂಸ್ಥೆಗಳು ಭಾರೀ ಲಾಭ ಮಾಡಿರುವ ವಿಷಯ ಜಾರಿ ನಿರ್ದೇಶನಾಲಯದ (ED) ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎಂದು ಮಾಧ್ಯಮವೊಂದು ಹಿಂದೆ ವರದಿ ಮಾಡಿತ್ತು.  ಇದನ್ನೂ ಓದಿ: ಹಿಂಡೆನ್‌ಬರ್ಗ್‌ ಆರೋಪ ಅಪ್ರಸ್ತುತ – ಅಮೆರಿಕ ಹೇಳಿಕೆ ಬೆನ್ನಲ್ಲೇ ಅದಾನಿ ಕಂಪನಿಗಳ ಷೇರು ಮೌಲ್ಯ ಭಾರೀ ಏರಿಕೆ

    ವಿದೇಶಿ ಬಂಡವಾಳ ಹೂಡಿಕೆದಾರರು ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FPIs/FIIs) ಸೇರಿದಂತೆ ಒಂದು ಡಜನ್ ಕಂಪನಿಗಳು ಅದಾನಿ ಗ್ರೂಪ್‌ನ ಷೇರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಲಾಭ ಮಾಡಿರುವ ವಿಷಯ ಇಡಿ ನಡೆಸಿದ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿತ್ತು.

     

  • ಹಿಂಡೆನ್‌ಬರ್ಗ್‌ ಆರೋಪ ಅಪ್ರಸ್ತುತ – ಅಮೆರಿಕ ಹೇಳಿಕೆ ಬೆನ್ನಲ್ಲೇ ಅದಾನಿ ಕಂಪನಿಗಳ ಷೇರು ಮೌಲ್ಯ ಭಾರೀ ಏರಿಕೆ

    ಹಿಂಡೆನ್‌ಬರ್ಗ್‌ ಆರೋಪ ಅಪ್ರಸ್ತುತ – ಅಮೆರಿಕ ಹೇಳಿಕೆ ಬೆನ್ನಲ್ಲೇ ಅದಾನಿ ಕಂಪನಿಗಳ ಷೇರು ಮೌಲ್ಯ ಭಾರೀ ಏರಿಕೆ

    – ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 16ನೇ ಸ್ಥಾನಕ್ಕೆ ಜಿಗಿದ ಗೌತಮ್‌ ಅದಾನಿ

    ಮುಂಬೈ: ಅದಾನಿ ಸಮೂಹದ (Adani Group) ವಿರುದ್ಧ ಹಿಂಡೆನ್‌ಬರ್ಗ್‌ ರಿಸರ್ಚ್‌ (Hindenburg Research) ಮಾಡಿದ ಆರೋಪ ಅಪ್ರಸ್ತುತ ಎಂದು ಅಮೆರಿಕದ ಸಂಸ್ಥೆ ತೀರ್ಮಾನಿಸಿದ ಬೆನ್ನಲ್ಲೇ ಅದಾನಿ ಸಮೂಹದ ಕಂಪನಿಗಳ ಷೇರುಗಳ ಮೌಲ್ಯ ಒಂದೇ ದಿನದಲ್ಲಿ ಭಾರೀ ಏರಿಕೆಯಾಗಿದೆ.

    ನವೆಂಬರ್‌ ಮೊದಲ ವಾರದಲ್ಲಿ ಶ್ರೀಲಂಕಾದ ಕೊಲಂಬೋದಲ್ಲಿ (Colombo) ಬಂದರಿನಲ್ಲಿ ಕಂಟೈನರ್ ಟರ್ಮಿನಲ್‌ ಯೋಜನೆಗೆ (Container Terminal Project) ಅಮೆರಿಕದ ಇಂಟರ್‌ನ್ಯಾಷನಲ್‌ ಡೆವಲಪ್‌ಮೆಂಟ್‌ ಫೈನಾನ್ಸ್‌ ಕಾರ್ಪೋರೇಷನ್‌ (DFC) 553 ಮಿಲಿಯನ್‌ ಡಾಲರ್‌ (ಅಂದಾಜು 4,600 ಕೋಟಿ ರೂ.) ಹಣವನ್ನು ಅದಾನಿ ಪೋರ್ಟ್‌ ಎಸ್‌ಇಝಡ್‌(Adani Port Sez) ಸಾಲವಾಗಿ ನೀಡಿದೆ.

    ಅದಾನಿ ಕಂಪನಿಗೆ ಭಾರೀ ಮೊತ್ತದ ಸಾಲ ನೀಡುವ ಮುನ್ನ ಡಿಎಫ್‌ಸಿ ಹಿಂಡೆನ್‌ಬರ್ಗ್‌ ಮಾಡಿದ ಎಲ್ಲಾ ಆರೋಪಗಳನ್ನು ಅಧ್ಯಯನ ಮಾಡಿತ್ತು. ಹಿಂಡೆನ್‌ಬರ್ಗ್‌ ಸಂಶೋಧನಾ ವರದಿಯ ಸತ್ಯಾಸತ್ಯತೆಯ ಬಳಿಕ ಈ ಆರೋಪ ಅಪ್ರಸ್ತುತ ಎಂಬ ತೀರ್ಮಾನಕ್ಕೆ ಬಂದಿದೆ ಎಂದು ಡಿಎಫ್‌ಸಿ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾಗಿ ಬ್ಲೂಮ್‌ಬರ್ಗ್‌ ವರದಿ ಮಾಡಿದೆ.  ಈ ವರದಿ ಪ್ರಕಟವಾದ ಬೆನ್ನಲ್ಲೇ ಮಂಗಳವಾರ ಒಂದೇ ದಿನ ಅದಾನಿ ಸಮೂಹದ ಕಂಪನಿಗಳ ಮೌಲ್ಯ 12.5 ಲಕ್ಷ ಕೋಟಿ ಏರಿಕೆಯಾಗಿದೆ.

    ಅಮೆರಿಕ ಬೇರೆ ದೇಶಗಳಲ್ಲಿ ಮೂಲಸೌಕರ್ಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವುದು ಹೊಸದೆನಲ್ಲ. ಆದರೆ ಏಷ್ಯಾದಲ್ಲಿ ಚೀನಾ (China) ಪ್ರಭಾವ ಕಡಿಮೆ ಮಾಡಲು ಅಮೆರಿಕ ಮುಂದಾಗುತ್ತಿದೆ. ಇದರ ಭಾಗವಾಗಿ ಭಾರತದ ಅದಾನಿ ಕಂಪನಿಯ ಮೇಲೆ ಹೂಡಿಕೆ ಮಾಡುತ್ತಿದೆ.  ಇದನ್ನೂ ಓದಿ: ಅದಾನಿ ಷೇರು ಶಾರ್ಟ್‌ ಸೆಲ್ಲಿಂಗ್‌, 16 ಕಂಪನಿಗಳಿಗೆ ಭಾರೀ ಲಾಭ – ಇಡಿ ತನಿಖಾ ವರದಿಯಲ್ಲಿ ಏನಿದೆ?

    ಅದಾನಿ ಕಂಪನಿಗಳ ಷೇರು ಜಿಗಿತ – ಯಾವುದು ಎಷ್ಟು ಏರಿಕೆ?
    ಗ್ರೀನ್‌ – 224.75(20%)
    ಟ್ರಾನ್ಸ್‌ಮಿಷನ್‌ – 180.71(19.99%)
    ಗ್ಯಾಸ್‌ – 45.61(19.88%)
    ಎಂಟರ್‌ಪ್ರೈಸಸ್‌ – 428.16(16.91%)
    ಪವರ್‌ -73.45(15.80%)
    ಪೋರ್ಟ್ಸ್‌ ಎಸ್‌ಇಝಡ್‌ -134.46(15.30%)
    ವಿಲ್ಮರ್‌ – 34.40(9.93%)

    ಶತಕೋಟ್ಯಧಿಪತಿ ಗೌತಮ್ ಅದಾನಿ ಸಮೂಹ ಮಾರಿಷಸ್‌ ಮೂಲದ ಶೆಲ್ ಕಂಪನಿಗಳನ್ನು ಬಳಸಿ ಸ್ಟಾಕ್‌ ಮಾರುಕಟ್ಟೆಯಲ್ಲಿ ಷೇರುಗಳ ಬೆಲೆಯನ್ನು ಕೃತಕವಾಗಿ ಹೆಚ್ಚಳ ಮಾಡಿದೆ ಎಂದು ಹಿಂಡೆನ್‌ಬರ್ಗ್‌ ಆರೋಪಿಸಿತ್ತು. ಈ ವರ್ಷದ ಜನವರಿ 24 ರಂದು ವರದಿ ಪ್ರಕಟವಾದ ಬಳಿಕ ಅದಾನಿ ಕಂಪನಿಯ ಷೇರುಗಳ ಮೌಲ್ಯ ಇಳಿಕೆಯಾಗಿ ಗೌತಮ್‌ ಅದಾನಿ ಅವರ ಸಂಪತ್ತು ಕರಗಿತ್ತು. ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದ ಅದಾನಿ ಸಮೂಹದ ಮುಖ್ಯಸ್ಥ ಗೌತಮ್‌ ಅದಾನಿ (Gautam Adani) 10 ದಿನದಲ್ಲೇ 25ನೇ ಸ್ಥಾನಕ್ಕೆ ಕುಸಿದಿದ್ದರು. ಇದನ್ನೂ ಓದಿ: ಇದು ಭಾರತದ ಮೇಲೆ ನಡೆಸಿದ ವ್ಯವಸ್ಥಿತ ದಾಳಿ – ಆರೋಪಗಳಿಗೆ 413 ಪುಟಗಳ ಉತ್ತರ ನೀಡಿದ ಅದಾನಿ ಗ್ರೂಪ್‌

    ಹಿಂಡೆನ್‌ಬರ್ಗ್‌ ಸಂಶೋಧನಾ ವರದಿ ಸುಳ್ಳು, ಆಧಾರ ರಹಿತ ಎಂದು ಮಾರಿಷಸ್‌ ಸರ್ಕಾರ ಅಲ್ಲಿನ ಸಂಸತ್ತಿಗೆ ಉತ್ತರ ನೀಡಿತ್ತು. ಭಾರತದಲ್ಲಿ ಸುಪ್ರೀಂ ಕೋರ್ಟ್‌ ನೇಮಿಸಿದ ಸಮಿತಿ ಸಹ ಅದಾನಿ ಕಂಪನಿಗೆ ಕ್ಲಿನ್‌ ಚೀಟ್‌ ನೀಡಿತ್ತು. ಈ ಬೆಳವಣಿಗೆಯ ನಂತರ ಅದಾನಿ ಸಮೂಹ ಕಂಪನಿಗಳ ಷೇರುಗಳ ಮೌಲ್ಯ ನಿಧನವಾಗಿ ಏರಿಕೆ ಕಾಣತೊಡಗಿತ್ತು.

    16ನೇ ಸ್ಥಾನಕ್ಕೆ ಜಿಗಿತ
    ಸದ್ಯ ಈಗ ಗೌತಮ್‌ ಅದಾನಿ ಅವರು ಬ್ಲೂಮ್‌ಬರ್ಗ್‌ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 70.2 ಬಿಲಿಯನ್‌ ಡಾಲರ್‌ ಸಂಪತ್ತಿನೊಂದಿಗೆ 16ನೇ ಸ್ಥಾನಕ್ಕೆ ಜಿಗಿದಿದ್ದರೆ. ಮುಕೇಶ್‌ ಅಂಬಾನಿ 90.4 ಬಿಲಿಯನ್‌ ಡಾಲರ್‌ ಸಂಪತ್ತಿನೊಂದಿಗೆ14ನೇ ಸ್ಥಾನ ಪಡೆದಿದ್ದಾರೆ. 220 ಬಿಲಿಯನ್‌ ಡಾಲರ್‌ ಸಂಪತ್ತು ಹೊಂದಿರುವ ಎಲೋನ್‌ ಮಸ್ಕ್‌ ಮೊದಲ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಇದನ್ನೂ ಓದಿ: ಷೇರು ವಿವಾದ; ಅದಾನಿ ಗ್ರೂಪ್‌ಗೆ ಸುಪ್ರೀಂ ಕೋರ್ಟ್ ಸಮಿತಿ ಕ್ಲೀನ್ ಚಿಟ್

    ಅದಾನಿಯಿಂದ ಎಫ್‌ಪಿಒ ರದ್ದು:
    20,000 ಕೋಟಿ ರೂ. ಮೌಲ್ಯದ ಎಫ್‌ಪಿಒಗೆ (ಮುಂದುವರಿದ ಸಾರ್ವಜನಿಕ ಕೊಡುಗೆ ಅಥವಾ ಹೊಸದಾಗಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ) ಅದಾನಿ ಕಂಪನಿ ಈ ಜನವರಿಯಲ್ಲಿ ಚಾಲನೆ ನೀಡಿತ್ತು. ಪ್ರತಿ ಷೇರಿಗೆ 3,112ರಿಂದ 3,276 ರೂ. ಆಫರ್‌ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹಿಂಡೆನ್‌ಬರ್ಗ್‌ ಅದಾನಿ ಕಂಪನಿ ವಿರುದ್ಧ ಸಂಶೋಧನಾ ವರದಿ ಬಿಡುಗಡೆ ಮಾಡಿತ್ತು. ವರದಿ ಬಳಿಕ ಅದಾನಿ ಕಂಪನಿಯ ಷೇರಿನ ಮೌಲ್ಯ ಕುಸಿತ ಕಂಡಿದ್ದರೂ ಎಫ್‌ಪಿಒ ಬಿಡ್‌ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿತ್ತು. ಇದನ್ನೂ ಓದಿ: ಅದಾನಿ ಸಮೂಹ ಕಂಪನಿಗಳಲ್ಲಿ 15,446 ಕೋಟಿ ಹೂಡಿಕೆ – ಅದಾನಿ ಕೈ ಹಿಡಿದ ರಾಜೀವ್‌ ಜೈನ್‌ ಯಾರು?

    ಷೇರುಗಳ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ನಂತರ 20 ಸಾವಿರ ಕೋಟಿ ರೂ. ಬಂಡವಾಳ ಸಂಗ್ರಹಿಸಲು ಮುಂದಾಗಿದ್ದ ಎಫ್‌ಪಿಒ ಪ್ರಕ್ರಿಯೆಯನ್ನೇ ಅದಾನಿ ಸಮೂಹ ರದ್ದು ಮಾಡಿತ್ತು. ನಮ್ಮ ಷೇರು  ಮೌಲ್ಯ ಕುಸಿದಿದೆ. ಈ ಸಂದರ್ಭದಲ್ಲಿ ಎಫ್‌ಪಿಒನೊಂದಿಗೆ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂದು ಹೇಳಿ ಹೂಡಿಕೆದಾರರ ಹಣವನ್ನು ಮರಳಿಸಲಾಗುವುದು ಎಂದು ಗೌತಮ್‌ ಅದಾನಿ ತಿಳಿಸಿದ್ದರು.

  • ಅದಾನಿ ಷೇರು ಶಾರ್ಟ್‌ ಸೆಲ್ಲಿಂಗ್‌, 16 ಕಂಪನಿಗಳಿಗೆ ಭಾರೀ ಲಾಭ – ಇಡಿ ತನಿಖಾ ವರದಿಯಲ್ಲಿ ಏನಿದೆ?

    ಅದಾನಿ ಷೇರು ಶಾರ್ಟ್‌ ಸೆಲ್ಲಿಂಗ್‌, 16 ಕಂಪನಿಗಳಿಗೆ ಭಾರೀ ಲಾಭ – ಇಡಿ ತನಿಖಾ ವರದಿಯಲ್ಲಿ ಏನಿದೆ?

    ನವದೆಹಲಿ: ಹಿಂಡೆನ್‌ಬರ್ಗ್ ಸಂಶೋಧನಾ ವರದಿ (Hindenburg Research Report) ಬಿಡುಗಡೆಯಾಗುವ ಸಮಯದಲ್ಲಿ ಅದಾನಿ (Adani) ಸಮೂಹದ ಷೇರುಗಳನ್ನು ಶಾರ್ಟ್ ಸೆಲ್ಲಿಂಗ್ (Short Selling ) ಮಾಡುವ ಮೂಲಕ ಒಂದು ಖಾಸಗಿ ಬ್ಯಾಂಕ್‌ ಸೇರಿದಂತೆ 16 ಸಂಸ್ಥೆಗಳು ಭಾರೀ ಲಾಭ ಮಾಡಿರುವ ವಿಷಯ ಜಾರಿ ನಿರ್ದೇಶನಾಲಯದ (ED) ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ವಿದೇಶಿ ಬಂಡವಾಳ ಹೂಡಿಕೆದಾರರು ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FPIs/FIIs) ಸೇರಿದಂತೆ ಒಂದು ಡಜನ್ ಕಂಪನಿಗಳು ಅದಾನಿ ಗ್ರೂಪ್‌ನ ಷೇರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಲಾಭ ಮಾಡಿರುವ ವಿಷಯ ಇಡಿ ನಡೆಸಿದ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

    ಲಾಭ ಮಾಡಿದ ಸಂಸ್ಥೆಗಳ ಪೈಕಿ ಮೂರು ಭಾರತದಲ್ಲಿ ನೆಲೆಗೊಂಡಿದ್ದರೆ, ನಾಲ್ಕು ಮಾರಿಷಸ್‌, ಮತ್ತು ಫ್ರಾನ್ಸ್, ಹಾಂಕಾಂಗ್‌, ಕೇಮನ್ ದ್ವೀಪಗಳು, ಐರ್ಲೆಂಡ್ ಮತ್ತು ಲಂಡನ್‌ನಲ್ಲಿ ತಲಾ ಒಂದು ಸಂಸ್ಥೆಗಳು ನೆಲೆಗೊಂಡಿವೆ ಎಂದು ಇಡಿ ತನ್ನ ವರದಿಯಲ್ಲಿ ಹೇಳಿದೆ. ಇದನ್ನೂ ಓದಿ: ಇದು ಭಾರತದ ಮೇಲೆ ನಡೆಸಿದ ವ್ಯವಸ್ಥಿತ ದಾಳಿ – ಆರೋಪಗಳಿಗೆ 413 ಪುಟಗಳ ಉತ್ತರ ನೀಡಿದ ಅದಾನಿ ಗ್ರೂಪ್‌

    ಹಿಂಡೆನ್‌ಬರ್ಗ್‌ ವರದಿ ಜನವರಿ 24ರಂದು ಪ್ರಕಟವಾಗಿತ್ತು. ವರದಿ ಪ್ರಕಟವಾಗುವ 2-3 ದಿನಗಳ ಹಿಂದೆ ಕೆಲ ಕಂಪನಿಗಳು ಶಾರ್ಟ್‌ ಸೆಲ್ಲಿಂಗ್‌ ಮಾಡಿವೆ. ಅದರಲ್ಲೂ ಕೆಲ ಕಂಪನಿಗಳು ಇದೇ ಮೊದಲ ಬಾರಿಗೆ ಶಾರ್ಟ್‌ ಸೆಲ್ಲಿಂಗ್‌ ಮಾಡಿದೆ ಎಂದು ಇಡಿ ಜುಲೈನಲ್ಲಿ ಸಲ್ಲಿಸಿದ ತನಿಖಾ ವರದಿಯಲ್ಲಿ ಸೆಬಿಗೆ (SEBI) ತಿಳಿಸಿದೆ. ಎರಡು ಭಾರತೀಯ ಕಂಪನಿಗಳು ‘ಟಾಪ್ ಶಾರ್ಟ್ ಸೆಲ್ಲರ್’ಗಳಲ್ಲಿ ಕಾಣಿಸಿಕೊಂಡಿವೆ. ಈ ಪೈಕಿ ಒಂದು ದೆಹಲಿಯಲ್ಲಿ ಮತ್ತು ಇನ್ನೊಂದು ಮುಂಬೈನಲ್ಲಿ ನೋಂದಾಯಿಸಲಾಗಿದೆ.

    ಕಡಿಮೆ ಅವಧಿಯಲ್ಲಿ ಲಾಭ ಮಾಡಿದ 16 ಸಂಸ್ಥೆಗಳ ಮೇಲೆ ಸದ್ಯ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಸಂಸ್ಥೆಗಳ ಮೇಲೆ ಕ್ರಿಮಿನಲ್‌ ತನಿಖೆ ನಡೆಸುವ ಸಂಪೂರ್ಣ ಅಧಿಕಾರ ಸೆಬಿಗೆ ಇದ್ದು ಒಂದು ವೇಳೆ ಅನುಮಾನಾಸ್ಪದ ವ್ಯವಹಾರ ನಡೆದಿದ್ದರೆ ದೂರು ದಾಖಲಿಸಬಹುದು. ದೂರು ದಾಖಲಾದ ಬಳಿಕ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (PMLA) ಅಡಿ ಇಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಿದೆ. ಇದನ್ನೂ ಓದಿ: ಷೇರು ವಿವಾದ; ಅದಾನಿ ಗ್ರೂಪ್‌ಗೆ ಸುಪ್ರೀಂ ಕೋರ್ಟ್ ಸಮಿತಿ ಕ್ಲೀನ್ ಚಿಟ್

    ಏನಿದು ಶಾರ್ಟ್‌ ಸೆಲ್ಲಿಂಗ್‌?
    ಶಾರ್ಟ್ ಸೆಲ್ಲಿಂಗ್ ಎನ್ನುವುದು ಹೂಡಿಕೆಯ ತಂತ್ರವಾಗಿದ್ದು, ಮುಂದಿನ ದಿನಗಳಲ್ಲಿ ಕಂಪನಿಯ ಷೇರು ಮೌಲ್ಯ ಕುಸಿಯಬಹುದು ಎಂಬುದನ್ನು ಮೊದಲೇ ಊಹಿಸಿ ನಿಗದಿತ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿ ನಂತರ ಆ ಕಂಪನಿಯ ಷೇರು ಮೌಲ್ಯ ಕುಸಿತಗೊಂಡಾಗ ಅವುಗಳನ್ನು ಕಡಿಮೆ ಬೆಲೆಗೆ ಮರು ಖರೀದಿಸಿ ಲಾಭ ಮಾಡುವುದಕ್ಕೆ ಶಾರ್ಟ್‌ ಸೆಲ್ಲಿಂಗ್‌ ಎಂದು ಕರೆಯಲಾಗುತ್ತದೆ.

    ಲಾಭ ಮಾಡಿರುವ ಒಂದು ಸಂಸ್ಥೆ 2020ರಲ್ಲಿ ಆರಂಭಗೊಂಡಿದ್ದರೂ 2021 ರವರೆಗೆ ನಿಷ್ಕ್ರಿಯವಾಗಿತ್ತು. ಹೀಗಿದ್ದರೂ ಇದು ಸೆಪ್ಟೆಂಬರ್ 2021 ರಿಂದ ಮಾರ್ಚ್ 2022 ರವರೆಗಿನ ಕೇವಲ ಆರು ತಿಂಗಳೊಳಗೆ 31,000 ಕೋಟಿ ರೂ. ವಹಿವಾಟಿನ ಮೇಲೆ 1,100 ಕೋಟಿ ರೂಪಾಯಿಗಳ ಗಳಿಕೆಯನ್ನು ಘೋಷಿಸಿದೆ. ಇದನ್ನೂ ಓದಿ: ಅದಾನಿ ಸಮೂಹ ಕಂಪನಿಗಳಲ್ಲಿ 15,446 ಕೋಟಿ ಹೂಡಿಕೆ – ಅದಾನಿ ಕೈ ಹಿಡಿದ ರಾಜೀವ್‌ ಜೈನ್‌ ಯಾರು?

    ಭಾರತದಲ್ಲಿ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತಿರುವ ಮತ್ತೊಂದು ಹಣಕಾಸು ಸೇವೆಗಳ ಗುಂಪು 122 ಕೋಟಿ ರೂಪಾಯಿಗಳ ಅಲ್ಪ ಆದಾಯವನ್ನು ದಾಖಲಿಸಿದೆ. ಹೀಗಿದ್ದರೂ ಎಫ್‌ಐಐ ಆಗಿ ಯಾವುದೇ ತೆರಿಗೆ ಹೊಣೆಗಾರಿಕೆಯಿಲ್ಲದೆ 9,700 ಕೋಟಿ ರೂ. ಆದಾಯಗಳಿಸಿ ಅಚ್ಚರಿ ಮೂಡಿಸಿದೆ ಎಂದು ಇಡಿ ಹೇಳಿದೆ.

    ಈ ಎಫ್‌ಪಿಐಗಳು ಮತ್ತು ಎಫ್‌ಐಐಗಳು ನಿಜವಾದ ಫಲಾನುಭವಿಗಳಲ್ಲ. ಇವುಗಳು ವಿದೇಶಿ ಹೂಡಿಕೆದಾರರರಿಗೆ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಿರಬಹುದು ಎಂದು ಇಡಿ ಸಂಶಯ ವ್ಯಕ್ತಪಡಿಸಿದೆ.

    ಅದಾನಿಯಿಂದ ಎಫ್‌ಪಿಒ ರದ್ದು:
    20,000 ಕೋಟಿ ರೂ. ಮೌಲ್ಯದ ಎಫ್‌ಪಿಒಗೆ (ಮುಂದುವರಿದ ಸಾರ್ವಜನಿಕ ಕೊಡುಗೆ ಅಥವಾ ಹೊಸದಾಗಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ) ಅದಾನಿ ಕಂಪನಿ ಈ ಜನವರಿಯಲ್ಲಿ ಚಾಲನೆ ನೀಡಿತ್ತು. ಪ್ರತಿ ಷೇರಿಗೆ 3,112ರಿಂದ 3,276 ರೂ. ಆಫರ್‌ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹಿಂಡೆನ್‌ಬರ್ಗ್‌ ಅದಾನಿ ಕಂಪನಿ ವಿರುದ್ಧ ಸಂಶೋಧನಾ ವರದಿ ಬಿಡುಗಡೆ ಮಾಡಿತ್ತು. ವರದಿ ಬಳಿಕ ಅದಾನಿ ಕಂಪನಿಯ ಷೇರಿನ ಮೌಲ್ಯ ಕುಸಿತ ಕಂಡಿದ್ದರೂ ಎಫ್‌ಪಿಒ ಬಿಡ್‌ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿತ್ತು.

    ಷೇರುಗಳ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ನಂತರ 20 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದ್ದ ಎಫ್‌ಪಿಒ ಪ್ರಕ್ರಿಯೆಯನ್ನೇ ಅದಾನಿ ಸಮೂಹ ರದ್ದು ಮಾಡಿತ್ತು. ನಮ್ಮ ಷೇರು (Share) ಮೌಲ್ಯ ಕುಸಿದಿದೆ. ಈ ಸಂದರ್ಭದಲ್ಲಿ ಎಫ್‌ಪಿಒನೊಂದಿಗೆ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂದು ಹೇಳಿ ಹೂಡಿಕೆದಾರರ ಹಣವನ್ನು ಮರಳಿಸಲಾಗುವುದು ಎಂದು ಗೌತಮ್‌ ಅದಾನಿ ತಿಳಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರೀ ಏರಿಕೆ ಕಂಡ Adani Enterprises ಷೇರು – ಮತ್ತಷ್ಟು ಹೂಡಿಕೆ ಮಾಡಿದ GQG

    ಭಾರೀ ಏರಿಕೆ ಕಂಡ Adani Enterprises ಷೇರು – ಮತ್ತಷ್ಟು ಹೂಡಿಕೆ ಮಾಡಿದ GQG

    ಮುಂಬೈ: ಹಿಂಡೆನ್‌ಬರ್ಗ್‌ (Hindenburg) ಸಂಶೋಧನಾ ವರದಿಯಿಂದ ಪಾತಾಳ ಕಂಡಿದ್ದ ಅದಾನಿ ಸಮೂಹ ಕಂಪನಿಗಳ (Adani Group Companies) ಷೇರುಗಳು ಈಗ ಮೇಲಕ್ಕೆ ಏರುತ್ತಿದೆ. ಅದರಲ್ಲೂ ಅದಾನಿ ಎಂಟರ್‌ಪ್ರೈಸ್‌ (Adani Enterprises) ಷೇರು ರಾಕೆಟ್‌ ವೇಗದಲ್ಲಿ ಮೇಲೇಳುತ್ತಿದೆ.

    ಅದಾನಿ ಸಮೂಹ ಯಾವುದೇ ರೀತಿಯಲ್ಲೂ ಷೇರಿನ ಬೆಲೆಗಳನ್ನು ತಿರುಚಿಲ್ಲ. ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ (SEBI) ಕಡೆಯಿಂದಲೂ ಯಾವುದೇ ನಿಯಂತ್ರಣ ವೈಫಲ್ಯವೂ ಕಂಡುಬಂದಿಲ್ಲ ಎಂದು ಸುಪ್ರೀಂ (Supreme Court) ನೇಮಿಸಿದ ಸಮಿತಿಯ ವರದಿ ಶುಕ್ರವಾರ ಪ್ರಕಟಗೊಂಡ ಬೆನ್ನಲ್ಲೇ ಅದಾನಿ ಕಂಪನಿಗಳ ಷೇರುಗಳ ಬೆಲೆ ಸೋಮವಾರದಿಂದ ಏರಿಕೆಯಾಗುತ್ತಿದೆ.

    ಅದಾನಿ ಎಂಟರ್‌ಪ್ರೈಸ್‌ ಷೇರು ಬೆಲೆ ಇಂದು ಒಂದೇ ದಿನ 307 ರೂ. ಏರಿಕೆ ಕಂಡು ಕೊನೆಗೆ 2,333.70 ರೂ.ನಲ್ಲಿ ವ್ಯವಹಾರ ಮುಗಿಸಿದೆ. ಶುಕ್ರವಾರ 1956 ರೂ.ನಲ್ಲಿ ಕೊನೆಯಾಗಿದ್ದರೆ ಎರಡು ದಿನದ ವ್ಯವಹಾರದಲ್ಲಿ 677 ರೂ. ಏರಿಕೆಯಾಗಿದೆ. ಇದನ್ನೂ ಓದಿ: ಅದಾನಿ ಸಮೂಹ ಕಂಪನಿಗಳಲ್ಲಿ ಭಾರೀ ಹೂಡಿಕೆ – ಅದಾನಿ ಕೈ ಹಿಡಿದ ರಾಜೀವ್‌ ಜೈನ್‌ ಯಾರು?

    1 ಷೇರಿನ ಬೆಲೆ ಎಷ್ಟು ಏರಿಕೆ?
    ಇಂದಿನ ವ್ಯವಹಾರದಲ್ಲಿ ಅದಾನಿ ಟ್ರಾನ್ಸ್‌ಮಿಷನ್‌ ಒಂದು ಷೇರಿನ ಬೆಲೆ 41 ರೂ., ಅದಾನಿ ಗ್ರೀನ್‌ ಎನರ್ಜಿ ಬೆಲೆ 47 ರೂ. ಏರಿಕೆಯಾಗಿದೆ. ಅದಾನಿ ಪವರ್‌ 12 ರೂ., ಅದಾನಿ ಪೋರ್ಟ್‌ 8 ರೂ. ಏರಿಕೆಯಾಗಿದೆ.

     

    GQG ಕಂಪನಿಯಿಂದ ಮತ್ತಷ್ಟು ಹೂಡಿಕೆ:
    ಅಮೆರಿಕದ GQG ಕಂಪನಿ ಅದಾನಿ ಕಂಪನಿಯಲ್ಲಿ ಮತ್ತಷ್ಟು ಹೂಡಿಕೆ ಮಾಡಿದೆ. 3.5 ಶತಕೋಟಿ ಡಾಲರ್‌ (ಅಂದಾಜು 28 ಸಾವಿರ ಕೋಟಿ ರೂ.) ಹೂಡಿಕೆ ಮಾಡಿ 10% ರಷ್ಟು ಷೇರುಗಳನ್ನು ಖರೀದಿಸಿದೆ. ಯಾವ ಕಂಪನಿಯ ಷೇರುಗಳನ್ನು ಎಷ್ಟು ಪ್ರಮಾಣದಲ್ಲಿ ಖರೀದಿ ಮಾಡಲಾಗಿದೆ ಎಂಬುದು ತಿಳಿದು ಬಂದಿಲ್ಲ. ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಮೂಲಸೌಕರ್ಯ ಹೂಡಿಕೆ ಎಂದು GQG ಕಂಪನಿಯ ಅಧ್ಯಕ್ಷ ಮತ್ತು ಸಿಐಒ ರಾಜೀವ್‌ ಜೈನ್‌ ಅದಾನಿ ಸಮೂಹದ ಕಂಪನಿಯನ್ನು ಬಣ್ಣಿಸಿದ್ದಾರೆ.