Tag: Hindalga Jail

  • ಹಿಂಡಲಗಾ ಜೈಲಿನ ಜಾಮರ್‌ನಿಂದ ಮೊಬೈಲ್‌ ನೆಟ್‌ವರ್ಕ್‌ ಜಾಮ್‌ – ಕಾಲ್‌ಗೆ ಪರದಾಡುತ್ತಿದ್ದಾರೆ ಜನ

    ಹಿಂಡಲಗಾ ಜೈಲಿನ ಜಾಮರ್‌ನಿಂದ ಮೊಬೈಲ್‌ ನೆಟ್‌ವರ್ಕ್‌ ಜಾಮ್‌ – ಕಾಲ್‌ಗೆ ಪರದಾಡುತ್ತಿದ್ದಾರೆ ಜನ

    ಬೆಳಗಾವಿ: 2ಜಿ ಜಾಮರ್‌ ಬದಲಾಯಿಸಿ ಹಿಂಡಲಗಾ ಜೈಲಿನಲ್ಲಿ (Hindalga Jail) 5ಜಿ ಜಾಮರ್‌ (Jammer) ಅಳವಡಿಸಿದ್ದರಿಂದ ಸಮೀಪದ ಗ್ರಾಮಸ್ಥರಿಗೆ ಈಗ ಸಮಸ್ಯೆಯಾಗುತ್ತಿದೆ.

    ಜಾಮರ್ ಅಳವಡಿಕೆಯಿಂದ ಜೈಲು ಪಕ್ಕದ ಹಳ್ಳಿಗಳಾದ ವಿಜಯನಗರ, ಗಣೇಶಪುರ,ಬೆನಕನಹಳ್ಳಿ ಸೇರಿದಂತೆ ಹಿಂಡಲಗಾ ಗ್ರಾಮಕ್ಕೆ ಸಾಕಷ್ಟು ಸಮಸ್ಯೆ ಆಗುತ್ತಿದೆ.‌

    ಸರ್ಕಾರಿ ಕಚೇರಿಗಳಲ್ಲಿ ನೆಟ್‌ವರ್ಕ್‌ ಸಿಗದೇ ಸರ್ವರ್ ಡೌನ್ ಆಗುತ್ತಿದೆ. ಪರೀಕ್ಷಾ ಸಮಯವಾಗಿರುವುದರಿಂದ ವಿದ್ಯಾರ್ಥಿಗಳಿಗೂ ಸಾಕಷ್ಟು ಸಮಸ್ಯೆ ಆಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.‌

    ಜೈಲಿನಲ್ಲಿ ಖೈದಿಗಳ ಮೊಬೈಲ್‌ ಬಳಕೆಗೆ ಬ್ರೇಕ್ ಹಾಕಬೇಕು ಎನ್ನುವ ನಿಟ್ಟಿನಲ್ಲಿ ಜೈಲಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಆದರೆ ಇದರಿಂದ ಖೈದಿಗಳಿಗಿಂತ ಹೊರಗಿರುವ ಜನಸಾಮಾನ್ಯರಿಗೆ ಹೆಚ್ಚು ತೊಂದರೆ ಆಗುತ್ತಿದೆ. ಇದನ್ನೂ ಓದಿ: ಜಮೀನಿಗೆ ಬಂದ ಜೀವಂತ ಮೊಸಳೆ ಸೆರೆ – ಜೆಸ್ಕಾಂ ಕಚೇರಿ ಬಳಿ ತಂದು ರೈತರ ಪ್ರತಿಭಟನೆ

    ಕೇದ್ರ ಸಚಿವ ನಿತಿನ್ ಗಡ್ಕರಿಗೆ ಹಿಂಡಲಗಾ ಜೈಲಿನಲ್ಲಿದ್ದುಕೊಂಡೇ ಖೈದಿಯೋರ್ವ ಜೀವ ಬೆದರಿಕೆ ಹಾಕಿದ್ದ. ಇದನ್ನು ಮನಗಂಡು ಜೈಲಧಿಕಾರಿಗಳು ಜಾಮರ್ ಅಳವಡಿಕೆಗೆ ಕ್ರಮ ಕೈಗೊಂಡಿದ್ದಾರೆ.

    ಅಳವಡಿಕೆಯಾಗಿರುವ ಜಾಮರ್‌ ಫ್ರಿಕ್ವೆನ್ಸಿ ಕಡಿಮೆ ಮಾಡಿ ಎಂದು ಜೈಲಾಧಿಕಾರಿಗಳಿಗೆ ಜನಸಾಮಾನ್ಯರು ಮನವಿ ಮಾಡಿದ್ದಾರೆ.

     

  • ಉಗ್ರ ಅಫ್ಸರ್ ಪಾಷಾ ಮಂಗಳೂರು ಸ್ಫೋಟದ ಮಾಸ್ಟರ್ ಮೈಂಡ್ – ಶಾರೀಕ್‌ಗೆ ಜೈಲಿನಲ್ಲೇ ತರಬೇತಿ

    ಉಗ್ರ ಅಫ್ಸರ್ ಪಾಷಾ ಮಂಗಳೂರು ಸ್ಫೋಟದ ಮಾಸ್ಟರ್ ಮೈಂಡ್ – ಶಾರೀಕ್‌ಗೆ ಜೈಲಿನಲ್ಲೇ ತರಬೇತಿ

    ಮುಂಬೈ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಮಾಸ್ಟರ್ (Mangaluru Bomb Blast Case) ಮೈಂಡ್ ಸದ್ಯ ಬಂಧನದಲ್ಲಿರುವ ಲಷ್ಕರ್ ಎ ತೋಯ್ಬದ ಸದಸ್ಯ ಅಫ್ಸರ್ ಪಾಷಾ ಎಂಬ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ಕುಕ್ಕರ್ ಬಾಂಬ್ ಬ್ಲಾಸ್ಟ್ ಆರೋಪಿ ಶಾರಿಖ್ ಹಾಗೂ ಪಾಷಾನಿಗೆ ಸಂಬಂಧ ಇರುವುದು ತನಿಖೆ ವೇಳೆ ಬಯಲಾಗಿದೆ.

    ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆಳಗಾವಿಯಿಂದ ಬಂದಿದ್ದ ಜೀವ ಬೆದರಿಕೆ ಕರೆ ಪ್ರಕರಣದಲ್ಲಿ ಪಾಷನ್ನು ಜುಲೈ ೧೪ ರಂದು ಮಹಾರಾಷ್ಟ್ರ (Maharashtra) ಪೊಲೀಸರು (Police) ವಶಕ್ಕೆ ಪಡೆದಿದ್ದರು. ಈ ತನಿಖೆ ವೇಳೆ ಪಾಷಾ ಈ ಶಾಕಿಂಗ್ ಸಂಗತಿಯನ್ನು ಬಾಯ್ಬಿಟ್ಟಿದ್ದಾನೆ. ಅಲ್ಲದೇ ಶಾರಿಖ್‌ಗೆ ಪಾಷ ಕರ್ನಾಟಕದ ಜೈಲೊಂದರಲ್ಲೇ ಸ್ಪೋಟದ ತರಬೇತಿ ನೀಡಿದ್ದಾನೆ. ಅಲ್ಲದೇ ಮುಸ್ಲಿಂ ಮೂಲಭೂತ ವಿಚಾರಗಳನ್ನು ಬೋಧನೆ ಮಾಡಿದ್ದಾನೆ ಎಂಬ ವಿಚಾರವನ್ನು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟ ಕೇಸ್ – ಕದ್ರಿ ದೇವಸ್ಥಾನದ ಚಪ್ಪಲಿ ಸ್ಟ್ಯಾಂಡ್ ಶಾರೀಕ್ ಟಾರ್ಗೆಟ್!

    ಸಹ ಕೈದಿಗಳ ಮೇಲೆ ಇಸ್ಲಾಂ ಮೂಲಭೂತ ವಿಚಾರಗಳನ್ನು ಹೇರುವುದು ಹಾಗೂ ಭಯೋತ್ಪಾದಕ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಹಂಚಿ ವಿದ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ. ಆರಂಭದಲ್ಲಿ ಈತನ ಕೈವಾಡ ಇರುವುದರ ಬಗ್ಗೆ ನಿರ್ಲಕ್ಷ್ಯ ಮಾಡಲಾಗಿತ್ತು. ಆದರೆ ತನಿಖೆಯಿಂದ ಸ್ಪಷ್ಟ ವಿಚಾರಗಳು ಬಯಲಿಗೆ ಬಂದಂತಾಗಿದೆ.

    ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ಹಿಂದೆ ಪಾಷಾ ಬ್ಯಾಂಕ್ ಖಾತೆಗೆ ೫ ಲಕ್ಷ ರೂ. ವರ್ಗಾವಣೆ ಮಾಡಿತ್ತು. ಜೈಲಿನಲ್ಲಿ ಈತನ ಕೈಗೆ ಸ್ಮಾರ್ಟ್ ಫೋನ್ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಪಾಷಾ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಸಮಗ್ರ ವರದಿಯನ್ನು ಸಿದ್ಧಪಡಿಸಿದ್ದಾರೆ.

    ಯಾರು ಈ ಅಫ್ಸರ್ ಪಾಷಾ?
    ಈತ ಕುಖ್ಯಾತ ಉಗ್ರಗಾಮಿ ಸಂಘಟನೆ ಲಷ್ಕರ್ ಎ ತೊಯ್ಯಾದ ಸದಸ್ಯನಾಗಿದ್ದು, ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿ (Hindalga Jail) ಬಂಧಿಯಾಗಿದ್ದ. ಹಲವು ವರ್ಷಗಳ ಹಿಂದೆಯೇ ಬಾಂಗ್ಲಾ ದೇಶದಲ್ಲಿ ಬಾಂಬ್ ತಯಾರಿಕೆ ಕುರಿತು ತರಬೇತಿ ಪಡೆದಿದ್ದಾನೆ. ೨೦೦೫ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ಐಐಎಸ್ಸಿ ಮೇಲೆ ನಡೆದ ದಾಳಿ ಪ್ರಕರಣದಲ್ಲೂ ಈತ ಭಾಗಿಯಾಗಿದ್ದ. ಬೆಂಗಳೂರಿನ ಮತ್ತೊಂದು ಸ್ಫೋಟವೊಂದರಲ್ಲೂ ಈತನ ಕೈವಾಡವಿದೆ ಎಂದು ಮಹಾರಾಷ್ಟ್ರದ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ೨೦೧೨ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಉಗ್ರ ಸಂಘಟನೆಗೆ ಯುವಕರ ನೇಮಕಾತಿ ಪ್ರಕರಣದಲ್ಲಿ ಈತ ಅಪರಾಧಿಯಾಗಿದ್ದಾನೆ.

    ಕಳೆದ ನವೆಂಬರ್‌ನಲ್ಲಿ ಆರೋಪಿ ಶಾರಿಕ್ ಕೊಂಡೊಯ್ಯುತ್ತಿದ್ದ ಕುಕ್ಕರ್ ಬಾಂಬ್ ಆಟೋದಲ್ಲಿ ಸ್ಫೋಟಗೊಂಡಿತ್ತು. ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ತನಿಖೆ ವೇಳೆ ಬಾಂಬ್‌ನ್ನು ಕದ್ರಿಯ ದೇವಸ್ಥಾನದಲ್ಲಿ ಇರಿಸಲು ತೀರ್ಮಾನಿಸಲಾಗಿತ್ತು ಎಂಬ ವಿಚಾರ ತಿಳಿದು ಬಂದಿತ್ತು. ಸದ್ಯ ಆರೋಪಿ ಎನ್‌ಐಎ ವಶದಲ್ಲಿದ್ದಾನೆ. ಇದನ್ನೂ ಓದಿ: ಉಡುಪಿ ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್‌, ಬೆದರಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]