Tag: Hindalga

  • ಗಡ್ಕರಿಗೆ ಕೊಲೆ ಬೆದರಿಕೆ ಕೇಸ್- ಎನ್‌ಐಎಯಿಂದ ಎಫ್‌ಐಆರ್ ದಾಖಲು

    ಗಡ್ಕರಿಗೆ ಕೊಲೆ ಬೆದರಿಕೆ ಕೇಸ್- ಎನ್‌ಐಎಯಿಂದ ಎಫ್‌ಐಆರ್ ದಾಖಲು

    ಬೆಳಗಾವಿ: ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಕೊಲೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ (NIA) ಅಧಿಕಾರಿಗಳು ಆರೋಪಿ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ.

    ಜಯೇಶ್ ಪೂಜಾರಿ ಎಂಬ ಆರೋಪಿ ಕೊಲೆ ಪ್ರಕರಣವೊಂದರಲ್ಲಿ ಬೆಳಗಾವಿಯ (Belagavi) ಹಿಂಡಲಗಾ (Hindalga) ಜೈಲು ಸೇರಿದ್ದ. ಈತ ಮಾ.21ರಂದು ಮಹಾರಾಷ್ಟ್ರದ (Maharashtra) ನಾಗ್ಪುರದಲ್ಲಿರುವ ಸಚಿವರ ಕಚೇರಿಗೆ ಕರೆ ಮಾಡಿ ನಿತಿನ್ ಗಡ್ಕರಿಯವರಿಗೆ ಜೀವ ಬೆದರಿಕೆ ಒಡ್ಡಿದ್ದಾನೆ. ಅಲ್ಲದೇ ಈ ಹಿಂದೆ ಜ.14ರಂದು ಸಚಿವರ ಕಚೇರಿಗೆ ಕರೆ ಮಾಡಿ ಜೀವ ಬೆದರಿಕೆ ಒಡ್ಡುವುದರ ಜೊತೆಗೆ 10 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದಾಗ ಬೆಳಗಾವಿ ಜೈಲಿನ ಮಾಹಿತಿ ಬಹಿರಂಗ ಆಗಿತ್ತು. ಇದನ್ನೂ ಓದಿ: ತಿಹಾರ್ ಜೈಲಿನ ಶೌಚಾಲಯದಲ್ಲಿ ಕುಸಿದು ಬಿದ್ದ ಸತ್ಯೇಂದ್ರ ಜೈನ್ – 3 ದಿನದ ಬಳಿಕ ಮತ್ತೆ ಆಸ್ಪತ್ರೆ ದಾಖಲು

    ಆರೋಪಿ ತಾನು ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಸದಸ್ಯ ಎಂದು ನಿತಿನ್ ಗಡ್ಕರಿಯವರಿಗೆ ಕೊಲೆ ಬೆದರಿಕೆ ಹಾಕಿದ್ದ. ಈ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ಈತನ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆ. ಅಲ್ಲದೇ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಎಫ್‌ಐಆರ್ ಮಾಹಿತಿ ರವಾನಿಸಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ ಟೇಕಾಫ್‍ಗೆ ಸಿದ್ಧವಾಗಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ – ಸಮಯಪ್ರಜ್ಞೆ ಮೆರೆದ ಪೈಲೆಟ್

  • ಕಾಂಗ್ರೆಸ್ ಪದೇ ಪದೇ ಸಾವರ್ಕರ್‌ಗೆ ಅಪಮಾನಿಸುತ್ತಿದೆ – ಅಮಿತ್ ಶಾ ಕಿಡಿ

    ಕಾಂಗ್ರೆಸ್ ಪದೇ ಪದೇ ಸಾವರ್ಕರ್‌ಗೆ ಅಪಮಾನಿಸುತ್ತಿದೆ – ಅಮಿತ್ ಶಾ ಕಿಡಿ

    ಬೆಳಗಾವಿ: ಸ್ವಾತಂತ್ರ್ಯ ಸೇನಾನಿ ವೀರ್ ಸಾವರ್ಕರ್ ಅವರನ್ನು ಕಾಂಗ್ರೆಸ್ (Congress) ಪದೇಪದೇ ಅಪಮಾನ ಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕಿಡಿಕಾರಿದ್ದಾರೆ.

    ಸವದತ್ತಿಯಲ್ಲಿ (Savadatti) ಚುನಾವಣಾ (Election) ಪ್ರಚಾರದ ವೇಳೆ ಮಾತನಾಡಿದ ಅವರು, ಎರಡು ಬಾರಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಏಕೈಕ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಆಗಿದ್ದರು. ಅಲ್ಲದೆ ಕಾಂಗ್ರೆಸ್ ಸಾವರ್ಕರ್ ಅವರನ್ನು ಹಿಂಡಲಗ (Hindalga) ಜೈಲಿಗೆ ಹಾಕಿಸಿತ್ತು. ಈಗಲೂ ಕಾಂಗ್ರೆಸ್ ಅವರನ್ನು ಅಪಮಾನಿಸುವುದನ್ನು ನಿಲ್ಲಿಸಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಖರ್ಗೆ ಹತ್ಯೆಗೆ ಸಂಚು ಆಡಿಯೋ ಬಾಂಬ್‌ – ಸಿಎಂ ಬೊಮ್ಮಾಯಿ ಹೇಳಿದ್ದೇನು?

    ರಾಹುಲ್ ಗಾಂಧಿಯವರು (Rahul Gandhi) ಸಾವರ್ಕರ್ ಅವರಿಗೆ ಅಪಮಾನ ಮಾಡುತ್ತಾರೆ. ಅವರು 10 ಜನ್ಮ ಹುಟ್ಟಿದರೂ ಸಾವರ್ಕರ್‍ರಂತಹ ಬಲಿದಾನ ನೋಡಲು ಸಾಧ್ಯವಿಲ್ಲ. ಅವರ ತ್ಯಾಗದ ಪ್ರತೀಕವಾಗಿ ಸುವರ್ಣ ಸೌಧದಲ್ಲಿ ವೀರ್ ಸಾವರ್ಕರ್ ಭಾವಚಿತ್ರ ಹಾಕಲಾಗಿದೆ ಎಂದಿದ್ದಾರೆ.

    ಕಾಂಗ್ರೆಸ್ ಪಕ್ಷ ನಿರಂತರವಾಗಿ ರೈತರಿಗೆ ಅನ್ಯಾಯ ಮಾಡಿದೆ. ವಿಶೇಷವಾಗಿ ಉತ್ತರ ಕರ್ನಾಟಕ ರೈತರಿಗೆ ಅನ್ಯಾಯ ಮಾಡಿದೆ. ಹಿಂದೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಆಗ ಕಾಂಗ್ರೆಸ್ ಸರ್ಕಾರ ಮಹದಾಯಿ (Mahadayi) ವಿವಾದ ಬಗೆಹರಿಸಲಿಲ್ಲ. 2007ರಲ್ಲಿ ಸೋನಿಯಾ ಗಾಂಧಿ ಮಹದಾಯಿ ನದಿ ನೀರು ಕರ್ನಾಟಕಕ್ಕೆ ಕೊಡುವುದಿಲ್ಲ ಎಂದಿದ್ದರು. ಈಗ ಅವರ ಸರ್ಕಾರ ಹೋಗಿದೆ. ಪ್ರಧಾನಿ ಮೋದಿ ಆಗಮಿಸಿ ಕರ್ನಾಟಕಕ್ಕೆ ಮಹದಾಯಿ ನೀರು ಹರಿಸುವ ನಿರ್ಧಾರ ಮಾಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಬೆಳಗಾವಿಯ ಈ ನೆಲ ಬಸವಣ್ಣರವರ ಕ್ಷೇತ್ರ, ಜಗತ್ತಿಗೆ ಪ್ರಜಾಪ್ರಭುತ್ವ ಪಾಠ ಮಾಡಿದ ಬಸವಣ್ಣರಿಗೆ ನಮಿಸುತ್ತೇನೆ. ಅಲ್ಲದೆ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರನ್ನು ಸ್ಮರಿಸುತ್ತೇನೆ. ಬೆಂಗಳೂರಿನಿಂದ ತಡವಾಗಿ ಹೊರಟೆ ಹೀಗಾಗಿ ಸವದತ್ತಿಗೆ ಆಗಮಿಸಲು ವಿಳಂಬವಾಗಿದೆ. ಕ್ಷಮೆ ಇರಲಿ ಎಂದು ಜನರಲ್ಲಿ ಕೇಳಿಕೊಂಡರು. ಈ ಬಾರಿ ಜಿಲ್ಲೆಯ 18 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕ್ರಿಕೆಟಿಗ ನಿತೀಶ್ ರಾಣಾ ಪತ್ನಿಗೆ ಕಿರುಕುಳ – ಓರ್ವ ಅರೆಸ್ಟ್

  • ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಪ್ರಕರಣ- ಬೆಳಗಾವಿ ಹಿಂಡಲಗಾ ಜೈಲಿನ ಕೈದಿ ವಶಕ್ಕೆ

    ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಪ್ರಕರಣ- ಬೆಳಗಾವಿ ಹಿಂಡಲಗಾ ಜೈಲಿನ ಕೈದಿ ವಶಕ್ಕೆ

    ಬೆಳಗಾವಿ: ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ (Nitin Gadkari) ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ (Belagavi) ಹಿಂಡಲಗಾ (Hindalga) ಜೈಲಿನ ಕೈದಿಯನ್ನು ಮಹಾರಾಷ್ಟ್ರ (Maharashtra) ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.

    ಜಯೇಶ್ ಕಾಂತಾ ಅಲಿಯಾಸ್ ಜಯೇಶ್ ಪೂಜಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾ.21ರಂದು ಮಹಾರಾಷ್ಟ್ರದ ನಾಗ್ಪುರದ (Nagpura) ಸಚಿವರ ಕಚೇರಿಗೆ ಕರೆ ಮಾಡಿ ಕೈದಿಯ ಹೆಸರಿನಲ್ಲಿ ಜೀವ ಬೆದರಿಕೆ ಒಡ್ಡಲಾಗಿತ್ತು. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಪತಿಯನ್ನೆ ಮುಗಿಸಿದ ಪತ್ನಿ- ತನಿಖೆಯಲ್ಲಿ ಸತ್ಯ ಬಯಲು

    ಈ ಹಿಂದೆ ಸಹ ಜ.14ರಂದು ಸಚಿವರ ಕಚೇರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿ 10 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಹಿಂಡಲಗಾ ಜೈಲಿಗೆ ಭೇಟಿ ನೀಡಿ ಹಲವು ಬಾರಿ ತನಿಖೆ ನಡೆಸಿದ್ದರು. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ 4.3 ತೀವ್ರತೆಯ ಭೂಕಂಪನ