Tag: hindalaga jail

  • ರೇಣುಕಾಸ್ವಾಮಿ ಕೊಲೆ ಪ್ರಕರಣ – A14 ಆರೋಪಿ ಪ್ರದೋಶ್ ಬೆಳಗಾವಿಯಿಂದ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

    ರೇಣುಕಾಸ್ವಾಮಿ ಕೊಲೆ ಪ್ರಕರಣ – A14 ಆರೋಪಿ ಪ್ರದೋಶ್ ಬೆಳಗಾವಿಯಿಂದ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

    ಬೆಳಗಾವಿ: ಚಿತ್ರದುರ್ಗದ (Chitradurga) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) 14ನೇ ಆರೋಪಿ ಪ್ರದೋಶ್‌ನನ್ನು ಪೊಲೀಸರು ಬೆಳಗಾವಿ ಹಿಂಡಲಗಾ ಜೈಲಿನಿಂದ (Hindalaga Jail) ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿದ್ದಾರೆ.

    ಹೈಕೋರ್ಟ್ ಆದೇಶ ಹಿನ್ನೆಲೆ ಗುರುವಾರ ಬಿಗಿ ಭದ್ರತೆಯಲ್ಲಿ ಪ್ರದೋಶ್‌ನನ್ನು ಪೊಲೀಸರು ಬೆಂಗಳೂರು ಜೈಲಿಗೆ ಶಿಫ್ಟ್ ಮಾಡಿದ್ದಾರೆ. ಆಗಸ್ಟ್ 28ರಂದು ಬೆಳಗಾವಿ ಹಿಂಡಲಗಾ ಜೈಲಿಗೆ ಪೊಲೀಸರು ಆರೋಪಿಯನ್ನು ಕರೆತಂದಿದ್ದರು. 44 ದಿನಗಳ ಬಳಿಕ ಮತ್ತೆ ಪರಪ್ಪನ ಅಗ್ರಹಾರಕ್ಕೆ (Parappana Agrahara) ಪ್ರದೋಶ್‌ನನ್ನು ರವಾನಿಸಲಾಗಿದೆ. ಇದನ್ನೂ ಓದಿ: ಮಾನಸಿಕ ಅಸ್ವಸ್ಥೆಯ ಹತ್ಯೆಗೈದು ಅತ್ಯಾಚಾರ – ಸೈಕೋ ಕಿಲ್ಲರ್ ಅರೆಸ್ಟ್

    ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ರಾಜ್ಯಾತಿಥ್ಯ ವಿಚಾರವಾಗಿ ದರ್ಶನ್ ಸೇರಿ ಹಲವರನ್ನು ರಾಜ್ಯದ ವಿವಿಧ ಜೈಲಿಗೆ ಪೊಲೀಸರು ಶಿಫ್ಟ್ ಮಾಡಿದ್ದರು. ಬೆಳಗಾವಿಯಿಂದ ಪರಪ್ಪನ ಅಗ್ರಹಾರ ಜೈಲಿಗೆ ಕರೆದುಕೊಂಡು ಹೋಗುವ ವೇಳೆ ಪ್ರದೋಶ್ ಪೊಲೀಸ್ ವಾಹನದಲ್ಲಿ ಕುಳಿತು ನಗೆ ಬೀರಿದ್ದಾನೆ. ಇದನ್ನೂ ಓದಿ: ರತನ್‌ ಟಾಟಾ ಅಂತಿಮ ದರ್ಶನ ಪಡೆದ ಕ್ರಿಕೆಟ್‌ ದೇವರು

  • ಹಿಂಡಲಗಾ ಜೈಲಿನ ಅತಿ ಭದ್ರತಾ ವಿಭಾಗಕ್ಕೆ ಪ್ರದೂಷ್ ಶಿಫ್ಟ್: ವಿ.ಕೃಷ್ಣಮೂರ್ತಿ

    ಹಿಂಡಲಗಾ ಜೈಲಿನ ಅತಿ ಭದ್ರತಾ ವಿಭಾಗಕ್ಕೆ ಪ್ರದೂಷ್ ಶಿಫ್ಟ್: ವಿ.ಕೃಷ್ಣಮೂರ್ತಿ

    ಬೆಳಗಾವಿ: ಜೈಲಿನ ಎಲ್ಲಾ ಪ್ರಕಿಯೆ ಮುಗಿಯುತ್ತಿದ್ದಂತೆ ರೇಣುಕಾಸ್ವಾಮಿ ಕೊಲೆ (Renukaswamy Murder Case) ಆರೋಪಿ ಪ್ರದೂಷ್‌ನನ್ನು ಹಿಂಡಲಗಾ ಜೈಲಿನ (Hindalaga Jail) ಅತಿ ಭದ್ರತಾ ವಿಭಾಗದಲ್ಲಿ (High Security Department) (ಅಂಧೇರಿ ಸೆಲ್) ಇಡಲಾಗುವುದು ಮತ್ತು ಏಳು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುವುದು ಎಂದು ಹಿಂಡಲಗಾ ಜೈಲಿನ ಸಹಾಯಕ ಅಧೀಕ್ಷಕ ವಿ.ಕೃಷ್ಣಮೂರ್ತಿ (V. Krishnamurthy) ತಿಳಿಸಿದ್ದಾರೆ.

    ಪರಪ್ಪನ ಅಗ್ರಹಾರದಲ್ಲಿ (Parappana Agrahara) ರಾಜಾತಿಥ್ಯದ ಫೋಟೋ ವೈರಲ್ ಆದ ಬಳಿಕ ನಟ ದರ್ಶನ್ ಗ್ಯಾಂಗ್‌ನ (Actor Darshan Gang) 12 ಆರೋಪಿಗಳನ್ನು ದಿಕ್ಕಾಪಾಲು ಮಾಡಿದ್ದಾರೆ. ಆರೋಪಿಗಳ ಪೈಕಿ ಪ್ರದೂಷ್‌ನನ್ನು ಬೆಳಗಾವಿಯ (Belagavi) ಹಿಂಡಲಗಾ ಜೈಲಿಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡಿದ ನಂತರ ಜೈಲಿನ ಭದ್ರತೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಅವ್ನೇನ್ ದೊಡ್ಡ ರೋಲ್ ಮಾಡೆಲ್ಲಾ? – ದರ್ಶನ್ ಬಗ್ಗೆ ಕೇಳಿದ್ದಕ್ಕೆ ಕೆ.ಎನ್ ರಾಜಣ್ಣ ಗರಂ

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೈಲಿನಲ್ಲಿ ಸಿಸಿಟಿವಿ ಅಳವಡಿಸುವ ಕಾರ್ಯ ನಡೆಯುತ್ತಿದೆ. ಮಳೆಯಿಂದಾಗಿ ಕೆಲಸದಲ್ಲಿ ವ್ಯತ್ಯಯ ಉಂಟಾಗಿದೆ. ಹೆಚಿನ ಭದ್ರತೆಗಾಗಿ ಕ್ರಮ ವಹಿಸುತ್ತೇವೆ ಎಂದರು.

    ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಭದ್ರತಾ ಕಾರ್ಯ ನಡೆಯುತ್ತಿದೆ. ಪ್ರದೂಷ್ ಭದ್ರತೆಗೆ ಸಹಾಯಕ ಜೈಲರ್ ಹಾಗೂ ಏಳು ಜನ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಜೈಲಿನಲ್ಲಿ 2G ಜಾಮರ್ ಇದ್ದು, 5U ಜಾಮರ್ ಅಳಡಿಸಲು ಸಿದ್ಧತೆ ನಡೆಸಲಾಗಿದೆ. ಟೆಂಡರ್ ಪಡೆದವರಿಗೆ ಬೇಗ ಮುಗಿಸಿಕೊಡುವಂತೆ ಆಗ್ರಹಿಸಿದ್ದೇವೆ ಎಂದು ತಿಳಿಸಿದರು.ಇದನ್ನೂ ಓದಿ: ರಾಜ ಎಲ್ಲಿದ್ದರೂ ರಾಜನೇ ಅಂತ ಘೋಷಣೆ- ದರ್ಶನ್‌ ನೋಡಲು ಮುಗಿಬಿದ್ದ ಫ್ಯಾನ್ಸ್‌

    ಜೈಲಿನಲ್ಲಿ ಊಟ, ಬಿಡಿ, ಸಿಗರೆಟ್ ಎಲ್ಲಾ ವಸ್ತುಗಳಿಗೆ ನಿಷೇಧ ಹೇರಲಾಗಿದೆ. ನಮ್ಮ ಸಿಬ್ಬಂದಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಯಾರೇ ಬಂದರೂ ಭದ್ರತಾ ದೃಷ್ಟಿಯಿಂದ ಅಂಧೇರಿ ಸೆಲ್‌ನಲ್ಲಿ ಇಡುತ್ತೇವೆ. ನಿಯಮಗಳ ಪ್ರಕಾರ ಸಂಬAಧಿಗಳು ಬಂದರೆ ಮಾತ್ರ ಅವಕಾಶ ಕೊಡಲಾಗುವುದು ಎಂದು ತಿಳಿಸಿದ್ದಾರೆ.

  • ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಅಫ್ಸರ್ ಪಾಷಾ ಹಿಂಡಲಗಾ ಜೈಲಿಗೆ ಶಿಫ್ಟ್

    ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಅಫ್ಸರ್ ಪಾಷಾ ಹಿಂಡಲಗಾ ಜೈಲಿಗೆ ಶಿಫ್ಟ್

    – ಗಡ್ಕರಿಗೆ ಜೀವ ಬೆದರಿಕೆ ಕರೆ ಮಾಡಿ 100 ಕೋಟಿ ರೂ. ಬೇಡಿಕೆ ಇಟ್ಟಿದ್ದ ಆಸಾಮಿ

    ಬೆಳಗಾವಿ: ಉಗ್ರ ಸಂಘಟನೆ (Terrorist Organization) ಜೊತೆಗೆ ನಂಟು ಹೊಂದಿದ್ದ ಮೋಸ್ಟ್ ವಾಂಟೆಡ್ ಉಗ್ರ ಅಫ್ಸರ್ ಪಾಷಾನನ್ನು ಮಹಾರಾಷ್ಟ್ರದ (Maharashtra) ನಾಗ್ಪುರ ಜೈಲಿನಿಂದ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ (Hindalaga Jail) ಸೋಮವಾರ ರಾತ್ರಿ ಶಿಫ್ಟ್ ಮಾಡಲಾಗಿದೆ.

    ಕೇಂದ್ರ ಸಚಿವ ನಿತೀನ್ ಗಡ್ಕರಿಗೆ (Nitin Gadkari) ಜೀವ ಬೆದರಿಕೆ ಕರೆ ಮಾಡಿ 100 ಕೋಟಿ ರೂ. ಬೇಡಿಕೆಯಿಟ್ಟಿದ್ದ ಆಸಾಮಿ ಈತ. ಬೆಳಗಾವಿಯ ಹಿಂಡಲಗಾ ಜೈಲಿನಿಂದ ಜ.14 2023ರಂದು ನಾಗ್ಪುರದಲ್ಲಿರುವ ಸಚಿವ ಗಡ್ಕರಿ ಕಚೇರಿಗೆ ಫೋನ್ ಮಾಡಿ ಇಬ್ಬರು ಕೈದಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇಬ್ಬರನ್ನೂ ವಶಕ್ಕೆ ಪಡೆದುಕೊಂಡು ಮಹಾರಾಷ್ಟ್ರದ ನಾಗ್ಪುರ ಠಾಣೆ ಪೊಲೀಸರು ಕರೆದೊಯ್ದಿದ್ದರು. ಇಷ್ಟು ದಿನ ನಾಗ್ಪುರ ಕೇಂದ್ರ ಕಾರಾಗೃಹದಲ್ಲಿದ್ದ ಅಫ್ಸರ್ ಪಾಷಾನನ್ನು ಮತ್ತೆ ಈಗ ಬೆಳಗಾವಿಗೆ ಶಿಫ್ಟ್ ಮಾಡಲಾಗಿದೆ. ಇದನ್ನೂ ಓದಿ: ಆ.30 ರಂದು ಬಿಜೆಪಿ ಸೇರಲಿದ್ದಾರೆ ಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೆನ್‌

    ಸೋಮವಾರ ರಾತ್ರಿ ನಾಗ್ಪುರದಿಂದ ಅಫ್ಸರ್ ಪಾಷಾನನ್ನು ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಕರೆ ತಂದ ಪೊಲೀಸರು, ಬಿಗಿ ಪೊಲೀಸ್ ಭದ್ರತೆಯಲ್ಲಿ ರಸ್ತೆ ಮಾರ್ಗವಾಗಿ ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ. ಡಿ.15 2005ರಂದು ಬೆಂಗಳೂರಿನ ಇಂಡಿಯನ್ ಇನ್ಸಿ÷್ಟಟ್ಯೂಟ್ ಆಫ್ ಸೈನ್ಸ್ ಸ್ಫೋಟ ಪ್ರಕರಣದಲ್ಲಿ ಅಫ್ಸರ್ ಪಾಷಾ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾನೆ. ಅಲ್ಲದೇ ಪಿಎಫ್‌ಐ ಸಂಘಟನೆ ಜೊತೆಗೆ ನಂಟಿರುವ ಜಯೇಶ ಪೂಜಾರಿ ಜೊತೆಗೆ ಸೇರಿಕೊಂಡು ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಕರೆ ಮಾಡಿದ್ದ. ಅಫ್ಸರ್ ಪಾಷಾ ಮತ್ತು ಜಯೇಶ್ ಪೂಜಾರಿ ಇಬ್ಬರೂ ಹಿಂಡಲಗಾ ಜೈಲಿನಲ್ಲಿದ್ದುಕೊಂಡೇ ಈ ಖತರ್ನಾಕ್ ಪ್ಲಾನ್ ಮಾಡಿದ್ದರು. ಇದನ್ನೂ ಓದಿ: ಅತ್ತ ದರ್ಶನ್‌ಗೆ ರಾಜಾತಿಥ್ಯ – ಇತ್ತ ಎ5 ಆರೋಪಿ ನಂದೀಶ್ ಕುಟುಂಬ ಜೀವನ ಸಾಗಿಸಲು ಪರದಾಟ

  • ಪರಪ್ಪನ ಜೈಲಿಂದ ಹಿಂಡಲಗಾ ಜೈಲಿಗೆ ‘ಜಗ್ಗುದಾದ’ ಶಿಫ್ಟ್ ಸಾಧ್ಯತೆ – ಬೆಳಗಾವಿ ಜೈಲಿನ ವಿಶೇಷತೆ ಏನು?

    ಪರಪ್ಪನ ಜೈಲಿಂದ ಹಿಂಡಲಗಾ ಜೈಲಿಗೆ ‘ಜಗ್ಗುದಾದ’ ಶಿಫ್ಟ್ ಸಾಧ್ಯತೆ – ಬೆಳಗಾವಿ ಜೈಲಿನ ವಿಶೇಷತೆ ಏನು?

    – ನಟೋರಿಯಸ್ ಕೈದಿಗಳನ್ನಿರಿಸಲು 36 ಕತ್ತಲೆ ಕೋಣೆ

    ಬೆಳಗಾವಿ: ಕೊಲೆ ಆರೋಪಿ ದರ್ಶನ್‌ಗೆ (Darshan) ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಸದ್ಯ ದರ್ಶನ್&ಗ್ಯಾಂಗ್‌ಗೆ ಬೇರೆ ಜೈಲಿಗೆ ಶಿಫ್ಟ್ ಮಾಡಲು ಸಿಎಂ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ದರ್ಶನ್ ಮತ್ತು ಗ್ಯಾಂಗ್ ಅನ್ನು ನಟೋರಿಯಸ್ ಕೈದಿಗಳು ಇರುವ ಬೆಳಗಾವಿಯ (Belagavi) ಹಿಂಡಲಗಾ ಜೈಲಿಗೆ (Hindalaga Jail)  ಶಿಫ್ಟ್ ಮಾಡುವ ಸಾಧ್ಯತೆಯಿದೆ.

    ರೇಣುಕಾಸ್ವಾಮಿ ಕೊಲೆ ಆರೋಪಿ, ಕಿಲ್ಲಿಂಗ್ ಸ್ಟಾರ್ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಜಾಲಿ ಲೈಫ್ ನಡೆಸುತ್ತಿದ್ದಾರೆ. ಜೈಲಿನಲ್ಲಿ ರಾಜಾತಿಥ್ಯ ಕೊಡುತ್ತಿರುವ ಫೋಟೋ ಮತ್ತು ವೀಡಿಯೋ ವೈರಲ್ ಆದ ಬೆನ್ನಲ್ಲೇ ರಾಜ್ಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಪರಪ್ಪನ ಅಗ್ರಹಾರದ ಕರಾಳ ಮುಖ ಮತ್ತೊಮ್ಮೆ ಬಯಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿಯಾಗಿ ಬದುಕುತ್ತಿದ್ದ ದರ್ಶನ್ ಹಾಗೂ ಗ್ಯಾಂಗ್‌ಗೆ ಸಂಕಷ್ಟ ಫಿಕ್ಸ್ ಆಗಿದೆ. ಹಿಂಡಲಗಾ ಜೈಲಿನ `ಅಂಧೇರಿ’ ಸೆಲ್‌ಗಳಿಗೆ ಈ ಗ್ಯಾಂಗ್ ಶಿಫ್ಟ್ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ – ಇಂದು ನಗರದಲ್ಲಿ ಟ್ರಾಫಿಕ್‌ ಸಮಸ್ಯೆಯಾಗುವ ಸಾಧ್ಯತೆ

    ಕರ್ನಾಟಕದ ಜೈಲುಗಳು ಅಂದರೆ ನೆನಪಾಗೋದೇ ಬೆಂಗಳೂರಿನ ಬಳಿ ಇರುವ ಪರಪ್ಪನ ಅಗ್ರಹಾರ ಮತ್ತು ಬೆಳಗಾವಿಯ ಹಿಂಡಲಗಾ ಜೈಲು ಅಥವಾ ಹಿಂಡಲಗಾ ಕೇಂದ್ರ ಕಾರಾಗೃಹ. ಸ್ಟಾರ್ ಎನಿಸಿಕೊಂಡವರು, ಪ್ರಭಾವಿಗಳು ಈ ಜೈಲುಗಳ ಊಟ ಉಂಡ ಎಷ್ಟೋ ಉದಾಹರಣೆಗಳಿವೆ. ಇದೀಗ ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರದಿಂದ ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ. ಫೋಟೋ ಹಾಗೂ ವೀಡಿಯೋ ವೈರಲ್ ಬೆನ್ನಲ್ಲೇ ದರ್ಶನ್ ಮತ್ತು ಗ್ಯಾಂಗ್ ಅನ್ನು ಅನ್ಯ ಜಿಲ್ಲೆಯ ಜೈಲಿಗೆ ಶಿಫ್ಟ್ ಮಾಡಲು ಸಿಎಂ ಸೂಚನೆ ನೀಡಿದ್ದಾರೆ. ಒಂದು ವೇಳೆ ಕೊಲೆ ಆರೋಪಿ ದರ್ಶನ್ ಬೆಳಗಾವಿ ಜೈಲಿಗೆ ದಾಖಲಾದರೆ ಹಿಂಡಲಗಾ ಜೈಲು ಸೇರಿದ ಮೊದಲ ನಟ ಎಂಬ ಕುಖ್ಯಾತಿಗಳಿಸಲಿದ್ದಾರೆ. ಸ್ವಾತಂತ್ರ‍್ಯ ಹೋರಾಟಗಾರರು, ರಾಜಕೀಯ ಕೈದಿಗಳು ಇತರೆ ಕೈದಿಗಳು ಈ ಜೈಲಿನಲ್ಲಿದ್ದರು. ಇದನ್ನೂ ಓದಿ: Bengaluru | ನಟ ದರ್ಶನ್‌ಗೆ ಜೈಲಲ್ಲಿ ರೌಡಿಗಳ ನಂಟು – ದರ್ಶನ್‌ ಮೇಲೆ‌ ಮತ್ತೆರಡು ಎಫ್‌ಐಆರ್‌!

    ರಾಜ್ಯದಲ್ಲಿ ಗಲ್ಲಿಗೇರಿಸುವ ಏಕೈಕ ಜೈಲು ಎಂದರೆ ಬೆಳಗಾವಿ ಹಿಂಡಲಗಾ ಜೈಲು. ನಟೋರಿಯಸ್ ಕೈದಿಗಳನ್ನು ಇಡಲು 36 ಕತ್ತಲು ಕೋಣೆಯ ವ್ಯವಸ್ಥೆ ಬೆಳಗಾವಿ ಜೈಲಿನಲ್ಲಿದೆ. ಅದರಲ್ಲಿ 15 ಕೋಣೆಗಳು ಖಾಲಿ ಇದೆ. ಹೀಗಾಗಿ ಬೆಳಗಾವಿ ಹಿಂಡಲಗಾ ಜೈಲಿನ ಬಂದೋಬಸ್ತ್ ವ್ಯವಸ್ಥೆ ಕುರಿತು ಹಿರಿಯ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ಈಗಾಗಲೇ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಭೂಗತ ಪಾತಕಿ ಬನ್ನಂಜೆ ರಾಜಾ, ದಂಡುಪಾಳ್ಯ ಗ್ಯಾಂಗ್, ವೀರಪ್ಪನ್ ಸಹಚರರು, ಸೈನೈಡ್ ಮಲ್ಲಿಕಾ, ಬಳ್ಳಾರಿ ನಾಗ, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿ ಹಲವರು ಸೆರೆವಾಸ ಅನುಭವಿಸಿದ್ದಾರೆ. ಇದನ್ನೂ ಓದಿ: ಮೋದಿ ಉದ್ಘಾಟಿಸಿದ್ದ ಶಿವಾಜಿ ಮಹರಾಜ್‌ ಪ್ರತಿಮೆ 1 ವರ್ಷ ಪೂರ್ಣಗೊಳ್ಳುವ ಮುನ್ನವೇ ಕುಸಿತ!

    ಮರಣದಂಡನೆ ಶಿಕ್ಷೆಗೆ ಗುರಿಯಾದ ಕೈದಿಗಳು ಹಿಂಡಲಗಾ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ಹಿಂಡಲಗಾ ಜೈಲಿಗೆ ದರ್ಶನ್ ಅಥವಾ ಗ್ಯಾಂಗ್ ಶಿಫ್ಟ್ ಮಾಡಿದರೆ ಆಗುವ ಸಾಧಕಬಾಧಕ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಈ ಮಧ್ಯೆ ಜೈಲಿನಲ್ಲಿನ ಸೆಕ್ಯುರಿಟಿ ಕುರಿತು ಕೂಡ ಮಾಹಿತಿ ಪಡೆದುಕೊಳ್ಳಲಾಗಿದೆ. ಇದನ್ನೂ ಓದಿ: ಗುಡ್ & ಬ್ಯಾಡ್ ಟಚ್ ಸೆಷನ್‌ನಲ್ಲಿ ಕರಾಳ ಅನುಭವ ಬಿಚ್ಚಿಟ್ಟ ವಿದ್ಯಾರ್ಥಿನಿ – ಮುಂದಾಗಿದ್ದೇನು?

    ಒಟ್ಟಿನಲ್ಲಿ ಬೆಳಗಾವಿ ಹಿಂಡಲಗಾ ಜೈಲು ಈಗಾಗಲೇ ಅನೇಕ ಅಪಖ್ಯಾತಿಯಿಂದ ಸುದ್ದಿಯಲ್ಲಿತ್ತು. ಈಗ ಕೊಲೆ ಆರೋಪಿ ದರ್ಶನ್ ಗ್ಯಾಂಗ್ ಹಿಂಡಲಗಾ ಜೈಲಿಗೆ ಶಿಫ್ಟ್ ಆಗುತ್ತಾರಾ ಎಂಬ ಚರ್ಚೆ ಜೋರಾಗಿದೆ. ಸದ್ಯ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಕುಖ್ಯಾತ ಕೈದಿಗಳಿದ್ದಾರೆ. ಹೀಗಿರುವಾಗ ದರ್ಶನ್&ಗ್ಯಾಂಗ್ ಬಂದರೆ ಹೇಗೆ ಎಂದು ಜೈಲು ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ. ಇದನ್ನೂ ಓದಿ: Telegram Ban | ಭಾರತದಲ್ಲಿ ಬ್ಯಾನ್ ಆಗುತ್ತಾ ಟೆಲಿಗ್ರಾಂ ಆ್ಯಪ್?

  • ಬೆಳಗಾವಿ ಹಿಂಡಲಗಾ ಜೈಲಿಗೆ ಬಾಂಬ್ ಬೆದರಿಕೆ ಕರೆ!

    ಬೆಳಗಾವಿ ಹಿಂಡಲಗಾ ಜೈಲಿಗೆ ಬಾಂಬ್ ಬೆದರಿಕೆ ಕರೆ!

    ಬೆಳಗಾವಿ: ಬಂದಿಖಾನೆ ಇಲಾಖೆಯ ಉತ್ತರ ವಲಯ ಡಿಐಜಿಪಿ ಟಿಪಿ ಶೇಷ ಅವರಿಗೆ ಅನಾಮಧೇಯ ಬೆದರಿಕೆ ಕರೆ ಬಂದಿದ್ದು ಜೈಲು ಅಧಿಕಾರಿಗಳಲ್ಲಿ ಆತಂಕ ಶುರುವಾಗಿದೆ.

    ಬೆಂಗಳೂರು ಕಾರಾಗೃಹ, ಬೆಳಗಾವಿ (Belagavi) ಹಿಂಡಲಗಾ ಕೇಂದ್ರ ಕಾರಾಗೃಹ (Hindalaga Jail) ಸ್ಫೋಟಿಸಲಾಗುವುದು. ಅಲ್ಲದೇ ತಾವು ವಾಸಿಸುವ ವಸತಿ ಗೃಹದ ಮೇಲೆ ಬಾಂಬ್ (Bomb) ಸ್ಫೋಟಿಸುವುದಾಗಿ ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಕರೆ (Threat Call) ಬಂದಿದೆ.

    ಹಿಂಡಲಗಾ ಜೈಲಿನ ಸಿಬ್ಬಂದಿಯ ಪರಿಚಯಸ್ಥನೆಂದು ಹೇಳಿ ಬೆದರಿಕೆ ಕರೆ ಮಾಡಿ, ಜೈಲಿನಲ್ಲಿ ಗಲಭೆ ಸೃಷ್ಟಿಸಿ ಹಲ್ಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಹಿಂಡಲಗಾ ಜೈಲಿನ ಹೆಡ್ ವಾಡರ್‌ಗಳಾದ ಜಗದೀಶ್ ಗಸ್ತಿ, ಎಸ್‌ಎಂ ಗೋಟೆ ಪರಿಚಯಸ್ಥನೆಂದು ಹೇಳಿದ್ದಾನೆ. ಅಲ್ಲದೇ ಫೋನ್ ಕರೆಯಲ್ಲಿ ಭೂಗತ ಪಾತಕಿ ಬನ್ನಂಜೆ ರಾಜಾ ಹೆಸರೂ ಉಲ್ಲೇಖ ಮಾಡಿ ತಾನು ಜೈಲಿನಲ್ಲಿದ್ದಾಗ ಬನ್ನಂಜೆ ರಾಜಾಗೆ ಸಹಾಯ ಮಾಡಿದ್ದೇನೆ ಎಂದು ಹೇಳಿದ್ದಾನೆ. ಇದನ್ನೂ ಓದಿ: ಯಾವುದಕ್ಕೂ ಡಿಸ್ಟರ್ಬ್ ಆಗಲ್ಲ, ಮ್ಯಾನಿಪುಲೇಟ್ ಮಾಡಲ್ಲ- ಪಬ್ಲಿಕ್ ಟಿವಿಗೆ ಸಿಎಂ EXCLUSIVE ಸಂದರ್ಶನ

    ಈ ಅನಾಮಧೇಯ ವ್ಯಕ್ತಿಯಿಂದ ಕಾರಾಗೃಹ ಆಡಳಿತಕ್ಕೆ ಧಕ್ಕೆ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅನಾಮಧೇಯ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಬಂಧಿಖಾನೆ ಇಲಾಖೆಯ ಡಿಐಜಿಪಿ ಟಿಪಿ ಶೇಷ ಪ್ರಕರಣ ದಾಖಲಿಸಿದ್ದಾರೆ. ಇದೀಗ ಬಾಂಬ್ ಬೆದರಿಕೆ ಕರೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಕೆಆರ್‌ಎಸ್‌ ಡ್ಯಾಂನಿಂದ ತಮಿಳುನಾಡಿಗೆ ಮುಂದುವರಿದ ನೀರು ಬಿಡುಗಡೆ; ಈಗ ನೀರು ಎಷ್ಟಿದೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಡ್ಕರಿಗೆ ಜೀವ ಬೆದರಿಕೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ – ಥ್ರೆಟ್ ಹಿಂದಿದ್ಯಾ ಲಷ್ಕರ್ ಉಗ್ರನ ಪ್ರಚೋದನೆ?

    ಗಡ್ಕರಿಗೆ ಜೀವ ಬೆದರಿಕೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ – ಥ್ರೆಟ್ ಹಿಂದಿದ್ಯಾ ಲಷ್ಕರ್ ಉಗ್ರನ ಪ್ರಚೋದನೆ?

    ಬೆಳಗಾವಿ: ಹಿಂಡಲಗಾ ಜೈಲಿನಿಂದಲೇ (Hindalaga Jail) ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರಿಗೆ ಜೀವ ಬೆದರಿಕೆ ಒಡ್ಡಿರುವ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಗಡ್ಕರಿ ಅವರಿಗೆ ಬೆದರಿಕೆ ಒಡ್ಡಿರುವ ಹಿಂದೆ ಲಷ್ಕರ್-ಇ-ತೋಯ್ಬಾ ಸಂಘಟನೆಯ ಉಗ್ರನ ಪ್ರಚೋದನೆ ಇರುವ ಸಂಶಯ ಮೂಡಿದೆ.

    ಲಷ್ಕರ್-ಇ-ತೋಯ್ಬಾ ಸಂಘಟನೆ ಜೊತೆ ನಂಟು ಹೊಂದಿದ್ದ ಅಫ್ಸರ್ ಪಾಷಾ ಎಂಬವನನ್ನು ಎನ್‌ಐಎ (NIA) ವಶಕ್ಕೆ ಪಡೆದುಕೊಂಡಿದೆ. ಎನ್‌ಐಎ ಅಧಿಕಾರಿಗಳು ಅಫ್ಸರ್ ಪಾಷಾನನ್ನು ಹಿಂಡಲಗಾ ಜೈಲಿನಿಂದ ಮುಂಬೈಗೆ ಕರೆದುಕೊಂಡು ಹೋಗಿದ್ದಾರೆ. ಶನಿವಾರ ಇಡೀ ದಿನ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿ, ಬಳಿಕ ಮಹಾರಾಷ್ಟ್ರದ ನಾಗ್ಪುರ ಪೊಲೀಸರಿಗೆ ಅಫ್ಸರ್ ಪಾಷಾನನ್ನು ಹಸ್ತಾಂತರಿಸಲಾಗಿದೆ.

    ಉಗ್ರ ಸಂಘಟನೆ ಲಷ್ಕರ್-ಇ-ತೋಯ್ಬಾ ಸಂಘಟನೆ ಜೊತೆಗೆ ನಂಟು ಆರೋಪದಡಿ ಅಫ್ಸರ್ ಪಾಷಾ ಬಂಧಿತನಾಗಿದ್ದ. ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಆತ ಶಿಕ್ಷೆ ಅನುಭವಿಸುತ್ತಿದ್ದ. ಇದೇ ವೇಳೆ ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಜಯೇಶ್ ಪೂಜಾರಿಯಿಂದ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಒಡ್ಡಲಾಗಿತ್ತು. ಹಣಕ್ಕಾಗಿ ಆತ ಈ ಕೃತ್ಯ ಮಾಡಿದ್ದಾನೆ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ವಿಚ್ಛೇದನಕ್ಕೆ ಒಪ್ಪದ ಪತ್ನಿಯ ಕೊಲೆಗೆ ಸ್ಕೆಚ್- ಅಪಘಾತಕ್ಕೆ ಯತ್ನಿಸಿ ಸಿಕ್ಕಿಬಿದ್ದ ಪತಿ

    ನಾಗ್ಪುರ ಪೊಲೀಸರ ವಿಚಾರಣೆ ವೇಳೆ ಜಯೇಶ್ ಪೂಜಾರಿ ಗಡ್ಕರಿ ಅವರಿಗೆ ಜೀವ ಬೆದರಿಕೆ ಹಾಕುವಂತೆ ಅಫ್ಸರ್ ಪಾಷಾ ಪ್ರಚೋದನೆ ನೀಡಿದ್ದ ಎಂಬುದನ್ನು ಬಾಯ್ಬಿಟ್ಟಿದ್ದಾನೆ. ಜಯೇಶ್ ಪೂಜಾರಿ ನೀಡಿದ ಮಾಹಿತಿ ಆಧರಿಸಿ ಅಫ್ಸರ್ ಪಾಷಾನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಪ್ರೀತಿ ವಿಚಾರಕ್ಕೆ ಕಿರಿಕ್ – ಯುವಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಂಡಲಗಾ ಕೈದಿ ಹೆಸರಲ್ಲಿ ನಿತಿನ್ ಗಡ್ಕರಿ ಕಚೇರಿಗೆ ಮತ್ತೊಮ್ಮೆ ಜೀವಬೆದರಿಕೆ ಕರೆ

    ಹಿಂಡಲಗಾ ಕೈದಿ ಹೆಸರಲ್ಲಿ ನಿತಿನ್ ಗಡ್ಕರಿ ಕಚೇರಿಗೆ ಮತ್ತೊಮ್ಮೆ ಜೀವಬೆದರಿಕೆ ಕರೆ

    ಬೆಳಗಾವಿ: ತಾಲೂಕಿನ ಹಿಂಡಲಗಾ ಜೈಲಿನಲ್ಲಿರುವ (Hindalaga Jail) ಕೈದಿಯ (Prisoner) ಹೆಸರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿಗೆ ಮತ್ತೊಮ್ಮೆ ಜೀವಬೆದರಿಕೆ ಕರೆ (Life threatening Call) ಮಾಡಲಾಗಿದ್ದು ಈ ಬಗ್ಗೆ ಮಹಾರಾಷ್ಟ್ರ (Maharashtra) ಎಟಿಎಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

    ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ಜಯೇಶ್ ಕಾಂತಾ ಅಲಿಯಾಸ್ ಜಯೇಶ್ ಪೂಜಾರಿ ಹೆಸರು ಬಳಸಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿಗೆ ಮತ್ತೊಮ್ಮೆ ಜೀವಬೆದರಿಕೆ ಕರೆ ಮಾಡಲಾಗಿದೆ. ಮಹಾರಾಷ್ಟ್ರದ ನಾಗ್ಪುರದ ನಿತಿನ್ ಗಡ್ಕರಿ ಜನಸಂಪರ್ಕ ಕಚೇರಿಯ ಲ್ಯಾಂಡ್‌ಲೈನ್‌ಗೆ ಕರೆ ಮಾಡಲಾಗಿದ್ದು 10 ಕೋಟಿ ರೂ. ನೀಡುವಂತೆ ಬೇಡಿಕೆ ಇಡಲಾಗಿದೆ. ಈ ಹಿನ್ನೆಲೆ ನಾಗ್ಪುರದ ನಿತಿನ್ ಗಡ್ಕರಿ ಕಚೇರಿ ಬಳಿ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ. ಇದನ್ನೂ ಓದಿ: ದೆಹಲಿ ಹೊಸ ಮದ್ಯ ನೀತಿ ಹಗರಣ – ಕೆ. ಕವಿತಾ ಮೊಬೈಲ್ ವಶಕ್ಕೆ ಪಡೆದ ಇಡಿ

    ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳಿಂದ ತನಿಖೆ ಮುಂದುವರಿದ್ದು ಈ ಹಿಂದೆ ಬೆಳಗಾವಿ ಹಿಂಡಲಗಾ ಜೈಲಿನ ಕೈದಿ ಜಯೇಶ್ ಕಾಂತಾ ಹೆಸರಿನಿಂದ ಜನವರಿ 14 ರಂದು ನಿತಿನ್ ಗಡ್ಕರಿ ಕಚೇರಿಗೆ ಜೀವ ಬೆದರಿಕೆ ಕರೆ ಬಂದಿತ್ತು. ಆಗ ಹಿಂಡಲಗಾ ಜೈಲಿಗೆ ಭೇಟಿ ನೀಡಿದ್ದ ಮಹಾರಾಷ್ಟ್ರದ ಅಧಿಕಾರಿಗಳ ತಂಡ ತನಿಖೆ ನಡೆಸಿದ್ದರು. ಈಗ ಮತ್ತೆ ಕೈದಿ ಜಯೇಶ್ ಕಾಂತಾ ಹೆಸರಿನಲ್ಲಿ ಜೀವ ಬೆದರಿಕೆ ಹಾಕಲಾಗಿದ್ದು, ಈ ಕರೆ ಎಲ್ಲಿಂದ ಬಂದಿದೆ ಎಂಬ ಬಗ್ಗೆ ತನಿಖೆಯನ್ನು ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳು ನಡೆಸುತ್ತಿದ್ದಾರೆ. ಇದನ್ನೂ ಓದಿ: 80 ಸಾವಿರ ಪೊಲೀಸರು ಏನ್ ಮಾಡ್ತಿದ್ದಾರೆ – ಅಮೃತ್‌ಪಾಲ್ ಸಿಂಗ್ ಬಂಧಿಸದ ಸರ್ಕಾರದ ವಿರುದ್ಧ ಹೈಕೋರ್ಟ್ ಚಾಟಿ

  • ಹಿಂಡಲಗಾ ಜೈಲು ಸೇರಿದ್ದ SDPI, ನಿಷೇಧಿತ PFI ಕಾರ್ಯಕರ್ತರಿಗೆ ಷರತ್ತುಬದ್ಧ ಜಾಮೀನು

    ಹಿಂಡಲಗಾ ಜೈಲು ಸೇರಿದ್ದ SDPI, ನಿಷೇಧಿತ PFI ಕಾರ್ಯಕರ್ತರಿಗೆ ಷರತ್ತುಬದ್ಧ ಜಾಮೀನು

    ಬೆಳಗಾವಿ: ಹಿಂಡಲಗಾ ಜೈಲು (Hindalaga Jail) ಸೇರಿದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮತ್ತು ನಿಷೇಧಿತ ಪ್ಯಾಪುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ನ ಏಳು ಮಂದಿ ಕಾರ್ಯಕರ್ತರಿಗೆ ಬೆಳಗಾವಿ ಡಿಸಿಪಿ ರವೀಂದ್ರ ಗಡಾದಿ ಷರತ್ತುಬದ್ಧ ಜಾಮೀನು (Bail) ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.

    ಬೆಳಗಾವಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾಡಿಯಿಂದ ಬಂಧಿತ ಎಸ್‍ಡಿಪಿಐ ಮತ್ತು ನಿಷೇಧಿತ ಪಿಎಫ್‍ಐ 7 ಕಾರ್ಯಕರ್ತರಿಗೂ ತಲಾ ಒಬ್ಬರಿಗೆ 50 ಸಾವಿರ ಬಾಂಡ್ ಪಡೆದುಕೊಂಡು ಜಾಮೀನು ಮಂಜೂರು ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಗೆದ್ದಿರೋ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್‍ನಂತಹ ಅಮಾಯಕರ ರಕ್ತ ಇದೆ: ಸಿದ್ದರಾಮಯ್ಯ

    ಬೆಳಗಾವಿ (Belagavi) ನಗರದ ಆಜಂ ನಗರ ನಿವಾಸಿ ಪಿಎಫ್‍ಐ ಮಾಜಿ ಜಿಲ್ಲಾಧ್ಯಕ್ಷ ಝಕೀವುಲ್ಲಾ ಫೈಜಿ, ಎಸ್‍ಡಿಪಿಐ ಬೆಳಗಾವಿ ಜಿಲ್ಲಾಧ್ಯಕ್ಷ ಅಬೀದ್ ಖಾನ್ ಕಡೋಲಿ, ಶಿವಾಜಿ ನಗರ ನಿವಾಸಿ ಸಲಾವುದ್ದೀನ್ ಖಿಲೆವಾಲೆ, ಬದ್ರುದ್ದೀನ್ ಪಟೇಲ್, ಅಮನ್ ನಗರ ನಿವಾಸಿ ಸಮೀವುಲ್ಲಾ ಪೀರ್ಜಾದೆ,ಬೆಳಗಾವಿಯ ಬಾಕ್ಸೈಟ್ ರೋಡ್ ನಿವಾಸಿ ಜಹೀರ್ ಘೀವಾಲೆ ಹಾಗೂ ಬೆಳಗಾವಿಯ ವಿದ್ಯಾಗಿರಿ ನಿವಾಸಿ ರೆಹಾನ್ ಅಜೀಜ್ ಜಾಮೀನು ಪಡೆದುಕೊಂಡವರು.

    ಕಳೆದ ಒಂದು ತಿಂಗಳ ಹಿಂದೆ ದೇಶಾದ್ಯಂತ ಪಿಎಫ್‍ಐ ಮತ್ತು ಎಸ್‍ಡಿಪಿಐ ಮುಖಂಡರು ಹಾಗೂ ಕಚೇರಿಗಳ ಮೇಲಿನ ದಾಳಿ ಖಂಡಿಸಿ ಬೆಳಗಾವಿ ತಾಲೂಕಿನ ಕಾಕತಿ ಬಳಿಯ ರಾಷ್ಟ್ರೀಯ ಹೆದ್ದಾರಿ ತಡೆದು ಪಿಎಫ್‍ಐ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಿಆರ್‌ಪಿಸಿ 110 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡು ಸೆ.27 ರಂದು ಡಿಸಿಪಿ ರವೀಂದ್ರ ಗಡಾಡಿ ನೇತೃತ್ವದಲ್ಲಿ ನಡೆದಿದ್ದ ದಾಳಿ ನಡೆಸಿ 7ಜನರನ್ನು ಬಂಧಿಸಿ ಜೈಲಿಗಟ್ಟಿದ್ದರು.

    ದಾಳಿ ವೇಳೆ ಎಸ್ಕೇಪ್ ಆಗಿದ್ದ ನಿಷೇಧಿತ ಪಿಎಫ್‍ಐ ಜಿಲ್ಲಾಧ್ಯಕ್ಷ ನವೀದ್ ಕಟಗಿ, ಒಂದು ವಾರ ಕಳೆದರೂ ಇನ್ನೂ ಬೆಳಗಾವಿ ಪೊಲೀಸರ ಕೈಗೆ ಸಿಗದೇ ನಾಪತ್ತೆ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಾಜಿ ಶಾಸಕ ವಿನಯ್ ಕುಲಕರ್ಣಿಗೆ ಜಾಮೀನು

    ಮಾಜಿ ಶಾಸಕ ವಿನಯ್ ಕುಲಕರ್ಣಿಗೆ ಜಾಮೀನು

    ಬೆಂಗಳೂರು: ಮಾಜಿ ಶಾಸಕ ವಿನಯ್ ಕುಲಕರ್ಣಿಗೆ ಜಾಮೀನು ಮಂಜೂರಾಗಿದೆ.

    ಹೌದು. ಯೋಗೇಶ್ ಗೌಡ ಹತ್ಯೆ ಕೇಸ್‍ನಲ್ಲಿ ಸಾಕ್ಷಿ ನಾಶ ಪ್ರಕರಣದಲ್ಲಿ ಕುಲಕರ್ಣಿಗೆ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

    ಯೋಗೇಶ್ ಗೌಡ ಹತ್ಯೆ ಪ್ರಕರಣ ಸಂಬಂಧ ಹಿಂಡಲಗಾ ಜೈಲಿನಲ್ಲಿದ್ದ ವಿನಯ್ ಕುಲಕರ್ಣಿ ವಿರುದ್ಧ ಸಿಬಿಐ ಎರಡು ಕೇಸ್ ದಾಖಲಿಸಿತ್ತು. ಇದೀಗ ಸಾಕ್ಷ್ಯನಾಶ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

    ವಿನಯ್ ಕುಲಕರ್ಣಿ ಅವರು ಈಗಾಗಲೇ ಯೋಗೇಶ್ ಗೌಡ ಹತ್ಯೆ ಕೇಸ್‍ನಲ್ಲಿ ಸುಪ್ರೀಂಕೋರ್ಟ್ ನಿಂದ ಜಾಮೀನು ಪಡೆದಿದ್ದರು. ನ್ಯಾ ಉದಯ್ ಲಲಿತ್ ನೇತೃತ್ವದ ದ್ವಿಸದಸ್ಯ ಪೀಠ ಸುದೀರ್ಘ ವಿಚಾರಣೆ ನಡೆಸಿ ಸಿಬಿಐ ಆಕ್ಷೇಪಣೆಯ ನಡುವೆಯೂ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿ ಆದೇಶ ಪ್ರಕಟಿಸಿತ್ತು.

    ಧಾರವಾಡಕ್ಕೆ ಭೇಟಿ ನೀಡುವಂತಿಲ್ಲ. ಸಿಬಿಐ ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಎಂದು ಕೋರ್ಟ್ ವಿನಯ್ ಕುಲಕರ್ಣಿಗೆ ಷರತ್ತು ವಿಧಿಸಿತ್ತು. ವಿನಯ್ ಕುಲಕರ್ಣಿ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿ ಸಿಬಿಐ ಪರ ವಕೀಲ ಎಎಸ್.ಜಿ. ಎಸ್.ವಿ. ರಾಜು ವಾದ ಮಂಡನೆ ಮಾಡಿದ್ದರು. ಇದನ್ನೂ ಓದಿ: ರಕ್ಷಾ ಬಂಧನದಂದು ಮಹಿಳೆಯರಿಗೆ ಬಂಪರ್ ಆಫರ್ ನೀಡಿದ ಯುಪಿ ಸಿಎಂ

    ಸಿಬಿಐ ಪರ ವಾದ ಏನಿತ್ತು?
    ಎ1 ಆರೋಪಿಗಳಿಂದ ಎ15 ರವರೆಗಿನ ಆರೋಪಿಗಳಿಗೆ ಆರು ಲಕ್ಷ ರೂಪಾಯಿ ಹಣ ಪಾವತಿಯಾಗಿದೆ. ಕೇಸ್ ತನಿಖಾಧಿಕಾರಿಗೂ ಎರಡು ಲಕ್ಷ ರೂಪಾಯಿ ಹಣ ಪಾವತಿಯಾಗಿದೆ. ವಿನಯ್ ಕುಲಕರ್ಣಿ ಮನವಿ ಮೇರೆಗೆ ಹಾರ್ನ್ ಬಿಲ್ ರೆಸಾರ್ಟ್ ನಲ್ಲಿ ಸಾಕ್ಷಿಗಳಿಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.

    ವಿನಯ್ ಕುಲಕರ್ಣಿಗೆ ಯೋಗೀಶ್ ಗೌಡ ಜೊತೆಗೆ ವೈಷಮ್ಯ ಇತ್ತು. ಭೂ ವಿವಾದದಿಂದ ಕೊಲೆಯಾಗಿದೆ ಎಂದು ಬಿಂಬಿಸುವ ಯತ್ನ ಮಾಡಿದ್ದರು. ಸಿಬಿಐ ತನಿಖೆ ನಡೆಸಿದ ಬಳಿಕ ದೊಡ್ಡ ಷಡ್ಯಂತ್ರ ಬೆಳಕಿಗೆ ಬಂದಿದೆ. ವಿನಯ್ ಕುಲಕರ್ಣಿ ಕೊನೆಯಲ್ಲಿ ಪ್ರಮುಖ ಪಾತ್ರವಾಗಿದ್ದು, ಸಾಕ್ಷ್ಯವನ್ನು ತಿರುಚಲಾಗಿದೆ. ಪೊಲೀಸ್ ತನಿಖೆಯಲ್ಲಿ ಕೊಲೆ, ಸಣ್ಣ ಷಡ್ಯಂತ್ರ ಮಾತ್ರ ಪ್ರಸ್ತಾಪವಾಗಿದೆ.

    ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಅವರನ್ನು ಹತ್ಯೆ ಮಾಡಿದ ಪ್ರಕರಣ ಸಂಬಂಧ ವಿನಯ್ ಕುಲಕರ್ಣಿ ಅವರನ್ನು ಸಿಬಿಐ 2020ರ ನವೆಂಬರ್ 05 ರಂದು ಬಂಧಿಸಿತ್ತು.

  • ಅಮ್ಮನನ್ನು ನೋಡಲು ಬರ್ತಿದ್ದಾನೆ ಅಂಡರ್ ವರ್ಲ್ಡ್ ಡಾನ್ ಬನ್ನಂಜೆ ರಾಜಾ

    ಅಮ್ಮನನ್ನು ನೋಡಲು ಬರ್ತಿದ್ದಾನೆ ಅಂಡರ್ ವರ್ಲ್ಡ್ ಡಾನ್ ಬನ್ನಂಜೆ ರಾಜಾ

    ಉಡುಪಿ: ಭೂಗತ ಪಾತಕಿ ಬನ್ನಂಜೆ ರಾಜಾ ಪೆರೋಲ್ ಮೇಲೆ ಹೊರಬರಲಿದ್ದಾನೆ. ಬೆಳಗಾವಿಯ ಹಿಂಡಲಗಾ ಜೈಲಲ್ಲಿರುವ ಬನ್ನಂಜೆ ರಾಜ ಉಡುಪಿಗೆ ಬರಲಿದ್ದಾನೆ.

    ಜುಲೈ  8  ರಂದು ಆತ ಉಡುಪಿಗೆ ಬರಲು ನ್ಯಾಯಾಲಯದ ಮುಂದೆ ಅನುಮತಿ ಕೋರಿದ್ದಾನೆ. ಆತನಿಗೆ ನ್ಯಾಯಾಧೀಶರಿಂದ ವಿಶೇಷ ಅನುಮತಿಯೂ ಸಿಕ್ಕಿದೆ ಎಂದು ತಿಳಿದು ಬಂದಿದೆ. ಬನ್ನಂಜೆ ರಾಜ ಅನಾರೋಗ್ಯ ಪೀಡಿತ ತನ್ನ ತಾಯಿಯನ್ನು ನೋಡಲು ಆಗಮಿಸಲಿದ್ದಾನೆ.

    ಬನ್ನಂಜೆ ರಾಜಾ ಮೊರಾಕ್ಕೋದಲ್ಲಿ 2015ರಲ್ಲಿ ಬಂಧನಕ್ಕೊಳಗಾಗಿದ್ದನು. ಇದೀಗ ಈತನ ಭೇಟಿ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳುವ ಸಾಧ್ಯತೆಯಿದೆ. ಶೂಟೌಟ್ , ದರೋಡೆ , ಕೊಲೆ ಪ್ರಕರಣ ಸಹಿತ 16 ಕ್ರಿಮಿನಲ್ ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ.

    ಬನ್ನಂಜೆ ರಾಜನ ಮೇಲೆ 45 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಉಡುಪಿ ಭೇಟಿ ಸಂದರ್ಭ ಬನ್ನಂಜೆಯ ಸಹಚರರು ಆಗಮಿಸುವ ಸಾಧ್ಯತೆಯಿದೆ.