Tag: Himanta Biswa Sharma

  • ಪತಿಯನ್ನ ಅರೆಸ್ಟ್ ಮಾಡ್ತಾರೆ ಅಂತಾ ಹೆದರಿ ನವ ವಿವಾಹಿತೆ ಆತ್ಮಹತ್ಯೆ

    ಪತಿಯನ್ನ ಅರೆಸ್ಟ್ ಮಾಡ್ತಾರೆ ಅಂತಾ ಹೆದರಿ ನವ ವಿವಾಹಿತೆ ಆತ್ಮಹತ್ಯೆ

    ದಿಸ್ಪುರ್: ಅಸ್ಸಾಂ ಸರ್ಕಾರ (Assam Government) ಬಾಲ್ಯವಿವಾಹ (Child Marriage) ವಿರುದ್ಧ ಕಠಿಣ ಕಾರ್ಯಾಚರಣೆ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ತನ್ನ ಪತಿಯನ್ನು ಬಂಧಿಸುತ್ತಾರೆ ಅಂತಾ ಹೆದರಿ 3 ತಿಂಗಳ ಹಿಂದೆಯಷ್ಟೇ ಮದುವೆಯಾದ ವಿವಾಹಿತೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಮಹಿಳೆಯನ್ನ ದಕ್ಷಿಣ ಸಾಲ್ಮರ ಪೊಲೀಸ್ ಠಾಣಾ (Salmar Police Station) ವ್ಯಾಪ್ತಿಯ ಕಮರ್ ಪದ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಮಹಿಳೆ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಸ್ಸಾಂ ಸರ್ಕಾರ ಕಠಿಣ ಕಾರ್ಯಾಚರಣೆ ಕೈಗೊಂಡ ಬಳಿಕ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ 2ನೇ ಪ್ರಕರಣ ಇದಾಗಿದೆ. ಇದನ್ನೂ ಓದಿ: ಮದುವೆ ಸೀರೆಯ ಮೇಲೆ ಲ್ಯಾಬ್ ಕೋಟ್, ಸ್ಟೆತಸ್ಕೋಪ್ ಧರಿಸಿ ಪರೀಕ್ಷೆಗೆ ಬಂದ ವಧು

    Child Marriage Bride

    ಈ ತಿಂಗಳ ಆರಂಭದಲ್ಲಿ, ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ 17 ವರ್ಷದ ಹುಡುಗಿ ಪೋಷಕರು ಪ್ರೀತಿಸಿದ ಯುವಕನೊಂದಿಗೆ ಮದುವೆ ಮಾಡಿಸಲಿಲ್ಲ ಅಂತಾ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮತ್ತೊಂದು ಪ್ರಕರಣದಲ್ಲಿ, ಧುಬ್ರಿ ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣದಲ್ಲಿ ಬಂಧಿಸಿರುವ ತನ್ನ ಪತಿ ಮತ್ತು ತಂದೆಯನ್ನ ಬಿಡುಗಡೆ ಮಾಡದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಂಪಾಟ ಮಾಡಿದ್ದಳು. ಹೊರತಾಗಿಯೂ ಪೊಲೀಸರು ತನ್ನ ಪತಿ ಮತ್ತು ತಂದೆಯನ್ನು ನ್ಯಾಯಾಲಯಕ್ಕೆ ಕರೆದೊಯ್ದಿದ್ದನ್ನ ಕಂಡು ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ದಳು.

    ರಾಜ್ಯದಲ್ಲಿ ಶಿಶು ಮರಣ ಪ್ರಮಾಣ ತಗ್ಗಿಸುವ ಸಲುವಾಗಿ ಸಿಎಂ ಹಿಮಂತ ಬಿಸ್ವಾ ಶರ್ಮಾ (Himanta Biswa Sharma) ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಬಾಲ್ಯ ವಿವಾಹದ ವಿರುದ್ಧ ಸಮರ ಸಾರಿದೆ. ಈಗಾಗಲೇ 2 ಸಾವಿರಕ್ಕೂ ಅಧಿಕ ಆರೋಪಿಗಳನ್ನ ಬಂಧಿಸಿ, ಜೈಲಿಗಟ್ಟಿದ್ದಾರೆ. ಇನ್ನಷ್ಟು ಆರೋಪಿಗಳನ್ನ ಬಂಧಿಸುವ ಕಾರ್ಯಾಚರಣೆ ಮುಂದುವರಿದಿದೆ. ಸರ್ಕಾರದ ಈ ನಡೆ ವಿರುದ್ಧ ಅಸ್ಸಾಂ ರಾಜ್ಯಾದ್ಯಂತ ವಿವಿಧೆಡೆ ಮಹಿಳೆಯರು ಪ್ರತಿಭಟಿಸಿ ಬೀದಿಗಿಳಿದಿದ್ದಾರೆ. ಇದನ್ನೂ ಓದಿ: ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದ 4 ದಂಪತಿ – ಜಡ್ಜ್ ಎದುರೇ ವಿರಸ ಮರೆತು ಮತ್ತೆ ಒಂದಾದ ಜೋಡಿಗಳು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Child Marriage Crackdown: ಕಾನೂನಿಗೆ ಹೆದರಿ ಮದ್ವೆ ನಿಲ್ಲಿಸಿದ ಪೋಷಕರು, ಆತ್ಮಹತ್ಯೆ ಮಾಡಿಕೊಂಡ ಮಗಳು

    Child Marriage Crackdown: ಕಾನೂನಿಗೆ ಹೆದರಿ ಮದ್ವೆ ನಿಲ್ಲಿಸಿದ ಪೋಷಕರು, ಆತ್ಮಹತ್ಯೆ ಮಾಡಿಕೊಂಡ ಮಗಳು

    ದಿಸ್ಪುರ್: ಅಸ್ಸಾಂ ಸರ್ಕಾರ (Assam Government) ಬಾಲ್ಯ ವಿವಾಹದ (Child Marriage) ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಬೆನ್ನಲ್ಲೇ ಪೋಷಕರು ಎಚ್ಚೆತ್ತುಕೊಂಡಿದ್ದಾರೆ. ತಮ್ಮ ಮಕ್ಕಳ ಮೇಲೆ ನಿಗಾ ವಹಿಸಿದ್ದು, ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಿಕೊಳ್ಳುತ್ತಿದ್ದಾರೆ.

    ಸರ್ಕಾರದ ಕಠಿಣ ನೀತಿಗೆ ಹೆದರಿ ಕುಟುಂಬವೊಂದು ತಮ್ಮ ಮಗಳ ಮದುವೆ ಮಾಡಲು ನಿರಾಕರಿಸಿದೆ. ಇದರಿಂದ 17 ವರ್ಷದ ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ನಡೆದಿದೆ.

    ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ 17 ವರ್ಷದ ಹುಡುಗಿ ತನ್ನ ಪೋಷಕರು ಭರವಸೆ ಮುರಿದು ತಾನು ಪ್ರೀತಿಸಿದ ಹುಡುಗನನ್ನು ಮದುವೆಯಾಗಲು ನಿರಾಕರಿಸಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ಜೈಲಿಗೋದವರ ಹೆಂಡತಿಯರು, ಮಕ್ಕಳನ್ನ ಅಸ್ಸಾಂ ಸಿಎಂ ನೋಡಿಕೊಳ್ತಾರಾ- ಓವೈಸಿ ಪ್ರಶ್ನೆ

    ಕ್ಯಾಚಾರ್‌ನ ಧಲೈ ಪೊಲೀಸ್ (Assam Police) ಠಾಣಾ ವ್ಯಾಪ್ತಿಯ ಖಾಸ್ಪುರ ಗ್ರಾಮದಲ್ಲಿ ವಾಸಿಸುತ್ತಿದ್ದ ಹುಡುಗಿ ಯುವಕನೊಬ್ಬನನ್ನ ಪ್ರೀತಿಸುತ್ತಿದ್ದಳು. ಪೋಷಕರು ಸಹ ಮದುವೆಗೆ ಒಪ್ಪಿದ್ದರು. ಆದರೆ ಅಸ್ಸಾಂ ಸರ್ಕಾರ ಬಾಲ್ಯ ವಿವಾಹಕ್ಕೆ ಕಾನೂನು ನಿರ್ಬಂಧ ಹೇರಿದ ಬಳಿಕ ಹುಡುಗಿ ಪೋಷಕರು ಮದುವೆ ಮಾಡಲು ನಿರಾಕರಿಸಿದರು. ಇದರಿಂದ ಮನನೊಂದ ಹುಡುಗಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ.

    ಧುಬ್ರಿ ಜಿಲ್ಲೆಯಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಬಂಧಿಸಿರುವ ತನ್ನ ಪುರುಷ ಹಾಗೂ ತಂದೆಯನ್ನು ಬಿಡುಗಡೆ ಮಾಡುವಂತೆ 23 ವರ್ಷದ ಮಹಿಳೆ ರಂಪಾಟ ಮಾಡಿದ್ದಾಳೆ. ಪೊಲೀಸ್ ಠಾಣೆಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಇಬ್ಬರನ್ನೂ ಬಿಡುಗಡೆ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ.

    ಅಫ್ರೋಜಾ ಖಾತುನ್ ಎಂಬಾಕೆ ತಾನು 1999ರಲ್ಲಿ ಜನಿಸಿದ್ದೇನೆ 2018ರಲ್ಲಿ ಮದುವೆಯಾಗಿದ್ದೇನೆ. ಸರಿಯಾಗಿ 19ನೇ ವಯಸ್ಸಿನಲ್ಲಿ ಮದುವೆಯಾಗಿದ್ದೇನೆ. ನಾನು ವಯಸ್ಕಳಾಗಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

    ಹಿಮಂತ ಬಿಸ್ವಾ ಶರ್ಮಾ (Himanta Biswa Sharma) ನನ್ನ ಪತಿಯನ್ನು ಏಕೆ ಬಂಧಿಸಲು ಹೇಳಿದ್ದಾರೆ? ನನ್ನ ಪತಿ ಮತ್ತು ತಂದೆಯನ್ನ ಜೈಲಿಂದ ಬಿಡುಗಡೆ ಮಾಡದೇ ಇದ್ದರೇ ನಾನು ನ್ಯಾಯಾಲಯ ಆವರಣದಲೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ.

    ಇದರ ಹೊರತಾಗಿಯೂ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಇದನ್ನು ಕಣ್ಣಾರೆ ಕಂಡ ಮಹಿಳೆ ಸ್ಥಳದಲ್ಲೇ ಕುಸಿದುಬಿದ್ದಿದ್ದಾಳೆ. ಇದನ್ನೂ ಓದಿ: ಬಿನ್‌ ಲಾಡೆನ್‌ನ ಹೊಗಳಿದ್ದ ವ್ಯಕ್ತಿ, ರಾಹುಲ್‌ ಗಾಂಧಿ ಪಿಎಂ ಆಗಬೇಕೆಂದು ಬಯಸಿದ್ದರು – ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್‌

    ಅಸ್ಸಾಂನಲ್ಲಿ ಬಾಲ್ಯ ವಿವಾಹ ತಡೆ ಕಾರ್ಯಾಚರಣೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು ಬಂಧಿತರ ಸಂಖ್ಯೆ 2,441ಕ್ಕೆ ಏರಿಕೆಯಾಗಿದೆ. ಅಲ್ಲದೇ ಈ ಕಾರ್ಯಾಚರಣೆ 2026ರ ವಿಧಾನಸಭಾ ಚುನಾವಣೆವರೆಗೂ ಮುಂದುವರಿಯಲಿದೆ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜೈಲಿಗೋದವರ ಹೆಂಡತಿಯರು, ಮಕ್ಕಳನ್ನ ಅಸ್ಸಾಂ ಸಿಎಂ ನೋಡಿಕೊಳ್ತಾರಾ- ಓವೈಸಿ ಪ್ರಶ್ನೆ

    ಜೈಲಿಗೋದವರ ಹೆಂಡತಿಯರು, ಮಕ್ಕಳನ್ನ ಅಸ್ಸಾಂ ಸಿಎಂ ನೋಡಿಕೊಳ್ತಾರಾ- ಓವೈಸಿ ಪ್ರಶ್ನೆ

    ದಿಸ್ಪುರ್: ಅಸ್ಸಾಂ ರಾಜ್ಯ ಸರ್ಕಾರ (Assam Government) ಬಾಲ್ಯ ವಿವಾಹ (Child Marriage) ತಡೆಗೆ ಕೈಗೊಂಡಿರುವ ಕಠಿಣ ಕ್ರಮದಿಂದ ನಲುಗಿಹೋಗಿರುವ ಹೆಣ್ಣುಮಕ್ಕಳನ್ನ ಯಾರು ನೋಡಿಕೊಳ್ಳುತ್ತಾರೆ? ಜೈಲಿಗೆ ಹೋದವರ ಹೆಂಡತಿಯರು ಹಾಗೂ ಮಕ್ಕಳನ್ನ ಸಿಎಂ ನೋಡಿಕೊಳ್ತಾರಾ? ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi), ಹಿಮಂತ ಬಿಸ್ವಾ ಶರ್ಮಾ (Himanta Biswa Sharma) ಅವರನ್ನ ಪ್ರಶ್ನಿಸಿದ್ದಾರೆ.

    ಅವರಿಂದು ಸುದ್ದಿಗಾರರೊಂದಿಗೆ ಮಾತಮಾಡಿ, ಅಸ್ಸಾಂ ರಾಜ್ಯ ಸರ್ಕಾರ ಬಾಲ್ಯ ವಿವಾಹ ತಡೆಗೆ ಕೈಗೊಂಡಿರುವ ಕಠಿಣ ಕ್ರಮದಿಂದ ನಲುಗಿಹೋಗಿರುವ ಹೆಣ್ಣುಮಕ್ಕಳನ್ನ ಯಾರು ನೋಡಿಕೊಳ್ಳುತ್ತಾರೆ. ಕಳೆದ 6 ವರ್ಷಗಳಿಂದಲೂ ಮೌನ ವಹಿಸಿದ್ದದ್ದು ರಾಜ್ಯ ಸರ್ಕಾರದ ವೈಫಲ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಾಲ್ಯ ವಿವಾಹದ ವಿರುದ್ಧ ಅಸ್ಸಾಂ ಸರ್ಕಾರ ಸಮರ – ಪತಿ, ಪುತ್ರರ ಬಂಧನ ವಿರೋಧಿಸಿ ಬೀದಿಗಿಳಿದ ಮಹಿಳೆಯರು

    ಬಾಲ್ಯ ವಿವಾಹ (Child Marriage) ತಡೆಗೆ ಅಸ್ಸಾಂ ಸರ್ಕಾರ ಕೈಗೊಂಡಿರುವ ಕಠಿಣ ಕಾರ್ಯಾಚರಣೆ ವಿರುದ್ಧ ಅವರು ಕಿಡಿಕಾರಿದ್ದಾರೆ. ಕಳೆದ 6 ವರ್ಷಗಳಿಂದ ಅಸ್ಸಾಂನಲ್ಲಿ ಬಿಜೆಪಿ ಸರ್ಕಾರವಿದೆ. ಅಷ್ಟು ವರ್ಷಗಳಿಂದ ನೀವು ಏನು ಮಾಡುತ್ತಿದ್ರಿ? ಅದು ನಿಮ್ಮ ಸರ್ಕಾರದ ವೈಫಲ್ಯ. ನೀವು ಪುರುಷರನ್ನ ಜೈಲಿಗೆ ಕಳುಹಿಸುತ್ತಿದ್ದೀರಿ. ಈಗ ಅವರ ಪತ್ನಿಯರು, ಹೆಣ್ಣುಮಕ್ಕಳನ್ನ ಸಿಎಂ ನೋಡಿಕೊಳ್ತಾರಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ

    ಬಾಲ್ಯ ವಿವಾಹ ತಡೆಗೆ ಕಠಿಣ ಕಾರ್ಯಾಚರಣೆ ಕೈಗೊಂಡಿರುವ ಅಸ್ಸಾಂ ಪೊಲೀಸರು ಈಗಾಗಲೇ 2,250 ಮಂದಿಯನ್ನ ಬಂಧಿಸಿದ್ದಾರೆ. ಸಚಿವ ಸಂಪುಟದಲ್ಲಿ ಅಸ್ಸಾಂ ಸರ್ಕಾರ ಕ್ರಮ ಕೈಗೊಳ್ಳಲು ನಿರ್ಧರಿಸಿದ ನಂತರ ರಾಜ್ಯಾದ್ಯಂತ ಬಾಲ್ಯ ವಿವಾಹದ ವಿರುದ್ಧ 4,074 ಕೇಸ್‌ಗಳು ದಾಖಲಾಗಿವೆ. 8 ಸಾವಿರ ಆರೋಪಿ ಪಟ್ಟಿಗಳನ್ನು ಹೊಂದಿರುವ ಪೊಲೀಸರು ಒಬ್ಬೊಬ್ಬರನ್ನೂ ಬಂಧಿಸುತ್ತಿದ್ದಾರೆ. ಈಗಾಗಲೇ 2,250 ಮಂದಿಯನ್ನ ಜೈಲಿಗಟ್ಟಿದ್ದಾರೆ.

    14 ವರ್ಷದೊಳಗಿನ ಹುಡುಗಿಯರನ್ನ ಮದುವೆಯಾದವರ ವಿರುದ್ಧ ಪೋಕ್ಸೋ (POCSO) ಕೇಸ್ ಹಾಗೂ 14 ರಿಂದ 18 ವರ್ಷದೊಳಗಿನ ಹುಡುಗಿಯರನ್ನು ಮದುವೆಯಾಗಿದ್ರೆ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಅಡಿಯಲ್ಲಿ ಪ್ರಕರಣ ದಾಖಲಿಸಲು ಸಚಿವ ಸಂಪುಟ ನಿರ್ಧರಿಸಿತ್ತು. ಇದೀಗ ಅಸ್ಸಾಂ ಸಿಎಂ ಈ ಕ್ರಮ 2026ರ ವಿಧಾನಸಭಾ ಚುನಾವಣೆವರೆಗೂ ಮುಂದುವರಿಯಲಿದೆ ಎಂದು ಪ್ರತಿಪಾದಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚಹಾ ತೋಟಗಳಲ್ಲಿ ಕಾರ್ಯನಿರ್ವಹಿಸ್ತಿರೋ 7 ಲಕ್ಷ ಕಾರ್ಮಿಕರಿಗೆ ತಲಾ 3,000 ರೂ. ನೆರವು

    ಚಹಾ ತೋಟಗಳಲ್ಲಿ ಕಾರ್ಯನಿರ್ವಹಿಸ್ತಿರೋ 7 ಲಕ್ಷ ಕಾರ್ಮಿಕರಿಗೆ ತಲಾ 3,000 ರೂ. ನೆರವು

    ಡಿಸ್ಪೂರ್: ಅಸ್ಸಾಂನ ಚಹಾ ತೋಟಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 7 ಲಕ್ಷ ಕಾರ್ಮಿಕರಿಗೆ ತಲಾ ಮೂರು ಸಾವಿರ ರೂ.ನಂತೆ 224 ಕೋಟಿ ಹಣ ಹಂಚುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ತಿಳಿಸಿದ್ದಾರೆ.

    ಚಹಾ ತೋಟದಲ್ಲಿ ಕಾರ್ಯನಿರ್ವಹಿಸುತ್ತಿರುವ 7,46,667 ಕಾರ್ಮಿಕರಿಗೆ ತಲಾ 3 ಸಾವಿರ ರೂ. ನೆರವು ನೀಡುವಂತೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದನ್ನು ಕುರಿತಂತೆ ಮಾತನಾಡಿದ ಅಸ್ಸಾಂ ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ, ರಾಜ್ಯದಲ್ಲಿನ ಚಹಾ ತೋಟ ಕಾರ್ಮಿಕರ ವೇತನವನ್ನು 10 ದಿನಗಳಲ್ಲಿ ಹೆಚ್ಚಿಸಲಾಗುವುದು. ಈ ವಿಚಾರವಾಗಿ ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

    ಅಸ್ಸಾಂ ಚ ಬಗಿಚಾರ್ ಧನ್ ಪುರಸ್ಕರ್ ಮೇಳ ಯೋಜನೆಯಡಿ 7,46,667 ಚಹಾ ಕಾರ್ಮಿಕರ ಬ್ಯಾಂಕ್ ಖಾತೆಗೆ ತಲಾ 3 ಸಾವಿರ ರೂ ಜಮಾಗೊಳಿಸಲಾಗುತ್ತದೆ. ಈ ಹಿಂದೆ ನೇರ ಲಾಭ ವರ್ಗಾವಣೆ ಮೂಲಕ 5000ರೂ. ಗಳನ್ನು ಎರಡು ಕಂತುಗಳ ರೂಪದಲ್ಲಿ ಕಾರ್ಮಿಕರು ಪಡೆದಿದ್ದರು.

    ಫೆಬ್ರವರಿ 7 ರಂದು ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನ ಎರಡು ಆಸ್ಪತ್ರೆಗಳಿಗೆ ಅಡಿಪಾಯ ಹಾಕಿದರು. ಜೊತೆಗೆ ರಾಜ್ಯದ ಹೆದ್ದಾರಿ ಮತ್ತು ಪ್ರಮುಖ ಜಿಲ್ಲೆಯ ರಸ್ತೆಗಳನ್ನು ಅಸೋಮ್ ಮಾಲಾ ಕಾರ್ಯಕ್ರಮದ ಮೂಲಕ ಸೋನಿತ್ಪುರ ಜಿಲ್ಲೆಯ ಧೇಕಿಯಾಜಿಲಿಯಲ್ಲಿ ಉದ್ಘಾಟಿಸಿದರು.

  • ಅಸ್ಸಾಂನಲ್ಲಿ ಮದರಸಾ, ಸಂಸ್ಕೃತ ಶಾಲೆಗಳು ಬಂದ್

    ಅಸ್ಸಾಂನಲ್ಲಿ ಮದರಸಾ, ಸಂಸ್ಕೃತ ಶಾಲೆಗಳು ಬಂದ್

    – ಸರ್ಕಾರದಿಂದ ಮಹತ್ವದ ಆದೇಶ
    – ಧಾರ್ಮಿಕ ಶಿಕ್ಷಣಕ್ಕೆ ಹಣ ನೀಡಲ್ಲವೆಂದ ಸರ್ಕಾರ

    ದಿಸ್ಪುರ: ರಾಜ್ಯ ಸರ್ಕಾರ ನಡೆಸುತ್ತಿರುವ ಎಲ್ಲ ಮದರಸಾ ಹಾಗೂ ಸಂಸ್ಕೃತ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಧಾರ್ಮಿಕ ಶಿಕ್ಷಣಕ್ಕೆ ಅಸ್ಸಾಂ ಸರ್ಕಾರ ಹಣ ನೀಡಲು ಸಾಧ್ಯವಿಲ್ಲ ಎಂದು ಶಿಕ್ಷಣ ಹಾಗೂ ಹಣಕಾಸು ಸಚಿವ ಹಿಮಾಂತ ಬಿಸ್ವಾ ಶರ್ಮಾ ಘೋಷಿಸಿದ್ದಾರೆ.

    ನಮ್ಮ ಸರ್ಕಾರದ ನೀತಿಯಂತೆ ಈ ಹಿಂದೆ ವಿಧಾನಸಭೆಯಲ್ಲಿ ಘೋಷಿಸಿದ್ದು, ಸರ್ಕಾರದ ನಿಧಿಯಿಂದ ಯಾವುದೇ ಧಾರ್ಮಿಕ ಶಿಕ್ಷಣವನ್ನು ನೀಡುವುದಿಲ್ಲ. ಆದರೆ ಖಾಸಗಿ ಸಂಸ್ಕೃತ ಶಾಲೆಗಳು ಹಾಗೂ ಮದರಸಾಗಳ ಬಗ್ಗೆ ನಾವು ಏನನ್ನೂ ಹೆಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

    ಈ ಕುರಿತು ನವೆಂಬರ್ ನಲ್ಲಿ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ. ಮದರಸಾಗಳನ್ನು ಮುಚ್ಚಿದ ಬಳಿಕ 48 ಶಿಕ್ಷಕರನ್ನು ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಶಾಲೆಗಳಿಗೆ ವರ್ಗಾಯಿಸಲಾಗುವುದು ಎಂದು ಹೇಳಿದ್ದಾರೆ.

    ಸರ್ಕಾರದ ಈ ನಿರ್ಧಾರಕ್ಕೆ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್(ಎಐಯುಡಿಎಫ್) ಮುಖ್ಯಸ್ಥ ಬದ್ರುದ್ದಿನ್ ಅಜ್ಮಲ್ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರ ಮದರಸಾಗಳನ್ನು ಬಂದ್ ಮಾಡಿದರೆ 2021ರ ಚುನಾವಣೆ ಬಳಿಕ ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಮತ್ತೆ ತೆರೆಯುತ್ತೇವೆ. ಮದರಸಾಗಳನ್ನು ಮುಚ್ಚಲು ಬಿಡುವುದಿಲ್ಲ. 50-60 ವರ್ಷಗಳ ಹಳೆಯ ಮದರಸಾಗಳನ್ನು ಬಿಜೆಪಿ ಸರ್ಕಾರ ಒತ್ತಾಯಪೂರ್ವಕವಾಗಿ ಮುಚ್ಚುತ್ತಿದ್ದು, ನಾವು ಮತ್ತೆ ತೆರೆಯುತ್ತೇವೆ ಎಂದು ಹೇಳಿದ್ದಾರೆ.

    ಅಸ್ಸಾಂನಲ್ಲಿ ಒಟ್ಟು 614 ಸರ್ಕಾರಿ ಹಾಗೂ ಅನುದಾನಿತ ಮದರಸಾಗಳಿದ್ದು, ಇದರಲ್ಲಿ 57 ಬಾಲಕಿಯರಿಗೆ, 3 ಬಾಲಕರಿಗೆ ಹಾಗೂ ಉಳಿದ 554 ಕೋ ಎಜುಕೇಶನ್ ಮದರಸಾಗಳಿವೆ. ಇದರಲ್ಲಿ 17 ಮದರಸಾಗಳು ಉರ್ದು ಭಾಷೆಯದ್ದಾಗಿವೆ. ಅಲ್ಲದೆ ರಾಜ್ಯದಲ್ಲಿ ಸುಮಾರು 1 ಸಾವಿರ ಸಂಸ್ಕೃತ ಶಾಲೆಗಳಿದ್ದು, ಇದರಲ್ಲಿ ಕೇವಲ 100 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಾಗಿವೆ. ಅಸ್ಸಾಂ ಸರ್ಕಾರ 3-4 ಕೋಟಿ ರೂ.ಗಳನ್ನು ಮದರಸಾಗಳಿಗೆ ಖರ್ಚು ಮಾಡುತ್ತಿದೆ. 1 ಕೋಟಿ ರೂ.ಗಳನ್ನು ಸಂಸ್ಕೃತ ಶಾಲೆಗಳಿಗೆ ಪ್ರತಿ ವರ್ಷ ವ್ಯಯಿಸುತ್ತಿದೆ.

  • ಚೀನಾದಿಂದ ಬಂದಿದ್ದ 50 ಸಾವಿರ ಪಿಪಿಇ ಬಳಸಲ್ಲ: ಅಸ್ಸಾಂ ಸರ್ಕಾರ

    ಚೀನಾದಿಂದ ಬಂದಿದ್ದ 50 ಸಾವಿರ ಪಿಪಿಇ ಬಳಸಲ್ಲ: ಅಸ್ಸಾಂ ಸರ್ಕಾರ

    ಗುವಾಹಟಿ: ವೈದ್ಯರ ಬಳಕೆಗೆ ಚೀನಾದಿಂದ ಆಮದು ಮಾಡಿಕೊಂಡಿದ್ದ ಸುಮಾರು 50 ಸಾವಿರ ವೈಯಕ್ತಿಕ ಸುರಕ್ಷಾ ಸಾಧನಗಳನ್ನು(ಪಿಪಿಇ) ಅಸ್ಸಾಂ ಸರ್ಕಾರ ಬಳಕೆ ಮಾಡದಿರಲು ನಿರ್ಧರಿಸಿದೆ.

    ಏ.15 ರಂದು ರಾತ್ರಿ ಖಾಸಗಿ ಸರಕು ಸಾಗಣೆ ವಿಮಾನದ ಮೂಲಕ ಚೀನಾದಿಂದ ನೇರವಾಗಿ ಅಸ್ಸಾಂಗೆ ಪಿಪಿಇ ಬಂದಿಳಿತ್ತು. ಈ ಮೂಲಕ ಚೀನಾದಿಂದ ನೇರವಾಗಿ ಪಿಪಿಇಗಳನ್ನು ತರಿಸಿಕೊಂಡಿದ್ದ ಮೊದಲ ರಾಜ್ಯ ಅಸ್ಸಾಂ ಆಗಿತ್ತು.

    ಚೀನಾದಿಂದ ತರಿಸಿಕೊಳ್ಳುವುದಕ್ಕೂ ಮುನ್ನ ಅಸ್ಸಾಂ ನಲ್ಲಿ ಕೇವಲ 2 ಸಾವಿರ ಕಿಟ್ ಗಳಿದ್ದವು. ಭಾರತದ ಬೇರೆ ಬೇರೆ ರಾಜ್ಯಗಳಿಂದ ಅಸ್ಸಾಂ ಆರೋಗ್ಯ ಇಲಾಖೆ 1.50 ಲಕ್ಷ ಪಿಪಿಇ ಕಿಟ್‍ಗಳನ್ನು ತರಿಸಿಕೊಂಡಿತ್ತು.

    ಚೀನಾದ ಪಿಪಿಇ ಕಿಟ್ ಗಳ ಗುಣಮಟ್ಟದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಕೇಳಿಬಂದಿದೆ. ಕೆಲ ವೈದ್ಯರು ಪಿಪಿಯಿ ಕಿಟ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅವರಿಗೆ ತೊಂದರೆ ನೀಡಲು ನಾವು ಬಯುಸುವುದಿಲ್ಲ. ಹೀಗಾಗಿ ನಾವು ಚೀನಾ ಪಿಪಿಇ ಬಳಕೆ ಮಾಡದಿರಲು ನಿರ್ಧರಿಸಿದ್ದೇವೆ ಎಂದು ಎಂದು ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮ ತಿಳಿಸಿದ್ದಾರೆ.

    2 ಲಕ್ಷ ಪಿಪಿಇ ಕಿಟ್ ಸ್ಟಾಕ್ ಹೊಂದಿದ್ದೇವೆ. ಈಗ ನಾವು 1.50 ಲಕ್ಷ ಪಿಪಿಇ ಕಿಟ್ ಮೊದಲು ಬಳಕೆ ಮಾಡುತ್ತೇವೆ. ಚೀನಾದ 50 ಸಾವಿರ ಪಿಪಿಇ ಕಿಟ್ ಗಳನ್ನು ಗೋಡೌನ್ ನಲ್ಲಿ ಇಡುತ್ತೇವೆ. ಈ ಕಿಟ್ ಗಳ ಮಾದರಿಯನ್ನು ಗುಣಮಟ್ಟದ ಪರೀಕ್ಷೆಗೆ ಕಳುಹಿಸುತ್ತೇವೆ. ಮುಂದೆ ಅಗತ್ಯ ಬಿದ್ದರೆ ಈ ಕಿಟ್ ಬಳಕೆ ಮಾಡುತ್ತೇವೆ ಎಂದು ತಿಳಿಸಿದರು.