Tag: Himanta Biswa Sarma

  • ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮದರಸಾ ಸಂಪೂರ್ಣ ಬಂದ್: ಯತ್ನಾಳ್

    ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮದರಸಾ ಸಂಪೂರ್ಣ ಬಂದ್: ಯತ್ನಾಳ್

    ಬೆಳಗಾವಿ: ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ (BJP) ಅಧಿಕಾರಕ್ಕೆ ಬಂದರೆ ಮದರಸಾ ಸಂಪೂರ್ಣ ಬಂದ್ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದರು.

    ಬೆಳಗಾವಿಯಲ್ಲಿ (Belagavi) ಶಿವಚರಿತ್ರೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ರೀತಿ ಕರ್ನಾಟಕದಲ್ಲಿ ಮದರಸಾ ಬಂದ್ ಮಾಡುತ್ತೇವೆ ಎಂದ ಅವರು, ಇವತ್ತು ನಾನು ಬಸನಗೌಡ ಪಾಟೀಲ್ ಯತ್ನಾಳ್ ಆಗಿ ಉಳಿಯಲು ಶಿವಾಜಿ ಮಹಾರಾಜರು ಕಾರಣರಾಗಿದ್ದಾರೆ. ಇಲ್ಲವಾದರೆ ನಾನು ಬಶೀರ್ ಅಹ್ಮದ್ ಪಟೇಲ್ ಆಗಿರುತ್ತಿದ್ದೆ. ಅದೇ ರೀತಿ ಅಭಯ್ ಪಾಟೀಲ್, ಅಜರುದ್ದೀನ್ ಪಟೇಲ್ ಆಗಿ ಇರುತ್ತಿದ್ದರು ಎಂದರು.

    ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಹಾಡಿ ಹೊಗಳಿದ ಅವರು, ಅಸ್ಸಾಂ ಹಿಂದೂಸ್ತಾನ ಬಿಟ್ಟು ಹೋಗುವ ವಾತಾವರಣ ಇತ್ತು. ಆದರೆ ಹಿಮಂತ ಬಿಸ್ವಾ ಶರ್ಮಾರಿಂದ ಅಸ್ಸಾಂನಲ್ಲಿ ಹಿಂದೂಗಳು ಜೀವನ ಮಾಡಲು ಸಾಧ್ಯವಾಯಿತು ಎಂದ ಅವರು, ನನಗೊಬ್ಬರು ಶಿವಾಜಿ ಮಹಾರಾಜರ ಬಗ್ಗೆ ಮಾತನಾಡುತ್ತೀಯಾ ಅವರಿಗೆ ಹುಟ್ಟಿದಿಯಾ ಎಂದು ಹೇಳಿದ್ದರು. ಹೌದು ನಾನು ಶಿವಾಜಿ ಸಂತಾನವಾಗಿದ್ದು, ಟಿಪ್ಪು ಸುಲ್ತಾನನ ಸಂತಾನವಲ್ಲ ಎಂದು ಹೇಳಿದರು.

    ಕರ್ನಾಟಕದಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಹೇಳ್ತಾರೆ. ಆದರೆ ಟಿಪ್ಪು ಲಕ್ಷಾಂತರ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ. ಲಕ್ಷಾಂತರ ಹಿಂದೂಗಳನ್ನು ಮತಾಂತರ ಮಾಡಿದ. ಛತ್ರಪತಿ ಶಿವಾಜಿ ಮಹಾರಾಜರು ಯಾವುದೇ ಮುಸ್ಲಿಂ ಮಹಿಳೆ ಮೇಲೆ ಅತ್ಯಾಚಾರ ಮಾಡಿಲ್ಲ. ಹಾಗೇನಾದರೂ ಆದರೆ ಅವರ ಕೈಯನ್ನು ಕತ್ತರಿಸುತ್ತಿದ್ದರು. ಅವರು ಶಿವಾಜಿ ಮಹಾರಾಜರು ಎಂದರು. ಇದನ್ನೂ ಓದಿ: ಮೂಡಿಗೆರೆಯಲ್ಲಿ ಬಿಜೆಪಿ ಕಾರ್ಯಕರ್ತರ ಆಕ್ರೋಶ – ಕಣ್ಣೀರಿಟ್ಟ ಕುಮಾರಸ್ವಾಮಿ

    ಇವತ್ತು ರೈಲ್ವೆ ನಿಲ್ದಾಣದಲ್ಲಿ ಉರ್ದು ಬೋರ್ಡ್ ಬರೆದರೆ ಕೇಳಲ್ಲ. ಹಿಂದಿ ಬೋರ್ಡ್ ಬರೆದರೆ ಕೇಳುತ್ತಾರೆ. ಆದರೆ ಹಿಂದಿ ವಿರೋಧಗಳ ಬಳಿ ಧಮ್ ಇದ್ರೆ ಕಲಬುರಗಿ ರೇಲ್ವೆ ನಿಲ್ದಾಣದ ಮೇಲಿನ ಉರ್ದು ಬೋರ್ಡ್ ತಗೀರಿ ಎಂದು ಹೇಳಿದ್ದೇನೆ. ಅದಕ್ಕೆ ಕೆಲವರು ಉತ್ತರ ಭಾರತದ ಚೇಲಾಗಳು ಅಂತಾರೆ. ನಾವು ಯಾರ ಚೇಲಾಗಳು ಅಲ್ಲ, ಹಿಂದೂಸ್ತಾನದ ಚೇಲಾಗಳು, ಹಿಂದೂಗಳಾಗಿದ್ದೇವೆ ಎಂದು ತಿಳಿಸಿದರು.

    ಈ ಹಿಂದೂಸ್ತಾನ ಹೊಸ ಹಿಂದೂಸ್ತಾನ ಮೋದಿ ಹಿಂದೂಸ್ತಾನವಾಗಿದೆ. ಪಾಕಿಸ್ತಾನದಲ್ಲಿ ಮೋದಿ ಎಷ್ಟು ಕೆಲಸ ಮಾಡ್ತಿದ್ದಾರೆ ಅಂತಿದ್ದಾರೆ. ಆದರೆ ಇಲ್ಲಿರುವವರೆ ನಮ್ಮ ಅನ್ನ ತಿಂದು, ನೀರು ಕುಡಿದು ಪಾಕಿಸ್ತಾನ ಪರ ಘೋಷಣೆ ಹಾಕ್ತಾರೆ. ವಿಜಯಪುರದಲ್ಲಿ ಎರಡೂವರೆ ಲಕ್ಷ ಮತದಲ್ಲಿ 1 ಲಕ್ಷ 3 ಸಾವಿರ ಟಿಪ್ಪು ಸುಲ್ತಾನ್ ಇದ್ದಾರೆ. ಶಿವಾಜಿ ಮಹಾರಾಜರ ಕನಸು ಹಿಂದವಿ ಸಾಮ್ರಾಜ್ಯ ಇತ್ತು, ಮರಾಠ ಸಾಮ್ರಾಜ್ಯ ಅಲ್ಲ. ಇದರಿಂದ ಮರಾಠಿ, ಕನ್ನಡ ಸಲುವಾಗಿ ಹೋರಾಡೋದು ಬೇಡ, ಅದು ಮುಗಿದಿದೆ ಈಗ. ಈಗ ಏನಿದ್ರು ಹಿಂದೂ, ನಾವೆಲ್ಲ ಹಿಂದೂಗಳಾಗಿ ಇದ್ರೆ ಭಾರತ ಉಳಿಯುತ್ತದೆ. ಇಲ್ಲವಾದ್ರೆ ಉರ್ದು ಕಲಿಯಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಇಂದು ಕಾಂಗ್ರೆಸ್‍ನ 150 ಅಭ್ಯರ್ಥಿಗಳ ಮೊದಲ ಪಟ್ಟಿ – ಯಾರಿಗೆ ಎಲ್ಲಿ ಟಿಕೆಟ್‌?

  • ಪವನ್ ಖೇರಾ ಕ್ಷಮೆಯಾಚಿಸಿದ್ದಾರೆ: ಅಸ್ಸಾಂ ಸಿಎಂ

    ಪವನ್ ಖೇರಾ ಕ್ಷಮೆಯಾಚಿಸಿದ್ದಾರೆ: ಅಸ್ಸಾಂ ಸಿಎಂ

    ದಿಸ್ಪುರ್: ಕಾಂಗ್ರೆಸ್ ಮುಖಂಡ ಪವನ್ ಖೇರಾ (Pawan Khera) ಅವರ ಬಂಧನ ಹಾಗೂ ಬಿಡುಗಡೆಯ ಬಳಿಕ ಅವರು ನೀಡಿದ್ದ ಹೇಳಿಕೆಗೆ ಬೆಷರತ್ ಕ್ಷಮೆ ಯಾಚಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಯಾರು ಗೌರವಕ್ಕೆ ಧಕ್ಕೆ ಬರುವಂತಹ ಯಾವ ಪದಗಳನ್ನು ಬಳಸುವದಿಲ್ಲ ಎಂದು ನಾವು ಭಾವಿಸುತ್ತೇವೆ ಎಂದು ಅಸ್ಸಾಂ (Assam) ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ಶುಕ್ರವಾರ ಟ್ವೀಟ್ ಮಾಡಿದ್ದಾರೆ.

    ರಾಯ್‍ಪುರದ (Raipur) ಕಾಂಗ್ರೆಸ್ ಮಾಹಾಧಿವೇಶನಕ್ಕೆ (Congress plenary session) ತೆರಳಲು ವಿಮಾನವೇರಿದ್ದ ಪವನ್ ಖೇರಾ ಅವರನ್ನು ಅಸ್ಸಾಂ ಪೊಲೀಸರು ಗುರುವಾರ ಬಂಧಿಸಿದ್ದರು. ಖೇರಾ ಅವರ ವಿರುದ್ಧ ಕ್ರಿಮಿನಲ್ ಸಂಚು, ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಕೋಮು ಸೌಹಾರ್ದತೆಗೆ ಪ್ರಚೋದಿಸಿದ ಆರೋಪ ದಾಖಲಿಸಲಾಗಿದೆ ಎಂದು ಅಸ್ಸಾಂ ಪೊಲೀಸ್ ಐಜಿಪಿ ಮತ್ತು ವಕ್ತಾರ ಪ್ರಶಾಂತ ಕುಮಾರ್ ಭುಯಾನ್ ತಿಳಿಸಿದ್ದರು. ಇದನ್ನೂ ಓದಿ: ಸಿಟಿ ರವಿಗೆ ಮೂಳೆ ಬಿರಿಯಾನಿ, ಚಿಕನ್ ಪಾರ್ಸೆಲ್ ಮಾಡಿದ ಕೈ ಪಡೆ

     ಮುಂಬೈನ ಪತ್ರಿಕಾಗೋಷ್ಠಿಯೊಂದರಲ್ಲಿ ಫೆ.17ರಂದು ಖೇರಾ, ನರೇಂದ್ರ ಗೌತಮ್‍ದಾಸ್ ಮೋದಿ ಎಂದು ಉಚ್ಛರಿಸಿ ಬಳಿಕ ನರೇಂದ್ರ ದಾಮೋದರ ದಾಸ್ ಮೋದಿ (Narendra Modi) ಎಂದಿದ್ದರು. ಅಸ್ಸಾಂ ಪೊಲೀಸರು ಬಂಧಿಸಿದ ಕೂಡಲೇ ವಕೀಲರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ತುರ್ತು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಇದನ್ನೂ ಓದಿ: ಹಾಸನದ ಜೆಡಿಎಸ್ ಟಿಕೆಟ್ ಗೊಂದಲಕ್ಕೆ ತೆರೆ ಎಳೆಯಲು ಹೆಚ್‌ಡಿಕೆ ಮಾಸ್ಟರ್ ಪ್ಲಾನ್

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಲ್ಯ ವಿವಾಹದ ವಿರುದ್ಧ ಅಸ್ಸಾಂ ಸರ್ಕಾರ ಸಮರ – ಪತಿ, ಪುತ್ರರ ಬಂಧನ ವಿರೋಧಿಸಿ ಬೀದಿಗಿಳಿದ ಮಹಿಳೆಯರು

    ಬಾಲ್ಯ ವಿವಾಹದ ವಿರುದ್ಧ ಅಸ್ಸಾಂ ಸರ್ಕಾರ ಸಮರ – ಪತಿ, ಪುತ್ರರ ಬಂಧನ ವಿರೋಧಿಸಿ ಬೀದಿಗಿಳಿದ ಮಹಿಳೆಯರು

    ದಿಸ್ಪುರ್: ಬಾಲ್ಯವಿವಾಹ (Child Marriage) ತಡೆಗೆ ಅಸ್ಸಾಂ ಸರ್ಕಾರ ಕಠಿಣ ಕಾರ್ಯಾಚರಣೆ ಕೈಗೊಂಡಿದೆ. ಬಾಲ್ಯ ವಿವಾಹದ ವಿರುದ್ಧ ಸಮರ ಸಾರಿರುವ ಪೊಲೀಸರು (Assam Police) 2 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಈ ಕ್ರಮ ವಿರೋಧಿಸಿ ರಾಜ್ಯದ ವಿವಿಧೆಡೆ ಹೆಚ್ಚಿನ ಸಂಖ್ಯೆಯ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ (Protest) ನಡೆಸುತ್ತಿದ್ದಾರೆ.

    ತಮ್ಮ ಪತಿ ಹಾಗೂ ಪುತ್ರರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದಾರೆ. ಕುಟುಂಬ ಆರ್ಥಿಕ ನಿರ್ವಹಣೆಗೆ ಬೇರೆ ದಾರಿಯಿಲ್ಲ, ಪುರುಷರನ್ನು ಮಾತ್ರ ಏಕೆ ಬಂಧಿಸಬೇಕು? ನಾವು ನಮ್ಮ ಮಕ್ಕಳು ಬದುಕುವುದಾದರೂ ಹೇಗೆ? ಎಂದು ಮಹಿಳೆಯರು ಪ್ರಶ್ನಿಸುತ್ತಿದ್ದಾರೆ.

    ಇದೇ ವೇಳೆ ಮಹಿಳೆಯೊಬ್ಬರು `ನನ್ನ ಮಗ ಅಪ್ರಾಪ್ತ ಬಾಲಕಿಯೊಂದಿಗೆ ಓಡಿಹೋಗಿದ್ದಾನೆ. ಅವನು ತಪ್ಪು ಮಾಡಿದ್ದಾನೆ ನಿಜ. ಅದಕ್ಕಾಗಿ ನನ್ನ ಗಂಡನನ್ನ ಏಕೆ ಬಂಧಿಸಬೇಕು? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳಿಗೆ ಬಿಗ್ ಅಪ್‌ಡೇಟ್ ಕೊಟ್ಟ `ಮೌರ್ಯ’ ನಾಯಕಿ ಮೀರಾ ಜಾಸ್ಮಿನ್

    ಇದೇ ವೇಳೆ ಹೇಸರು ಹೇಳಲಿಚ್ಚಿಸದ ಮಹಿಳೆ, ನನ್ನ ಸೊಸೆ ಮದುವೆಯಾದಾಗ 17 ವರ್ಷ, ಈಗ ಅವಳಿಗೆ 19 ವರ್ಷವಾಗಿದೆ. ಆಕೆ 5 ತಿಂಗಳ ಗರ್ಭಿಣಿಯಾಗಿದ್ದಾಳೆ (Pregnant Women). ಪತಿಯನ್ನ ಜೈಲಿಗೆ ಎಳೆದುಕೊಂಡು ಹೋದ್ರೆ ಅವಳನ್ನ ಯಾರು ನೋಡಿಕೊಳ್ತಾರೆ ಎಂದಿದ್ದಾರೆ.

    ಬಾಲ್ಯ ವಿವಾಹ ತಡೆಗೆ ಕಠಿಣ ಕಾರ್ಯಾಚರಣೆ ಕೈಗೊಂಡಿರುವ ಅಸ್ಸಾಂ ಪೊಲೀಸರು ಈಗಾಗಲೇ 2000ಕ್ಕೂ ಹೆಚ್ಚು ಮಂದಿಯನ್ನ ಬಂಧಿಸಿದ್ದಾರೆ. ಜನವರಿ 23ರಂದು ಸಚಿವ ಸಂಪುಟದಲ್ಲಿ ಅಸ್ಸಾಂ ಸರ್ಕಾರ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದು, 10 ದಿನಗಳಲ್ಲೇ 4,004 ಕೇಸ್‌ಗಳು ದಾಖಲಾಗಿವೆ. 8 ಸಾವಿರ ಆರೋಪಿ ಪಟ್ಟಿಗಳನ್ನು ಹೊಂದಿರುವ ಪೊಲೀಸರು ಒಬ್ಬೊಬ್ಬರನ್ನೂ ಬಂಧಿಸುತ್ತಿದ್ದಾರೆ. ಈಗಾಗಲೇ 2 ಸಾವಿರಕ್ಕೂ ಅಧಿಕ ಮಂದಿಯನ್ನ ಜೈಲಿಗಟ್ಟಿದ್ದಾರೆ. ಅವರಲ್ಲಿ ಧಾರ್ಮಿಕ ಸಂಸ್ಥೆಗಳಲ್ಲಿ ವಿವಾಹ ಕಾರ್ಯಕ್ರಮ ನಡೆಸಿದ 51 ಪುರೋಹಿತರೂ ಇದ್ದಾರೆ.

    14 ವರ್ಷದೊಳಗಿನ ಹುಡುಗಿಯರನ್ನ ಮದುವೆಯಾದವರ ವಿರುದ್ಧ ಪೋಕ್ಸೋ (POCSO) ಕೇಸ್ ಹಾಗೂ 14 ರಿಂದ 18 ವರ್ಷದೊಳಗಿನ ಹುಡುಗಿಯರನ್ನು ಮದುವೆಯಾಗಿದ್ರೆ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಅಡಿಯಲ್ಲಿ ಪ್ರಕರಣ ದಾಖಲಿಸಲು ಸಚಿವ ಸಂಪುಟ ನಿರ್ಧರಿಸಿತ್ತು. ಇದನ್ನೂ ಓದಿ: ತುಮಕೂರಿನ HAL ಭಾರತದಲ್ಲೇ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಕೇಂದ್ರ – ಏನಿದರ ವೈಶಿಷ್ಟ್ಯ?

    ಅಸ್ಸಾಂನಲ್ಲಿ ತಾಯಂದಿರು ಹಾಗೂ ಶಿಶುಗಳ ಮರಣ ಪ್ರಮಾಣ ಹೆಚ್ಚಾಗಲು ಬಾಲ್ಯವಿವಾಹವು ಪ್ರಾಥಮಿಕ ಕಾರಣವಾಗಿದೆ. ರಾಜ್ಯದಲ್ಲಿ ನೋಂದಣಿಯಾದ ಶೇ.31ರಷ್ಟು ವಿವಾಹಗಳು ನಿಷೇಧಿತ ವಯೋಮಿತಿಯಲ್ಲಿವೆ ಎಂದು ಗುರುತಿಸಲಾಗಿದೆ. ಇನ್ನೂ 6 ದಿನಗಳ ಕಾಲ ಈ ಕಾರ್ಯಾರಣೆ ಮುಂದುವರಿಯಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾತ್ರಿ 2 ಗಂಟೆಗೆ ಅಸ್ಸಾಂ ಸಿಎಂಗೆ ಶಾರುಖ್‌ ಖಾನ್‌ ಫೋನ್‌ ಕಾಲ್‌

    ರಾತ್ರಿ 2 ಗಂಟೆಗೆ ಅಸ್ಸಾಂ ಸಿಎಂಗೆ ಶಾರುಖ್‌ ಖಾನ್‌ ಫೋನ್‌ ಕಾಲ್‌

    ಸ್ಸಾಂ ಗುವಾಹಟಿಯಲ್ಲಿ `ಪಠಾಣ್’ (Pathaan) ಸಿನಿಮಾ ವಿರುದ್ಧ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. `ಪಠಾಣ್’ ಚಿತ್ರಕ್ಕೆ ತೊಂದರೆಯಾಗುತ್ತಿರುವ ಬೆನ್ನಲ್ಲೇ ಅಸ್ಸಾಂ ಸಿಎಂಗೆ (Assam Cm) ಬಾಲಿವುಡ್ ನಟ ಶಾರುಖ್ ಖಾನ್ (Sharukh Khan) ಫೋನ್ ಕಾಲ್ ಮಾಡಿದ್ದಾರೆ.

    ಇತ್ತೀಚೆಗಷ್ಟೇ ಹಿಂದಿ ಸಿನಿಮಾಗಳ ಬಗ್ಗೆ ಟೀಕೆ ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ (Naredra Modi) ಅವರು ತಿಳಿಸಿದ್ದರು. ಈ ಬಗ್ಗೆ ಬಿಜೆಪಿ ಕಾರ್ಯಕರ್ತರಿಗೆ ಆದೇಶ ನೀಡಿದ್ದರು. ಈ ಬೆನ್ನಲ್ಲೇ ಗುವಾಹಟಿಯಲ್ಲಿ `ಪಠಾಣ್’ ಸಿನಿಮಾಗೆ ತೊಂದರೆಯಾಗಿದೆ. ಶಾರುಖ್‌ ಚಿತ್ರದ ವಿರುದ್ಧ ಹಿಂದೂ ಪರ ಸಂಘಟನೆಗಳು ನಿಂತಿದ್ದಾರೆ. ಚಿತ್ರದ ಪೋಸ್ಟರ್‌ಗಳನ್ನ ಹರಿದು ಹಾಕಿದ್ದಾರೆ. ಗುವಾಹಟಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿ ಅಸ್ಸಾಂ ಸಿಎಂ ಬಳಿ ಶಾರುಖ್ ಫೋನ್‌ ಕಾಲ್‌ ಮೂಲಕ ಮಾತನಾಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ಮೂಲಕ ಸಿಎಂ ಹಿಮಂತ್ ಬಿಸ್ವ (Himanta Biswa) ಖಚಿತಪಡಿಸಿದ್ದಾರೆ. ಇದನ್ನೂ ಓದಿ: `ಕೆಜಿಎಫ್ 2′ ನಟಿ ರವೀನಾ ಟಂಡನ್ ಪುತ್ರಿ ರಾಶಾ ಬಾಲಿವುಡ್‌ಗೆ ಎಂಟ್ರಿ

    ಬಾಲಿವುಡ್ ನಟ ಶಾರುಖ್ ಖಾನ್ ಬೆಳಿಗ್ಗೆ 2 ಗಂಟೆಗೆ ಕರೆ ಮಾಡಿದ್ದರು. ಪಠಾಣ್ ಸಿನಿಮಾ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಗುವಾಹಟಿಯಲ್ಲಿ ಘಟನೆ ಬಗ್ಗೆ ನಟ ಆತಂಕ ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಹೊಣೆಯಾಗಿದೆ. ಇಂಥ ಅಹಿತಕರ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಸ್ಸಾಮ್ ಸಿಎಂ ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಇತ್ತೀಚೆಗೆ ಶಾರುಖ್ ಖಾನ್ ಕರೆ ಮಾಡುವ ಮೊದಲೇ, ಶಾರುಖ್ ಖಾನ್ ಎಂದರೆ ಯಾರು ಎಂದು ಅಸ್ಸಾಂ ಸಿಎಂ ಪ್ರಶ್ನೆ ಮಾಡಿದ್ದರು. ʻಪಠಾಣ್ʼ ಸಿನಿಮಾ ವಿರುದ್ಧ ಹಿಂದೂ ಸಂಘಟನೆಗಳು ಪ್ರತಿಭಟನೆ ಕುರಿತು ಸುದ್ದಿಗಾರರ ಪ್ರಶ್ನೆ ಅಚ್ಚರಿಯ ಉತ್ತರ ನೀಡಿದ್ದರು. ಶಾರುಖ್ ಆಗಲಿ, ಅವರ ಸಿನಿಮಾಗಳ ಬಗ್ಗೆಯಾಗಲಿ ನನಗೇನು ಗೊತ್ತಿಲ್ಲ ಎಂದು ಸಿಎಂ ಉತ್ತರಿಸಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಜ್ಯದಲ್ಲಿ ಮದರಾಸಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತೇನೆ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

    ರಾಜ್ಯದಲ್ಲಿ ಮದರಾಸಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತೇನೆ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

    ಗುವಾಹಟಿ: ರಾಜ್ಯದಲ್ಲಿ ಮದರಾಸಗಳ (Madrassas) ಸಂಖ್ಯೆಯನ್ನು ಕಡಿಮೆ ಮಾಡಿ ಅವುಗಳನ್ನು ನೋಂದಣಿ ಮಾಡುವ ಬಗ್ಗೆ ಚಿಂತಿಸಲಾಗಿದೆ ಎಂದು ಅಸ್ಸಾಂ (Assam) ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಹೇಳಿದ್ದಾರೆ.

    ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು, ಮೊದಲನೆಯದಾಗಿ ನಾವು ಅಸ್ಸಾಂನಲ್ಲಿರುವ ಮದರಾಸಗಳ ಸಂಖ್ಯೆಯನ್ನು ಇಳಿಕೆ ಮಾಡಲು ತಯಾರಿ ನಡೆಸಿದ್ದೇವೆ. ಮದರಾಸಗಳಲ್ಲಿ ಸಾಮಾನ್ಯ ಶಿಕ್ಷಣವನ್ನು (General Education) ಬೋಧಿಸಲು ಕ್ರಮ ವಹಿಸುತ್ತೇವೆ. ಜೊತೆಗೆ ಮದರಾಸಗಳನ್ನು ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಮೂತ್ರ ವಿಸರ್ಜನೆ ಕೇಸ್‌ನಲ್ಲಿ ಪೈಲಟ್‌ ಬಲಿಪಶು – ಏರ್‌ ಇಂಡಿಯಾ ಪೈಲಟ್‌ ಒಕ್ಕೂಟ

    ನಮ್ಮ ಸರ್ಕಾರ ಅಲ್ಪಸಂಖ್ಯಾತ ಸಮುದಾಯದ ಜೊತೆ ಸೇರಿ ಕೆಲಸ ಮಾಡುತ್ತಿದೆ. ಅವರೂ ಕೂಡ ಸರ್ಕಾರದೊಂದಿಗೆ ಕೈಜೋಡಿಸುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಜಲ್ಲಿಕಟ್ಟು ಸ್ಪರ್ಧೆ – ಹೋರಿ ತಿವಿದು ಮೃತಪಟ್ಟ ಬಾಲಕ

    ASSAM MADARASA MADRASA

    ಕೆಲದಿನಗಳ ಹಿಂದೆ ಅಸ್ಸಾಂನ ಪೊಲೀಸ್ ಮಹಾನಿರ್ದೇಶಕ (DGP) ಭಾಸ್ಕರ್ ಜ್ಯೋತಿ ಮಹಂತ್, ರಾಜ್ಯದಲ್ಲಿನ ಮದರಸಾಗಳಲ್ಲಿ ಸುಧಾರಣೆಗಳನ್ನು ತರುವ ಕುರಿತು ಚರ್ಚೆಗಳು ನಡೆಯುತ್ತಿವೆ. ಅಸ್ಸಾಂನಲ್ಲಿ ಮದರಸಾಗಳು ಸರಿಯಾಗಿ ನಡೆಯುತ್ತಿವೆ. ನಾವು ಮದರಸಾಗಳನ್ನು ನಡೆಸುತ್ತಿರುವ 68 ಜನರೊಂದಿಗೆ ಸಂವಾದ ನಡೆಸಿದ್ದೇವೆ. ಅವರ ಸಲಹೆ ಸೂಚನೆಗಳೊಂದಿಗೆ ಸಣ್ಣ ಮದರಾಸಗಳನ್ನೂ ದೊಡ್ಡ ಮದರಾಸಗಳೊಂದಿಗೆ ವಿಲೀನಗೊಳಿಸಲು ಚಿಂತಿಸಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದರು. ಇದೀಗ ಸಿಎಂ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿ ಮದರಾಸಗಳ ವಿಲೀನದ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮುಸ್ಲಿಂ ವಿದ್ಯಾವಂತರ‍್ಯಾರೂ ನಾಲ್ಕು ಮದುವೆಯಾಗಲ್ಲ – ನಿತಿನ್ ಗಡ್ಕರಿ

    ಮುಸ್ಲಿಂ ವಿದ್ಯಾವಂತರ‍್ಯಾರೂ ನಾಲ್ಕು ಮದುವೆಯಾಗಲ್ಲ – ನಿತಿನ್ ಗಡ್ಕರಿ

    ದಿಸ್ಪುರ್: ವಿಶ್ವದಲ್ಲಿ ಎರಡು ನಾಗರಿಕ ಸಂಹಿತೆಯನ್ನು (UCC) ಹೊಂದಿರುವ ಮುಸ್ಲಿಂ ರಾಷ್ಟ್ರ (Muslims Nations) ಯಾವುದೂ ಇಲ್ಲ. ಮುಸ್ಲಿಂ ಸಮುದಾಯದಲ್ಲಿರುವ (Muslims Community) ಪ್ರಗತಿಪರ ಹಾಗೂ ವಿದ್ಯಾವಂತರ‍್ಯಾರೂ ನಾಲ್ಕು ಬಾರಿ ಮದುವೆಯಾಗುವುದಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಸ್ಪಷ್ಟನೆ ನೀಡಿದ್ದಾರೆ.

    ಖಾಸಗಿ ವಾಹಿನಿಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ, `ಮುಸ್ಲಿಂ ಪುರುಷರು 3-4 ಮದುವೆಯಾಗುವ (Marriage) ವ್ಯವಸ್ಥೆ ಬದಲಿಸಿ ಮಹಿಳೆಯರಿಗೆ (Muslims Women) ನ್ಯಾಯ ಒದಗಿಸಬೇಕು’ ಎನ್ನುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು. ಇದೇ ವೇಳೆ ಏಕರೂಪ ನಾಗರಿಕ ಸಂಹಿತೆ (UCC) ಕುರಿತ ಪ್ರಶ್ನೆಗೆ ಉತ್ತರಿಸಿ, ನಾಲ್ವರು ಪತ್ನಿಯರನ್ನ ಹೊಂದುವುದು ಅಸ್ವಾಭಾವಿಕ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಪುರುಷರು 3-4 ಮದುವೆಯಾಗುವ ವ್ಯವಸ್ಥೆ ಬದಲಿಸಿ ಮಹಿಳೆಯರಿಗೆ ನ್ಯಾಯ ಒದಗಿಸಬೇಕು: ಹಿಮಂತ ಶರ್ಮಾ

    ಎರಡು ನಾಗರಿಕ ಸಂಹಿತೆ ಹೊಂದಿದ ಮುಸ್ಲಿಂ ರಾಷ್ಟ್ರ ಯಾವುದಾದರೂ ಇದೆಯೇ? ಒಬ್ಬ ಪುರುಷ ಓರ್ವ ಮಹಿಳೆಯನ್ನು ಮದುವೆಯಾದರೆ ಅದು ಸಹಜ. ಆದ್ರೆ ಒಬ್ಬ ಪುರುಷ ನಾಲ್ವರು ಮಹಿಳೆಯರನ್ನ ಮದುವೆಯಾದ್ರೆ ಅದು ಅಸಹಜ. ಮುಸ್ಲಿಂ ಸಮುದಾಯದಲ್ಲಿರುವ ಪ್ರಗತಿಪರ ಹಾಗೂ ವಿದ್ಯಾವಂತರ‍್ಯಾರೂ ನಾಲ್ಕು ಬಾರಿ ಮದುವೆಯಾಗುವುದಿಲ್ಲ. ಹಾಗೆಯೇ ಏಕರೂಪ ನಾಗರಿಕ ಸಂಹಿತೆ ಯಾವುದೇ ಒಂದು ಧರ್ಮಕ್ಕೆ ವಿರುದ್ಧವಾಗಿಲ್ಲ. ಅದು ರಾಷ್ಟ್ರದ ಅಭಿವೃದ್ಧಿಗಾಗಿ ಇದೆ. ಆದ್ದರಿಂದ ಸಂಹಿತೆಯನ್ನು ರಾಜಕೀಯ ದೃಷ್ಟಿಕೋನದಿಂದ ನೋಡದೇ ಈ ದೇಶದ ಬಡವರಿಗೆ ಪ್ರಯೋಜನ ನೀಡುತ್ತದೆ ಎಂಬುದನ್ನು ನೋಡಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಬೆಳಗಾವಿ ಗಡಿ ವಿವಾದ: ಅಮಿತ್ ಶಾ ಭೇಟಿಯಾದ ಮಹಾರಾಷ್ಟ್ರ ಸಂಸದರು – ರಾಜ್ಯ ಸಂಸದರ ದಿವ್ಯ ಮೌನ

    Live Tv
    [brid partner=56869869 player=32851 video=960834 autoplay=true]

  • ಮುಸ್ಲಿಂ ಪುರುಷರು 3-4 ಮದುವೆಯಾಗುವ ವ್ಯವಸ್ಥೆ ಬದಲಿಸಿ ಮಹಿಳೆಯರಿಗೆ ನ್ಯಾಯ ಒದಗಿಸಬೇಕು: ಹಿಮಂತ ಶರ್ಮಾ

    ಮುಸ್ಲಿಂ ಪುರುಷರು 3-4 ಮದುವೆಯಾಗುವ ವ್ಯವಸ್ಥೆ ಬದಲಿಸಿ ಮಹಿಳೆಯರಿಗೆ ನ್ಯಾಯ ಒದಗಿಸಬೇಕು: ಹಿಮಂತ ಶರ್ಮಾ

    ದಿಸ್ಪುರ್: ಮುಸ್ಲಿಂ ಮಹಿಳೆಯರಿಗೆ (Muslim Woman) ನ್ಯಾಯ ಒದಗಿಸಬೇಕೆಂದರೆ ಮುಸ್ಲಿಂ ಪುರುಷರು 3-4 ಮಹಿಳೆಯರನ್ನು ಮದುವೆಯಾಗುವ (Marriage) ವ್ಯವಸ್ಥೆಯನ್ನು ಬದಲಾಯಿಸುವ ಅಗತ್ಯವಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಂತ ಬಿಸ್ವಾ ಶರ್ಮಾ (Himanta Biswa Sarma) ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ (Badruddin Ajmal) ವಿರುದ್ಧ ವಾಗ್ದಾಳಿ ನಡೆಸಿದರು.

    ಸ್ವತಂತ್ರ ಭಾರತದಲ್ಲಿ ವಾಸಿಸುವ ಪುರುಷನಿಗೆ ಹಿಂದಿನ ಪತ್ನಿಗೆ ವಿಚ್ಛೇದನ ನೀಡದೇ 3-4 ಮಹಿಳೆಯರನ್ನು ಮದುವೆಯಾಗುವ ಯಾವುದೇ ಹಕ್ಕಿಲ್ಲ. ನಾವು ಅಂತಹ ವ್ಯವಸ್ಥೆಯನ್ನು ಬದಲಾಯಿಸಬೇಕಾಗಿದೆ. ನಾವು ನ್ಯಾಯವನ್ನು ನೀಡಲು ಪ್ರಯತ್ನಿಸಬೇಕು. ಮುಸ್ಲಿಂ ಹೆಂಗಸರು, ಮುಸ್ಲಿಂ ಹುಡುಗಿಯರು ಹಿಜಬ್ ಧರಿಸಲು ಕೇಳುತ್ತಾರೆ. ಹುಡುಗರು ಕೂಡಾ ಅದನ್ನೇ ಯಾಕೆ ಧರಿಸಬಾರದು? ಮುಸ್ಲಿಂ ಹುಡುಗಿಯರು ಶಾಲೆಗಳಲ್ಲಿ ಯಾಕೆ ಓದಬಾರದು? ನಾವು ಈ ವ್ಯವಸ್ಥೆಗೆ ವಿರುದ್ಧವಾಗಿದ್ದೇವೆ ಎಂದು ಕಿಡಿಕಾರಿದರು.

    ಅಸ್ಸಾಂನಲ್ಲಿ ಬದ್ರುದ್ದೀನ್ ಅಜ್ಮಲ್ ಅವರಂತಹ ಕೆಲವು ನಾಯಕರು ಇದ್ದಾರೆ. ಅವರು ಮಹಿಳೆಯರಿಗೆ ಆದಷ್ಟು ಬೇಗ ಮದುವೆಯಾಗಿ ಮಕ್ಕಳಿಗೆ ಜನ್ಮ ನೀಡಬೇಕು ಎಂದು ಹೇಳಿದ್ದಾರೆ. ಭೂಮಿ ಫಲವತ್ತಾಗಿದ್ದರೆ ಮಾತ್ರ ಉತ್ತಮ ಬೆಳೆ ನೀಡಲು ಸಾಧ್ಯ ಎಂದು ಹೇಳಿ ಮಹಿಳೆಯ ಹೆರಿಗೆ ಪ್ರಕ್ರಿಯೆಯನ್ನು ಹೊಲಕ್ಕೆ ಹೋಲಿಸಿದ್ದಾರೆ. ಈ ರೀತಿ ಹೇಳಿಕೆ ನೀಡಲು ಹೇಗೆ ಸಾಧ್ಯ? ನಮ್ಮ ಮಹಿಳೆಯರು 20-25 ಮಕ್ಕಳಿಗೆ ಜನ್ಮ ನೀಡಬಹುದು. ಆದರೆ ಅವರ ಆಹಾರ, ಬಟ್ಟೆ, ಶಿಕ್ಷಣ ಹಾಗೂ ಇತರ ಎಲ್ಲಾ ವೆಚ್ಚಗಳನ್ನೂ ಅಜ್ಮಲ್ ಅವರೇ ಭರಿಸಬೇಕು. ಹೀಗಾದರೆ ನಮಗೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಬುರ್ಕಾ ಧರಿಸಿ ಐಟಂ ಸಾಂಗ್‌ಗೆ ಸ್ಟೆಪ್ – ನಾಲ್ವರು ಮುಸ್ಲಿಂ ವಿದ್ಯಾರ್ಥಿಗಳು ಅಮಾನತು

    ಮಹಿಳೆಯರ ವೆಚ್ಚವನ್ನು ಪಾವತಿಸಲಾಗದವರಿಗೆ ಮಹಿಳೆಯರ ಹೆರಿಗೆಯ ಕುರಿತು ಉಪನ್ಯಾಸ ನೀಡುವ ಹಕ್ಕು ಯಾರಿಗೂ ಇಲ್ಲ. ನಾವು ನಮ್ಮ ಕೈಲಾದಷ್ಟು ಆಹಾರವನ್ನು ಒದಗಿಸಲು ಹಾಗೂ ಉತ್ತಮ ಮನುಷ್ಯರನ್ನಾಗಿ ಮಾಡಲು ಸಾಧ್ಯವಾಗುವಷ್ಟು ಮಕ್ಕಳಿಗೆ ಮಾತ್ರವೇ ಜನ್ಮ ನೀಡುತ್ತೇವೆ ಎಂದು ಬಿಸ್ವಾ ಶರ್ಮಾ ಟಾಂಗ್ ನೀಡಿದರು. ಇದನ್ನೂ ಓದಿ: ಇಸ್ಲಾಂ ಹುಟ್ಟುವ ಮುಂಚೆಯೇ ಚಂದ್ರದ್ರೋಣ ಪರ್ವತಗಳ ಸಾಲಲ್ಲಿ ದತ್ತಪೀಠವಿತ್ತು – ಸಿ.ಟಿ ರವಿ

    Live Tv
    [brid partner=56869869 player=32851 video=960834 autoplay=true]

  • ಭೂಮಿ ಫಲವತ್ತಾಗಿದ್ರೆ ಉತ್ತಮ ಬೆಳೆ – ಚಿಕ್ಕವಯಸ್ಸಿಗೆ ಮದುವೆ ಮಾಡುವಂತೆ ಹಿಂದೂಗಳಿಗೆ ಬದ್ರುದ್ದೀನ್ ಸಲಹೆ

    ಭೂಮಿ ಫಲವತ್ತಾಗಿದ್ರೆ ಉತ್ತಮ ಬೆಳೆ – ಚಿಕ್ಕವಯಸ್ಸಿಗೆ ಮದುವೆ ಮಾಡುವಂತೆ ಹಿಂದೂಗಳಿಗೆ ಬದ್ರುದ್ದೀನ್ ಸಲಹೆ

    ನವದೆಹಲಿ: ಹಿಂದೂಗಳು ಮುಸ್ಲಿಂ ಸೂತ್ರವನ್ನು ಅಳವಡಿಸಿಕೊಳ್ಳಬೇಕು. ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಬೇಕು ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ (Badruddin Ajmal) ಸಲಹೆ ನೀಡಿ ವಿವಾದಕ್ಕೀಡಾಗಿದ್ದಾರೆ.

    ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಸ್ಲಿಂ (Muslims) ಪುರುಷರು 20 ರಿಂದ 22ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಮುಸ್ಲಿಂ ಮಹಿಳೆಯರು ಸಹ ಸರ್ಕಾರದ ಅನುಮತಿ ಮೇರೆಗೆ 18ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಆದ್ರೆ ಹಿಂದೂಗಳು ಮದುವೆಗೆ ಮುನ್ನ ಒಬ್ಬೊಬ್ಬರು ಎರಡು ಅಥವಾ ಮೂರು ಅಕ್ರಮ ಸಂಬಂಧಗಳನ್ನು ಇಟ್ಟುಕೊಳ್ಳುತ್ತಾರೆ. ಅವರು ಮಕ್ಕಳನ್ನು ಹೆರುವುದಿಲ್ಲ, ಜೀವನವನ್ನು ಆನಂದಿಸಿ ಹಣ ಉಳಿಸುತ್ತಾರೆ ಅಷ್ಟೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನ್ನ ಹತ್ಯೆಗೆ ಸ್ಕೆಚ್ – ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಮುಖಂಡ ಗಂಭೀರ ಆರೋಪ

    ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿದೆ ಎಂಬ ಆರೋಪದ ಬಗ್ಗೆ ಮಾತನಾಡಿದ ಅಜ್ಮಲ್, 40 ವರ್ಷ ವಯಸ್ಸಿನ ನಂತರ ಹಿಂದೂಗಳು ಪೋಷಕರ ಒತ್ತಡದಲ್ಲಿ ಮದುವೆಯಾಗುತ್ತಾರೆ. ಹಾಗಾದ್ರೆ ಅವರು 40ರ ನಂತರ ಮಕ್ಕಳನ್ನು ಹೆರುತ್ತಾರೆ ಎಂದು ನೀವು ಹೇಗೆ ನಿರೀಕ್ಷಿಸುತ್ತೀರಿ? ಫಲವತ್ತಾದ ಭೂಮಿಯಲ್ಲಿ ಬಿತ್ತನೆ ಮಾಡಿದ್ರೆ ಮಾತ್ರ ಉತ್ತಮ ಬೆಳೆಗಳನ್ನು ಬೆಳೆಯಲು ಸಾಧ್ಯ. ಆದ್ದರಿಂದ ಹಿಂದೂಗಳು ಮುಸ್ಲಿಮರ ಸೂತ್ರವನ್ನು ಅನುಸರಿಸಬೇಕು. ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಬೇಕು. 20-22ನೇ ವಯಸ್ಸಿನಲ್ಲಿ ಮದುವೆ ಮಾಡಬೇಕು. 18-20 ವರ್ಷಕ್ಕೆ ಹುಡುಗಿಯರ ಮದುವೆಯಾಗಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಡಿ.6 ರಂದು ಬೆಳಗಾವಿಗೆ ಹೋಗಿಯೇ ತೀರುತ್ತೇವೆ – ಬೊಮ್ಮಾಯಿಗೆ ʼಮಹಾʼ ಸಚಿವರ ಸವಾಲು

    ಇದೇ ವೇಳೆ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು (Shraddha Walker Murder Case) ಉಲ್ಲೇಖಿಸಿ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರ ಲವ್ ಜಿಹಾದ್ (Love Jihad) ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಅಸ್ಸಾಂ ಸಿಎಂ ದೇಶದ ಅಗ್ರಮಾನ್ಯ ನಾಯಕರಲ್ಲಿ ಒಬ್ಬರು. ಆದ್ರೆ ಅವರನ್ನ ತಡೆಯೋರು ಯಾರು. ನೀವು ಬೇಕಿದ್ರೆ ನಾಲ್ಕೈದು ಲವ್ ಜಿಹಾದ್ ನಡೆಸಿ, ನಮ್ಮ ಮುಸ್ಲಿಂ ಹೆಣ್ಣುಮಕ್ಕಳನ್ನು ಕರೆದುಕೊಂಡು ಹೋಗಿ, ನಾವು ಅದನ್ನ ಸ್ವಾಗತ ಮಾಡುತ್ತೇವೆಯೇ ಹೊರತು ಜಗಳವಾಡುವುದಿಲ್ಲ. ಹಾಗೆ ಮಾಡಿದ್ರೆ ನಿಮ್ಮಲ್ಲೂ ಎಷ್ಟು ಶಕ್ತಿಯಿದೆ ಎಂದು ನೋಡಬಹುದು ಎಂದು ಲೇವಡಿ ಮಾಡಿದ್ದಾರೆ.

    ಇತ್ತೀಚೆಗೆ ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ಲವ್ ಜಿಹಾದ್ ಅಂಶ ಉಲ್ಲೇಖಿಸಿದ್ದ ಅಸ್ಸಾಂ ಸಿಎಂ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಹಾಗೂ ಲವ್ ಜಿಹಾದ್ ವಿರುದ್ಧ ಕಾನೂನು ಅಗತ್ಯವಿದೆ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪ್ರಬಲ ನಾಯಕನಿಲ್ಲದಿದ್ರೆ ಅಫ್ತಾಬ್‌ನಂಥ ಹಂತಕರು ಪ್ರತಿ ನಗರದಲ್ಲೂ ಹುಟ್ತಾರೆ – ಅಸ್ಸಾಂ ಸಿಎಂ

    ಪ್ರಬಲ ನಾಯಕನಿಲ್ಲದಿದ್ರೆ ಅಫ್ತಾಬ್‌ನಂಥ ಹಂತಕರು ಪ್ರತಿ ನಗರದಲ್ಲೂ ಹುಟ್ತಾರೆ – ಅಸ್ಸಾಂ ಸಿಎಂ

    ಗಾಂಧಿನಗರ: ದೇಶದಲ್ಲಿ ಪ್ರಬಲ ನಾಯಕ ಇಲ್ಲದಿದ್ದರೇ ಅಫ್ತಾಬ್ ಅಮೀನ್ ಪೂನಾವಾಲನಂತಹ (Aftab Ameen Poonawala) ಹಂತಕರು ಪ್ರತಿ ನಗರದಲ್ಲೂ ಹುಟ್ಟುತ್ತಾರೆ ಎಂದು ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮಾ (Himanta Biswa Sarma) ಎಚ್ಚರಿಸಿದ್ದಾರೆ.

    ಗುಜರಾತ್ ಚುನಾವಣಾ (Gujarat Election) ಪ್ರಚಾರ ಸಭೆಯ ಭಾಗವಾಗಿ ಕಚ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಅವರು, ದೆಹಲಿಯ ಶ್ರದ್ಧಾ ಹತ್ಯೆ (Shraddha Murder Case) ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದರು. ದೇಶದಲ್ಲಿ ಪ್ರಬಲ ನಾಯಕನಿಲ್ಲದಿದ್ದರೆ, ಅಫ್ತಾಬ್‌ನಂತಹ ಹಂತಕರು ಪ್ರತಿ ನಗರದಲ್ಲೂ ಹುಟ್ಟುತ್ತಾರೆ. ಆಗ ನಮ್ಮ ಸಮಾಜ ರಕ್ಷಿಸಲು ಸಾಧ್ಯವಾಗುವುದಿಲ್ಲ ಹೇಳಿದ್ದಾರೆ. ಇದನ್ನೂ ಓದಿ: ವಿಮೆ ಹಣಕ್ಕಾಗಿ ಸುಪಾರಿ ಕೊಟ್ಟು ತಂದೆಯನ್ನೇ ಕೊಲ್ಲಿಸಿದ ಮಗ

    ಕೊಲೆ ಪ್ರಕರಣದ ಭೀಕರತೆಗಳನ್ನು ವಿಚಾರಸಿದಾಗ ಇದನ್ನು ಲವ್ ಜಿಹಾದ್ (Love Jihad) ಪ್ರಕರಣ ಎನ್ನಲಾಗಿದೆ. ಅಲ್ಲದೆ ಹಿಂದೂ ಮಹಿಳೆಯರು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಾರೆ ಎಂದು ಆರೋಪಿಸಿದ್ದಾರೆ.  

    ಮೋದಿ ಪರ ಬ್ಯಾಟಿಂಗ್:
    ಮುಂಬೈನಿಂದ ಶ್ರದ್ಧಾಳನ್ನು ಕರೆದುಕೊಂಡು ಬಂದಿದ್ದ ಅಫ್ತಾಬ್ 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದ. ಇದೇ ಸಮಯದಲ್ಲಿ ಮತ್ತೊಬ್ಬ ಮಹಿಳೆಯನ್ನು ಕರೆತಂದು ಲೈಂಗಿಕ ಸಂಪರ್ಕ ಮಾಡಿದ್ದಾನೆ. ಇಂತಹ ಕೃತ್ಯಗಳಿಂದ ದೇಶವನ್ನು ರಕ್ಷಿಸಬೇಕಾದರೆ ನಮ್ಮ ದೇಶಕ್ಕೆ ಶಕ್ತಿಯುತ ನಾಯಕನನ್ನು ಹೊಂದಿರಬೇಕು, ರಾಷ್ಟ್ರವನ್ನು ತಮ್ಮ ತಾಯಿ ಎಂದು ಪರಿಗಣಿಸುವವರಾಗಿರಬೇಕು. ಹಾಗಾಗಿ 2024ರಲ್ಲಿ 3ನೇ ಬಾರಿಗೆ ನರೇಂದ್ರ ಮೋದಿ (Narendra Modi) ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವುದು ಬಹಳ ಮುಖ್ಯ ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಲವ್ ಜಿಹಾದ್‌ಗೆ ಬಲಿಯಾದ್ರೆ ಇದೇ ಗತಿ – ಹೊಸ ಆಯಾಮದಲ್ಲಿ ತನಿಖೆ ನಡೆಸುವಂತೆ VHP ಮನವಿ

    ಏನಿದು ಘಟನೆ?
    ರಾಷ್ಟ್ರ ರಾಜಧಾನಿಯಲ್ಲಿ ತನ್ನೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಗೆಳತಿಯ ಹತ್ಯೆ ಮಾಡಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್ನಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಅನೇಕ ಭಯಾನಕ ಸಂಗತಿಗಳು ಹೊರಬಿದ್ದಿವೆ. ಆರೋಪಿ ಅಫ್ತಾಬ್ ಹಾಗೂ ಶ್ರದ್ಧಾ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಆದರೆ ಮೇ 18ರಂದು ಜಗಳವಾದಾಗ ಶ್ರದ್ಧಾಳ ಎದೆಯ ಮೇಲೆ ಕುಳಿತು ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ.

    ಬಳಿಕ ದೇಹವನ್ನು ಕತ್ತರಿಸೋದು ಹೇಗೆ? ಅದನ್ನು ಡಿಎನ್‌ಎಗಳ ಸಾಕ್ಷ್ಯಾಧಾರವೂ ಸಿಗದಂತೆ ದೇಹವನ್ನ ವಿಲೇವಾರಿ ಮಾಡೋದು ಹೇಗೆ ಎಂಬ ಮಾಹಿತಿಗಳ ಬಗ್ಗೆ ಗೂಗಲ್‌ನಲ್ಲಿ ಹುಡುಕಾಡಿದ್ದಾನೆ. ನಂತರ ದೇಹವನ್ನು 35 ಪೀಸ್‌ಗಳಾಗಿ ತಂಡು ಮಾಡಿದ್ದು, ಅದನ್ನು ಸಂಗ್ರಹಿಸಲು 300 ಲೀಟರ್ ಸಾಮರ್ಥ್ಯದ ಹೊಸ ಫ್ರಿಡ್ಜ್ ಸಹ ಖರೀದಿಸಿದ್ದಾನೆ. ದೇಹದ ಮಾಂಸದ ವಾಸನೆ ಹರಡಬಾರದೆಂದು ದಿನವೂ ಅಗರಬತ್ತಿ ಹಚ್ಚಿಡುತ್ತಿದ್ದ. ಈ ನಡುವೆ ಶ್ರದ್ಧಾಳನ್ನು ಕೊಲೆ ಮಾಡಿ ಕೆಲ ದಿನಗಳ ನಂತರ ಮತ್ತೊಬ್ಬ ಮಹಿಳೆಯನ್ನು ತನ್ನ ಅಪಾರ್ಟ್ಮೆಂಟ್‌ಗೆ ಕರೆದು ಸೆಕ್ಸ್ ಮಾಡ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ.

    Live Tv
    [brid partner=56869869 player=32851 video=960834 autoplay=true]

  • ಕಾಜಿರಂಗ ಉದ್ಯಾನವನದಲ್ಲಿ ಜೀಪ್ ಚಾಲನೆ – ಸದ್ಗುರು, ಹಿಮಂತ ಬಿಸ್ವಾ ಶರ್ಮಾ ವಿರುದ್ಧ FIR

    ಕಾಜಿರಂಗ ಉದ್ಯಾನವನದಲ್ಲಿ ಜೀಪ್ ಚಾಲನೆ – ಸದ್ಗುರು, ಹಿಮಂತ ಬಿಸ್ವಾ ಶರ್ಮಾ ವಿರುದ್ಧ FIR

    ಗುವಹಾಟಿ: ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ (Kaziranga National Park) ಜೀಪ್ ಚಾಲನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಈಶಾ ಫೌಂಡೇಶನ್‍ನ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಮತ್ತು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ವಿರುದ್ಧ ಎಫ್‍ಐಆರ್ (FIR) ದಾಖಲಾಗಿದೆ.

    ಸದ್ಗುರು ಜಗ್ಗಿ ವಾಸುದೇವ್ ಮತ್ತು ಹಿಮಂತ ಬಿಸ್ವಾ ಶರ್ಮಾ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಶನಿವಾರ ರಾತ್ರಿ ವಾಹನ ಚಲಾಯಿಸಿದರು ಎಂಬ ಕಾರಣಕ್ಕೆ ಅವರಿಬ್ಬರ ವಿರುದ್ಧ ಉದ್ಯಾನವನದ ಹತ್ತಿರದ ಎರಡು ಗ್ರಾಮಗಳ ಇಬ್ಬರು ನಿವಾಸಿಗಳು ದೂರು ದಾಖಲಿಸಿದ್ದಾರೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನ್ನು ಪ್ರವಾಸಿಗರಿಗಾಗಿ ಶನಿವಾರ ತೆರೆಯಲಾಗಿತ್ತು. ಅಂದು ರಾತ್ರಿ ಸದ್ಗುರು ಜಗ್ಗಿ ವಾಸುದೇವ್ ಉದ್ಯಾನದ ಒಳಗೆ ಜೀಪ್ ಚಾಲನೆ ಮಾಡಿದ್ದಾರೆ. ಅವರ ಪಕ್ಕ ಸಿಎಂ ಹಿಮಂತ ಬಿಸ್ವಾ ಶರ್ಮಾ ಕುಳಿತಿದ್ದರು. ಅಸ್ಸಾಂ ಸಂಪುಟ ಸಚಿವ ಜಯಂತ ಮಲ್ಲ ಮತ್ತಿತರರು ಕೂಡಾ ಜೀಪ್‍ನಲ್ಲಿ ರಾತ್ರಿ ಉದ್ಯಾನದಲ್ಲಿ ಸಂಚರಿಸಿದ್ದರು. ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ಹೂಡಿಕೆದಾರರಿಗೆ ಒಂದೇ ದಿನ 7 ಲಕ್ಷ ಕೋಟಿ ನಷ್ಟ

    ಇದೀಗ ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ (Wildlife Protection Act) ಸ್ಥಳೀಯರಾದ ಸೋನೇಶ್ವರ್ ನಾರಾ ಮತ್ತು ಪ್ರವೀಣ್ ಪೆಗು ಅಸ್ಸಾಂನ ಗೋಲಘಾಟ್ ಜಿಲ್ಲೆಯ ಬೊಕಾಕಾಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ಸಫಾರಿ ವನ್ಯಜೀವಿ ಸಂರಕ್ಷಣೆ ಕಾಯ್ದೆ, 1972ರ ಉಲ್ಲಂಘನೆಯಾಗಿದೆ ಎಂದು ಎಫ್‍ಐಆರ್‌ನಲ್ಲಿ ದಾಖಲಾಗಿದೆ. ಇದನ್ನೂ ಓದಿ: ಮಕ್ಕಳೊಂದಿಗೆ ಕೇರಳದ ಬೀದಿಗಳಲ್ಲಿ ಫುಟ್‍ಬಾಲ್ ಆಡಿದ ರಾಹುಲ್

    ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ಉದ್ಯಾನದೊಳಗೆ ಜೀಪ್ ಸಂಚಾರವನ್ನು ನಿಷೇಧಿಸಲಾಗಿದೆ. ಆದರೂ ಸದ್ಗುರು ಮತ್ತು ಹಿಮಂತ ಬಿಸ್ವಾ ಶರ್ಮಾ ಜೀಪ್ ಚಾಲನೆ ಮಾಡಿದ್ದಾರೆ. ಇಂತಹ ಘಟನೆಗಳಿಂದ ಕಾಜಿರಂಗ ಮತ್ತು ಅಲ್ಲಿಯ ಪ್ರಾಣಿಗಳ ಸಂರಕ್ಷಣೆಗೆ ಅಪಾಯ. ಕಾನೂನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಅವರಿಬ್ಬರನ್ನು ಬಂಧಿಸಿ ಕರ್ತವ್ಯ ಪ್ರಜ್ಞೆ ಮೆರೆಯಬೇಕು. ಅವರಿಬ್ಬರೂ ಸಾರ್ವಜನಿಕರರೊಂದಿಗೆ ಕ್ಷಮೆ ಕೇಳಬೇಕು. ಕಾನೂನಿನಡಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಈ ಆರೋಪದ ಬೆನ್ನಲ್ಲೇ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ರಾತ್ರಿ ವೇಳೆ ಜೀಪ್ ಚಾಲನೆ ಮಾಡಿಲ್ಲ. ರಾತ್ರಿ ವೇಳೆ ಉದ್ಯಾನವನಕ್ಕೆ ಭೇಟಿ ಕೊಡಬಾರದೆಂದು ಕಾನೂನಿಲ್ಲ ಎಂದು ಹಿಮಂತ ಬಿಸ್ವಾ ಶರ್ಮಾ ಆರೋಪವನ್ನು ಅಲ್ಲಗಳೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]